Oppanna.com

ಸೊಳೆ ಬೋಳುಕೊದಿಲು

ಬರದೋರು :   ವೇಣಿಯಕ್ಕ°    on   25/09/2012    13 ಒಪ್ಪಂಗೊ

ವೇಣಿಯಕ್ಕ°

ಸೊಳೆ ಬೋಳುಕೊದಿಲು

ಬೇಕಪ್ಪ ಸಾಮಾನುಗೊ:

  • 2-3 ಕಪ್(ಕುಡ್ತೆ) ನೀರು ಸೊಳೆ
  • ಚಿಟಿಕೆ ಅರುಶಿನ ಹೊಡಿ
  • 1-1.5 ಚಮ್ಚೆ ಮೆಣಸಿನ ಹೊಡಿ
  • ನಿಂಬೆ ಗಾತ್ರದ ಬೆಲ್ಲ
  • 5-6 ಬೇನ್ಸೊಪ್ಪು
  • 5-6 ಎಸಳು ಬೆಳ್ಳುಳ್ಳಿ
  • 1 ಚಮ್ಚೆ ಸಾಸಮೆ
  • ಚಿಟಿಕೆ ಇಂಗು
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ನೀರು ಸೊಳೆಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.
(ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.)

ನೀರು ಸೊಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.

ಕೊರದ ನೀರು ಸೊಳೆ, ಬೆಲ್ಲ, ಮೆಣಸಿನ ಹೊಡಿ, ಅರುಶಿನ ಹೊಡಿ, ಸಾಧಾರಣ 3 ಕುಡ್ತೆ ನೀರು ಹಾಕಿ ಪ್ರೆಶರ್ ಕುಕ್ಕರ್ಲ್ಲಿ ಬೇಶಿ(2-3 ಸೀಟಿ).
ಪ್ರೆಶರ್ ಹೋದ ಮೇಲೆ, ನೀರು, ಉಪ್ಪು, ಹುಳಿ ಬೇಕಾದರೆ ಹಾಕಿ ಕೊದುಶಿ. ಇದರ 2-3 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ.

ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಎಣ್ಣೆದೆ, ಬೆಳ್ಳುಳ್ಳಿದೆ ಹಾಕಿ ಹೊರಿಯೆಕ್ಕು. ಅದು ಚಿನ್ನದ ಬಣ್ಣ ಬಪ್ಪಗ, ಅದಕ್ಕೆ ಸಾಸಮೆ ಹಾಕೆಕ್ಕು.
ಅದು ಹೊಟ್ಟಿ ಅಪ್ಪಗ, ಇಂಗು, ಬೇನ್ಸೊಪ್ಪು ಹಾಕಿ, ರೆಜ್ಜ ಹೊತ್ತು ಮಡುಗಿ, ಒಗ್ಗರಣೆಯ ಬೋಳುಕೊದಿಲಿಂಗೆ ಹಾಕಿ. ಇದು ಅಶನದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

13 thoughts on “ಸೊಳೆ ಬೋಳುಕೊದಿಲು

  1. ಮಳೆ ಬಂದೊಂಡಿಪ್ಪಾಗ ಬೆಶಿ ಹೆಜ್ಜೆಯೊಟ್ಟಿಂಗೆ……….ಅದಕ್ಕಿದಾ ಹಳ್ಲಿ ಹೇದು ಕೂಸುಗೊ ಸಸಾರ ಮಾಡಿ ಮಾಣಿಯಂಗಳ ಬೇಡ ಹೇಳೆಡಿ ಹೇಳಿ ಪೆಂಗಣ್ಣ ಹೇಳ್ಸು.ಬೆಂಗ್ಳೂರಿಲ್ಲಿ ನೀರ್ಸೊಳಗೆ ಎಷ್ಟು ಪೈಸವೋ,ನವಗೆ ಅರಡಿಯ.ಪೈಸ ಕೊಟ್ಟು ಸೊಳೆ ತೆಕ್ಕೊಂಡರೆ ಅಮ್ಮ ತಲಗೆ ಕಿಚ್ಚೇ ಹಾಕಿಕ್ಕುಗು.

  2. ಮಾಡ್ತಾ ಇದ್ದೆ… ಕುಕ್ಕರಿಲಿ ಮಡಗಿದ್ದೆ. ೨ ವಿಶಿಲಾತು….. ಅದಾ ಅದಾ…. ಇನ್ನೊಂದು… ನಿಲ್ಸಿಕ್ಕಿ ಬತ್ತೆ…

  3. ಕೊಯ್ಷೆಕ್ಕಿ ಹೆಜ್ಜೆಯೊಟ್ಟಿಂಗೆ ಸುರಿದು ಉಂಬಲೆ ಪಷ್ಟಕ್ಕು.

  4. {ಬೆಳ್ಳುಳ್ಳಿಯ ಸೊಲುದು, ಜಜ್ಜಿ, ಒಗ್ಗರಣೆ ಸಟ್ಟುಗಿಲ್ಲಿ ಎಣ್ಣೆದೆ, ಬೆಳ್ಳುಳ್ಳಿದೆ ಹಾಕಿ ಹೊರಿಯೆಕ್ಕು. ಅದು ಚಿನ್ನದ ಬಣ್ಣ ಬಪ್ಪಗ, ಅದಕ್ಕೆ ಸಾಸಮೆ ಹಾಕೆಕ್ಕು.}
    ಛೆ…ಇದು ಹಾಕಲೇ ಬೇಕಾ..? ಒಗ್ಗರಣೆ ಹಾಕಿ ತೆಗದ ಫಟ ಕಾಂಬಗ ಕೊದಿ ಆವುತ್ತು.

    1. ಯೇ ಬಾವ
      ಬಾಲ್ಡಿ ಬೇಕೋ? ಆ ಊರಿಲಿ ನೀರಿಂಗೆ ತುಂಬಾ ಕ್ರಯ ಅಡ..

      ರಜಾ ಜಾಸು ಸಿಕ್ಕುಗು..
      ನಿಂಗಳ ಕಾಣದ್ದೆ ನೆಗೆಮಾಣಿಗೆ ಅಸಕ್ಕಾವ್ತಡ..

      1. ಬಾಲ್ದಿ ಅಲ್ಲ, ಹಡಗು ತೇಲುಗು, ಅಷ್ತು ನೀರು ಬ೦ತು ಬಾಯಿಲಿ..
        ಎ೦ತ ಮಾಡುದು ಪೆ೦ಗಣ್ಣಾ.. ಜೀವನ ಬಹಳ ಬ್ಯುಸಿ ಆಯಿದು. ಅ೦ದರುದೆ ಪುರುಸೊತ್ತು ಮಾಡ್ಯೊ೦ಡು ಇಲ್ಲಿ ಬೈಲಿಲ್ಲಿ ಇಣುಕ್ಕಿಕ್ಕಿ ಹೋಪದು, ಒಪ್ಪ ಕೊಡ್ಳೆ ಪುರುಸೊತ್ತು ಇಲ್ಲದ್ರುದೆ.

  5. ಬಿ.ಟಿ.ಬದನೆ ಬೋಳುಕೊದಿಲಿ೦ದ ಇದು ಯಾವತ್ತೂ ಮು೦ದೆಯೆ.

  6. ಇಂದು ಸೊಳೆಬೋಳುಕೊದಿಲಾ..
    ಇದಾ.. ಆ ತಪ್ಪಲೆ ಇತ್ತೆ ಮಡಿಗಿಕ್ಕಿ ಆತಾ

  7. ಹ್ಮ್! ರುಚಿಯಾದ ಸೊಳೆ ಬೋಳು ಕೊದಿಲ ಪರಿಮ್ಮಳ, ಮೊದಲು ತಿಂದ ರುಚಿ ಎಲ್ಲ ನೆಂಪಿಂಗೆ ಬಂದು ಆಶೆ ಅವ್ತನ್ನೇ ವೇಣಿ.?
    ಎನಗೆ ಭಾರೀ ಪ್ರೀತಿ ಇದು ಹೇಳಿ ಬರದರೆ ಇನ್ನು ಎಲ್ಲರು ನೆಗೆ ಮಾಡುಗು ಇದಕ್ಕೆ ಪ್ರೀತಿ ಅಲ್ಲದ್ದು ಯಾವುದಪ್ಪಾ ಹೇಳಿ.
    ಹಾಂಗೆ ಇಲ್ಲಿಗೇ ನಿಲ್ಸುತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×