ಸಂಗತಿ ಬಟಾಟೆ : ಇದೆಂತರ?

June 19, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 33 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ರಸಭರಿತ ಅಡಿಗೆಯ ಬಗ್ಗೆ ರಸಪ್ರಶ್ನೆ..

‘ಸಂಗತಿ ಬಟಾಟೆ’ ಇದು ಶಾಲೆ ಮಕ್ಕಳ ಲಾಗಾಯ್ತು ಎಲ್ಲೋದಿಕ್ಕು ಕೇಳ್ವ ಒಂದು ಮಾತು.
ಮತ್ತೂ ಅದನ್ನೇ ಅದು ಎಂತರ ಹೇಳಿ ಕೇಳಿರೆ. ಸಂಗತಿ ಪುನಃ ಅದನ್ನೇ ಹೇಳೆಕ್ಕಷ್ಟೆ – ಸಂಗತಿ ಬಟಾಟೆ.

ಇಲ್ಲಿಯೂ ಈಗ ಸಂಗತಿ ಬಟಾಟೆ ಆತೋ.
ಇದಾ ವಿಷಯ ಎಂತರ ಹೇಳೀಕ್ಕೀತೆ ಈಗಳೆ. ದಿನಾಂಕ 05.06.2011. ಆದಿತ್ಯವಾರ. ದೊಡ್ಡ ಮುಹೂರ್ತ ದಿನ ಹಾಂಗೇನೂ ಅಲ್ಲ. ಮುಹೂರ್ತ ಇಪ್ಪ ಜೆಂಬ್ರಂಗೊ ಒಂದು ಮಟ್ಟಿನದ್ದೆಲ್ಲಾ ಮುಗುತ್ತು ಹೇಳಿ ಮಾಮಸಮ ಅರಿಷ್ಟ ಕುಪ್ಪಿ ಯೋಚನೆ ಬಿಟ್ಟಿದನಡ ಹೇಳಿ ಬೈಲಿಲಿ ಸುದ್ಧಿ. ಅಂದರೂ ಅಂದು ಐದಕ್ಕೆ ಭಾರೀ ತೆರಕ್ಕೇ. ನಮ್ಮ ಮಹೇಶಣ್ಣನಲ್ಲಿ ಗಣಪತಿ ಹೋಮ ಶತರುದ್ರ ತ್ರಿಕಾಲ ಪೂಜೆ ಸತ್ಯನಾರಾಯಣ ಪೂಜೆ.
ಓ ಆ  ಪೆರ್ಲ ಹೊಡೆಲಿ, ವಿಟ್ಲ ಹೊಡೆಲಿಯೂ ಹೀಂಗೇ ಇನ್ನೊಂದು. ಅದರೆಡೇಲಿ ನಮ್ಮ ಸುಭಗ ಭಾವಂಗೆ ತಿಥಿ ಪಾಚ ಹೇಳಿಕೆಗಳುದೇ. ಎಲ್ಲಿಗೆಲ್ಲಾ ಹೋವ್ತದಪ್ಪ. ಜಡಿಕುಟ್ಟಿ ಮಳೆ ಬೇರೆ. ಇಂದು ಜೆಂಬ್ರದ ಪಂಚಾತಿಗೆ ಆಗ ಹೇಳಿ ಸುಭಗ ಭಾವ ಪಾಚಕ್ಕೆ ನೀ ಹೋಗು ಹೇಳಿ ಮನೆದೇವರ ಬಸ್ಸು ಹತ್ಸಿ ಕಳ್ಸಿ ಕೊಟ್ಟವಡಾ. ಎಂತದೇ ಜೆಂಬ್ರಂಗೊ ಇದ್ದರೂ ಇದಾ ನಮ್ಮಂದೆಡಿಗಪ್ಪದು- ‘ಸಮಯಕ್ಕಪ್ಪಗ ಹೋತು ಮಂತ್ರಾಕ್ಷತೆ ಹಾಕಿತ್ತು ಉಂಡಿಕ್ಕಿ ನಡದತ್ತು’. ಕಣ್ಣಿಂಗೆ ಎದುರು,  ಕೈ ಕಾಲ ಎಡೇಲಿ ಆರಾರು ಸಿಕ್ಕಿರೆ ‘ಎಂತ – ಒಳ್ಳೆದು’ ಹೇಳಿ ಒಂದು ಉಪಚಾರ. ಅಷ್ಟೇ ಅಪ್ಪೋದಿದಾ. ಮನ್ನೆ ದೊಡ್ಡಭಾವನಲ್ಲಿ ಉಪ್ಪಿನಾನಲ್ಲಿ ಕೂಡ ಎಲ್ಲೋರತ್ರೆ ಕೂದು ಮಾತಾಡ್ಳೆ ಆಯಿದಿಲ್ಲೇ ಹೇಳಿ ದೊಡ್ದಭಾವ, ಈ ನಮ್ಮ ಬೈಲಿನ ಜವ್ವನಿಗರಿಂಗೆ ಫೋನ್ ಮಾಡಿದವಡ ಇಂದು ಪುರುಸೊತ್ತಿದ್ರೆ ಮನಗೆ ಬನ್ನಿ. ಕೂದು ಮಾತಾಡುವೋ ಹೇಳಿ.

ಅದಪ್ಪು ಅಂದು ಏನಂಕೋಡ್ಲಿಲ್ಲಿ ಭೇಟಿ ಆದ ಮತ್ತೆ ಸರಿಗಟ್ಟು ಕೂದು ಒಂದರಿ ಮಾತಾಡ್ಳೂ ಎಡಿಗಾಗದ್ದಕ್ಕೆ ಇಂದೇ ನವಗೆ ಸಿಕ್ಕಿದ ಮೂಹೂರ್ತ ಹೇಳಿ ಒಪ್ಪಣ್ಣಂಗೂ ಕಂಡತ್ತು.
ಮಧ್ಯಾಹ್ನಮೇಲೆ ಸೇರೋದು ಹೇಳಿ ತೀರ್ಮಾನವೂ ಆತಿದ.

ಎರಡುವರೆ ಗಂಟಗಪ್ಪಗ ಒಬ್ಬೊಬ್ಬನದ್ದೇ ಬೈಕಿನ ಅಜನೆ ಕೇಳ್ಳೆ ಸುರುವಾತು, ಒಬ್ಬಬ್ಬೊನೇ ಬಂದು ಸೇರಿಗೊಂಡವು.
ಕಟ್ಟು ಗಟ್ಲೆ ಆಸರಿಂಗೆ ಕುಡುಕ್ಕೊಂಡು ಅತ್ತಿತ್ತೆ ಸಮಾಚಾರ ಹಂಚಿಗೊಂಡು ವಿಚಾರ ವಿನಿಮಯ ಮಾಡಿಗೊಂಡಿತ್ತಿದ್ದವು.
ಅಷ್ಟಪ್ಪಗ ಎತ್ತಿದ ಇದಾ ನಮ್ಮ ನೆಗೆಗಾರ ಮಾಣಿ. ಬಸ್ಸು ಹಾಳಾತು ಹೇಳಿ ಲೊಟ್ಟೆಯೂ ಎಡೆಲಿ ಒಂದು ಬೇರೆ. ಗಟ್ಟಿಗ ಉದಿಯಪ್ಪಗಳೇ ಹೆರಟಿದ ಹೇಳಿ ಚುಬ್ಬಣ್ಣಂಗೆ ಗೊಂತಾಯ್ದು ಆಗಳೇ. ನೆಗೆ ಮಾಡಿಯೊಂಡೇ ನಮ್ಮ ದೊಡ್ಡ ಭಾವ ಆಚಿಗೆ ಸ್ಟೌ ಹೊತ್ತಿಸಿ ಕಾಪಿ ಮಾಡ್ಳೆ ಸುರುಮಾಡಿದವು.

’ಸಂಗತಿ ಬಟಾಟೆ’ - ಇದೆಂತ ಸಂಗತಿ?

ಬಂದು ಹಸೇಲಿ ಕೂದು ಆಸರಿಂಗೆ ಕುಡುಕ್ಕೊಂಡಿದ್ದಾಂಗೆ ಮೆಲ್ಲಂಗೆ ಚೀಲಕ್ಕೆ ಕೈ ಹಾಕಿ ಎರಡು ಕಿಲೋ ಬಟಾಟೆ ಎದುರು ತೆಗದು ಮಡುಗಿದ.
ಎಲೆತಟ್ಟೆಲಿದ್ದ ಪೀಶಕತ್ತಿ ಉದ್ದಿಗೊಂಡು ಬಟಾಟೆ ಚೋಲಿ ತೆಗವಲೆ ಸುರುಮಡಿದ ನಮ್ಮ ನೆಗೆಗಾರ ಭಾವ. ಹತ್ರೆ ಕೂದ ಸುಭಗಣ್ಣನೂ ರಜಾ ಸಾಕಾಯ ಮಾಡಿದವು ಚೋಲಿ ತೆಗವಲೆ.
ಅಷ್ಟಪ್ಪಗ ನಮ್ಮ ಅಜ್ಜಕ್ಕಾನ ಭಾವಂಗೆ ಎಂತ ತೋರಿತ್ತೋ ಗೊಂತಿಲ್ಲೇ ಸೀದಾ ಒಳ ಹೋಗಿ ಒಂದು ಪಾತ್ರಲ್ಲಿ ನೀರು ಎರದು ಒಲಗೆ ಏರಿಸಿದವು ಕಿಚ್ಚಾಕಿದವು ನೀರೂ ಬೆಷಿ ಆತು.
ಇಲ್ಲಿ ಬಟಾಟೆ ಚೋಲಿ ತೆಗದೂ ಮುಗುತ್ತು. ಹತ್ರೆ ಕೂದೊಂಡಿದ್ದ ಶರ್ಮಪ್ಪಚ್ಚಿ ಈ ಬಟಾಟೆಯ ಉದ್ದ ಉದ್ದಕ್ಕೆ ಕೊರದು ಮಡುಗಿದವು.
ಅಜ್ಜಕ್ಕಾನ ಭಾವ ಅದರ ಕೊಂಡೋಗಿ ಆ ಬೆಷಿನೀರಿಂಗೆ ಸೊರುಗಿದವು. ರಜಾ ಹಾಳಿತಕ್ಕೆ ಬೆಂದಪ್ಪಗ ಇಳಿಸಿ ಆ ಬೆಂದ ಬಾಗವ ಒಂದು ಕಣ್ಣು ಪಾತ್ರೆಲಿ ಹಾಕಿ ಲಾಯಕ್ಕ ನೀರು ಬಳಿವಲೆ ಮಡುಗಿದವು.
ಒಂದು ಬಾಣಾಲೆಲಿ ಒಂದಷ್ಟು ಎಣ್ಣೆ ಎರದು ಒಲೆಲಿ ಮಡುಗಿದವು. ಎಣ್ಣೆ ಕಾವಲೆ ಸುರುವಪ್ಪಗ ರಜ ರಜವೇ ಆ ಬಟಾಟೆ ತೆಗದು ಎಣ್ಣೆಲಿ ಹಾಕಿ ಹೊರುದು ತೆಗದು ಒಂದು ಪಾತ್ರಲ್ಲಿ  ಹಾಕಿ ಮಡುಗಿದವು.
ಮತ್ತೆ ರಜಾ ಉಪ್ಪಿನ ಹುಡಿ ಮತ್ತು ರಜಾ ಗೆಣಮೆಣಸಿನ ಹುಡಿ ಅದರ ಮೇಗಂದ ಬಿಕ್ಕಿದಾಂಗೆ ಮಾಡಿ ರಜಾ ಬೆರೆಸಿದ ಹಾಂಗೆ ಮಾಡಿ ನಾಲ್ಕು ತಟ್ಟೆಲಿ ತಂದು ಸಭೆಲಿ ಮಡುಗಿದವು.
ಅಷ್ಟಪ್ಪಗ ಅದಾ ನಮ್ಮ ಬೊಳುಂಬು ಮಾವನೂ ರೆಡಿ. ಅಂತೇ ಕೂದು ನಮ್ಮ ದೊಡ್ಡ ಭಾವನ ಕಾಪಿಯೊಟ್ಟಿಂಗೆ ತಿಂಬಲೆ ಈ ಬಟಾಟೆ ಲಾಯಕ್ಕ ಆವ್ತಯ್ಯ ಹೇಳಿಗೊಂಡು ಮಾತಾಡಿಯೊಂಡಿದ್ದಾಂಗೆ ತಟ್ಟೆ ಕಾಲಿ!

ಅಷ್ಟಪ್ಪಗ ಆಚಿಗೆ ಕೂದೊಂಡಿದ್ದ ನಮ್ಮ ಅಡ್ಕತ್ತಿಮಾರು ಮಾವನ ಕೈಗೆ ತಾಂಟಿದ್ದು ಸುಭಗಣ್ಣನ ಚೀಲ. ಮುಟ್ಟಿ ನೋಡಿರೆ ಭಾವ! ಅದರೊಳ ಗೆಣಂಗು.!!
ಬೋಚಭಾವಂಗೆ ಒಳಂದೊಳವೇ ನೆಗೆ ಬೇರೆ. ‘ಆನು ತಂದ ಬಾಳೆ ಹಣ್ಣು ಆರ ಕಣ್ಣಿಂಗೂ ಬಿದ್ದಿದಿಲ್ಲೇ, ಬಸ್ಸಿಲ್ಲಿ ಕೂದೊಂಡು ತಿಂಬಲಕ್ಕು’ ಹೇಳಿ!!

ಇರ್ಲಿ, ಬಿಡಿ, ನಾಳಂಗೆ ಆತದು ಆ ಗೆಣಂಗು. ಈಗ ಸಂಗತಿ ಇಪ್ಪದು ಬಟಾಟೆ. ಇದಕ್ಕೆಂತ ಹೆಸರು?
ಹಾಫ್ ಸೆಂಚುರಿಂದ ಮೇಗೆ ಒಪ್ಪ(ಗಳಿಸದ) ಗಳಿಸಿದ ‘ಗುಜ್ಜೆ ಬಿರ್ಯಾಣಿ’ ಶ್ರೀ ಅಕ್ಕನೇ ಹೇಳೆಕ್ಕಷ್ಟೆಯೋ?

ಸಂಗತಿ ಬಟಾಟೆ : ಇದೆಂತರ?, 5.0 out of 10 based on 2 ratings

ಈ ಶುದ್ದಿಗೆ ಇದುವರೆಗೆ 33 ಒಪ್ಪಂಗೊ

 1. ಹಳೆಮನೆ ಅಣ್ಣ

  ಅಂಬಗ ಬಟಾಟೆ ಗಸಿ, ಬಟಾಟೆ ಅಂಬಡೆ… ಇದೆಲ್ಲ ಸಂಗತಿ ಬಟಾಟೆಯೇ ಅಲ್ಲದೋ? ಮೊದಾಲು ಇದರ ತಿಂದೊಂಡು ಇತ್ತಿದ್ದವಿಲ್ಲೆಡ, ಅಪ್ಪೋ?

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಗೇಸು ಹೆಚ್ಚಾದರೆ, ರೇಟ್ ಜಾಸ್ತಿಯಾದರೆ ಈಗಳೂ ಇದರ ತಿಂಬಲೆ ಇಲ್ಲೆ. ಕಳುದ ವರ್ಷ ನೀರುಳ್ಳಿಯನ್ನೇ ‘ನೋನ್ ವೆಜ್’ ಹೇಳಿ ತಳ್ಳಿದ್ದಿಲ್ಯೋ!

  [Reply]

  VA:F [1.9.22_1171]
  Rating: +1 (from 1 vote)
 3. ಪೆಂಗ

  ಸಂಗತಿ ಬಟಾಟೆ!

  ಹು ಹು ಇದಾ ಬಟಾಟೆಯ ಬ್ಯಾನು (ban) ಮಾಡೆಕು ಹೇಳಿ ಜೆ.ಜೆ. ಹೇಳ್ತಾ ಇದ್ದಡ ಅಪ್ಪೋ!

  [Reply]

  VA:F [1.9.22_1171]
  Rating: 0 (from 0 votes)
 4. ಕೋಳ್ಯೂರು ಕಿರಣ

  ಇದು ಫ್ರೆಂಚ್ ಫ್ರೈಸ್ ಅಲ್ಲದಾ.. ಖಂಡಾಬಟ್ಟೆ ಕೋಸ್ಟ್ಲಿ :(

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅದುವೇ ಅದುವೇ!!
  ಮನೇಲಿ ಮಾಡಿರೆ ಚೀಪೆ ಅಲ್ಲದ್ರೂ ಚೀಪ್ ಅಕ್ಕು ಈಶ್ವರಣ್ಣ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿvreddhiಯೇನಂಕೂಡ್ಳು ಅಣ್ಣಪೆಂಗಣ್ಣ°ಚುಬ್ಬಣ್ಣಬಟ್ಟಮಾವ°ಮಾಷ್ಟ್ರುಮಾವ°ದೊಡ್ಡಭಾವಚೂರಿಬೈಲು ದೀಪಕ್ಕಕಳಾಯಿ ಗೀತತ್ತೆಮಾಲಕ್ಕ°ಚೆನ್ನಬೆಟ್ಟಣ್ಣಗಣೇಶ ಮಾವ°ಪ್ರಕಾಶಪ್ಪಚ್ಚಿದೊಡ್ಮನೆ ಭಾವಗೋಪಾಲಣ್ಣಜಯಗೌರಿ ಅಕ್ಕ°ಬೋಸ ಬಾವಶ್ರೀಅಕ್ಕ°ಪುಣಚ ಡಾಕ್ಟ್ರುವಿಜಯತ್ತೆಅನು ಉಡುಪುಮೂಲೆನೆಗೆಗಾರ°ರಾಜಣ್ಣಅಕ್ಷರ°ಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ