Oppanna.com

ತಂಬಿಟ್ಟುಂಡೆ

ಬರದೋರು :   ಬಂಡಾಡಿ ಅಜ್ಜಿ    on   30/01/2010    2 ಒಪ್ಪಂಗೊ

ನೆಂಟ್ರು ಬಪ್ಪದು ಹೇಳಿರೆ ಹಾಂಗೇ ಅಲ್ದೋ… ಗ್ರೇಶದ್ದೆ ಬಪ್ಪದು. ಹಾಂಗೆ ಬಂದರೇ ಚೆಂದ. ಅದೊಂದು ಕುಶಿಯೇ ಬೇರೆ. ಸುಮಾರು ದಿನ ಕಾಣದ್ದೆ ಇಪ್ಪ ಅಪುರೂಪದೋರು ಬಂದರೆ ಅಂತೂ ಕೇಳುದೇ ಬೇಡ. ಮತ್ತೆ, ಉದಿಉದಿಯಪ್ಪಗಳೇ ತೆಂಗಿನಮರಲ್ಲಿ ಕಾಕೆ ಕೂಗಿಯೊಂಡಿದ್ದರೆ ಹೀಂಗೆ ಆರಾರು ಬತ್ತವೂಳಿ ಲೆಕ್ಕ. ಎನಗೆ ಮಾತ್ರ ಈಗೀಗ ಎಲ್ಲಿಗೂ ಹೋಪಲಾವುತ್ತಿಲ್ಲೆ. ಕಾಲಿನ ನರಂಬು ನೆಗದು ಸೆಳಿವದೋ, ಬೆನ್ನು ಬೇನೆಯೋ, ಸೊಂಟ ಬೇನೆಯೋ ಎಂತಾರು ಒಂದು ಇದ್ದದೆ. ಅಂತೆ ಹೋದಲ್ಲಿಯಾಣೋರಿಂಗೆ ಉಪದ್ರ ಕೊಡುದೆಂತಕೆ ಹೇಳಿ, ಇದ್ದ ಸೀರೆಗಳ ಎಲ್ಲ ಟ್ರಂಕಿಲಿ ಮಡಗಿ, ತಳೀಯದ್ದೆ ಕೂಯಿದೆ. ಎದುರಿದ್ದರೆ ಕೊದಿ ಆವುತ್ತಿದ.
ಅಜ್ಜಿಯ ಕಾಂಬಲೇಳಿ ಆರಾರು ಬಂದಂಡಿರ್ತವಪ್ಪಾ… ಹ್ಮ್, ಅದಿರಳಿ. ಹೀಂಗೆ ಗ್ರೇಶದ್ದೆ ನೆಂಟ್ರು ಬಪ್ಪಗ ಕುಶಿ ಆದರುದೇ, ಹೆಮ್ಮಕ್ಕೊಗೆ ರಜಾ ತಟಪಟ ಆವುತ್ತು. ಅಟ್ಟುಂಬೊಳದ ವೆವಸ್ಥೆ ಆಯೆಕ್ಕಲ್ಲದಾ… ಆದರೂ ನಿಬಾಯ್ಸುತ್ತಪ್ಪ ನಾವು. ಅಪುರೂಪಕ್ಕೆ ಬಪ್ಪೋರಿಂಗೆ ಎಂತಾರು ಮಾಡಿ ಬಾಯಿಸೀವು ಮಾಡ್ಸದ್ದೆ ಕಳುಸುಲಾವುತ್ತೋ… ಬಂದೋರು ಎರಡು ದಿನ ಕೂಪೋರಾದರೆ ಎಂತಾರು ಮಾಡ್ಳಕ್ಕು ಆರಾಮಲ್ಲಿ. ಆದರೆ ಅಂಬೆರ್ಪಿಲಿ, ಒಂದೇ ದಿನಲ್ಲಿ ಹೆರಡುವೋರಾದರೆ ಬಂಙ. ಅಂತ ಸಂದರ್ಬಲ್ಲಿ ಮಾಡ್ತ ಕೆಲಾವು ತಿಂಡಿಗೊ ಇದ್ದು. ಈ ತಂಬಿಟ್ಟುಂಡೆದೆ ಆ ಸಾಲಿಂಗೇ ಸೇರ್ತು ರಜ. ನಿಂಗೊಗೆಲ್ಲ ತಿಂದು ಗೊಂತಿಕ್ಕು, ಮಾಡಿದೇ ಗೊಂತಿಕ್ಕು. ನಮ್ಮಲ್ಲಿ ಮಾಡಿಯೊಂಡೇ ಇರ್ತಲ್ದೋ… ಅಜ್ಜಿ ಮಾಡಿದ್ದದರದ್ದುದೇ ರುಚಿ ನೋಡಿ..
ಅಕ್ಕಿಯ ಲಾಯ್ಕಲ್ಲಿ ಹೊರಿವದು, ಕೆಂಪಪ್ಪಲ್ಲಿಯೊರೇಂಗೆ. ಮತ್ತೆ ಅದರ ಹೊಡಿ ಮಾಡೇಕು. ಮದಲು ಎಂಗೊ Replica Uhren ನೆಲಕ್ಕುಳಿಲಿ ಹಾಕಿ ಉಜ್ಜೆರಿಲಿ ಮೆರುಕ್ಕೊಂಡಿದ್ದದು. ಮತ್ತೆ ಮತ್ತೆ ಕಡವ ಕಲ್ಲಿಲಿ ಗುದ್ದಿ ಹೊಡಿಮಾಡಿಯೊಂಡಿತ್ತವು. ಈಗ ಸುಚ್ಚು ಒತ್ತಿರೆ ಮೆರುದು ಕೊಡುವಂತದ್ದು ಇದ್ದದ. ಅದೆಂತರಪ್ಪಾ ಹೆಸರು ಅದರದ್ದು…ಹ್ಞಾ.. ಮಿಸ್ಕಿ. ಒಪ್ಪಕ್ಕ ಸುಮಾರು ಸರ್ತಿ ಹೇಳಿಕೊಟ್ಟಿದು, ಅದು ಮರದೇ ಹೋಪದು. ಪುಳ್ಳ್ಯಕ್ಕೊ ಅದರ್ಲಿ ತಿರುಗುಸಿ ಕೊಡ್ತವು. ಬಾರೀ ಸುಲಾಬ ಆವುತ್ತೂಳಿ. ಹಾಂಗೆ ಹೊಡಿ ಮಾಡಿಕ್ಕಿ, ಬೆಲ್ಲಪಾಕಕ್ಕೆ ಹಾಕೆಕ್ಕು ಅದರ.
ಅರ್ದ ಸೇರು ಅಕ್ಕಿಗೆ ಅರ್ದ ಸೇರು ಬೆಲ್ಲ ಬೇಕು. ಬೆಲ್ಲದ ಪಾಕ ಮಾಡ್ಳೆ ಅರಡಿತ್ತನ್ನೇ… ಬೆಲ್ಲಕ್ಕೆ ಒಂದು ರಜ ನೀರು ಹಾಕಿ ಲಾಯಿಕ ಕರಗುಸೆಕ್ಕು. ಮತ್ತೆ ಅದರ ಅರಿಶೆಕ್ಕಾವುತ್ತು. ಈಗ ಶೀನ ಶೆಟ್ಟಿಯ ಅಂಗುಡಿಲಿ ಮದಲಾಣ ಹಾಂಗೆ ಒಳ್ಳೆ ಬೆಲ್ಲ ಸಿಕ್ಕುತ್ತಿಲ್ಲೆ ಇದ. ಹೊಯಿಗೆ,ಕಸವು,ಕಸಪ್ಪಟೆ ಎಂತೆಲ್ಲ ಇರ್ತು ಅದರಲ್ಲಿ. ಅಲ್ಲದ್ದೆ ಬೇಗ ಜೆಂಬು ಬಪ್ಪದುದೇ. ಒಂದೊಂದು ಸರ್ತಿಯಾಣದ್ದರ ನೋಡಿರೇ ಕಾರು ಬತ್ತಾಂಗಿರ್ತು. ಹಾಂಗೆ ಒಪ್ಪಣ್ಣ ಕೊಡೆಯಾಲಕ್ಕೆ ಹೋಪಲಿದ್ದರೆ ಅಲ್ಲಿಂದ ಒಳ್ಳೆ ಬೆಲ್ಲ ತಪ್ಪಲೆ ಹೇಳುದು, ಅಲ್ಲಿ ಎಲ್ಲಿಯೋ ಸಿಕ್ಕುತ್ತಡ. ರೇಟು ಮಾತ್ರ ರೆಜ ಜಾಸ್ತಿ, ಮತ್ತೆಂತರ ಮಾಡುದು ಬೇಕೆ… ಹ್ಞಾ ಅರಿಶಿದ್ದದರ ಕೊದಿವಲೆ ಮಡುಗೆಕ್ಕು. ಕೊದುದು ರಜ ಪಾಕ ಬಪ್ಪಾಗ ಇಳುಗಿತ್ತು.
ಕೊದಿವ ಹೊತ್ತಿಲಿ ರೆಜ ಏಲಕ್ಕಿ ಗುದ್ದಿಯೊಳೆಕ್ಕು. ನಮ್ಮಲ್ಲಿ ಮುದ್ರಾಜೆ ಅಕ್ಕ ಮಡಿಕೇರಿಂದ ತಂದುಕೊಟ್ಟ ಏಲಕ್ಕಿ ಇದ್ದಾತ, ಎಂತಾ ಪರಿಮ್ಮಳ ಗೊಂತಿದ್ದೋ… ಬಾರೀ ಲಾಯ್ಕಿದ್ದು. ಐದಾರು ತಿಂಗಳಾದರುದೇ ಅದರ ಪರಿಮ್ಮಳ ರಜವುದೇ ಕಮ್ಮಿ ಆಯಿದಿಲ್ಲೆ. ಮುಗುಕ್ಕೋಂಡು ಬಂತು ಮಾತ್ರ. ಕೊದಿಶಿ ಇಳುಗಿದ ಪಾಕಕ್ಕೆ ಅಕ್ಕಿಹೊಡಿಯನ್ನುದೇ, ಏಲಕ್ಕಿ ಗುದ್ದಿದ್ದದನ್ನುದೇ ಸೇರುಸಿ ಬೆರುಸಿ ಉಂಡೆಕಟ್ಟುದು. ರಜೆಲಿ ಬಂದ ಪುಳ್ಯಕ್ಕೊ ಇದ್ದರೆ ಅವರತ್ತರೆ ಉಂಡೆಕಟ್ಟುಲೆ ಹೇಳುದು. ನೋಡಿಯೊಂಡಿರೆಕ್ಕಾವುತ್ತು ಮಾತ್ರ. ಹ್ಹೆ ಹ್ಹೆ… ಇಲ್ಲದ್ರೆ ಎಡಕ್ಕಿಲಿ ಒಂದೊಂದೇ ಉಂಡೆ ಪುಟ್ಟುಹೊಟ್ಟೆಸೇರುದು ಗೊಂತೇ ಆವುತ್ತಿಲ್ಲೆ. ಬಂದೋರಿಂಗೆ ಕೊಡ್ಳೆ ತಂಬಿಟ್ಟುಂಡೆ ತಯಾರಾತು. ಒಳುದ್ದದರ ಆ ಹಳೇ ಕೀಜಿ ಡಬ್ಬಿಲಿ ತೆಗದು ಮಡುಗಿರೆ ಚಾಯಕ್ಕೋ, ಹೊತ್ತೊಪ್ಪಾಗಾಣ ಕಾಪಿಗೋ ಆವುತ್ತು.
ಪಾಕ ಸರಿ ಆಗದ್ರೆ ಒಂದೋ ಉಂಡೆ ಕಟ್ಟುಲೆ ಬತ್ತಿಲ್ಲೆ, ಇಲ್ಲದ್ರೆ ಗಟ್ಟಿ ಆವುತ್ತು ಉಂಡೆ. ಸಾಮಾನ್ಯ ಗಟ್ಟಿದೆಲ್ಲ ತಿಂಬಲೆಡಿತ್ತು ಎನಗೆ. ಈಗಾಣ ಪುಳ್ಯಕ್ಕೊಗೆ ಮಾತ್ರ ಬಂಙ ಅಕ್ಕೋ ಏನೊ.
ಇದು ಒಂದು ತಿಂಗಳಿಂಗೊರೇಗೆ ಒಳಿತ್ತೂಳಿ ಹೇಳಿರೆ, “ಅದರಿಂದ ಮದಲೇ ಮುಗುದರೆ ಎಂತ ಮಾಡುತ್ಸು…” ಹೇಳ್ತ ಒಪ್ಪಣ್ಣ.

2 thoughts on “ತಂಬಿಟ್ಟುಂಡೆ

  1. ಈ ತಿಂಡಿ ಮಡೋ ವಿಧಾನ ಓದಿ ಬಯಲ್ಲಿ ನೀರು ಬಂತು… ಅದರೆ ಮಾಡಿ ಪಾಕ ಸರಿ ಅಗದಿದ್ದರೆ ಹಲ್ಲು ಹೋಗುವ ಸಾಧ್ಯತೆಯನ್ನೂ ಅರಿತುಕೋಂಡು ಸ್ವಲ್ಪ ದಿನ ಕಳೀಲಿ ಅಂತಾ ಅನ್ನಿಸುತ್ತೆ…. ಯಕಂದ್ರೆ ಬಂಡಾಡಿ ಅಜ್ಜಿಗೆ ಹಲ್ಲು ಇದೆಯೋ ಇಲ್ಲವೋ ಗೊತ್ತಿಲ್ಲ ಅಂತು ನಮ್ಮ ಹಲ್ಲು ಸ್ವಲ್ಪ ದಿನವದ್ರು ಉಳಿಬೇಕೆನ್ನೋದೇ ಆಸೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×