ಉಬ್ಬು ರೊಟ್ಟಿ

ಉಬ್ಬು ರೊಟ್ಟಿ

ಬೇಕಪ್ಪ ಸಾಮಾನುಗೊ:

 • 2 ಕಪ್(ಕುಡ್ತೆ) ಕೊಯಿಶಕ್ಕಿ
 • 1/4 ಕಪ್(ಕುಡ್ತೆ) ಬೆಣ್ತಕ್ಕಿ
 • ರುಚಿಗೆ ತಕ್ಕಸ್ಟು ಉಪ್ಪು
 • 20 – 25 ಬಾಳೆ ಎಲೆ
 • ಮಣ್ಣಿನ ಓಡು

ಮಾಡುವ ಕ್ರಮ:

ಕೊಯಿಶಕ್ಕಿ, ಬೆಣ್ತಕ್ಕಿಯ ಒಂದು ಪಾತ್ರಲ್ಲಿ ಹಾಕಿ, ಉಗುರು ಬೆಶಿ ನೀರಿಲ್ಲಿ 8-10 ಘಂಟೆ ಬೊದುಳುಲೆ ಹಾಕೆಕ್ಕು.
ಅದರ ಲಾಯಿಕಲಿ 2-3 ಸರ್ತಿ ನೀರಿಲ್ಲಿ ತೊಳದು, ರೆಜ್ಜವೆ ನೀರು ಹಾಕಿ ಗಟ್ಟಿಗೆ, ನೊಂಪಿಂಗೆ ಕಡೆಯೆಕ್ಕು.
ಕಡವಗ ರುಚಿಗೆ ತಕ್ಕಷ್ಟು ಉಪ್ಪುದೆ ಹಾಕಿಗೊಳ್ಳೆಕ್ಕು.

ಬಾಳೆ ಕೀತುಗಳ ಲಾಯಿಕಲಿ ಉದ್ದಿ ಮಡಿಕ್ಕೊಳ್ಳೆಕ್ಕು.
ಒಂದು ಬಾಳೆ ಕೀತಿನ ತೆಗದು ಮರದ ಮಣೆಯ ಮೇಲೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮಡುಗಿ,
ನಡುಕೆ ದೊಡ್ಡ ನಿಂಬೆ ಹುಳಿ ಗಾತ್ರದ ಉಂಡೆ ಮಾಡಿ ಮಡುಗೆಕ್ಕು.

ಆ ಉಂಡೆಯ ಮೇಗಂದ ಇನ್ನೊಂದು ಬಾಳೆ ಕೀತಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಮುಚ್ಚೆಕ್ಕು.

ಅದರ ಮೇಗಂದ ಇನ್ನೊಂದು ಮಣೆಯ ಮಡುಗಿ, ಕೆಳಾಣ ಚಿತ್ರಲ್ಲಿ ತೊರ್ಸಿದಸ್ಟು ದಪ್ಪಕೆ, ನಡು ನಡುಕೆ ಒಟ್ಟೆ ಬೀಳದ್ದ ಹಾಂಗೆ,
ನಾಲ್ಕೂ ದಿಕ್ಕಂದಲೂ ಲಾಯಿಕ ಒತ್ತೆಕ್ಕು.

ಒಲೆಯ ಮೇಗೆ ಮಣ್ಣಿನ ಓಡಿನ ಮಡುಗಿ, ಬೆಶಿ ಆದ ಕೂಡ್ಲೆ, ರೊಟ್ಟಿಯ ಹಾಕಿ, ಕವುಂಚಿ,
ಮೊಗಚ್ಚಿ ಬೇಶಿ, ಎರಡು ಹೊಡೆಯಾಣ ಬಾಳೆ ಕೀತುದೆ ರೊಟ್ಟಿಂದ ಬಿಟ್ಟಪ್ಪಗ ತೆಗೆಯೆಕ್ಕು.

ರೊಟ್ಟಿಯ ಪುನ: ಕವುಂಚಿ, ಮೊಗಚ್ಚಿ ಗುಳ್ಳೆ ಬೀಳ್ಲೆ ಸುರುವಪ್ಪನ್ನಾರ ಬೇಶೆಕ್ಕು.

ರೊಟ್ಟಿಯ ಓಡಿಂದ ತೆಗದು, ಕೆಂಡಲ್ಲಿ ಅಥವಾ ಗ್ಯಾಸ್ಲ್ಲಿಉಬ್ಬುಸುಲೆ ಹಿಡಿಯೆಕ್ಕು.

ಬೆಶಿ ಬೆಶಿ ರೊಟ್ಟಿಗೆ ತುಪ್ಪ/ಬೆಣ್ಣೆ/ತೆಂಗಿನ ಎಣ್ಣೆ ಹಾಕಿ, ಬೆಂದಿಯ ಒಟ್ಟಿಂಗೆ ತಿಂಬಲೆ ಕೊಡಿ. ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 8-10 ರೊಟ್ಟಿ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

ಸೂಃ ಈ ರೊಟ್ಟಿಯ ಕೆಲವು ಜನ ಬಾಳೆ ಎಲೆಯ ಬದಲು, ಚೆಂಡಿ ಹರ್ಕಿಲ್ಲಿ ತಟ್ಟಿದೆ ಮಾಡ್ತವು.
ಕೆಲವು ಜನ ಕೊಯಿಶಕ್ಕಿ, ಬೆಣ್ತಕ್ಕಿಯ ಸಮ ಸಮ ಹಾಕಿ, ಹಿಟ್ಟಿನ ರೆಜ್ಜ ತೆಳ್ಳಂಗೆ ಕಡದು, ಉಂಡೆ ಮಾಡ್ಲೆ ಬಪ್ಪಷ್ಟು ಕಾಸಿದೆ ಮಾಡ್ತವು.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ವೇಣಿಯಕ್ಕ°

   

You may also like...

17 Responses

 1. ರಘು ಮುಳಿಯ says:

  ಧನ್ಯವಾದ ಅಕ್ಕೊ. ಸರಳ ಸಮಗ್ರ ವಿವರಣೆ. ರೊಟ್ಟಿ-ಬೆ೦ದಿ ರುಚೀ ಆಯಿದು.

 2. ಸಿಂಧೂ says:

  ಅಯ್ಯೋ! ಕಂಡಾಬಟ್ಟೆ ಕೊದಿ ಆವು್ತ. ಅದರ ಮೇಲೆ ಭಾರೀ ಪಟಂಗಳುದೇ… ಹಶು ಕೆರಳ್ಸುಲೆ.

  • thripura samyukta says:

   koshiakki hejje oludare adara gattige kadadu akki hodi bekashtu uppu bersire sulaballi ubbu rotti madlavuthu….

   • ಚೆನ್ನೈ ಭಾವ° says:

    ಅಕ್ಕೋ.. ನಿಂಗಳ ಕೆಣಿ ಪಷ್ಟಿದ್ದು. , ಹೇಳಿದಾಂಗೆ.. ಮತ್ತದಕ್ಕೆ ನಾಕು (ನೀರ್ಸೊಳೆ) ಸೇರ್ಸಿ ಗಟ್ಟಿಗೆ ಕಡದರೆ ಎಳ್ಪಲ್ಲಿ ಸೊಳೆ ರೊಟ್ಟಿ ಅಕ್ಕೋ?

 3. maya says:

  ಆಶೆ ಅವತು ವೇಣಿ ಅಕ್ಕ
  ನಾಳಂಗೆ ಮಾಡೆಕ್ಕು
  ಬಪ್ಪೋರೆಲ್ಲ ಬನ್ನಿ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *