Oppanna.com

ಉದ್ದಿನ ಗೊಜ್ಜಿ

ಬರದೋರು :   ಬಂಡಾಡಿ ಅಜ್ಜಿ    on   04/12/2013    3 ಒಪ್ಪಂಗೊ

ಮೊನ್ನೆ ಆಚಮನೆ ವೀಣನಲ್ಲಿಗೆ ಹೀಂಗೆ ಉದಾಕೆ ಹೋಗಿತ್ತಿದ್ದೆ ಅದ… ಅದು ಎನ್ನ ದೊಡ್ಡಪ್ಪನ ಮಗಳು ಇದ್ದನ್ನೆ, ಅದರ ಮಾವನೋರ ತಂಗೆಯ ಮೈದುನನ ಮಗಳು.. ಆಚಮನೆ ಸುರೇಶಂಗೆ ತಂದದು.. ಹಾಂಗೆ ದೂರಂದ ಸಂಬಂದವೂ ಆವುತ್ತು… ನೆರೆಕರೆಯೂ ಆವುತ್ತು.. ಅದಕ್ಕೊಂದು ಕುಂಞಿ ಮಗಳು ಇದ್ದು… ಉಮ್ಮಪ್ಪ ಅದರ ಹೆಸರು ಹೇಳುಲೆ ನವಗೆ ನಾಲಗೆ ತೊಳಚ್ಚುತ್ತಿಲ್ಲೆ.. ಇರಳಿ.. ಅದರ ಮಾತಾಡುಸಿದ ಹಾಂಗೂ ಆತು ಹೇಳಿಗೊಂಡು ಹೋದ್ದದು… ಈ ವೀಣ ಬಟ್ಳು ಹಿಡ್ಕೊಂಡು ಬಲಿ ಬತ್ತಯ್ಯ ಜಾಲು ಇಡೀಕ… ಎಂತ ಕತೆ ಹೇಳಿ ನೋಡಿರೆ, ಮಗಳಿಂಗೆ ಉಣ್ಣುಸುತ್ತ ಗವುಜಿ… ಮುಂದಂದ ಮಗಳು, ಹಿಂದಂದ ಅಬ್ಬೆ… ಈಗಾಣ ಮಕ್ಕಳತ್ತರೆ ಎಡಿಯಪ್ಪ… ಒಂದು ತುತ್ತು ಉಣ್ಣೆಸೆಕ್ಕಾರೆ ಮೂರು ಸುತ್ತು ಓಡೇಕು… ಈ ವೀಣ ಬಚ್ಚಿದ್ದು ಅಂತೆ ಅಲ್ಲ್ಲ ಹೇಳಿ ಈಗ ಗೊಂತಾತು.. ಮೊದಲಿಂಗೆ ಉಂಬಲೆ ತಿಂಬಲೆ ಇಲ್ಲದ್ದ ಕಾಲಲ್ಲಿ, ನಾಕು ತುತ್ತು ಅಶನ ಸಿಕ್ಕಿರೆ ಸಾಕು, ಒಂದು ಅವುಳುದೆ ಬಿಡದ್ದೆ ತಿಂಗು ಮಕ್ಕೊ.. ಈಗ ಹುಗಿವಷ್ಟಿದ್ದರುದೆ ನಾಕವುಳು ಹೊಟ್ಟೆಗೆ ಹೋಗ…
ಎಂತರ ಮಾಡುದು.. ಮಕ್ಕೊ ಮಾಂತ್ರ ಅಲ್ಲ.. ದೊಡ್ಡವುದೆ ಹಾಂಗೆ ಆಯಿದವು ಈಗ.. ದಿನಕ್ಕೊಂದು ನಮುನೆ ಅಡಿಗೆ ಆಯೇಕಡ.. “ಇದುದೆ ಅಷ್ಟೆ, ಇದರ ಅಪ್ಪನೂ ಅಷ್ಟೆ” ಹೇಳಿ ಪರಂಚಿತ್ತು ವೀಣ.. ಹೀಂಗೆ ಮಾತುಕತೆ ಎಲ್ಲ ಆಗಿಯಪ್ಪಗ ಎಂತಾರು ಹೊಸತ್ತು ನಮುನೆದು, ಸುಲಾಬಲ್ಲಿ ಅಪ್ಪ ಅಡಿಗೆ ಹೇಳಿಕೊಡಿ ಹೇಳಿತ್ತು… ಅಷ್ಟಪ್ಪಗ ಈ ಗೊಜ್ಜಿ ನೆಂಪಾತಿದ… ಅದಕ್ಕೆ ಹೇಳಿದೆ, ಈಗ ನಿಂಗೊಗೂ ಹೇಳುವ ಹೇಳಿ ಬಂದೆ…
uddina-gojjiಇದರ ಮಾಡುಲೆ ತುಂಬ ಸುಲಾಬ… ಉಂಬಲೂ ರುಚಿ ಆವುತ್ತು… ಒಂದು ರಜ ಉದ್ದಿನ ಹೊರುದು ಹೊಡಿ ಮಾಡಿ ಮಡಿಕ್ಕೊಂಡ್ರೆ ಆತು.. ಬೇಕಪ್ಪಗ ಗೊಜ್ಜಿ ಮಾಡಿಗೊಂಬಲಕ್ಕು… ಚಕ್ಕುಲಿಗೆ ಹೇಳಿ ಉದ್ದಿನ ಹೊಡಿ ಮಾಡಿತ್ತಿದೆ ಇದ… ಅದರಿಂದ ರಜ ಹೊಡಿ ತೆಗದು ಮಡುಗಿದ್ದದು.. ಕರೆಂಟಿನ ಮಿಸ್ಕಿಲಿ ಗಳಿಗ್ಗೆಲಿ ಹೊಡಿ ಆವುತ್ತು… ದಣಿಯ ಕಷ್ಟ ಎಂತೂ ಇಲ್ಲೆ…
ಹಾಂಗೆ ಉದ್ದಿನ ಹೊಡಿಯ ರಜ ಹುಳಿ ಮಜ್ಜಿಗೆಗೆ ಹಾಕಿ ಲಾಯಿಕಲ್ಲಿ ಕರಡುಸುದು ಉಪ್ಪು ಹಾಕಿ… ಬೇಕಾರೆ ಹಸಿಮೆಣಸುದೆ ಹಾಕಲಕ್ಕು… ಮತ್ತೆ ಒಗ್ಗರಣೆ ಮಡುಗುದು, ಉದ್ದಿನ ಬೇಳೆದೆ ಸಾಸಮೆದೆ… ಉದ್ದಿನ ಬೇಳೆ ಕೆಂಪಾಗಿ, ಸಾಸಮೆ ಹೊಟ್ಟುಲಪ್ಪಗ ಇಂಗು ಹಾಕಿ, ಬೇನ್ಸೊಪ್ಪು ಹಾಕಿ ಗೊಜ್ಜಿಗೆ ಜೊಯಿಂಕ ಮಾಡಿತ್ತು… ಇನ್ನುದೆ ಕಾರ ಆಯೇಕಾರೆ, ಒಗ್ಗರಣೆಗೆ ಮೆಣಸಿನ ಹೊಡಿ ಹಾಕುಲಕ್ಕು… ಒಳ್ಳೆ ಪರಿಮ್ಮಳದ ಈ ಗೊಜ್ಜಿ ಎಂತವರನ್ನುದೇ ಉಣ್ಣುಸದ್ದೆ ಬಿಡ.. ನಿಂಗಳೂ ಮಾಡಿ ನೋಡಿ ಆತೊ…

3 thoughts on “ಉದ್ದಿನ ಗೊಜ್ಜಿ

  1. ಓಹ್ಹ್ಹ್ ಇದು ಅಶನದೊಟ್ಟಿಗೆ ಬೆರುಸಿ ಉಂಡೆಮಾಡಿಯೂ ಮಕ್ಕಳ ಮಂಕಾಡುಸಲ್ಲಕ್ಕಪ್ಪೋ.
    ನೆಲ್ಲಿಂಡಿಯ ಕರುಡಿಸಿ ಬಿಟ್ಟಾಂಗೆ ಉದ್ದಿನೊಡಿಯ ಮಜ್ಜಿಗೆಲಿ ಕರುಡಿಸಿಬಿಟ್ಟರಾತು ಸಮ. ನಿಂಗೊ ಆ ಮದಾಲು ಉದ್ದಿನ ಬೇಳೆ ಹೊರುದು ಮಡಿಕ್ಕೊಂಡದೆಂತಕೆ ಹೇದು ಗೊಂತಾಯ್ದಿಲ್ಲೆನ್ನೆ. ಈ ಅಜ್ಜ್ಯಕ್ಕ ಎಂತೆಲ್ಲ ಮಾಡ್ತವು ಹೇದು ಒಂದೂ ಗೊಂತಾವ್ತಿಲ್ಲೆಪ್ಪ.
    ಉದ್ದಿನಹೊಡಿ ಮಾಡಿ ಮಡಿಗಿದದು ಇದ್ದು. ನಾಳೆ ತೆಳ್ಳವಿಂಗೆ ಇದೇ ಚಟ್ನಿ ನವಗಂಬಗ.

    1. ಏ°.. ಅದೂ… ಚಕ್ಕುಲಿ ಮಾಡುಲೆ ಹೇಳಿಗೊಂಡು ಅಂದು ಉದ್ದಿನ ಹೊರುದು ಹೊಡಿ ಮಾಡಿತ್ತಿದ್ದಲ್ದೊ.. ಕೋಳ್ಯೂರಕ್ಕನ ಮಗನೂ ಸೊಸೆಯೂ ಸಮ್ಮಾನಕ್ಕೆ ಬಂದಿತ್ತಿದ್ದವದ.. ಆವುಗ ಮಾಡಿದ್ದದು.. ಆ ಸರ್ತಿಲಿ ಮಾಂತ್ರ ಚಕ್ಕುಲಿ ಬಾರಿ ಮೆದು ಆಗಿತ್ತು… ಎನಗೂ ಬೊದುಲುಸದ್ದೆ ತಿಂಬಲೆಡಿಗಾಗಿತ್ತು..
      ಹಾಂಗೆ ಅಷ್ಟಪ್ಪಗ ಮಾಡಿದ ಉದ್ದಿನೊಡಿ.. ಗೊಜ್ಜಿಗೆ ಬೇಕಾವುತ್ತು ಹೇಳಿ ತೆಗದು ಮಡುಗಿದ್ದು ರೆಜ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×