Oppanna.com

ಪುಟಾಣಿ ಪುಡಿ

ಬರದೋರು :   ವೇಣಿಯಕ್ಕ°    on   17/02/2015    13 ಒಪ್ಪಂಗೊ

ವೇಣಿಯಕ್ಕ°

ಪುಟಾಣಿ ಪುಡಿ

ಬೇಕಪ್ಪ ಸಾಮಾನುಗೊ:

  • 1/2 ಕಪ್(ಕುಡ್ತೆ) ಪುಟಾಣಿ
  • 1/4-1/2 ಚಮ್ಚೆ ಮೆಣಸಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 1/4 ಚಮ್ಚೆ ಜೀರಿಗೆ
  • ಚಿಟಿಕೆ ಹುಳಿ ಹೊಡಿ
  • ಚಿಟಿಕೆ ಇಂಗು

ಮಾಡುವ ಕ್ರಮ:

ಮೇಲೆ ಹೇಳಿದ ಸಾಮಾನುಗಳ ಮಿಕ್ಸಿಗೆ  ಹಾಕಿ ತರಿ-ತರಿಯಾಗಿ(ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು) ಕಡೆರಿ.
ಇದು ಬೆಣ್ತಕ್ಕಿ ಅಶನ ತುಪ್ಪದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು. ಇದರಿಂದ ಚಟ್ನಿದೆ ಮಾಡ್ಲೆ ಆವುತ್ತು.
ಕರಡಿಗೆಲಿ ಹಾಕಿ ತೆಗದು ಮಡುಗಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

13 thoughts on “ಪುಟಾಣಿ ಪುಡಿ

  1. ಎ೦ಗೊ ಶಾಲಗೆ ಹೋಗಿಯೊ೦ಡಿಪ್ಪಗ ಮೂರು ಮೈಲು ನಡೆಯೆಕ್ಕಿತ್ತು .ಅ೦ಬಗ ದಾರಿಲ್ಲಿ ತಿ೦ಬಲೆ ಕಮ್ಮಿ ಪೈಸಗೆ ತು೦ಬ ಸಿಕ್ಕುತ್ತು ಹೇಳಿಗೊ೦ಡು ಹೆಚ್ಚಾಗಿ ತೆಗವೆಯೋ.ಅ೦ಬಗ ಇದಕ್ಕೆ ಎ೦ಗಳ ಹೆಸರು ‘ಬೇಳೆ ‘ ಹೇಳಿ .

  2. ಬಟಾಣಿ ಕಡ್ಲೆಯ ಚೋಲಿ ತೆಗದರೆ “ಪುಟಾಣಿ” ಆತು.
    ತೆಂಗಿನ ಕಾಯಿ ಪಚ್ಚಡಿ ಮಾಡುವಾಗ ರೆಜಾ ಪುಟಾಣಿ ಹಾಕಿದರೆ ಲಾಯಿಕ ಆವುತ್ತು.

    1. ಬಟಾಣಿ ಕಡ್ಲೆ ಅಲ್ಲ ಅದು… ಹುರಿ ಕಡ್ಲೆ.
      ಅಪ್ಪು ಚಟ್ನಿಗೆ ಹಾಕಿದರೆ ಲಾಯಿಕ ಆವುತ್ತು ಅದಕ್ಕೆ ಇಕ್ಕು ಅದರ ಹೆಸರು ಚಟ್ನಿ ಕಡ್ಲೆ ಹೇಳಿ ಇಕ್ಕು.

  3. ಹೋಯ್.. ಇದರ ಸುಲಾಬಲ್ಲಿ ಮಿಕ್ಸಿ ಉಪಯೋಗುಸದ್ದೆ ಮಾಡುವ ಉಪಾಯ ಎನಗೆ ಹೊಳದ್ದು….. 🙂 . ಎಲ್ಲ ರೆಡಿ ಮಾಡಿಗೊಂಡು ಮಿಕ್ಸಿಗೆ ಹಾಕುವ ಬದಲು ಸೀದಾ ಬಾಯಿಗೆ ಹಾಕಿ, ಬಾಯಿಲಿಯೇ ಕಡದರೆಂತ?

    1. ಆನು ಕಡದ್ದು ಎನಗೆ ಅಕ್ಕು, ಬಾಕಿದ್ದೋರಿಂಗೆ ಅಕ್ಕೋ ಹೇಳಿ ಅವ್ವವ್ವೇ ಹೇಳೆಕ್ಕಟ್ಟೆ.

  4. ಅಪ್ಪು ಅಪ್ಪು .. ಇದು ಪುಟಾಣಿ ಕಡ್ಲೆಯೇ.. ಲಾಯ್ಕ ಆವುತ್ತು .

  5. ಪುಟಾಣಿ ಹೇಳ್ತ ಹೆಸರಿಪ್ಪದು ಎನಗೆ ಗೊಂತಿತ್ತಿಲೆ.
    ಮಕ್ಕೊ ಮಾಂತ್ರ ಅಲ್ಲ ಶಾಮಣ್ಣ, ಕಡವ ಕಲ್ಲಿಂಗೆ ಹಾಕಿ ಕಡವಗಳೋ ಕಾಲಿ ಅಕ್ಕು, ಹೇಂ…..!

    1. “ಪುಟಾಣಿ” ಹೇಳ್ತದು ಬಹುಶ “ಬಟಾಣಿ” ಹೇಳ್ತದಕ್ಕೆ ಪ್ರಾಸ ಸರಿ ಅಪ್ಪಲೆ ಇಪ್ಪ ಹೆಸರಾಯಿಕ್ಕು…

      1. ಆಗಿಕ್ಕು ಭಾವ. ಪ್ರಾಸವೂ ಸರಿ ಬತ್ತು, ಮಾತ್ರೆಯೂ ಸರಿ ಇದ್ದು.

  6. ಮನೇಲಿ ಮಕ್ಕ ಇದ್ದರೆ ಈ ವೇಣಿಯಕ್ಕ ಹೇಳಿದಾಂಗೆ ಮಾಡ್ಳೆ ಎಡಿಯ. ಅವಕ್ಕೆ ಆ ಕಡ್ಳೆಯ ತಿಂದೇ ಮುಗುಶುಲಾತು.

  7. ಈ ಪುಟಾಣಿಗೆ ನಮ್ಮ ಭಾಷೆಲಿ ಬೇರೆಂತದೋ ಹೆಸರಿದ್ದಲ್ಲದೋ ವೇಣಿಯಕ್ಕ°..?
    ಪೊಟ್ಟುಕಡ್ಳೆಯೋ ಹೊಟ್ಟುಕಡ್ಳೆಯೋ ಹೀಂಗೆಂತದೋ ಒಂದು ಇದ್ದು.

    ಹೆಸರು ಎಂತ ಮಣ್ಣು ಬೇಕಾರು ಆಗಲಿ; ಕಾಲು ಕೇಜಿ ತೆಕ್ಕೊಂಡೋಯೆಕ್ಕು ಇಂದು ಮನೆಗೆ.

    1. ಇದಕ್ಕೆ ನಮ್ಮ ಭಾಷೆಲಿ ಚಟ್ನಿ ಕಡ್ಲೆ ಹೇಳ್ತವು. ಹೆರ ಚೋಲಿ ಇಪ್ಪ ಕಡ್ಲೆ ಅಂಗಡಿಲಿ ಅಂತೆ ತಿಂಬಲೆ ಸಿಕ್ಕುತ್ತಲ್ಲ ಅದರ ಹೊರಿಕಡ್ಲೆ/ಹುರಿಕಡ್ಲೆ ಹೇಳ್ತವು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×