ತಲೆ ಇದ್ದಾ? ತಲೆಬೇನೆಯೂ ಇದ್ದು.

ಎನಗೆ ಒಂದೊಂದರಿ ಕಾಂಬದು..ಮನುಷ್ಯ ಎಷ್ಟು ಸಣ್ಣವ ..ಆದರೂ ಎಲ್ಲದರಲ್ಲಿಯೂ ಹಸ್ತಕ್ಷೇಪ ಮಾಡುವ ಬುದ್ಧಿ ಮನುಷ್ಯಂಗೆ !! ಓರುಕುಟ್ಟುತ್ತ ಪುಟಲ್ಲಿ ಶಿರಸಿಯ ಪ್ರಕಾಶಣ್ಣ ಹೀಂಗೆ ಬರದಿತ್ತಿದ್ದವು..”ಹೇ.. ದೇವರೇ.. ಏನಾಯ್ತು ನಿನ್ನ ಜಗತ್ತಿಗೆ…? ಚಂದಿರ ಬದಲಾಗಲಿಲ್ಲ..ಸೂರ್ಯ ಬದಲಾಗಲಿಲ್ಲ..ಬದಲಾಗಲಿಲ್ಲ ಆ.. ನೀಲ ಆಕಾಶ…ಆದರೆ..ನಿನ್ನಿಂದಾದ ಮಾನವ ಎಷ್ಟೊಂದು ಬದಲಾಗಿಬಿಟ್ಟಿದ್ದಾನೆ….!!ಹೇ.. ದೇವರೆ.. ನಿನ್ನ ಜಗತ್ತಿನ ಸ್ಥಿತಿ ನೋಡು..” ಎಷ್ಟು ಸತ್ಯ ಅಲ್ಲದಾ? ತನ್ನಂದ ಎಷ್ಟು ದೊಡ್ಡದಾದ ಭೂಮಿಯನ್ನೇ ಅಲ್ಲಾಡ್ಸುವ ಬಾಂಬು ಸೃಷ್ಟಿ ಮಾಡಿದ್ದ !! ಆದರೆ ಒಂದು ಜೀವವ ಸೃಷ್ಟಿ ಮಾಡುವ ಸಾಮರ್ಥ್ಯವೇ ಇಲ್ಲೆ !! ದೇವರು ಎಷ್ಟು ಚೆಂದಕ್ಕೆ ಒಂದೊಂದು ಜೀವಿಯನ್ನೂ ಬೇರೆ ಬೇರೆ ವೈಶಿಷ್ಟ್ಯತೆಗಳೊಟ್ಟಿಂಗೆ ಸೃಷ್ಟಿ ಮಾಡಿದ್ದ !! ಪ್ರತಿಯೊಂದು ಜೀವಿಗೂ ಅಗತ್ಯ ಇಪ್ಪ ಎಲ್ಲವನ್ನೂ ಒಟ್ಟಿಂಗೇ ಮಡೂಗಿದ್ದು ದೇವರೇ ಅಲ್ಲದಾ? “perfect”  ವ್ಯವಸ್ಥೆ ! ಮನುಷ್ಯ ಮಾಡುವ ಯಾವುದಾದರೂ ಕೂಡ ಇಷ್ಟು perfect ಇಪ್ಪಲೆ ಸಾಧ್ಯವಾ?

ಮನುಷ್ಯನ ದೇಹದ ಬಗ್ಗೆ ಕಲ್ತಪ್ಪಗ ಎನಗೆ ಎಲ್ಲಕ್ಕಿಂತ ಹೆಚ್ಚು ಆಲೋಚನೆ ಮಾಡುವ ಹಾಂಗೆ ಮಾಡಿದ್ದು ಶರೀರ ರಚನೆಯೂ(anatomy) ಕ್ರಿಯೆಗಳೂ(physiology). ಸಣ್ಣ ಮಕ್ಕೊ ಹೊಸತ್ತೊಂದು ವಸ್ತುವಿನ ನೋಡುವ ಹಾಂಗೆ ಬೆರಗುಗಣ್ಣಿಂದ ನೋಡಿದ್ದೆ ! ಆಶ್ಚರ್ಯ ಆವ್ತು..ಹೀಂಗಿದ್ದ ರಚನೆ ಸಾಧ್ಯವಾ ಹೇಳಿ !! ಈಗ ವಿದ್ಯಾರ್ಥಿಗೊಕ್ಕೆ ಪಾಠ ಮಾಡುವಗ ಪ್ರತೀ ಸರ್ತಿ ಓದುವಗಳೂ ಎಂತದೋ ಹೊಸತ್ತು ಹೇಳಿ ಅನ್ಸುತ್ತು ! ಓದಿದಷ್ಟೂ ಮತ್ತೂ ಇದ್ದು ತಿಳ್ಕೊಂಬಲೆ, ವಿವರ್ಸಿದಷ್ಟೂ ಕಮ್ಮಿಯೇ. ಮನುಷ್ಯ “ಆನು, ಎನ್ನದು” ಹೇಳಿ ಮಾತಾಡುವ ಜೆನಕ್ಕೆ ತನ್ನ ದೇಹದ ಬಗ್ಗೆ ರಜ್ಜವೂ ಗೊಂತಿಲ್ಲೆ ಅಲ್ಲದಾ? ಒಂದು ಶವವ ತೆಕ್ಕೊಂಡು ದೇಹರಚನೆಯ ಅಧ್ಯಯನ ಮಾಡ್ಲಕ್ಕು. ಆದರೆ ಕ್ರಿಯೆಯ? ನಮ್ಮ ಹೃದಯದ ಬಡಿತ ಹೇಂಗೆ ಶುರುಆವ್ತು ಹೇಳ್ತದರ ಬಗ್ಗೆ ಎನಗೆ ಇನ್ನೂ ಕುತೂಹಲ… ಸಂಶಯ ! ನಮ್ಮ ಶರೀರಲ್ಲಿ ನರಂಗಳಲ್ಲಿ ಸಂವೇದನೆ ಹೇಂಗೆ ಸಂಚಾರ ಆವ್ತು ಹೇಳುದು ಮತ್ತೊಂದು ಆಶ್ಚರ್ಯ ! ಎಲ್ಲದಕ್ಕೂ ಉತ್ತರ ಇದ್ದು…..ಆದರೆ ಎಲ್ಲ ಉತ್ತರಂಗಳೂ ಒಂದು ಹಂತಕ್ಕೊರೆಗೆ ಎತ್ತಿಯಪ್ಪ ನಿರುತ್ತರ !!! ಪ್ರತಿಯೊಂದೂ ಕ್ರಿಯೆಗೆ ಮೂಲಕಾರಣ ಎಂತರ ಹೇಳಿ ಹುಡುಕ್ಕಿಯಪ್ಪಗ ಸಿಕ್ಕುವ ಆ ’ಮೂಲ’ ಕಾರಣಕ್ಕೆ ಕಾರಣ ಎಂತರ? ಪ್ರಶ್ನೆ ಸರಿಯೇ ಅಲ್ಲದಾ? ಹೀಂಗಿದ್ದ ಹಲವು ಪ್ರಶ್ನೆಗೊ ಇದ್ದು ಮನಸ್ಸಿಲ್ಲಿ. ಉತ್ತರ ಇನ್ನೂ ಸಿಕ್ಕಿದ್ದಿಲ್ಲೆ :(.

ಹೀಂಗಿದ್ದ ಒಂದು ಪ್ರಶ್ನೆಯೇ ಮನುಷ್ಯನ ತಲೆ, ಅದರೊಳದಿಕ್ಕೆ ಇಪ್ಪ ಮೆದುಳು! ಇದರ ತಿಳ್ಕೊಂಬಲೆ ಇನ್ನೊಂದು ಜನ್ಮವೇ ಬೇಕೋ ಏನೋ! ಅಷ್ಟು ಸಂಕೀರ್ಣ ವಿಷಯ ಈ ಮೆದುಳು-ತಲೆ. ಮನುಷ್ಯನ ಮನಸ್ಸಿನ ಪ್ರಧಾನ ಕಛೇರಿಯೇ ಮೆದುಳಲ್ಲದಾ?  ಈ ಎನ್ನ ಪ್ರಶ್ನೆಗೆ ಸಂಬಂಧಿಸಿದ ಇಂದ್ರಾಣ ವಿಷಯವ ರಜ್ಜ ಮಾತಾಡುವ. ಎಲ್ಲೋರ ಮನೆಗೂ ಬಪ್ಪ ಒಬ್ಬ ನೆಂಟ ’ತಲೆಬೇನೆ’. ತಲೆಬೇನೆಯ ಅನುಭವ ಜೀವನಲ್ಲಿ ಒಂದರಿಯೂ ಆಗದ್ದವ್ವು ಇಡೀ ಪ್ರಪಂಚಲ್ಲಿ ಬೆರಳೆಣಿಕೆಯಷ್ಟೂ ಇಲ್ಲೆ ! ಒಂದಲ್ಲ ಒಂದರಿ ಎಲ್ಲರೂ ತಲೆಬೇನೆಗೆ ತಲೆಕೊಟ್ಟಿರ್ತವು. . ತಲೆ ಇದ್ದು ಹೇಳಿ ಗೊಂತಪ್ಪಲೆ ತಲೆಬೇನೆ ಅಪ್ಪದು ಹೇಳಿ ಕುಶಾಲಿಂಗೆ ಹೇಳ್ತ ಕ್ರಮ ಇದ್ದು. ಆದರೆ ತಲೆಬೇನೆಯ ಅನುಭವಿಸಿದವಕ್ಕೇ ಗೊಂತು ಅದರ ತೀವ್ರತೆ ಎಷ್ಟು ಹೇಳಿ, ನಿಂಬಲೆಡಿಯ..ಕೂಬಲೆಡಿಯ..ಒರಕ್ಕು ಬತ್ತಿಲ್ಲೆ..ಊಟ ಮೆಚ್ಚುತ್ತಿಲ್ಲೆ…. ಹೀಂಗೆ ಒಂದಾ ಎರಡಾ. ಹಾಂಗಾರೆ ಇಷ್ಟುದೇ ಸಾಮಾನ್ಯ ಆದ ’ತಲೆಬೇನೆ’ ಹೇಳಿರೆ ಎಂತರ? ತಿಳ್ಕೊಳ್ಳೆಕಾದ್ದು ಅಗತ್ಯ ಅಲ್ಲದಾ? ಖಂಡಿತಾ ಅಪ್ಪು, ನಾವು ಹೆಚ್ಚು ಗಮನ ಕೊಡ್ತೇ ಇಲ್ಲೆ ಹೀಂಗಿದ್ದ ವಿಚಾರಂಗೊಕ್ಕೆ ..ಆದರೆ ಇದೇ ನಾವು ಮಾಡ್ತ ತಪ್ಪು.

ತಲೆಬೇನೆ ಹೇಳಿರೆ ಎಂತರ?

[ಈಗ ನೆಗೆಗಾರಣ್ಣ ನೆಗೆ ಮಾಡುಗು ’ತಲೆಬೇನೆ ಎಂತರ ಹೇಳಿ ಹೇಳುಲೆ ಇಷ್ಟೆಲ್ಲ ಬರವ ಅಗತ್ಯ ಇದ್ದೋ ಹೇಳಿ’!]

 • ಎಲ್ಲಕ್ಕಿಂತ ಮುಖ್ಯವಾದ ವಿಷಯ ಎಂತರ ಹೇಳಿರೆ ’ತಲೆಬೇನೆ’ ಹೇಳ್ತದು  ಒಂದು ರೋಗ ಅಲ್ಲ. ಅದು ಒಂದು ರೋಗಲಕ್ಷಣ. ಈ ವಿಚಾರವ ನಾವು ತಿಳ್ಕೊಳ್ಳೆಕ್ಕು.
 • ತಲೆಬೇನೆ ತಲೆಯ ಯಾವ ಭಾಗಲ್ಲಿ ಬೇಕಾರೂ ಬಪ್ಪಲಕ್ಕು. ಒಂದೇ ಹೊಡೆಲಿ [ಎಡ ಅಥವಾ ಬಲ], ಎದುರಾಣ ಭಾಗಲ್ಲಿ, ಹಿಂದಾಣ ಭಾಗಲ್ಲಿ, ಯಾವುದಾದರೊಂದು ನಿರ್ದಿಷ್ಟ ಜಾಗೆಲಿ, ಅಥವಾ ಇಡೀ ತಲೆಲಿ. ಇದಕ್ಕೆಲ್ಲಾ ನಿಜಬಾದ ರೋಗವೇ ಕಾರಣ. ಬೇರೆ ಬೇರೆ ಸಮಸ್ಯೆಗಳಲ್ಲಿ ತಲೆಬೇನೆ ಅಪ್ಪ ಜಾಗೆಯೂ ಬದಲಾವ್ತು.
 • ತಲೆಬೇನೆ ಹೇಳಿದ ಕೂಡ್ಲೇ ಅದು ಒಂದೇ ರೀತಿಲಿ ಇರೆಕ್ಕು ಹೇಳಿ ಎಂತ ಇಲ್ಲೆ. ಅದರ ಮೂಲಕಾರಣದ ಅಮೇಲೆ ಆಧಾರಿತವಾಗಿ ಎಳದ ಹಾಂಗಿಪ್ಪ ಬೇನೆ, ಸೆಳಿವದು, ಕುತ್ತಿದ ಹಾಂಗೆ ಅಪ್ಪ ಬೇನೆ, ಉರಿ ಅಪ್ಪಹಾಂಗಿದ್ದ ಬೇನೆ ಇತ್ಯಾದಿ ರೀತಿಲಿ ಬೇನೆಗೊ ಆವ್ತು.

ಕಾರಣ ಎಂತರ?

 • ಇಂಥದ್ದೇ ಹೇಳಿ ಒಂದು ಕಾರಣವ ಮಾಂತ್ರ ಗುರ್ತುಸುಲೆ ಎಡಿಯ. ಹತ್ತು ಹಲವು ಕಾರಣಂಗೊ ಇದ್ದು ಈ ತಲೆಬೇನೆ ಹೇಳ್ತ ಲಕ್ಷಣಕ್ಕೆ.
 • ಅದು ಸಾಮಾನ್ಯ ಶೀತಜ್ವರ ಆದಿಕ್ಕು ಅಥವಾ  ಮೆದುಳಿಲ್ಲಿ ಬೆಳದ ಗಡ್ಡೆಯೂ ಆದಿಕ್ಕು,
 • ಮೆದುಳಿನ ಒಳ ನೆತ್ತರು ಕನಿಪ್ಪೆಕಟ್ಟಿದ್ದಾದಿಕ್ಕು ಅಥವಾ ರಕ್ತ ಸ್ರಾವ ಆದಿಕ್ಕು.
 • ಅಧಿಕರಕ್ತದೊತ್ತಡ ಆದಿಕ್ಕು ಅಥವಾ ತಲೆಗೆ ಪೆಟ್ಟುಬಿದ್ದ ಕಾರಣ ಆಗಿಕ್ಕು.
 • ಕಣ್ಣಿನ ದೋಷವೂ ಇಕ್ಕು ಅಥವಾ ಕೆಮಿಯ ಸಮಸ್ಯೆಯೂ ಆಗಿಕ್ಕು.
 • ಯಾವುದೋ ರೋಗಾಣುವಿನ ಸೋಂಕು ಆದಿಕ್ಕು ಅಥವಾ ರಕ್ತ ಸಂಚಾರದ ಕೊರತೆ ಆದಿಕ್ಕು.
 • ಒರಕ್ಕು ಕೆಟ್ಟ ಕಾರಣವೂ ಆದಿಕ್ಕು ಅಥವಾ ಹೊಟ್ಟೆ ಖಾಲಿ ಬಿಟ್ಟದೇ ಕಾರಣ ಆದಿಕ್ಕು.
 • ಮಾನಸಿಕ ಒತ್ತಡ, ಚಿಂತೆಗಳೂ ತಲೆಬೇನೆಗೆ ಮುಖ್ಯ ಕಾರಣಂಗೊ
 • ಹೀಂಗಿಪ್ಪಗ ಇದೆಲ್ಲವನ್ನೂ ವಿವರವಾಗಿ ನಾವು ತಿಳ್ಕೊಂಬ ಅಗತ್ಯ ಇದ್ದು. ಎಂತಗೆ ಹೇಳಿರೆ ಅಂತೆ ಸಣ್ಣಕ್ಕೆ ಶುರು ಅಪ್ಪ ತಲೆಬೇನೆ ಯಾವಕ್ಷಣಲ್ಲಿ ಪ್ರಾಣವನ್ನೇ ತೆಕ್ಕೊಂಗು ಹೇಳಿ ಹೇಳ್ಲೆಡಿಯ :(. ಅಲ್ಲದ್ದರೆ ಹಶುವಾಗಿ ತಲೆಬೇನೆ ಆದ್ದ ಅಥವಾ ಬೇರೇನಾರೂ ತೊಂದರೆ ಇದ್ದೋ ಹೇಳಿ ನಾವು ತಿಳ್ಕೊಳ್ಳೆಕಾರೆ ಇದರ ಬಗ್ಗೆ ರಜ್ಜ ಗಮನ ಕೊಡೆಕ್ಕು ಅಲ್ಲದಾ? ಇದರ ಕಾರಣಂಗಳ ನಾವು ತಿಳ್ಕೊಂಡಮೇಲಷ್ಟೇ ಪರಿಹಾರ ಸಾಧ್ಯ.

ಪ್ರತಿಯೊಂದೂ ಸಮಸ್ಯೆಯ ಬಗ್ಗೆ ವಿವರಣೆಯನ್ನೂ,ಅದರೊಟ್ಟಿಂಗೇ ಪರಿಹಾರ ಮಾರ್ಗಂಗಳನ್ನೂ ಇನ್ನಾಣವಾರ ಮಾತಾಡುವ , ಆಗದಾ?

-ನಿಂಗಳ

ಸುವರ್ಣಿನೀ ಕೊಣಲೆ.

ಸುವರ್ಣಿನೀ ಕೊಣಲೆ

   

You may also like...

11 Responses

 1. ಚೆ, ಬೋಸಬಾವನ ಚಾನ್ಸು! 🙁
  ಅವಂಗೆ ಈ ’ತಲೆಬೇನೆ’ಯೇ ಇಲ್ಲೆ ಅಲ್ಲದೋ? 😉

 2. ಗಣೇಶ says:

  ತಲೆಬೇನೆಯ ಹಿ೦ದಿಕೆ ಇಪ್ಪ ಕಾರಣ೦ಗಳ ಓದಿಯಪ್ಪಗ ಒ೦ದರಿ ತಲೆಬೆಶಿ ಆತು. ಇನ್ನೀಗ ಇದರ ಬಗ್ಗೆ ಜಾಸ್ತಿ ತಿಳ್ಕೋಳೆಕಾರೆ ಇನ್ನಾಣ ವಾರದ ವರೇ೦ಗೆ ಕಾದು ಕೂರೆಕು ಹೇಳುವದೇ ತಲೆಬೇನೆ ತಪ್ಪ ವಿಶಯ.

  • Suvarnini Konale says:

   ಕೆಲವು ಸರ್ತಿ ನಾವು ದೊಡ್ಡ ವಿಷಯ ಹೇಳೀ ಗ್ರೇಶುವಲ್ಲಿ ಎಂತದೂ ಇರ್ತಿಲ್ಲೆ, ಆದರೆ ಏನೂ ಇಲ್ಲೆ ಹೇಳಿ ನಿರ್ಲಕ್ಷ್ಯ ಮಾಡುವಲ್ಲಿ ನಿಜವಾಗಿಯೂ ಏನೋ ದೊಡ್ಡ ಸಮಸ್ಯೆ ಇಪ್ಪ ಸಾಧ್ಯತೆಗೊ ಇರ್ತು….

 3. ಸುವರ್ಣಿನಿ ಅಕ್ಕಾ..
  ವಿಶಯದ ಆಯ್ಕೆ, ವಿಷಯದ ನಿರೂಪಣೆ, ಬರವಣಿಗೆಯ ಚಾಕಚಕ್ಯತೆ – ಎಲ್ಲವುದೇ ಕೊಶಿ ಆತು.

  ಇದ್ದದಕ್ಕೆ ಪೂರಾ ತಲೆ ಹಾಕುತ್ತ ಮನುಷ್ಯನ ಬಗ್ಗೆ ಬರವಲೆ ಸುರುಮಾಡಿ, ತಲೆಬೇನೆ ಬತ್ತ ವಿಚಾರ, ಅದರ ಹಿಂದೆ ಇಪ್ಪ ವೈಜ್ಞಾನಿಕ ಕಾರಣಂಗಳ / ಸಾಧ್ಯತೆಗಳ ಅವಲೋಕನ ಮಾಡಿದ್ದು ಡಾಗುಟ್ರಾಗಿ ನಿಂಗೊ ಮಾಡ್ತಾ ಇಪ್ಪ ಬಹುದೊಡ್ಡ ಕೊಡುಗೆ.

  ಬೈಲಿಂಗೆ ಇದು ತುಂಬಾ ಉಪಕಾರ ಆಗಲಿ ಹೇಳ್ತದು ಹಾರೈಕೆ.

  • Suvarnini Konale says:

   ಧನ್ಯವಾದ ಒಪ್ಪಣ್ಣ.. ನಿಂಗಳೆಲ್ಲರ ಪ್ರೋತ್ಸಾಹಕ್ಕೆ 🙂

 4. ರಘುಮುಳಿಯ says:

  ಬರದ ವಿಷಯವೂ,ಬರದ ಕ್ರಮವೂ ಭಾರಿ ಲಾಯಿಕ ಆಯಿದು.ತಲೆಬೇನೆಯ ನಿರ್ಲಕ್ಷ್ಯ ಮಾಡುಲೆ ಆಗ ಹೇಳಿ ಸ್ಪಷ್ಟ ಆತು.ಧನ್ಯವಾದ ಡಾಗುಟ್ರಕ್ಕಾ,ಮು೦ದಾಣ ವಾರದ ಮಾಹಿತಿಯ ಎದುರು ನೋಡ್ತೆ.

  • Suvarnini Konale says:

   ರಘು ಅಣ್ಣ, ಬರೆಯಕ್ಕು ಹೇಳಿ ಕೂದಪ್ಪಗ ನಿಜವಾಗಿಯೂ ಬರವಲೆ ಎಡಿತ್ತಿಲ್ಲೆ ! ಅಂತೆ ಇಪ್ಪಗ ಮನಸ್ಸಿಲ್ಲಿ ಬಪ್ಪ ಆಲೋಚನೆಗಳಿಂಗೆ ಅಕ್ಷರ ರೂಪ ಕೊಟ್ಟರೆ ನಿಜವಾಗಿಯೂ ಅರ್ಥಪೂರ್ಣವಾಗಿ ಮೂಡಿಬತ್ತು.
   ಅಲ್ಲದಾ?

 5. ತೆಕ್ಕುಂಜ ಕುಮಾರ says:

  “……’ತಲೆಬೇನೆ’ ಹೇಳ್ತದು ಒಂದು ರೋಗ ಅಲ್ಲ. ಅದು ಒಂದು ರೋಗಲಕ್ಷಣ. ಈ ವಿಚಾರವ ನಾವು ತಿಳ್ಕೊಳ್ಳೆಕ್ಕು.”
  ಎಷ್ಟು ಸರಿಯಾದ ಮಾತು…!
  ಆಫಿಸಿಲಿ ಕೆಲವು ಜನ ತಲೆ ಬೇನೆ ಹೇಳಿಗೊಂದು ಬಂದರೆ ಹೇಳುವ ಕ್ರಮ ಇದ್ದು – ತಲೆ ಮನೇಲಿ ಮಡಿಗಿ ಬಂದರೆ ತಲೆ ಬೇನೆ ಹೆಂಗಪ್ಪ ಬಪ್ಪದು?

  ತಲೆ ಬೇನೆ ಅವಕ್ಕಲ್ಲ, ನವಗೆ….!

 6. ತಲೆ ಬೇನೆ ಲೇಖನ ಹೊಸ ತಲೆಬೇನೆ ಉ೦ಟು ಮಾಡುಗೋ ಹೇಳಿಯೊ೦ಡು ಲೇಖನ ಓದಿಯಪ್ಪಗ ತಲೆಬೇನೆಲಿಯೂ ಹಿ೦ಗೆಲ್ಲ ಇದ್ದೋ ಹೇಳಿ ಆತು ಹೊಸ ತಲೆ ಬೇನೆ ಬಯಿ೦ದೂ ಇಲ್ಲೆ.ಒಪ್ಪಕ್ಕೋ ಒಪ್ಪ ಲೇಖನ.ಒಪ್ಪ೦ಗಳೊಟ್ಟಿ೦ಗೆ

 7. ಶರ್ಮಪ್ಪಚ್ಚಿ says:

  ಮನುಷ್ಯನ ದೇಹ ರಚನೆ ಸಂಕೀರ್ಣ, ಅದಲ್ಲಿ ಅಪ್ಪ ಕ್ರಿಯೆಗೊ ಅಂತೂ, ಪೂರ್ತಿ ತಿಳಿವಲೆ ಎಡಿಯದ್ದಷ್ತು.
  ಕುತೂಹಲಲ್ಲಿ ಮುಂದಾಣದ್ದಕ್ಕೆ ಕಾಯ್ತ ಇದ್ದೆ, ಎಂತಕೆ ಹೇಳಿರೆ ಎನಗೆ ತಲೆ ಬೇನೆ ಬತ್ತು (ಹಾಂಗಾಗಿ ತಲೆ ಇದ್ದು 🙂

 8. Gopalakrishna BHAT S.K. says:

  ತಲೆಬೇನೆ ಬಂದರೆ ಅದಕ್ಕಿಂತ ದೊಡ್ಡ ರೋಗ ಬೇರೆ ಯಾವುದೂ ಇಲ್ಲೆ ಹೇಳಿ ತೋರುತ್ತು.
  ಇದರಿಂದ ಅಪ್ಪ ಮಾನವ ಗಂಟೆಗಳ ನಷ್ಟ ಬೇರೆ ಏವ ರೋಗಂಗಳಿಂದಲೂ ಆಗ.ಬೈಲಿಲಿ ಆರಾದರೂ ಅರ್ಥಶಾಸ್ತ್ರಪಂಡಿತಂಗೊ ಇದ್ದರೆ ಲೆಕ್ಕ ಹಾಕಿ ನೋಡಲಿ.ಪರಿಹಾರ ಅಗತ್ಯ ಬೇಕು.ಡಾಕ್ಟರ ಮುಂದಿನ ಲೇಖನದ ನಿರೀಕ್ಷೆಲಿ ಇದ್ದೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *