ಪತ್ರೊಡೆ

August 6, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪತ್ರೊಡೆ

ಬೇಕಪ್ಪ ಸಾಮಾನುಗೊ:

 • 1 ಕಪ್(ಕುಡ್ತೆ) ಕೊಯಿಶಕ್ಕಿ
 • 1 ಕಪ್(ಕುಡ್ತೆ) ಬೆಣ್ತಕ್ಕಿ
 • 1/2-3/4 ಕಪ್(ಕುಡ್ತೆ) ಕಾಯಿ ತುರಿ
 • 2 ಚಮ್ಚೆ ಉದ್ದಿನ ಬೇಳೆ
 • 1/2 ಚಮ್ಚೆ ಮೆಂತೆ
 • 2 ಚಮ್ಚೆ ಕೊತ್ತಂಬರಿ
 • 1/2 ಚಮ್ಚೆ ಜೀರಿಗೆ
 • ಸಣ್ಣ ನಿಂಬೆ ಗಾತ್ರದ ಹುಳಿ
 • ಸಾಧಾರಣ/ದೊಡ್ಡ ನಿಂಬೆ ಗಾತ್ರದ ಬೆಲ್ಲ
 • 1/4 ಚಮ್ಚೆ ಅರುಶಿನ ಹೊಡಿ
 • 1/4 ಚಮ್ಚೆ ಇಂಗು
 • 8-10 ಒಣಕ್ಕು ಮೆಣಸು
 • ರುಚಿಗೆ ತಕ್ಕಸ್ಟು ಉಪ್ಪು
 • 6-7 ಸಾಧಾರಣ ಗಾತ್ರದ ಕೆಸವಿನ ಎಲೆ
 • 5-6 ಬಾಳೆ ಎಲೆ

ಮಾಡುವ ಕ್ರಮ:

ಅಕ್ಕಿಯ 6-7 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಇನ್ನೊಂದು ಪಾತ್ರ/ಗಿಣ್ಣಾಲಿಲ್ಲಿ ಉದ್ದಿನ ಬೇಳೆ, ಮೆಂತೆಯ 6-7 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ.
ಅಕ್ಕಿಯನ್ನೂ, ಬೊದುಳಿದ ಉದ್ದಿನ ಬೇಳೆ, ಮೆಂತೆಯನ್ನೂ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.
ಗ್ರೈಂಡರ್/ಮಿಕ್ಸಿಗೆ ಬೊದುಳಿದ ಉದ್ದಿನ ಬೇಳೆ, ಮೆಂತೆ, ಒಣಕ್ಕುಮೆಣಸು, ಕೊತ್ತಂಬರಿ, ಜೀರಿಗೆ, ಕಾಯಿ, ಹುಳಿ, ರೆಜ್ಜ ನೀರು ಹಾಕಿ ನೊಂಪಿಂಗೆ ಕಡೆರಿ.
ಅದಕ್ಕೆ ಬೊದುಳಿದ ಅಕ್ಕಿ, ಬೆಲ್ಲ, ಉಪ್ಪು, ಅರುಶಿನ, ಇಂಗು ಹಾಕಿ, ರೆಜ್ಜ ನೀರು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗಟ್ಟಿಗೆ ತರಿ ತರಿ ಆಗಿ ಕಡೆರಿ.

ಬಾಳೆ ಎಲೆಯ ಕಿಚ್ಚಿಲ್ಲಿ ಬಾಡ್ಸಿ, ಲಾಯಿಕಲಿ ಉದ್ದಿ ಮಡುಗಿ. ಕೆಸವಿನ ಎಲೆಯ ಲಾಯಿಕಲಿ ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊರೆರಿ.

ಕಡದ ಅಕ್ಕಿ ಹಿಟ್ಟಿಂಗೆ, ಕೊಚ್ಚಿದ ಕೆಸವಿನ ಎಲೆಯ ಹಾಕಿ ತೊಳಸಿ.

ರೆಜ್ಜ ಹಿಟ್ಟಿನ ತೆಕ್ಕೊಂಡು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬಾಳೆ ಎಲೆಲಿ ಹಾಕಿ.

ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಬಾಳೆ ಎಲೆಯ ಮಡ್ಸಿ.

ಪುನಃ ಬಾಳೆ ಎಲೆಯ ಎರಡು ಕರೆಯನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮಡ್ಸಿ,  ಕವುಂಚಿ ಒಂದು ತಟ್ಟೆಲಿ ಮಡುಗಿ.

ಅಟ್ಟಿನಳಗೆ/ಪ್ರೆಶರ್ ಕುಕ್ಕರ್ನ ಅಡಿಲಿ ರೆಜ್ಜ ನೀರು ಹಾಕಿ, ಸ್ಟಾಂಡ್ ಮಡುಗಿ ಅದರ ಮೇಗೆ ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕವುಂಚಿ ಮಡುಗಿ.
ಮುಚ್ಚಲು ಮುಚ್ಚಿ, 15-20 ನಿಮಿಷ ದೊಡ್ಡ ಕಿಚ್ಚಿಲ್ಲಿ ಬೇಶಿ, ಮತ್ತೆ 30-40 ನಿಮಿಷ ಸಣ್ಣ/ಹದ ಕಿಚ್ಚಿಲ್ಲಿ ಬೇಶಿ.
(ಪ್ರೆಶರ್ ಕುಕ್ಕರಿಂಗೆ, ವೈಟ್ ಮಡುಗುದು ಬೇಡ, ವೈಟ್ ಸ್ಟಾಂಡಿಂಗೆ ಒಂದು ಗ್ಲಾಸಿನ ಕವುಂಚಿ ಮಡುಗಿರೆ ಸಾಕು.)

ಬೆಶಿ ಬೆಶಿ ತುಪ್ಪ/ತೆಂಗಿನ ಎಣ್ಣೆ ಹಾಕಿ ಚಟ್ನಿ ಅಥವಾ ಸಾಂಬರಿನ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 4-5 ಪತ್ರೊಡೆ ಆವುತ್ತು. ಇದರ ಸೀವು ಒಗ್ಗರಣೆ, ಖಾರ ಒಗ್ಗರಣೆ, ಪತ್ರೊಡೆ ರೋಸ್ಟ್ ಮಾಡ್ಲೆ ಉಪಯೋಗ್ಸುಲೆ ಅಕ್ಕು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಸುಮನ ಭಟ್ ಸಂಕಹಿತ್ಲು.

  ಎನಗೆ ಭಾರೀ ಪ್ರೀತಿ ಪತ್ರೊಡೆ. ಸೀವು ಒಗ್ಗರಣೆ ಪತ್ರೊಡೆ ಮತ್ತೂ ಪ್ರೀತಿ.

  [Reply]

  VA:F [1.9.22_1171]
  Rating: +1 (from 1 vote)
 2. ಎ೦ .ಕೆ.

  ಮರಕೆಸವಿ೦ದಾದರೆ ಮದಾಲು ಇತ್ತ್ಲಾಗಿ ಬರಲಿ. ಆಟಿ ಕಳೆದರೆ ,ಮರ ಕೆಸವು ಉಪಯೋಗಸುವ ಕ್ರಮ ಇಲ್ಲೆ ಅಲ್ಲದೊ?

  [Reply]

  VA:F [1.9.22_1171]
  Rating: +1 (from 1 vote)
 3. ವೇಣಿಯಕ್ಕ°

  ಇದು ಮರಕೆಸವಿಂದು ಅಲ್ಲ… ಅಪ್ಪು ಮರಕೆಸವಿನ ಪತ್ರೊಡೆಗೆ ರುಚಿ ಹೆಚ್ಚು..ಃ)
  ಆಟಿ ಕಳುದ ಮೇಲೆ ಉಪಯೋಗ್ಸುಲೆ ಆಗದ್ದು ಗೊಂತಿಲ್ಲೆ…

  [Reply]

  VN:F [1.9.22_1171]
  Rating: +1 (from 1 vote)
 4. ಮುಳಿಯ ಭಾವ
  ರಘುಮುಳಿಯ

  ಇ೦ದು ಉದಿಯಪ್ಪಗ “ಅಟ್ಟಿನಳಗೆ”ಲಿ ಮಾಡಿದ ಬೆಶಿಬೆಶಿ ಪತ್ರಡೆಯ ಸೀವು ಒಗ್ಗರಣೆ ತಿ೦ದು ಬೈಲಿ೦ಗೆ ಇಳುದಪ್ಪಗ… ವಾವ್…ಸ್ವಾದಿಷ್ಟ ಪತ್ರಡೆ. ಧನ್ಯವಾದ ಅಕ್ಕ.

  [Reply]

  VA:F [1.9.22_1171]
  Rating: +2 (from 2 votes)
 5. ಇಂದಿರತ್ತೆ
  ಇಂದಿರತ್ತೆ

  ಚಳಿ- ಶೀತ ಹಿಡಿವ ಆಟಿಲಿ ಈ ಪತ್ರೊಡೆಯ ಒಂದರಿಯಾದರೂ ಮಾಡಿ ತಿನ್ನೆಕ್ಕಡ್ಡ ಅಲ್ಲದಾ- ಸಂದರ್ಭೋಚಿತವಾದ ತಿಂಡಿ- ಲಾಯ್ಕಾಯಿದು.

  [Reply]

  VA:F [1.9.22_1171]
  Rating: 0 (from 2 votes)
 6. ಸಂದೇಶ

  ಆಹಾ! ಪತ್ರೊಡೆ ಒಳ್ಳೆದಾಯಿದು. ಎನಗೆ ಮದ್ಯಾಹ್ನಕ್ಕೆ ಅಶನ ಬೇಡ. ಪತ್ರೊಡೆ ಬೆಂದಿ ಮಾಡಿದ್ದಿಲ್ಲೆಯಾ ಅಂಬಗ?
  ‘ಅಟ್ಟಿನಳಗೆ’ಲಿ ನಿಂಗೊಗೆ ಇದ್ದಾ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಅಕ್ಷರದಣ್ಣಅಜ್ಜಕಾನ ಭಾವವೇಣಿಯಕ್ಕ°ತೆಕ್ಕುಂಜ ಕುಮಾರ ಮಾವ°ಹಳೆಮನೆ ಅಣ್ಣಕಳಾಯಿ ಗೀತತ್ತೆವಿದ್ವಾನಣ್ಣಶಾಂತತ್ತೆಗಣೇಶ ಮಾವ°ಕೇಜಿಮಾವ°ನೀರ್ಕಜೆ ಮಹೇಶಚುಬ್ಬಣ್ಣವೆಂಕಟ್ ಕೋಟೂರುಬೋಸ ಬಾವಅನುಶ್ರೀ ಬಂಡಾಡಿಜಯಗೌರಿ ಅಕ್ಕ°ಪೆರ್ಲದಣ್ಣಶುದ್ದಿಕ್ಕಾರ°ಸರ್ಪಮಲೆ ಮಾವ°ಚೆನ್ನೈ ಬಾವ°ಜಯಶ್ರೀ ನೀರಮೂಲೆಶರ್ಮಪ್ಪಚ್ಚಿಪುಣಚ ಡಾಕ್ಟ್ರುಶ್ಯಾಮಣ್ಣಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ