ಸೌತೆಕಾಯಿ ಕಾನಕಲ್ಯಟೆ ಮೇಲಾರ

August 28, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸೌತೆಕಾಯಿ ಕಾನಕಲ್ಯಟೆ ಮೇಲಾರ

ಬೇಕಪ್ಪ ಸಾಮಾನುಗೊ:

  • 1 ಸಾಧಾರಣ ಗಾತ್ರದ ಬಣ್ಣದ ಸೌತೆಕಾಯಿ
  • 30-40 ಕಾನಕಲ್ಯಟೆ
  • 2 ಕಪ್(ಕುಡ್ತೆ) ಕಾಯಿತುರಿ
  • 2  ಹಸಿಮೆಣಸು
  • 3/4 – 1 ಕಪ್(ಕುಡ್ತೆ) ಮಜ್ಜಿಗೆ
  • ಚಿಟಿಕೆ ಅರುಶಿನ ಹೊಡಿ (ಬೇಕಾದರೆ ಮಾತ್ರ)
  • 1/4 ಚಮ್ಚೆ ಮೆಣಸಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 1 ಚಮ್ಚೆ ಸಾಸಮೆ
  • 1  ಚಮ್ಚೆ ಎಣ್ಣೆ

ಮಾಡುವ ಕ್ರಮ:

ಕಾನಕಲ್ಯಟೆಯ ತೊಳದು ನಡುಕಂದ ಕೆಳಾಣ  ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ.

ಒಂದು ಪಾತ್ರಲ್ಲಿ 4 ಕುಡ್ತೆ ನೀರು, ರೆಜ್ಜ ಉಪ್ಪು, ಹುಳಿ ನೀರು ಹಾಕಿ ಕೊದಿವಲೆ ಮಡುಗಿ. ಅದಕ್ಕೆ ಕೊರದ ಕಾನಕಲ್ಯಟೆ ಭಾಗವ ಹಾಕಿ ಕೊದುಶಿ. 3-4 ಸಣ್ಣ/ಹದ ಕಿಚ್ಚಿಲ್ಲಿ ಮಡುಗಿ. ನೀರಿನ ಅರುಶಿ, ಬಿತ್ತಿನ ತೆಗದು ಕರೆಲಿ ಮಡುಗಿ.

ಸೌತೆಕಾಯಿಯ ಹೆರಾಣ ಚೋಲಿ, ತಿರುಳು, ಬಿತ್ತು ಎಲ್ಲ ತೆಗದು, ತೊಳದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡೆಕ್ಕು.

ಒಂದು ಪಾತ್ರಲ್ಲಿ, ಕೊರದ ಸೌತೆಕಾಯಿ, ಅರುಶಿನ ಹೊಡಿ, ಮೆಣಸಿನ ಹೊಡಿ,  ಉಪ್ಪು, ರೆಜ್ಜ ನೀರು ಹಾಕಿ, ಮುಚ್ಚಲು ಮುಚ್ಚಿ ಲಾಯಿಕಲಿ ಬೇಶಿ.
ಅದಕ್ಕೆ ಬಿತ್ತು ತೆಗದ ಕಾನಕಲ್ಯಟೆ ಹಾಕಿ ಕೊದುಶಿ. 3-4 ನಿಮಿಷ ಸಣ್ಣ ಕಿಚ್ಚಿಲ್ಲಿ ಮಡುಗಿ. ಬೆಂದ ಭಾಗ ರೆಜ್ಜ ತಣುದ ಮೇಲೆ, ಅದಕ್ಕೆ ಮಜ್ಜಿಗೆ ಹಾಕಿ ಒಂದು 15 ನಿಮಿಷ ಮಡುಗಿ.

ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿಯ ಹಾಕಿ, ಬೇಕಾಸ್ಟು ನೀರು ಹಾಕಿ ಕಡೆರಿ. ಅದು ರೆಜ್ಜ ನೊಂಪಪ್ಪಗ ಖಾರಕ್ಕೆ ಬೇಕಪ್ಪಸ್ಟು ಹಸಿಮೆಣಸು ಹಾಕಿ, ಕಾಯಿಯ ನೊಂಪಿಂಗೆ ಕಡೆರಿ.
ಇದರ ಬೇಶಿದ ಬಾಗಕ್ಕೆ ಹಾಕಿ, ತೊಳಸಿ, ಕೊದುಶೆಕ್ಕು.(ಉಪ್ಪು, ನೀರು, ಮಜ್ಜಿಗೆ ಬೇಕಾದರೆ ಹಾಕಿ.)

ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡೆಕ್ಕು. ಅದು ಹೊಟ್ಟಿ ಅಪ್ಪಗ, ಒಗ್ಗರಣೆಯ ಮೇಲಾರಕ್ಕೆ ಹಾಕಿ.
ಇದು ಅಶನ, ದೋಸೆ, ಕೊಟ್ಟಿಗೆ, ಉಂಡೆ, ಇತ್ಯಾದಿಗಳ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

  1. ಚೆನ್ನೈ ಬಾವ°
    ಚೆನ್ನೈ ಭಾವ°

    ಲಾಯಕ. ಒಪ್ಪ.

    [Reply]

    VA:F [1.9.22_1171]
    Rating: +2 (from 4 votes)
  2. ಗಣೇಶ ಪೆರ್ವ
    ಗಣೇಶ ಪೆರ್ವ

    ಕಾನಕಲ್ಲಟೆ ಕಾಯಿ ಮೇಲಾರ ಪಷ್ಟು ಕ್ಲಾಸಾವ್ತು, ಬಿತ್ತು ಕ್ಲೀನಾಗಿ ತೆಗೆಯದ್ರೆ ತೊರುಸುಗು ಹೇಳಿ ನೆ೦ಪು ಮಡುಗಿಯೋಳೆಕ್ಕು..
    ಧ್ನಯವಾದ೦ಗೊ..

    [Reply]

    VA:F [1.9.22_1171]
    Rating: +2 (from 2 votes)
  3. ಹರೀಶ್ ಕೇವಳ

    ಮೇಲಾರ ಬಾರಿ ಲಾಯಕ ಆಯ್ದು, ನಿ೦ಗೊ ಬರದ ಎಲ್ಲ ಲೇಖನ೦ಗೊ ಪುಸ್ತಕದ ರೂಪಲ್ಲಿ ಬಕ್ಕು ಹೇಳುವ ನಿರೀಕ್ಶೆ. ಸಾಧ್ಯ ಆದರೆ ಹವ್ಯಕರ ಕ್ರಮಲ್ಲಿ ಕುದನೆ ಗೊಜ್ಜಿ ಮಾಡುವ ಬಗ್ಗೆ ಒನ್ದು ಒಪ್ಪ ಬ೦ದಿದ್ರೆ ಒಳ್ಲೆದಿತ್ತು….ಧನ್ಯವಾದ೦ಗೊ

    [Reply]

    VA:F [1.9.22_1171]
    Rating: +2 (from 2 votes)
  4. ಎಮ್ ಎಸ್ ಕೆ.

    ವಿವರ ಲಾಯಕ್ಕಾತು. ಕೊಯ್ಯುವುಲೆ ಎತ್ತರಕ್ಕೆ ಹೋದ ಬಳಿ೦ದ ರಜ ತ್ರಾಸ ಆದರೂ ,ಅದರ ನೋಡುವುದೆ ಕುಶಿ. ಚಪ್ಪರ ರೀತಿ ಬೆಳಿಸಿದರೆ ಬಿಸಿಲು ರಜ ಕಮ್ಮಿ ಆಗಿ ಬೆಳೆ ಕಮ್ಮಿ ಆವುತ್ತು. ಎತ್ತರಕ್ಕೆ ಹೋಪಲೆ ಬಿಟ್ತರೆ,ಕೊಯ್ಯುವಗ ಗಿಡಕ್ಕೆ ಪೆಟ್ಟಾವುತ್ತು.ಬೆಳೆ ಬೇಗ ಹಾಳವುತ್ತಿಲ್ಲೆ ಎ೦ಬುದು ಇದರ ಪ್ಲಸ್. ದೊಡ್ದಕ್ಕೆ ಬೆಳೆದಾಗ,ಒ೦ದರಿ೦ದಲೆ ಸೇರು ಲೆಕ್ಕಲ್ಲಿ ಕೊಯ್ಯುವಲಕ್ಕು.

    [Reply]

    VA:F [1.9.22_1171]
    Rating: +2 (from 2 votes)
  5. ಮಾನೀರ್ ಮಾಣಿ
    ಮಾನೀರ್ ಮಾಣಿ

    ವೇಣಿಯಕ್ಕಾ ಧನ್ಯವಾದ. ಈ ಸಲ ಊರಿಗೆ ಹೋದಾಗ ಅಮ್ಮ೦ಗೆ ಈ ಶುದ್ದಿಯ ತೋರಿಸ್ತೆ..:)

    [Reply]

    VN:F [1.9.22_1171]
    Rating: +2 (from 2 votes)
  6. ಶ್ಯಾಮ

    ಮೇಲಾರಕ್ಕೆ ಎ೦ತಕೆ ಒಗ್ಗರಣೆಲಿ ಬೇನು ಸೊಪ್ಪು ಹಾಕುತ್ತವಿಲ್ಲೆ!
    ಮತ್ತೆ ಕಾನ ಕಲ್ಲಟೆ ನೆಟ್ಟು ಬೆಳೆಶುಲೆ ಎಡಿಗೊ?

    [Reply]

    ವೇಣಿಯಕ್ಕ°

    ವೇಣಿಯಕ್ಕ° Reply:

    ಮೊದಲಿಂದಲೂ ನಮ್ಮವರಲ್ಲಿ ಮೇಲಾರಕ್ಕೆ ಬೇನ್ಸೊಪ್ಪು ಹಾಕಿಗೊಂಡಿತ್ತವಿಲ್ಲೆ(ಎಂತಕೆ ಹೇಳಿ ಗೊಂತಿಲ್ಲೆ). ಹೀಂಗಿಪ್ಪ ಅಡಿಗೆಗಳ ನಮ್ಮ ಹೆರಿಯೋರಿಂದ ಕಲ್ತ ಕಾರಣ ಮತ್ತು ಹಾಂಗೆ ಉಂಡು ಅಭ್ಯಾಸ ಆದ ಕಾರಣ ಅದೇ ರೀತಿ ಮಾಡುದು ಮುಂದುವರುದ್ದು.
    ಮೇಲಾರಕ್ಕೆ ಬೇನ್ಸೊಪ್ಪು ಹಾಕುಲಾಗ ಹೇಳಿ ಎಂತ Rules ಇಲ್ಲೆ. ಅವರವರ ಬಾಯಿ ರುಚಿಗೆ ತಕ್ಕ ಹಾಂಗೆ ಪದಾರ್ಥ ಅಥವಾ ಒಗ್ಗರಣೆಯ ಸಾಮನುಗಳಲ್ಲಿ ವ್ಯತ್ಯಾಸ ಮಾಡುಲೆ ಅಕ್ಕು.

    ಕಾನಕಲ್ಯಟೆಯ ನೆಟ್ಟು ಬೆಳಶುಲೆ ಆವುತ್ತು. ಮನೆ ಹತ್ತರೆ ನೆಟ್ಟು, ಮಾಡ ಕರೆಂಗೆ ಹಬ್ಬುಸಿದರೆ ತೋಟಲ್ಲಿ ಸಿಕ್ಕುದರಿಂದ ಹೆಚ್ಚು ಫಸಲು ಸಿಕ್ಕುತ್ತು. ರೆಜ್ಜ ನೀರು, ಗೊಬ್ಬರ ಹಾಕಿಗೊಂಡಿದ್ದರೆ ಸಾಧಾರಣ ವರ್ಷ ಇಡೀ ಆವುತ್ತು.

    [Reply]

    VN:F [1.9.22_1171]
    Rating: +10 (from 10 votes)
  7. ಗೋಪಾಲಣ್ಣ
    ಎಸ್.ಕೆ.ಗೋಪಾಲಕೃಷ್ಣ ಭಟ್ಟ

    ಕಾನ ಕಲ್ಲಟೆ ಮೇಲಾರ -[ಕಾನ ಕಲ್ಯಟೆ] ನಮ್ಮ ಹವ್ಯಕರ ಒಂದು ಅಪೂರ್ವ ಅಡಿಗೆಯೇ ಸರಿ. ಅದಕ್ಕೆ ತೆಂಗಿನಕಾಯಿ ಎಷ್ಟು ನುಣ್ಣಂಗೆ , ಎಷ್ಟು ಮಂದಕ್ಕೆ ಕಡೆಯೆಕ್ಕು ಹೇಳಿರೆ,ಅದರ ಬಿತ್ತು ತೆಗೆದು ಆದ ಕಣ್ಣಿಲಿ ಆ ಅರಪ್ಪು ಭರ್ತಿ ಆಯೆಕ್ಕಡ![ಹಿರಿಯರು ಹೇಳಿದ್ದು].

    [Reply]

    VA:F [1.9.22_1171]
    Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಹಳೆಮನೆ ಅಣ್ಣವೆಂಕಟ್ ಕೋಟೂರುಶಾಂತತ್ತೆಸರ್ಪಮಲೆ ಮಾವ°ಅಕ್ಷರದಣ್ಣಚೂರಿಬೈಲು ದೀಪಕ್ಕಪುಟ್ಟಬಾವ°ಬೋಸ ಬಾವಕೇಜಿಮಾವ°ಕೆದೂರು ಡಾಕ್ಟ್ರುಬಾವ°ಯೇನಂಕೂಡ್ಳು ಅಣ್ಣನೀರ್ಕಜೆ ಮಹೇಶಪೆರ್ಲದಣ್ಣಅನು ಉಡುಪುಮೂಲೆಅಕ್ಷರ°ನೆಗೆಗಾರ°ಪೆಂಗಣ್ಣ°ಚುಬ್ಬಣ್ಣಒಪ್ಪಕ್ಕಡಾಮಹೇಶಣ್ಣಪುತ್ತೂರಿನ ಪುಟ್ಟಕ್ಕಜಯಗೌರಿ ಅಕ್ಕ°ಸಂಪಾದಕ°ವಸಂತರಾಜ್ ಹಳೆಮನೆಶೇಡಿಗುಮ್ಮೆ ಪುಳ್ಳಿದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ