ಅಸಕ್ಕಪ್ಪಗ ತಿಂಬಲೆ ಬೆಶಿ ಬೆಶಿ ಪೋಡಿಗೊ..

November 4, 2012 ರ 9:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನ ಹೊಡೆಂಗೆ ಬಾರದ್ದೆ ದಿನ ಸುಮಾರಾತದ.. ಓ ಆ ಪೆರಿಯಡುಕ ಹೊಡೇಣ ಮಾರ್ಗ ಸರಿ ಮಾಡ್ತ ಗವುಜಿಲಿ ಪೋನಿನ ಬಳ್ಳಿಗಳ ಪೂರ ಕಡುದು ಇಡುಕ್ಕಿದ್ದವಡ.. ಪೋನು ಬಾರದ್ದರೆ ಈ ಕರೆಂಟಿನ ಪುಸ್ತಕಲ್ಲಿ ಬೈಲು ಕಾಣುತ್ತಿಲ್ಲೆಡ ಅಪ್ಪೊ.. ಉಮ್ಮಪ್ಪ. ಪುಳ್ಳಿ ಹಾಂಗೆ ಹೇಳಿತ್ತು. ಅದಾಗಿ ಪೋನು ಸರಿ ಆದರುದೇ ಈ ಬೈಲಿಂಗೆ ಬಪ್ಪಲೆ ಸರಿಗಟ್ಟು ಪುರುಸೊತ್ತು ಆಗಿಯೊಂಡಿತ್ತಿಲ್ಲೆ. ಅದರೆಡಕ್ಕಿಲಿ ಆ ನೆಗೆಮಾಣಿ ಒಬ್ಬ°.. ಕನ್ನಡುಕ ಹುಗ್ಗುಸಿ ಮಡಗಿರೆ ಮತ್ತೆ ನಾಕು ದಿನಕ್ಕೆ ಪರಂಚುದು ಬಿಟ್ಟರೆ ಮತ್ತೆಂತೂ ಹರಿತ್ತಿಲ್ಲೆ ನಮ್ಮಂದ.. ಅಂತೂ ಈಗ ರೆಜ ಕಾಲುನೀಡಿ ಕೂದು ಬೈಲು ನೋಡುಲೆ ಎಡೆ ಆತಿದ.

ಹೇಳಿದಾಂಗೆ ನಿನ್ನೆ ಹೊತ್ತೊಪ್ಪಾಗ ಕಾಪಿಗೆ ಸಾಮ್ರಾಣಿ ಸೊಪ್ಪಿನ ಪೋಡಿ ಮಾಡಿತ್ತಿದ್ದೆ.”ಅಜ್ಜೀ.. ಎನಗೆ ಅಸಕ್ಕಾವುತ್ತು.. ಎಂತಾರು ತಿಂಡಿ ಮಾಡಿಕೊಡಿ” ಹೇಳಿ ಪುಳ್ಳಿ ಕೇಳಿತ್ತು. ಅದಕ್ಕೆ ಅಸಕ್ಕಾವುತ್ತು ಹೆಳಿತ್ತುಕಂಡ್ರೆ ಎಂತಾರು ಎಣ್ಣೆತಿಂಡಿ ತಿನ್ನೆಕ್ಕೂಳಿ ಆಯಿದು ಹೇಳಿ ಲೆಕ್ಕ. ಎಣ್ಣೆತಿಂಡಿ ಹೇಳಿರೆ ಕೊದಿ ಜಾಸ್ತಿ ಇದ.. ಹಾಂಗೆ ಮಾಡಿದ್ದದು.. ಎನಗೆ ಎಣ್ಣೆಪಸೆ ದಣಿಯ ತಿಂಬಲಾಗ ಹೇಳಿ ಡಾಗುಟ್ರು ಹೇಳ್ತವು.. ಅಪುರೂಪಕ್ಕೆ ರೆಜ ರೆಜ ತಿಂದರೆ ತೊಂದರೆ ಇಲ್ಲೆನ್ನೆ.. ಏವುದನ್ನಾದರು ತಿಂಬಲಾಗ, ಪತ್ಯ ಹೇಳಿ ಅಪ್ಪಗಳೇ ಅದರ ಜಾಸ್ತಿ ತಿನ್ನೇಕು ಹೇಳಿ ಕಾಂಬದಿದ ಮನಿಶ್ಶಂಗೆ.

ಅದಿರಳಿ, ಈಗ ಪೋಡಿಯ ಶುದ್ದಿಗೆ ಬಪ್ಪೊ. ಹಾಂಗೆ ನಿನ್ನೆ ಸಾಮ್ರಾಣಿ ಸೊಪ್ಪಿನ ಪೋಡಿ ಮಾಡಿಯಪ್ಪಗ ಬೈಲಿನ ಪುಳ್ಳಿಯಕ್ಕೊಗೂ ಹಂಚುವೊ ಹೇಳಿ ಕಂಡತ್ತು.

ಪೋಡಿ ಸಾಮಾನ್ಯ ಎಲ್ಲೊರಿಂಗೂ ಇಷ್ಟ ಅಪ್ಪ ತಿಂಡಿಯೇನ್ನೆ.ಸಾಮ್ರಾಣಿ ಸೊಪ್ಪಿನ ತಂಬುಳಿಯೊ ಮತ್ತೊ ಮಾಡಿರೆ ಪುಳ್ಯಕ್ಕೊ ಉಣ್ಣವು. ಹಾಂಗೆ ಅದರ ತಿನ್ನುಸುಲೆ ಈ ಪೋಡಿ ಮಾಡುವ ಕೆಣಿ ಇದಾ..

ಪೋಡಿ ಬೆಂದತ್ತು..

ಪೋಡಿಯ ಹಿಟ್ಟು ಮಾಡುಲೆ ಅರಡಿಗನ್ನೆ.. ಅದು ತುಂಬ ಸುಲಾಬ. ಕಡ್ಳೆಹೊಡಿಗೆ ರೆಜ ಮೆಣಸಿನ ಹೊಡಿ, ಉಪ್ಪು, ಇಂಗು ಎಲ್ಲ ಹಾಕಿ ನೀರಾಕಿ ಕಲಸಿರೆ ಆತು. ಮತ್ತೆ ಲಾಯಿಕಕ್ಕೆ ತೊಳದು ಮಡಗಿದ ಸಾಮ್ರಾಣಿ ಎಲೆಯ ಒಂದೊಂದೆ ತೆಕ್ಕೊಂಡು, ಎರಡು ಹೊಡೆದೆ ಹಿಟ್ಟಿಲಿ ಮುಳುಗುಸಿ ಎಣ್ಣೆಲಿ ಹೊರಿವದು. ನಸುಕೆಂಪಪ್ಪಗ ಎಣ್ಣೆಂದ ತೆಗದರೆ ಸಾಮ್ರಾಣಿ ಪೋಡಿ ಆತದ.. ಹೀಂಗೆಯೇ ಬಸಳೆ ಸೊಪ್ಪಿನ ಪೋಡಿ, ಹರುವೆ ಸೊಪ್ಪಿನ ಪೋಡಿಯೂ ಆವುತ್ತು. ರುಚೀ ಆವುತ್ತು ತಿಂಬಲೆ. ಹೇಳಿದಾಂಗೆ ನಾವು ತಿಂತ ಎಲೆದುದೇ ಪೋಡಿ ಆವುತ್ತು.. ಅದ, ಸುಬಗ ಪಕ್ಕನೆ ಎಲೆತಟ್ಟೆಯ ಹುಗ್ಗುಸಿ ಮಡುಗುಗು ಈ ಸಂಗತಿ ಕೇಳಿರೆ..ಹ್ಹೆ ಹ್ಹೆ.. ಹಾಂಗೆ ಈ ಅಜ್ಜಿಯ ಎಲೆತಟ್ಟೆಲೂ ಇದ್ದನ್ನೆ ಬೇಕಾಷ್ಟು ಎಲೆ.. ಎಲೆತಟ್ಟೆಂದ ಎಲೆ ತೆಗೇಕೂಳಿ ಇಲ್ಲೆಪ್ಪ. ಎಲೆಬಳ್ಳಿಲಿ ಬೇಕಾಷ್ಟು ಇದ್ದನ್ನೆ. ನಾಕು ಎಲೆ ಕೊಯ್ಕೊಂಡು ಬಂದು, ಲಾಯಿಕ ತೊಳದು, ಒಂದು ಎಲೆಯ ಎರಡು ತುಂಡು ಮಾಡಿ ಪೋಡಿ ಹಿಟ್ಟಿಂಗೆ ಅದ್ದಿ ಪೋಡಿ ಮಾಡ್ತದು. ಇದುದೇ ಬಾರೀ ರುಚಿ ಆವುತ್ತು.

ಇನ್ನು ಬಾಳೆಣ್ಣು ಪೋಡಿ, ಬಾಳೆಕಾಯಿ ಪೋಡಿ,ಗೆಣಂಗಿನ ಪೋಡಿ, ಬಟಾಟೆ ಪೋಡಿ, ಬದನೆ ಪೋಡಿ, ದಾರ್ಲೆ ಪೋಡಿ, ದೀಗುಜ್ಜೆ ಪೋಡಿ ಎಲ್ಲ ನವಗೆ ಗೊಂತಿಪ್ಪದೇನ್ನೆ. ದಾರ್ಲೆ ಪೋಡಿ ಮಾಡುಲೆ ಅದರ ಚೋಲಿಯ ಮೇಲಂದ ರೆಜ ಕೆರಸಿದಾಂಗೆ ತೆಗದು, ಮತ್ತೆ ಉರುಟುರುಟಿಂಗೆ ಕೊರೆತ್ತದು. ಚೋಲಿಯ ಇಡುಕ್ಕೊದು ಬೇಡ, ಚಟ್ನಿ ಮಾಡುಲಕ್ಕದ. ಹಾಂಗೆ ಉರೂಟಿಂಗೆ ಕೊರದ ದಾರ್ಲೆ ತುಂಡುಗಳ ಪೋಡಿಟ್ಟಿಂಗೆ ಅದ್ದಿ ಪೋಡಿ ಮಾಡ್ತದು.

ಕಾರ ಅಕ್ಕಾದವಕ್ಕೆ ಮೆಣಸಿನ ಪೋಡಿಯುದೇ ಆವುತ್ತದ. ಪೋಡಿಮೆಣಸು ಹೇಳಿಯೇ ಒಂದು ಇದ್ದನ್ನೆ.. ಅದು ದಣಿಯ ಕಾರ ಇರ. ಬೆಳದ್ದಾದರೆ ರೆಜ ಕಾರ ಇಕ್ಕು. ದಣಿಯ ಕಾರ ಇದ್ದೂಳಿ ಆದರೆ ಅದರ ಎರಡು ಸಿಗುದು, ಬಿತ್ತು ತೆಗದು ಒಳಾಂಗುದೇ ಹಿಟ್ಟು ತುಂಬುಸಿ ಹೊರುದರಾತು. ತಿಂಬಲೆ ರುಚಿ ಆವುತ್ತೂಳಿ ರಾವುಕಟ್ಟಿ ತಿಂಬಲಾಗ. ಮತ್ತೆ ಹೊಟ್ಟೆಉರಿ ಬಕ್ಕು..

ಅಸಕ್ಕಪ್ಪಗ ತಿಂಬಲೆ ಪಕ್ಕನೆ ಏವದಾರು ಒಂದು ಪೋಡಿ ಮಾಡುಲಕ್ಕದ.. ಹೊತ್ತೊಪ್ಪಾಗಾಣ ಕಾಪಿಗೆ ಎಂತೂ ಇಲ್ಲೇಳಿ ಅಪ್ಪಗ ನಾಕು ಪೋಡಿ ಮಾಡಿ ತಿಂಬಲಕ್ಕು. ಏವದುದೇ ಲೆಕ್ಕಂದ ಹೆಚ್ಚು ತಿನ್ನದ್ದರೆ ಆತು. ಅಲ್ಲದೋ? ಏ°..

ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಆಚಕರೆ ಮಾಣಿ
  ಆಚಕರೆ ಮಾಣಿ

  ಅಮೇರಿಕಲ್ಲಿಪ್ಪವು ಹೇಂಗೆ ಪೋಡಿ ಮಾಡುದು??? ಅಲ್ಲಿ ಅದೆಂತದೋ ಹೊಗೆ ಕಂಡು ಹಿಡಿತ್ತ ಮಿಶನು ಮಾಡಿಂಗೆ ಸಿಕ್ಸಿರ್ತವಡಾ… ಈ ಎಣ್ಣೆ ಕಾದು ಹೊಗೆ ಎದ್ದರೆ ಪೋಲೀಸುಗ ಬತ್ತವಡಾ ಅಪ್ಪಾ ….?

  [Reply]

  VA:F [1.9.22_1171]
  Rating: 0 (from 0 votes)
 2. ಮುಣ್ಚಿಕಾನ ಭಾವ

  ವೀಳ್ಯದೆಲೆ ಪೋಡಿ ಆರಾದರೂ ಮಾಡಿ ನೋಡಿದ್ದೀರಾ?
  ಒಳ್ಳೆಯದಾವುತ್ತು ಹೇಳಿ ಎನ್ನೊಬ್ಬ ಚೆ‍ಙಾಯಿ ಹೇಳಿದ್ದ :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿvreddhiಅನಿತಾ ನರೇಶ್, ಮಂಚಿಬಟ್ಟಮಾವ°ಪುಟ್ಟಬಾವ°ಸುಭಗಮುಳಿಯ ಭಾವನೀರ್ಕಜೆ ಮಹೇಶವಸಂತರಾಜ್ ಹಳೆಮನೆಶೀಲಾಲಕ್ಷ್ಮೀ ಕಾಸರಗೋಡುಬೊಳುಂಬು ಮಾವ°ದೀಪಿಕಾಶ್ರೀಅಕ್ಕ°ಹಳೆಮನೆ ಅಣ್ಣಡಾಗುಟ್ರಕ್ಕ°ದೊಡ್ಡಮಾವ°ತೆಕ್ಕುಂಜ ಕುಮಾರ ಮಾವ°ಶೇಡಿಗುಮ್ಮೆ ಪುಳ್ಳಿಚೆನ್ನೈ ಬಾವ°ಅಡ್ಕತ್ತಿಮಾರುಮಾವ°ಪೆಂಗಣ್ಣ°ವಾಣಿ ಚಿಕ್ಕಮ್ಮಶಾಂತತ್ತೆವಿದ್ವಾನಣ್ಣಒಪ್ಪಕ್ಕಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ