ತಂಪು ತಂಪು ತಂಬುಳಿಗೊ…

ಮೊನ್ನೆ ಕ್ರಿಸ್ಮಸ್ಸು ರಜೆಲಿ ತಾಳ್ತಜೆ ಶಾರದಕ್ಕನ ಪುಳ್ಳಿ ವೀಣ ಬಂದಿತ್ತಿದು.
ಬಂದ ಮರದಿನವೇ ಕೂಸಿಂಗೆ ಹೊಟ್ಟೆಬೇನೆ.! ಎಂತದೋ – ತಿಂದದು ಆಯಿದಿಲ್ಲೆ ಕಾಣ್ತು.  ಮಜ್ಜಿಗೆಗೆ ಇಂಗು ಹಾಕಿ ಕೊಟ್ಟೆ ರಜ. ಮತ್ತೆ ಮದ್ಯಾನಕ್ಕೆ ತಂಬುಳಿ ಮಾಡುವಾಳಿ ಕಂಡತ್ತು.
ಅಂಬಗಳೇ ಗ್ರೇಶಿದ್ದೆ, ಈ ತಂಬುಳಿಗಳ ಬಗ್ಗೆ ಕರೆಂಟಿನ ಪುಸ್ತಕಲ್ಲಿ ಬರೇಕೂಳಿ. ಬರೆತ್ತರೆ ಸುಮಾರಿದ್ದಪ್ಪ. ಒಂದರಿಯಂಗೆ ಎಲ್ಲ ನೆಂಪಾವುತ್ತಿಲ್ಲೆ. ಮತ್ತೆ ಎಲ್ಲ ಬರಕ್ಕೊಂಡು ಕೂದರೆ ಸುಮಾರು ಹೊತ್ತು ಬೇಕಕು. ತಂಬುಳಿ ಮಾಡ್ತ ಕ್ರಮ ಹೆಚ್ಚಾಗಿ ಒಂದೇ ಲೆಕ್ಕ ಅಲ್ದೋ…?
ವೀಣಂಗೆ ನೆಲ್ಲಿಸಟ್ಟು ತಂಬುಳಿ ಮಾಡಿದ್ದು. ನೆಲ್ಲಿಸಟ್ಟು ಮಾಡುದು ಹೆಂಗೇಳಿ ಗೊಂತಿದ್ದನ್ನೇ? ಬೇಕಪ್ಪಷ್ಟು ನೆಲ್ಲಿಕಾಯಿಗೆ ಒಂದು ಅಂದಾಜಿಂಗೆ ಉಪ್ಪು ಹಾಕಿ ಭರಣಿಲಿ ಮಡುಗುದು. ಒಂದು ವಾರ ಅಪ್ಪಗ ಅದು ಮೆಸ್ತಂಗೆ ಮೆಸ್ತಂಗೆ ಆವುತ್ತು. ಭರಣಿಂದ ತೆಗದು, ಮೆಲ್ಲಂಗೆ ಒಂದೊಂದನ್ನೆ ಬಿಡ್ಸಿ ಬಿತ್ತು ತೆಗದು ಕಡವಕಲ್ಲಿಂಗೆ ಹಾಕಿ ತಿರುಗುಸುದು. ಅಲ್ಲದ್ರೆ ಪುರುಂಚಿರೂ ಅಕ್ಕು. ಮದಲೆಲ್ಲ ಪುರುಂಚಿಯೊಂಡಿತ್ತಿದೆ. ಈಗ ಕೈಬೆರಳ ಗೆಂಟುಗೊ ಪೂರ ಬೇನೆ ಇದ. ಹಾಂಗೆ ಬಂಙ ಆವುತ್ತು. ಕಡದ್ದದರ ಬಾಳೆಲೆಲಿ ಒಡೆಯ ಹಾಂಗೆ ಪಲ್ಲೆ ಪಲ್ಲೆ ಹತ್ಸಿ ಒಣಗ್ಸುದು. ಒಳ್ಳೆ ಬೆಶಿಲಿದ್ದರೆ ಎರಡು ದಿನಲ್ಲಿ ಒಣಗುತ್ತು. ಭರಣಿಲಿ ಹಾಕಿಮಡುಗುವಷ್ಟೆಲ್ಲ ವೆವಧಾನ ಇಲ್ಲದ್ರೆ ಒಂದು ಪಾತ್ರಲ್ಲಿ ನೀರಾಕಿ ಬೇಶಿ, ತಣುದ ಮತ್ತೆ ಬಿತ್ತೆಲ್ಲ ತೆಗದು ಉಪ್ಪಾಕಿ ಕಡದು ಮಾಡ್ಲೂ ಆವುತ್ತು.
ಹೀಂಗೆ ಮಾಡಿದ ನೆಲ್ಲಿಸಟ್ಟು ಎರಡು-ಮೂರು ವರ್ಷಕ್ಕೆಲ್ಲ ಬತ್ತು. ಓ ಆ ಗುಡ್ಡೆಲಿಪ್ಪ ನೆಲ್ಲಿಕಾಯಿ ಮರಲ್ಲಿ ಎರಡು ವರ್ಷಕ್ಕೊಂದರಿ ನೆಲ್ಲಿಕಾಯಿ ಅಪ್ಪದಿದ. ಆದ ವರ್ಷ ನೆಲ್ಲಿಸಟ್ಟು ಮಾಡಿ ಮಡುಗುದು. ಇನ್ನೊಂದರಿ ಅಪ್ಪಲ್ಲಿಯೊರೇಂಗೆ ಇದು ಇರ್ತು. ಹೊಟ್ಟೇಬೇನಗೆಲ್ಲ ಭಾರೀ ಒಳ್ಳೆದಾವುತ್ತು. ತಂಬುಳಿ ಅಲ್ಲದ್ರೆ, ಒಂದರ್ದ ಪಲ್ಲೆಯ ಮಜ್ಜಿಗೆಲಿ ಕರಡುಸಿ ಕುಡುದರೂ ಲಾಯಿಕಾವುತ್ತು.
ತಂಬುಳಿ ಮಾಡ್ಲೆ ನೆಲ್ಲಿಸಟ್ಟಿನ ಒಂದು ಪಲ್ಲೆಯ ಗಿಣ್ಣಾಲಿಲಿ ನೀರಾಕಿ ಬೊದುಲುಸೆಕ್ಕು. ಒಂದು ಮುಷ್ಟಿ ಕಾಯಿ, ಒಂದು ಪಲ್ಲೆ, ಕಾರ ಆಯೆಕಾರೆ ಹಸಿಮೆಣಸು, ರುಚಿಗೆ ರಜ ಬೆಲ್ಲ(ಹಾಕದ್ರೂ ಅಕ್ಕು) ಎಲ್ಲ ಒಟ್ಟಿಂಗೆ ಹಾಕಿ ಕಡವದು. ಕಡದಿಕ್ಕಿ ಕಲ್ಲು ತೊಳದ ನೀರಿನ ಎಲ್ಲ ಹಾಕಲಕ್ಕು, ತಂಬುಳಿ ಅಲ್ದೋ… ಮತ್ತೆ ಮಜ್ಜಿಗೆ ಸೇರ್ಸಿತ್ತು. ರುಚಿ ನೋಡಿಯೊಂಡು, ಬೇಕೂಳಿ ಕಂಡ್ರೆ ಉಪ್ಪು ಹಾಕುಲಕ್ಕು. ಇದಕ್ಕೊಂದು ಜೊಯಿಂಕ ಒಗ್ಗರಣೆ ಕೊಟ್ರೆ ತಂಬುಳಿ ಆತು.
ಈ ತಂಬುಳಿಗೊ ಎಲ್ಲ ಮಾಡ್ಲೆ ಬಾರೀ ಸುಲಾಬ. ಗಳಿಗ್ಗೆಲಿ ಆವುತ್ತು. ಹೀಂಗೆ ಕೆಲಾವು ತಂಬುಳಿಗೊ ಇದ್ದು, ನೆಂಪಾದಾಂಗೆ ಬರದ್ದೆ ನೋಡಿ:

ಕೊಡಿ ತಂಬುಳಿ: ಕೊಡಿ ಗೊಂತಿದ್ದಲ್ದ, ನೆಕ್ಕರಿಕಂದು. ಗುಡ್ಡೆಲೆಲ್ಲ ಎಷ್ಟುದೇ ಇರ್ತು. ಗೊಂತಿಲ್ಲದ್ರೆ ಬಂಡಾಡಿಗೆ ಬಂದಿಪ್ಪಗ ನೋಡ್ಳಕ್ಕು.  ಒಂದು ಮುಷ್ಟಿ ಕೊಡಿಯ ಲಾಯಿಕ ತೊಳದು, ಒಂದರ್ದ ಗ್ಲಾಸು ನೀರಿಲಿ ನಾಕು ಜೀರೆಕ್ಕಿಯುದೇ, ಸಣ್ಣ ತುಂಡು ಮೆಣಸುದೇ ಹಾಕಿ ಹಸಿಮಾಸುವಲ್ಲಿಯೊರೇಂಗೆ ಬೇಶೆಕ್ಕು. ದಣಿಯ ಹೊತ್ತು ಬೇಡ, ಒಂದು ಮೂರ್ನಾಕು ನಿಮಿಷ ಅಷ್ಟೆ. ಅದಕ್ಕೆ ಉಪ್ಪು, ಬೆಲ್ಲ, ಕಾಯಿ ಎಲ್ಲ ಹಾಕಿ ಕಡವದು. ಮತ್ತೆ ರಜ ಮಜ್ಜಿಗೆ ಹಾಕಿ ಕೊದಿಶಿತ್ತು. ಕೊದಿಶದ್ರೂ ಆವುತ್ತು. ಇರುಳಿಂಗೊರೇಂಗೆ ಒಳಿಯೆಕಾರೆ ಕೊದಿಶೆಕ್ಕು. ಇದೇ ರೀತಿಲಿ ಚೇರದ ಕೊಡಿಯ ತಂಬುಳಿದೇ ಮಾಡ್ಳಕ್ಕು.

ಉರಗೆ ತಂಬುಳಿ: ಇದು ಸಾಮಾನ್ಯ ಎಲ್ಲೊರಿಂಗೂ ಗೊಂತಿಪ್ಪದೇ. ಉದಿಯಪ್ಪಗ ಹಶುಹೊಟ್ಟಗೆ ಉರಗೆ ಸೊಪ್ಪು ತಿಂದರೆ ಬಾರೀ ಒಳ್ಳೆದಡ ಬುದ್ದಿಶಕ್ತಿಗೆ. ನಮ್ಮ ಒಪ್ಪಕ್ಕ ತಿಂದೊಂಡಿತ್ತು ಕಾಣುತ್ತು, ಹಾಂಗೆ ಬಾರೀ ಚುರ್ಕು ಕೂಸು.

ಪುಳ್ಯಕ್ಕೊ ಕೊಯಿದ ಉರಗೆಯ ತೊಳದ ಮತ್ತೆ..!

ಪುಳ್ಯಕ್ಕೊ ಕೊಯಿದ ಉರಗೆಯ ತೊಳದ ಮತ್ತೆ..!

ಒಂದ್ರಜ ಎಲೆಯ ಕೊಯಿದು, ತೊಳವದು. ಹೇಳಿದಾಂಗೆ ಒಂದು ಸಂಗತಿ, ಉರಗೆ ನೆರಳಿಲಿ ಬೆಳದ್ದದಾದರೆ ರಜ ಕೈಕ್ಕೆ ಇರ್ತು. ಬೆಶಿಲುಬಾಯಿಲಿ ಬೆಳದ್ದದು ಅಷ್ಟು ಕೈಕ್ಕೆ ಇರ್ತಿಲ್ಲೆ. ತೊಳದ ಎಲೆಗೆ ಕಾಯಿ, ಉಪ್ಪು, ಹಸಿಮೆಣಸು ಹಾಕಿ ಕಡವದು. ಮತ್ತೆ ಬೇಕಾದಷ್ಟು ಮಜ್ಜಿಗೆ ಹಾಕಿಯೊಂಡತ್ತು. ಇದರ್ನೆ ಗಟ್ಟಿಗೆ ಕಡದರೆ ಚಟ್ನಿ ಆವುತ್ತದ. ಇದೇ ವಿದಾನಲ್ಲಿ ನೆಲ್ಲಿಕಾಯಿ ತಂಬುಳಿ, ನೀರುಳ್ಳಿ ತಂಬುಳಿಯನ್ನೂ ಮಾಡ್ಳಕ್ಕು. ನೀರುಳ್ಳಿ ಲೆಕ್ಕಂದ ಹೆಚ್ಚು ಹಾಕಿರೆ ಮಕ್ಕೊಗೆ ಕಣ್ಣಿಲಿ ಮೂಗಿಲಿ ನೀರಿಳಿಗು ಉಂಬಗ, ಜಾಗ್ರತೆ ಆತೊ.

ಬೆಳ್ಳುಳ್ಳಿ ತಂಬುಳಿ: ಐದು-ಆರು ಎಸಳು ಬೆಳ್ಳುಳ್ಳಿಯ ಚೋಲಿ ತೆಗದು ತುಪ್ಪಲ್ಲಿ ಹೊರಿವದು. ಅದಕ್ಕೆ ಕಾಯಿ, ಉಪ್ಪು ಹಾಕಿ ಕಡದತ್ತು. ನೀರು ಮಾಡಿ ರಜ ಮಜ್ಜಿಗೆ ಸೇರುಸಿ ಒಗ್ಗರಣೆ ಕೊಟ್ರೆ ಆತು. ಬೆಳ್ಳುಳ್ಳಿ ತುಪ್ಪಲ್ಲಿ ಹೊರಿವಾಗ ನಾಕು ಹೆಚ್ಚು ಹೊರುದರೆ ಮಕ್ಕೊಗೆ ತಿಂಬಲೆ ಕೊಡ್ಳಕ್ಕು. ಮಕ್ಕೊಗೆಲ್ಲ ಅದರ ತಿಂಬದೂಳಿರೆ ಬಾರಿ ಕುಶಿ ಅಲ್ದೋ? ಅಲ್ಲದ್ದೆ ಅದರಿಂದ ಹುಳುಕುತ್ತುದು ಗುಣ ಆವುತ್ತಡ.

ಕೊಡದಾಸನ ಹೂಗಿನ ತಂಬುಳಿ: ಇದರ ಕಂಡುಗೊಂತಿದ್ದೋ? ಚಳಿಕಾಲಲ್ಲಿ ಹೂಗಪ್ಪದು. ”ಕೊಡಸಿಗೆ’ ಹೇಳ್ತವಡ ಕನ್ನಡಲ್ಲಿ, ಅಜ್ಜಕಾನ ರಾಮ ಹೇಳಿತ್ತಿದ ನೆಂಪು. ಎಳ್ಯಡ್ಕ ಶಾಂತಕ್ಕ ಕೊಡಗಸನ ಹೇಳುದು. ಒಂದೊಂದು ಕಡೆಲಿ ಒಂದೊಂದು ರೀತಿ ಹೇಳ್ತವು. ‘ಕುಟಜಾರಿಷ್ಟ’ ಹೇಳ್ರೆ ಇದರದ್ದೇ. ಬಂಡಾಡಿ ತೋಟಲ್ಲಿ ಇದ್ದು ಒಂದು ಸೆಸಿ. ಅದರ ಹೂಗಿನ ಕೊಯಿದು, ಒಂದು ಹಾಳೆಲಿ ಹಾಕಿ ಒಣಗ್ಸುದು. ಒಳ್ಳೆ ಮದ್ದಿನ ಗುಣ ಇದ್ದು ಇದರ್ಲಿ. ಅಜೀರ್ಣಕ್ಕೆ, ಹೊಟ್ಟೆಂದೋಪದಕ್ಕೆ ಎಲ್ಲ ಒಳ್ಳೆ ಮದ್ದಿದು. ಒಣಗುಸಿದ ಹೂಗಿನ ಒಂದು ರಜ ತುಪ್ಪಲ್ಲಿ ಹೊರಿವದು. ಇದರ ತುಪ್ಪ ಹಾಕಿದ ಅಶನಕ್ಕೆ ನುರುದು ಉಂಬಲೂ ಆವುತ್ತು. ಬೇಕಾರೆ ರಜ ಉಪ್ಪು ಹಾಕಿಗೊಂಡತ್ತು. ರುಚೀ ಆವುತ್ತು ಉಂಬಲೆ. ಇದರ ತಂಬುಳಿ ಮಾಡೆಕಾರೆ, ತುಪ್ಪಲ್ಲಿ ಹೊರುದ ಹೂಗಿಂಗೆ ಒಣಮೆಣಸು, ರಜ ಕಾಯಿ, ಸಣ್ಣತುಂಡು ಬೆಲ್ಲ, ಒಂಚೂರು ಉಪ್ಪು ಹಾಕಿ ಕಡದು ಮಜ್ಜಿಗೆ ಸೇರುಸುದು. ಮದ್ಯಾನಕ್ಕೆ ಉಂಡು ಮುಗಿಯದ್ದರೆ ಕೊದಿಶಿ ಮಡುಗಿರೆ ಇರುಳಿಂಗೂ ಆವುತ್ತು.

ಕಂಚಿಸಟ್ಟು ತಂಬುಳಿ: ಕಂಚಿಸಟ್ಟು ಗೊಂತಿದ್ದನ್ನೇ? ಕಂಚಿಹುಳಿಯ ನಾಕು ಬಾಗ ಮಾಡಿ ಉಪ್ಪಿಲಿ ಹಾಕಿ ಮಡುಗುದು. ಹುಳಿಉಪ್ಪಿನಕಾಯಿ ಹಾಕಿದ ಹಾಂಗೆಯೇ. ಇದು ಒಂದೆರಡು ವರ್ಷ ಕಳುದಪ್ಪಾಗ ಲಾಯಿಕಾವುತ್ತು. ಆಚೊರ್ಷದ ಕಂಚಿಸಟ್ಟು ಇದ್ದು ರಜ ಆ ಜೆಂಗಲ್ಲಿ. ಓ ಮೊನ್ನೆ ಚೂರಿಬೈಲು ದೀಪ ತೆಕ್ಕೊಂಡೋಯಿದು, ಅಂದು ರೂಪ ಬಂದಿಪ್ಪಗ ಇಲ್ಲಿ ಬಿಟ್ಟಿಕ್ಕಿ ಹೋದ ಹೋರ್ಲಿಕ್ಸು ಕುಪ್ಪಿಲಿ. ಕುಪ್ಪಿ ವಾಪಸು ಕೊಡೇಕೂಳಿದ್ದೆ, ಆ ರೂಪ ನೆಂಪಿಲಿ ಕೇಳದ್ದೆ ಇರ ಇದ. ಮತ್ತೆ ‘ಎನ್ನ ಕುಪ್ಪಿಯ ಅಜ್ಜಿ ನುಂಗಿತ್ತು’ ಹೇಳ್ರೆ ಕಷ್ಟ. ಹಾಂಗೆ ವಾಪಸು ಕೊಡುವಗ ಅಂಬಟೆ ಉಪ್ಪಿನಕಾಯಿ ಕೊಡುಗೋ ಏನೊ… ಅಂತೂ ಎಂತಾರು ಕೊಡದ್ದೆ ಇರಪ್ಪ, ಒಪ್ಪಣ್ಣ ಹೇಳಿದಾಂಗೆ. ಹ್ಞಾ ಆನು ತಂಬುಳಿ ಬಗ್ಗೆ ಹೇಳಿಯೊಂಡಿತ್ತೆ ಅಲ್ದೋ.. ಈ ಅಜ್ಜಿ ಬಾಯಿತೆಗದರೆ ಹಾಂಗೇ, ಒಂದಕ್ಕೊಂದು ಶುದ್ದಿಗೊ ಬತ್ತಾ ಇರ್ತು. ಅದಿರಳಿ, ತಂಬುಳಿ ಮಾಡ್ಲೆ ಹಳೇ ಕಂಚಿಸಟ್ಟು ಒಂದು ತುಂಡು ತೆಗದು, ಕಾಯಿಯೊಟ್ಟಿಂಗೆ ಸಣ್ಣ ತುಂಡು ಹಸಿಮೆಣಸು, ಬೆಲ್ಲ, ಉಪ್ಪು(ರಜಾ ಸಾಕು) ಹಾಕಿ ಕಡದು ಮಜ್ಜಿಗೆ ಸೇರುಸಿತ್ತು. ಇದುದೇ ಆರೋಗ್ಯಕ್ಕೆ ಒಳ್ಳೆದೇ.
ಕೊತ್ತಂಬರಿ ತಂಬುಳಿ: ತುಪ್ಪಲ್ಲಿ ಹೊರಿವದು(ಹಸಿಯುದೆ ಆವುತ್ತು). ಒಣಮೆಣಸು ಸಣ್ಣತುಂಡು, ಬೆಲ್ಲ, ಉಪ್ಪು ಎಲ್ಲ ಹಾಕಿ ಕಡದು ಮಜ್ಜಿಗೆ ಸೇರುಸುದು. ಹೀಂಗೆಯೇ ಜೀರೆಕ್ಕಿ ತಂಬುಳಿ, ಬೇನ್ಸೊಪ್ಪು ತಂಬುಳಿ ಎಲ್ಲ ಮಾಡ್ಲಕ್ಕು.
ಮತ್ತೆ ನಾಣಿಲ ಕೊಡಿ, ಪೇರಳೆ ಕೊಡಿ, ಬೀಜದ ಕೊಡಿ, ಮಾವಿನ ಕೊಡಿ, ಬೇಕಾರೆ ನಾಕು ಚೇರದ ಕೊಡಿ, ನೆಕ್ಕರಿಕನ ಕೊಡಿ ಎಲ್ಲ ಒಟ್ಟಿಂಗೆ ಹಾಕಿ ನಾಕು ಜೀರೆಕ್ಕಿಯೊಟ್ಟಿಂಗೆ ಕಡದು ತಂಬುಳಿ ಮಾಡಿ ಕೊದಿಶಿರೆ ಇನ್ನೊಂದು ತಂಬುಳಿ ಆತದ. ಇದು ಎಲ್ಲ ಒಟ್ಟಿಂಗೆ ಹಾಕಿ ಮಾಡ್ತ ಮಿಶ್ರತಂಬುಳಿ.
ಎಲಿಕೆಮಿಸೊಪ್ಪು ತಂಬುಳಿ, ತೊಂಡೆಸೊಪ್ಪು ತಂಬುಳಿ, ವಿಟಮಿನ್ ಸೊಪ್ಪು ತಂಬುಳಿ, ಬಸಳೆ ಸೊಪ್ಪು ತಂಬುಳಿ – ಇದೆಲ್ಲ ಆವುತ್ತು. ಇದರ ಎಲ್ಲ ಒಟ್ಟಿಂಗೆ ಹಾಕುದಲ್ಲ. ಒಂದೊಂದನ್ನೇ ಹೇಳಿದ್ದು ಆನು. ಕೊಡಿತಂಬುಳಿ ಮಾಡಿದ ಹಾಂಗೆಯೇ. ಆದರೆ ಇದರೆಲ್ಲ ಕೊದಿಶುದು ಬೇಡ. ಇದೆಲ್ಲವುದೇ ಒಂದೇ ಹೊತ್ತಂಗೆ ಅಪ್ಪಂತ ತಂಬುಳಿಗೊ.
ಇನ್ನೊಂದು ತಂಬುಳಿ ಇದ್ದು, ಆನೆಮುಂಗಿನ ಕೆತ್ತೆದು. ಇದೂ ಒಳ್ಳೆ ಮದ್ದಡ. ಎನ್ನ ಅಜ್ಜ ಹೇಳ್ಯೊಂಡಿದ್ದಿದವು. ಅದರ ಮೇಲಾಣ ಚೋಲಿ ಕೆರಸಿ, ತುಪ್ಪಲ್ಲಿ ಹೊರುದು ತಂಬುಳಿ ಮಾಡ್ತದು.
ಹ್ಞಾ ಶುಂಟಿ ತಂಬುಳಿ ಬಾಕಿ ಆತು. ಅದು ಗೊಂತಿದ್ದನ್ನೇ?

ಅದಾ ಎನಗೆ ನೆಂಪಾದಷ್ಟು ತಂಬುಳಿಗಳ ವಿವರುಸಿದೆ. ಇದರ ಓದಿಕ್ಕಿ ಏವದಾರು ಒಂದು ತಂಬುಳಿಯನ್ನಾರು ಮಾಡಿಕ್ಕಿ ಆತೊ..? ದಿನಾಗಳೂ ಒಂದೊಂದು ತಂಬುಳಿ ಮಾಡ್ರೆ ಬಾರೀ ಒಳ್ಳೆದು ಆರೋಗ್ಯಕ್ಕೆ. ರುಚಿಯೂ ಆವುತ್ತು ಉಂಬಲೆ, ಅಲ್ಲದೋ?

ಬಂಡಾಡಿ ಅಜ್ಜಿ

   

You may also like...

7 Responses

 1. TARANI says:

  bhaari layakiddu.. tampu tambuLiya haage mundiana saari bisi kashayada bagge baredare channagittu…. heege munduvarili nimma anubhavada adugeya guttu. yalla ajjiyandiru bandady ajjiya haage tamma anubhavavannu vandalla vandu reeti baredu tiLisidare, munde hasimaNe yEruva anEka janarige tumba sahayavaagabahudu allavE???

 2. ಆಚಕರೆ ಮಾಣಿ says:

  ಶೆಲಾ….. ಈ ಅಜ್ಜಿ ಎಲ್ಲಾ ಶುದ್ದಿಗಳನ್ನೋ ಒಂದರಿಯೇ ಹೇಳಿ ಮುಗುಶುತ್ತಾ ಹೇಳಿ ಎನಗೆ ಸಂಶಯ…(ನಂಬೂರಿ…. ಹೆ ಹೆ ಹೆ)

  • ಮಹೇಶ says:

   ಶುದ್ದಿ ಹೇಳ್ಯೊಂಡಿಪ್ಪಗ ಹೊತ್ತು ಹೋದ್ದು ಗೊಂತಾಯಿದಿಲ್ಲೆಡ.

  • ಬಂಡಾಡಿ ಅಜ್ಜಿ says:

   ಅಜ್ಜಿ ಪೋನಿಲಿ ಮಾತಾಡ್ತದು ದೊಡ್ಡ ಆವುತ್ತು, ಹೇಳಿದ್ದದನ್ನೇ ಹೇಳುತ್ತು, ಪರಂಚಿಯೊಂಡೇ ಇರ್ತು, ಮಾತಾಡಿ ಮುಗಿವಲೇ ಇಲ್ಲೆ…. ಅಜ್ಜಿಯಕ್ಕೊ ಮಾತಾಡಿರೆ ಹಾಂಗೇ ಅಲ್ದೋ ನಿಂಗೊಗೆಲ್ಲ…
   ಹ್ಮ್..ಪುಳ್ಯಕ್ಕೊ ಸಿಕ್ಕುದೇ ಅಪ್ರೂಪ. ಸಿಕ್ಕಿಪ್ಪಾಗ ಎಲ್ಲ ಶುದ್ದಿ ಹೇಳ್ಯೊಂಬದಿದ.

 3. ಅಜ್ಜಿಯ ತಂಬುಳಿ ಸುದ್ದಿ ಕೇಳಿ ಒಪ್ಪಣ್ಣನ ಬೈಲಿಲಿ ಎಲ್ಲರಿಂಗು ಕೊದಿ ಬತ್ತ ಇದ್ದು.. ಒಂದರಿ ಊಟಕ್ಕೆ ಕರೆವಲೆ ಆಗದಾ??..

  • ಬಂಡಾಡಿ ಅಜ್ಜಿ says:

   ಅಜ್ಜಿಯಲ್ಲಿಗೆ ಬಪ್ಪಲೆ ಇನ್ನು ಹೇಳಿಕೆ ಕೊಟ್ಟಾಯೆಕ್ಕೋ…? ಬರೆಕ್ಕೂಳಿ ಕಂಡಪ್ಪಾಗ ಬಂದು ಗಡದ್ದು ಉಂಡಿಕ್ಕಿ ಹೋಪದಪ್ಪ. ದಿನಕ್ಕೊಂದು ತಂಬುಳಿ ಅಂತೂ ತಪ್ಪುತ್ತಿಲ್ಲೆ. ಎಂತ..?

 4. chaithra says:

  Ajjiyakka heenge helidare eeganavakke antha tambuli ella madle edigavuthu heli tilittu… heenge hale kalada tindigala bagge helidare tumba olledu engogella.. maneli maadi, tindu, anubhava helulakku illi… Ajji.. kaytha irtheya..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *