Oppanna.com

ಸಂಕ್ರಾಂತಿ ಎಳ್ಳು ಬೆಲ್ಲ

ಬರದೋರು :   ವೇಣಿಯಕ್ಕ°    on   08/01/2013    4 ಒಪ್ಪಂಗೊ

ವೇಣಿಯಕ್ಕ°

ಸಂಕ್ರಾಂತಿ ಎಳ್ಳು ಬೆಲ್ಲ

ಬೇಕಪ್ಪ ಸಾಮಾನುಗೊ:

  • 1 ಕಪ್(ಕುಡ್ತೆ) ನೆಲಕಡಲೆ
  • 1 ಕಪ್(ಕುಡ್ತೆ) ತುಂಡು ಮಾಡಿದ ಕೊಪ್ಪರ ಕಾಯಿ
  • 1 ಕಪ್(ಕುಡ್ತೆ) ತುಂಡು ಮಾಡಿದ ಬೆಲ್ಲ
  • 1 ಕಪ್(ಕುಡ್ತೆ) ಪುಟಾಣಿ/ಚಟ್ನಿ ಕಡ್ಲೆ
  • 3/4-1 ಕಪ್(ಕುಡ್ತೆ) ಎಳ್ಳು

ಮಾಡುವ ಕ್ರಮ:

ನೆಲಕಡ್ಲೆಯ ಒಂದು ಬಾಣಲೆಲಿ ಹೊರುದು, ಚೋಲಿ ತೆಗದು ಅರ್ಧ-ಅರ್ಧ ಮಾಡಿ ಮಡಿಕ್ಕೊಳ್ಳಿ.
ಎಳ್ಳನ್ನೂ ಬಾಣಲೆಗೆ ಹಾಕಿ ಪರಿಮ್ಮಳ ಬಪ್ಪನ್ನಾರ/ಹೊಟ್ಟುವನ್ನಾರ ಹೊರುದು ಕರೆಲಿ ಮಡುಗಿ.
ಕೊಪ್ಪರ ಕಾಯಿಯ ಹೆರಾಣ ಚೋಲಿಯ ಕೆರಸಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ತುಂಡು ಮಾಡಿ ಮಡಿಕ್ಕೊಳ್ಳಿ.
ಬೆಲ್ಲವನ್ನೂ ಸಣ್ಣಕೆ ತುಂಡು ಮಾಡಿ ಮಡಿಕ್ಕೊಳ್ಳಿ.

ಈ ಎಲ್ಲಾ ಸಾಮಾನನ್ನು ಒಂದು ಪಾತ್ರೆಗೆ ಹಾಕಿ ತೊಳಸಿ ಒಂದು ಕರಡಿಗೆಲಿ ತೆಗದು ಮಡುಗಿ.
ಇದರ ನೈವೇದ್ಯಕ್ಕೆ ಉಪಯೋಗ್ಸುಲೆ ಅಕ್ಕು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

4 thoughts on “ಸಂಕ್ರಾಂತಿ ಎಳ್ಳು ಬೆಲ್ಲ

  1. ಎಳ್ಳು ಬೆಲ್ಲ ತಿನ್ನಿ,ಒಳ್ಳೆ ಮಾತನಾಡಿ…
    ಸಂಕ್ರಾಂತಿಗೆ ಹೇಳುವ ಮಾತು ಇದು.

    1. ಅದ ಅದ ಮೇಗೆ ನೋಡಲ್ಲಿ ಬಾನಿಲ್ಲಿ.
      ಕರ್ಕವೃತ್ತ೦ದ ಮಕರವೃತ್ತದ ಕಡಗೆ
      ಸೂರ್ಯನ ರಥಚಕ್ರ ತಿರುತಿರುಗಿ
      ಬ೦ತಲ್ಲಿ ಅರುಣನಾ ಡ್ರೈವಿ೦ಗಿಲ್ಲಿ-
      ಸ೦ಕ್ರಾ೦ತಿ ಬ೦ತೋ ಸ೦ಕ್ರಾ೦ತಿ!
      ಇಲ್ಲಿ ಬೈಲಿಲ್ಲಿ ಹಬ್ಬದ ಸಡಗಾರ
      ನೋಡಿಲ್ಲಿ ಅಕ್ಕನ ಕಯ್ಯರಸಪಾಕ!
      ಚಿತ್ರವ ನೋಡಿಯೆ ನಾಲಗೆ ನೀರಿಳಿಶಿತ್ತು.
      ತಿ೦ದರೆ ಕೇಳೆಕೊ ಮತ್ತದರ!
      ಸ೦ಕ್ರಾ೦ತಿ ಬ೦ತು ಹಬ್ಬಕ್ಕೆ ಅಣಿಯಾತು
      ಅಕ್ಕನ ಕಯಿ ಹದದ ಎಳ್ಳು ಬೆಲ್ಲದ ಪಾಕ
      ಬೈಲಿಲ್ಲಿ ಬಡದತ್ತು ಗಮ,ಗಮ ಪರಿಮಳ.
      ಹಬ್ಬಕ್ಕೆ ಸುದ್ದಿ ಹೇಳಿಕೆ ಹೇಳಕ್ಕೊ ಬೇಗ
      ನೀ ಹೇಳದ್ರು ಎ೦ಗೆಲ್ಲ ಬಪ್ಪಾವೆ ಮತ್ತೆ
      ಕಾದು ನೋಡುವೊ° ನಾವದರಿಲ್ಲಿ ಬೈಲಿಲ್ಲಿ!
      ಬಪ್ಪಲಾಗದಾರು ಒ೦ದಿಷ್ಟು ಬೇವುಬೆಲ್ಲವಾ
      ಕಳುಗಕ್ಕೊ ನೀನದರ ಮರೆಯದ್ದೆ!

      ಹಬ್ಬಕ್ಕೆ ಮದಲೆ ವೇಣಿಯಕ್ಕ೦ಗೆ ಶುಭಾಶಯ೦ಗೊ ನಮಸ್ತೇ….

      1. ಅಪ್ಪಚ್ಚೀ, ನಿಂಗಳ ಪದ್ಯದ ರೂಪದ ಸಂಕ್ರಾಂತಿ ಶುಭಾಶಯಂಗೊ, ವೇಣಿ ಅಕ್ಕ ತಿಳುಸಿಕೊಟ್ಟ ಎಳ್ಳು ಬೆಲ್ಲದ ತಯಾರಿಗೆ ಒಳ್ಳೆ ಕಾಂತಿ ಕೊಟ್ಟತ್ತದ. ಎಲ್ಲೋರಿಂಗು ಶುಭಾಶಯಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×