ಹಿತ್ತಿಲ ಗಿಡ…ಮದ್ದು!!

July 4, 2010 ರ 7:00 amಗೆ ನಮ್ಮ ಬರದ್ದು, ಇದುವರೆಗೆ 34 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನವಗೆ ಈಗಾಣವಕ್ಕೆ ( so called modern generation!!) ಹಳೇ ಕಾಲದವರ ಎಲ್ಲಾ ವಿಚಾರಂಗಳುದೇ ಮೂಢನಂಬಿಕೆ ಹೇಳಿ ಕಾಣ್ತು. ಮನೆಮದ್ದು ಹೇಳಿರೆ ನೆಗೆ ಮಾಡ್ತು ನಾವು, ಎಲ್ಲದಕ್ಕೂ ಒಂದು ಮಾತ್ರೆ ನುಂಗಿರಾತು, ಎಲ್ಲಾ ಅಸೌಖ್ಯವೂ ಮಾಯ ಹೇಳಿ ಗ್ರೇಶುತ್ತು ನಾವು. ಪೈಸೆ ಖರ್ಚು ಮಾಡದ್ದೆ ಏನೇ ಸಿಕ್ಕಿರೂ ಅದಕ್ಕೆ ಬೆಲೆ ಇಲ್ಲೆ :( . ಅಜ್ಜಿ ಅಜ್ಜ ಎಂತ ಹೇಳಿರೂ ಅದು ಮೂಢನಂಬಿಕೆ. ಆದರೆ ಅವ್ವು ಹೇಳುವ ಹಲವು ವಿಷಯಂಗಳಲ್ಲಿ ಸತ್ಯ ಇರ್ತು ಹೇಳಿ ನವಗೆ ಏಕೆ ಅರ್ಥ ಆವ್ತಿಲ್ಲೆ?

ಈ ಸರ್ತಿ ಹೀಂಗಿದ್ದ  ಸಣ್ಣ ವಿಷಯದ  ಬಗ್ಗೆ ಬರೆತ್ತೆ.

ಉಂಡ ಕೂಡ್ಲೆ ಹೊಟ್ಟೆ ಬೇನೆ ಆದರೆ ಎಡದ ಹೊಡೆಂಗೆ ತಿರುಗಿ ಮನುಗುಲೆ ಹೇಳ್ತವು, ಎಂತಗೆ? ಜಠರಲ್ಲಿ ಆಹಾರ ತುಂಬಿಪ್ಪಗ ಆಹಾರವ ಕರಗ್ಸುಲೆ ನಿರಂತರ ನೆತ್ತರಿನ ಸಂಚಾರ ಇರೆಕ್ಕು. ಈ ನೆತ್ತರಿನ ಸಂಚಾರ ಜಠರಕ್ಕೆ ಕಮ್ಮಿ ಆದರೆ ಹೊಟ್ಟೆಯ ಮೇಲಾಣ ಭಾಗಲ್ಲಿ(ಹೊಕ್ಕುಳಿಂದ ಮೇಲೆ) ಬೇನೆ ಬತ್ತು. ಎಡದ ಹೊಡೆಂಗೆ ತಿರುಗಿ ಮನುಗಿರೆ ಜಠರಕ್ಕೆ ಹೇಂಗೆ ನೆತ್ತರು ಹೋವ್ತು? ಜಠರ ಒಂದು ‘J’ ಆಕಾರದ ಅಂಗ, ಆಹಾರ ತಿಂದ ಕೂಡ್ಲೆ ಅನ್ನನಾಳದ ಮೂಲಕ ಮೊದಲು ತಲುಪುದು ಜಠರಕ್ಕೆ, ಇಲ್ಲಿ ರಜ್ಜ  ಜೀರ್ಣಕ್ರಿಯೆ ನಡೆತ್ತು, ಮತ್ತೆ ಅಲ್ಲಿಂದ ಸಣ್ಣ ಕರುಳಿಂಗೆ ಹೋವ್ತು.ಈ ಜಠರದ ಬಲ ಭಾಗಲ್ಲಿ ಅದಕ್ಕೆ ಬಪ್ಪ ನೆತ್ತರಿನ ರಕ್ತನಾಳ ಇದ್ದು, ಇನ್ನೂ ಬಲಕ್ಕೆ ಬಂದರೆ ಅಲ್ಲಿ ಲಿವರ್ ಇದ್ದು.ಒಂದೊಂದರಿ ಹೊಟ್ಟೆ ತುಂಬಿಪ್ಪಗ ಜಠರಕ್ಕೆ ನೆತ್ತರು ಕಳುಸುವ ರಕ್ತನಾಳ ತುಂಬಿದ ಜಠರ ಮತ್ತೆ ಲಿವರ್ ಗಳ ಮಧ್ಯಲ್ಲಿ  ಒತ್ತಿಯಪ್ಪಗ ರಕ್ತ ಸಂಚಾರ ಕಮ್ಮಿ ಆಗಿ ಬೇನೆ ಆವ್ತು. ಈ ಸಂದರ್ಭಲ್ಲಿ ಎಡಕ್ಕೆ ತಿರುಗಿ ಮನುಗಿರೆ, ಜಠರ ಮತ್ತೆ ಲಿವರ್ ಗಳ ಮಧ್ಯೆ ರಜ್ಜ ಜಾಗೆ ಆವ್ತು, ಅಲ್ಲಿ ರಕ್ತ ಸಂಚಾರ ಸರಿಯಾಗಿ ಅಪ್ಪಲೆ ಶುರು ಆವ್ತು. ಬೇನೆ ಕಮ್ಮಿ ಆವ್ತು.

ಪ್ರಯಾಣ ಮಾಡಿರೆ ಅಥವಾ ಪ್ರಾಯ ಆದವಕ್ಕೆ ಅಥವಾ ಬಸರಿಯಕ್ಕೊಗೆ ಪಾದ ಬೀಗುದು ನೋಡಿಕ್ಕು, ಇದು ಜೋರು ಸೆಳಿತ್ತು ಕೂಡ, ಅಲ್ಲದಾ? ಹೀಂಗೆ ಆದ ಕೂಡ್ಲೆ ಡಾಕ್ಟ್ರ ಹತ್ತರೆ ಓಡುದು ನಮ್ಮ ಕ್ರಮ. ಆದರೆ ಅದರಿಂದ ಮೊದಲು ಒಂದು ತುಂಬಾ simple treatment ಮನೇಲಿಯೆ ಮಾಡಿ ನೋಡ್ಲಕ್ಕು. ನಾವು ತಲೆಕೊಂಬಿಲ್ಲದ್ದೆ  ಮನುಗಿ, ಕಾಲುಗಳ ಎತ್ತರಕ್ಕೆ (ಎರಡು ತಲೆಕೊಂಬು ಮಡುಗಿ) ಮಡಿಕ್ಕೊಳ್ಳೆಕ್ಕು. ಇದರಿಂದ ಎಂತ ಆವ್ತು? ಹೀಂಗೆ ಕಾಲು ಬೀಗುಲೆ ಕಾರಣ ಎಂತ ಹೇಳ್ರೆ, ಶುದ್ಧ ರಕ್ತನಾಳದ ಮೂಲಕ ಕಾಲಿಂಗೆ ಹೋಪ ನೆತ್ತರು ಅಶುದ್ಧ ರಕ್ತನಾಳದ ಮೂಲಕ ವಾಪಸ್ಸು ಹೃದಯಕ್ಕೆ ಬರೆಕ್ಕು. ಆದರೆ ಗುರುತ್ವಾಕರ್ಷಣ ಶಕ್ತಿಯ ವಿರುದ್ಧ ಬರೆಕ್ಕಾದ ಕಾರಣ ಕೆಲವು ಸರ್ತಿ ಕಾಲಿಂಗೆ ಹೋದ ನೆತ್ತರು ಪೂರ ವಾಪಸ್ಸು ಬತ್ತಿಲ್ಲೆ, ಅಂಬಗ ಅಲ್ಲಿ ಸಂಗ್ರಹ ಆದ ನೆತ್ತರಿಲ್ಲಿ ಇಪ್ಪ ನೀರಿನ ಅಂಶ ರಕ್ತನಾಳಂದ ಹೆರ ಹೋಗಿ ಅಲ್ಲಿಯಾಣ ಜೀವಕೋಶಂಗಳ ನಡೂಕೆ ಇಪ್ಪ ಜಾಗೆಲಿ ತುಂಬಿಗೊಳ್ತು. ಇದರಿಂದಾಗಿ ಪಾದ ಬೀಗುತ್ತು. ನಾವು ಕಾಲಿನ ನಮ್ಮ ಹೃದಯಂದ ಎತ್ತರಲ್ಲಿ ಮಡುಗಿಯಪ್ಪಗ ಗುರುತ್ವಾಕರ್ಷಣ ಶಕ್ತಿಯ ಸಹಾಯಂದ ಕಾಲಿಲ್ಲಿ ಸರಿಯಾಗಿ ರಕ್ತಸಂಚಾರ ಆವ್ತು, ಅಂಬಗ ಬಾಕಿ ಉಳುದ ಆ ನೀರಿನ ಅಂಶ ನಿಧಾನಕ್ಕೆ ನೆತ್ತರಿನೊಟ್ಟಿಂಗೆ ಸೇರ್ತು. ಹೀಂಗೆ ಕಾಲು ಬೀಗಿದ್ದು ಇಳಿತ್ತು, ಸೆಳಿವದುದೇ ಕಮ್ಮಿ ಆವ್ತು :) !!

ಎಂಥಾ ಸೂಪರ್ treatment ಅಲ್ಲದ?!! ಆದರೂ ಎಷ್ಟುsimple !!

ಇದೆರಡೂ ಖಂಡಿತಾ ಉಪಯೋಗಕ್ಕೆ ಬಪ್ಪ ವಿದ್ಯೆಗೊ! ಆದರೆ ಎಲ್ಲ ಸಂದರ್ಭಲ್ಲಿಯುದೇ ಇದನ್ನೇ ಪ್ರಯೋಗ ಮಾಡುವ ಮೊದಲು ರಜ್ಜ ಆಲೋಚನೆ ಮಾಡಿ. ಈ ಎರಡೂ ಸಮಸ್ಯೆಗೊಕ್ಕೆ ಹಲವಾರು ಕಾರಣಂಗೊ ಇಕ್ಕು, serious ಆದ ಸಮಸ್ಯೆ ಎಂತಾರು ಇದ್ದರೆ ವೈದ್ಯರ ಕಾಣೆಕಾದ್ದು ತುಂಬಾ ಅಗತ್ಯ. ಯಾವುದೇ ಕಾರಣಕ್ಕೂ neglect ಮಾಡೆಡಿ.

ಹಿತ್ತಿಲ ಗಿಡ…ಮದ್ದು!!, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 34 ಒಪ್ಪಂಗೊ

 1. ಶ್ಯಾಮಣ್ಣ
  Shyamanna

  ಎನ್ನ ಮಟ್ಟಿಂಗೆ ಹೇಳ್ತರೆ… ಸುವರ್ಣಿನಿ ಅಕ್ಕನೂ ಕೇಜಿ ಮಾವನೂ ಹೇಳ್ತ ವಿಚಾರಂಗ ಒಂದಕ್ಕೊಂದು ಪೂರಕ ಹೇಳಿ ಕಾಣ್ತು…
  ಎರಡು ವಿಚಾರಂಗಳೂ ಸರಿ ಹೇಳಿ ಅನ್ಸುತ್ತು…..

  [Reply]

  ಡಾಮಹೇಶಣ್ಣ

  ಮಹೇಶ Reply:

  ಅಪ್ಪಪ್ಪು, ಹಿಂದಿನ/ಪರಂಪರಾಗತ ಕ್ರಮಗಳ ಬಗ್ಗೆ ಅವಿಶ್ವಾಸವೂ, ಅತಿವಿಶ್ವಾಸವೂ ಇಲ್ಲದ್ದೆ, ಡಾಕ್ಟರರ ಮೇಲೆ ವಿಪರೀತ ಅವಲಂಬನೆಯೂ ಆಗದ್ದ ಹಾಂಗೆ ನಮ್ಮ ವಿವೇಕವ ಉಪಯೋಗಿಸೆಕು ಹೇಳಿ ತಿಳುಶಲೆ ಅಕ್ಕನೂ ಮಾವನೂ ಪ್ರಯತ್ನಿಸುವದು ಹೇಳಿ ಕಾಣ್ತು.
  ಸಮಯ, ಸಂದರ್ಭ, ಪರಿಸ್ಥಿತಿಗೆ ಅನುಗುಣವಾಗಿ ಯಾವ ನಿರ್ಧಾರ ತೆಕ್ಕೊಳ್ಳೆಕು ಹೇಳುವದರ ಬರವಣಿಗೆಲ್ಲಿ ವ್ಯಕ್ತ ಮಾಡ್ಲೆ ಕಷ್ಟವೇ ಅಲ್ಲದ?

  [Reply]

  VA:F [1.9.22_1171]
  Rating: +1 (from 1 vote)
 2. ಈ ಕೆಜಿ ಭಟ್ ಎಲ್ಲ ಬ್ಲಾಗ್ ಲಿಯೂ ಹೀಂಗೆ..ತನ್ನ ಬ್ಲಾಗ್ ಲಿ ಹೇಳಿದಂಗೆ ತುಂಬಾ ‘arrogant’ ಕಾಮೆಂಟ್ಸ್ ಹಾಕುದು..

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ಕೂಸೇ..ಮಾಣಿದೇ ಇಲ್ಲಿ ಕೇಳಿ,comment ಗೊ ಎಲ್ಲಾ ರೀತಿದುದೇ ಇರ್ತು, ಎಲ್ಲಾ ರೀತಿಯ ಜನವೂ ಇರ್ತವು.. ನಾವು ಸರಿಯೋ ತಪ್ಪೋ ಹೇಳ್ತ ವಿಚಾರ ನವಗೆ ಗೊಂತಿದ್ದರೆ ಆತು. ಅಲ್ಲದಾ? comments ಪೂರಕ ಆಗಿದ್ದರೆ accept them ಅಲ್ಲದ್ದರೆ just ignore them . ನಮ್ಮ ಬೆಳವಣಿಗೆ in all the aspects , ಒಟ್ಟಿಂಗೆ ನಮ್ಮಂದ ಬೇರೆವಕ್ಕೆ ಅಪ್ಪ ಪ್ರಯೋಜನ, ಇದೆರಡೇ ಮುಖ್ಯ.isn’t it?.

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ಅಜ್ಜಕಾನ ಭಾವಪ್ರಕಾಶಪ್ಪಚ್ಚಿವಿಜಯತ್ತೆಜಯಶ್ರೀ ನೀರಮೂಲೆಬೊಳುಂಬು ಮಾವ°ತೆಕ್ಕುಂಜ ಕುಮಾರ ಮಾವ°ಎರುಂಬು ಅಪ್ಪಚ್ಚಿಶ್ಯಾಮಣ್ಣಪವನಜಮಾವರಾಜಣ್ಣಪುತ್ತೂರಿನ ಪುಟ್ಟಕ್ಕದೇವಸ್ಯ ಮಾಣಿಚೂರಿಬೈಲು ದೀಪಕ್ಕಶಾಂತತ್ತೆವಿನಯ ಶಂಕರ, ಚೆಕ್ಕೆಮನೆಅನು ಉಡುಪುಮೂಲೆಸರ್ಪಮಲೆ ಮಾವ°ನೆಗೆಗಾರ°ಚೆನ್ನೈ ಬಾವ°ಹಳೆಮನೆ ಅಣ್ಣಕಾವಿನಮೂಲೆ ಮಾಣಿವೆಂಕಟ್ ಕೋಟೂರುಪಟಿಕಲ್ಲಪ್ಪಚ್ಚಿಡಾಮಹೇಶಣ್ಣವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ