ದೀಪಾವಳಿ ..ಬಾಳು ಬೆಳಗಲಿ :)

November 4, 2010 ರ 4:30 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಜ್ಞಾನ..ಜೀವನ ..ಎರಡೂ ಬೆಳಗಲಿ..ಬೆಳೆಯಲಿ… ಬೈಲಿನೋರಿಂಗೆ ಎಲ್ಲೋರಿಂಗೂ ದೀಪಾವಳಿಯ ಶುಭಾಶಯಂಗೊ.
ಹಬ್ಬ ಗಮ್ಮತ್ತಿಲ್ಲಿ ಕಳವಲೆ ರಜೆ ಇದ್ದು :) ಕುಟುಂಬದೋರೊಟ್ಟಿಂಗೆ,ಸ್ನೇಹಿತರೊಟ್ಟಿಂಗೆ [ನೆರೆಕರೆಯವರೊಟ್ಟಿಂಗೆ] ಆಚರಣೆ ಮಾಡಿ ಎಲ್ಲೋರು. ಒಟ್ಟಿಂಗೆ ನೆಂಪಿಲ್ಲಿ ಮಡುಗೆಕಾದ ಅಂಶ ಹೇಳಿರೆ ೨ ದಿನದ ಹಬ್ಬ ಜೀವನ ಪರ್ಯಂತಕ್ಕೆ ದುಃಖ ತಾರದ್ದೇ ಇರಲಿ ಹಾಂಗಾಗಿ…….[ನಿಂಗೊಗೆ ಗೊಂತಿಪ್ಪದೇ, ಎಲ್ಲಿಯಾರು ಮರದಿದ್ದರೆ ಹೇಳಿ ನೆಂಪು ಮಾಡ್ಲೆ ಬರೆತ್ತೆ]
1]ಪಟಾಕಿ ಹೊಡೇರಿ, ಆದರೆ…..
 • ಪರಿಸರ/ಶಬ್ದ ಮಾಲಿನ್ಯ ಆದಷ್ಟು ಕಮ್ಮಿ ಮಾಡಿ,
 • ಕಿಚ್ಚಿನ ಹತ್ತರೆ ಜಾಗೃತೆಲಿ ಇರಿ,
 • ಪುಟ್ಟು ಮಕ್ಕಳ ಹೆಚ್ಚಿಗೆ ಕಿಚ್ಚಿನ ಹತ್ತರೆ ಬಿಡೆಡಿ.
 • ಹೆಚ್ಚು ಶಬ್ದ ಅಪ್ಪ ಪಟಾಕಿಂದ ಸಣ್ಣ ಮಕ್ಕೊಗೆ,ಪ್ರಾಯ ಆದವಕ್ಕೆ, ಸಾಂಕಿದ ಪ್ರಾಣಿಗೊಕ್ಕೆ ಹೆದರಿಕೆ ಅಕ್ಕು, ಇದರ ನಿರ್ಲಕ್ಷ್ಯ ಮಾಡೆಡಿ. ಆರೋಗ್ಯಕ್ಕೆ, ಮನಸ್ಸಿಂಗೆ, ಜೀವಕ್ಕೆ ತೊಂದರೆ ಅಪ್ಪ ಸಾಧ್ಯತೆಗೊ ಇದ್ದು.
2]ದೀಪಾವಳಿಯ ಹೋಳಿಗೆ  ಸಮಾ ತಿನ್ನಿ [ಅಜೀರ್ಣ ಅಪ್ಪಷ್ಟಲ್ಲ], ಆಹಾರ ಮಿತಿಲಿಯೇ ಇರಲಿ. ಇನ್ನು ಡಯಾಬಿಟೀಸ್ ಇಪ್ಪೋರು ಸಿಹಿ ತಿಂಬಲೆ ಎಡಿತ್ತಿಲ್ಲೆ ಹೇಳಿ ಬೇಜಾರು ಮಾಡೆಡಿ..ಬದಲಿಂಗೆ ಒಂದು ’ಸಣ್ಣ’ ತುಂಡು ತಿನ್ನಿ,ತೊಂದರಿಲ್ಲೆ. ನೆಂಪಿರಲಿ ’ಅತಿ ಆಸೆ………..’.
3]ಇನ್ನು ಇಡೀ ವರ್ಷ ಮೀಯದ್ದೆ ಇದ್ದೋರು ಎಣ್ಣೆ ಕಿಟ್ಟಿ ಮೀವಲೆ ಒಂದು ಸಂದರ್ಭ [ಬೋಸಣ್ಣ ಮುಖ್ಯವಾಗಿ]. ಎಣ್ಣೆ ಕಿಟ್ಟಿ ಮೀವದು ಆರೋಗ್ಯಕ್ಕೆ ಒಳ್ಳೆದು. ಎಳ್ಳೆಣ್ಣೆ ಆದರೆ ಒಳ್ಳೆದು. ಅಲ್ಲದ್ರೆ ಯಾವ ಎಣ್ಣೆ ಆದರೂ ಅಕ್ಕು [ಊರ ಹೆರ(?) ಗಡಂಗಿಲ್ಲಿ ಸಿಕ್ಕುವ ತೊಟ್ಟೆ ಎಣ್ಣೆ ಅಲ್ಲ]
4]ಹಬ್ಬಲ್ಲಿ ಪಟಾಕಿ ಶಬ್ದದೊಟ್ಟಿಂಗೆ ನಮ್ಮ ಸಂಪ್ರದಾಯ ಕಾಣೆ ಅಪ್ಪದು ಬೇಡ. ಹೆಚ್ಚಿನ ಆಚರಣೆಗೊ ಮಾಡ್ಲೆ ಎಡಿಯದ್ದರೂ ಒಂದರಿ ದೇವಸ್ಥಾನಕ್ಕೆ ಹೋಗಿಬಪ್ಪಲಕ್ಕನ್ನೇ? ಎಂಗಳ ಊರಿಲ್ಲಿ ಇದು ದೊಡ್ಡ ಹಬ್ಬ.. ತುಂಬಾ ಗೌಜಿ :) ನಮ್ಮ ದಕ್ಷಿಣಕನ್ನಡಲ್ಲಿ ರಜ್ಜ ಗೌಜಿ ಕಮ್ಮಿ ಆ ಲೆಕ್ಕಕ್ಕೆ ನೋಡ್ತರೆ. ಆದರೆ ಮನಸ್ಸಿನ ಭಾವನೆಗಳಲ್ಲಿ ಕಮ್ಮಿ ಇಲ್ಲೆನ್ನೇ !!
ಆತು ಆನು ಹೇಳೆಕು ಗ್ರೇಶಿದ ಮುಖ್ಯ ವಿಷಯ ಹೇಳಿ ಆತು !! ಎಲ್ಲೋರಿಂಗೂ ದೇವರ..ಗುರುಗಳ ಆಶಿರ್ವಾದ ಸದಾ ಇದ್ದು ಸಂತೋಷ..ಸಂತೃಪ್ತಿ ನೆಮ್ಮದಿ ನಮ್ಮೆಲ್ಲರದ್ದೂ ಆಗಲಿ :)
once again …ದೀಪಾವಳಿಯ ಶುಭಾಶಯಂಗೊ :)
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ದೀಪಾವಳಿ ಹೇಂಗೆ ಆಚರಿಸೆಕ್ಕು ಹೇಳಿ ತಿಳಿಸಿದ್ದು ಲಾಯಿಕ ಆಯಿದು.
  ದೀಪಾವಳಿಯ ಶುಭಾಶಯಂಗೊ

  [Reply]

  VA:F [1.9.22_1171]
  Rating: +1 (from 1 vote)
 2. ಗಣೇಶ ಮಾವ°

  ಉತ್ತಮ ವಿವರಣೆಯ ಮೂಲಕ ಜಾಗ್ರತೆ ತಿಳಿಶಿದ್ದಕ್ಕೆ ಧನ್ಯವಾದಂಗ..

  [Reply]

  VN:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ ಪೆರ್ವ

  ದೀಪಾವಳಿ ಶುಭಾಶಯ೦ಗೊ.. ಇಲ್ಲಿ ಪಟಾಕಿ ಹೊಟ್ಟುಸಲೆ ಪೋಲೀಸ್ ಅನುಮತಿ ಬೇಕಾದ ಕಾರಣ ಎನಗೆ ಮಾ೦ತ್ರ ಅಲ್ಲ, ಆರಿ೦ಗು ಈ ಸರ್ತಿಯಾಣ ದೀಪಾವಳಿಗೆ ಪಟಾಕಿ ಇಲ್ಲೆ. ಶಬ್ದ ಮಾಲಿನ್ಯವೂ ಇಲ್ಲೆ.
  ಹೋಳಿಗೆ ಮಾಡ್ಳೆ ಎನಗೆ ಗೊ೦ತಿಲ್ಲೆ. ಆದ ಕಾರಣ ಹೋಳಿಗೆಯುದೆ ಇಲ್ಲೆ..:)
  ಇಲ್ಲಿ ಇಪ್ಪ ಒ೦ದೇ ಒ೦ದು ದೇವಸ್ಥಾನದ ಹತ್ತರೆ ಹೋಪಲೆ ಕೂಡ ಎಡಿಯದ್ದಷ್ಟು ಜನರ ನೂಕು ನುಗ್ಗಲು. :( ಕಸ್ತಲೆಪ್ಪಗಳೋ ನಾಳೆಯೋ ಹೋಪಲೆ ಎಡಿತ್ತೋ ನೋಡೆಕು.
  ದೇವರ ದಯ೦ದ ಎಣ್ಣೆ ಕಿಟ್ಟಿ ಮೀವಲೆ ಯಾವ ತೊ೦ದರೆಯೂ ಇಲ್ಲೆ.. :)

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿಬಂಡಾಡಿ ಅಜ್ಜಿಡೈಮಂಡು ಭಾವಅಡ್ಕತ್ತಿಮಾರುಮಾವ°ಪುತ್ತೂರಿನ ಪುಟ್ಟಕ್ಕಬೊಳುಂಬು ಮಾವ°ಶುದ್ದಿಕ್ಕಾರ°ವಿಜಯತ್ತೆಪಟಿಕಲ್ಲಪ್ಪಚ್ಚಿಶ್ರೀಅಕ್ಕ°ಸರ್ಪಮಲೆ ಮಾವ°ಚೆನ್ನಬೆಟ್ಟಣ್ಣಮಂಗ್ಳೂರ ಮಾಣಿಪ್ರಕಾಶಪ್ಪಚ್ಚಿಕಾವಿನಮೂಲೆ ಮಾಣಿಪುಣಚ ಡಾಕ್ಟ್ರುದೊಡ್ಡಭಾವಅಜ್ಜಕಾನ ಭಾವಸಂಪಾದಕ°ದೇವಸ್ಯ ಮಾಣಿಶೀಲಾಲಕ್ಷ್ಮೀ ಕಾಸರಗೋಡುಮುಳಿಯ ಭಾವಕೇಜಿಮಾವ°ಜಯಶ್ರೀ ನೀರಮೂಲೆಶರ್ಮಪ್ಪಚ್ಚಿಪೆಂಗಣ್ಣ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ