Oppanna.com

ಪೆರಟಿ ಪಾಯಸ

ಬರದೋರು :   ವೇಣಿಯಕ್ಕ°    on   24/07/2012    4 ಒಪ್ಪಂಗೊ

ವೇಣಿಯಕ್ಕ°

ಪೆರಟಿ ಪಾಯಸ

ಬೇಕಪ್ಪ ಸಾಮಾನುಗೊ:

  • 2 ನಿಂಬೆ ಗಾತ್ರದ ಹಲಸಿನ ಹಣ್ಣು ಪೆರಟಿ
  • 2 – 2.5 ಕಪ್(ಕುಡ್ತೆ) ಬೆಲ್ಲ
  • 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ ಹಾಲು
  • 1/2 ಕಪ್(ಕುಡ್ತೆ) ಸಣ್ಣಕೆ ತುರುದ ಕಾಯಿ ತುರಿ (ಬೇಕಾದರೆ ಮಾತ್ರ)
  • 2-3 ಚಮ್ಚೆ ಎಳ್ಳು (ಬೇಕಾದರೆ ಮಾತ್ರ)
  • ಚಿಟಿಕೆ ಉಪ್ಪು (ಬೇಕಾದರೆ ಮಾತ್ರ)
  • 3-4 ಏಲಕ್ಕಿ

ಮಾಡುವ ಕ್ರಮ:


ಒಂದು ಪಾತ್ರಲ್ಲಿ ಸಾಧಾರಣ 8 ಕುಡ್ತೆ ಉಗುರು ಬೆಶಿ ನೀರು ಹಾಕಿ, ಅದರಲ್ಲಿ ಪೆರಟಿಯ ಎರಡು ಘಂಟೆ ಬೊದುಳುಲೆ ಹಾಕಿ.
ಇದರ ಮಿಕ್ಸಿಲಿ ಹಾಕಿ ಸಾಧರಣ ನೊಂಪು ಕಡದು ಮಡುಗಿ.

ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ.

ಹಿಂಡಿದ ಪುಂಟೆಗೆ 1 ಕುಡ್ತೆ ನೀರು ಹಾಕಿ, ಲಾಯಿಕಲಿ ಬೆರುಸಿ ವಸ್ತ್ರಲ್ಲಿ ಪುನಃ ಹಿಂಡಿ.
ಈ ನೀರು ಕಾಯಿಹಾಲಿನ ಕಡದ ಪೆರಟಿಗೆ ಹಾಕಿ, ಚಿಟಿಕೆ ಉಪ್ಪು, ಬೆಲ್ಲ ಹಾಕಿ ಕೊದುಶಿ, ಒಂದು 5 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ದಪ್ಪ ಕಾಯಿ ಹಾಲಿನ ಹಾಕಿ, ತೊಳಸಿ ಕೊದುಶಿ. ಗುದ್ದಿ ಹೊಡಿ ಮಾಡಿದ ಏಲಕ್ಕಿಯನ್ನೂ ಹಾಕಿ ತೊಳಸಿ ಪಾಯಸವ 1-2 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಬಾಣಲೆಲಿ ಎಳ್ಳು ಹಾಕಿ ಹೊರಿರಿ. ಅದು ಹೊಟ್ಟಿ ಅಪ್ಪಗ ಅದಕ್ಕೆ 1/2 ಕುಡ್ತೆ ಸಣ್ಣಕೆ ತುರುದ ಕಾಯಿಯ ಹಾಕಿ, ಚಿನ್ನದ ಬಣ್ಣ ಬಪ್ಪನ್ನಾರ ಸಣ್ಣ ಕಿಚ್ಚಿಲ್ಲಿ ಹೊರಿರಿ.

ಇದರ ಪಾಯಸಕ್ಕೆ ಹಾಕಿ ತೊಳಸಿ.

ಬೆಶಿ-ಬೆಶಿ ಅಥವಾ ತಣ್ಣಂಗೆ(ಫ್ರಿಜ್ ಲ್ಲಿ ಮಡುಗಿ) ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

4 thoughts on “ಪೆರಟಿ ಪಾಯಸ

  1. ಇದಕ್ಕೆ ಏಕೆ ನಿಂಗೊ ಕೊಟ್ಟೆಕಾಯಿ ಹೂಳು ಮಾಡಿ ಹಾಕದ್ದು ಆ° !

    1. @ Chenayi bava, kayi thurudu horudu hakire salado, thundu madi bere hakekko? Kayi baga baga sikkire ‘ kotte kayi’ pacha akku, peratidu alla gonthato!

      1. @ ಜಯರಾಮ,
        ಕನ್ನಡಲ್ಲಿ ಬರವಲೆ ಇದರಲ್ಲಿ ವ್ಯವಸ್ಥೆ ಇದ್ದು. ಇದೇ ಪುಟದ ಮೇಗೆ Type in ಹೇಳ್ತಲ್ಲಿ kannada ಹೇಳಿ ಇಪ್ಪದರ select ಮಾಡಿರೆ ಆತು.

  2. ಫೊಟೋ ನೋಡಿಯೇ ರುಚಿ ರುಚಿ ಪರಿಮಳ ಎಲ್ಲ ಅನುಭವ ಆವ್ತಾ ಇದ್ದನ್ನೇ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×