ಉಂಡ್ಲಕಾಳು

August 7, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಉಂಡ್ಲಕಾಳು

ಬೇಕಪ್ಪ ಸಾಮಾನುಗೊ:

 • 10-12 ಕಪ್(ಕುಡ್ತೆ) ನೀರು ಸೊಳೆ
 • 2 ಕಪ್(ಕುಡ್ತೆ) ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು (ಸೋನಾ ಮಸೂರಿ ಒಳ್ಳೆದು)
 • 3 ಕಪ್(ಕುಡ್ತೆ) ಕಾಯಿ ತುರಿ
 • 1 ಕೊಪ್ಪರ ಕಾಯಿ
 • ಎಣ್ಣೆ – ಹೊರಿವಲೆ

ಮಾಡುವ ಕ್ರಮ:

ನೀರು ಸೊಳೆಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳದು, ಲಾಯಿಕಲಿ ಹಿಂಡಿ ಮಡುಗಿ.
(ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.)

ಕೊಪ್ಪರ ಕಾಯಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ತುಂಡು ಮಾಡಿ.

ಹಿಂಡಿ ಮಡುಗಿದ ನೀರು ಸೊಳೆಯನ್ನೂ, ಕಾಯಿ ತುರಿಯನ್ನೂ ನೊಂಪಿಂಗೆ ರೆಜ್ಜವೆ ನೀರು ಹಾಕಿ ಗಟ್ಟಿಗೆ ಕಡೆರಿ.
ಇದಕ್ಕೆ ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು ಹಾಕಿ ಲಾಯಿಕಲಿ ತೊಳಸಿ. ಹಿಟ್ಟು ಉಂಡೆ ಮಾಡ್ಲೆ ಬಪ್ಪಸ್ಟು ಗಟ್ಟಿ ಬೇಕು.
ಕೊಪ್ಪರ ಕಾಯಿಯ ಹಿಟ್ಟಿಂಗೆ ಹಾಕಿ ಬೆರುಸಿ ಅಥವಾ ಉಂಡೆ ಮಾಡುವಗ ಒಂದೊಂದೆ ಹೋಳಿನ ನಡುಕೆ ಮಡುಗಿ ಉಂಡೆ ಮಾಡಿ.

ಹಿಟ್ಟಿನ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣ ದ್ರಾಕ್ಷೆಯಸ್ಟು ದೊಡ್ಡ ಉಂಡೆ ಮಾಡಿ.

ಎಣ್ಣೆಯ ಒಂದು ಬಾಣಲೆಲಿ ಮಡುಗಿ ಬೆಶಿ ಮಾಡೆಕ್ಕು.
ಆದು ಲಾಯಿಕಲಿ ಬೆಶಿ ಆದಪ್ಪಗ ಅದಕ್ಕೆ ಉಂಡೆ ಮಾಡಿ ಮಡುಗಿದ ಉಂಡ್ಲಕಾಳಿನ ಹಾಕಿ ಚಿನ್ನದ ಬಣ್ಣ ಬಪ್ಪನ್ನಾರ ಹೊರುದು ತೆಗೆರಿ.

ತಣುದ ಮೇಲೆ ಒಂದು ಕರಡಿಗೆಲಿ ಹಾಕಿ ಮಡುಗಿ ಚಾ,ಕಾಫಿ ಒಟ್ಟಿಂಗೆ ತಿಂಬಲೆ ಕೊಡಿ.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. ಬೊಳುಂಬು ಮಾವ°

  ಉಂಡ್ಳಕಾಳಿನ ತಯಾರಿಗೆ ಬೇಕಾದ ಸಾಮಾನುಗಳ ಸರಿಯಾದ ನಿಷ್ಪತ್ತಿ ಇಂದು ಗೊಂತಾತು. ಫೊಟೊಲ್ಲಿ ಹಸಿ ಉಂಡ್ಳಕಾಳಿನ ಡಿಸೈನ್ ಬಾರಿ ಲಾಯಕಾಯಿದು. ಉಂಡ್ಳಕಾಳುದೆ ರುಚೀ ಆದಿಕ್ಕು. ಧನ್ಯವಾದಂಗೊ ವೇಣಿಯಕ್ಕಾ.

  [Reply]

  VA:F [1.9.22_1171]
  Rating: +1 (from 1 vote)
 2. ಸುಮನ ಭಟ್ ಸಂಕಹಿತ್ಲು.

  ತಿಂಬಲೆ ರೆಡೀ ಆದ ಅಖೇರಿಯ ಫೋಟೋ ನೋಡುವಗಳೆ ಎನ್ನ ಪ್ರೀತಿಯ ಉಂಡ್ಳಕಾಳಿನ ಪರಿಮಳದೆ, ಆಶೆ ಆಗಿ ಬಾಯಿಲಿ ನೀರುದೆ ಎಲ್ಲ ಬಂತು.
  ಬೇಶುಲೆ ರೆಡೀ ಮಾಡಿದ ಹಸಿ ಉಂಡ್ಳಹಕಾಳು ನೋಡಿ, ಸಣ್ಣ ಇಪ್ಪಗ ಎಂಗೊ ಹಾಂಗೆ ಚಂದಕ್ಕೆ ಮಡಿಗಿದ್ದು ನೆಂಪಾತು.
  ಬಾಕಿ ಒಳುದ ಫೋಟೋ ನೋಡುವಗ ಅದರ ತಯಾರಿ ಮಾಡ್ಲೆ ಅಂದು ಎನ್ನ ಅಮ್ಮ, ಅಜ್ಜಿ ಮಾಡಿದ್ದ ಕೆಲ್ಸ ಎಲ್ಲ ನೆಂಪಾತು.
  ಒಂದು ಕರಡಿಗೆ ಇಲ್ಲಿಗೆ ರವಾನಿಸಿ….

  [Reply]

  ಸುಮನ ಭಟ್ ಸಂಕಹಿತ್ಲು. Reply:

  ಖಾಲಿ ಕರಡಿಗೆ ಅಲ್ಲ ಇನ್ನು…
  ಅರಾದರು ಹಾಂಗೆ ಕೇಳುವ ಮೊದಲೆ ಆನು ಹೇಳಿಕುತ್ತೆ.
  ಉಂಡ್ಳಕಾಳು ತಿಂಬಲೆ ರೆಡೀ ಆದ್ದು ಕರಡಿಗೆ ತುಂಬಾ ಬೇಕು ಹೇಳಿದ್ದು…

  [Reply]

  ಪೆಂಗಣ್ಣ° Reply:

  ಯೇ ಸುಮ್ಮನತ್ತೆ
  ಕರಡಿಗೆ ಕೊಟ್ಟರೆ ನಮ್ಮ ಬಿಡುಗೋ?

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ°

  [ಚಾ,ಕಾಫಿ ಒಟ್ಟಿಂಗೆ ತಿಂಬಲೆ ಕೊಡಿ]… ಅಪ್ಪು ಅಪ್ಪು….ಕೊಡಿ ಃ))

  [Reply]

  ಬೋಸ ಬಾವ

  ಬೋಸ ಬಾವ Reply:

  ಅಪ್ಪಪ್ಪು ಕೊಡಿ… ರಜಾ ಬರ್ತ್ತಿ ಮಾಡಿದ ದೊಡ್ಡ ಕರಡಿಗೆಲಿ ಕೊ೦ಡೋಪಲೆ ಕೊಟ್ರೂ ಆಗದ್ದೆ ಇಲ್ಲೆ..
  ಅಲ್ಲದೋ ಚೆನ್ನೈ ಭಾವ° .. ಏ 😉

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಕರಡಿಗೆ ತು೦ಬಾ ಕೊಟ್ಟು ಕಳುಗುಗು ಬೋಸ ಭಾವಾ, ಸುತ್ತಿಗೆ ಇದ್ದನ್ನೆ !

  [Reply]

  ಪೆಂಗಣ್ಣ° Reply:

  ಮಾವ
  ಬೋಚ ಸುತ್ತಿಗೆಲಿ ಗುದ್ದಿಯೆ ಬಾಯಿಗೆ ಹಾಕುದು.. ಇಲ್ಲದ್ರೆ ಉಳುದ ಎರಡು ಹಲ್ಲೂ ಹೋಕಿದಾ..

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  “ಕರಡಿಗೆ ಅತ್ತೆ – ಉಂಡ್ಳಕಾಳು ಇತ್ತೆ ” ಮಾಡಿಕ್ಕುವೋ° ಪೆಂಗಣ್ಣ ಭಾವ

  ಪುಟ್ಟಬಾವ°

  ಪುಟ್ಟಭಾವ ಹಾಲುಮಜಲು Reply:

  ಹ್ಹ! ಹ್ಹ! ಹ್ಹ!,,ಇದು ಪಷ್ಟಾಯ್ದು ಬಾವಾ!!!

  VA:F [1.9.22_1171]
  Rating: 0 (from 0 votes)
  ಬೋಸ ಬಾವ

  ಬೋಸ ಬಾವ Reply:

  ಏ ಭಾವ.. ಇದಾ.. ಆನು- ನೆಗೆ ಮಾಣಿ.. 😛

  ಉಂಡ್ಳಕಾಳಿನ ಹುಳಿ-ಹುಳಿ ಮಜ್ಜಿಗೆಲಿ ರಜಾ ಹೊತ್ತು ಮಡುಗಿ, ಬೊದುಲಿದ ಮೇಗೆ ತಿ೦ಬದು..
  ಒಳ್ಳೆ ರುಚೀ ಆವುತ್ತು.. 😉

  VN:F [1.9.22_1171]
  Rating: +1 (from 1 vote)
 4. ಮುಳಿಯ ಭಾವ
  ರಘು ಮುಳಿಯ

  ಸಚಿತ್ರ ವಿವರ ನೋಡಿ ಕೊಶಿ ಆತು.ಧನ್ಯವಾದ ಅಕ್ಕ೦ಗೆ.

  [Reply]

  VA:F [1.9.22_1171]
  Rating: 0 (from 0 votes)
 5. ಹರೀಶ್ ಕೇವಳ

  ವಾವ್ಹ್…

  [Reply]

  VA:F [1.9.22_1171]
  Rating: 0 (from 0 votes)
 6. jayaram mambady

  @ ಚೆನ್ನೈ ಬಾವ, ಉ೦ಡೂ ಹೋದ ಕೊ೦ಡೂ ಹೋದ!

  [Reply]

  VA:F [1.9.22_1171]
  Rating: +1 (from 1 vote)
 7. ದೀಪಿಕಾ
  ದೀಪಿಕಾ

  ಆಹಾ!! ನೋಡುವಗ ತಿನ್ನಕ್ಕು ಹೇಳಿ ಆವ್ತು..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಕೆದೂರು ಡಾಕ್ಟ್ರುಬಾವ°ಬೊಳುಂಬು ಮಾವ°ಮುಳಿಯ ಭಾವನೀರ್ಕಜೆ ಮಹೇಶಶಾಂತತ್ತೆಸಂಪಾದಕ°ಎರುಂಬು ಅಪ್ಪಚ್ಚಿಶೇಡಿಗುಮ್ಮೆ ಪುಳ್ಳಿವೇಣೂರಣ್ಣಜಯಶ್ರೀ ನೀರಮೂಲೆಸುವರ್ಣಿನೀ ಕೊಣಲೆವಾಣಿ ಚಿಕ್ಕಮ್ಮವಸಂತರಾಜ್ ಹಳೆಮನೆಡಾಗುಟ್ರಕ್ಕ°ದೇವಸ್ಯ ಮಾಣಿಬೋಸ ಬಾವಯೇನಂಕೂಡ್ಳು ಅಣ್ಣವೆಂಕಟ್ ಕೋಟೂರುಶರ್ಮಪ್ಪಚ್ಚಿಅಕ್ಷರದಣ್ಣಕೊಳಚ್ಚಿಪ್ಪು ಬಾವಶೀಲಾಲಕ್ಷ್ಮೀ ಕಾಸರಗೋಡುದೊಡ್ಮನೆ ಭಾವಶುದ್ದಿಕ್ಕಾರ°ದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ