ಗರ್ಭಪಾತ

March 6, 2011 ರ 11:58 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಗ ಪರೀಕ್ಷೆ ಶುರು ಅಪ್ಪ ಸಮಯ ಅದರೊಟ್ಟಿಂಗೆ ವರ್ಲ್ಡ್ ಕಪ್ ಕ್ರಿಕೆಟ್ ನ ಅಬ್ಬರ. ಅದೂ ಅಲ್ಲದ್ದೆ ಈ ಸರ್ತಿ ಭಾರತಲ್ಲಿಯೇ ನಡೆತ್ತಾ ಇದ್ದದ. ಪರೀಕ್ಷೆಗೆ ಓದುದೋ ಅಲ್ಲ ಕ್ರಿಕೆಟ್ ನೋಡುದಾ ಹೇಳಿ ಮಂಡೆಬೆಚ್ಚ ಆಯ್ದು ಸುಮಾರು ಜೆನಕ್ಕೆ ! ಪರೀಕ್ಷೆ ಇನ್ನಾರುತಿಂಗಳು ಕಳುದು ಮತ್ತೆ ಇದ್ದು, ಆದರೆ ವರ್ಲ್ಡ್ ಕಪ್ ನೋದುಲೆ ಇನ್ನು ನಾಲ್ಕು ವರ್ಷ ಕಾಯಡದಾ ಹೇಳಿ ಕೆಲವರ ವಾದ ! ಇರಲಿ…ಅವರವರ ತಲೆಬೆಶಿ ಅವಕ್ಕವಕ್ಕೆ ! ಇದರಿಂದಾಗಿ ತಲೆಬೇನೆ ಬಾರದ್ದರೆ ಸಾಕು ಅಷ್ಟೇ! ನಾವು ಕಳುದವಾರದ ವರೆಗೆ ತಲೆಬೇನೆಯ ಬಗ್ಗೆ ಮಾತಾಡಿದ್ದಲ್ಲದಾ? ಈ ವಾರವೂ ತಲೆಬೇನೆಯ ಬಗ್ಗೆಯೇ ಮಾತಾಡಿರೆ ಬೈಲಿನೋರಿಂಗೆ ತಲೆಬೇನೆ ಹಿಡಿಗು ಹೇಳಿ ಕಂಡತ್ತು. ಹಾಂಗೆ ಬೇರೆಂತಾರು ವಿಷಯದ ಬಗ್ಗೆ ಮಾತಾಡುಲಕ್ಕು ಹೇಳಿ ಗ್ರೇಶಿದೆ. ನಾವು ಮಾತಾಡುವ ವಿಷಯ ಎಲ್ಲೋರಿಂಗೂ ಪ್ರಯೋಜನಕ್ಕೆ ಬರೆಕು, ಹಾಂಗಾಗಿ ಇಂದು ನಾವು ಬಸರಿಯಕ್ಕೊಗೆ ಉಂಟಪ್ಪ ಕೆಲವು ಸಮಸ್ಯೆಗಳ ಬಗ್ಗೆ ತಿಳ್ಕೊಂಬ. ನವಗೆ ವಿಷಯ ಗೊಂತಿದ್ದರೆ ಮಾಂತ್ರ ನಾವು ಜಾಗೃತೆ ಇದ್ದು ಸಮಸ್ಯೆಯ ಪರಿಹಾರ ಮಾಡ್ಲೆ ಸಾಧ್ಯ ಅಪ್ಪದು ಅಲ್ಲದಾ?

ಇದರಲ್ಲಿ ಸುಮಾರು ರೀತಿಯ ಸಮಸ್ಯೆಗೊ ಇದ್ದು. ಇಂದು ನಾವು abortion / ಗರ್ಭಪಾತದ ಬಗ್ಗೆ ರಜ್ಜ ತಿಳ್ಕೊಂಬ. ಎಲ್ಲಕ್ಕಿಂತ ಮೊದಲು ಗರ್ಭಪಾತ ಹೇಳಿರೆ ಎಂತರ ಹೇಳಿ ನೋಡುವ.

500 ಗ್ರಾಂ ತೂಕಂದ ಕಮ್ಮಿ ಭಾರ ಇಪ್ಪ, ಅಮ್ಮನ ಗರ್ಭಾಕೋಶಂದ ಹೆರ ತನ್ನಷ್ಟಕ್ಕೇ ಬದುಕ್ಕುಲೆ ಸಾಧ್ಯ ಆಗದ್ದ ಭ್ರೂಣ ಗರ್ಭಕೋಶಂದ ಹೆರ ಬಂದರೆ, ಅಥವಾ ಹೆರ ತೆಗದರೆ ಅದು ಗರ್ಭಪಾತ.

ಗರ್ಭಪಾತಲ್ಲಿ ಮುಖ್ಯವಾಗಿ ಎರಡು ರೀತಿ ಇದ್ದು

 • ತನ್ನಷ್ಟಕ್ಕೇ ಅಪ್ಪದು/ spontaneous
 • ಪ್ರಚೋದಿಸಿ ಗರ್ಭಪಾತ ಮಾಡ್ಸುದು / induced

ತನ್ನಷ್ಟಕ್ಕೇ ಅಪ್ಪದು/ spontaneous :

ಇದರಲ್ಲಿ Threatened, Inevitable, Complete, Incomplete, Missed &Septic ಹೇಳಿ ಆರು ರೀತಿಯ ಗರ್ಭಪಾತಂಗೊ ಇದ್ದು. ಇದರ ಇನ್ನಾಣ ವಾರ ನೋಡುವ.

ಪ್ರಚೋದಿಸಿ ಗರ್ಭಪಾತ ಮಾಡ್ಸುದು / induced abortion :

ಇದರಲ್ಲಿಯೂ ಎರಡು ರೀತಿ ಇದ್ದು.

ಒಂದು ಕಾನೂನು ರೀತಿಯಾಗಿ/ Legal ಗರ್ಭಪಾತ ಮಾಡುದು.ಕೆಲವು ಮುಖ್ಯ ಕಾರಣಂಗೊ ಇದ್ದರೆ ಕಾನೂನು ರೀತಿಯಾಗಿ ಗರ್ಭಪಾತ ಮಾಡುಲೆ ಅನುಮತಿ ಇದ್ದು. ಇಂತಹ ಸಂದರ್ಭಲ್ಲಿ ಅದಕ್ಕೆ ಅರ್ಹತೆ ಇಪ್ಪ ವೈದ್ಯರು ಗರ್ಭಪಾತವ ಸರಿಯಾದ ರೀತಿಲಿ ಮಾಡ್ತವು.

 • ಗರ್ಭಂದಾಗಿ ಅಮ್ಮನ ಪ್ರಾಣಕ್ಕೆ ಅಪಾಯ ಇದ್ದರೆ,
 • ಭ್ರೂಣದ ಬೆಳವಣಿಗೆ ಸರಿಯಾಗಿ ಆಗದ್ರೆ,
 • ಅಮ್ಮನ ಮಾನಸಿಕ ಸ್ಥಿತಿ ಸರಿ ಇಲ್ಲದ್ರೆ,
 • ಅತ್ಯಾಚಾರಂದಾಗಿ ಗರ್ಭ ಉಂಟಾಗಿದ್ದರೆ.
 • ಗರ್ಭನಿರೋಧಕದ ವಿಫಲತೆಂದಾಗಿ ಉಂಟಾದ ಗರ್ಭ.
 • ಅಪ್ಪ ಅಮ್ಮನ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟಿದ್ದು, ಹುಟ್ಟುವ ಮಗುವಿನ ಬೆಳವಣಿಗೆ ಇತ್ಯಾದಿಗಳ ನೋಡಿಗೊಂಬದು ಅಸಾಧ್ಯ ಹೇಳೀ ಇದ್ದಪ್ಪಗ.

ಇದಕ್ಕೆ ಕಾನೂನಿನ ಪ್ರಕಾರ ಅಮ್ಮನ ಒಪ್ಪಿಗೆ ಇರೆಕ್ಕು. ಪ್ರಾಯ 18ಕ್ಕಿಂತ ಕಮ್ಮಿ ಇದ್ದರೆ ಅಪ್ಪ ಅಮ್ಮನ ಒಪ್ಪಿಗೆ ತೆಕ್ಕೊಳ್ಳೆಕು. ಇತ್ಯಾದಿ ಕ್ರಮಂಗಳ ಅನುಸರಿಸೆಕ್ಕು.

ಮತ್ತೊಂದು ಕಾನೂನಿಂಗೆ ವಿರುದ್ಧವಾಗಿ/ Illegal ಮಾಡುದು.ಇನ್ನು ಕೆಲವು ಸರ್ತಿ ಕೆಲವು ವೈದ್ಯರು ಅಥವಾ ಸಾಮಾನ್ಯ ಜನಂಗೊ ಕಾನೂನಿಂಗೆ ವಿರುದ್ಧವಾಗಿ ಗರ್ಭಪಾತ ಮಾಡ್ಸುತ್ತವು.

ಗರ್ಭಪಾತ ಮಾಡುದು ಮಹಾಪಾಪ ಕಾರ್ಯ, ಒಂದು ಕೊಲೆ ಮಾಡುದಕ್ಕೆ ಸಮ, ಇನ್ನುದೇ ಜಗತ್ತು ನೋಡದ್ದ ಒಂದು ಜೀವವ ಕೊಲ್ಲುದೇ ಅಲ್ಲದಾ? ಅದರಲ್ಲೂ ಕೂಡ ಸ್ತ್ರೀಭ್ರೂಣ ಹತ್ಯೆ ಹೇಳುದು ಇಂದ್ರಾಣ ಕಾಲಲ್ಲಿಯೂ ಕತ್ತಲೆಲಿ ನಡೆತ್ತಾ ಇದ್ದು ಹೇಳುದು ದುಃಖದ ವಿಚಾರ. ವಿಶ್ವ ಮಹಿಳಾ ದಿನ ನಾಳ್ದಿಂಗೆ ಬಂತು, ಸ್ತ್ರೀ ಭ್ರೂಣ ಹತ್ಯೆ ನಿಲ್ಲದ್ದೆ ಯಾವ ಆಚರಣೆಗೆ ಎಂತ ಬೆಲೆ? ಅಲ್ಲದಾ? ಎಲ್ಲರೂ ಆಲೋಚನೆ ಮಾಡೆಕಾದ ಒಂದು ವಿಚಾರ. ಆದರೆ ಕೆಲವು ಸಂದರ್ಭಲ್ಲಿ ಗರ್ಭಪಾತ ಅನಿವಾರ್ಯ ಆಗಿರ್ತು ಹೇಳುದರ ನಾವೆಲ್ಲರೂ ಒಪ್ಪಲೇಬೇಕು. ಅಲ್ಲದ್ದೆ, ಬಸರಿಯಕ್ಕೊ ಮತ್ತೆ ಮನೆಯೋರು ಸರಿಯಾಗಿ ಜಾಗೃತೆವಹಿಸಿರೆ ಸುಮಾರು ಸಮಸ್ಯೆಗಳ ತಡೆಗಟ್ಟುಲಕ್ಕು. ಅದರ ಬಗ್ಗೆ ಇನ್ನಣವಾರ ಮಾತಾಡುಂವ :)

-ನಿಂಗಳ

ಸುವರ್ಣಿನೀ ಕೊಣಲೆ.

ಗರ್ಭಪಾತ, 3.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಬರದ್ದದಷ್ಟು ಓದಿ ಆತು. ಈ ವರೇಗೆ ಎಂತ ಸಂಶಯ ಇಲ್ಲೆ. ಇಷ್ಟಕ್ಕೊಂದು ಒಪ್ಪ.

  [Reply]

  VA:F [1.9.22_1171]
  Rating: +1 (from 1 vote)
 2. ಮುಳಿಯ ಭಾವ
  ರಘುಮುಳಿಯ

  ಡಾಗುಟ್ರಕ್ಕಾ,ಒಳ್ಳೆ ಮಾಹಿತಿ.
  ಮದಲೇ ನಮ್ಮಲ್ಲಿ ಕೂಸುಗಳ ಸ೦ಖ್ಯೆ ಕಮ್ಮಿ ಆಯಿದು,ಇನ್ನು ಸ್ತ್ರೀ ಭ್ರೂಣ ಹತ್ಯೆಯ ಯೋಚನೆಯೂ ಬಪ್ಪಲಾಗ,ಅಲ್ಲದೋ?

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಭ್ರೂಣ ಹತ್ಯೆ ಮಹಾ ಪಾಪ..ಅಲ್ಲದೋ…ಹಿಂದಾಣ ಕಾಲಲ್ಲಿ ರಾಕ್ಷಸರು ಸ್ತ್ರೀಹತ್ಯೆ..ಭ್ರೂಣ ಹತ್ಯೆ ಮಾಡಿಗೊಂಡಿತ್ತಿದ್ದವು ಹೇಳಿ ಕಥೆಗಳಲ್ಲಿ ಓದಿದ್ದು..ಕೇಳಿದ್ದು… ಹಾಂಗಾರೆ ಭ್ರೂಣ ಹತ್ಯೆ ಮಾಡಿದವ್ವು ರಾಕ್ಷಸರೇ ಅಲ್ಲದಾ? ಹೆಣ್ಣು ಮಗು ಹುಟ್ಟುಲಾಗ..ಮಾಣಿಯೇ ಆಯಕು.. ಆದರೆ ಆ ಮಾಣಿಯ ಹೆರುದು ಒಂದು ಸ್ತ್ರೀ ! ಧನಾತ್ಮಕ ಬದಲಾವಣೆಗೊ ಆಯಕಾದ್ದು ಸುಮಾರಿದ್ದು ನಮ್ಮ ಸಮಾಜಲ್ಲಿ……

  [Reply]

  VA:F [1.9.22_1171]
  Rating: 0 (from 0 votes)
 3. ಪ್ರಶಾಂತ್ ಕುವೈತ್

  ಒಳ್ಳೆ ಲೇಖನ.. ಹೀಂಗಿಪ್ಪ ಇನ್ನಷ್ಟು ಲೇಖನಂಗಳ ನಿರೀಕ್ಷೆ ಮಾಡ್ತೆ

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಧನ್ಯವಾದ :)

  [Reply]

  VA:F [1.9.22_1171]
  Rating: 0 (from 0 votes)
 4. prashanth

  ತನ್ನಷ್ಟಕ್ಕೇ ಅಪ್ಪದು/ spontaneous ಗರ್ಭಪಾತದ ಮಾಹಿತಿ ಕೊಡ್ತಿರಾ? ಸುವರ್ಣಿನಿ ಅಕ್ಕ………

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಇನ್ನಾಣವಾರ :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಪೆರ್ಲದಣ್ಣದೀಪಿಕಾಪೆಂಗಣ್ಣ°ಅನಿತಾ ನರೇಶ್, ಮಂಚಿಬಟ್ಟಮಾವ°ಸರ್ಪಮಲೆ ಮಾವ°ಅನು ಉಡುಪುಮೂಲೆವಿಜಯತ್ತೆವೆಂಕಟ್ ಕೋಟೂರುಅಕ್ಷರ°ಕಳಾಯಿ ಗೀತತ್ತೆಸುಭಗಮುಳಿಯ ಭಾವಚೆನ್ನಬೆಟ್ಟಣ್ಣಉಡುಪುಮೂಲೆ ಅಪ್ಪಚ್ಚಿಶಾ...ರೀಕಾವಿನಮೂಲೆ ಮಾಣಿಶುದ್ದಿಕ್ಕಾರ°ವಿನಯ ಶಂಕರ, ಚೆಕ್ಕೆಮನೆಹಳೆಮನೆ ಅಣ್ಣನೀರ್ಕಜೆ ಮಹೇಶವೇಣೂರಣ್ಣದೊಡ್ಮನೆ ಭಾವಚೂರಿಬೈಲು ದೀಪಕ್ಕಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ