ಇದು ಸಂಗತಿ ಬಟಾಟೆ ಅಲ್ಲ; ಗೆಣಂಗು..!

July 5, 2011 ರ 10:30 amಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಬೈಲಿಲಿ ಬಟಾಟೆಯ ಬಗ್ಗೆ ಒಂದು ರಸಪ್ರಶ್ನೆ ಕೇಳಿತ್ತಿದ್ದವು ಚೆನ್ನೆಭಾವ.
ಇಂದ್ರಾಣದ್ದು ಇದೊಂದು ಅಡಿಗೆ ರಸಪ್ರಶ್ನೆ, ಇದೆಂತರ?

ಅಡಿಗೆ ರಸಪ್ರಶ್ನೆ, ಗೆಣಂಗು:

ಸ್ಥಳ: ಮುಣ್ಚಿಕ್ಕಾನ
ದಿನಾಂಕ : 03.07.2011
ಸಮಯ : ಸಾಯಂಕಾಲ 4 ಘಂಟೆ

ಸುಭಗಣ್ಣ ಬೈಕ್ಕಿಲ್ಲಿ ಹೋಗಿ ಚೀಲಲ್ಲಿ ತಂದ ಅದಾ. ಅಜ್ಜಕ್ಕಾನ ಭಾವ ಚಕ್ಕನಾಟಿ ಕೂದೊಂಡವು.
ಚುಬ್ಬಣ್ಣ ತೆಗದು ತೊಳಕ್ಕೊಂಡು ತಂದು ಮಡುಗಿದವು. ಪೀಶಕತ್ತಿ ಬೇಡ, ಮೆಟ್ಟುಕತ್ತಿಯೇ ಒಳ್ಳೇದು ಹೇಳಿ ತೆಗದು ಮಡಿಕ್ಕೊಂಡವು ಶ್ರೀ ಅಕ್ಕ.
ಅಂದು ಉದ್ದಕ್ಕೆ ಕೊರದ್ದದು, ಇಂದು ಇದು ಉರುಟಿಂಗೆ ಹೇಳಿ ಹೇಳಿದವು ಶರ್ಮಪ್ಪಚ್ಚಿ.

ಒಪ್ಪಣ್ಣ ಹೋಗಿ ಒಲೆಮೇಗೆ ಬಾಣಾಲೆ ಮಡುಗಿ ಒಲೆಗೆ ಕಿಚ್ಚು ಹಾಕಿದವು. ಕೇ.ಜಿ ಮಾವ ಹೋದವು ಒಂದು ಚೆಂಬು ನೀರು ಹಾಕಿದವು ಬಾಣಾಲೆಗೆ.
ಗುರಿಕ್ಕಾರ್ರು ಎದ್ದವು, ಕೊರದ ಬಾಗವ ಅದಕ್ಕೆ ಹಾಕಿದವು. ಹಳೆಮನೆಣ್ಣ ಬಂದವು, ರಜಾ ಉಪ್ಪು ಮೆಣಸು ಹಾಕಿದವು.
ಗೋಪಾಲಣ್ಣಂಗೆ ಇದು ಎಂತ ಏರ್ಪಾಡು ಹೇಳಿ ಅಂದಾಜಿ ಆತಿಲ್ಲೆ. ಕಳಾಯಿ ಗೀತತ್ತೆ ಮುಚ್ಚಿ ಮಡುಗಿ ಹತ್ರವೇ ನಿಂದೊಂಡು ಅಂಬಗಂಬಗ ಮುಚ್ಚಳ ತೆಗದು ತೊಳಸಿ ನೀರು ಆರಿತ್ತೋ ಹೇದು ಕಾದೊಂಡಿತ್ತಿದ್ದವು.

ರಘು ಭಾವ ಒಂದು ತೆಂಕಿನ ಕಾಯಿ ಒಡದವು, ಅದೂ ಕತ್ತಿ ಇಲ್ಲದ್ದೇ, ಅಂದರೂ, ಸರೀ ಅರ್ಧ ಕಡಿ ಆಗಿ ತುಂಡು ಆಯ್ದನ್ನೇ ಹೇಳಿ ಆಶ್ಚರ್ಯ ಉಂಡೆಮನೆ ಕುಮಾರಣ್ಣಂಗೆ.  ತೆಕ್ಕುಂಜ ಕುಮಾರಣ್ಣ ಎರಡು ಕಡಿ ಕಾಯಿ ಕೆರದವು ಕೆರಮಣೆಲಿ ಕೂದೊಂಡು.
ಸರ್ಪಮಲೆ ಮಾವ ಬೆಲ್ಲ ಹಾಕೇಡದೊ ಹೇಳಿ ಕೇಟವು.
ಮಂಗಳೂರ ಮಾಣಿ ಒಂದು ಸಣ್ಣ ಅಚ್ಚು ಬೆಲ್ಲ ಹಾಕಿ ಬಿಟ್ಟು ಹೆರ ಬಂದ. ಅಡ್ಕತ್ತಿಮಾರು ಮಾವ ಬೇವಿನ ಸೊಪ್ಪು ಎಲ್ಲಿದ್ದು ಕೇಳಿದವು. ಚೆನ್ನಬೆಟ್ಟಣ್ಣಂಗೆ ಬೇವಿನ ಸೊಪ್ಪು ಎಷ್ಟು ಹಾಕೆಕು ಹೇಳಿ ಅಂದಾಜಿಲ್ಲೆಡ.
ಏನಂಕೋಡ್ಲ ಅಣ್ಣ ನಾಕು ಕಣೆ ಬೇವಿನ ಸೊಪ್ಪು ತೊಳದು ಅಜಪ್ಪಿ ಮಡಗಿದವು. ನೀರು ಆರಿಯಪ್ಪಗ ಒಗ್ಗರಣೆ ಹಾಕಲೆ ನೀರ್ಕಜೆ ಅಪ್ಪಚ್ಚಿ ರೆಡಿ.
ಅಂದರೆ ಒಲೆ ಬುಡಲ್ಲೆ ಗೀತತ್ತೆ, ಶಾಂತತ್ತೆ –‘ಬೇಡ ಭಾವ ಎಂಗೋ ನೋಡಿಗೋಳ್ತಿಯೋ’ ಹೇಳಿದವಡ. ಮೇಗಂದ ಕಾಯಿ ಸುಳಿ ಹಾಕಿದವಡ. ಒಗ್ಗರಣೆ ಸೌಟು ತೆಗದು ರಜಾ ಎಣ್ಣೆ, ಸಾಸಮೆ, ಕುಂಟೆ ಮೆಣಸೊಂದು ತೆಗದು ಒಗ್ಗರಣೆ ಹಾಕಿದ್ದು ಸುವರ್ಣಿನಿ ಅಕ್ಕ.

ಅಕೇರಿಗೆ ಸೌಟು ಹಾಕಿ ತೊಳಸಿದ್ದು ಎಡೆಪ್ಪಾಡಿ ಭಾವನಡ.
ಬೋಸ ಭಾವ ಎಲ್ಲೋರಿಂಗೂ ಬಟ್ಟಲು ಮಡುಗಿ ಕೂದೊಂಡಪ್ಪ. ಎರಡು ಸೌಟು ತಿಂದು ಮುಗುದಪ್ಪಗ ಸಕ್ಕರೆ ಹಾಕಿದ್ದಿಲ್ಯೋಳಿ ಸಂಶಯ ಬಂತಡ.
ಲಾಯಕ್ಕಾಯ್ದು………. ಚೀಪೆ ಕಮ್ಮಿ ಹೇಳಿ ಹೇಳಿದ್ದು ಹತ್ರೆ ಕೂದ ಶ್ಯಾಮಣ್ಣನ ಕೆಮಿಗೆ ಬಿದ್ದಿತ್ತಡ. ಎಂಟು ಸೌಟು ಪಾಚ ಉಣ್ತವಕ್ಕೆ ಸಕ್ಕರೆ ಬೇಕಾದಾಂಗೆ ಬಟ್ಳಿಲಿ ಸೇರ್ಸಿಗೊಂಡರಾತು ಹೇಳಿ ಚೂರಿಬೈಲು ದೀಪಕ್ಕನ ಸಮಜಾಯಿಶಿ.
ಬೊಳುಂಬು ಮಾವ ಬಂದು ತಲಪುವಾಗ ಪಾತ್ರ ತೊಳೆತ್ತಲ್ಲಿಂಗೆ ಎತ್ತಿದ್ದಡ.

ಇಂದು ರೂಪತ್ತೆ ಇಲ್ಲೆನ್ನೇದು ಬೇಜಾರಾತಡ ಪೆರ್ವ ಗಣೇಶಣ್ಣಂಗೆ, ಮುಟ್ಟಿದ್ದನ್ನೇ ಇಲ್ಲೆಡ.
ಕಾಪಿ ಚಾ ವ್ಯವಸ್ಥೆ ದೀಪಿಕಾ ಮತ್ತು ಒಪ್ಪಕ್ಕ.

ಗೆಣಂಗು ಕಂಡ್ರೆ ಎನಗಾಗ ಹೇಳಿ ನೆಗೆಮಾಣಿ ಬಾರದ್ದೇ ಕೂಯ್ದನಡ!. ಉಮ್ಮಾ, ಬೇರೇ ಅಂಬೇರ್ಪು ಎಂತಾರು ಇದ್ದಿಕ್ಕಲ್ಲದೋ.!
ಇದು ಸಂಗತಿ ಬಟಾಟೆ ಅಲ್ಲಾ; ಗೆಣಂಗು ಹೇಳಿ ನೆಗೆಮಾಡಿಗೊಂಡಿದ್ದದು ದೊಡ್ದಭಾವ.
ಇಷ್ಟು ಜೆನ ಸೇರಿ ಪಾತ್ರೆ ಅಡಿ ಹಿಡುದ್ದಿಲ್ಲೇ ಹೇಳಿ ಸಮಾಧಾನ- ಪ್ರದೀಪ್ ಮುಣ್ಚಿಕ್ಕಾನ.

ಈ ತಿಂಗಳ ಬೈಲ ಬೈಠಕ್ ಲಿ ಹೀಂಗೆ.
ಇದಿಷ್ಟು ವರದಿ ಒಪ್ಪಿಸಿದ್ದು ಅನುಶ್ರೀ ಬಂಡಾಡಿ.

ಇರಲಿ, ಬೇಜಾರಿಲ್ಲೇ.
ಆದರೆ, ಮಾಡಿದ್ದಕ್ಕೆ ಹೆಸರು?

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಮುಣ್ಚಿಕಾನ ಭಾವ

  ಪಾಕ ತುಂಬಾ ಒಪ್ಪ ಇದ್ದು. ಆನು ನಿಜವಾಗಿ ಅಮ್ಮನ ಹತ್ತರೆ ಮಾಡುಲೆ ಹೇಳ್ತೆ :)
  {ಗೆಣಂಗು ಕಂಡ್ರೆ ಎನಗಾಗ ಹೇಳಿ ನೆಗೆಮಾಣಿ ಬಾರದ್ದೇ ಕೂಯ್ದನಡ…}
  ಗ್ಯಾಸ್ ಅಕ್ಕು ಹೇಳಿಯ? 😉

  [Reply]

  VA:F [1.9.22_1171]
  Rating: 0 (from 0 votes)
 2. pakalakunja gopalakrishna

  ಮುಣ್ಚಿಕಾನ ಎನ್ನ ಅಜ್ಜನ ಮನೆ… ಇಷ್ಟೆಲ್ಲಾ ಜನ ಸೇರಿ ತಯಾರಾದ ಉಪ್ಕರಿ … ಎನಗೆ ಗೊಂತಾಗದ್ದೇ ಹೋತನ್ನೇ …

  [Reply]

  VA:F [1.9.22_1171]
  Rating: 0 (from 0 votes)
 3. ಅನುಶ್ರೀ ಬಂಡಾಡಿ

  ಹ್ಹ ಹ್ಹ ಹ್ಹ. ಇದು ಸೂಪರ್ ಆಯ್ದು!
  ಶಾಲೆಮಕ್ಕೊಗೆ ‘ನಲಿ-ಕಲಿ’ ಹೇಳಿ ಆಟದ ಮೂಲಕ ಪಾಠ ಮಾಡ್ತ ಹಾಂಗೆ, ಅಡಿಗೆ ಕಲಿಶಿ ಕೊಡ್ತ ಹೊಸ ನಮುನೆಯ ಇದು? :)

  [Reply]

  ನೆಗೆಗಾರ°

  ನೆಗೆಗಾರ° Reply:

  ಅಂಬಗ ಇಂಗ್ಳೀಶುಕ್ಲಾಸುದೇ ಹೀಂಗೆ ಮಾಡುಗೋ ಮಾಷ್ಟ್ರುಮಾವ? 😉
  ಕಲಿವಲೆ ಸುಲಾಬ.

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ

  ಎಲ್ಲೋರಿಂಗೂ ಮನಃಪೂರ್ವಕ ಧನ್ಯವಾದ. ನಿಂಗೊಳೆಲ್ಲರ ಪ್ರೋತ್ಸಾಹ ಎವತ್ತೂ ಇರೆಕು.
  ‘ನಗೆಯಲ್ಲೂ ಒಂದು ದಗೆಯಿದೆ’ ಹೇಳಿ ತೆಕ್ಕುಂಜ ಕುಮಾರಣ್ಣ ಅಂಬಗಂಬಗ ಹೇಳುಗಡ. ಶುದ್ದಿ ಬರವಲೆ ಬೇರೆ ಎಂತೂ ಸಿಕ್ಕದ್ದಿಪ್ಪಗ ಹೀಂಗೆ ‘ನಗೆಯಲ್ಲೂ ಒಂದು ಬಗೆಯಿದೆ’ ಹೇಳಿ ಒಂದು ಸಣ್ಣ ಪ್ರಯತ್ನ. ಬೈಲಿನೋರ ಕಾಲೆಳೆತ್ತಕ್ಕೆ ಬೇಜಾರಿಲ್ಲೆನ್ನೆ.

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  Gopalakrishna BHAT S.K.

  ಅಡಿಗೆ ಪಾಠ ಲಾಯ್ಕ ಇದ್ದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಮಾಲಕ್ಕ°ಪ್ರಕಾಶಪ್ಪಚ್ಚಿದೊಡ್ಮನೆ ಭಾವಕಜೆವಸಂತ°ಶುದ್ದಿಕ್ಕಾರ°ಅಜ್ಜಕಾನ ಭಾವಗಣೇಶ ಮಾವ°ದೊಡ್ಡಭಾವಬೊಳುಂಬು ಮಾವ°ಪುಟ್ಟಬಾವ°ವೇಣೂರಣ್ಣಹಳೆಮನೆ ಅಣ್ಣಪುಣಚ ಡಾಕ್ಟ್ರುವಿಜಯತ್ತೆಕಾವಿನಮೂಲೆ ಮಾಣಿಒಪ್ಪಕ್ಕಶರ್ಮಪ್ಪಚ್ಚಿಸರ್ಪಮಲೆ ಮಾವ°ದೊಡ್ಡಮಾವ°vreddhiಡಾಗುಟ್ರಕ್ಕ°ತೆಕ್ಕುಂಜ ಕುಮಾರ ಮಾವ°ಪುತ್ತೂರುಬಾವಶೇಡಿಗುಮ್ಮೆ ಪುಳ್ಳಿವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ