ಮೆನೋಪಾಸ್-ಅಂತ್ಯ;ಋತುಚಕ್ರದ್ದು, ಜೀವನದ್ದಲ್ಲ.

November 14, 2010 ರ 6:30 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಪ್ಪತ್ತು ದಿನ ರಜೆ ಹಾಕಿ, ಈ ವಾರ ಡ್ಯೂಟಿಗೆ ಹೋದಪ್ಪಗ ಸುಮಾರು ಕೆಲಸಂಗೊ ಬಾಕಿ ಇತ್ತು. ಬ್ಯುಸಿ ಇತ್ತಿದ್ದೆ ಅದರ್ಲಿ.  ಅದಲ್ಲದ್ದೆ ಬೇರೆ ಸುಮಾರು ಕೆಲಸಂಗೊ ಬಾಕಿ ಇಪ್ಪದರ ಎಲ್ಲ ಮಾಡ್ತಾ ಇದ್ದೆ, ಬರವಲೆ ಪುರ್ಸೊತ್ತಿಲ್ಲೆ :(. ಸಮಯದ ಅಭಾವ ! ಸಮಯವೇ ಹಾಂಗೆ ಅಲ್ಲದಾ… ನಮ್ಮ ಹತ್ತರೆ ಇದ್ದು ಹೇಳಿ ನಾವು ಗ್ರೇಶುದು…ಆದರೆ ಇರ್ತಿಲ್ಲೆ ! ನಮ್ಮ ಕೈಲಿ ನಾವು ಎಷ್ಟೇ ಕ್ರಯದ ವಾಚು ಕಟ್ಟಿರೂ ಸಮಯವ ಕಟ್ಟಿ ಹಾಕುಲೆ ಎಡಿಗಾ !! ಸಮಯದ ಬಗ್ಗೆ ಮಾತಾಡುಲೆ ಕೂದರೆ ಸಮಯ ಕಳದ್ದೇ ಗೊಂತಾಗ ! ಹೀಂಗೇ ಸಮಯದ ಬಗ್ಗೆ ಆಲೋಚನೆ ಮಾಡ್ತಾ ಹೋದಹಾಂಗೇ ಒಂದಕ್ಕೊಂದು ಸಂಬಂಧಿಸಿದ ಸುಮಾರು ವಿಚಾರಂಗೊ ಮನಸ್ಸಿಲ್ಲಿ ಗಾಳಿಲಿ ತೇಲಿ ಹೋಪ ಪರಿಮ್ಮಳದ ಹಾಂಗೆ ಬಂದು ಹೋತು…. ನಾವು ಹುಟ್ಟಿ.. ಬೆಳದು..ಶಾಲೆಗೆ ಹೋಪದು..ಕಾಲೇಜಿಂಗೆ ಹೋಪದು.. ಅದರೊಟ್ಟಿಂಗೆಯೇ ಜೀವನಲ್ಲಿ ಅಪ್ಪ ಬದಲಾವಣೆಗೊ… ಯೋಗರಾಜ ಭಟ್ರ “ಲೈಫ಼ು ಇಷ್ಟೇನೆ” ಪದ್ಯದೇ ನೆಂಪಾತು :). ಮುಗಿಯದ್ದ ಪಯಣ ಜೀವನ..ಆದರೆ ಅದರಲ್ಲೂ ಬೇರೆ ಬೇರೆ ಹಂತಂಗೊ, ಅದರ್ಲಿಪ್ಪ ಸುಖ-ದುಃಖಂಗೊ, ಹೊಸ ಅನುಭವಂಗೊ, ಹಳೆ ನೆಂಪುಗೊ… ಎಂತದೇ ಹೇಳಿ..ಜೀವನ ಒಂದು ’ಅದ್ಭುತ’, ನಾಳೆ ಎಂತ ಹೇಳಿ ಆರಿಂಗೂ ಗೊಂತಿಲ್ಲೆ !! ಎಲ್ಲಕ್ಕಿಂತಲೂ ನಿಗೂಢ !! ಹೀಂಗಿಪ್ಪ ಜೀವನವ ಸಾಧ್ಯ ಆದಷ್ಟು ನೆಮ್ಮದಿಲಿ..ಸರಿಯಾದ ರೀತಿಲಿ ಬದುಕ್ಕುದು ನಮ್ಮ ಕೈಲಿದ್ದು. ದೈಹಿಕ ಮತ್ತೆ ಮನಸ್ಸಿನ ಆರೋಗ್ಯವ ಸರಿ ಮಡಿಕ್ಕೊಂಬದುದೇ ನಮ್ಮ ಕೈಲಿಯೇ ಇದ್ದು.

ಹೀಂಗೇ ಹಲವು ಹಂತಂಗಳ ದಾಂಟಿ ಬಂದಪ್ಪಗ ಜೀವನವೇ ಮುಗುತ್ತು, ಇನ್ನೆಂತ ಬೇಡ ಹೇಳಿ ಕಾಣ್ತು ಕೆಲವು ಹಿರಿಯೋರಿಂಗೆ…ಇದಕ್ಕೆ ಸುಮಾರು ಕಾರಣಂಗೊ ಇದ್ದರೂ ಮುಖ್ಯ ಕಾರಣ ಆರೋಗ್ಯ. ಪ್ರಾಯ ಆದಹಾಂಗೆ ಆರೋಗ್ಯ ಹೆಚ್ಚು ಕಮ್ಮಿ ಆವ್ತು, ಅದರೊಟ್ಟಿಂಗೆ ಮನಸ್ಸುದೇ. ಇಂದು ಹೀಂಗಿದ್ದ ಒಂದು ವಿಚಾರದ ಮೇಲೆ ರಜ್ಜ ಬೆಣಚ್ಚು ಚೆಲ್ಲುವ ಮನಸ್ಸಾತು :).

ಹೆಮ್ಮಕ್ಕಳ ಜೀವನಲ್ಲಿ ಒಂದು ಮುಖ್ಯ ಹಂತ “ಮೆನೋಪಾಸ್” .ಋತುಚಕ್ರದ ಆರಂಭ ಹೇಂಗೆ ನೈಸರ್ಗಿಕ ಮತ್ತೆ  ಸಾಮಾನ್ಯವಾಗಿ ನಡೆತ್ತೋ ಹಾಂಗೆಯೇ ಋತುಚಕ್ರದ ಅಂತ್ಯ ಕೂಡ. ಇದರ ಬಗ್ಗೆ ಹಲವು ತಪ್ಪು ಕಲ್ಪನೆಗೊ ಇದ್ದು. ಈ ಸಂದರ್ಭಲ್ಲಿ ಕೆಲವು ತೊಂದರೆಗೊ ಕಂಡು ಬತ್ತು, ಕೆಲವು ಜೆನಕ್ಕೆ ಇದರ ಬಗ್ಗೆ ಬೇರೆಯವರ ಹತ್ತರೆ ಮಾತಾಡ್ಲೆ ಅಥವಾ ಡಾಕ್ಟ್ರ ಹತ್ತರೆ ಹೋಪಲೆ ಸಂಕೋಚ ಇರ್ತು, ಇನ್ನು ಕೆಲವು ಜೆನಕ್ಕೆ ತನಗೆ ಆವ್ತಾ ಇಪ್ಪ ತೊಂದರೆಗೆ ಚಿಕಿತ್ಸೆ ಇದ್ದು ಹೇಳಿ ಗೊಂತಿಲ್ಲದ್ದೆ ಅಂತೆ ಸಹಿಸಿಗೊಂಡಿರ್ತವು. ಅದಕ್ಕೆ ಬೇಕಾಗಿ ಮೆನೋಪಾಸ್ ನ ಬಗ್ಗೆ ರಜ್ಜ ಮಾಹಿತಿ ಕೊಡ್ತೆ.

ಎಂತರ?

ಅಂಡಾಶಯದ ಕಾರ್ಯಕ್ಷಮತೆ ಕಮ್ಮಿ ಅಪ್ಪದರಿಂದಾಗಿ ಋತುಚಕ್ರದ ಅಂತ್ಯ ಅಪ್ಪದಕ್ಕೆ ಮೆನೋಪಾಸ್ ಹೇಳುದು. 40-55 ವರ್ಷ ಪ್ರಾಯಲ್ಲಿ ಹೆಮ್ಮಕ್ಕೊಗೆ ಆರು ತಿಂಗಳಿಂದ ಹೆಚ್ಚು ಸಮಯ ತಿಂಗಳ ಮುಟ್ಟಾಗದ್ರೆ [ಬೇರೆ ಯಾವುದೇ ಗರ್ಭಕೋಶ ಅಥವಾ ಹಾರ್ಮೋನಿನ ತೊಂದರೆ ಇಲ್ಲದ್ರೆ] ಮೆನೋಪಾಸ್/ ಖಾಯಂ(permanent) ಆಗಿ ಮುಟ್ಟು ನಿಂದತ್ತು ಹೇಳಿ ಅರ್ಥ.

ಮೆನೋಪಾಸ್ ಅಪ್ಪ ಸಮಯ:

ಮೇಲೆ ಹೇಳಿದ ಹಾಂಗೆ 40-55 ವರ್ಷದ ಮಧ್ಯೆ ಹೆಚ್ಚಿನವಕ್ಕೆ ಮೆನೋಪಾಸ್ ಆವ್ತು. ಇದು ಜೀವನಶೈಲಿ, ಅನುವಂಶೀಯತೆಗಳ  ಅವಲಂಬಿಸಿರ್ತು.

ಹೇಂಗೆ ಆವ್ತು? ಎಂತ ಆವ್ತು ?

  • ಋತುಚಕ್ರ ನಿಂಬ ರಜ್ಜ ಸಮಯ ಮೊದಲೇ ಅಂಡಾಶಯಲ್ಲಿ ಅಂಡಾಣು ಬಿಡುಗಡೆ ಅಪ್ಪದು ಏರುಪೇರಪ್ಪಲೆ ಶುರು ಆವ್ತು. ಅಂಡಾಶಯ ಪಿಟ್ಯುಟರಿ ಗ್ರಂಥಿಂದ ಬಪ್ಪ ಹಾರ್ಮೋನುಗಳಿಂಗೆ ಸ್ಪಂದಿಸದ್ದೆ ಇಪ್ಪದೇ ಇದಕ್ಕೆ ಕಾರಣ. ಹಾರ್ಮೋನುಗಳೂ ಹೆಚ್ಚು ಕಮ್ಮಿ ಅಪ್ಪದರಿಂದಾಗಿ ಗರ್ಭಕೋಶದ ಒಳಾಣ ಮಾಂಸದ ಪದರದ ಬೆಳವಣಿಗೆ ಅಪ್ಪದು ನಿಲುತ್ತು, ಇದರಿಂದಾಗಿ ಕಡೇಂಗೆ ಮುಟ್ಟಪ್ಪದು ನಿಲ್ಲುತ್ತು.
  • ಈಸ್ಟ್ರೋಜನ್ ಮತ್ತೆ ಪ್ರೊಜೆಸ್ಟೆರೋನ್ ಹೇಳ್ತ ಎರಡು ರಸದೂತಂಗೊ(ಹಾರ್ಮೋನುಗೊ) ಕಮ್ಮಿ ಆವ್ತಾ ಹೋವ್ತು. ಮೆನೋಪಾಸ್ ಆಗಿ ಐದರಿಂದ ಹತ್ತು ವರ್ಷ ಕಳುದಮೇಲೆ ಈಸ್ಟ್ರೋಜನ್ ನ ಪ್ರಮಾಣ ಶರೀರಲ್ಲಿ ಇಲ್ಲೆ ಹೇಳಿ ಹೇಳುವಷ್ಟರ ಮಟ್ಟಿಂಗೆ ಕಮ್ಮಿ ಆವ್ತು.
  • ಆಂಡ್ರೋಜನ್ ಹೇಳ್ತ ಹಾರ್ಮೋನುಗಳ ಪ್ರಭಾವ ಹೆಚ್ಚಾವ್ತು. ಇದು ಗಂಡಸರಲ್ಲಿ ಹೆಚ್ಚು ಇಪ್ಪ ಹಾರ್ಮೋನುಗೊ. ಈಸ್ಟ್ರೋಜನ್,ಪ್ರೊಜೆಸ್ಟೆರೋನ್ ಇಪ್ಪಗ ಇದರ ಪ್ರಭಾವ ಹೆಚ್ಚು ಇರ್ತಿಲ್ಲೆ. ಆದರೆ ಮೆನೋಪಾಸ್ ಆದಮೇಲೆ ಈ ಆಂಡ್ರೋಜನ್ನುಗಳ ಪ್ರಭಾವ ಹೆಚ್ಚಾವ್ತು. ಇದರಿಂದಾಗಿ ಮೋರೆಲಿ ಕೂದಲು ಬೆಳವದು, ಸ್ವರ ಗಂಡಸರ ಸ್ವರದ ಹಾಂಗೆ ಅಪ್ಪದು ಇತ್ಯಾದಿ ಲಕ್ಷಣಂಗೊ ಬಪ್ಪ ಸಾಧ್ಯತೆ ಇದ್ದು.

ಇದಿಷ್ಟು ಹಾರ್ಮೋನಿಂಗೆ ಸಂಬಂಧಪಟ್ಟ ಹಾಂಗೆ ಅಪ್ಪ ಬದಲಾವಣೆಗೊ.

ಮೆನೋಪಾಸಿನ ಸಂದರ್ಭಲ್ಲಿ ಗರ್ಭಕೋಶ ಇತ್ಯಾದಿ ಅಂಗಂಗಳಲ್ಲಿ ಅಪ್ಪ ಬದಲಾವಣೆಗೊ:

ಅಂಡಾಶಯ:

  • ಗಾತ್ರಲ್ಲಿ ಕುಗ್ಗುತ್ತು.
  • ಬೆಳೀ ಬಣ್ಣಕ್ಕೆ ತಿರುಗುತ್ತು ಮತ್ತೆ ಸುಕ್ಕು ಬೀಳ್ತು.
  • ಅದರ ಕೆಲಸ ಮಾಡುವ ಶಕ್ತಿ ಕಮ್ಮಿ ಆವ್ತು.
  • ಅಂಡಾಣು ಬಿಡುಗಡೆ ಅಪ್ಪದು ನಿಲ್ಲುತ್ತು.

ಅಂಡನಾಳ:

  • ನಿಶ್ಶಕ್ಯಿ ಉಂಟಾವ್ತು.
  • ನಾಳದ  ಒಳ ಇಪ್ಪ ರೋಮದ ಹಾಂಗಿದ್ದ ರಚನೆಗೊ ಕಾಣೆ ಆವ್ತು.

ಗರ್ಭಕೋಶ:

  • ಗಾತ್ರಲ್ಲಿ ಸಣ್ಣ ಆವ್ತು.
  • ಗರ್ಭಕೋಶಲ್ಲಿ ಇಪ್ಪ ಒಳಾಣ ಮಾಂಸದ ಪದರು ತೆಳ್ಳಂಗೆ ಆವ್ತು.
  • ಗರ್ಭಾಶಯದ ದ್ವಾರಂದ (cervix) ಸ್ರವಿಸುವಿಕೆ ಕಮ್ಮಿ ಆವ್ತು.

ಯೋನಿ:

  • ಹಿಗ್ಗುವ ಕುಗ್ಗುವ ಶಕ್ತಿ ಕಳಕ್ಕೊಂಡು ಸಪೂರ ಆವ್ತು.
  • ಇಲ್ಲಿ ಇಪ್ಪ ಕೆಲವು ಉಪಕಾರಿ ಬಾಕ್ಟೀರಿಯಂಗೊ ಇಲ್ಲದ್ದೆ ಆವ್ತು.
  • ಅಲ್ಲಿಯಾಣ pH ಕಮ್ಮಿ ಆಗಿ ಬೇರೆ ಕೆಲವು ಉಪದ್ರಕಾರಿ ರೋಗಾಣುಗಳ ಬೆಳವಣಿಗೆಗೆ ಸಹಾಯ ಆವ್ತು, ಇದರಿಂದಾಗಿ ಸೋಂಕು ಅಪ್ಪ ಸಾಧ್ಯತೆ ಹೆಚ್ಚು.

ಜನನಾಂಗದ ಹೆರಾಣ ಭಾಗ:

  • ಕುಗ್ಗುವಿಕೆ ಉಂಟಾವ್ತು.

ಸ್ತನ:

  • ಗ್ರಂಥಿಗೊ ಕೆಲಸವ ನಿಲ್ಸುತ್ತು, ಕುಗ್ಗುತ್ತು.
  • ಸ್ತನಲ್ಲಿ ಇಪ್ಪ ಕೊಬ್ಬಿನ ಅಂಶ ಹೋಗಿ ಗಾತ್ರಲ್ಲಿ ಕುಗ್ಗುತ್ತು.

ಮೂತ್ರನಾಳ ಮತ್ತೆ ಮೂತ್ರಕೋಶ:

  • ಯೋನಿಲಿ ಅಪ್ಪಂತಹ ಬದಲಾವಣೆಗೋ ಇಲ್ಲಿಯೂ ಆವ್ತು,
  • ಹಾಂಗಾಗಿ ಸೋಂಕು ಅಪ್ಪ ಸಾಧ್ಯತೆ ಹೆಚ್ಚು.
  • ಮೂತ್ರವಿಸರ್ಜನೆಯ ಸಂದರ್ಭಲ್ಲಿ ಬೇನೆ, ಉರಿ, ಮೂತ್ರ ತಡೆಹಿಡಿವಲೆ ಎಡಿಯದ್ದೆ ಅಪ್ಪದು ಇತ್ಯಾದಿ ಸಮಸ್ಯೆ ಅಪ್ಪ ಸಾಧ್ಯತೆಗೊ ಇದ್ದು.

ಸ್ನಾಯುಗಳ ನಿಶ್ಶಕ್ತಿ:

  • ಕಿಬ್ಬೊಟ್ಟೆಯ ಸ್ನಾಯುಗಳ ಶಕ್ತಿ ಕಮ್ಮಿ ಆವ್ತು. ಇದರಿಂದಾಗಿ ಗರ್ಭಕೋಶ ಮತ್ತೆ ಮೂತ್ರಕೋಶಂಗಳ ಸ್ಥಾನಪಲ್ಲಟ ಅಪ್ಪ ಸಾಧ್ಯತೆಗಳೂ ಇದ್ದು.
  • ನಿಶ್ಶಕ್ತಿ, ಸೊಂಟ ಬೇನೆ/ಬಚ್ಚುದು ಹೆಚ್ಚಾವ್ತು.

ಪ್ರಕ್ರಿಯೆ ಯಾವ ರೀತಿ ಆವ್ತು?

  • ಎಲ್ಲೋರಿಂಗೂ ಒಂದೇ ರೀತಿಲಿ ಆವ್ತಿಲ್ಲೆ. ಒಬ್ಬೊಬ್ಬಂಗೆ ಒಂದೊಂದು ರೀತಿ.
  • ಕೆಲವು ಜೆನಕ್ಕೆ ಒಂದರಿಯೇ ನಿಲ್ಲುಗು, ಹೇಳಿರೆ ಒಂದು ತಿಂಗಳು ಮುಟ್ಟಾದಮೇಲೆ ಮತ್ತೆ ಆಗ.
  • ಇನ್ನು ಕೆಲವು ಜೆನಕ್ಕೆ ನಿಧಾನಕ್ಕೆ ನಿಂಬದು, ರಜ್ಜ ರಜ್ಜ ಆಗಿ ಪ್ರತೀ ತಿಂಗಳೂ ಸ್ರಾವ ಕಮ್ಮಿ ಆವ್ತಾ ಹೋಪದು. ಅಥವಾ ಹೆಚ್ಚು ಸರ್ತಿ ಅಪ್ಪದು, ಇಪ್ಪತ್ತೆಂಟು ದಿನಕ್ಕೆ ಆಯಕಪ್ಪದು ತಿಂಗಳಿಲ್ಲಿ ಎರಡು ಅಥವಾ ಮೂರು ಸರ್ತಿ ಅಪ್ಪದು.
  • ದಿನದ ಲೆಕ್ಕ ತಪ್ಪುದು, ಯಾವಾಗಾರೂ ಅಪ್ಪದು, ಸ್ರಾವ ಹೆಚ್ಚೂ ಅಕ್ಕು ಅಥವಾ ಕಮ್ಮಿಯೂ ಇಕ್ಕು.

ಲಕ್ಷಣಂಗೊ:

  • Hot flushes,  ಒಂದೊಂದರಿ ಮೈ ಬೆಶೀ ಆದಹಾಂಗೆ ಅಪ್ಪದು, ಜೋರು ಬೆಗರುದು. ಒಂದೆರಡೂ ನಿಮಿಷ ಹೀಂಗೆ ಆಗಿ ತನ್ನಷ್ಟಕ್ಕೇ ಸರಿ ಆವ್ತು. ಕೆಲವು ಸರ್ತಿ ಇದು ತಡವಲೆ ಎಡಿಯದ್ದಷ್ಟು ಸಂಕಟ ಕೊಡ್ತು. ಇರುಳು ಹೀಂಗೆ ಅಪ್ಪದರಿಂದಾಗಿ ಒರಕ್ಕು ಸರಿಯಾಗಿ ಆವ್ತಿಲ್ಲೆ.  ಹೃದಯದ ಬಡಿತ ಹೆಚ್ಚಾವ್ತು.
  • ಮೊದಲೇ ಹೇಳಿದ ಹಾಂಗೆ ಮೂತ್ರವಿಸರ್ಜನೆಲಿ ತೊಂದರೆ ಆವ್ತು. ಮೂತ್ರವ ತಡೆಹಿಡಿವಲೆ ಎಡಿಯದ್ದೆ ಆವ್ತು.
  • ಮಿಲನದ ಸಂದರ್ಭಲ್ಲಿ ಬೇನೆ ಅಪ್ಪದು.
  • ಉದ್ವೇಗ, ತಲೆಬೇನೆ, ಒರಕ್ಕು ಬಾರದ್ದೆ ಇಪ್ಪದು, ಖಿನ್ನತೆ, ಮಾನಸಿಕ ಕಿರಿಕಿರಿ, ಏಕಾಗ್ರತೆ ಇಲ್ಲದ್ದೆ ಅಪ್ಪದು, ಮಾನಸಿಕ ಅಸಮತೋಲನೆ, ಮರೆವು ಇತ್ಯಾದಿ ಮಾನಸಿಕವಾಗಿ ಹಲವು ತೊಂದರೆಗೊ ಎದುರಾವ್ತು.
  • ಶರೀರಲ್ಲಿ ಹಾರ್ಮೋನುಗಳ ಏರುಪೇರಿಂದಾಗಿ ಕ್ಯಾಲ್ಸಿಯಂ ನ ಕೊರತೆ ಉಂಟಾವ್ತು, ಇದರಿಂದಾಗಿ ಎಲುಬಿನ ಸಾಂದ್ರತೆ ಕಮ್ಮಿ ಆಗಿ ಎಲುಬು ಮುರಿವ ಸಾಧ್ಯತೆ ಹೆಚ್ಚಿರ್ತು.

ಆರು ತಿಂಗಳಿಂದ ಹೆಚ್ಚು ಸಮಯ ಮುಟ್ಟಾಗದ್ದೆ ಇದ್ದರೆ, ಮೇಲೆ ಹೇಳಿದ ಲಕ್ಷಣಂಗೊ ಇದ್ದರೆ, ಕೆಲವು ನೆತ್ತರು ಪರೀಕ್ಷೆ ಇತ್ಯಾದಿಗಳ ಮೂಲಕ ಮೆನೋಪಾಸ್ ಆಯ್ದು ಹೇಳಿ ನಿರ್ಧಾರ ಮಾಡ್ಲಕ್ಕು.

ಪರಿಹಾರ:

  • ಮೆನೋಪಾಸಿಂದಾಗಿ  ಉಂಟಪ್ಪ ಲಕ್ಷಣಂಗೊಕ್ಕೆ ಪರಿಹಾರ ಇದ್ದೇ ಹೊರತು, ಮೆನೋಪಾಸ್ ನ ತಡವಲೆ ಎಡಿಯ. ಅದು ಒಂದು ನೈಸರ್ಗಿಕ ಪ್ರಕ್ರಿಯೆ.
  • ಹಾರ್ಮೋನಿನ ಏರುಪೇರಿಂದಾಗಿ ಹೆಚ್ಚಿನ ಸಮಸ್ಯೆ ಉಂಟಪ್ಪದು, ಹಾಂಗಾಗಿ ಕೃತಕವಾಗಿ ಹಾರ್ಮೋನಿನ ದೇಹಕ್ಕೆ ಕೊಡೂದರಿಂದ ಸಮಸ್ಯೆಗಳ ಕಮ್ಮಿ ಮಾಡ್ಲಾವ್ತು.
  • ಇದಲ್ಲದ್ದೆ ನಾವು ಮಾಡೆಕಾದ್ದು , ಮುಖ್ಯವಾದ ಕೆಲವು ಪರಿಹಾರಂಗಳ ಹೇಳ್ತೆ. ಮೆನೋಪಾಸ್ ಸಮಸ್ಯೆಗೊ ಶುರು ಅಪ್ಪನಾರ ಕಾಯದ್ದೆ, ಮೊದಲಿಂದಲೇ ಈ ರೀತಿಯ ಜೀವನ ಶೈಲಿಯ ಅಳವಡಿಸಿಗೊಂಡರೆ ಮುಂದೆ ಅಪ್ಪ ಸಮಸ್ಯೆಗಳ ತಡವಲಕ್ಕು.
  • ಒಳ್ಳೆಯ ಪೌಷ್ಠಿಕ ಆಹಾರ ತೆಕ್ಕೊಳ್ಳೆಕು.  ಎಲ್ಲಾ ರೀತಿಯ ಖನಿಜಾಂಶಂಗೊ, ವಿಟಮಿನ್ನುಗೊ, ಪ್ರೋಟೀನುಗೊ ಇಪ್ಪ ಆಹಾರ ತೆಕ್ಕೊಳ್ಳೆಕು. [ಕ್ಯಾಲ್ಸಿಯಂ ತುಂಬಾ ಕಮ್ಮಿ ಇದ್ದರೆ ರಜ್ಜ ಸಮಯ ಕ್ಯಾಲ್ಸಿಯಂ ಮಾತ್ರೆಗಳ ತೆಕ್ಕೊಳ್ಳೆಕಾದ ಅಗತ್ಯ ಇರ್ತು.]
  • ನಿತ್ಯವೂ ಒಂದೆರಡು ಕಿಲೋಮೀಟರ್ ನಡೆವದು, ವ್ಯಾಯಾಮ ಮಾಡೆಕು.
  • ಯೋಗದ ಅಭ್ಯಾಸ…ಆಸನ, ಪ್ರಾಣಾಯಾಮ, ಧ್ಯಾನ ಮಾಡುದು ಮೆನೋಪಾಸ್ ನ ಸಮಸ್ಯೆಗಳ ದೂರ ಮಾಡ್ಲೆ ಎಲ್ಲಕ್ಕಿಂತ ಹೆಚ್ಚು ಸಹಾಯ ಮಾಡ್ತು.
  • ಇನ್ನೂ ಹೆಚ್ಚಿನ ಮಾನಸಿಕ ತೊಂದರೆಗೊ ಇದ್ದರೆ ಮಾನಸಿಕ ತಜ್ಞರ ಸಲಹೆ , ಚಿಕಿತ್ಸೆ ಬೇಕು.
  • ಲಕ್ಷಣಂಗೊ ಹೆಚ್ಚಿಗೆ ತೊಂದರೆ ಕೊಡ್ತರೆ. ಅಥವಾ ಇದಕ್ಕೆ ಸಂಬಂಧಿಸಿದ ಬೇರೆ ಸಮಸ್ಯೆಗೊ ಇದ್ದರೆ ವೈದ್ಯರ ಕಂಡು ಪರಿಹಾರ ಕಂಡುಗೊಳ್ಳೆಕು.
  • ಈ ಒಂದು ಜೀವನದ ಹಂತಲ್ಲಿ ಅವಕ್ಕೆ ತಾನು ನಿಷ್ಪ್ರಯೋಜಕ ಹೇಳಿ ಕಾಣ್ತು, ಉಳುದೋರು ನಿರ್ಲಕ್ಷ್ಯ ಮಾಡ್ತವು ಹೇಳಿ ಅನ್ಸುದು ಸಹಜ. ಹಾಂಗಾಗಿ ಗೆಂಡಂದು, ಮಕ್ಕಳದ್ದು, ಸೊಸೆಯಕ್ಕಳದ್ದು, ಪುಳ್ಳಿಯಕ್ಕಳದ್ದು, ಸ್ನೇಹಿತರದ್ದು, ನೆಂಟ್ರಿಂದೂ ಬೆಂಬಲ, ಧೈರ್ಯದ ಮಾತುಗೊ ತುಂಬಾ ಮುಖ್ಯ.

ಅಸಾಧಾರಣ ಮೆನೋಪಾಸ್:

  • ಸಮಯಂದ ಮೊದಲೇ ಮುಟ್ಟು ನಿಂಬದು, 40 ವರ್ಷ ಪ್ರಾಯಂದ ಮೊದಲೇ ಋತುಚಕ್ರ ನಿಂಬದು. ಕೆಲವು ಸರ್ತಿ ಅನುವಂಶೀಯತೆಂದಾಗಿ ಆವ್ತು, ಇನ್ನು ಕೆಲವು ಸರ್ತಿ ನಮ್ಮ ಜೀವನಶೈಲಿಂದಾಗಿ.
  • ತಡವಾದ ಮೆನೋಪಾಸ್,55 ವರ್ಷಂದ ಮತ್ತೆಯೂ ಮೆನೋಪಾಸ್ ಆಗದ್ದೆ ಇಪ್ಪದು. ಇದಕ್ಕೆ ಹೆಚ್ಚಾಗಿ ಗರ್ಭಕೋಶ ಅಥವಾ ಅಂಡಾಶಯದ ಗಡ್ಡೆ, ಡಯಾಬಿಟೀಸ್ ಇತ್ಯಾದಿಗೊ ಕಾರಣ ಆಗಿರ್ತು. ಇಂತಹ ಸಂದರ್ಭಲ್ಲಿ ಕಾರಣವ ಕಂಡು ಹಿಡುದು ಅದಕ್ಕೆ ಚಿಕಿತ್ಸೆ ಮಾಡೆಕು.

ಕೃತಕ ಮೆನೋಪಾಸ್:

  • ಎರಡೂ ಅಂಡಾಶಯಂಗಳ ಶಸ್ತ್ರಚಿಕಿತ್ಸೆ ಮಾಡಿ ತೆಗದ  ಕಾರಣಂದಾಗಿ ಮುಟ್ಟು ನಿಂಬದು. ಈ ಸಂದರ್ಭಲ್ಲಿ ಸಮಸ್ಯೆಗೊ ಹೆಚ್ಚು ಇರ್ತು.
  • 40 ವರ್ಷಂದ ಕಮ್ಮಿ ಪ್ರಾಯದೋರಿಂಗೆ ಕೆಲವು ಸರ್ತಿ ವಿಕಿರಣಂಗಳ ಉಪಯೋಗ್ಸಿ ಅಂಡಾಶಯಂಗಳ ನಿಷ್ಕ್ರಿಯ ಮಾಡ್ತ ಕ್ರಮ ಇದ್ದು. ಆದರೆ ಮತ್ತೆ ಎರಡು ವರ್ಷ ಕಳಿವಗ ಸಾಮಾನ್ಯ ಸ್ಥಿತಿಗೆ ಬತ್ತು. ಅಲ್ಲದ್ದೆ ಗರ್ಭಧಾರಣೆಯೂ ಆವ್ತು.  ಹೆಚ್ಚಿನ ಸಮಸ್ಯೆಗೊ ತೋರಿಬತ್ತಿಲ್ಲೆ. ಆದರೆ ವಿಕಿರಣಂಗಳ ಪ್ರಯೋಗಂದ ಅಪ್ಪ ಬೇರೆ ಸಮಸ್ಯೆಗೊ ಇಕ್ಕು.

[ಇಲ್ಲಿಯಾಣ ಕೆಲವು ಇಂಗ್ಲೀಷ್ ಶಬ್ದಂಗೊಕ್ಕೆ ಸರಿಯಾದ ಕನ್ನಡ ಶಬ್ದಂಗೊ ಸಿಕ್ಕದ್ದ ಕಾರಣ ಇಂಗ್ಲೀಷಿಲ್ಲಿಯೇ ಬರದ್ದೆ, ಕ್ಷಮೆ ಇರಲಿ.]

ಇನ್ನೂ ಹೆಚ್ಚಿನ ಪ್ರಶ್ನೆಗೊ, ಸಂಶಯಂಗೊ ಇದ್ದರೆ ಎನ್ನ ಮಿಂಚಂಚೆ ವಿಳಾಸಕ್ಕೆ ಕಳುಸುಲಕ್ಕು. suvarninirao@gmail.com

ಮೆನೋಪಾಸ್-ಅಂತ್ಯ;ಋತುಚಕ್ರದ್ದು, ಜೀವನದ್ದಲ್ಲ., 3.7 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

  1. ಮೋಹನಣ್ಣ

    ಒಳ್ಳೆ ವಿವರಣೆ ಸುವರ್ಣಿನಿ ಅಕ್ಕೊ.ಖ೦ಡಿತಾ ಬಯಲಿನ ಎಷ್ಟೋ ಜೆನಕ್ಕೆ ಡಾಕ್ಟ್ರತ್ರೆ ಸೀದ ಕೇಳ್ಲೆ ಸ೦ಕೋಚ ಅಪ್ಪ ವಿಷಯ೦ಗಳ ಕೂಡಾ ಚೆ೦ದಕೆ ವಿವರ್ಸಿದ್ದಿ.ಬಯಲಿನೋರು ಇದರ ಪ್ರಯೋಜನ ಪಡೆಯಲಿ ಹೇಳಿ ನಿಲ್ಲುಸುತ್ತೆ.ಒಪ್ಪ೦ಗಳೊಟ್ಟಿ೦ಗೆ

    [Reply]

    VA:F [1.9.22_1171]
    Rating: 0 (from 0 votes)
  2. ಶ್ರೀಅಕ್ಕ°
    ಶ್ರೀದೇವಿ ವಿಶ್ವನಾಥ್

    ಸುವರ್ಣಿನಿ ಡಾಗುಟ್ರಕ್ಕಾ°.., ಹೆಮ್ಮಕ್ಕಳ ಜೀವನಲ್ಲಿ ಪ್ರತಿಯೊಬ್ಬನೂ ಅನುಭವಿಸೆಕ್ಕಾದ ಮೆನೋಪಾಸ್ ನ ಬಗ್ಗೆ ತುಂಬ ವಿವರಲ್ಲಿ ಬರದ್ದಿ. ಧನ್ಯವಾದಂಗಾ.
    ಆ ಸಮಯಲ್ಲಿ ಹೆಚ್ಚಿನ ಹೆಮ್ಮಕ್ಕೊ ಮಾನಸಿಕವಾಗಿ ಕುಗ್ಗುತ್ತವು. ಅದರಲ್ಲಿ ಮನೆಯ ಎಲ್ಲೋರೂ ಅವಕ್ಕೆ ಬೆಂಬಲ, ಧೈರ್ಯ ಕೊಡೆಕ್ಕು ಹೇಳಿ ಆತ್ಮೀಯವಾಗಿ ಹೇಳಿದ್ದಿ.
    ಹೆಮ್ಮಕ್ಕ ಮನಸ್ಸಿನ ಖಿನ್ನತೆಯ ಕಡಮ್ಮೆ ಮಾಡ್ಲೆ ಅವಕ್ಕೆಎಲ್ಲೋರು ಸಹಾಯ ಮಾಡಿ ಅವು ಋತುಚಕ್ರದ ಅಂತ್ಯವ ಜೀವನದ ಅಂತ್ಯ ಹೇಳಿ ತಿಳ್ಕೊಳ್ಳದ್ದ ಹಾಂಗೆ ಆಗಿ, ಆ ನಂತರದ ಜೀವನವನ್ನೂ ಕೊಶೀಲಿ ಮಕ್ಕೊ, ಪುಳ್ಯಕ್ಕಳೊಟ್ಟಿನ್ಗೆ ಕಳವ ಹಾಂಗೆ ಆಗಲಿ.

    [Reply]

    ಸುವರ್ಣಿನೀ ಕೊಣಲೆ

    ಸುವರ್ಣಿನೀ ಕೊಣಲೆ Reply:

    ಅಪ್ಪು ಶ್ರೀ ಅಕ್ಕ. ಜೀವನದ ಎಲ್ಲಾ ಹಂತಂಗಳನ್ನೂ ಸಂತೋಷಂದ ಸ್ವೀಕರಿಸಿ, ಅದರ ಅನುಭವಿಸೆಕ್ಕು, ಅದರೊಟ್ಟಿಂಗೆ ಬಪ್ಪ ತೊಂದರೆಗೊಕ್ಕೆ ಹೆದರದ್ದೆ ಅಥವಾ ಹಿಂಜರಿಕೆ ಇಲ್ಲದ್ದೆ ಪರಿಹಾರ ಕಂಡುಗೊಂಡು , ಸಮಸ್ಯೆಗಳ ಮೀರಿ ನಿಲ್ಲೆಕಾದ್ದು ಅಗತ್ಯವೂ ಅಪ್ಪು, ಸರಿಯಾದ ಕ್ರಮವೂ ಅಪ್ಪು :)

    [Reply]

    VN:F [1.9.22_1171]
    Rating: +1 (from 1 vote)
  3. ಗಣೇಶ ಮಾವ°

    ಸುವರ್ಣಿನಿ ಅಕ್ಕಾ,ಎಷ್ಟೋ ಜನ ಹೆಮ್ಮಕ್ಕೊಗೆ ಈ ಲೇಖನ ತುಂಬಾ ಉಪಯುಕ್ತ ಮಾಹಿತಿ ಕೊಡುದಕ್ಕೆ ಸಂಶಯ ಇಲ್ಲೆ. ಇದರ ಪರಿಹಾರ ಮಾಡ್ಲೆ ಇಪ್ಪಂತಹ ಯೋಗಾಸನದ ಮಾಹಿತಿಯ ಕೊಡಲೇ ಎಡಿಗೋ? ಮತ್ತೆ ಮನೆಲಿಯೇ ಇಪ್ಪಂತಹ ಮದ್ದು,(ಅರಿಶಿನ,ತುಪ್ಪ,ಗಿಡಮೂಲಿಕೆ)ಉಪಯೋಗಿಸಿಗೊಂಡು ಮಾಡ್ಲೆ ಎಡಿಗ?ಈ ಬಗ್ಗೆ ರಜಾ ಮಾಹಿತಿ ಬೇಕಾತು.
    ಉಪಯುಕ್ತ ಲೇಖನ ಬೈಲಿಲಿ ಕೊಟ್ಟದಕ್ಕೆ ಮತ್ತೊಂದರಿ ಧನ್ಯವಾದಂಗೋ…..

    [Reply]

    VN:F [1.9.22_1171]
    Rating: +1 (from 1 vote)
  4. ಮುಳಿಯ ಭಾವ
    ರಘುಮುಳಿಯ

    ಒಳ್ಳೆ ಲೇಖನ ಡಾಗುಟ್ರಕ್ಕಾ. ನಾಳೆ ಎಂತ ಹೇಳಿ ಗೊಂತಿಲ್ಲದ್ದ ಈ ಜೀವನಲ್ಲಿ ಹೆಮ್ಮಕ್ಕೋ ಒಂದು ದಿನ ಅನಿವಾರ್ಯವಾಗಿ ಎದುರಿಸಬೇಕಾದ ಸಂದರ್ಭವ ಲಾಯಿಕಕ್ಕೆ ವಿವರಿಸಿದ್ದಿ.ತಲೆಬರಹ ಅರ್ಥಪೂರ್ಣ.ಎನ್ನ ಮೇಲಧಿಕಾರಿ ತನ್ನ ಹೆಂಡತಿ ಈಗ ಋತುಚಕ್ರ ಅಂತ್ಯದ ಘಟ್ಟಲ್ಲಿ ಅನುಭವಿಸುತ್ತಾ ಇಪ್ಪ ಖಿನ್ನತೆಯ ಎನ್ನ ಹತ್ತರೆ ಹೇಳುತ್ತ°. ಈಗ ವೈಜ್ಞಾನಿಕ ವಿವರ ಸಿಕ್ಕಿತ್ತು,ಧನ್ಯವಾದ.

    [Reply]

    VA:F [1.9.22_1171]
    Rating: +1 (from 1 vote)
  5. ಒಪ್ಪಣ್ಣ

    ಸುವರ್ಣಿನಿ ಅಕ್ಕಾ°…

    ಆರೋಗ್ಯಕರ ಶುದ್ದಿಯ ಆರೋಗ್ಯಕರ ಭಾಶೆಲಿ ವಿವರುಸಿದ್ದಿ.
    ಮಾಹಿತಿಪೂರ್ಣ ಶುದ್ದಿಗೆ ವಂದನೆಗೊ,.
    ನಿಜವಾಗಿಯೂ ಬೈಲಿಂಗೆ ಒಂದು ತೂಕದ ಶುದ್ದಿ ಹೇಳಿದಿ.
    ಈ ವಾರದ ’ಹಿಟ್’ ಶುದ್ದಿ ಅಡ ಇದು, ಅತ್ಯಂತ ಹೆಚ್ಚು ಸರ್ತಿ ಈ ಶುದ್ದಿಯ ಓದಿದ್ದವು ಬೈಲಿನ ಜೆನಂಗೊ – ಗುರಿಕ್ಕಾರ್ರು ಹೇಳಿಗೊಂಡಿತ್ತಿದ್ದವು.

    ಹೀಂಗಿರ್ತ ಇಂಜೆಕ್ಷನು ಮದ್ದುಗೊ ಇನ್ನೂ ಇನ್ನೂ ಬತ್ತಾ ಇರಳಿ. ಹರೇರಾಮ.

    [Reply]

    ಸುವರ್ಣಿನೀ ಕೊಣಲೆ

    ಸುವರ್ಣಿನೀ ಕೊಣಲೆ Reply:

    ಆನು ಬರದ ಶುದ್ದಿಂದಾಗಿ ಜೆನಕ್ಕೆ ಪ್ರಯೋಜನ ಆವ್ತು ಹೇಳಿರೆ ಅದೇ ದೊಡ್ಡ ಸಂತೋಷದ ವಿಷಯ :)
    ಧನ್ಯವಾದಂಗೊ ಒಪ್ಪಣ್ಣ :)

    [Reply]

    VN:F [1.9.22_1171]
    Rating: 0 (from 0 votes)
  6. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ

    “ಮೆನೋಪಾಸ್, ಋತುಚಕ್ರದ ಅಂತ್ಯ, ಜೀವನದ್ದಲ್ಲ” ಹೇಳಿ ಧೈರ್ಯದ ಮಾತು ಹೇಳಿ ಸುರು ಮಾಡಿದ ಲೇಖನ ತುಂಬಾ ವಿವರಂಗಳ ಕೊಟ್ಟತ್ತು. ಹೆಮ್ಮಕ್ಕೊ ಎಲ್ಲರೂ ಓದಲೇ ಬೇಕಾದ ಉತ್ತಮ ಲೇಖನ. ಈ ಸಮಯಲ್ಲಿ ಅಪ್ಪ ದೈಹಿಕ ಮಾನಸಿಕ ಬದಲಾವಣೆಗೊ, ಅದಕ್ಕೆ ಕಾರಣಂಗೊ, ಲಕ್ಷಣಂಗೊ, ಪರಿಹಾರಂಗಳ ಕೊಟ್ಟ ಪರಿಪೂರ್ಣ ಲೇಖನ. ಸುವರ್ಣಿನಿಗೆ ಧನ್ಯವಾದಂಗೊ. ಇನ್ನೂ ಹೀಂಗಿಪ್ಪ ಲೇಖನಂಗೊ ಬರಳಿ.

    [Reply]

    VA:F [1.9.22_1171]
    Rating: +1 (from 1 vote)
  7. ಅನುಶ್ರೀ ಬಂಡಾಡಿ
    ಅನುಶ್ರೀ ಬಂಡಾಡಿ

    ಸುವರ್ಣಿನಿ ಅಕ್ಕಾ, ಒಳ್ಳೆ ಮಾಹಿತಿ ಕೊಟ್ಟಿದಿ. ಧನ್ಯವಾದಂಗೊ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಕೆದೂರು ಡಾಕ್ಟ್ರುಬಾವ°ಪುತ್ತೂರುಬಾವಒಪ್ಪಕ್ಕಶ್ರೀಅಕ್ಕ°ಡೈಮಂಡು ಭಾವಬಂಡಾಡಿ ಅಜ್ಜಿದೊಡ್ಡಭಾವಅನಿತಾ ನರೇಶ್, ಮಂಚಿಡಾಗುಟ್ರಕ್ಕ°ದೊಡ್ಡಮಾವ°ಬಟ್ಟಮಾವ°ಕಜೆವಸಂತ°ವೇಣೂರಣ್ಣಚೆನ್ನಬೆಟ್ಟಣ್ಣಕಳಾಯಿ ಗೀತತ್ತೆvreddhiವೇಣಿಯಕ್ಕ°ಅನು ಉಡುಪುಮೂಲೆಚೂರಿಬೈಲು ದೀಪಕ್ಕಶುದ್ದಿಕ್ಕಾರ°ವಿನಯ ಶಂಕರ, ಚೆಕ್ಕೆಮನೆಸುವರ್ಣಿನೀ ಕೊಣಲೆಶ್ಯಾಮಣ್ಣನೀರ್ಕಜೆ ಮಹೇಶಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ