ಸಾಟು

ಸಾಟು

ಬೇಕಪ್ಪ ಸಾಮಾನುಗೊ:

 • 2 ಕಪ್ ಮೈದಾ ಹೊಡಿ
 • 1/2 ಕಪ್ ತುಪ್ಪ
 • 1/4 ಚಮ್ಚ ಉಪ್ಪು
 • 2 ಕಪ್ ಸಕ್ಕರೆ
 • 2-3 ಏಲಕ್ಕಿ
 • ತುಪ್ಪ ಅಥವಾ ಎಣ್ಣೆ – ಹೊರಿವಲೆ

ಮಾಡುವ ಕ್ರಮ:

ಮೈದಾ ಮತ್ತೆ ಉಪ್ಪಿನ ಒಂದು ಪಾತ್ರಲ್ಲಿ ಹಾಕಿ, ಆದಕ್ಕೆ  1/2 ಕಪ್ ಒಳ್ಳೆ ಬೆಶಿ ಮಾಡಿದ ತುಪ್ಪವ ಹಾಕಿ ಲಾಯಿಕಲಿ ಬೆರುಸಿ.
ಮತ್ತೆ ಆದಕ್ಕೆ ಬೇಕಾಷ್ಟು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಒಂದು ಕರೆಲಿ 15 ನಿಮಿಷ ಮಡುಗಿ.

ರೆಜ್ಜ ಹಿಟ್ಟಿನ ತೆಕ್ಕೊಂಡು,  ಅದರ ಕೈಲಿ ಲಾಯಿಕ ತಿಕ್ಕಿ ನಿಂಬೆ ಹುಳಿ ಗಾತ್ರದ ಉಂಡೆ ಮಾಡೆಕ್ಕು.

ಮತ್ತೆ ಅದರ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೆಟ್ಟೆ ಮಾಡಿ, ಹೆಬ್ಬಟೆ ಬೆರಳಿಲ್ಲಿ ನಡುಕೆ ರೆಜ್ಜ ಒತ್ತೆಕ್ಕು.


ತುಪ್ಪ ಅಥವಾ ಎಣ್ಣೆಯ ಒಂದು ಬಾಣಲೆಲಿ ಮಡುಗಿ ಬೆಶಿ ಮಾಡೆಕ್ಕು.
ಆದು ಲಾಯಿಕಲ್ಲಿ ಬೆಶಿ ಆದಪ್ಪಗ ಅದಕ್ಕೆ ತಯಾರಿಸಿದ ಸಾಟಿನ ಉಂಡೆಯ  ಹಾಕಿ ಸಣ್ಣ ಕಿಚ್ಚಿಲ್ಲಿ ಒಂದು 20 ನಿಮಿಷ ಚಿನ್ನದ ಬಣ್ಣ ಬಪ್ಪನ್ನಾರ ಹೊರುದು ತೆಗೆಯೆಕ್ಕು.

ಇದರ ಸಾಧಾರಣ 30 ನಿಮಿಷ ಒಂದು ಕರೆಲಿ ಪೂರ್ತಿ ತಣಿವನ್ನಾರ ಮಡುಗೆಕ್ಕು.

ಇನ್ನೊಂದು ಪಾತ್ರಲ್ಲಿ 2 ಕಪ್ ಸಕ್ಕರೆದೆ, 1/2 ಕಪ್ ನೀರುದೆ ಹಾಕಿ ಬೆಶಿ ಅಪ್ಪಲೆ ಮಡುಗಿ, ಸಕ್ಕರೆ ಪಾಕ ಮಾಡೆಕ್ಕು.
(ಸಕ್ಕರೆ ಪಾಕ ಆತಾ ಹೇಳಿ ನೋಡುಲೆ, ತೋರು ಬೆರಳಿನ ನಿಧಾನಕ್ಕೆ ಸಕ್ಕರೆ ಪಾಕಲ್ಲಿ ಅದ್ದಿ, ಹೆಬ್ಬಟೆ ಬೆರಳಿಲ್ಲಿ ಅದರ ಮುಟ್ಟಿ ಬಿಡೆಕ್ಕು. ಅಷ್ಟಪ್ಪಗ ಒಂದು ನೂಲಿನ ಹಾಂಗೆ ಬಂದರೆ ಪಾಕ ಆತು.)
ಏಲಕ್ಕಿಯ ಚೊಲ್ಲಿ, ಹೊಡಿ ಮಾಡಿ ಸಕ್ಕರೆ ಪಾಕಕ್ಕೆ ಹಾಕಿ ತೊಳಸೆಕ್ಕು.

ಹೊರುದ ಸಾಟಿನ ಸಕ್ಕರೆ ಪಾಕಕ್ಕೆ ಹಾಕಿ ಮುಳುಗ್ಸಿ 1-2 ನಿಮಿಷ ಮಡುಗೆಕ್ಕು.

ಅದರ ಒಂದೊಂದೆ ತೆಗದು ಒಂದು ಬಾಳೆ ಎಲೆಲಿ (ಅಥವಾ ಅಲ್ಯುಮಿನಿಯಮ್ ಫಾಯಿಲ್ಲ್ಲಿ) ಕೆಳಾಣ ಚಿತ್ರಲ್ಲಿ ತೊರ್ಸಿದ ಹಾಂಗೆ ಮಡುಗೆಕ್ಕು.

ಪುನಃ ಆ ಸಕ್ಕರೆ ಪಾಕವ ಒಂದು ನಿಮಿಷ ಬೆಶಿ ಮಾಡಿ, ಐದು ನಿಮಿಷ  ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ಗಟ್ಟಿ ಅಪ್ಪಲೆ ತಣಿವಲೆ ಮಡುಗೆಕ್ಕು.

ಅದಕ್ಕೆ ಪುನಃ ಈ ಸಾಟಿನ ಹಾಕಿ ಬೆರುಸಿ ಬಾಳೆ ಎಲೆಲಿ ಅಥವಾ ಅಲ್ಯುಮಿನಿಯಮ್ ಫಾಯಿಲ್ಲ್ಲಿಹಾಕೆಕ್ಕು.
ಒಳುದ ಸಕ್ಕರೆ ಪಾಕವ ಈ ಸಾಟಿನ ಮೇಗೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹಾಕೆಕ್ಕು.

ಪೂರ್ತಿ ತಣುದ ಮೇಲೆ ಒಂದು ಕರಡಿಗೆಲಿ ಹಾಕಿ ಮಡುಗಿದರೆ 15 ದಿನ ಆದರೂ ಹಾಳಾವುತ್ತಿಲ್ಲೆ.
ಮೇಲೆ ಹೆಳಿದ ಸಾಮಾನಿಲ್ಲಿ ಸಾಧಾರಣ 15 ಸಾಟು ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ವೇಣಿಯಕ್ಕ°

   

You may also like...

17 Responses

 1. ರಘು ಮುಳಿಯ says:

  {ಒಂದು ಕರಡಿಗೆಲಿ ಹಾಕಿ ಮಡುಗಿದರೆ 15 ದಿನ ಆದರೂ ಹಾಳಾವುತ್ತಿಲ್ಲೆ } ಒಳುದರಲ್ಲದೋ ಹಾಳಪ್ಪೊದು ?
  ಅಕ್ಕ ಹೇಳಿಕೊಟ್ಟ ಕ್ರಮ ಲಾಯ್ಕ ಇದ್ದು.
  ಧನ್ಯವಾದ.

 2. ಉಂಡೆಮನೆ ಕುಮಾರ° says:

  ಹಂತ ಹಂತವಾಗಿ ಪಟ ವಿವರಣೆ ಲಾಯಿಕಾಯಿದು..ನೋಡಿ ತಿಳಿ ಮಾಡಿ ಕಲಿವಲೆ ಒಪ್ಪ ಆತು..ಧನ್ಯವಾದಂಗೊ

 3. ಒಪ್ಪ ಕೊಟ್ಟ ಎಲ್ಲರಿಂಗುದೆ ಧನ್ಯವಾದಂಗೊ. ಃ)

 4. ಧನ್ಯವಾದ ವೇಣಿ ಅಕ್ಕ..
  ಅಡಿಗೆ ಹೇಳಿಯಪ್ಪಗ ನಮ್ಮ ಬೈಲಿನ ಬಂಡಾಡಿ ಅಜ್ಜಿ ನೆಂಪಾವ್ತವಿದಾ?? ಎಲ್ಲಿದ್ದಿ ಅಜ್ಜೀ???

 5. smithubhat2003 says:

  Yenage saatu helre thumba ista bere yava sweet thintille anu . recipe nodi thumba khushi aathu anudhe try madi helte henge banthu heli.

 6. ವೇಣಿ..,

  ಬೈಲಿಂಗೆ ಚೀಪೆಯ ಮಾಡಿಗೊಂಡು ಬಂದು ಇಳುದ್ದದು ಕೊಶೀ ಆತು. ಪುಳ್ಳಿ ಬೈಲಿಂಗೆ ಬಂದ ಕೂಡ್ಲೆ ಸ್ವಾಗತ ಹೇಳುಲೆ ಆಯಿದಿಲ್ಲೆ ಅಜ್ಜಿಗೆ ಪುರುಸೋತ್ತಾಯಿದಿಲ್ಲೆ.

  ನೀನು ಬರವ ವಿಧಾನವೂ, ಅದಕ್ಕೆ ತಕ್ಕ ಪಟವೂ ಬಂದು ಸುರೂ ಮಾಡ್ತವಕ್ಕೂ ಕೂಡ ಒಂದರಿ ಪ್ರಯೋಗ ಮಾಡುವ° ಹೇಳಿ ಮಾಡಿ ಹೋಕು.

  ಬೈಲಿನ ಅಡಿಗೆ ವಿಭಾಗವ ಸಮೃದ್ಧಿ ಮಾಡ್ತಾ ನಿನಗೆ ಒಳ್ಳೆದಾಗಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *