ಅಸ್ತಮಾ [Asthma]

November 7, 2010 ರ 12:01 amಗೆ ನಮ್ಮ ಬರದ್ದು, ಇದುವರೆಗೆ 36 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಉಸಿರಾಟ ಎಷ್ಟು ಮುಖ್ಯ ಹೇಳುದು ನವಗೆಲ್ಲರಿಂಗೂ ಗೊಂತಿದ್ದು. ನಿಧಾನಕ್ಕೆ ಉಸಿರಾಡುದು ಎಷ್ಟು ಮುಖ್ಯ ಹೇಳುದನ್ನೂ ನಾವು ರಜ್ಜ ತಿಳ್ಕೊಂಡಿದು. ಉಸಿರಾಟದ ಬಗ್ಗೆ ನಾವು ಗಮನ ಕೊಡೆಕಾದ್ದು ಅಗತ್ಯವೇ, ಮೊನ್ನೆ ಆನು ಶ್ವಾಸಕೋಶದ ಬಗ್ಗೆ ಬರವಗ ಹೇಳಿದ್ದೆ, ನಾವು ಹುಟ್ಟುವಗ ಹೆಚ್ಚು ಕಮ್ಮಿ ಪಿಂಕ್ ಬಣ್ಣಲ್ಲಿಪ್ಪ ಈ ಅಂಗ, ನಾವು ಬೆಳದ ಹಾಂಗೇ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತು ಹೇಳಿ,ಇದು ನಮ್ಮಹಾಂಗಿದ್ದೋರ ಕಥೆ. ಅದಕ್ಕೆ ಕಾರಣ ನಾವು ಉಸಿರಾಟ ಮಾಡುವಗ ಒಳ ಹೋಪ [ಕಣ್ಣಿಂಗೆ ಕಾಣದ್ದ] ಕಲ್ಮಷಂಗೊ! ಇನ್ನು ಬೀಡಿ ಸಿಗರೇಟ್ ಎಳೆತ್ತವರ ಶ್ವಾಸಕೋಶ ಮಸಿ ತುಂಡಿನ ಹಾಂಗೆಯೇ ಇಕ್ಕಾ ಹೇಳಿ!

ಇಂದು ಉಸಿರಾಟಕ್ಕೆ ಸಂಬಂಧಪಟ್ಟ ಒಂದು ತೊಂದರೆಯ ಬಗ್ಗೆ ಬರೆತ್ತೆ. ಅಸ್ತಮ, ಸುಮಾರು ಜೆನಕ್ಕೆ ಈ ಸಮಸ್ಯೆ ಇರ್ತು. ಇನ್ನು ಕೆಲವು ಜೆನಕ್ಕೆ ಅಸ್ತಮಲ್ಲಿ ಇಪ್ಪ ಕೆಲವು ಲಕ್ಷಣಂಗೊ ಇಪ್ಪದನ್ನೇ ತಪ್ಪು ತಿಳುದು ಅಸ್ತಮ ಇದ್ದು ಗ್ರೇಶುತ್ತವು. ಹಾಂಗಾಗಿ ಇದರ ಬಗ್ಗೆ ರಜ್ಜ ತಿಳ್ಕೊಂಬ.

ಪ್ರಪಂಚಲ್ಲಿ ಮುನ್ನೂರು ಮಿಲಿಯ ಜೆನಂಗೊಕ್ಕೆ ಅಸ್ತಮ ಇದ್ದು ಹೇಳಿ ಒಂದು ಲೆಕ್ಕ ಹೇಳ್ತು ! ಅಧ್ಯಯನಂಗಳ ಪ್ರಕಾರ ಸಣ್ಣ ಮಕ್ಕಳಲ್ಲಿ ಅಸ್ತಮ ಹೆಚ್ಚು ಕಂಡುಬಪ್ಪದು ಮಾಣಿಯಂಗೊಕ್ಕೆ, ಕೂಸುಗೊ ಪ್ರೌಢದೆಶೆಗೆ (puberty) ಬಂದಪ್ಪಗ ಈ ಸಮಸ್ಯೆ ಹೆಚ್ಚು ಕಾಡುದು. ಈ ಸಮಸ್ಯೆಯ ಕಂಟ್ರೊಲಿಲ್ಲಿ ಮಡುಗದ್ದರೆ ಅಪ್ಪ ನಷ್ಟ ತುಂಬಾ.. ಶಾಲೆಗೆ ಹೋಪಲೆಡಿಯ, ಕೆಲಸಕ್ಕೆ ಹೋಪಲೆಡಿಯ,ಆಸ್ಪತ್ರೆಗೆ ಹೋಪ ಕಷ್ಟ,ಇನ್ನೂ ಕೆಲವರಿಂಗೆ ಇದರಿಂದಾಗಿ ಮೃತ್ಯುದೇ ಬತ್ತು.ಹಾಂಗಾಗಿ ಜಾಗೃತೆಂದ ಇದ್ದು, ಸಮಸ್ಯೆಗೆ ಪರಿಹಾರ ಕಂಡುಗೊಳ್ಳೆಕು.

ಸಾಮಾನ್ಯ ಲಕ್ಷಣಂಗೊ:

 • (wheezing) ಉಬ್ಬಸ
 • (cough) ಸೆಮ್ಮ
 • (chest tightness) ಎದೆಗೂಡಿನ ಒಳ ತುಂಬಿದ ಹಾಂಗಪ್ಪದು
 • (Breathlessness)ಸಣ್ಣ ಸಣ್ಣ ಶ್ವಾಸ ತೆಕ್ಕೊಂಬದು [ದೀರ್ಘ ಶ್ವಾಸ ತೆಕ್ಕೊಂಬಲೆ ಎಡಿಯದ್ದಿಪ್ಪದು]
 • ಹೆಚ್ಚಾಗಿ ಇರುಳು ಮತ್ತೆ ಉದೀಗಾಲಕ್ಕೆ ಈ ಲಕ್ಷಣಂಗೊ ಕಂಡುಬತ್ತು.

ಇದರ ತೀವ್ರತೆ ಅಸ್ತಮಾ ಯಾವ ಹಂತಲ್ಲಿ ಇದ್ದು ಹೇಳ್ತದರ ಅವಲಂಬಿಸಿರ್ತು.

ಕಾರಣಂಗೊ: ಇದಕ್ಕೆ ಸುಮಾರು ಕಾರಣಂಗೊ ಇದ್ದು

 • (genetic causes) ಅನುವಂಶೀಯತೆ
 • (Allergy) ಒಗ್ಗದಿರುವಿಕೆ – ಧೂಳು, ಪರಾಗರೇಣು, ಸಾಂಕಿದ ಪ್ರಾಣಿ, ಶೀತದ ವಸ್ತು, ಶೀತ ವಾತಾವರಣ, ಹೊಗೆ, ಇತ್ಯಾದಿ.
 • (childhood respiratory infections) ಸಣ್ಣಪ್ರಾಯಲ್ಲಿ ಆದ ಶ್ವಾಸಕೋಶದ ಸೋಂಕು

ಲಕ್ಷಣಂಗೊ ಕಾರಣಂಗೊ ಎಲ್ಲ ಗೊಂತಾತು…ಹಾಂಗಾರೆ ಈ ಅಸ್ತಮಾ ಹೇಳ್ತದು ಏಂತರ? ಇದರಲ್ಲಿ ನಿಜವಾಗಿಯೂ ಎಂತ ಆವ್ತು ನಮ್ಮ ದೇಹಲ್ಲಿ? ಇದರ ವಿವರ್ಸುಲೆ ಹೆರಟರೆ ತುಂಬ ದೊಡ್ಡ ಕಥೆ !! ಹಾಂಗಾಗಿ ಸಣ್ಣಕ್ಕೆ , ಆದರೆ ಅರ್ಥ ಅಪ್ಪಹಾಂಗೆ ಹೇಳುವ ಪ್ರಯತ್ನ ಮಾಡ್ತೆ.

ಮೇಲೆ ಹೇಳಿದ ಯಾವುದೇ ಕಾರಣಂದಾಗಿ  hypersensitivity/ಅತಿಸೂಕ್ಷ್ಮ ಸಂವೇದನಾಶೀಲತೆ ಉಂಟಾಗಿ ನಮ್ಮ ಶ್ವಾಸಕೋಶಲ್ಲಿ ಇಪ್ಪ ನಾಳಂಗಳ ಒಳಾಣ ದಾರಿ ಸಣ್ಣ ಅಪ್ಪದು,  ಹೆಚ್ಚಿಗೆ ಕಫ ಉತ್ಪತ್ತಿ ಅಪ್ಪದು. ಶ್ವಾಸನಾಳದ ದಾರಿ ಸಣ್ಣ ಅಪ್ಪ ಕಾರಣಂದಾಗಿ ಮತ್ತೆ ಅಲ್ಲಿ ಕಫ ತುಂಬುವ ಕಾರಣಂದಾಗಿ ಮೇಲೆ ಹೇಳಿದ ಎಲ್ಲ ಲಕ್ಷಣಮ್ಗೊ ಉಂಟಾವ್ತು. ಇದೊಂದು ದೀರ್ಘ ಕಾಲಿಕ ಶ್ವಾಸನಾಳದ ಉರಿ ಊತ ಮತ್ತು ಅತಿಸೂಕ್ಷ್ಮ ಸಂವೇದನಾಶೀಲತೆಯ  ಕಾರಣಂದಾಗಿ ಉಂಟಪ್ಪ ತೊಂದರೆ. [It is a chronic airway  inflammation and increased airway hyper-responsiveness leading to symptoms of wheeze, cough, chest tightness and dyspnea/breathlessness.]

ಕೆಲವು ಜೆನಂಗೊಕ್ಕೆ, ಸರಿಯಾಗಿ ಮದ್ದು ಮಾಡದ್ದೆ ಇದ್ದ ಸಂದರ್ಭಲ್ಲಿ, ಈ ಲಕ್ಷಣಂಗೊ ತುಂಬಾ ಪ್ರಾಣಾಂತಿಕ ಆಗಿರ್ತು. ಅಲ್ಲದ್ದರೆ, ಸಾಮಾನ್ಯವಾಗಿ ಈ ತೊಂದರೆಗೊ ಅಸ್ತಮ ಅಟಾಕ್ ಆಗಿ ರಜ್ಜ ಹೊತ್ತು ಇದ್ದು ಒಂದಾ ತನ್ನಷ್ಟಕ್ಕೇ ಕಮ್ಮಿ ಆವ್ತು ಅಥವಾ ಮದ್ದು ತೆಕ್ಕೊಂಡಪ್ಪಗ ಸಾಮಾನ್ಯ ಸ್ಥಿತಿಗೆ ಬತ್ತು.

ಈ ಪಟಲ್ಲಿ ನಿಂಗೊ ನೋಡ್ಲಕ್ಕು, ಯಾವುದೇ ತೊಂದರೆ ಇಲ್ಲದ್ದ ಆರೋಗ್ಯಕರವಾದ ಶ್ವಾಸನಾಳಕ್ಕುದೇ, ಅಸ್ತಮ ಇಪ್ಪ ಶ್ವಾಸನಾಳಕ್ಕುದೇ ಇಪ್ಪ ವ್ಯತ್ಯಾಸ.

ಸಮಸ್ಯೆಯ ಬಗ್ಗೆ ತಿಳ್ಕೊಂಡಾತು, ಇನ್ನು ಪರಿಹಾರದ ಬಗ್ಗೆ ರಜ್ಜ ತಿಳ್ಕೊಳ್ಳೆಡದಾ?

ಸಾಮಾನ್ಯವಾಗಿ ಇದಕ್ಕೆ ಮದ್ದು ಹೇಳಿ ಕೊಡುದು bronchodialators  ಹೇಳಿರೆ ಶ್ವಾಸನಾಳಂಗಳ ದಾರಿಯ ಅಗಲ ಮಾಡುಲೆ ಇಪ್ಪ ವಸ್ತುಗೊ ಅಥವಾ ಸ್ಟೀರಾಯ್ಡ್.  ಇದರಿಂದಾಗಿ ತಾತ್ಕಾಲಿಕ ಪರಿಹಾರ ಖಂಡಿತಾ ಸಿಕ್ಕುತ್ತು. ಅಸ್ತಮಾ ಅಟಾಕ್ ಆಗಿಪ್ಪ ಸಂದರ್ಭಲ್ಲಿ ಜೀವ ಉಳುಶುಲೆ ಇದು ಅಗತ್ಯ ಕೂಡ.

ಸರಿಯಾದ ವೈದ್ಯರ ಭೇಟಿ ಆಗಿ, ಪರೀಕ್ಷೆಗಳ ಮಾಡ್ಸಿಗೊಂಡು ಅಸ್ತಮ ಇಪ್ಪದು ಖಚಿತಪಡಿಸಿಗೊಳ್ಳೆಕಾದ್ದು ಮುಖ್ಯ. ಅಲ್ಲದ್ದರೆ ಕೆಲವು ಸರ್ತಿ ಅಂತೆ ಬಪ್ಪ ಸೆಮ್ಮ/ಅಲರ್ಜಿಗಳನ್ನುದೇ ಕೆಲವು ಸರ್ತಿ ನಾವು ಅಸ್ತಮ ಹೇಳಿ ತಪ್ಪು ತಿಳಿವ ಸಾಧ್ಯತೆ ಇರ್ತು.

ಎನಗೆ ಗೊಂತಿಪ್ಪ ಮಟ್ಟಿಂಗೆ ಪ್ರಕೃತಿ ಚಿಕಿತ್ಸೆ ಮತ್ತೆ ಯೋಗಲ್ಲಿ ಇದಕ್ಕೆ ಇಪ್ಪ ಪರಿಹಾರಂಗಳ ಬಗ್ಗೆ ರಜ್ಜ ಮಾಹಿತಿ ಕೊಡ್ತೆ.

ಪ್ರಕೃತಿ ಚಿಕಿತ್ಸೆ:

 • ಆಕ್ಯುಪಂಕ್ಚರ್ ಅಥವಾ ಸೂಜಿ ಚಿಕಿತ್ಸೆ ಹೇಳ್ತ ಚೀನಾದ ಚಿಕಿತ್ಸಾ ಪದ್ದತಿಲಿ ಅಸ್ತಮಾಕ್ಕೆ ಪರಿಹಾರ ಇದ್ದು. ಇದರ ಚಿಕಿತ್ಸೆಯ ಹತ್ತು ದಿನ ಅಥವಾ ಹೆಚ್ಚು ದಿನ ತೆಕ್ಕೊಂಡರೆ ಸಮಸ್ಯೆ ಕಮ್ಮಿ ಆವ್ತು, ಪೂರ ಗುಣ ಅಪ್ಪದೂ ಇದ್ದು.
 • ಜಲಚಿಕಿತ್ಸೆ (Hydrotherapy)ಯ ಕೆಲವು ವಿಧಾನಂಗಳ ನಿತ್ಯವೂ (ಕೆಲವು ದಿನಂಗಳ ಮಟ್ಟಿಂಗೆ) ಮಾಡುದರಿಂದ ಉತ್ತಮ ಫಲಿತಾಂಶ ಸಿಕ್ಕುತ್ತು.
 • ಆಹಾರ ಚಿಕಿತ್ಸೆ: ಆಹಾರದ ಮೂಲಕ ಇದರ ನಿಗ್ರಹಿಸುಲೆ ಎಡಿತ್ತು. ಕೆಲವು ಜೆನಕ್ಕೆ ಕೆಲವು ಆಹಾರ ಪದಾರ್ಥಂಗೊ ಆಗಿ ಬತ್ತಿಲೆ ಅಂತ ಸಂದರ್ಭಲ್ಲಿ ಅದರ ಸೇವನೆ ಮಾಡುದು ಬಿಟ್ಟರೆ ಒಳ್ಳೆದು. ಅಲ್ಲದ್ದೆ ದೇಹಕ್ಕೆ ಶಕ್ತಿ ಕೊಡುವ ಆಹಾರದ ಸೇವನೆ ಅಗತ್ಯ.
 • ಮಾಲೀಶು ಚಿಕಿತ್ಸೆ (massage therapy): ಅಂತೆ ಎಣ್ಣೆ ಹಾಕಿ ತಿಕ್ಕುದಲ್ಲ, ವೈಜ್ಞಾನಿಕವಾಗಿ ಇಪ್ಪ ಕೆಲವು ಚಲನೆಗಳ ಮೂಲಕ ಮಾಲೀಷು ಮಾಡುದರಿಂದ ಕಫ ಹೆರ ಬಪ್ಪಲೆ ಸಹಾಯ ಮಾಡ್ತು, ಉಸಿರಾಟ ಸುಲಭ ಅಪ್ಪಲೆ ಸಹಾಯ ಮಾಡ್ತು.
 • ಉಪವಾಸ ಚಿಕಿತ್ಸೆ: ಇದರ ಬಗ್ಗೆ ಅಂದೇ ಹೇಳಿದ್ದೆ, ಅಸ್ತಮಲ್ಲಿ ಉಪವಾಸ ಚಿಕಿತ್ಸೆಯ ಮಾಡುದರಿಂದ ತುಂಬಾ ಒಳ್ಳೆ ಫಲಿತಾಂಶ ಸಿಕ್ಕುತ್ತು.

ಯೋಗ ಚಿಕಿತ್ಸೆ:

ಎಲ್ಲಾ ಅಭ್ಯಾಸಂಗಳನ್ನೂ ಮಾಡ್ಲಕ್ಕಾದರೂ ಉಸಿರಾಟದ ತೊಂದರೆಗೊಕ್ಕೆ ಹೇಳಿಯೇ ಕೆಲವು ಯೋಗಾಭ್ಯಾಸಂಗೊ ಇದ್ದು, ಅದರ ಕಲ್ತು ನಿತ್ಯ ಅಭ್ಯಾಸ ಮಾಡುದರಿಂದ ಅಸ್ತಮವ ದೂರ ಮಾಡ್ಲಕ್ಕು.

 • ಮಾಡೆಕ್ಕಾದ ಕೆಲವು ಆಸನಂಗೊ:  ತಾಡಾಸನ, ಅರ್ಧಚಕ್ರಾಸನ, ಸೇತುಬಂಧಾಸನ, ಮತ್ಸ್ಯಾಸನ, ಭುಜಂಗಾಸನ, ಧನುರಾಸನ, ಉಷ್ಟ್ರಾಸನ, ಗೋಮುಖಾಸನ ಇತ್ಯಾದಿ.
 • ಮಾಡ್ಲಕ್ಕಾದ ಕೇಲವು ಪ್ರಾಣಾಯಾಮಂಗೊ: ನಾಡಿಶುದ್ಧಿ, ಸೂರ್ಯಭೇದನ, ಭ್ರಾಮರಿ.
 • ಇದಲ್ಲದ್ದೆ, ವಸ್ತ್ರ ಧೌತಿ ಮತ್ತೆ ಜಲ ಧೌತಿ ಹೇಳ್ತ 2 ಯೋಗದ ಕ್ರಿಯೆಗೊ ಅಸ್ತಮವ ಗುಣ ಮಾಡ್ಲೆ ತುಂಬಾ ಸಹಾಯ ಮಾಡ್ತು.

ಈ ಅಭ್ಯಾಸಂಗಳ ಆರಾರು ಯೋಗ ಗುರುಗಳ ಹತ್ತರೆ ಸರಿಯಾಗಿ ಕಲ್ತು ಮಾಡೆಕ್ಕು.

ಯೋಗಾಭ್ಯಾಸಂಗೊ ಅಲ್ಲದ್ದೆ, ಕೆಲವು ಉಸಿರಾಟಕ್ಕೆ ಸಂಬಂಧಪಟ್ಟ ವ್ಯಾಯಾಮಂಗೊ ನಾವು ನಿತ್ಯವೂ ಮಾಡ್ಲಕ್ಕು ಅದರಿಂದಾಗಿ ತುಂಬಾ ಉಪಕಾರ ಇದ್ದು. ಅದರ್ಲಿ ಸುಮಾರು ವಿಧಂಗೊ ಇದ್ದು, ಉದಾಹರಣೆಗೆ Hands in and out breathing, Hand stretch breathing, tadasana breathing, trikonasana breathing etc. ಆನು ಇಲ್ಲಿ ನಾಲ್ಕು ರೀತಿಯ ಅಭ್ಯಾಸಂಗಳ ಬಗ್ಗೆ ಬರೆತ್ತೆ.

ಕೈ ಒಳ- ಹೆರ ಮಾಡ್ತ ಉಸಿರಾಟ [Hands in and out breating]

ಅಭ್ಯಾಸ ಕ್ರಮ: ಸರ್ತ ನಿಂದುಗೊಂಡು ಎರಡೂ ಕೈಗಳ ನಮ್ಮ ಎದೂರಿಂಗೆ ನೀಡಿ ಜೋಡ್ಸಿ ಹಿಡಿಯಕ್ಕು. ಉಸಿರು ಒಳ ತೆಕ್ಕೊಳ್ತಾ ನಿಧಾನಕ್ಕೆ ಎರಡೂ ಕೈಗಳ ಅಗಲ್ಸಿಗೊಂಡು ಹೋಯಕ್ಕು (ನಾವು ತುಂಬ ಹೇಳಿ ತೋರ್ಸುಲೆ ಕೈ ಅಗಲ ಮಾಡ್ತಿಲ್ಲೆಯ, ಹಾಂಗೆ). ಮತ್ತೆ ಉಸಿರು ಹೆರಬಿಟ್ಟುಗೊಂಡು ಕೈಗಳ ಮುಂದಂಗೆ ತರೆಕು.

ಸೇತುಬಂಧಾಸನದ ಉಸಿರಾಟ [Setubandhaasana breathing]

ಅಭ್ಯಾಸ ಕ್ರಮ: ಬೆನ್ನಿನಮೇಲೆ ಮನಿಕ್ಕೊಂಡು ನಿಧಾನಕ್ಕೆ ಎರಡೂ ಕಾಲುಗಳ ಮೊಳಪ್ಪಿಲ್ಲಿ ಮಡುಸಿ ಪಾದಂಗಳ ದೇಹಕ್ಕೆ ಹತ್ತರೆ (ಹಿಮ್ಮಡಿ buttocksಗೆ ತಾಗೆಕ್ಕು) ಮಡುಗೆಕ್ಕು. ಕೈಗಳಿಂದ ಕಾಲಿನ ಮಣಿಕಟ್ಟಿನ ಹಿಡ್ಕೊಳ್ಳೆಕು (ಬಲಗೈಲಿ ಬಲಗಾಲು , ಎಡಗೈಲಿ ಎಡಗಾಲು). ಮತ್ತೆ ನಿಧಾನಕ್ಕೆ ಉಸಿರು ಒಳ ತೆಕ್ಕೊಳ್ತಾ ಹೊಟ್ಟೆಯ ಮತ್ತೆ ಎದೆಯ ಭಾಗವ ಮೇಲೆ ಎತ್ತೆಕು, ತಲೆ, ಕೈಗೊ ಮತ್ತೆ ಮಾಪ ನೆಲಕ್ಕೆಯೇ ಇರ್ತು. ಉಸಿರು ಹೆರ ಬಿಡೂವಗ ನಿಧಾನಕ್ಕೆ ಕೆಳ ಬಂದು ಬೆನ್ನಿನ ನೆಲಕ್ಕೆ ಮಡುಗುದು.

ಭುಂಜಂಗಾಸನದ ಉಸಿರಾಟ [Bhujangaasana breathing]

ಅಭ್ಯಾಸ ಕ್ರಮ: ಕವುಂಚಿ ಮನುಗಿ (ಹೊಟ್ಟೆಯಮೇಲೆ ಮನುಗಿ) ಎರಡೂ ಕಾಲುಗೊ ಜೋಡ್ಸಿರೆಕ್ಕು, ಹಣೆ ನೆಲಕ್ಕೆ ಮುಟ್ಟಿರೆಕ್ಕು. ಕೈಗಳ ಎದೆಯ ಎರಡೂ ಹೊಡೆಲಿ ನೆಲಕ್ಕೆ ಮಡುಗೆಕ್ಕು. ನಿಧಾನಕ್ಕೆ ಉಸಿರು ಒಳ ತೆಕ್ಕೊಳ್ತಾ ತಲೆ, ಕೊರಳು ಮತ್ತೆ ಎದೆ, ಹೊಕ್ಕುಳಿನ ವರೆಗೆ ಮೇಲೆ ಎತ್ತೆಕ್ಕು. ಕೆಳಹೊಟ್ಟೆ , ಅಂಗೈ ಮತ್ತೆ ಕಾಲುಗೊ ನೆಲಕ್ಕೆಯೇ ಇರ್ತು. ಮತ್ತೆ ಉಸಿರು ಹೆರ ಬಿಟ್ಟುಗೊಂಡು ನಿಧಾನಕ್ಕೆ ಎದೆ ಮತ್ತೆ ತಲೆಯ ಕೇಲ ತಂದು ನೆಲಕ್ಕೆ ಮಡೂಗೆಕ್ಕು, ಹಣೆ ನೆಲಕ್ಕೆ ಮುಟ್ಟೆಕು.

ಶಶಾಂಕಾಸನದ ಉಸಿರಾಟ [Shashaankaasana breathing]

ಅಭ್ಯಾಸ ಕ್ರಮ: ಇದು ತುಂಬಾ ಸುಲಭ :), ವಜ್ರಾಸನಲ್ಲಿ ಕೂದುಗೊಂಡು [ವಜ್ರಾಸನದ ಬಗ್ಗೆ ಆನು ಮೊದಲೇ ಬರದ್ದೆ, ಆ ಲೇಖನವ ಓದಿ] ಎರಡೂ ಕೈಗಳ ಬೆನ್ನ ಹಿಂದೆ ಕಟ್ಟೆಕು, ಎಡಗೈಂದ ಬಲಗೈಯ ಮಣಿಗಂಟಿನ ಹಿಡ್ಕೊಳ್ಳೆಕು. ಮತ್ತೆ ಉಸಿರು ಹೆರ ಬಿಡ್ತಾ ನಿಧಾನಕ್ಕೆ ಮುಂದೆ ಬಗ್ಗಿ ಹಣೆಯ ನೆಲಕ್ಕೆ ಮುಟ್ಟುಸೆಕ್ಕು ಒಟ್ಟಿಂಗೇ ಹೊಟ್ಟೆ ಮತ್ತೆ ಎದೆ ತೊಡೆಗೆ ತಾಗೆಕ್ಕು. ಉಸಿರು ಒಳ ತೆಕ್ಕೊಂಬಗ ನಿಧಾನಕ್ಕೆ ಮೇಳೆ ಬರೆಕ್ಕು, ಬೆನ್ನು ಕೊರಳು ತಲೆಯ ಸರ್ತಕ್ಕೆ ಮಡುಗಿ ವಜ್ರಾಸನಕ್ಕೆ ಬರೆಕ್ಕು.

 • ಈ ಮೇಲೆ ಹೇಳಿದ ಎಲ್ಲಾ ಅಭ್ಯಾಸಂಗಳ ಪ್ರತಿಯೊಂದನ್ನೂ ದಿನಕ್ಕೆ ಹತ್ತು ಸರ್ತಿ ಮಾಡ್ಲೆಕ್ಕು. ನಿಧಾನಕ್ಕೆ ಹೆಚ್ಚಿಗೆ ಮಾಡ್ಲಕ್ಕು.
 • ಈ ಎಲ್ಲಾ ಅಭ್ಯಾಸಂಗಳನ್ನೂ ಆದಷ್ಟು ನಿಧಾನಕ್ಕೆ ಮಾಡೆಕ್ಕು.
 • ಇದಲ್ಲದ್ದೆ ಆನು ಕಳದ ಸರ್ತಿ ಹೇಳಿದ ನಿಧಾನಕ್ಕೆ ಉಸಿರಾಡುವ ಕ್ರಮವನ್ನೂ ಅಭ್ಯಾಸ ಮಾಡ್ಲಕ್ಕು.
 • ಇನ್ನು ಎಲ್ಲಕ್ಕಿಂತ ಮುಖ್ಯ ಬೇಕಾದ್ದು ಮನಃಶಾಂತಿ, ಯಾವುದೇ ದೈಹಿಕ ಸಮಸ್ಯೆ ಗುಣ ಆಯೆಕಾರೆ ಮದ್ದು ಅಥವಾ ಚಿಕಿತ್ಸೆಗಳೊಟ್ಟಿಂಗೆ ಮಾನಸಿಕ ಶಾಂತಿಯೂ ಅಷ್ಟೇ ಮುಖ್ಯ. ಅದಿಲ್ಲದ್ದರೆ ಎಲ್ಲವೂ ನೀರಿಲ್ಲಿ ಮಾಡಿದ ಹೋಮದ ಹಾಂಗೆ !!

ಹಾಂಗೇ ಇನ್ನೊಂದು ಮಾತು, ಮನಸ್ಸಿಂಗೆ ಬಂದದು. ನಮ್ಮ ಶ್ರೀಗುರುಗಳ ಶ್ರೀರಕ್ಷೆ ಇಪ್ಪ ಎಲ್ಲೋರಿಂಗೂ ಇಡೀ ಜೀವನವೇ ದೀಪಾವಳಿ…ಹೇಂಗೆ ಹೇಳಿರೆ… ದೀಪಾವಳಿ ಕತ್ತಲೆ ಕಳದು ಬೆಳಕು ತುಂಬುವ ಹಬ್ಬ, ಶ್ರೀಗುರುಗೊ ಎಲ್ಲೋರನ್ನೂ ಕತ್ತಲೆಂದ ಬೆಣಚ್ಚಿಂಗೆ ಕರಕ್ಕೊಂಡು ಹೋವ್ತವು ..ಅದಕ್ಕೇ ಅಲ್ಲದ “ಗುರು” ಹೇಳುದು… ಹಾಂಗಿಪ್ಪಗ ನಿತ್ಯವೂ ದೀಪಾವಳಿಯೇ ಅಲ್ಲದಾ? ಜೀವನವೇ ಒಂದು ಹಬ್ಬ ನವಗೆ :) : ) :) ಎಲ್ಲೋರಿಂಗೂ ದೀಪಾವಳಿಯ ಶುಭಾಶಯಂಗಳ ಹೇಳ್ತೆ.

-ನಿಂಗಳ ಸುವರ್ಣಿನೀ ಕೊಣಲೆ.

ಅಸ್ತಮಾ [Asthma], 4.3 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 36 ಒಪ್ಪಂಗೊ

 1. ಒಪ್ಪಣ್ಣ

  ಸುವರ್ಣಿನಿ ಅಕ್ಕ,
  ಕಾಲಕ್ಕೆ ಹೊಂದುವಂತಹ ನಿಂಗಳ ಶುದ್ದಿ ಆಯ್ಕೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು.
  ಯೇವತ್ತಿನಂತೆ ಶುದ್ದಿ ಚೊಕ್ಕಕೆ ಇದ್ದು.

  ಸುವರ್ಣಿನಿ ಅಕ್ಕನ ಅಸ್ತಮಾ ವಿವರಣೆಯೂ, ಡಾಗುಟ್ರಕ್ಕನ ತಮಕಶ್ವಾಸವೂ ಓದಿ ಅಪ್ಪಗ ಎಂಗೊಗೇ ಉಸುಲುಕಟ್ಳೆ ಸುರು ಆತು ಹೇಳಿ ನೆಗೆಮಾಡಿಗೊಂಡೆಯೊ°..
  ಎರಡೂ ಲಾಯಿಕಾಯಿದು!

  [Reply]

  VA:F [1.9.22_1171]
  Rating: 0 (from 0 votes)
 2. prashanth

  blood pressure control madle upayoga appantha simple yogasanango idda? suvarniniyakka?…………………….. iddare thilisutthira?

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಅಧಿಕರಕ್ತದೊತ್ತಡ , ಇದಕ್ಕೆ ಆಸನಂದಲೂ ಹೆಚ್ಚಿಗೆ ಪ್ರಾಣಾಯಾಮ ಮತ್ತೆ ಧ್ಯಾನ ಉಪಕಾರ ಆವ್ತು. ಅದ್ದೊ ಅಲ್ಲದ್ದೆ ಕೆಲವು special techniques ಇದ್ದು. ಅದರ ಅಭ್ಯಾಸ high blood pressureನ control ಮಾಡ್ಲೆ ಸಹಯ ಮಾಡ್ತು.

  [Reply]

  prashanth Reply:

  praanayama dhyana mathu special techniques bagge thilisuttira? akka….

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಆನು ಇಲ್ಲಿ ಈ ಅಭ್ಯಾಸಂಗೊ ಹೇಂಗೆ,ಎಂತರ ಹೇಳಿ ಮಾಹಿತಿ ಕೊಡ್ಲಕ್ಕು. ಈ ಎಲ್ಲಾ ಅಭ್ಯಾಸಂಗಳನ್ನೂ ತಿಳುದವರ ಹತ್ತರೆ ಕಲ್ತು ಮಾಡೆಕ್ಕು.

  prashanth Reply:

  akku suvarniniyakka ningo thilisi dhanyavadago shubharathri

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಶ್ರೀ ನೀರಮೂಲೆಶರ್ಮಪ್ಪಚ್ಚಿವಾಣಿ ಚಿಕ್ಕಮ್ಮಚೆನ್ನೈ ಬಾವ°ಸುವರ್ಣಿನೀ ಕೊಣಲೆಅಕ್ಷರ°ಸುಭಗಮಂಗ್ಳೂರ ಮಾಣಿಶ್ಯಾಮಣ್ಣವಿನಯ ಶಂಕರ, ಚೆಕ್ಕೆಮನೆಗೋಪಾಲಣ್ಣಜಯಗೌರಿ ಅಕ್ಕ°ಬೋಸ ಬಾವಶೀಲಾಲಕ್ಷ್ಮೀ ಕಾಸರಗೋಡುಮಾಲಕ್ಕ°ಶುದ್ದಿಕ್ಕಾರ°ಮುಳಿಯ ಭಾವಅನು ಉಡುಪುಮೂಲೆಅನುಶ್ರೀ ಬಂಡಾಡಿಚೂರಿಬೈಲು ದೀಪಕ್ಕಅಜ್ಜಕಾನ ಭಾವಪುಣಚ ಡಾಕ್ಟ್ರುಪುತ್ತೂರುಬಾವಅಡ್ಕತ್ತಿಮಾರುಮಾವ°ಯೇನಂಕೂಡ್ಳು ಅಣ್ಣತೆಕ್ಕುಂಜ ಕುಮಾರ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ