ಕ್ಲಸ್ಟರ್ ತಲೆಬೇನೆ [Cluster headache]

February 13, 2011 ರ 5:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸುಮಾರು ತಲೆಬೆಶಿಗಳ ನಡುವೆಯೂ ಕೂಡ ತಲೆಬೇನೆಯ ನಾಲ್ಕನೆಯ ಭಾಗಕ್ಕೆ ಬಂತು ನಾವು. ಇನ್ನೊಂದು ವಿಷೇಶ ಎಂತರ ಹೇಳಿರೆ ಒಪ್ಪಣ್ಣನ ಬೈಲಿಲ್ಲಿ ಇದು ಆನು ಆರೋಗ್ಯದ ಬಗ್ಗೆ ಬರೆತ್ತಾ ಇಪ್ಪ ಇಪ್ಪತ್ತೈದನೆಯ ಶುದ್ದಿ :) . ಸಂತೋಷದ ವಿಷಯ. ನಮ್ಮ ಸಂಬಂಧ ಹೀಂಗೇ ಇರಲಿ, ಶುದ್ದಿಗಳ ಹಂಚಿಗೊಂಡು ಜ್ಞಾನವ ಹೆಚ್ಚು ಮಾಡಿಗೊಂಬ :).

ಹೆಚ್ಚು ಮಾತಾಡದ್ದೆ ಇನ್ನೊಂದು ರೀತಿಯ ತಲೆಬೇನೆಯ ಬಗ್ಗೆ ತಿಳ್ಕೊಂಬ, ಆಗದಾ?

ಇಂದು ನಾವು ಮಾತಾಡುದು ಕ್ಲಸ್ಟರ್ ತಲೆಬೇನೆ ಅಥವಾ ಮೈಗ್ರೇನಸ್ ನ್ಯೂರಾಲ್ಜಿಯಾ’[Cluster headache / Migrainous neuralgia] ಹೇಳ್ತ ಸಮಸ್ಯೆಯ ಬಗ್ಗೆ [ಇದಕ್ಕೆ ಸರಿಯಾದ ಕನ್ನಡದ ಶಬ್ದ ಸಿಕ್ಕಿತ್ತಿಲ್ಲೆ]. ಈ ತಲೆಬೇನೆ ಮೈಗ್ರೇನಿನ ಹಾಂಗೆ ಇದ್ದರೂ ಕೂಡ ಇದು ಅದಕ್ಕಿಂತ ತುಂಬಾ ಬೇರೆ ರೀತಿಯ ಸಮಸ್ಯೆ. ಇದು ಮೈಗ್ರೇನಿಂದ 10-15 ಪಟ್ಟು ಕಮ್ಮಿ ಸಾಮಾನ್ಯವಾದ ಸಮಸ್ಯೆ. ಅಲ್ಲದ್ದೆ ಗಂಡಸರಲ್ಲಿ ಹೆಮ್ಮಕ್ಕಳಿಂದ ಐದು ಪಟ್ಟು ಹೆಚ್ಚಿಗೆ ಕಂಡು ಬತ್ತು. ಹೆಚ್ಚಾಗಿ ಪ್ರಾಯ 30 ವರ್ಷ ಕಳುದಮೇಲೆ ಶುರು ಅಪ್ಪದು. ಈ ತೊಂದರೆಯ ಬಗ್ಗೆ ರಜ್ಜ ಹೆಚ್ಚು ತಿಳ್ಕೊಂಬ ಈಗ.

ಲಕ್ಷಣಂಗೊ:

 • ಸಾಮಯಿಕವಾಗಿ ಬಪ್ಪ, ಒಂದು ಹೊಡೆಯಾಣ ಕಣ್ಣಿನ ಒಳಾಣ ಭಾಗಲ್ಲಿ ಅಪ್ಪಂತಹ ಉಗ್ರ ತಲೆಬೇನೆ. [periodic, severe, unilateral periorbital headache]
 • ಬೇನೆ ಕೊರಳಿನವರೆಗೂ ಹಬ್ಬುವ ಸಾಧ್ಯತೆಗೊ ಇದ್ದು.
 • ಬೇನೆ ಅಪ್ಪ ಹೊಡೆಯಾಣ ಕಣ್ಣಿಂದ ನೀರು ಬಪ್ಪದು [unilateral lacrimation]
 • ಮೂಗು ಕಟ್ಟಿದ ಅನುಭವ [nasal congestion]
 • ಕಣ್ಣಿನ ಬೆಳಿ ಭಾಗ ಕೆಂಪು ಅಪ್ಪದು, ಪೂರ ಅಥವಾ ರಜ್ಜ ಭಾಗ. [conjunctival injection]
 • ಮೂಗಿಂದ ನೀರಿಳಿವದು [rhinorrhoea ]
 • ಮೇಗಾಣ ಕಣ್ರೆಪ್ಪೆ ಶಕ್ತಿ ಇಲ್ಲದ್ದೆ ಕುಸಿವದು [ptosis]
 • ತಲೆಬೇನೆಯ ತೀವ್ರತೆ ತುಂಬಾ ಇದ್ದರೂ ಕೂಡ ಅದು ಇಪ್ಪ ಸಮಯ ಕಮ್ಮಿ, ಅರ್ಧ ಗಂಟೆಂದ ಮೂರು ಗಂಟೆ ಹೊತ್ತು ಇರ್ತು.
 • ಇದು ಹೆಚ್ಚಾಗಿ ದಿನದ ಒಂದೇ ಸಮಯಲ್ಲಿ ಬಪ್ಪದು [ಸಾಮಾನ್ಯವಾಗಿ ಉದಿಯಪ್ಪಗ]
 • ಇದು ಕೆಲವು ವಾರಗಳ ಕಾಲ ಅಂಬಗಂಬಗ ಬಂದುಗೊಂಡಿದ್ದು, ಮತ್ತೆ ಕೆಲವು ತಿಂಗಳುಗಳ ಸಮಯ ಯಾವುದೇ ತೊಂದರೆ ಕೊಡದ್ದೆ ಇಕ್ಕು.
 • ಕೆಲವು ಸರ್ತಿ ಒಂದು ಹೊಡೆಲಿ ಅಪ್ಪ ತಲೆಬೇನೆ ಇನ್ನೊಂದು ಹೊಡೇಂಗೆ ಹೋಪ ಸಾಧ್ಯತೆ ಇದ್ದು, ಇನ್ನು ಕೆಲವು ಸರ್ತಿ ಒಂದು ಹೊಡೇಲಿ ಮಾಂತ್ರ ಇಪ್ಪ ಬೇನೆ ಎರಡೂ ಹೊಡೇಂಗೆ ಹಬ್ಬುವ ಸಾಧ್ಯತೆಗಳೂ ಇರ್ತು.
ಕ್ಲಸ್ಟರ್ ತಲೆಬೇನೆಯ ಕೆಲವು ಲಕ್ಷಣಂಗೊ: ಮೇಗಾಣ ಕಣ್ರೆಪ್ಪೆ ಶಕ್ತಿಗುಂದುದು, ಕಣ್ಣೀರು ಬಪ್ಪದು ಮತ್ತೆ ಮೂಗಿಲ್ಲಿ ನೀರು ಸುರಿವದು.

ಕಾರಣ:

 • ಸರಿಯಾದ ಕಾರಣ ಎಂತರ ಹೇಳಿ ಇನ್ನುದೇ ತಿಳುದು ಬೈಂದಿಲ್ಲೆ.
 • ಸಂಶೋಧಕರು ಇದರ ರಕ್ತನಾಳದ ಸಮಸ್ಯೆಂದ ಬಪ್ಪ ತಲೆಬೇನೆ ಹೇಳಿಯೂ ಹೇಳ್ತವು, ಇದರ್ಲಿ ಕೆಲವು ರಕ್ತನಾಳಂಗೊ ಬೀಗಿ ಅದು ಕೆಲವು ನರಂಗಳ ಮೇಲೆ ಒತ್ತಡ ಹಾಕುವ ಕಾರಣಂದಾಗಿ ಬತ್ತು ಹೇಳ್ತವು.
 • ಹೈಪೋತಲಾಮಸ್ ಹೇಳ್ತ ಗ್ರಂಥಿಲಿ ಇಪ್ಪ ತೊಂದರೆಂದಲೂ ಕೂಡ ಈ ತಲೆಬೇನೆ ಬತ್ತಡ.
 • ಅನುವಂಶೀಯತೆಯೂ ಒಂದು ಕಾರಣ, ಹತ್ತರಾಣ ರಕ್ತ ಸಂಬಂಧಿಗೊಕ್ಕೆ ಬಪ್ಪ ಸಾಧ್ಯತೆ ಇದ್ದು.
 • ಇದಲ್ಲದ್ದೆ ಸಿಗರೇಟು ಎಳವ ಅಭ್ಯಾಸ ಇದ್ದರೆ ಕೂಡ ಈ ರೀತಿಯ ತಲೆಬೇನೆ ಬತ್ತು ಹೇಳಿ ಅಧ್ಯಯನಂಗೊ ಹೇಳ್ತು.
 • ಹೆಚ್ಚು ಮದ್ಯಪಾನ ಮಡ್ತೋರಿಂಗೂ ಬಪ್ಪ ಸಾಧ್ಯತೆಗೊ ಇದ್ದಡ.

ಪರಿಹಾರ:

 • ತಡವಲೆ ಸಾಧ್ಯ ಆಗದ್ದ ಬೇನೆಗೆ ಕೆಲವು ಇಂಜೆಕ್ಷನ್ ಕೊಡ್ತ ಕ್ರಮ ಇದ್ದು, ಇದಲ್ಲದ್ದೆ ಕೆಲವು ಮದ್ದುಗಳ ಕೆಲವು ಸಮಯ ತೆಕ್ಕೊಳ್ಳೆಕು.
 • ಶುದ್ಧ ಆಮ್ಲಜನಕವ ಉಸಿರಾಡುಲೆ ಕೊಡುದು ಕೂಡ ಇದರ ಚಿಕಿತ್ಸೆಯ ಭಾಗ.
 • ಯೋಗ ಚಿಕಿತ್ಸೆ ಇದಕ್ಕೆ ತುಂಬಾ ಪರಿಣಾಮಕಾರಿ ಚಿಕಿತ್ಸೆ.
 • ಆರೋಗ್ಯಕರ ಜೀವನಶೈಲಿಯ ಅಳವಡಿಸಿಗೊಂಬದು ಈ ಸಮಸ್ಯೆಯ ತಡವಲೆ ಮತ್ತೆ ಗುಣ ಮಾಡ್ಲೆ ಅಗತ್ಯ.
 • ಇದಲ್ಲದ್ದೆ ಆಕ್ಯುಪಂಕ್ಚರ್, ಉಪವಾಸ ಚಿಕಿತ್ಸೆ, ಜಲಚಿಕಿತ್ಸೆಗೊ ಲಕ್ಷಣಂಗಳ ಗುಣ ಮಾಡ್ಲೆ ಸಹಾಯ ಮಾಡ್ತು.
 • ಬೇರೆ ಯಾವುದಾದರೂ ಪರಿಹಾರದ ಬಗ್ಗೆ ಗೊಂತಿದ್ದರೆ ಬೈಲಿಲ್ಲಿ ತಿಳುಶಿ :)

ಹೀಂಗೆ ನಾವು ತಲೆಬೇನೆಯ ಬಗ್ಗೆ ನಾಲ್ಕು ಕಂತುಗಳ ಮುಗುಶಿತ್ತು, ಇನ್ನೂ ಕೆಲವು ಕಂತುಗಳಲ್ಲಿ ತಲೆಬೇನೆಯ ಬಗ್ಗೆಯೇ ಮಾತಾಡುವ. ತಲೆಬೇನೆ ಹೇಳ್ತದು ಕಾಂಬಲೆ ಸಣ್ಣದಾಗಿ ಕಂಡರೂ ಅದರ ಕಾರಣಂಗೊ, ಅದರಿಂದ ಉಂಟಪ್ಪ ತೊಂದರೆಗೊ ತುಂಬಾ ಇದ್ದು. ಇದರ ಎಲ್ಲ ನಾವು ರಜ್ಜ ರಜ್ಜ ತಿಳ್ಕೊಂಡರೂ ಕೂಡ ಹಲವು ಅಪಾಯಂಗಳ ತಪ್ಸುಲಕ್ಕು. ಇನ್ನಾಣ ವಾರದ ತಲೆಬೇನೆ ಬಪ್ಪನ್ನಾರ ಎಲ್ಲೋರೂ ಯಾವುದೇ ತಲೆಬೇನೆ ಇಲ್ಲದ್ದೆ . ತಲೆಬೆಶಿ ಇಲ್ಲದ್ದೆ ಇರಿ ಹೇಳಿ ಹಾರೈಸುತ್ತೆ :) .

-ನಿಂಗಳ

ಸುವರ್ಣಿನೀ ಕೊಣಲೆ

ಕ್ಲಸ್ಟರ್ ತಲೆಬೇನೆ [Cluster headache], 4.7 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ

  (ಒಪ್ಪಣ್ಣನ ಬೈಲಿಲ್ಲಿ ಇದು ಆನು ಆರೋಗ್ಯದ ಬಗ್ಗೆ ಬರೆತ್ತಾ ಇಪ್ಪ ಇಪ್ಪತ್ತೈದನೆಯ ಶುದ್ದಿ )
  ಬೆಳ್ಳಿ ಹಬ್ಬದ ಶುಭಾಶಯ೦ಗೊ.. :-)
  ತಲೆಬೇನೆ ಹೇಳಿರೆ ಇಷ್ಟು ಗ೦ಭೀರ ವಿಶಯ ಹೇಳಿ ಗೊ೦ತಿತ್ತಿಲ್ಲೆ. ಎ೦ತೆ೦ಥದೋ ರೋಗ೦ಗೊಕ್ಕೆ ಕಾರಣವುದೆ ಮದ್ದುದೆ ಕ೦ಡುಹಿಡುದರುದೆ, ತಲೆಬೇನೆಯ ಕೆಲವು ಪ್ರಭೇದ೦ಗೊಕ್ಕೆ ಇನ್ನುದೆ ಕಾರಣ ಹಿಡಿವಲೆಡಿಗಾಯಿದಿಲ್ಲೆ ಹೇಳಿರೆ ಇದರ ಗ೦ಭೀರತೆ ಗೊ೦ತಾವ್ತು ಅಲ್ಲದೊ?
  ಈ ವಿಷಯಲ್ಲಿ ಹೆಚ್ಚು ಹೆಚ್ಚು ತಿಳುವಳಿಕೆ ಕೊಡ್ತ ಪ್ರಯತ್ನಕ್ಕೆ ಅಭಿನ೦ದನೆಗೊ.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಧನ್ಯವಾದಂಗೊ :)
  ಹೀಂಗೇ..ಕಾರಣ ತಿಳಿಯದ್ದ ಹಲವು ಸಮಸ್ಯೆಗೊ ಇದ್ದು. ನವಗೆ ಗೊಂತಿಪ್ಪ ವಿಚಾರಂಗೊ ತುಂಬಾ ಕಮ್ಮಿ….

  [Reply]

  VA:F [1.9.22_1171]
  Rating: 0 (from 0 votes)

  ಪೆಂಗಣ್ಣ° Reply:

  {ಬೆಳ್ಳಿ ಹಬ್ಬದ ಶುಭಾಶಯ೦ಗೊ.}
  ಬೆಳ್ಳಿ ಬರಹ ಆಯೆಕ್ಕೋ ಕಾಣ್ತು ಗಣೇಶಣ್ಣಾ..

  ಅಕ್ಕೋ
  ಶುದ್ದಿ ಲಾಯ್ಕಾಯಿದು ಆತೋ..

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°

  ಡಾಗುಟ್ರಕ್ಕೋ.., ಈ ತಲೆಬೇನೆಯೂ ಸುಮಾರು ಜೆನಕ್ಕೆ ಪ್ರಾಣ ತಿಂಬಷ್ಟು ಬೇನೆ ಕೊಡ್ತು. ಕಣ್ಣಿನ ಹಿಂದಾಚಿ ಅಪ್ಪ ಬೇನೆಲಿ ಕಣ್ಣು ದಪ್ಪ ಆಯಿದೋ ಹೇಳುವಷ್ಟರ ಮಟ್ಟಿಂಗೆ ಬೇನೆ ಆವುತ್ತು. ಕಣ್ಣು ಒಡವಲೇ ಎಡಿತ್ತಿಲ್ಲೆ ಹೇಳಿಯೂ ಅನಿಸಿದ ಹಾಂಗೆ ಆವುತ್ತು.
  ಕ್ಲಸ್ಟರ್ ತಲೆ ಬೇನೆಯ ವಿವರಣೆ, ಪರಿಹಾರ ಲಾಯ್ಕಲ್ಲಿ ಕೊಟ್ಟಿದಿ. ಧನ್ಯವಾದಂಗೊ.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಧನ್ಯವಾದಂಗೊ…

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಡಾಗುಟ್ರಕ್ಕಾ,ವಿಧವಿಧದ ತಲೆಬೇನೆಗಳ ಮಾಹಿತಿ ಕೊಟ್ಟು ಬೈಲಿನ ಜೆನರ ತಲೆಬೆಶಿ ಕಮ್ಮಿ ಮಾಡಿದ್ದಕ್ಕೆ ಧನ್ಯವಾದ.ಒಳ್ಳೆಯ ಲೇಖನ.

  [Reply]

  VA:F [1.9.22_1171]
  Rating: 0 (from 0 votes)
 4. ಬೋಸ ಬಾವ
  ಬೋಸ...

  ಅಯ್ಯೊ.. ಅ ಪಟಲಿಪ್ಪದು ಆರು ಒಪ್ಪಕುಂಞಿ ಯಾ??? 😉
  ಐಸ್ಕೀಮು ತಿನ್ನೆಡಾ ಹೇಳಿರೆ ಕೇಳ.. 😛

  [Reply]

  VN:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  [ಆರೋಗ್ಯದ ಬಗ್ಗೆ ಬರೆತ್ತಾ ಇಪ್ಪ ಇಪ್ಪತ್ತೈದನೆಯ ಶುದ್ದಿ]
  ಬಯಲಿನವಕ್ಕೆ ಆರೋಗ್ಯದ ಮಾಹಿತಿ ಕೊಟ್ಟು ೨೫ ನೆ ಶುದ್ದಿ ಆವ್ತ ಈ ಸಂದರ್ಭಲ್ಲಿ, ಇನ್ನು ಮುಂದೆಯೂ ಇದೇ ರೀತಿ ಲೇಖನಂಗೊ ಬರಲಿ ಹೇಳಿ ಹಾರೈಸುತ್ತೆ.
  ತಲೆ ಬೇನೆ ಹೇಳ್ತ ಒಂದು ಅವಸ್ಥೆಗೆ, ಎಷ್ಟು ಮುಖಂಗೊ ಇದ್ದು ಹೇಳಿ ಒಂದೊಂದಾಗಿ ವಿವರ ಕೊಡ್ತಾ ಇಪ್ಪದು ತುಂಬಾ informative ಆಗಿ ಇದ್ದು
  ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  “# ಇದಲ್ಲದ್ದೆ ಆಕ್ಯುಪಂಕ್ಚರ್, ಉಪವಾಸ ಚಿಕಿತ್ಸೆ, ಜಲಚಿಕಿತ್ಸೆಗೊ ಲಕ್ಷಣಂಗಳ ಗುಣ ಮಾಡ್ಲೆ ಸಹಾಯ ಮಾಡ್ತು.”
  ಇದರಿಂದ ಪೂರ್ತಿ ಗುಣ ಆಗದೋ?
  ಒಳ್ಳೇ ವಿವರಣೆ.
  ಆಧುನಿಕ ವಿಜ್ಞಾನವ ಕನ್ನಡಲ್ಲಿ ವಿವರುಸುವ ಪ್ರಯತ್ನ ಲಾಯಕಿದ್ದು, ಮುಂದರಿಯಲಿ. ಇಪ್ಪತ್ತೈದು ಐವತ್ತಾಗಲಿ, ಅಭಿನಂದನೆಗೊ.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಸಂಪೂರ್ಣ ಗುಣ ಅಕ್ಕು. ಆದರೇ ಆಗಿಯೇ ಆವ್ತು ಹೇಳಿ ಹೇಳ್ತಿಲ್ಲೆ. ಇದರ ಮೂಲ ಕಾರಣ ಸರಿಯಾಗಿ ಗೊಂತಿಲ್ಲದ್ದ ಕಾರಣ ಚಿಕಿತ್ಸೆಯ ಬಗ್ಗೆ ಹೇಳುವಗ confirm ಆಗಿ ಹೇಳುದು ಕಷ್ಟ. ಆದರೆ ಈ ಚಿಕಿತ್ಸೆಗೊ ತುಂಬ ಪರಿಣಾಮಕಾರಿ.
  ಧನ್ಯವಾದ :)

  [Reply]

  VA:F [1.9.22_1171]
  Rating: 0 (from 0 votes)
 7. ಗೋಪಾಲಣ್ಣ
  Gopalakrishna BHAT S.K.

  ಕ್ಲಸ್ಟರ್ ತಲೆ ಬೇನೆ ಕ್ಲಸ್ಟರ್ ಬೋಂಬಿನ ಹಾಂಗೆ ಭಯಂಕರ.
  ವಿವರಣೆ ಕೊಟ್ಟದಕ್ಕೆ ಧನ್ಯವಾದ.
  ಎನ್ನ ತಲೆಬೇನೆಯೇ ಹೆಚ್ಚಿನದು ಹೇಳುತ್ತವರ ತಲೆಗೆ ಬಡಿವ ಹಾಂಗೆ,ತಟ್ಟುತ್ತ ಹಾಂಗೆ ಇದ್ದು ಈ ಲೇಖನ.

  [Reply]

  VA:F [1.9.22_1171]
  Rating: 0 (from 0 votes)
 8. Kesh
  Keshavchandra Bhatt Kekanaje

  Tks Dr for info

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  yo welcome,
  ಅಣ್ಣ, ನಿಂಗೊ ಬೈಲಿಂಗೆ ಹೊಸಬರೋ?

  [Reply]

  Kesh

  Keshavchandra Bhatt Reply:

  Yes Dr. Me working as a Subsea Engineer (Deep Sea Diving)

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಸಂತೋಷ :) ನಿಂಗಳ ಅನುಭವಂಗಳ ಬೈಲಿನೋರೊಟ್ಟಿಂಗೆ ಹಂಚಿಗೊಳ್ಳಿ ….ಸಾಧ್ಯ ಆದರೆ.
  ಬೈಲಿಂಗೆ ಸ್ವಾಗತ .. :)

  VA:F [1.9.22_1171]
  Rating: 0 (from 0 votes)
 9. ಬೊಳುಂಬು ಮಾವ°
  ಬೊಳುಂಬು ಮಾವ

  ತಲೆ ಬೇನೆಯ ನಾಲ್ಕನೇ ಕಂತು, ಸುವರ್ಣಿನಿಯ ೨೫ನೇ ಲೇಖನ ಓದಿದೆ. ಒಳ್ಳೆ ವಿಚಾರಂಗಳ ತಿಳುಸಿ ಕೊಟ್ಟಿದು. ಇಪ್ಪತ್ತೈದು ಐವತ್ತಾಗಿ, ಐವತ್ತು ನೂರಾಗಲಿ, ನೂರು ಸಾವಿರ ಆಗಲಿ. ಶುಭಾಶಯಂಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವವಾಣಿ ಚಿಕ್ಕಮ್ಮಶಾ...ರೀದೀಪಿಕಾಶ್ಯಾಮಣ್ಣಜಯಗೌರಿ ಅಕ್ಕ°ಕೆದೂರು ಡಾಕ್ಟ್ರುಬಾವ°ಅಜ್ಜಕಾನ ಭಾವಡೈಮಂಡು ಭಾವಉಡುಪುಮೂಲೆ ಅಪ್ಪಚ್ಚಿಡಾಮಹೇಶಣ್ಣಬೊಳುಂಬು ಮಾವ°ಪೆಂಗಣ್ಣ°ಶರ್ಮಪ್ಪಚ್ಚಿಅಕ್ಷರದಣ್ಣಕೊಳಚ್ಚಿಪ್ಪು ಬಾವಅನುಶ್ರೀ ಬಂಡಾಡಿಸುವರ್ಣಿನೀ ಕೊಣಲೆಅಕ್ಷರ°ಮಾಲಕ್ಕ°ದೊಡ್ಡಭಾವನೆಗೆಗಾರ°ಸುಭಗಒಪ್ಪಕ್ಕಕೇಜಿಮಾವ°ಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ