“ಪಂಚ-ತಂತ್ರ”

June 27, 2010 ರ 7:00 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ದಿನ ಎಷ್ಟು ಬೇಗ ಹೋವ್ತು ಹೇಳಿ ಅಲ್ಲದಾ? ಒಂದು ವಾರ ಹೇಂಗೆ ಕಳತ್ತು ಹೇಳಿ ಗೊಂತಾಯ್ದಿಲ್ಲೆ!! ಕಳುದ ಆದಿತ್ಯವಾರ ಇಷ್ಟೊತ್ತಿಂಗೆ ಅಜ್ಜನ ಮನೆಲಿ ಇತ್ತಿದ್ದೆ :) ಅಪರೂಪಕ್ಕೆ ಅಜ್ಜನ ಮನೆಗೆ ಹೊಪದು ಈಗ, ಹಾಂಗಾಗಿ ಇದ್ದ ಒಂದು ದಿನ ಗಮ್ಮತ್ತಿಲ್ಲಿ ಕಳದೆ :) ಮನೆಗೆ ವಾಪಾಸು ಎತ್ತಿ ಒಂದುವಾರ ಇಡೀ ಕೆಲಸಲ್ಲಿ ಬಿಜಿ !!ಇಂದು ಒಂದು ದಿನ ಸಿಕ್ಕುದು rest ಮಾಡ್ಲೆ, ನೆಂಟ್ರ…ದೋಸ್ತಿಗಳ ಎಲ್ಲ ಕಾಣೆಕಾರೆ, ಅಥವ ಎಂತಾರು ವಿಷೇಶ ಅಡಿಗೆ ಮಾಡ್ಲೆ!! ವಾರಲ್ಲಿ ಎರಡು ಆದಿತ್ಯವಾರ ಏಕೆ ಇಲ್ಲೆ ಹೇಳಿ ಕಾಣ್ತು ಒಂದೊಂದರಿ 😉 ಕೆಲವು ಜನಕ್ಕಂತೂ ಇಡೀ ವಾರ ಉಂಬಲೆ ತಿಂಬಲೆ ಒರಗುಲೆ..ಎಂತಕ್ಕೂ ಪುರ್ಸೊತ್ತಿರ್ತಿಲ್ಲೆ, ಬರೀ ತಲೆಬೆಶಿ ಮಾಡಿಗೊಂಡಿರ್ತವ್ವು ಇಡೀ ದಿನ!!! ಈ ಗಡಿಬಿಡಿಲಿ ಆರೋಗ್ಯದ ಕಡೆ ಗಮನ ಕೊಡ್ಲೇ ಎಡಿತ್ತಿಲ್ಲೆ. ಸರೀ ಒರಗದ್ರೆ, ಆಹಾರ ತೆಕ್ಕೊಳ್ಳದ್ರೆ ಒಂದಲ್ಲ ಒಂದು ತೊಂದರೆ ಇಪ್ಪದೇ. ಹಾಂಗಾರೆ ನಾವು fit ಆಗಿರೆಕ್ಕಾರೆ ಎಂತ ಮಾಡೆಕ್ಕು? ಆರೋಗ್ಯಕರ ಜೀವನ ನಡೆಶಿಗೊಂಡು ಹೋಪಲೆ ಕೆಲಾವು ಸೂತ್ರಂಗೊ ಇದ್ದು. ಮೇಲೆ ಎಂತದೋ ಪಂಚತಂತ್ರ ಹೇಳಿ ಬರದ್ದು!! ಆದರೆ ಯಾವುದೇ ಕಥೆ ಇಲ್ಲೆನ್ನೆ ಹೇಳಿ ನಿಂಗೊ ಗ್ರೇಶುತ್ತಾ ಇದ್ದೀರ? ಹೇಳ್ತೆ, ಇಲ್ಲಿ ಯಾವುದೇ ಮಂಗನ ಕಥೆ ಅಥವಾ ನರಿಯ ಕಥೆ ಬರೆತ್ತಿಲ್ಲೆ ಆನು :)ಆನೀಗ ಹೇಳು ವ ಕಥೆಗೆ  “ಆರೋಗ್ಯರಕ್ಷ ಪಂಚತಂತ್ರ” ಹೇಳಿ ಹೇಳ್ತವು. ಆಂಧ್ರಪ್ರದೇಶ ಮೂಲದ ಡಾ.ವೆಂಕಟ ರಾವ್ ಹೇಳ್ತವ್ವು ಆರೋಗ್ಯವ ಚೆಂದಕ್ಕೆ, ಲಾಯ್ಕಕ್ಕೆ ಮಡಿಕ್ಕೊಳ್ಳೆಕಾರೆ ನಾವು “ಐದು” ಸರಳ ಸೂತ್ರಂಗಳ ಪಾಲನೆ ಮಾಡೆಕು.ಅದು ಯಾವ್ದೆಲ್ಲಾ? ಹೇಂಗೆ? ನಿಂಗೊಗೆಲ್ಲ ಉಪಯೋಗ ಹಾಂಗೆ ಬರೆತ್ತೆ.

1)      ದಿನಲ್ಲಿ ಕನಿಷ್ಠ 8-10 ಗ್ಲಾಸ್ (2 ಲೀಟರ್) ನೀರು ಕುಡೀರಿ.

2)      ದಿನಕ್ಕೆ ಎರಡೇ ಹೊತ್ತು ಊಟ ಮಾಡಿ.

3)      ದಿನಕ್ಕೆ ಒಂದು ಗಂಟೆ ವ್ಯಾಯಾಮ/ಯೋಗಾಭ್ಯಾಸ ಮಾಡಿ.

4)      ದಿನಲ್ಲಿ 2 ಸರ್ತಿ ಪ್ರಾರ್ಥನೆ ಮಾಡಿ.

5)      ವಾರಲ್ಲಿ ಒಂದು ದಿನ ಉಪವಾಸ ಮಾಡಿ.

ಇದರೆಲ್ಲ ಎಂತಕ್ಕೆ ಮಾಡೆಕ್ಕು? ಅಥವಾ.. ಇದರ ಮಾಡಿರೆ ಎಲ್ಲವೂ ಸರಿ ಆವ್ತಾ? ಇದು ಹೀಂಗೇ ಆವ್ತು ಹೇಳಿ ಆನು ಹೇಳ್ಲೆಡಿಯ, ಆದರೆ…..ಈ ಸೂತ್ರಂಗಳ ಉಪಯೋಗ ಎಂತರ ಹೇಳಿ ಹೇಳ್ತೆ. ಒಂದೊಂದಾಗಿ ನೋಡಿಗೊಂಡು ಹೋಪ, ಆಗದಾ? :)

ದಿನಲ್ಲಿ ಕನಿಷ್ಠ 8-10 ಗ್ಲಾಸ್ (2 ಲೀಟರ್) ನೀರು ಕುಡೀರಿ:

ಇದರ ಬಗ್ಗೆ ಆನು ಕಳದ ವಾರವೇ ಬರದ್ದೆ, ಹಾಂಗಾಗಿ ಇಂದು ವಿವರ್ಸುತ್ತಿಲ್ಲೆ.

ದಿನಕ್ಕೆ ಎರಡೇ ಹೊತ್ತು ಊಟ ಮಾಡಿ:

ಇಲ್ಲಿ ಎರಡು ಹೊತ್ತು ಹೇಳಿ ಬರದ್ದವು, ಆದರೆ..ಇಂದ್ರಾಣ ನಮ್ಮ ಜೀವನ ಶೈಲಿಗೆ ಹೊಂದಿಗೊಂಬ ಹಾಂಗೆ ಮೂರು ಹೊತ್ತು ಹೇಳಿ ಮಾಡಿಗೊಂಬಲಕ್ಕು. ಹೇಂಗಿದ್ದ ಆಹಾರ ಹೇಳುದುದೇ ತುಂಬಾ ಮುಖ್ಯ. ಹೆಚ್ಚು ಬೆಶಿ ಇಪ್ಪದು, ಹೆಚ್ಚು ಮಸಾಲೆ ಇಪ್ಪದು, ತುಂಬಾ ದಿನ ಹಿಂದೆ ಮಾಡಿ ಮಡುಗಿದ್ದು ಇತ್ಯಾದಿ ವಸ್ತುಗೊ ತಿಂಬಲಾಗದ್ದು. ಹೇಳಿರೆ ತಾಮಸಿಕ ಮತ್ತೆ ರಾಜಸಿಕ ಆಹಾರಂಗಳ ಆದಷ್ಟು ಕಮ್ಮಿ ತೆಕ್ಕೊಳ್ಳೆಕ್ಕು. ಸಾತ್ವಿಕ ಆಹಾರಂಗಳ ಸೇವನೆ ದಿನಕ್ಕೆ (2-3) ಹೊತ್ತು ಮಾಡಿರೆ ಶರೀರಕ್ಕೆ, ಮನಸ್ಸಿಂಗೆ ತುಂಬಾ ಒಳ್ಳೆದು. ತಿಂದದು ಸರಿಯಾಗಿ ದೇಹಕ್ಕೆ ಸೇರ್ತು, ಮತ್ತೆ ಯಾವುದೇ ಅನಾರೊಗ್ಯಂಗೊಕ್ಕೆ ಎಡೆ ಮಾಡಿ ಕೊಡ್ತಿಲ್ಲೆ. ಹೊತ್ತಲ್ಲದ್ದ ಹೊತ್ತಿಲ್ಲಿ ತಿಂಬದು, ಇಡೀ ದಿನ ತಿಂದುಗೊಂಡೇ ಇಪ್ಪದು, ಇದೆಲ್ಲ ಮಾಡ್ಲಾಗ. ನಮ್ಮಲ್ಲಿ ಕೆಲವರಿಂಗೆ ಅಭ್ಯಸ ಇದ್ದು, ಎಷ್ಟೊತ್ತಿಂಗೂ ಬಾಯಿ ಆಡ್ಸಿಗೊಂಡೇ ಇರೆಕು!! ರಜ್ಜ ಕಮ್ಮಿ ಮಾಡಿರೆ ಒಳ್ಳೆದು :) ಅಲ್ಲದ್ರೆ ಶಕ್ತಿ ಪೂರ ತಿಂದದರ ಕರಗ್ಸುಲೇ ಹೋದರೆ ದೇಹದ ಶಕ್ತಿ ಕಮ್ಮಿ ಆಗದೋ?

ದಿನಕ್ಕೆ ಒಂದು ಗಂಟೆ ವ್ಯಾಯಾಮ/ಯೋಗಾಭ್ಯಾಸ ಮಾಡಿ:

ಇದಂತೂ ತುಂಬಾ ಮುಖ್ಯ. ಇದರ ಬಗ್ಗೆ ಇನ್ನೊಂದರಿ ವಿವರವಾಗಿ ಬರೆತ್ತೆ. ಆದರೆ ರಜ್ಜ ಮಾಹಿತಿ ಇಲ್ಲಿ ಕೊಡ್ತೆ. ವ್ಯಾಯಾಮ/ಯೋಗಾಭ್ಯಾಸ ಮಾಡುದರಿಂದ ರಕ್ತ ಸಂಚಾರ, ನರಂಗಳಲ್ಲಿ ಸಂವೇದನೆಗಳ ಚಲನೆ, ಮಾಂಸಖಂಡಕ್ಕೆ ಚೈತನ್ಯ, ದೇಹಕ್ಕೆ ಹೆಚ್ಚು ಆಮ್ಲಜನಕ ಇದೆಲ್ಲ ಸಿಕ್ಕುತ್ತು, ಒಟ್ಟಿಂಗೇ ಹೆಚ್ಚಿಪ್ಪ ಕೊಬ್ಬಿನ ಅಂಶವುದೇ ಕರಗುತ್ತು.

ದಿನಲ್ಲಿ ಎರಡು ಸರ್ತಿ ಪ್ರಾರ್ಥನೆ ಮಾಡಿ.:

ಈ ಸೂತ್ರ ಬೇರೆಲ್ಲಕ್ಕಿಂತಲೂ ಮುಖ್ಯ. ಇದು ನಮ್ಮ ಆತ್ಮ-ಮನಸ್ಸುಗಳ ಆರೋಗ್ಯವ ಸರಿಯಾಗಿ ಕಾಪಾಡಿಗೊಂಡು ಹೋಪಲೆ ಇಪ್ಪ ಒಂದೇ ದಾರಿ :). ದಿನಾಗ್ಲೂ ದೇವರಿಂಗೆ ಕೈ ಮುಗುದಿಕ್ಕಿಯೇ ದಿನ ಶುರು ಅಪ್ಪದು, ಹೊತ್ತೊಪಗಳುದೆ ಅಷ್ಟೆ ಅಲ್ಲದಾ? ಇದರ ಪಾಲನೆ ಮಾಡದ್ದವ್ವು ಇದ್ದರೆ, ಅನುಸರ್ಸಿ ನೋಡಿ, ನಿಂಗೊಗೇ ಗೊಂತಕ್ಕು ಆ ಖುಶಿ ಎಂತರ ಹೇಳಿ!!

ವಾರಲ್ಲಿ ಒಂದು ದಿನ ಉಪವಾಸ ಮಾಡಿ:

ಇದು ರಜ್ಜ ಬಙ ಹೇಳಿ ಕಾಣ್ತು ನಿಂಗೊಗೆ, ಅಲ್ಲದಾ? ಆದರೆ ಇದರಿಂದ ಅಪ್ಪ ಪ್ರಯೋಜನಂಗಳೂ ತುಂಬಾ ಇದ್ದು. ಉಪವಾಸ ಹೇಳಿರೆ, ನಮ್ಮ ಏಕಾದಶಿ ಉಪವಾಸ ಅಲ್ಲ, ಎರಡು ಸಜ್ಜಿಗೆ ರೊಟ್ಟಿ, 4 ಬಾಳೆಹಣ್ಣು ರಾಗಿ ದೋಸೆ…… ಇದು ಉಪವಾಸ ಅಲ್ಲ, menuವಿಲ್ಲಿ ರಜ್ಜ ಬದಲಾವಣೆ ಅಷ್ಟೆ. ಉಪವಾಸ ಮಾಡುವಗ ಒಂದೋ ಬರೀ ನೀರು ಮಾಂತ್ರ ಕುಡಿಯಕ್ಕು, ಅಥವಾ ಹಣ್ಣಿನ ಎಸರು (fruit juices) ತೆಕ್ಕೊಂಬಲಕ್ಕು. ಆದರೆ,ಈ ರೀತಿಯ ಉಪವಾಸ ಮಾಡುವ ಮೊದಲು ಸರಿಯಾದ ಮಾಹಿತಿ ತೆಕ್ಕೊಂಡು, ವೈದ್ಯರ  guidanceಲ್ಲಿ ಮಾಡೆಕ್ಕು. ಇದರಿಂದ ಹಲವು ಅಸೌಖ್ಯಂಗಳ ತಡವಲಾವ್ತು :) ಹೆಚಾಗಿ ಆರೋಗ್ಯಕರ ಜೀವನ ನಡಶುಲಾವ್ತು . ಇದು ತುಂಬಾ ಮುಖ್ಯ ಅಲ್ಲದಾ?

ಇಷ್ಟು ಬರದ್ದೆಲ್ಲವುದೇ ಒಂದು ವಿಷೇಶ ಕಾಂಗು, ಆದರೆ ಇದರ ಪಾಲನೆ ಮಾಡಿರೆ ನಿಜವಾಗಿಯೂ ಅದ್ಭುತ ಫಲಿತಾಂಶ ಇದ್ದು. ಎಲ್ಲ ಸೂತ್ರಂಗಳ ಬಗ್ಗೆ, ಅದರ ರೀತಿ ಗಳ ಬಗ್ಗೆ, ಅದು ಹೇಂಗೆ ಕೆಲಸ ಮಾಡ್ತು ಹೇಳ್ತದರ ವಿವರಲ್ಲಿ ಬರೆತ್ತೆ ಇನ್ನು ಮುಂದೆ ಬಪ್ಪ ವಾರಂಗಳಲ್ಲಿ :) ಎನ್ನ ಶುರುವಾಣ ಲೇಖನಕ್ಕೆ ನಿಂಗಳೆಲ್ಲರ ಪ್ರತಿಕ್ರಿಯೆ ತುಂಬಾ ಲಾಯ್ಕಿತ್ತು. ಇದೇ ರೀತಿ ಮುಂದೆಯೂ ಇರ್ತು ಹೇಳಿ ನಂಬಿಕೆ ಇದ್ದು. ನಿಂಗಳ ಯಾವುದೇ ಸಂಶಯ, ಪ್ರಶ್ನೆ ಇದ್ದರೆ ಕೇಳ್ಳಕ್ಕು.

-ಸುವರ್ಣಿನೀ ಕೊಣಲೆ.

"ಪಂಚ-ತಂತ್ರ", 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಅಡ್ಕತ್ತಿಮಾರುಮಾವ°
  ಅಡ್ಖತ್ತಿಮಾರ ಮಾವ

  ತಾಮಸ.ರಾಜಸ,ಸಾತ್ವಿಕ…ಈ ೩ ಆಹಾರದ ಬಗ್ಗೆ ವಿವರಣೆ ಕೊಡುತ್ತಿರಾ….

  [Reply]

  VA:F [1.9.22_1171]
  Rating: +1 (from 1 vote)
 2. ಸುವರ್ಣಿನೀ ಕೊಣಲೆ
  Suvarnini Konale

  :)
  ತಾಮಸಿಕ ಆಹಾರ: ತುಂಬಾ ಹೊತ್ತು ಮೊದಲು ಮಾಡಿ ಮಡುಗಿದ್ದು, ಹಳಸಿದ ಆಹಾರ,ಹುಳಿ ಬಂದ ಆಹಾರ, ಶೀತಲೀಕರಿಸಿದ ಆಹಾರ(refrigerated food), ready to eat ಆಹಾರ ಸಾಮಗ್ರಿಗೊ (preservative ಹಾಕಿದ್ದು), ಅಮಲು ಪದಾರ್ಥಂಗೊ. ಮಾಂಸಾಹಾರ.
  ರಾಜಸಿಕ ಆಹಾರ: ಉತ್ತೆಜನ ಉಂಟುಮಾಡುವ ಆಹಾರ,ಖಾರ,ಮಸಾಲೆ, coffee,tea, ನೀರುಳ್ಳಿ/ಬೆಳ್ಳುಳ್ಳಿ ಇತ್ಯಾದಿ.
  ಸಾತ್ವಿಕ ಆಹಾರ: ಮಧುರ ಹಾಗೂ ಸ್ನಿಗ್ಧ ಆಹಾರ. ಬೇಯಿಸಿದ ದವಸ-ಧಾನ್ಯ, ಮೊಳಕೆ ಕಾಳು,ಹಣ್ಣು,ತರಕಾರಿ,ಹಾಲು ಇತ್ಯಾದಿ ಪ್ರಾಕೃತಿಕವಾಗಿ ಸಿಕ್ಕುವ ಆಹಾರ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾದ ಆಹಾರ.

  [Reply]

  VA:F [1.9.22_1171]
  Rating: 0 (from 0 votes)
 3. ಅಡ್ಕತ್ತಿಮಾರುಮಾವ°
  ಅಡ್ಖತ್ತಿಮಾರ ಮಾವ

  ಆನು ಬೆಳ್ಳುಳ್ಳಿ ,ನೀರುಳ್ಳಿ ತಿಂಬದು ಯಾವಾಗಳೇ ಬಿಟ್ಟಿದೆ. ಇನ್ನುcoffee,tea ಯನ್ನು ಕೂಡಾ ಬಿಡೆಕ್ಕಕ್ಕಾ????ರಾಮ,ರಾಮಾ..!!!!!

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಬಿಡೆಕ್ಕು ಹೇಳಿ force ಎಂತ ಅಲ್ಲ, ನಮ್ಮ ಮನಸ್ಸಿಂಗೆ ಸಂಪೂರ್ಣ ಒಪ್ಪಿಗೆ ಇಲ್ಲದ್ದೆ ಯಾವುದನ್ನೇ ಮಾಡಿರೂ ಪ್ರಯೋಜನ ಎಂತರ?ಅಲ್ಲದಾ?

  [Reply]

  VA:F [1.9.22_1171]
  Rating: 0 (from 0 votes)
 4. ಗುತ್ತು ಸದಾಶಿವ°

  ಭೂಮಿಯ ಒಳ ಬೆಳವದು – ಉದಾಹರಣೆಗೆ ಬಟಾಟೆ – ಕೆಲವು ಜನಂಗೊ ಒಳ್ಳೆದಲ್ಲ ಹೇಳುತ್ತವು – ಇದರ ಬಗ್ಗೆ ನಿಂಗಳ ಅಭಿಪ್ರಾಯ ಹೇಂಗೆ?

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಆಯುರ್ವೇದ,ಯೋಗ ಮತ್ತೆ ಪ್ರಕೃತಿ ಚಿಕಿತ್ಸೆಲಿ ಬಟಾಟೆಯ ಉಪಯೋಗ ಇಲ್ಲೆ, ಇದು ವಾತಕಾರಕ, ಇದು ತಾಮಸಿಕ ಆಹಾರ. ಇದರಲ್ಲಿ ಇಪ್ಪದು carbohydrate(starch) ಹೇಳಿರೆ ಶರ್ಕರಪಿಷ್ಠ. ಆದರೆ ಸಂಪ್ಪೊರ್ಣವಾಗಿ ತಿಂಬದರ ಬಿಡೆಕ್ಕು ಹೇಳಿ ಅಲ್ಲ, ಆದರೇ ಇದಅನ್ನೇ ಹೆಚ್ಚು ಹೆಚ್ಚು ಉಪಯೋಗ ಮಾಡುದು ಒಳ್ಳೆದಲ್ಲ.

  [Reply]

  ಗುತ್ತು ಸದಾಶಿವ° Reply:

  ಮಿಂಚಿನ ಉತ್ತರಂಗೊಕ್ಕೆ ತುಂಬಾ ಧನ್ಯವಾದಂಗೊ, ಅಕ್ಕ

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ನಿಂಗೊ ಕೇಳುವ ಪ್ರಶ್ನೆಗೊಕ್ಕೆ ಉತ್ತರ ಕೊಡುದು ಎನ್ನ ಕರ್ತವ್ಯ :)

  VA:F [1.9.22_1171]
  Rating: 0 (from 0 votes)
 5. ಗಣೇಶ ಮಾವ°

  ಉಪವಾಸದ ಸಮಯಲ್ಲಿ ಕುಂಬಳಕಾಯಿ ಎಸರು (juice) ಕುಡುದರೆ ಒಳ್ಳೇದು ಹೇಳಿ ಕೇಳಿದ್ದೆ..ಇದರ ಬಗ್ಗೆ ಎನಗೆ ರಜ್ಜ ಮಾಹಿತಿ ಕೊಡ್ತೀರಾ ಸುವರ್ಣಿನಿ ಅಕ್ಕಾ??

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ಅಪ್ಪು, ಬೂದುಕುಂಬಳಕಾಯಿಯ ಎಸರು ಕುಡುದರೆ ಒಳ್ಳೆದು್, ಹೊಟ್ಟೆ ಉರಿ ಬಪ್ಪದು ಕಮ್ಮಿ ಆವ್ತು, ದೇಹದ ಕೊಬ್ಬಿನ ಅಂಶ ಕರಗುಲೆಡೆ ಸಹಾಯ ಮಾಡ್ತು. ಆದರೆ ಹೆಚ್ಚಿನ ಜನ ಇದರ ಇಷ್ಟ ಪಡ್ತವಿಲ್ಲೆ, ಎಸರಿಂಗೆ ಒಂದು ರೀತಿ ಮೂರಿ ಇದ್ದು.
  ಉಪವಾಸ ಮಾಡದ್ದೆ ಇಪ್ಪಗಳುದೇ ದಿನಾ ಉದಿಯಪ್ಪಗ ಖಾಲಿ ಹೊಟ್ಟೆಲಿ ಇದರ ಕುಡುದರೆ acidity ತೊಂದರೆ ಗುಣ ಆವ್ತು.

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ಇದರಲ್ಲಿ carbohydrates ಕಮ್ಮಿ ಇಪ್ಪ ಕಾರಣ ಡಯಬಿಟೀಸ್ ಮತ್ತೆ ಬೊಜ್ಜಿನ ಸಮಸ್ಯೆ ಇಪ್ಪವಕ್ಕೆ ಒಳ್ಳೆದು. ಉರಿಮೂತ್ರಕ್ಕುದೇ ಉಪಕಾರ ಆವ್ತು.

  [Reply]

  VN:F [1.9.22_1171]
  Rating: 0 (from 0 votes)
 6. ವೇಣೂರಣ್ಣ
  subrahmanya bhat

  ಇದರ ಡಾ.ಪಳ್ಳತ್ತಡ್ಕ ಕೇಶವ ಭಟ್ ಮಾವ ಅವರ “ಸರಳ ಜೀವನದಿಂದ ಸಮೃದ್ಧ ಚಿಂತನೆಯೆಡೆಗೆ” ಪುಸ್ತಕಲ್ಲಿ ಬಹಳ ಲಾಯಕ್ಕಕೆ ವಿವರಿಸಿದ್ದವು . ಒಳ್ಳೆ ಮಾಹಿತಿ ಇಪ್ಪ ವಿಚಾರ … ಒಳ್ಳೆ ಲೇಖನ ಸುವರ್ಣಿನಿ ಅಕ್ಕಾ

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಅಪ್ಪು, ಅವರ ಪುಸ್ತಕ ತುಂಬಾ ಲಾಯ್ಕಿದ್ದು, ಸುಮಾರು ವಿಷಯಂಗಳ ಬಗ್ಗೆ ಲಾಯ್ಕಲ್ಲಿ ಬರದ್ದವು.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಧನ್ಯವಾದ :)

  [Reply]

  VA:F [1.9.22_1171]
  Rating: 0 (from 0 votes)
 7. ವೇಣೂರಣ್ಣ

  ಅದಲ್ಲದ್ದೆ ಇಂಗ್ಲಿಷಿಲ್ಲಿ “Holistic Life” ಹೇಳ್ತ ಪುಸ್ತಕಲ್ಲಿ ಕೂಡ ಆಹಾರ ವಿಧಾನಗಳ ಬಗ್ಗೆ ವಿವರಣೆ ಇದ್ದು. ಸ್ವತಹ ಕೇಶವ ಮಾವ ಅವು ಹೇಳಿದ ಎಲ್ಲ ವಿಚಾರಂಗಳನ್ನು ಜೀವನಲ್ಲಿ ಅಳವಡಿಸಿ ತೋರ್ಸಿದ್ದವು. ಆಹಾರ ಪದ್ಧತಿ ಕಲಿವವಕ್ಕೆ ಅವರ ಎಲ್ಲ ಪುಸ್ತಕಂಗೋ ಒಳ್ಳೆ ಆಕರ ಗ್ರಂಥ ಹೇಳಿ ಎನಗನಿಸಿದ್ದು.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಅಪ್ಪು, ಸರಿಯಾಗಿ ಹೇಳಿದಿ ನಿಂಗೊ.

  [Reply]

  VA:F [1.9.22_1171]
  Rating: 0 (from 0 votes)
 8. ವೇಣೂರಣ್ಣ

  ಇಂಥ ಸಾಂಧರ್ಬಿಕ ಲೇಖನಗಳ ಬರೆತ್ತ ಇರಿ. ಎಲ್ಲ ಮಾಡುಲೆ ಎಡಿಯದ್ರೆ ಕೆಲವನ್ನಾದರೂ ರೂಡಿಸಿಗೊಂಬ ಪ್ರಯತ್ನ ಮಾಡ್ಲೆ ಅಕ್ಕನ್ನೇ! 😀

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಖಂಡಿತಾ :)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಚೂರಿಬೈಲು ದೀಪಕ್ಕವಿನಯ ಶಂಕರ, ಚೆಕ್ಕೆಮನೆಜಯಗೌರಿ ಅಕ್ಕ°ಪವನಜಮಾವದೊಡ್ಡಭಾವಬೋಸ ಬಾವನೆಗೆಗಾರ°ಅಕ್ಷರ°ಅಕ್ಷರದಣ್ಣದೇವಸ್ಯ ಮಾಣಿಡಾಮಹೇಶಣ್ಣವೆಂಕಟ್ ಕೋಟೂರುಪೆರ್ಲದಣ್ಣವಸಂತರಾಜ್ ಹಳೆಮನೆಸುವರ್ಣಿನೀ ಕೊಣಲೆಶಾ...ರೀಉಡುಪುಮೂಲೆ ಅಪ್ಪಚ್ಚಿಪ್ರಕಾಶಪ್ಪಚ್ಚಿಬಟ್ಟಮಾವ°ಡೈಮಂಡು ಭಾವಅಜ್ಜಕಾನ ಭಾವಶುದ್ದಿಕ್ಕಾರ°ಬೊಳುಂಬು ಮಾವ°ಒಪ್ಪಕ್ಕಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ