“ಶಿವಂಭು” ಪ್ರಕೃತಿ ಚಿಕಿತ್ಸಾ ಕೇಂದ್ರ- ಒಂದು ಮಾಹಿತಿ.

ದೇಶಲ್ಲಿ ಇಪ್ಪ ಆಸ್ಪತ್ರೆಗಳ ಸಂಖ್ಯೆ ಎಷ್ಟಾದಿಕ್ಕು? ಲೆಕ್ಕವೇ ಇಲ್ಲೆ !! ಆದರೆ ಈ ಲೆಕ್ಕ ಇಲ್ಲದ್ದಷ್ಟು ಆಸ್ಪತ್ರೆಗಳಲ್ಲಿ ಜೆನಂಗೊಕ್ಕೆ ಉಪಕಾರ ಆಯಕ್ಕು ಹೇಳಿ ಕೆಲಸ ಮಾಡುವ ಆಸ್ಪತ್ರೆಗೊ ಎಷ್ಟು? !!! ಎನಗೂ ಲೆಕ್ಕ ಗೊಂತಿಲ್ಲೆ.  ಪೈಸೆ ಆಶೆಗೆ ಆಸ್ಪತ್ರೆ ನಡೆಶುವವ್ವುದೇ ಇದ್ದವು.  ಹೀಂಗಿಪ್ಪ ಜೆನಂಗೊ ಎಲ್ಲಾ ಊರಿಲ್ಲಿಯೂ ಎಲ್ಲಾ ಉದ್ಯೋಗಲ್ಲಿಯೂ ಇರ್ತವು. ಆದರೆ ಜನಸೇವೆಯನ್ನೇ ಮುಖ್ಯ ಧ್ಯೇಯವಾಗಿ ಮಡಿಕ್ಕೊಂಡ ಆರೋಗ್ಯ ಕೇಂದ್ರಂಗೊ ಬೆರಳೆಣಿಕೆಯಷ್ಟು ಮಾಂತ್ರ ಆದಿಕ್ಕಾ ಹೇಳಿ ಎನ್ನ ಅಭಿಪ್ರಾಯ. ಜನಸೇವೆ ಹೇಳಿ ಧರ್ಮಕ್ಕೆ ಮದ್ದು ಅಥವಾ ಚಿಕಿತ್ಸೆ ಕೊಡೆಕಾದ ಅಗತ್ಯ ಇಲ್ಲೆ…ಆದರೆ ಜನರ ಆರೋಗ್ಯಕ್ಕೆ ಎಲ್ಲಕ್ಕಿಂತ ಹೆಚ್ಚಿನ ಆದ್ಯತೆ ಕೊಡೆಕು. ಅದೆಂತದೇ ಇರಲಿ… ಎನಗೆ ಗೊಂತಿಪ್ಪ ಒಂದು ಆಸ್ಪತ್ರೆಯ ಬಗ್ಗೆ ಬೈಲಿನೋರಿಂಗೆ ರಜ್ಜ ಮಾಹಿತಿ ಕೊಡುವ ಮನಸ್ಸಾತು. ಇದೊಂದು ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕೇಂದ್ರ. ಮಹಾರಾಷ್ಟ್ರದ ಕೋಲ್ಹಾಪುರಲ್ಲಿ ಇಪ್ಪದು. ಇದರ ಬಗ್ಗೆ ಬರೆವಲೆ ಕಾರಣ ಇದ್ದು…ಬೇರೆ ಎಲ್ಲಾ ಕಡೆಂದಲೂ ಗುಣ ಆಗ ಹೇಳಿ ಇಲ್ಲಿ ಬಂದು ಗುಣ ಆದಂತಹ ಹಲವಾರು ಉದಾಹರಣೆ ಇದ್ದು!! ಬದುಕ್ಕುದು ಸಾಧ್ಯವೇ ಇಲ್ಲೆ ಹೇಳಿ ವೈದ್ಯರುಗೊ ನಿರ್ಧಾರ ಮಾಡಿ ಮನೆಗೆ ಕಳ್ಸಿದ ರೋಗಿಗೊ ಇಲ್ಲಿ ಚಿಕಿತ್ಸೆ ತೆಕ್ಕೊಂಡು ಆರೋಗ್ಯದ ನೆಮ್ಮದಿಯ ಜೀವನ ನಡಶುತ್ತಾ ಇದ್ದವು.
ಇಲ್ಲಿಯಾಣ ವೈದ್ಯರ ಹೆಸರು ಡಾ.ಸಾರಂಗ್ ಪಾಟೀಲ್. ಇವ್ವು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯಲ್ಲಿ 1995ರಲ್ಲಿ ಪದವಿ ಮುಗುಶಿ ಇಲ್ಲಿ ವೃತ್ತಿ ಜೀವನ ಶುರು ಮಾಡಿದವು. ಎಂಟು ವರ್ಷದ ಕಳುದ ಮತ್ತೆ ಬೆಂಗ್ಳೂರಿಲ್ಲಿ ಯೋಗದ ವಿಷಯಲ್ಲಿ  PhD ಮಾಡಿ ಮತ್ತೆ ಅವರದ್ದೇ ಆಸ್ಪತ್ರೆಲಿ ಸೇವೆ ಸಲ್ಲಿಸುತ್ತಾ ಇದ್ದವು. ಇಲ್ಲಿ ಇವ್ವು ಮಾಂತ್ರ ಅಲ್ಲದ್ದೇ ಅವರ ಅಪ್ಪನೂ ಕೂಡ ಇದ್ದವು, ಅವ್ವು ಸ್ವಮೂತ್ರ ಚಿಕಿತ್ಸೆಯ ಬಗ್ಗೆ ಪ್ರತಿಪಾದನೆ ಮಾಡ್ತವು, ನಮ್ಮ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವಕ್ಕೆ ಸ್ವಮೂತ್ರ ಚಿಕಿತ್ಸೆಯ ತಿಳುಶಿ ಕೊಟ್ಟವ್ವು ಇವ್ವೇ ಅಡ. ಈ ಚಿಕಿತ್ಸೆ ಕೊಟ್ಟು ಹಲವು ತೊಂದರೆಗಳ ಗುಣ ಮಾಡ್ತವು ಇವರ ಚಿಕಿತ್ಸಾ ಕೇಂದ್ರಲ್ಲಿ.
ಬೈಲಿನೋರಿಂಗೆ ಈ ವಿಷಯವ ಮುಟ್ಟುಸಿರೆ ಇದು ಮತ್ತೆ ಸಾವಿರ ಜೆನಂಗೊಕ್ಕೆ ತಿಳಿಗು..ಹೀಂಗೆ ಹೆಚ್ಚು ಜೆನಕ್ಕೆ ಗೊಂತಾದರೆ ಆರೋಗ್ಯದ ಸಮಸ್ಯೆಗೊ ಇಪ್ಪವಕ್ಕೆ ಮಾಹಿತಿ ಸಿಕ್ಕಿ ಉಪಕಾರ ಅಕ್ಕು ಹೇಳಿ ಎನ್ನ ಅಭಿಪ್ರಾಯ. ಕೆಳ ಇಪ್ಪ ಸಂಕೋಲೆಯ ಮೇಲೆ ಕಂಪ್ಯೂಟರಿನ ಬಾಣದ ಗುರ್ತಿನ ಒತ್ತಿರೆ ನಿಂಗೊ ಅವರ ಆರೋಗ್ಯ ಕೇಂದ್ರ “ಶಿವಂಭು” ಯೋಗ ಮತ್ತೆ ಪ್ರಕೃತಿ ಚಿಕಿತ್ಸೆ ಕೇಂದ್ರದ ವೆಬ್ಸೈಟಿಂಗೆ ಹೋಪಲಕ್ಕು.
– ಸುವರ್ಣಿನೀ ಕೊಣಲೆ.

ಸುವರ್ಣಿನೀ ಕೊಣಲೆ

   

You may also like...

7 Responses

 1. ಶರ್ಮಪ್ಪಚ್ಚಿ says:

  ಒಳ್ಳೆ ಮಾಹಿತಿ. ಧನ್ಯವಾದಂಗೊ

 2. ಮಾಹಿತೆಗೆ ಧನ್ಯವಾದಂಗೊ.ಹಾಂಗೆ ನಮ್ಮ ಬೈಲಿಲಿ ಇಪ್ಪ ಹಳ್ಳಿ ಡಾಕ್ಟ್ರುಗಳ ಬಗ್ಗೆ ಕೂಡಾ ಹೇಳಿದರೆ ಉಪಕಾರ ಆವುತ್ತು.

 3. ರಘುಮುಳಿಯ says:

  ಒಳ್ಳೆ ಮಾಹಿತಿ ದಾಗುಟ್ರಕ್ಕಾ.ನಮ್ಮ ಗುರ್ತದೋರಿಂಗೆ ವಿಷಯ ತಿಳುಶುವ°.

  ಧರ್ಮಸ್ಥಳದ ಕೇಂದ್ರನ್ಗಳೂ(ಧರ್ಮಸ್ಥಳ ಮತ್ತೆ ಪರ್ಕಳ)ಒಳ್ಳೆ ಸೇವೆ ,ಸಾಧನೆ ಮಾಡುತ್ತಾ ಇದ್ದವು.

 4. ಪುಟ್ಟಭಾವ ಹಾಲುಮಜಲು says:

  ಸುವರ್ಣಿನಿಯಕ್ಕಾ! ಮಾಹಿತಿ ಭಾರೀ ಲಾಯ್ಕಿದ್ದು! ಅವರ ವೆಬ್ ಸೈಟಿಂಗೆ ಹೋಗಿ ನೋಡಿದ್ದೇ! ಸುಮಾರು ವಿಷಯ ಹಾಕಿದ್ದವು!
  ಧನ್ಯವಾದನ್ಗೋ!

 5. ಕುಮಾರ says:

  shivaambu bagge hechchina vivara bekittanne?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *