“ಅಥ ಯೋಗಾನುಶಾಸನಮ್”

July 25, 2010 ರ 12:24 pmಗೆ ನಮ್ಮ ಬರದ್ದು, ಇದುವರೆಗೆ 33 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲದಕ್ಕೂ ಯೋಗ ಇರೆಕ್ಕು..ಅಲ್ಲದಾ? ನಾವು ಎಂತಾರು ಮಾಡೆಕ್ಕು ಹೇಳಿ ಗ್ರೇಶಿರೆ ಅದು ಆವ್ತು ಹೇಳೀಯೇ ಎಂತ ಇಲ್ಲೆ..ಯೋಗ ಇದ್ದರೆ ಮಾಂತ್ರ ಎಲ್ಲವೂ ಅಪ್ಪದು :) ಈಗ ಆನು ಇಲ್ಲಿ ನಿಂಗಳೊಟ್ಟಿಂಗೆ ಇಪ್ಪದುದೇ ಒಂದು ಯೋಗ. ಇದೆಲ್ಲ ಅಪ್ಪು, ಹಾಂಗಾರೆ ನಾವು ತುಂಬಾ ಉಪಯೋಗ್ಸುವ “ಯೋಗ”, ಈ ಶಬ್ದ ಎಂತರ? ಇದರ ಅರ್ಥ, ವ್ಯಾಪ್ತಿ ಎಂತರ? ಇಂದು ಯೋಗದ ಬಗ್ಗೆ ರಜ್ಜ ಹೇಳುಂವ ಹೇಳಿ ಆಲೋಚನೆ ಮಾಡಿದೆ :).

ಯೋಗ” ಇದು ಸಂಸ್ಕೃತದ ’ಯುಜ್’ ಧಾತುವಿಂದ ಹುಟ್ಟಿದ್ದು.”ಯುಜ್ಯತೆ ಅನೇನ ಇತಿ ಯೋಗಃ” ಈ ಶಬ್ದದ ಅರ್ಥ ಕೂಡುಸುದು (unite/union) ಹೇಳಿ. ಯಾವುದರ ಕೂಡುಸುದು? ದೇಹವ-ಮನಸ್ಸಿನ ಕೂಡ್ಸುದು,ಜೀವಾತ್ಮವ ಪರಮಾತ್ಮನೊಟ್ಟಿಂಗೆ ಕೂಡುಸುದು… ಹೀಂಗೆ ಈ ಎರಡಕ್ಷರದ ಶಬ್ದದ ವ್ಯಾಪ್ತಿ ತುಂಬಾ ವಿಸ್ತಾರವಾದ್ದು. ನಮ್ಮ ಜೀವನಲ್ಲಿ ಇದರ ಪ್ರಾಮುಖ್ಯತೆ ಎಂತರ? ಎಂತಗೆ ಇದರ ನಿತ್ಯ ಜೀವನಲ್ಲಿ ಅಳವಡಿಸಿಗೊಳ್ಳೆಕು? ಯೋಗದ ಬಗ್ಗೆ ತುಂಬಾ ತಪ್ಪು ಕಲ್ಪನೆಗೊ ಇದ್ದು, ಯೋಗ ಹೇಳಿರೆ ವ್ಯಾಯಾಮ ಹೇಳಿ ಕೆಲವು ಜೆನ ಹೇಳ್ತವು, ಆದರೆ ಅದು ತಪ್ಪು. ಯೋಗ ವ್ಯಾಯಾಮ ಅಲ್ಲ !! ಇನ್ನು ಕೆಲವು ಜೆನ ಯೋಗ ಹೇಳಿರೆ ಯೋಗಾಸನ ಮತ್ತೆ ಪ್ರಾಣಾಯಾಮ ಮಾಂತ್ರ ಹೇಳಿಯೂ ಗ್ರೇಶುವೋರು ಇದ್ದವು, ಇದುದೇ ತಪ್ಪು, ಯೋಗಲ್ಲಿ ಆಸನ-ಪ್ರಾಣಾಯಾಮ ಅಲ್ಲದ್ದೆ ಬೇರೆ ಸುಮಾರು ವಿಷಯಂಗಳುದೇ ಇದ್ದು. ನಮ್ಮ ನಿತ್ಯ ಜೀವನಲ್ಲಿ ಆಸನ, ಪ್ರಾಣಾಯಾಮ  ಮಾಂತ್ರ ಮಾಡಿರೆ ಸಾಕು ಹೇಳಿ ಅಭಿಪ್ರಾಯ ಇದ್ದು, ಅದೂ ಒಂದು ರೀತಿಲಿ ತಪ್ಪೇ. ನಾವು ಅನುಸರ್ಸೆಕಾದ ಹಲವು ಉತ್ತಮ ವಿಷಯಂಗೊ ಯೋಗಲ್ಲಿ ಇದ್ದು.

ಯೋಗಲ್ಲಿ ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ರಾಜಯೋಗ,ಹಠಯೋಗ..ಹೀಂಗೆ ಬೇರೆ ಬೇರೆ ದಾರಿ ಇದ್ದು ..ಆದರೆ ಎಲ್ಲದರ ಗುರಿಯೂ ಒಂದೇ-ಪರಮಾತ್ಮನ ಕಾಂಬದು. ಆದರೆ ಈ ದಾರಿಗಳಲ್ಲಿ ನಾವು ಸಾಮಾನ್ಯವಾಗಿ ಎಲ್ಲವನ್ನೂ ರಜ್ಜ ರಜ್ಜ ಅಭ್ಯಾಸ ಮಾಡ್ತು. ಈ ಅಭ್ಯಾಸಂಗೊ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಕಾರಣ ಆವ್ತು. ಎಲ್ಲವನ್ನೂ ಪಾಲನೆ ಮಾಡುದು ಕಷ್ಟ ಸಾಧ್ಯ. ಆದರೆ…ರಾಜಯೋಗದ ಮೂರು ವಿಭಾಗಂಗಳ ಅಭ್ಯಾಸ ದೈಹಿಕವಾಗಿ ತುಂಬಾ ಸಹಾಯ ಮಾಡ್ತು (ಮಾನಸಿಕ/ಆಧ್ಯಾತ್ಮಿಕವಾಗಿಯೂ) -ಆಸನ, ಷಟ್ ಕ್ರಿಯಾ, ಪ್ರಾಣಾಯಾಮ.

ಇಂದು ಆಸನದ ಬಗ್ಗೆ ಸಣ್ಣಕ್ಕೆ ಬರೆತ್ತೆ ಆಗದಾ? ನಿಂಗೊಗೆ ಹೆಚ್ಚು ಮಾಹಿತಿ ಬೇಕಾರೆ ಕೇಳ್ಲಕ್ಕು :)

ಆಸನ: “ಸ್ಥಿರಂ ಸುಖಂ ಆಸನಂ” ಹೇಳಿ ಪತಂಜಲಿ ಮಹರ್ಷಿ ಹೇಳಿದ್ದವು. ಸ್ಥಿರವಾಗಿ ಒಂದೇ ಭಂಗಿಲಿ ಯಾವುದೇ ಬಙ ಇಲ್ಲದ್ದೆ ಇಪ್ಪದು. ತುಂಬಾ ಆಸನಂಗೊ ಇದ್ದು, ಹಾಂಗಾರೆ ಯಾವುದರ ಎಲ್ಲ ಮಾಡೆಕ್ಕು? ಸುರು ಮಾಡುವವ್ವು ತುಂಬಾ ಸರಳ ಆಸನಂಗಳ ಮಾಡೆಕ್ಕು. ನಿಧಾನಕ್ಕೆ ಕ್ಲಿಷ್ಟವಾದ ಆಸನಂಗಳ ಅಭ್ಯಾಸ ಮಾಡ್ಲಕ್ಕು. ಆಸನ ಮಾಡುವಗ ನೆನಪ್ಪಿರೆಕ್ಕಾದ ಮುಖ್ಯ ವಿಷಯ ಎಂತರ ಹೇಳಿರೆ ಉಸಿರಾಟದ ಬಗ್ಗೆ ಗಮನ, ವ್ಯಾಯಾಮ ಮಾಡಿದ ಹಾಂಗೆ ಒಟ್ರಾಸಿ ಮಾಡಿರೆ ಆಗ. ಉಸಿರಾಟವೂ ದೇಹದ ಚಲನೆಯೂ ಒಂದಕ್ಕೊಂದು ಪೂರಕ ಆಗಿರೆಕ್ಕು. ಇನ್ನು ಅಭ್ಯಾಸ ಮಾಡುವಗಳೂ ಅಷ್ಟೆ ನಿಧಾನಕ್ಕೆ ಮಾಡೆಕ್ಕು. ಇದು ಆಸನದ ವಿಶೇಷತೆ :) ಇದರಿಂದ ಅಪ್ಪ ಉಪಯೋಗಂಗೊ ಎಷ್ಟು ಹೇಳಿರೆ…ಬರವಲೆ ಜಾಗೆ ಸಾಲದಾ ಹೇಳಿ!! :) -ದೈಹಿಕ ಆರೋಗ್ಯವ ಕಾಪಾಡುತ್ತು, ಶರೀರದ ಕ್ರಿಯೆಗಳ (physiology) ಸರಿಯಾಗಿ ನಡೆವ ಹಾಂಗೆ ನೋಡೀಗೊಳ್ತು, ರಜ್ಜ ಹೆಚ್ಚು ಕಮ್ಮಿ ಇದ್ದದರ ಸರಿ ಮಾಡ್ತು. ಇಷ್ಟು ಮಾಂತ್ರ ಅಲ್ಲ, ಮನಸ್ಸಿನ ಮೇಲೂ ಪ್ರಭಾವ ಇದ್ದು :) ತನ್ಮೂಲಕ ನಮ್ಮ ಜೀವನದ ಎಲ್ಲಾ ಸ್ಥರಂಗಳಲ್ಲಿಯೂ ಒಳ್ಳೆಯ ಫಲಿತಾಂಶ ಸಿಕ್ಕುತ್ತು :)

ನಾವು ಸಾಮಾನ್ಯ ಮಾಡೆಕಾದ/ಮಾಡ್ಲಕ್ಕಾದ ಆಸನಂಗೊ –

ತಾಡಾಸನ,ಅರ್ಧಕಟಿ ಚಕ್ರಾಸನ,ಪಾದಹಸ್ತಾಸನ, ಅರ್ಧಚಕ್ರಾಸನ,ತ್ರಿಕೋನಾಸನ, ಪಾರ್ಶ್ವಕೋನಾಸನ, ಪರಿವೃತ್ತ ತ್ರಿಕೋನಾಸನ ಇತ್ಯಾದಿ. ಇದೆಲ್ಲವೂ ನಿಂದುಗೊಂಡು ಮಾಡುವ ಆಸನಂಗೊ.

ಇನ್ನು ಬೆನ್ನಿನಮೇಲೆ ಮನಿಕ್ಕೊಂಡು ಮಾಡುವ ಆಸನಂಗೊ-ಉತ್ತಿತ್ತಪಾದಾಸನ,ಪವನಮುಕ್ತಾಸನ,ಸರ್ವಾಂಗಾಸನ, ಹಲಾಸನ, ಸೇತುಬಂಧಾಸನ, ಶವಾಸನ(!!) ಇತ್ಯಾದಿ.

ಇನ್ನು ಹೊಟ್ಟೆಯ ಮೇಲೆ ಮನುಗಿ (ಕವುಂಚಿ ಮನುಗಿ) ಮಾಡುವ ಆಸನಂಗೊ-ಭುಜಂಗಾಸನ, ಧನುರಾಸನ, ಸರ್ಪಾಸನ, ಶಲಭಾಸನ, ಮಕರಾಸನ etc.

ಅಕೇರಿಗೆ ಕೂದುಗೊಂಡು ಮಾಡುವ ಆಸನಂಗೊ-ಪಶ್ಚಿಮೋತ್ತಾನಾಸನ,ವಕ್ರಾಸನ, ಅರ್ಧಮತ್ಸ್ಯೇಂದ್ರಾಸನ, ಗೋಮುಖಾಸನ, ಜಾನುಶೀರ್ಷಾಸನ, ವಜ್ರಾಸನ,ಉಷ್ಟ್ರಾಸನ,ಶಶಾಂಕಾಸನ  etc.

ಆಸನ ಮಾಡುವಗ ಯಾವಾಗಳೂ ನಿಂದುಗೊಂಡು(standing series) ಮಾಡುವ ಆಸನಂಗಳ ಮೊದಲು ಮಾಡೆಕ್ಕು, ಮತ್ತೆ ಮೊಗಚ್ಚಿ ಮನುಗಿ (supine series)ಮಾಡುವ ಆಸನಂಗೊ, next  ಕವುಂಚಿ ಮಾಡುವ (prone series)ಆಸನಂಗೊ. ಅಕೇರಿಗೆ ಕೂದುಗೊಂಡು (sitting series)ಮಾಡುವ ಆಸನಂಗೊ, ಇದೇ ಮಾದರಿಲಿ ಮಾಡೆಕು.

ಯೋಗಾಸನಂಗಳ ಮಾಡೆಕ್ಕಾರೆ  ತೆಕ್ಕೊಳ್ಳೆಕಾದ  ಮುಂಜಾಗೃತೆಗಳ ಹೇಳೆಕಾದ್ದು ಎನ್ನ ಕರ್ತವ್ಯ,

 • ಹೊಟ್ಟೆ ಖಾಲಿ ಇರೆಕ್ಕು. ಉದಿಯಪ್ಪಗ ಮಾಡುದು ಒಳ್ಳೆದು. ಹೊತ್ತೋಪಗ ಮಾಡ್ತರೆ ಆಹಾರ ತೆಕ್ಕೊಂಡು  2-3 ಗಂಟೆ ಹೊತ್ತು ಕಳುದಿರೆಕ್ಕು .
 • ಮಲ-ಮೂತ್ರ ವಿಸರ್ಜನೆ ಮಾಡಿರೆಕ್ಕು,ಮಿಂದಿಕ್ಕಿ ಮಾಡಿರೆ ಒಳ್ಳೆದು.
 • ಹೆಚ್ಚು ಗಾಳಿ, ಬೆಣಚ್ಚು ಇಪ್ಪ ಜಾಗೆಲಿ ಮಾಡೆಕು.
 • ಕ್ಲೀನ್ ಇಪ್ಪ ಜಾಗೆಲಿ ನೆಲದ ಮೇಲೆ ಒಂದು ಹಸೆ(ಹುಲ್ಲಿನ/ಒಲಿ)  ಅಥವಾ ಜಮಖಾನ ಹಾಕಿ ಅದರ ಮೇಲೆ ಮಾಡೆಕು, ಬರೀ ನೆಲಲ್ಲಿ ಮಾಡ್ಲಾಗ.
 • ಸಾಧ್ಯ ಆದರೆ ಆದಷ್ಟು ಕಮ್ಮಿ ವಸ್ತ್ರ(minimum clothing) ಹಾಕಿರೆ ಒಳ್ಳೆದು. ಇಲ್ಲದ್ದರೆ ಹೆಚ್ಚು ಟೈಟ್ ಇಲ್ಲದ್ದ ಹತ್ತಿಯ ವಸ್ತ್ರ ಹಾಕೆಕು.
 • ನಿಂಗೊಗೆ ಯಾವುದಾದರೂ ಆರೋಗ್ಯದ ಸಮಸ್ಯೆಗೊ ಇದ್ದರೆ, ಆ ಸಂದರ್ಭಲ್ಲಿ ಮಾಡ್ಲಾಗದ್ದ ಅಭ್ಯಾಸಂಗೊ ಇದ್ದರೆ ಅದರ ಮಾಡ್ಲಾಗ
 • ಮೊದಲೇ ಹೇಳಿದ ಹಾಂಗೆ ಉಸಿರಾಟದ ಮೇಲೆ ಗಮನ, ಮತ್ತೆ ನಿಧಾನಕ್ಕೆ ಅಭ್ಯಾಸ ಮಾಡೆಕ್ಕು.
 • ಗುರುವಿನ(yoga expert/doctor) ಮಾರ್ಗದರ್ಶನಲ್ಲಿಯೇ ಮಾಡೆಕು.

ಎಲ್ಲಾ ಆಸನಂಗಳ ಬಗ್ಗೆಯೂ ವಿವರಣೆ ಕೊಡುವ ಆಶೆ ಇದ್ದು ಎನಗೆ ಆದರೆ ಒಂದರಿಯೇ ಸಾಧ್ಯ ಇಲ್ಲೆನ್ನೆ !! ರಜ್ಜ ಸಮಯ ಪ್ರತೀವಾರ ಒಂದೊಂದು ಆಸನದ ಬಗ್ಗೆ ಅಥವಾ ಪ್ರಾಣಾಯಾಮ ಅಥವಾ ಕ್ರಿಯೆಯ ಬಗ್ಗೆ ಬರೆವಲಕ್ಕಾ ಹೇಳಿ ಗ್ರೇಶಿದ್ದೆ :) ಇದರಿಂದ ಎಲ್ಲೋರಿಂಗೂ ಉಪಕಾರ ಅಕ್ಕು ಹೇಳಿ ಎನ್ನ ಅಭಿಪ್ರಾಯ. ಆದರೆ ಗಮನಲ್ಲಿ ಮಡುಗೆಕಾದ ಅಂಶ ಎಂತ ಹೇಳಿರೆ..ದಯವಿಟ್ಟು ಆರುದೇ ಇಲ್ಲಿ ಬರದ್ದರ ಮಾಂತ್ರ ನೋಡಿ ಯಾವುದೇ ಅಭ್ಯಾಸವ ಮಾಡೆಡಿ, ಸರಿಯಾದ ಗುರುವಿನ(yoga expert/doctor) ಹತ್ತರೆಯೇ ಕಲ್ತು ಮಾಡೆಕು. ಇಲ್ಲಿ ಆನು ಬರೆವದು ಕೇವಲ ಮಾಹಿತಿ ಕೊಡ್ಲೆ ಮಾಂತ್ರ :).

“ಅಥ ಯೋಗಾನುಶಾಸನಮ್”, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 33 ಒಪ್ಪಂಗೊ

 1. Dr Pradeep
  pradeep Dr

  good. If you can give scientic explanation for each asana it will be good. if possible Indications and contraindication for Each asanasa

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ಯೋಗ ವೈಜ್ಞಾನಿಕ ಅಪ್ಪು, ಆದರೆ ಅದರ ಮಾಹಿತಿ ಎಲ್ಲರಿಂಗೂ ಇರೆಕ್ಕಾದ್ದು ಅಗತ್ಯ :) ಇನ್ನು ಮುಂದಾಣ ದಿನಂಗಳಲ್ಲಿ ಖಂಡಿತಾ ವಿವರಣೆ ಕೊಡ್ತೆ :)

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  are u Dr.Pradeep Narayan?

  [Reply]

  VN:F [1.9.22_1171]
  Rating: 0 (from 0 votes)
  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಡಾಗುಟ್ರ ಬಾವ . ನಿಂಗೊ ಈ ಭಾಷೆಲಿ ಬರೆದರೆ ಎಂಗೊಗೆ ಅರ್ಥ ಆವುತ್ತಿಲ್ಲೆ ಇದಾ.. ನಮ್ಮ ಭಾಷೆಯೆ ಚೆಂದ ಅಲ್ಲದೋ?

  [Reply]

  VN:F [1.9.22_1171]
  Rating: 0 (from 0 votes)
 2. Dr Pradeep
  pradeep Dr

  Appu, Ane Pradeep Narayana

  [Reply]

  VA:F [1.9.22_1171]
  Rating: 0 (from 0 votes)
 3. ಹಾಲುಮಜಲು ಮಾವ

  Modalinge Navu Patanjali Maharshiya nempu Madyolekkanne ?? (Yogena Chittasya Shloka Heli…………….)

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  :) ಖಂಡಿತಾ, ಪ್ರಾರ್ಥನೆ ಮಾಡದ್ದೆ ಅಭ್ಯಾಸ ಶುರು ಮಾಡ್ಲಿಲ್ಲೆ !!

  [Reply]

  VN:F [1.9.22_1171]
  Rating: 0 (from 0 votes)
 4. ಸುವರ್ಣಿನೀ ಕೊಣಲೆ
  Shrivathsa..

  very gud,
  can u explain in detail about it in your upcoming article

  [Reply]

  VN:F [1.9.22_1171]
  Rating: 0 (from 0 votes)
 5. ಬಟ್ಯ

  ಒಪ್ಪ ದಣಿಕ್ಕುಳು ಪುಲ್ಯ ಕಾಂಡೆ ಲಕ್ಕುದು ಓಡಿಕೊಂಡಿತ್ತಿದ್ದವು. ಯಾನ್ ಗುಡ್ಡೆಗೆ ಓಪಗ ನೋಡಿದ್ದು. ಅವುಲಾ ಈ ಯೋಗಾಶನಡೇ ಬರ್ಪುಂಡ?

  [Reply]

  ಪೆರ್ಲದಣ್ಣ

  ಪೆರ್ಲದಣ್ಣ Reply:

  ಅದು ಜಾಗಿಂಗ್ ಬಟ್ಯಾ. ಒಳ್ಳೆದಲ್ಲಡ, ಇಲ್ಲಿದ್ದು ನೋಡಿ: http://prajavaniepaper.com/pdf/2010/07/28/20100728a_010100006.jpg

  [Reply]

  VA:F [1.9.22_1171]
  Rating: 0 (from 0 votes)
  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಒಪ್ಪಣ್ಣ ಭಾವ ಅಷ್ಟು ಬೇಗ ಓಡುತ್ತೆಯೊ.. ಎತ್ಲಾಗಿಯೋ! ಪೆರ್ಲದಣ್ಣ ಹೇಳಿದ್ದಾದರೆ ಜಾಗ್ರತೆ..

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಯೇ, ಹಾಂಗೆಂತ ಇಲ್ಲೆಪ್ಪ… 😉

  ಇಂದು ಮಾಷ್ಟ್ರುಮಾವ° ಉದಿಯಪ್ಪಗಾಣ ಕೃಷ್ಣಬಸ್ಸಿಂಗೆ ಹೆರಟವು, ಪುತ್ತೂರಿಂಗೆ ಹೋಪೋರು.
  ಅಂಬೆರ್ಪಿಲಿ ಹೆರಡುವಗ ಅವರ ಎಲೆತೊಟ್ಟೆ ಮನೆಲೇ ಬಾಕಿ ಆಗಿತ್ತಡ!
  ಮಾಷ್ಟ್ರಮನೆ ಅತ್ತೆ ದಿನಿಗೆಳಿ ಹೇಳಿದವು, ’ಈಗ ಮಾರ್ಗದಕರೆಂಗೆ ಹೋದ್ದಷ್ಟೆ, ಬಸ್ಸುಬಪ್ಪಲಾತು, ಒಂದರಿ ಹೋಗಿ ಕೊಟ್ಟಿಕ್ಕಿ ಬಾ ಒಪ್ಪಣ್ಣೋ..’ ಹೇಳಿ! ಹಾಂಗೆ ಅದರ ಹಿಡ್ಕೊಂಡು ಓಡಿದ್ದು…!!

  ದಾರಿಲಿ ಬಟ್ಯ° ಸಿಕ್ಕಿತ್ತು, ಮಾತಾಡ್ಳಾಯಿದಿಲ್ಲೆ.
  ಹಾಂಗಾಗಿ ಆದ ಕತೆ ಇದು!

  ಪೆರ್ಲದಣ್ಣಂಗೆ ಬೆಂಗುಳೂರಿನ ಜೋಗಿಂಗು ಮಾಂತ್ರ ಅರಡಿಗಷ್ಟೆ ಇದಾ!
  ಅಜ್ಜಕಾನಬಾವಾ, ನೀ ಯೆಂತಕೆ ನಂಬುದು ಅದರ!, ಪೆರ್ಲದಣ್ಣಂಗೆ ರಜಾ ಲೊಟ್ಟೆ ಇದ್ದು,
  ಹಾಂ! 😉

  [Reply]

  ಬಟ್ಯ Reply:

  ಇನಿಲಾ ತೊಟ್ಟೆ ಬಾಕಿ ಆತಿತ್ತುಂಡಾ ಒಪ್ಪ ದಣಿಕುಲೆ? ಬಲಿಪುನೆ ತೂಯೆ, ಕೈಟ್ ತೊಟ್ಟೆ ಇತ್ತಿಜ್ಜಿ!
  (ತೊಟ್ಟೆ ಇತ್ತ್ಂಡ ಎಂಕ್ ತೋಜಾಂದೆ ಇಪ್ಪ?)

  ಒಪ್ಪಣ್ಣ

  ಒಪ್ಪಣ್ಣ Reply:

  ಯೇ ಬಟ್ಯಾ..
  ನಿನಗೆ ಉದಿಯಾದರೆ ಕಳ್ಳುಕುಡಿವದು ಒಂದೇ ಒಯಿವಾಟು!

  ಒಪ್ಪಣ್ಣಂಗೆ ಹಾಂಗಲ್ಲನ್ನೇ, ಸುಮಾರು ಇರ್ತು! ಎಲ್ಲ ಹೇಳಿಗೊಂಡು ಕೂದರೆ ಬೈಲಿಲಿ ಇಡೀ ಅದೇ ಶುದ್ದಿ ಬಕ್ಕು.!!
  ಇಂದು ಓಡಿದ್ದು ಮಾರ್ಗದ ಕರೆಗೆ ಅಲ್ಲ, ಟೇಂಕಿಲಿ ನೀರು ಸಮಲಿತ್ತಿದ್ದು, ಹಾಂಗೆ ಪಂಪುನಿಲ್ಲುಸಲೆ ಪಂಪಿನಕೊಟ್ಟಗೆಗೆ ಓಡಿದ್ದು, ಅಷ್ಟೆ.

  ಬಟ್ಯ Reply:

  ದಣಿಕುಲೆ ಇನಿ ಸೂಯರೆಣೆ ಇಜ್ಜಿ.. ಬಾತ್ತಿಜ್ಯಾರಾ?

  ಒಪ್ಪಕ್ಕ

  ಒಪ್ಪಕ್ಕ Reply:

  ಬಟ್ಯಂಗೆ ಎಂಗಳ ಭಾಷೆ ಬತ್ತಲ್ಲದ? ಮತ್ತೆಂತಕೆ ತುಳುವಿಲಿ ಮಾತಾಡುದು?

  VA:F [1.9.22_1171]
  Rating: 0 (from 0 votes)
 6. chikkamma

  oppanno avara bhasheli jagingu heludaikku allado…
  eegana kalada makko allada hange..
  ajjakana bava nambulude perladanna helulude
  anthu oppannana begaru bichhittu khanditha…

  [Reply]

  VA:F [1.9.22_1171]
  Rating: 0 (from 0 votes)
 7. ನೀರ್ಕಜೆ ಚಿಕ್ಕಮ್ಮ
  ನೀರ್ಕಜೆ ಚಿಕ್ಕಮ್ಮ

  ಭಾರೀ‌ ಒಳ್ಳೆದಾತು ಸು ಅಕ್ಕಾ ಈ ಲೇಖನ ಮಾಲೆ ಸುರು ಮಾಡಿದ್ದು, ಎನಗೆ ಈ ವಿಷಯಲ್ಲಿ ಭಾರೀ ಇನ್ತ್ರೆಷ್ಟು.

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  thank u ಚಿಕ್ಕಮ್ಮ :), ನಿಂಗೊಗೆ ಎಂತಾರು ಮಾಹಿತಿ ಬೇಕಾರೆ ಕೇಳ್ಲಕ್ಕು :) ಈ ಯೋಗವೇ ಹಾಂಗೆ ಓದುತ್ತ ಹೋದ ಹಾಂಗೇ ಆಸಕ್ತಿ ಹೆಚ್ಚಾವ್ತು :) ಅದರಲ್ಲಿ ಇಪ್ಪ ಪ್ರತಿಯೊಂದೂ ಅಂಶಂಗಳೂ ನಮ್ಮ ಜೀವನಲ್ಲಿ ಎಲ್ಲಾ ಕಾಲಲ್ಲಿಯೂ ಅನುಸರ್ಸುವಂಥದ್ದು, ಅನುಸರ್ಸೆಕಾದ್ದು, ಅಲ್ಲದಾ? ಎಲ್ಲವನ್ನೂ ಎಷ್ಟು ಚೆಂದಕ್ಕೆ ಶ್ಲೋಕಂಗಳಲ್ಲಿ ವಿವರ್ಸಿ ಹೇಳಿದ್ದವು..ಸಾವಿರಾರು ವರ್ಷಗಳ ಹಿಂದೆಯೇ!!! :) ನಾವೆಲ್ಲಾ ಕಲಿವದು ತುಂಬಾ ಇದ್ದು :)

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಚಿಕ್ಕಮ್ಮ ಈಗಲೇ ಕಲ್ತದ್ದು ಜಾಸ್ತಿ ಆಯಿದಡಾ .. ಮೊನ್ನೆ ನೆಗೆ ಬಾವಂಗೆ ಅಪ್ಪಚ್ಚಿ ಸಿಕ್ಕಿ ಹೇಳಿದ್ದಡಾ. ನವಗರಡಿಯಾ..!

  [Reply]

  VN:F [1.9.22_1171]
  Rating: 0 (from 0 votes)
  ನೀರ್ಕಜೆ ಚಿಕ್ಕಮ್ಮ

  ನೀರ್ಕಜೆ ಚಿಕ್ಕಮ್ಮ Reply:

  ಭಾರೀ ಉಪಕಾರ ಇದ್ದು ಮಾಂತ್ರ ಈ ಆಸನಂಗಳಂದ…. ಪೇಟೆಲ್ಲಿ ಕೂದು ಕೂದು ಹಶು ಆಗದ್ದಿಪ್ಪದಕ್ಕೆ, ಉದಾಸಿನ ಅಪ್ಪದಕ್ಕೆ, ಬೆನ್ನು ಬೇನೆ, ಸೊಂಟ ಬೇನೆ ಎಲ್ಲದಕ್ಕೂ ಭಾರಿ ಒಳ್ಳೇದು…. ನಾವೆಲ್ಲ ರಜಾ ಕಾವ, ಸುಕ್ಕ ಹೇಳುಗು ಎಂತೆಲ್ಲದಕ್ಕೆ ಎಂತವು ಹೇಳಿ….

  [Reply]

  VA:F [1.9.22_1171]
  Rating: 0 (from 0 votes)
 8. ಅಜ್ಜಕಾನ ಭಾವ

  ಸು ಅಕ್ಕಾ — ಹೇಳಿರೆ ಸುಕ್ಕಾ ವಾ.. ಮೊನ್ನೆ ಗಲ್ಫಿಂದ ಬಂದ ಕುಟ್ಟ ಎಳ್ಕೊಂಡು ಇತ್ತು..

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ನಿಂಗೊ ಸುಕ್ಕಾ ಹೇಳೂವಗ ಎನಗೆ ಚಿಕನ್ ಸುಕ್ಕಾ ನೆಂಪಾವ್ತು !! ಎಂಗಳ ಹತ್ತರಾಣ ಮನೆಲಿ ಶೆಟ್ರುಗೊ ಇಪ್ಪದು, ಅವರ ಮನೆಯ ಸಣ್ಣ ಕೂಸು ಯಾವಾಗ್ಲೂ ಹೇಳುಗು “ನಂಗೆ ಚಿಕನ್ ಸುಕ್ಕ ತುಂಬಾ ಇಷ್ಟ” ಹೇಳಿ!!

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಆ ಕೂಸಿನ ಅಜ್ಜಿಯ ಹತ್ತರೆ ಕೇಳಿರೆ ಆಜಾಯಿನೆ ಹೇಳುಗು.ಪುಳ್ಳಿ ಬೊಂಬಾಯಿಂದ ಬಂದದಾಗಿಕ್ಕು.. ಸುಕ್ಕ ತಿಮ್ಬವಕ್ಕೆ ಸೊಕ್ಕು ಜಾಸ್ತಿಯಡ .. ಅಂತೂ ಯೋಗಂದ ಸುಕ್ಕಕ್ಕೆ ಎತ್ತಿತ್ತು ಮಾತುಕತೆ ..ಪೆರ್ಲಕ್ಕೆ ಹೆರಟವ ಪುತ್ತೂರಿನ್ಗೆ ಎತ್ತಿದ ಹಾಂಗೆ ..

  [Reply]

  VA:F [1.9.22_1171]
  Rating: 0 (from 0 votes)
  ನೀರ್ಕಜೆ ಚಿಕ್ಕಮ್ಮ

  ನೀರ್ಕಜೆ ಚಿಕ್ಕಮ್ಮ Reply:

  ಸುಕ್ಕ ಹೇಳ್ಳುದೆ ಲಾಯಿಕ ಅವುತ್ತು. ಅಕ್ಕಂದು ಎಂತಾರು ಅಪೀಲಿದ್ದಾ ಹೇಳಿ ಗೊಂತಿಲ್ಲೆ :) 😉

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ಹೊಸ ಹೊಸ ಹೆಸರುಗೊ…..ಎನ್ನದು ಎಂತದೂ ಅಭ್ಯಂತರ ಇಲ್ಲೆಪ್ಪಾ…!ಎಂತಕ್ಕೂ ನೆಗೆಗಾರನ ಅಭಿಪ್ರಾಯ ಕೇಳುಂವ !!ಆಗದಾ?

  [Reply]

  ನೆಗೆಗಾರ°

  ನೆಗೆಗಾರ° Reply:

  ಹೊಸ ಹೆಸರು ಸಿಕ್ಕಿತ್ತು ಹೇಳ್ತ ಕೊಶಿಲಿ ಸುಕ್ಕಮ್ಮಾ..
  ಆನೆ ಮಡಗಿದ್ದು ಹೇಳಿ ಬೀಗಿತ್ತು ನೀರ್ಕಜೆ ಚಿಕ್ಕಮ್ಮಾ..

  ಪ್ರಾಸ ಲಾಯ್ಕಾವುತ್ತು 😉
  ಏ°?

  ಶ್ರೀಶಣ್ಣ

  ಶ್ರೀಶ. ಹೊಸಬೆಟ್ಟು Reply:

  [ಆನೆ ಮಡಗಿದ್ದು :)]
  ಆನೆ ಎಂತರ ಮಡಗಿದ್ದು :) :)

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ಆನೆ ಮೊಟ್ಟೆ ಮಡುಗಿದ್ದು !!!

  VN:F [1.9.22_1171]
  Rating: 0 (from 0 votes)
 9. ಆಚಕರೆ ಮಾಣಿ
  ಆಚಕರೆ ಮಾಣಿ

  ಯೋಗೇನ ಚಿತ್ತಸ್ಯ ಪದೇನ ವಾಚಾಂ
  ಮಲಂ ಶರೀರಸ್ಯಚ ವೈದ್ಯಕೇನಾ,
  ಯೋಪಾಕರೋತ್ತಂ ಪ್ರವರಂ ಮುನೀನಾಂ
  ಪತಂಜಲೀಂ ಪ್ರಾಂಜಲಿರಾನತೋಸ್ಮಿ.

  ಸರಿಯಾ???????
  ಆನು ಸಣ್ಣಾದಿಪ್ಪಗ ಹೊಳ್ಳ ಮಾಷ್ಟ್ರ ಅರದು ಮೆತ್ತಿದ್ದದು ತಲಗೆ.

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ಸರೀ ಇದ್ದು :) ಇದು ಪತಂಜಲಿ ಮಹರ್ಷಿಗೆ ಪ್ರಣಾಮ ಸಲ್ಲಿಸುದು , ಅಭ್ಯಾಸ ಶುರು ಮಾಡುವನ್ನ ಮೊದಲು :)

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆಸುಭಗವೆಂಕಟ್ ಕೋಟೂರುಪವನಜಮಾವಶ್ರೀಅಕ್ಕ°ಯೇನಂಕೂಡ್ಳು ಅಣ್ಣಕೇಜಿಮಾವ°ವಿಜಯತ್ತೆದೊಡ್ಡಭಾವಸಂಪಾದಕ°ಶುದ್ದಿಕ್ಕಾರ°ವೇಣಿಯಕ್ಕ°ಅಕ್ಷರದಣ್ಣಪುತ್ತೂರಿನ ಪುಟ್ಟಕ್ಕಬಟ್ಟಮಾವ°ವಸಂತರಾಜ್ ಹಳೆಮನೆದೊಡ್ಡಮಾವ°ನೀರ್ಕಜೆ ಮಹೇಶಡೈಮಂಡು ಭಾವಶೀಲಾಲಕ್ಷ್ಮೀ ಕಾಸರಗೋಡುದೊಡ್ಮನೆ ಭಾವಸರ್ಪಮಲೆ ಮಾವ°ಅನಿತಾ ನರೇಶ್, ಮಂಚಿಉಡುಪುಮೂಲೆ ಅಪ್ಪಚ್ಚಿಮಾಷ್ಟ್ರುಮಾವ°ಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ