ಸೊಳೆ ತಾಳು(ಪಲ್ಯ)

ಸೊಳೆ ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

 • 2-3 ಕಪ್(ಕುಡ್ತೆ) ನೀರು ಸೊಳೆ
 • 1/4 ಕಪ್(ಕುಡ್ತೆ) ಕಾಯಿ ತುರಿ
 • ಚಿಟಿಕೆ ಅರುಶಿನ ಹೊಡಿ
 • 1/2 ಚಮ್ಚೆ ಮೆಣಸಿನ ಹೊಡಿ
 • 5-6 ಬೇನ್ಸೊಪ್ಪು
 • 1 ಚಮ್ಚೆ ಉದ್ದಿನ ಬೇಳೆ
 • 1 ಚಮ್ಚೆ ಸಾಸಮೆ
 • 1-2 ಮುರುದ ಒಣಕ್ಕು ಮೆಣಸು / ಬಾಳಕ್ಕು ಮೆಣಸು
 • 5-6 ಚಮ್ಚೆ ತೆಂಗಿನ ಎಣ್ಣೆ

ಮಾಡುವ ಕ್ರಮ:

ನೀರು ಸೊಳೆಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ.

ನೀರು ಸೊಳೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಉದ್ದಕೆ, ಸಪುರಕೆ ಸಿಗಿರಿ.
(ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.)

ಒಂದು ಬಾಣಲೆಲಿ ಸಾಸಮೆ, ಉದ್ದಿನ ಬೇಳೆ, ಒಣಕ್ಕು/ಬಾಳಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ.
ಒಗ್ಗರಣೆ ಹೊಟ್ಟುವಗ ಬೇನ್ಸೊಪ್ಪು, ಕೊರದ ಸೊಳೆ ಹಾಕಿ ಲಾಯಿಕಲಿ ತೊಳಸಿ. ಮೆಣಸಿನ ಹೊಡಿ, ಅರುಶಿನ ಹೊಡಿ ಹಾಕಿ ಒಂದು ನಿಮಿಷ ತೊಳಸಿ.
ಸಾಧಾರಣ 3/4 ಕುಡ್ತೆ ನೀರು ಹಾಕಿ, ಮುಚ್ಚಿ ಹದ ಕಿಚ್ಚಿಲ್ಲಿ ಬೇಶಿ. 2-3 ನಿಮಿಷಕ್ಕೊಂದರಿ ತೊಳಸುತ್ತಾ ಇರಿ.
ಸೊಳೆ ಬೆಂದ ಕೂಡ್ಲೆ, ಕಾಯಿ ತುರಿ ಹಾಕಿ ತೊಳಸಿ, ತಾಳಿನ ಸಣ್ಣ ಕಿಚ್ಚಿಲ್ಲಿ ಒಂದೆರಡು ನಿಮಿಷ ಮಡುಗಿ. ಇದು ಅಶನದ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ವೇಣಿಯಕ್ಕ°

   

You may also like...

3 Responses

 1. ತೆಕ್ಕುಂಜ ಕುಮಾರ ಮಾವ° says:

  ವೇಣಿಯಕ್ಕ ಫಟಂಗಳ ಹಾಕಿ ಪಾಕ ಮಾಡ್ತದರ ಕಲುಶುದು ಒಳ್ಳೆದಿರ್ತು. ಅಕೇರಿಗೆ ತಯಾರಾದ ಪಾಕವನ್ನೂ ಫಟ ಸಹಿತ ತೋರ್ಸುದು ಇನ್ನೂ ಚೆಂದ ಇರ್ತು, ಕೊದಿ ಬರುಸುತ್ತ ನಮುನೆ.

 2. ಚೆನ್ನೈ ಭಾವ° says:

  ಸಂಶಯವೇ ಇಲ್ಲೆ ..ಪಷ್ಟಾವ್ತು.

 3. ಸುಮನ ಭಟ್ ಸಂಕಹಿತ್ಲು. says:

  ಅಪ್ಪು ಇಲ್ಲಿ ಪಟಂಗಳ ನೋಡಿ ಆಶೆ ಆವ್ತು ಯಾವಾಗಳುದೆ.
  ತುಂಬಾ ಲಾಯಿಕಕ್ಕೆ ಹಂತ ಹಂತದ ವಿವರಣೆ ಚಿತ್ರ ಸಹಿತ ಲಾಯಿಕಲ್ಲಿ ಬತ್ತಾ ಇದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *