“ಉಪವಾಸ ಚಿಕಿತ್ಸೆ”

October 3, 2010 ರ 7:33 pmಗೆ ನಮ್ಮ ಬರದ್ದು, ಇದುವರೆಗೆ 43 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಲ್ಲರಿಂಗೂ ನಮಸ್ಕಾರ… ಇಂದು ಎಂಗಳ ಹತ್ತರಾಣ ಮನೆ ಕೂಸು ಬಂತು ಗಣಿತ ಅಭ್ಯಾಸ ಮಾಡ್ಲೆ ಹೇಳಿ, ಅದಕ್ಕೆ ಎರಡನೇ ಕ್ಲಾಸಿನ ಗಣಿತ ಹೇಳಿಕೊಡ್ತಾ ಇತ್ತಿದ್ದೆ. ಆಶ್ಚರ್ಯದ ಮತ್ತೆ ದುಃಖದ ವಿಷಯ ಎಂತರ ಹೇಳಿರೆ….. ಆ ಕೂಸಿನ ಪುಸ್ತಕಲ್ಲಿ ತಪ್ಪು ಮಾಡಿದ ಲೆಕ್ಕಂಗೊಕ್ಕುದೇ ರೈಟ್ ಹಾಕಿತ್ತವು ಟೀಚರುಗೊ !! ಮತ್ತೆ ಮಕ್ಕೊಗೆ ಆಲೋಚನೆ ಮಾಡುಲೆ ಬಿಡ್ತವೇ ಇಲ್ಲೆಯಾ ಹೇಳಿ ಕಾಣ್ತು. 28+16 =44 ಹೇಳಿ ಉತ್ತರ ಬಂತು, ಆದರೆ ಹೇಂಗೆ ಹೇಳಿ ಹೇಳುಲೆ ಕೂಸಿಂಗೆ ಅರಡಿತ್ತಿಲ್ಲೆ :( ಕೂಸು ಪೆದ್ದಿ ಅಲ್ಲ ಮತ್ತೆ !! ಒಳ್ಳೆ ಉಷಾರಿದ್ದು. ಆದರೆ ತಾನು ಮಾಡಿದ ಲೆಕ್ಕದ ಉತ್ತರ ಹೇಂಗೆ ಬಂತು ಹೇಳ್ತದರ ವಿವರ್ಸುಲೆ ಅರಡಿತ್ತಿಲ್ಲೆ, ಕಾರಣ ಎಂತರ ಹೇಳಿರೆ, ಶಾಲೆಲಿ ಮಕ್ಕಳ ಆಲೋಚನೆ ಮಾಡ್ತ ಕ್ಷಮತೆಯನ್ನೇ ಕಮ್ಮಿ ಮಾಡ್ತವು :(. [ಎಲ್ಲಾ ಟೀಚರುಗಳೂ ಹೀಂಗೆ ಅಥವಾ ಎಲ್ಲಾ ಶಾಲೆಗಳೂ ಹೀಂಗೆ ಹೇಳಿ ಹೇಳ್ತಿಲ್ಲೆ, ಆದರೆ ಇಂದ್ರಾಣ ಹೆಚ್ಚಿನ ಶಾಲೆಗಳ ಕಥೆ ಇದುವೇ!!]. ಶಾಲೆಲಿ ಮಕ್ಕಳ ಉಷಾರಿ ಮಾಡ್ತವೋ ಅಲ್ಲ ಉಷಾರಿ ಇಪ್ಪ ಮಕ್ಕಳ ಹೆಡ್ಡು ಮಾಡ್ತವೋ ಹೇಳಿ ಒಂದು ಸಂಶಯ ಇದ್ದು ಎನಗೆ !! ಒಂದು ಮಾಣಿಯ ಟೀಶರ್ಟಿಲ್ಲಿ ಹೀಂಗೆ ಬರಕ್ಕೊಂಡಿತ್ತಡ – “I was born intelligent, education ruined me”. ಈಗಾಣ ಕೆಲವು ಮಕ್ಕಳ ನೋಡಿರೆ ಇದು ಸತ್ಯ ಹೇಳಿ ಅನ್ಸುತ್ತು ಎನಗೆ. ಇದೊಂದು ಮುಖ್ಯ ವಿಷಯ ಅಲ್ಲದಾ?? ಸ್ಸಣ್ಣ ಮಕ್ಕಳ ಶಾಲೆಲಿ ಟೀಚರ್ ಅಪ್ಪಲೆ ಎಲ್ಲಕ್ಕಿಂತ ಹೆಚ್ಚಿನ ಯೋಗ್ಯತೆ ಬೇಕು ಅಲ್ಲದಾ? ಮಾಧ್ಯಮಲ್ಲಿ ಬಪ್ಪ ಒಂದೊಂದು ಶುದ್ದಿಗಳ ನೋಡಿರೆ ಬೇಜಾರಾವ್ತು, ನಮ್ಮ ಸರಕಾರಕ್ಕೆ ಪ್ರಾಥಮಿಕ ಶಾಲೆಯ ಬಗ್ಗೆ ಇಷ್ಟು ಅಸಡ್ಡೆ ಎಂತಗೋ? ಇಡೀ ಜೀವನವ ಕಟ್ಟುಲೆ ಬೇಕಾದ ಅಡಿಪಾಯ ಅಲ್ಲದಾ ಈ ಪ್ರಾಥಮಿಕ ಶಾಲೆ? ಆಲೋಚನೆ ಮಾಡಿದಷ್ಟೂ ಸಮಸ್ಯೆ ದೊಡ್ಡದಾಗಿ ಕಾಣ್ತು :(.  ನಿಂಗಳ ಅಭಿಪ್ರಾಯ ಎಂತರ? ಬರದರೆ ಸುಮಾರು ವಿಷಯಂಗೊ ಇದ್ದು. ಇನ್ನೊಂದರಿ ಇದರ ಬಗ್ಗೆಯೇ ಬರೆತ್ತೆ [ಎನ್ನ ತೃಪ್ತಿಗೆ] :).

ಇಂದ್ರಾಣ ವಿಷಯಕ್ಕೆ ಬಪ್ಪ. ಉಪವಾಸ ಚಿಕಿತ್ಸೆ -ಇದರ ಬಗ್ಗೆ ಅಂದು ರಜ್ಜ ಹೇಳಿತ್ತಿದ್ದೆ. ಈ ಉಪವಾಸ ಚಿಕಿತ್ಸೆ ಹೇಳಿರೆ ಎಂತರ? ಹೇಂಗೆ ಮಾಡುದು? ಎಂತಗೆ ಮಾಡುದು? ಆರು ಮಾಡ್ಲಕ್ಕು? ಸುಮಾರು ಪ್ರಶ್ನೆಗೊ ಇಕ್ಕು.

ಎಂತರ ಮತ್ತೆ ಹೇಂಗೆ ಮಾಡುದು? :

“ಸಂಪೂರ್ಣವಾಗಿ ಆಹಾರಂದ ದೂರ ಇಪ್ಪದು, ಮತ್ತೆ ಸಂಪೂರ್ಣ ವಿಶ್ರಾಂತಿ” ಹೀಂಗೆ ಹೇಳುದು ಸೂಕ್ತ. ಉಪವಾಸವ ಚಿಕಿತ್ಸೆಯಾಗಿ ಮಾಡುವಗ ನಾವು ಯಾವುದೇ ಆಹಾರವ ತೆಕ್ಕೊಂಬಲಾಗ.

ಈ ಚಿಕಿತ್ಸೆಲಿ ಎರಡು ವಿಧ

1] ನೀರು ಮಾಂತ್ರ ಕುಡುಕ್ಕೊಂಡು ಉಪವಾಸ ಮಾಡುದು. [Water fasting]

 • ಈ ರೀತಿಯ ಉಪವಾಸವ ಮೂರು ದಿನಂದ ಮೂರು ತಿಂಗಳಿನ ವರೇಗೆ ಮಾಡ್ಲಕ್ಕು (ವೈದ್ಯರ ಮೇಲ್ವಿಚಾರಣೆಲಿ).
 • ಸುರುವಾಣ ದಿನ ಸಾಮಾನ್ಯ ಆಹಾರಂದ ಕೇವಲ ಗಂಜಿ ಅಥವಾ ಬೇಯಿಸಿದ ತರಕಾರಿ ತೆಕ್ಕೊಳ್ಳೆಕ್ಕು,
 • ಎರಡನೇ ದಿನ ದ್ರವಾಹಾರ(ಹಣ್ಣಿನ ರಸ),
 • ಮೂರನೇ ದಿನಂದ ಬರೀ ನೀರಿನ ಕುಡಿವದು ಮಾಂತ್ರ. ದಿನಕ್ಕೆ 2 ಲೀಟರ್ ನೀರಿನ ಕುಡಿಯಕ್ಕು, ಆದರೆ ಒಟ್ಟಿಂಗೆ ಕುಡಿವದಲ್ಲ, ಅಂಬಗಂಬಗ ರಜ್ಜ ನೀರಿನ ಕುಡಿಯಕ್ಕು.
 • ಹೀಂಗೆ ಉಪವಾಸವ ಮಾಡಿದ ಮೇಲೆ ಉಪವಾಸವ ನಿಲ್ಲುಸುದು ಎಲ್ಲಕ್ಕಿಂತ ಮುಖ್ಯ, “any fool can fast but only a wise can break the fast” ಹೇಳಿ ಇಂಗ್ಲೀಷಿಲ್ಲಿ ಹೇಳ್ತವು.
 • ನೀರಿನ ಸೇವನೆಂದ ನಿಂಬೆಹುಳಿಯ ಶರ್ಬತ್ತು (ಸಕ್ಕರೆ ಹಾಕದ್ದೆ)/ಮುಸುಂಬಿ ರಸ ಹೀಂಗಿದ್ದ ಹಣ್ಣಿನ ರಸ ತೆಕ್ಕೊಳ್ಳೆಕು. ಎರಡು ದಿನ ದ್ರವಾಹಾರಲ್ಲಿ ಇದ್ದು ಮತ್ತೆ ಬೇಯಿಸಿದ ಹಣ್ಣು ತರಕಾರಿಗಳ ತೆಕ್ಕೊಂಬಲೆ ಶುರು ಮಾಡ್ಲಕ್ಕು. ಎರಡು ಮೂರು ದಿನ ಹೀಂಗಿದ್ದ ಆಹಾರಲ್ಲಿ ಇದ್ದು ಮತ್ತೆ ಎಣ್ಣೆ,ಮಸಾಲೆ ಕಮ್ಮಿ ಇಪ್ಪಂತಹ ಸಾಮಾನ್ಯ ಆಹಾರವ ತೆಕ್ಕೊಂಬಲಕ್ಕು.

2]  ನೀರುದೇ ಇಲ್ಲದ್ದೆ ಉಪವಾಸ ಮಾಡುದು – ನಿರ್ಜಲ ಉಪವಾಸ [Dry fasting]

 • ಈ ಚಿಕಿತ್ಸೆಯ ತುಂಬಾ ಅಪರೂಪಕ್ಕೆ ಕೊಡುದು, ಅನಿವಾರ್ಯ ಆದರೆ ಮಾಂತ್ರ. ಆದರೆ ಇದು ತುಂಬಾ ಉಪಕಾರಿ !! ಹೆಚ್ಚಾಗಿ ಈ ಹೊಟ್ಟೆ ಹುಣ್ಣು (gastric/duodenal ulcers ) ನ ಹಾಂಗಿಪ್ಪ ಸಮಸ್ಯೆಗಳಲ್ಲಿ ಒಳ್ಳೆ ಫಲಿತಾಂಶ ಸಿಕ್ಕುತ್ತು.
 • ಈ ಚಿಕಿತ್ಸೆಯ ಹೆಚ್ಚು ಹೇಳಿರೆ ಮೂರು ದಿನ ಮಾಡುದು ಎನಗೆ ಗೊಂತಿದ್ದು. ಐದು ದಿನ ಅಥವಾ ಒಂದು ವಾರವುದೇ ಮಾಡ್ಲಾವ್ತು ಹೇಳಿ ಓದಿ/ ಕೇಳಿ ತಿಳ್ಕೊಂಡಿದೆ.
 • ಇದರಲ್ಲಿದೇ ನಿಧಾನಕ್ಕೆ ಘನಾಹಾರ, ದ್ರವಾಹಾರ, ನೀರು ಹೀಂಗೆ ದಿನಂದ ದಿನಕ್ಕೆ ಆಹಾರ ಬದಲಾವಣೆ ಮಾಡಿ ಅಕೇರಿಗೇ ನೀರುದೇ ಇಲ್ಲದ್ದೆ ಉಪವಾಸ ಮಾಡುದು.
 • ಉಪವಾಸ ನಿಲ್ಸುವಗ ಸುರೂವಿಂಗೆ ನೀರು, ಮತ್ತೆ ಹಣ್ಣಿನ ರಸ ಇತ್ಯಾದಿ, ಮತ್ತೆ ಬೇಶಿದ ತರಕಾರಿ/ಹಣ್ಣು, ಮತ್ತೆ ನಿಧಾನಕ್ಕೆ ಸಾಮಾನ್ಯ ಆಹಾರ ತೆಕ್ಕೊಂಬಲೆ ಶುರು ಮಾಡೆಕ್ಕು.

ಎಂತಕ್ಕೆ? :

ಉಪವಾಸ ಎಂತಕ್ಕೆ ಮಾಡೆಕು? ಬೇರೆ ಚಿಕಿತ್ಸೆಗಳ ಮಾಡಿರೆ ಸಾಲದಾ? ಕೆಲವು ಸಮಸ್ಯೆಗೊ ಸುಮಾರು ಬೇರೆ ಚಿಕಿತ್ಸೆ ಮಾಡಿರೂ ಕಮ್ಮಿ ಆವ್ತಿಲ್ಲೆ, ಉಪವಾಸ ಚಿಕಿತ್ಸೆಯ ಎಂತಕ್ಕೆ ಮಾಡೆಕ್ಕು ಹೇಳಿರೆ…ಅದರ ಹಿಂದಾಣ ಸಿದ್ಧಾಂತ ಎಂತರ ಹೇಳಿರೆ, “ದೇಹಕ್ಕೆ ಎಲ್ಲ ಸಮಸ್ಯೆಯನ್ನೂ ಗುಣ ಮಾಡುವ ಶಕ್ತಿ ಇದ್ದು, ನಾವು ದೇಹವ ಅದರಷ್ಟಕ್ಕೇ ಬಿಟ್ಟರೆ”. ಹಾಂಗಾಗಿ ಉಪವಾಸದ ಸಂದರ್ಭಲ್ಲಿ ಸಂಪೂರ್ಣ ವಿಶ್ರಾಂತಿಯೂ ಅಗತ್ಯ, ವಿಶ್ರಾಂತಿಲಿಪ್ಪಗ ದೇಹ ತನ್ನಲ್ಲಿಪ್ಪ ಎಲ್ಲ ಶಕ್ತಿಯನ್ನೂ ಗುಣ ಮಾಡುಲೆ ಉಪಯೋಗ್ಸುತ್ತು.

ಉಪವಾಸ ಮಾಡುದರಿಂದ ನಿರ್ವಿಷೀಕರಣ(detoxification) ಆವ್ತು.

ಆರು ಮಾಡ್ಲಕ್ಕು?:

 • ಸಣ್ಣ ಮಕ್ಕಳ, ಹಾಸಿಗೆ ಹಿಡುದ ವೃದ್ಧರ ಬಿಟ್ಟು ಎಲ್ಲೋರೂ ಮಾಡ್ಲಕ್ಕು. [ಸಮಸ್ಯೆಗಳ ಮತ್ತೆ ದೈಹಿಕ ಸ್ಥಿತಿಯ ನೋಡಿಯೊಂಡು ವೈದ್ಯರು ನಿರ್ಧಾರ ಮಾಡ್ತವು]
 • ಚರ್ಮರೋಗ , ಹೊಟ್ಟೆ ಹುಣ್ಣು, ಗುಣ ಆಗದ್ದ ಗಾಯ/ಹುಣ್ಣು ಇತ್ಯಾದಿ, ಅಸಿಡಿಟಿ, ಬೇನೆಗೊ, ಜೀರ್ಣಕ್ರಿಯೆಗೆ ಸಂಬಂಧ ಪಟ್ಟ ಸಮಸ್ಯೆಗೊ, ಉಸಿರಾಟದ ಸಮಸ್ಯೆಗೊ, ಇತ್ಯಾದಿ ಇತ್ಯಾದಿ ಇತ್ಯಾದಿ….
 • ಇಷ್ಟೋಂದು ಇತ್ಯಾದಿಗೊ ಎಂತಕ್ಕೆ ಹೇಳಿರೆ ಈ ಉಪವಾಸ ಚಿಕಿತ್ಸೆ ಹೇಳ್ತದು ಹೆಚ್ಚು ಕಮ್ಮಿ ಎಲ್ಲಾ ಆರೋಗ್ಯದ ತೊಂದರೆಗೊಕ್ಕೆ ಆವ್ತು. ಲಂಘನಂ ಪರಮೌಷಧಮ್” ಹೇಳಿ ಇಲ್ಲೆಯಾ?

ಉಪವಾಸ ಮಾಡುವಗ ಕಂಡುಬಪ್ಪ ಕೆಲವು ಸಣ್ಣ ಸಮಸ್ಯೆಗೊ:

ಈ ಎಲ್ಲಾ ತೊಂದರೆಗೊ ಉಪವಾಸದ ಸುರುವಾಣ ಎರಡು ದಿನ ಮಾಂತ್ರ ಇರ್ತು. ಇದೆಲ್ಲದಕ್ಕೂ ಪ್ರಕೃತಿ ಚಿಕಿತ್ಸೆಯ ಪರಿಹಾರಂಗಳ ಮಾಡಿಗೊಂಡು ಉಪವಾಸವ ಮುಂದುವರೆಶೆಕ್ಕು.

 • ತಲೆಬೇನೆ
 • ತಲೆ ತಿರುಗುದು
 • ಹೊಟ್ಟೆ ಉರಿ
 • ಬಾಯಿ ವಾಸನೆ ಬಪ್ಪದು
 • ಬಚ್ಚುದು
 • ಜೋರು ಹಶು ಅಪ್ಪದು
 • ಮನಸ್ಸಿಂಗೆ ಕಿರಿಕಿರಿ ಅಪ್ಪದು, ಇತ್ಯಾದಿ.

ಇನ್ನೊಂದು ಮುಖ್ಯ ಅಂಶ ಹೇಳಿರೆ, ಉಪವಾಸ ಮಾಡೂವ ಸಂದರ್ಭಲ್ಲಿ ಕೆಲವು ಸರ್ತಿ ಇಪ್ಪ ಸಮಸ್ಯೆ ಹೆಚ್ಚು ಅಪ್ಪ ಕ್ರಮ ಇದ್ದು,ಮತ್ತೆ ತನ್ನಷ್ಟಕ್ಕೇ ಗುಣ ಆವ್ತು. ಇದಕ್ಕೆ healing crisis ಹೇಳ್ತವು. ಉದಾಹರಣೆಗೆ, ಚರ್ಮರೋಗ ಇದ್ದರೆ ಒಂದು ತಿಂಗಳ ಉಪವಾಸ ಚಿಕಿತ್ಸೆ ಮಾಡ್ತರೆ, ಹತ್ತು ಹದಿನೈದು ದಿನ ಕಳಿವಗ ಚರ್ಮ ಹೆಚ್ಚು ತೊರ್ಸುದು ಅಥವಾ ನೀರಿನ ಹಾಂಗಿದ್ದ ದ್ರವ ಹೆರ ಬಪ್ಪದು ಅಕ್ಕು, ಆದರೆ ಎರಡು ಮೂರು ದಿನ ಕಳಿವಗ ತನ್ನಷ್ಟಕ್ಕೇ ಕಮ್ಮಿ ಆಗಿ ಮತ್ತೆ ಪೂರ ಗುಣ ಆವ್ತು.

ಎಲ್ಲಕ್ಕಿಂತ ಮುಖ್ಯ: ವೈದ್ಯರ ಸಲಹೆ ಸೂಚನೆಗಳೊಟ್ಟಿಂಗೆ ಅವರ ಮೇಲ್ವಿಚಾರಣೆಲಿಯೇ ಉಪವಾಸ ಚಿಕಿತ್ಸೆಯ ಮಾಡೆಕ್ಕು.

ಹಣ್ಣಿನರಸದೊಟ್ಟಿಂಗೆ ಅಥವಾ ಬೇಶಿದ ತರಕಾರಿಯೊಟ್ಟಿಂಗೆ ಅಥವಾ ಹಸಿ ಹಣ್ಣು/ತರಕಾರಿಯೊಟ್ಟಿಂಗೆ ಉಪವಾಸ (juice fasting/fruit fasting etc.) ಹೇಳಿ ಇದ್ದು ಆದರೆ ಇದ್ಯಾವುದೂ ಉಪವಾಸ ಅಲ್ಲ “ಆಹಾರ ಚಿಕಿತ್ಸೆ(diet therapy)”

"ಉಪವಾಸ ಚಿಕಿತ್ಸೆ", 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 43 ಒಪ್ಪಂಗೊ

 1. prashanth

  akka olleya vishayava thilisiddi dhanyavada ningoge

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  thank u :)

  [Reply]

  VA:F [1.9.22_1171]
  Rating: 0 (from 0 votes)
 2. ಬೋಸ ಬಾವ
  ಬೋಸ...

  {….ಮೂರು ದಿನಂದ ಮೂರು ತಿಂಗಳಿನ ವರೇಗೆ}:P

  ಯೊ… ದೇವರೆ.. ಎನ್ನ೦ದೆಡಿಯಪ್ಪಾ ಮೂರು ತಿಂಗಳೆಲ್ಲಾ ಮಾಡ್ಲೆ……!! 😀
  ಹಾ.. ಆದರೆ ಅನು ಪ್ರತೀ ದಿನ ಮಾಡ್ತೆ…. ಉದಿಯಪ್ಪಗ 8 ರಿ೦ದ ಮದ್ಯನ 1:30 ರವರೆಗೆ.. ಮತ್ತೆ ಪುನಾ..2 ಡರಿ೦ದ 5 ದರವರೆಗೆ.. ಮತ್ತೆ ಎರುಳು.. 9 ತರವರೆಗೆ.. ಉಪವಾಸವೆ ಅನು.. :D….

  ಹಾ.. 😛 ಮತ್ತೆ ಇದರ ರಜಾ ಬದಲ್ಸಕು “I was born intelligent, education “dint” ruined me, education never ruins any body it’s the Attitude toward life that ruins ” 😉 ….. ಅಲ್ಲದೊ??? 😀

  [Reply]

  ಬೊಳುಂಬು ಮಾವ°

  ಗೋಪಾಲ ಮಾವ Reply:

  ಸುವರ್ಣಿನಿ, ಪ್ರಾಥಮಿಕ ಶಾಲೆಯ ಟೀಚರುಗಳ ಬಗ್ಗೆ ಸರಿಯಾಗಿಯೇ ಹೇಳಿದ್ದು. ಎನ್ನ ಮಗನ ನೋಟ್ಸುಗಳ ನೋಡುವಗ ಎನಗೂ ಕೆಲವೊಂದರಿ ಹಾಂಗೆ ಕಾಣುತ್ತು. ಶಾಲೆಯವರ ಮಾಂತ್ರ ನಂಬಿದರೆ ಸಾಲ. ಮಕ್ಕಳ ಕಲಿಯುವಿಕೆಲಿ ಹೆತ್ತವೂ ಕೂಡಾ ರಜಾ ತಲೆ ಕೊಡೆಕು. ಲೇಖನಲ್ಲಿ ಉಪವಾಸದ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದು. ಒಳ್ಳೆಯ ಲೇಖನ. ಹೊಟ್ಟೆ ಹುಣ್ಣು ಇದ್ದವು ಉಪವಾಸ ಮಾಡಿದರೆ, ಅವು ಮತ್ತುದೆ ವಿಷಮ ಸ್ಥಿತಿಗೆ ಹೋಗವೊ ಅಂಬಗ ? ಎನ್ನ ಸಂಶಯ ಅಷ್ಟೆ.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಇಲ್ಲೆ ಹೊಟ್ಟೆ ಹುಣ್ಣು ಇಪ್ಪವಕ್ಕೆ, ಮತ್ತೆ ಮತ್ತೆ ಹೊಟ್ಟೆಲಿ acid ಬಿಡುಗಡೆ ಅಪ್ಪದರಿಂದ ಸಮಸ್ಯೆ ಹೆಚ್ಚಾವ್ತಾ ಹೋವ್ತು. ನಿರ್ಜಲ ಉಪವಾಸ ಕೊಡುವಗ ಈ ಜೆನಂಗಳ ಆಹಾರಂದ ಸಂಪೂರ್ಣವಾಗಿ ದೂರ ಇರಿಸುತ್ತು, ಹೇಳಿರೆ…ಅವ್ವು ಆಹಾರವ ನೋಡ್ಲಿಲ್ಲೆ, ಪರಿಮ್ಮಳ ತೆಕ್ಕೊಂಬಲಿಲ್ಲೆ, ಅದರ ಶುದ್ದಿ ಮಾತಾಡ್ಲಿಲ್ಲೆ. ಹೀಂಗೆ ಮಾಡಿಯಪ್ಪಗ ಅವರ ಜಠರಲ್ಲಿ acid ಬಿಡುಗಡೆ ಕಮ್ಮಿ ಆವ್ತು , ಅಥವಾ ಆವ್ತೇ ಇಲ್ಲೆ. ಅಂಬಗ ಹುಣ್ಣು ಬೇಗ ಗುಣ ಆವ್ತು. ಈ ಚಿಕಿತ್ಸೆಗೊ ನಿಜವಾಗಿಯೂ ತುಂಬಾ ಪ್ರಯೋಜನಕಾರಿ. ಆದರೆ ಧೈರ್ಯ ಮಾಡುವ ಪೇಷೆಂಟುಗಳೂ ಇಲ್ಲೆ, ಚಿಕಿತ್ಸೆ ಕೊಡುವ ಧೈರ್ಯ ಇಪ್ಪ ವೈದ್ಯರೂ ಕಮ್ಮಿಯೇ :( ಇದು ದುಃಖದ ವಿಚಾರ.

  [Reply]

  ಬೊಳುಂಬು ಮಾವ°

  ಗೋಪಾಲ ಮಾವ Reply:

  ಸಂಶಯ ನಿವಾರಣೆ ಮಾಡಿದ್ದಕ್ಕೆ ಧನ್ಯವಾದಂಗೊ.

  ಸುವರ್ಣಿನೀ ಕೊಣಲೆ

  Suvarnini Konale Reply:

  my pleasure…ಅದು ಎನ್ನ ಕರ್ತವ್ಯ :)

  VA:F [1.9.22_1171]
  Rating: 0 (from 0 votes)
  ಬೊಳುಂಬು ಮಾವ°

  ಗೋಪಾಲ ಮಾವ Reply:

  ಓ ಬೋಸ ಕಂಡ ಹಾಂಗೆ ಅಲ್ಲ, ಅವಂಗೆ ಇಂಗ್ಳೀಷೂ ಬತ್ತು. ಅಂಬಗ ಇರುಳು 9ರಿಂದ ಉದಿಯಪ್ಪಗ 8ರ ವರಗೆ ಒರಕ್ಕಿಲ್ಲಿಯೂ ಎಂತಾರೂ ಮುಕ್ಕೆಂಡು/ತಿಂದೊಂಡು ಇರುತ್ತೆ ಆಯ್ಕು ಅಲ್ಲದೊ ?

  [Reply]

  ಬೋಸ ಬಾವ

  ಬೋಸ... Reply:

  ಹಾ.. ಅದು ಬಿಟ್ಟತ್ತು ಹೇಳ್ಲೆ..!! 😀 😛
  ಇರುಳು ಕೂಡ ಉಪವಾಸವೆ- 8 ಗ೦ಟೆ ಉಪವಾಸ…. 😀 10ರಿ೦ದ ಉದ್ಯಪಗ 6 ಟರವರೆಗೆ… 😀 😛

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಬೋಸ ಆರು ಗಂಟೆಗೆ ಏಳ್ತೆಯೋ??!!!

  ಬೋಸ ಬಾವ

  ಬೋಸ... Reply:

  ಹಾ ಅಕ್ಕೊ೦.. ಅನು ಉದ್ಯಪ್ಪಾ ಬೇಗ ಏಳ್ತೆ… 😛 😀
  ಏದ್ದು ಹಟ್ಟಿಲಿ ಹುಲ್ಲುಹಾಕಿ,ಹಾಲು ಕರದು… ಸಗಣ ತಟ್ಟಿ ವಣಗುಲೆ ಹಾಕಿ… ಸೊಸೈಟಿಗೆ ಹಾಲು ಕೊಟ್ಟು ಬನ್ಸಾಪ್ಪಗ 7:30..:D ಮತ್ತೆ ಮಿ೦ದಿಕಿ ಜಪ ಮಾಡಿ.. ತಿ೦ಡಿ, ರಜಾ ಬೆಲ್ಲ ಕಾಪಿ… ಮತ್ತೆ “ಉಪವಾಸ… “ 1:30 ವರೆಗೆ…

  VA:F [1.9.22_1171]
  Rating: 0 (from 0 votes)
  ಸುವರ್ಣಿನೀ ಕೊಣಲೆ

  Suvarnini Konale Reply:

  ಮಕ್ಕಳ life ruin ಮಾಡುದು ಶಿಕ್ಷಕರ ಮತ್ತೆ ಹೆತ್ತವರ wrong attitude … ಅಲ್ಲದಾ?? ನಾವು ಕೊಡುವ () ಸರಿ ಇಲ್ಲದ್ದರೆ ಮಕ್ಕಳ ಹೇಳಿ ಎಂತ ಪ್ರಯೋಜನ? ಆದರೆ ಬೋಸ ಹೇಳ್ತ ಮಾತು ಸತ್ಯ…

  [Reply]

  ಬೋಸ ಬಾವ

  ಬೋಸ... Reply:

  ಉಮ್ಮಪ್ಪ.. !! 😀

  [Reply]

  VA:F [1.9.22_1171]
  Rating: 0 (from 0 votes)
 3. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಸುವರ್ಣಿನಿಯಕ್ಕ! ನಿಂಗ ಹೇಳಿದ ಉಪವಾಸದ ಮದ್ದು ಭಾರೀ ಲಾಯ್ಕು ಇದ್ದು!! ಆನುದೇ ಇದರ ಸುಮಾರು ಸಮಯಂದ ಪ್ರಯೋಗ ಮಾಡಿ ನೋಡಿದ್ದೇ!! ಅನುಕೂಲ ಇದ್ದು! (Water fasting)
  ಹೊಟ್ಟೆಲಿ ಗುಡು ಗುಡು ಆದರೆ ಭಾರೀ ಒಳ್ಳೆ ಮದ್ದು!! 😀

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಅಪ್ಪು, ತುಂಬಾ ಪ್ರಯೋಜನ ಆವ್ತು. ಎಲ್ಲೋರು ವಾರಲ್ಲಿ ಒಂದು ದಿನ ಅಥವಾ ಹತ್ತು ದಿನಕ್ಕೆ ಒಂದರಿ ಮಾಡ್ಲಕ್ಕು.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಡಾಗುಟ್ರಕ್ಕಾ,ಮಾಹಿತಿಗೆ ಧನ್ಯವಾದ.
  ಉಪವಾಸದ ಮಹತ್ವ ತಿಳಿವಲೆ ಹತ್ತು ದಿನ ಪ್ರಕೃತಿ ಚಿಕಿತ್ಸೆಗೆ ಹೋಯೆಕ್ಕು.ಒಳ್ಳೆ ಅನುಭವ,ಬ್ಯಾಟರಿ ರಿಚಾರ್ಜ್ ಮಾಡಿದ ಹಾಂಗೆ.
  ತಪ್ಪು ಲೆಕ್ಕಕ್ಕೆ ರೈಟ್ ಹಾಕುವ ದುರ್ಬುದ್ಧಿ ಬೆಂಗಳೂರಿ೦ಗೆ ಮಾತ್ರ ಸೀಮಿತ ಹೇಳಿ ಗ್ರೇಶಿತ್ತಿದ್ದೆ. ಊರಿಲಿಯೂ ಹೀಂಗಿದ್ದೋ? ಬೆಂಗಳೂರಿಲಿ ಕನ್ನಡವ ತಿದ್ದುವ ಅವಸ್ಥೆ ಹೇಳಿ ಗುಣ ಇಲ್ಲೆ. ಟೀಚರುಗಳ ಆಕ್ಷೇಪಿಸುವ ಹಾಂಗೂ ಇಲ್ಲೆ. ನಾಳೆ ಮಕ್ಕಳ ಮೇಲೆ ಸಣ್ಣ ಕಾರಣಕ್ಕೂ ಬೈಗಳು ಶುರು ಆವುತ್ತದಾ.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಶಾಲೆಗಳ ಸಮಸ್ಯೆಯ ಹೇಳಿ ಪೂರೈಸ… ಹೇಂಗಿದ್ದ ಪರಿಸ್ಥಿತಿ ಹೇಳಿರೆ ಸರಿ ಇದ್ದ ಟೀಚರ್/ ಉಪನ್ಯಾಸಕರನ್ನುದೇ ಸರಿ ಇಪ್ಪಲೆ ಬಿಡ್ತವಿಲ್ಲೆ!! ಒಳ್ಳೆದೆಂತಾರು ಮಾಡ್ತರೆ ಅಡ್ಡಗಾಲು ಹಾಕುವವ್ವೇ ಹೆಚ್ಚು :( ಇದು ಎನ್ನ ಸ್ವಂತ ಅನುಭವ. ಎನಗೆ ಇದೆಲ್ಲ ಬಿಸಿ ತುಪ್ಪ… ತಪ್ಪು ಕೆಲಸ ಮಾಡ್ಲೆ ಎನ್ನಂದ ಎಡಿಯ.. ಸರಿ ಮಾಡ್ಲೆ ಬಿಡ್ತವಿಲ್ಲೆ !! ಮೆಡಿಕಲ್ ಕಾಲೇಜಿಂದ ಐದಾರು ವರ್ಷ ಕಲ್ತು ಹೆರ ಬಪ್ಪವರ ನಾವು ಪ್ರಪಂಚಕ್ಕೆ ಸಹಾಯ ಮಾಡ್ಲೆ ತಯಾರು ಮಾಡೆಡದಾ? ಐದು ವರ್ಷ ಪರೀಕ್ಷೆ ಪಾಸಾಗಿ ಡಿಗ್ರೀ ಸಿಕ್ಕಿರೆ ಸಾಕಾ?
  ಹೇಳ್ತಾ ಹೋದರೆ ಒಂದು ದೊಡ್ಡ ಪುಸ್ತಕವೇ ಅಕ್ಕು. ರಾಜಕೀಯ ಸೇರಿ education minister ಆದರಕ್ಕಾ ಹೇಳಿ ಒಂದು ಆಲೋಚನೆ ಇದ್ದು 😉 ಮತ್ತೆ ಆದರೂ ಇದರೆಲ್ಲ ಸರಿ ಮಾಡ್ಲೆಡಿಗಾ ಹೇಳಿ :)

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಟೀಚರ್ ಗೊ ಮಾಂತ್ರ ಅಲ್ಲ, ಸಣ್ಣ ಮಕ್ಕಳ ಅಭ್ಯಾಸಂಗಳಲ್ಲಿ ಮನೆಯೋರಿಂದೂ ಹೆಚ್ಚಿನ ಪಾತ್ರ ಇದ್ದು. ನಮ್ಮಲ್ಲಿ ಕೆಲವು ಜೆನ ಅಮ್ಮಂದ್ರಿಂಗೆ ಮನೇಲಿಯೇ ಇದ್ದರೂ ಮಕ್ಕೊಗೆ ಕಲುಶುಲೆ ಟಿವಿ ನೋಡುವಲ್ಲಿಂದ ಪುರ್ಸೊತ್ತೇ ಸಿಕ್ಕುತ್ತಿಲ್ಲೆ !! ಅಪ್ಪಂದ್ರು ಆಫೀಸಿಂಗೆ ಹೋಪಲಾತು. ಅಜ್ಜ-ಅಜ್ಜಿ ಇಪ್ಪ ಮನೆಗಳೆ ಕಮ್ಮಿ. ಕೆಲವು ಪೇಟೆ ಮನೆಗಳಲ್ಲಿ ಮಕ್ಕೊ ಹೆಚ್ಚು ಕಮ್ಮಿ ಅನಾಥರ ಹಾಂಗೆ ಇರ್ತವು !! ಕಲುಶುದು ಶಾಲೆಯ ಜವಾಬ್ದಾರಿ ಹೇಳಿ ಅವರ ವಾದ !! ಮಕ್ಕೊ ನಮ್ಮದಲ್ಲದಾ??!!

  [Reply]

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಉಪವಾಸದ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟ ಲೇಖನ. ವೈದ್ಯರ ಸಲಹೆಯ ಹಾಂಗೆ ಮಾಡುವದು ಒಳ್ಳೆದು ಹೇಳಿ ಕಾಣುತ್ತು. ಡಯಾಬಿಟೀಸ್ ಇಪ್ಪವಕ್ಕೆ ಸಕ್ಕರೆ ಅಂಶ ಕಮ್ಮಿ ಆದರೆ ತೊಂದರೆ ಆವ್ತಲ್ಲದ? ಹಾಂಗೇ ಕಮ್ಮಿ ರಕ್ತದ ಒತ್ತಡ ಇಪ್ಪವಕ್ಕೆ ಕೂಡಾ ಶರೀರಲ್ಲಿ ಸೋಡಿಯಂ (ಲವಣಂಗೊ) ಅಂಶ ಕಮ್ಮಿ ಆದರೆ ತೊಂದರೆ ಆವ್ತಿಲ್ಲೆಯಾ?

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಒಳ್ಳೆ ಪ್ರಶ್ನೆ ಕೇಳಿದ್ದಿ :) ಧನ್ಯವಾದಂಗೊ.
  ಡಯಾಬಿಟೀಸ್, ಕಮ್ಮಿ/ಹೆಚ್ಚು ರಕ್ತದೊತ್ತಡ, ಒಬೆಸೈಟಿಸ್ (ಬೊಜ್ಜುತನ) ಇತ್ಯಾದಿ ತೊಂದರೆ ಇಪ್ಪೋರಿಂಗೆ ತುಂಬಾ ದಿನದ ಉಪವಾಸವ ಕೊಡ್ತ ಕ್ರಮ ಇಲ್ಲೆ. ಹೆಚ್ಚಿರೆ ಎರಡು ಅಥವಾ ಮೂರು ದಿನ. ಕೆಲವು ಸರ್ತಿ ಒಂದು ದಿನದ್ದು. ಇದಕ್ಕೆ short term fasting ಹೇಳಿ ಹೇಳ್ತವು. ಒಂದು ತಿಂಗಳ ಚಿಕಿತ್ಸೆ ಇದ್ದರೆ..ಅವಕ್ಕೆ ಎರಡು ದಿನ ಹಸಿ ತರಕಾರಿ/ಹಣ್ಣು ಅಥವಾ ರಸಾಹಾರ ಕೊಡುದು.. ಮತ್ತೆ ಒಂದು ಅಥವಾ ಎರಡು ದಿನ ನೀರಿನೊಟ್ಟಿಂಗೆ ಉಪವಾಸ.. ಮತ್ತೆ ಎರಡು ದಿನ ರಸಾಹಾರ ಅಥವಾ ಹಸಿ…ಮತ್ತೆ ಉಪವಾಸ ಹೀಂಗೆ ಕೊಡ್ತದು ಪದ್ಧತಿ,ಹೀಂಗೇ ಒಂದು ತಿಂಗಳಿಂದ ಮೂರು ತಿಂಗಳಿನ ವರೇಗುದೇ ಮಾಡ್ಲಾವ್ತು. [ಹೀಂಗೆ ಬಿಟ್ಟು ಬಿಟ್ಟು ಮಾಡ್ತ ಉಪವಾಸಕ್ಕೆ intermittent fasting ಹೇಳ್ತವು]. ಇದರಿಂದಾಗಿ ಅವರ ದೈಹಿಕ ಸ್ಥಿತಿಲಿ ಏನೂ ತೊಂದರೆ ಆವ್ತಿಲ್ಲೆ. ಅಕಸ್ಮಾತ್ ಹಾಂಗೆಂತಾರು ಅಪ್ಪ ಸೂಚನೆ ಇದ್ದು ಹೇಳಿ ಆದರೆ ಕೂಡ್ಲೆ ಅವರ ಉಪವಾಸವ ನಿಲ್ಲುಸಿ ಅದಕ್ಕೆ ಬೇಕಾದ ಅರೀತಿಯ ಆಹಾರ ಚಿಕಿತ್ಸೆಯ ಕೊಡ್ತು.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ವೈದ್ಯರ ಸಲಹೆ ಮತ್ತೆ ಮೇಳ್ವಿಚಾರಣೆಲಿಯೇ ಮಾಡೆಕ್ಕು :)

  [Reply]

  VA:F [1.9.22_1171]
  Rating: 0 (from 0 votes)
  ಪುಟ್ಟಬಾವ°

  ಪುಟ್ಟಭಾವ ಹಾಲುಮಜಲು Reply:

  ವೈದ್ಯರ ಮೇಲ್ವಿಚಾರಣೆ ಮಾಡೆಕ್ಕೋ!! ?? 😀

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  😀

  [Reply]

  VA:F [1.9.22_1171]
  Rating: 0 (from 0 votes)
 6. ಗಣೇಶ ಮಾವ°

  ಬಹುಶ:ಏಕಾದಶಿ ಅಥವಾ ಸೋಮಾರ ಒಪ್ಪತ್ತು ಬಂದದು ಹೀಂಗೆ ಆದಿಕ್ಕು ಅಲ್ದಾ?ದೇವರ ನಾಮ ಹೇಳಿ ಆ ಮೂಲಕ ನವಗೆ ಉಪವಾಸ ಮಾಡಿ ಶರೀರ ರಕ್ಷಣೆಗೆ ಬೇಕಾದ ವೆವಸ್ಥೆಗಳ ಜಾರಿ ಮಾಡಿದ್ದು ನಮ್ಮ ಹೆರಿಯೋರ ಕಲ್ಪನೆ ಅದ್ಭುತ ಹೇಳಿ ಅನಿಸುತ್ತು…

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಖಂಡಿತಾ ಅಪ್ಪು :). ಆದರೆ ನಾವು ಏಕಾದಶಿ ಉಪವಾಸ ಹೇಳಿರೆ ಅಶನ ಒಂದು ಬಗೆ ಬಿಟ್ಟು ಮತ್ತೆಲ್ಲವನ್ನೂ ಹೊಟ್ಟೆ ತುಂಬಾ ತಿಂಬ ತಪ್ಪು ಪದ್ದತಿಯ ಅನುಸರ್ಸುತ್ತು !! ಇನ್ನು ಪಲಾರ ಹೇಳಿ ಮಾಡ್ತ ಕ್ರಮ ಇದ್ದಲ್ಲದ.. ಅದು “ಫಲಾಹಾರ” – ಹೇಳೀರೆ ಕೇವಲ ಫಲಂಗಳ ತಿಂಬದು ಹೇಳಿ.. ಆದರೆ ನಮ್ಮ ಪಲಾರಲ್ಲಿ ಐದಾರು ಗೋಧಿ ದೋಸೆಯೂ ಇರ್ತು, ನಾಲ್ಕು ಸೌಟು ಸಜ್ಜಿಗೆಯೂ ಇರ್ತು !! ಈ ರೀತಿಯ ಉಪವಾಸ/ಪಲಾರಂಗಳ ಆನು ಯಾವಾಗಳೂ ಪ್ರಶ್ನೆ ಮಾಡ್ತೆ ಮನೆಲಿ !! [ಅದಕ್ಕೆ ಬೈಗಳೂ ತಿಂದಿದೆ ] !! ಆದರೆ ಈಗ ಎನ್ನ ಮಾತಿನ ಒಪ್ಪುತ್ತವ್ವು !!
  ದೇವರ ಹೆಸರಿಲ್ಲಿ ಉಪವಾಸ ಮಾಡಿರೆ ಪುಣ್ಯವೂ ಸಿಕ್ಕುತ್ತು..ದೇವರ ಧ್ಯಾನ ಮಾಡಿಗೊಂಡಿಪ್ಪ ಕಾರಣ ಹಶು ಆದ್ದೂ ಗೊಂತಾವ್ತಿಲ್ಲೆ [ಅಷ್ಟು ಭಕ್ತಿಲಿ ಪಾಲನೆ ಮಾಡಿರೆ], ಆರೋಗ್ಯಕ್ಕೂ ಒಳ್ಳೆದು :)

  [Reply]

  ಗಣೇಶ ಮಾವ°

  ಗಣೇಶ ಮಾವ° Reply:

  ಬೊಜ್ಜು ಹೊಟ್ಟೆ ಕಮ್ಮಿ ಮಾಡ್ಲೆ ಇದೇರೀತಿ ಉಪಾಸ ಮಾಡಿರೆ ಸಾಕೋ?

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಉಪವಾಸದೊಟ್ಟಿಂಗೆ ಯೋಗಾಭ್ಯಾಸ/ವ್ಯಾಯಾಮ ಮಾಡಿರೆ ಒಳ್ಳೆದು :)

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಹಾಂಗಾರೆ ಉದಿಯಪ್ಪಗ ಎದ್ದು ಓಡೆಕ್ಕು ಹೇಳಿ ಇಲ್ಲೆ ಇನ್ನು.. ಆರೋ ಕೇಳಿದಾಂಗೆ ಆತಿದಾ ಹಾಂಗೆ ಹೇಳಿದ್ದು..

  VN:F [1.9.22_1171]
  Rating: 0 (from 0 votes)
  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಉಪವಾಸ ಹೇಳ್ತಕ್ಕೆ ದೇವರ ಸಮೀಪ ಇಪ್ಪದು ಹೇಳುವ ಅರ್ಥ ಇದ್ದು ಹೇಳುತ್ತು ಕೇಳಿದ್ದೆ.
  ಆದರೆ ಈಗ ಧಾರ್ಮಿಕ ಕಾರ್ಯಂಗಳ ಲೆಕ್ಕಲ್ಲಿ ಮಾಡ್ತ ಉಪವಾಸ ಹೇಳಿರೆ ಕೊಳೆ (ಅಕ್ಕಿಂದ ತಯಾರಾದ್ದು) ಆಗದ್ದ ತಿಂಡಿಯ ಹೊಟ್ಟೆ ತುಂಬಾ ತಿಂಬದು ಹೇಳಿ ಆಯಿದು. ಹೊಟ್ಟೆಗೆ ಎಂತದೂ ಕಮ್ಮಿ ಮಾಡದ್ದೆ ಮಾಡುವ ಉಪವಾಸ !!!. ಈ ರೀತಿಯ ಉಪವಾಸಕ್ಕೆ ಯಾವ ಅರ್ಥವೂ ಇಲ್ಲೆ.
  ಈ ಬಗ್ಗೆ ಒಂದು ಪದ್ಯ ನೆಂಪಾತು:
  ಆಚೇ ಮನೆ ಸುಬ್ಬಮ್ಮನಿಗೆ ಏಕಾದಶೀ ಉಪವಾಸ
  ಎಲ್ಲೋ ಸ್ವಲ್ಪ ತಿಂತಾರಷ್ಟೆ ಉಪ್ಪಿಟ್ಟು ಅವಲಕ್ಕಿ ಪಾಯ್ಸ
  ಉಪ್ಪಿಟ್ಟು ಅವಲಕ್ಕಿ ಪಾಯ್ಸ

  [Reply]

  ಪುಟ್ಟಬಾವ°

  ಪುಟ್ಟಭಾವ ಹಾಲುಮಜಲು Reply:

  ( ಉಪವಾಸ ಹೇಳ್ತಕ್ಕೆ ದೇವರ ಸಮೀಪ ಇಪ್ಪದು ಹೇಳುವ ಅರ್ಥ ಇದ್ದು ಹೇಳುತ್ತು ಕೇಳಿದ್ದೆ )

  ಜಾಸ್ತಿ ಉಪವಾಸ ಮಾಡಿರೆ, ಬೇಗ ದೇವರ ಹತ್ರೆ ಹೋಕಲ್ಲದ???! ಅಪ್ಪಚ್ಚಿ!!
  😀

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಅಪ್ಪು ಪುಟ್ಟ ಭಾವಾ
  ಯಾವುದಾದರೂ “ಅತೀ” ಆದರೆ ಒಳ್ಳೆದಲ್ಲ ಹೇಳುವದು ಅದಕ್ಕೆ ಅಲ್ಲದ.
  ಉಪವಾಸವೂದೆ ಒಂದು ಹದಾಕೆ, ವೈದ್ಯರುಗಳ ಸುಪರ್ದಿಲಿ ಹೋದರೆ ಒಳ್ಳೆದೇ ಅಕ್ಕಷ್ಟೆ.

  VA:F [1.9.22_1171]
  Rating: 0 (from 0 votes)
  ಸುವರ್ಣಿನೀ ಕೊಣಲೆ

  Suvarnini Konale Reply:

  ಉಪವಾಸ ಹೇಳಿರೆ ದೇವರ ಹತ್ತರೆ ಇಪ್ಪದು ಹೇಲಿ ಅರ್ಥ ಅಪ್ಪು. ಉಪ=ಸಮೀಪ , ವಾಸ=ಇಪ್ಪದು. ಆದರೆ ಈಗಾಣ ದಿನಂಗಳಲ್ಲಿ ಪಕ್ಕದ್ಮನೆ ಸುಬ್ಬಮ್ಮನ ಉಪವಾಸವೇ ಹೆಚ್ಚಿನವ್ವು ಮಾಡುದು 😉 . ಶಿವರಾತ್ರಿಗೆ ಜಾಗರಣೆ ಮಾಡುವ ಕೆಲವು ಜೆನ ಇದ್ದವು, ಯಾವುದಾರೂ ಸಿನೆಮಾ ನೋಡ್ತಾ ಜಾಗರಣೆ ಮಾಡ್ತವು !!

  VA:F [1.9.22_1171]
  Rating: 0 (from 0 votes)
  ಬೊಳುಂಬು ಮಾವ°

  ಗೋಪಾಲ ಮಾವ Reply:

  ಆಚೇ ಮನೆಯ ಸುಬ್ಬಮ್ಮನಿಗೆ ಏಕಾದಶಿ ಉಪವಾಸ, ಪದ್ಯ ನೆಂಪಾತು.

  [Reply]

  VA:F [1.9.22_1171]
  Rating: 0 (from 0 votes)
 7. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಸುವರ್ಣಿನಿ ಡಾಗುಟ್ರಕ್ಕ°, ನಮ್ಮ ಸರಕಾರಕ್ಕೆ ಪ್ರಾಥಮಿಕ ಶಾಲೆಯ ಮಕ್ಕಳ ಬಗ್ಗೆ ಅಸಡ್ಡೆ ಇಲ್ಲೆ. ಈಗಾಣ ಸರಕಾರೀ ಶಾಲೆಲಿ ಸಿಕ್ಕುವ ಶಿಕ್ಷಣ ಯಾವ ಖಾಸಗಿ ಶಾಲೆಲೂ ಇಲ್ಲೆ. ಈಗ ಮೂರನೇ ಕ್ಲಾಸಿನ್ಗೆ ವರೆಗೆದೆ ‘ನಲಿ-ಕಲಿ’ ಯೋಜನೆ ಇದ್ದು… ತುಂಬಾ ಚೆಂದದ ಯೋಜನೆ ಸರಕಾರದ್ದು. ನಿಂಗೊ ಯಾವ ಸರಕಾರೀ ಟೀಚರ್ ಗಳ ಹತ್ತರೆ ಮಾಹಿತಿ ಪಡಕ್ಕೊಂಬಲೆ ಅಕ್ಕು. ಅದರಲ್ಲಿ ಮಕ್ಕ ಟೀಚರುಗಳ ಸಹಾಯಲ್ಲಿ ಕಲಿವದು. ಪ್ರತಿ ಮಗುವಿಂಗೂ ಪ್ರತ್ಯೇಕ ಗಮನ ಕೊಡ್ಲೆ ಆವುತ್ತು ಟೀಚರುಗೊಕ್ಕೆ !! ಎಂಗಳ ಮಕ್ಕ ಸರಕಾರೀ ಶಾಲೆಲಿದೆ, ಅನುದಾನಿತ ಶಾಲೆಲಿದೆ ಓದುತ್ತಾ ಇಪ್ಪದು.. ಹಾಂಗಾಗಿ ಎನಗೆ ಎರಡರ ಬಗ್ಗೆದೆ ಗೊಂತಿದ್ದು.. ಸರಕಾರ ಮಕ್ಕೊಗೆ ಬೇಕಾಗಿ ಸುಮಾರು ಯೋಜನೆಗಳ ರೂಪಿಸಿದ್ದು. ಆದರೆ ಅದರ ಬಗ್ಗೆ ಜನಂಗೊಕ್ಕೆ ಮಾಹಿತಿ ಇಲ್ಲೆ ಅಷ್ಟೇ!!!!
  ಇರಲಿ.., ನಿಂಗಳ ಶುದ್ದಿ ಉಪವಾಸ ಚಿಕಿತ್ಸೆಯ ಬಗ್ಗೆ ಲಾಯಕಾಯಿದು. ಇದರ ಆನು ಅನುಭವಿಸಿ ನೋಡಿದ್ದೆ ಶಾಂತಿವನಲ್ಲಿ. ತುಂಬಾ ಹಿತಕಾರಿ. ನಾವು ವಾಹನಂಗಳ ಸರ್ವಿಸಿಂಗೆ ಮಡುಗುತ್ತು ಎಂತಕ್ಕೆ ಹೇಳಿದರೆ ಅದು ಬಾಳಿಕೆ ಬರೆಕ್ಕು ಹೇಳಿ. ಹಾಂಗೆ ನಮ್ಮ ಶರೀರಕ್ಕೂ ಸರ್ವಿಸ್ ಬೇಕಾವುತ್ತು.. ಅದು ಡಾಗುಟ್ರಕ್ಕ° ಹೇಳಿದ ಹಾಂಗೆ ಮಾಡಿದರೆ ಅಕ್ಕಷ್ಟೇ!!! ನಮ್ಮ ಶರೀರದೆ ಬಾಳಿಕೆ ಬಕ್ಕು. ಅಲ್ಲದಾ ಡಾಗುಟ್ರಕ್ಕ°?

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಶ್ರೀ ಅಕ್ಕಾ
  ನಿಂಗ ಸರಕಾರಿ ಶಾಲೆಯ ಬಗ್ಗೆ ಹೇಳಿದ್ದು ಸರಿ.. ಆದರೆ ನಮ್ಮ ಕೇಂದ್ರ ಸರಕಾರ ಇನ್ನು ಹತ್ತನೇ ತರಗತಿವರೆಂಗೆ ಪರೀಕ್ಶೆ ಬೇಡ ಹೇಳ್ತಾ ಕಾನೂನು ತಪ್ಪ ಅಂದಾಜಿಲಿ ಇದ್ದು, ಮುಂದೆ ಎಂತಕ್ಕೋ?

  [Reply]

  VN:F [1.9.22_1171]
  Rating: 0 (from 0 votes)
  ಸುವರ್ಣಿನೀ ಕೊಣಲೆ

  Suvarnini Konale Reply:

  ಸರಕಾರಿ ಶಾಲೆಯ ಬಗ್ಗೆ ಎನಗೆ ಹೆಚ್ಚು ಗೊಂತಿಲ್ಲೆ. ಕಾರಣ:ಸರಕಾರಿ ಶಾಲೆಗೆ ಹೋಪವ್ವೇ ಇಲ್ಲೆ !! ಎನಗನ್ಸುತ್ತು, ಪ್ರಾಥಮಿಕ ಶಾಲೆಯ ಶಿಕ್ಷಕರಿಂಗೆ () ಹೆಚ್ಚಿಗೆ ಇರೆಕು, ಒಟ್ಟಿಂಗೇ ಅವಕ್ಕೆ ಮಕ್ಕಳ ಮಾನಸಿಕ ಬೆಳವಣಿಗೆ, ಸಮಸ್ಯೆಗಳ ಬಗ್ಗೆಯೂ ತಿಳುವಳಿಕೆ ಅಗತ್ಯ ಹೇಳಿ. ಆರು ಬೇಕಾರೂ ಶಿಕ್ಷರ ಹುದ್ದೆಗೆ ಸೇರ್ಲಕ್ಕು ಹೇಳಿ ಇದ್ದರೆ ಮುಂದೊಂದು ದಿನ ಮಕ್ಕೊ ಎಲ್ಲ ರೋಬೋಟ್ ಗಳ ಹಾಂಗೆ ಅಕ್ಕು !! ಎನ್ನ ವಿದ್ಯಾರ್ಥಿಗೊ, ಈಗಷ್ಟೇ ಪಿಯುಸಿ ಮುಗುಶಿ ಬಂದವಕ್ಕೆ ಅವರಷ್ಟಕ್ಕೇ ಓದುದು ಹೇಂಗೆ ಹೇಳಿಯೇ ಗೊಂತಿಲ್ಲೆ !! ಪರೀಕ್ಷೆ ಪಾಸಪ್ಪದು ಮಾಂತ್ರ ಮುಖ್ಯ ಹೇಳಿ ಅವರ ಅಭಿಪ್ರಾಯ !! ಅವ್ರ ಬೆಳಶುದೇ ಹಾಂಗೆ !! ನಾಳಂಗೆ ವೈದ್ಯರಪ್ಪೋರು ಪರೀಕ್ಷೆ ಪಾಸಾದರೆ ಸಾಕ???? :( ಈ ಕೆಲವು ವಿಷಯಂಗಳ ದಿನಾಗ್ಲೂ ಆಲೋಚನೆ ಮಾಡಿ ಮಾಡೀ…ಎನ್ನ ಅಸಹಾಯಕತೆಗೆ ಆನೇ ಬೇಜಾರು ಮಾಡಿಗೊಳ್ತೆ :(

  [Reply]

  VA:F [1.9.22_1171]
  Rating: +1 (from 1 vote)
  ಸುವರ್ಣಿನೀ ಕೊಣಲೆ

  Suvarnini Konale Reply:

  ನಾವು “ನಾವು” ಹೇಳುದು ಇರೆಕ್ಕಾರೆ..ಎಂತಾರು ಮಾಡೆಕ್ಕಾರೆ..ಮುಖ್ಯ ದೇಹವೇ ಅಲ್ಲದಾ? ಹಾಂಗಾಗಿ ಶರೀರವ ಲಾಯ್ಕಲ್ಲಿ ನೋಡಿಗೊಂಬದು ನಮ್ಮ ಕರ್ತವ್ಯವೇ !!

  [Reply]

  ಗಣೇಶ ಪೆರ್ವ

  Ganesha Perva Reply:

  shareeramadyam khalu dharmasaadhanam?

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಅಪ್ಪು :)

  VA:F [1.9.22_1171]
  Rating: 0 (from 0 votes)
 8. ಗೋಪಾಲಣ್ಣ
  Gopalakrishna BHAT S.K.

  A good article.I had fasting treatment in SDM hospital of naturopathy,Pareeka,Parkala.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  oh…good :)
  ನಿಂಗೊ ಯಾವಗ ಅಲ್ಲಿ ತೆಕ್ಕೊಂಡದು? ಯಾವ ವರ್ಷ/ತಿಂಗಳು?

  [Reply]

  VA:F [1.9.22_1171]
  Rating: 0 (from 0 votes)
 9. ಗೋಪಾಲಣ್ಣ
  Gopalakrishna BHAT S.K.

  I took the treatment twice,i.e.,Jan2008&Feb2009 both times a week each.It was a good experience.My weight reduced by 5kg.We have to control intake of food AFTER COMING HOME which I am doing but not very rigidly. ILLADE HODARE NAYIBALAVA NALIGELI HAKIDA HANGE AKKASHTE.

  [Reply]

  VA:F [1.9.22_1171]
  Rating: 0 (from 0 votes)
 10. Kesh
  Keshavchandra Bhatt Kekanaje

  Thank you very much Doc

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ಎರುಂಬು ಅಪ್ಪಚ್ಚಿವೇಣಿಯಕ್ಕ°ಡಾಮಹೇಶಣ್ಣವಾಣಿ ಚಿಕ್ಕಮ್ಮಶ್ರೀಅಕ್ಕ°ಉಡುಪುಮೂಲೆ ಅಪ್ಪಚ್ಚಿಹಳೆಮನೆ ಅಣ್ಣಪ್ರಕಾಶಪ್ಪಚ್ಚಿಪಟಿಕಲ್ಲಪ್ಪಚ್ಚಿಸುಭಗಡೈಮಂಡು ಭಾವವಿಜಯತ್ತೆvreddhiಶುದ್ದಿಕ್ಕಾರ°ಅಕ್ಷರ°ಯೇನಂಕೂಡ್ಳು ಅಣ್ಣಬಟ್ಟಮಾವ°ಸಂಪಾದಕ°ವಸಂತರಾಜ್ ಹಳೆಮನೆಅನುಶ್ರೀ ಬಂಡಾಡಿಅನು ಉಡುಪುಮೂಲೆದೊಡ್ಮನೆ ಭಾವಅಕ್ಷರದಣ್ಣಚೂರಿಬೈಲು ದೀಪಕ್ಕದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ