ಬೈಲಿಂಗೆ ಲಾಗ ಹಾಕಲೆ

ಎನ್ನ ನೆಂಪು ಮಡಿಕ್ಕೊ

ಗುಟ್ಟುಶಬ್ದ ಮರದತ್ತೋ!

ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

“ಅಥ ಯೋಗಾನುಶಾಸನಮ್”, 5.0 out of 5 based on 1 rating

ಬೆಶಿ ಬೆಶಿ ಒಪ್ಪಂಗೊ..

  • shyamaraj.d.k: Lekhana layaka ayidu Oppanna.
  • ಗಣೇಶ ಮಾವ°: ನಮ್ಮ ಬಲದ ಕೈಯ ಗೆಂಟು ಇದ್ದಲ್ದಾ?ಅದರಿಂದ ರಜ್ಜ ಮೇಗೆ.ಹೆಬ್ಬೆರಳು ಸುರು...
  • ಗುತ್ತಿನ ಸದಾಶಿವ°: ಮುದ್ದಾದ ಮುಕುಂದಾಷ್ಟಕವ ಓದುವಗ ಅದರ ಮುದ್ರಿಸುಲೆ ಎನ್ನ ಮನಸ್ಸಿಂಗೆ ಆಶೆ ಆತು –...
  • ಶ್ರೀಕೃಷ್ಣ ಶರ್ಮ.: ಚುಬ್ಬಣ್ಣ ತೆಗದ ಪಟಂಗೊ ಚೆಂದ ಚೆಂದ ಇದ್ದು. ಇನ್ನೂ ಹೀಂಗಿಪ್ಪದು ಬರಲಿ
  • ಡಾ.ಸೌಮ್ಯ ಪ್ರಶಾಂತ: ಎನಗುದೇ ದಿವ್ಯ ಹೇಳಿದ್ದು ಸರಿ ಕಾಣ್ತು..ದೇವರಕೋಣೆ ಸಣ್ಣದಿಪ್ಪದು ಆದಿಕ್ಕು ಶುಭ ಅತ್ತೆಯ...
  • Akshara: gooood one…. :)
  • Akshara: tumbaa laayka iddu..
  • ಶ್ರೀಕೃಷ್ಣ ಶರ್ಮ.ಹಳೆಮನೆ: ನಮ್ಮ ಜೀವಮಾನ ಇಡೀ ಎಂತಾದರೂ ಕಲಿವಲೆ ಇದ್ದೇ ಇರ್ತು. ಗುರುಗಳ ಮಾರ್ಗದರ್ಶನ ಯಾವಾಗಲೂ...
  • ದಿವ್ಯಾ: ದೇವರ ಕೋಣೆ ದೊಡ್ಡ ಇದ್ದು ಹೇಳಿ ಆರಾದರೂ ದೇವರ ಕೋಣೆಯ ಒಳಗೆ ನಾಯಿಯ ಹೋಪಲೆ ಬಿಡ್ತವ ಒಪ್ಪಣ್ಣ...
  • ದಿವ್ಯಾ: ಒಪ್ಪಣ್ಣ….. ಈ ಲೇಖನ ಓದಿ ಅಪ್ಪಗ ಎನಗೆ ಒಂದು ಸಂಶಯ ಬಂತು .. ಎಂತ ಹೇಳಿದರೆ ಒಬ್ಬನ ಮನೆಯ ದೇವರ...
  • ಶ್ರೀಶ. ಹೊಸಬೆಟ್ಟು: ಒಪ್ಪಣ್ಣ, ನೀನು ಶುಭತ್ತೆಯ ಹೀಂಗೆಲ್ಲ ಹೇಳಿರೆ ಹೇಂಗೆ? ಪಾಪ ಮನೆ ಕಟ್ಟುವಾಗ ಮಗಂಗೊಂದು...
  • ಶ್ರೀಶ. ಹೊಸಬೆಟ್ಟು: [ಅದೇ ಜೆಪಲ್ಲಿತ್ತಡ್ಡ, ಪೂಜೆ ಸಂಕಲ್ಪಂದ ಊಟ ಅಪ್ಪನ್ನಾರವುದೇ.] ನಾರಾಯಣಂಗೆ ಮತ್ತೆ...
  • ಶ್ರೀದೇವಿ ವಿಶ್ವನಾಥ್: ಒಪ್ಪಣ್ಣ, ಶುದ್ದಿ ಲಾಯ್ಕಾಯಿದು.ಈಗಾಣ ಜೆನಂಗೊಕ್ಕೆ, ಸಣ್ಣ ಕುಟುಂಬ, ಸಣ್ಣ ದೇವರ ಕೋಣೆ...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಪಟಂಗೊ ಲಾಯಿಕ ಬಯಿಂದು. ಇದಕ್ಕೆ contrast ಪಟಂಗೊ ಬೇಕಾರೆ ನಮ್ಮ ರೋಡ್ ಗಳದ್ದು...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಚೆನ್ನಬೆಟ್ಟನ ಮದುವೆಗೆ ಹೋಗಿತ್ತಿದ್ದೆ. ಈಗ ಸಟ್ಟುಮುಡಿಗೆ ಕೂಡಾ ಹೋದ ಹಾಂಗೆ ಆತು....
  • ಕೆದೂರುಡಾಕ್ಟ್ರು: {ಸಿನೆಮ ನೋಡ್ಲೆ ಬ೦ದ ಕಾರು!} ಆ ಕಾರು ನಮ್ಮಲಿಯಾಣ ಸಿನೆಮ ತಿಯೇಟರಿನಶ್ಟು ದೊಡ್ಡವೇ ಇದ್ದನ್ನೆ!
  • ಅಜ್ಜಕಾನ ಭಾವ: {ಅಜ್ಜಿಗೆ ಉಂಡ್ಳಕಾಳು, ಚಕ್ಕುಲಿ, ಹಪ್ಪಳ ಎಲ್ಲ ಕಟ್ಟಿಕೊಡ್ಳೆ ಎಂತರ ಮಾಡುದೂಳಿ ಮಂಡೆಬೆಶಿ} ಅದಾ.....
  • ಅಜ್ಜಕಾನ ಭಾವ: ಮಾವ ನಿಂಗೊಳ ಚುಟುಕು ಸಾಂಧರ್ಬಿಕವಾಗಿ ಲಾಯ್ಕಲ್ಲಿ ಬೈಂದು.. ನಿಂಗೊ ಹೇಳಿದ “ಒಂದು...
  • ಪುಟ್ಟಭಾವ ಹಾಲುಮಜಲು: [ಅದೂ ಅಲ್ಲದ್ದೆ ಅದರ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲೆ.] ಬೇರೆಯವ್ವು ಅನುಭವಂದ ಹೇಳಿದ್ದರ...
  • ಪುಟ್ಟಭಾವ ಹಾಲುಮಜಲು: [ದಪ್ಪ ಅಪ್ಪಲೆ ಎಂತ ಅವು ಉದ್ದಿನ ದೋಸೆಯೋ] ಹೇಳುಲೇ ಎಡಿಯ!! ಬೋಂಡ ಆದಿಕ್ಕು!!
  • ಪುಟ್ಟಭಾವ ಹಾಲುಮಜಲು: ತಲೆಕ್ಕೊಂಬು ಮಾಡಿರೆ ಬೇಗ ತಲೆಗೆ ಹೋಗಿ ಬೇಗ ಹೇಳಿಕೊಡುಗು!!!!
  • ಚುಬ್ಬಣ್ಣ...: “…..ಐರಾವತಲ್ಲಿ ದೇವೇಂದ್ರನ ಹಾಂಗೆ ಹೆರಟಿದೆ” ಬಾವ… :P ಎನಗೆ ಒ೦ದು...
  • ಪುಟ್ಟಭಾವ ಹಾಲುಮಜಲು: ಭಾವಾ!! ಮದಿಮ್ಮಾಯನ ಸ್ವಾಗತ ಮಾಡಿದ್ದೂ ಭಾರೀ ಲಾಯ್ಕಯ್ದು!! ಅದು ಸರಿ !! ಉದಿಯಪ್ಪಗಳೇ...
  • raghumuliya: ಒಪ್ಪಣ್ಣಾ, ಒಳ್ಳೆಯ ಲೇಖನ. ತರವಾಡು ಮನೆಗಳ ದೇವರ ಕೋಣೆ ಮನೆಯ ಮಧ್ಯಲ್ಲಿದ್ದು, ಅದರ ಸುತ್ತಲೂ...
  • Jayalakshmi Pailoor: Theertha ellinda kudiyakku? Enage artha ayiddille. Chandana, kumkuma,...
  • ಗೋಪಾಲ ಮಾವ: ಬೆಂಗಳೂರಿಂದ ಮಂಗಳೂರಿಂಗೆ ಐರಾವತಲ್ಲಿ ಇಳಿದು ಬಂದ ಅನುಭವ, ಸಟ್ಟುಮುಡಿಯ ವಿವರಣೆ ಶೈಲಿ...
  • ಅಜ್ಜಕಾನ ಭಾವ: {ಅಂತೂ ಹೋದ ಎನಗೆ ಹೊಟ್ಟೆಯೂ ತುಂಬಿತ್ತು, ಮನಸ್ಸೂ ತುಂಬಿತ್ತು. ಓದಿದ ನಿಂಗೊಗೆ ?? } ಬಂದ್...
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    “ಅಥ ಯೋಗಾನುಶಾಸನಮ್”

    July 25, 2010 ರ 12:24 pmಗೆ ನಮ್ಮ ಸುವರ್ಣಿನೀ ಬರದ್ದು, ಇದುವರೆಗೆ 33 ಒಪ್ಪಂಗೊ.

    ಎಲ್ಲದಕ್ಕೂ ಯೋಗ ಇರೆಕ್ಕು..ಅಲ್ಲದಾ? ನಾವು ಎಂತಾರು ಮಾಡೆಕ್ಕು ಹೇಳಿ ಗ್ರೇಶಿರೆ ಅದು ಆವ್ತು ಹೇಳೀಯೇ ಎಂತ ಇಲ್ಲೆ..ಯೋಗ ಇದ್ದರೆ ಮಾಂತ್ರ ಎಲ್ಲವೂ ಅಪ್ಪದು :) ಈಗ ಆನು ಇಲ್ಲಿ ನಿಂಗಳೊಟ್ಟಿಂಗೆ ಇಪ್ಪದುದೇ ಒಂದು ಯೋಗ. ಇದೆಲ್ಲ ಅಪ್ಪು, ಹಾಂಗಾರೆ ನಾವು ತುಂಬಾ ಉಪಯೋಗ್ಸುವ “ಯೋಗ”, ಈ ಶಬ್ದ ಎಂತರ? ಇದರ ಅರ್ಥ, ವ್ಯಾಪ್ತಿ ಎಂತರ? ಇಂದು ಯೋಗದ ಬಗ್ಗೆ ರಜ್ಜ ಹೇಳುಂವ ಹೇಳಿ ಆಲೋಚನೆ ಮಾಡಿದೆ :) .

    ಯೋಗ” ಇದು ಸಂಸ್ಕೃತದ ’ಯುಜ್’ ಧಾತುವಿಂದ ಹುಟ್ಟಿದ್ದು.”ಯುಜ್ಯತೆ ಅನೇನ ಇತಿ ಯೋಗಃ” ಈ ಶಬ್ದದ ಅರ್ಥ ಕೂಡುಸುದು (unite/union) ಹೇಳಿ. ಯಾವುದರ ಕೂಡುಸುದು? ದೇಹವ-ಮನಸ್ಸಿನ ಕೂಡ್ಸುದು,ಜೀವಾತ್ಮವ ಪರಮಾತ್ಮನೊಟ್ಟಿಂಗೆ ಕೂಡುಸುದು… ಹೀಂಗೆ ಈ ಎರಡಕ್ಷರದ ಶಬ್ದದ ವ್ಯಾಪ್ತಿ ತುಂಬಾ ವಿಸ್ತಾರವಾದ್ದು. ನಮ್ಮ ಜೀವನಲ್ಲಿ ಇದರ ಪ್ರಾಮುಖ್ಯತೆ ಎಂತರ? ಎಂತಗೆ ಇದರ ನಿತ್ಯ ಜೀವನಲ್ಲಿ ಅಳವಡಿಸಿಗೊಳ್ಳೆಕು? ಯೋಗದ ಬಗ್ಗೆ ತುಂಬಾ ತಪ್ಪು ಕಲ್ಪನೆಗೊ ಇದ್ದು, ಯೋಗ ಹೇಳಿರೆ ವ್ಯಾಯಾಮ ಹೇಳಿ ಕೆಲವು ಜೆನ ಹೇಳ್ತವು, ಆದರೆ ಅದು ತಪ್ಪು. ಯೋಗ ವ್ಯಾಯಾಮ ಅಲ್ಲ !! ಇನ್ನು ಕೆಲವು ಜೆನ ಯೋಗ ಹೇಳಿರೆ ಯೋಗಾಸನ ಮತ್ತೆ ಪ್ರಾಣಾಯಾಮ ಮಾಂತ್ರ ಹೇಳಿಯೂ ಗ್ರೇಶುವೋರು ಇದ್ದವು, ಇದುದೇ ತಪ್ಪು, ಯೋಗಲ್ಲಿ ಆಸನ-ಪ್ರಾಣಾಯಾಮ ಅಲ್ಲದ್ದೆ ಬೇರೆ ಸುಮಾರು ವಿಷಯಂಗಳುದೇ ಇದ್ದು. ನಮ್ಮ ನಿತ್ಯ ಜೀವನಲ್ಲಿ ಆಸನ, ಪ್ರಾಣಾಯಾಮ  ಮಾಂತ್ರ ಮಾಡಿರೆ ಸಾಕು ಹೇಳಿ ಅಭಿಪ್ರಾಯ ಇದ್ದು, ಅದೂ ಒಂದು ರೀತಿಲಿ ತಪ್ಪೇ. ನಾವು ಅನುಸರ್ಸೆಕಾದ ಹಲವು ಉತ್ತಮ ವಿಷಯಂಗೊ ಯೋಗಲ್ಲಿ ಇದ್ದು.

    ಯೋಗಲ್ಲಿ ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ರಾಜಯೋಗ,ಹಠಯೋಗ..ಹೀಂಗೆ ಬೇರೆ ಬೇರೆ ದಾರಿ ಇದ್ದು ..ಆದರೆ ಎಲ್ಲದರ ಗುರಿಯೂ ಒಂದೇ-ಪರಮಾತ್ಮನ ಕಾಂಬದು. ಆದರೆ ಈ ದಾರಿಗಳಲ್ಲಿ ನಾವು ಸಾಮಾನ್ಯವಾಗಿ ಎಲ್ಲವನ್ನೂ ರಜ್ಜ ರಜ್ಜ ಅಭ್ಯಾಸ ಮಾಡ್ತು. ಈ ಅಭ್ಯಾಸಂಗೊ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಕಾರಣ ಆವ್ತು. ಎಲ್ಲವನ್ನೂ ಪಾಲನೆ ಮಾಡುದು ಕಷ್ಟ ಸಾಧ್ಯ. ಆದರೆ…ರಾಜಯೋಗದ ಮೂರು ವಿಭಾಗಂಗಳ ಅಭ್ಯಾಸ ದೈಹಿಕವಾಗಿ ತುಂಬಾ ಸಹಾಯ ಮಾಡ್ತು (ಮಾನಸಿಕ/ಆಧ್ಯಾತ್ಮಿಕವಾಗಿಯೂ) -ಆಸನ, ಷಟ್ ಕ್ರಿಯಾ, ಪ್ರಾಣಾಯಾಮ.

    ಇಂದು ಆಸನದ ಬಗ್ಗೆ ಸಣ್ಣಕ್ಕೆ ಬರೆತ್ತೆ ಆಗದಾ? ನಿಂಗೊಗೆ ಹೆಚ್ಚು ಮಾಹಿತಿ ಬೇಕಾರೆ ಕೇಳ್ಲಕ್ಕು :)

    ಆಸನ: “ಸ್ಥಿರಂ ಸುಖಂ ಆಸನಂ” ಹೇಳಿ ಪತಂಜಲಿ ಮಹರ್ಷಿ ಹೇಳಿದ್ದವು. ಸ್ಥಿರವಾಗಿ ಒಂದೇ ಭಂಗಿಲಿ ಯಾವುದೇ ಬಙ ಇಲ್ಲದ್ದೆ ಇಪ್ಪದು. ತುಂಬಾ ಆಸನಂಗೊ ಇದ್ದು, ಹಾಂಗಾರೆ ಯಾವುದರ ಎಲ್ಲ ಮಾಡೆಕ್ಕು? ಸುರು ಮಾಡುವವ್ವು ತುಂಬಾ ಸರಳ ಆಸನಂಗಳ ಮಾಡೆಕ್ಕು. ನಿಧಾನಕ್ಕೆ ಕ್ಲಿಷ್ಟವಾದ ಆಸನಂಗಳ ಅಭ್ಯಾಸ ಮಾಡ್ಲಕ್ಕು. ಆಸನ ಮಾಡುವಗ ನೆನಪ್ಪಿರೆಕ್ಕಾದ ಮುಖ್ಯ ವಿಷಯ ಎಂತರ ಹೇಳಿರೆ ಉಸಿರಾಟದ ಬಗ್ಗೆ ಗಮನ, ವ್ಯಾಯಾಮ ಮಾಡಿದ ಹಾಂಗೆ ಒಟ್ರಾಸಿ ಮಾಡಿರೆ ಆಗ. ಉಸಿರಾಟವೂ ದೇಹದ ಚಲನೆಯೂ ಒಂದಕ್ಕೊಂದು ಪೂರಕ ಆಗಿರೆಕ್ಕು. ಇನ್ನು ಅಭ್ಯಾಸ ಮಾಡುವಗಳೂ ಅಷ್ಟೆ ನಿಧಾನಕ್ಕೆ ಮಾಡೆಕ್ಕು. ಇದು ಆಸನದ ವಿಶೇಷತೆ :) ಇದರಿಂದ ಅಪ್ಪ ಉಪಯೋಗಂಗೊ ಎಷ್ಟು ಹೇಳಿರೆ…ಬರವಲೆ ಜಾಗೆ ಸಾಲದಾ ಹೇಳಿ!! :) -ದೈಹಿಕ ಆರೋಗ್ಯವ ಕಾಪಾಡುತ್ತು, ಶರೀರದ ಕ್ರಿಯೆಗಳ (physiology) ಸರಿಯಾಗಿ ನಡೆವ ಹಾಂಗೆ ನೋಡೀಗೊಳ್ತು, ರಜ್ಜ ಹೆಚ್ಚು ಕಮ್ಮಿ ಇದ್ದದರ ಸರಿ ಮಾಡ್ತು. ಇಷ್ಟು ಮಾಂತ್ರ ಅಲ್ಲ, ಮನಸ್ಸಿನ ಮೇಲೂ ಪ್ರಭಾವ ಇದ್ದು :) ತನ್ಮೂಲಕ ನಮ್ಮ ಜೀವನದ ಎಲ್ಲಾ ಸ್ಥರಂಗಳಲ್ಲಿಯೂ ಒಳ್ಳೆಯ ಫಲಿತಾಂಶ ಸಿಕ್ಕುತ್ತು :)

    ನಾವು ಸಾಮಾನ್ಯ ಮಾಡೆಕಾದ/ಮಾಡ್ಲಕ್ಕಾದ ಆಸನಂಗೊ –

    ತಾಡಾಸನ,ಅರ್ಧಕಟಿ ಚಕ್ರಾಸನ,ಪಾದಹಸ್ತಾಸನ, ಅರ್ಧಚಕ್ರಾಸನ,ತ್ರಿಕೋನಾಸನ, ಪಾರ್ಶ್ವಕೋನಾಸನ, ಪರಿವೃತ್ತ ತ್ರಿಕೋನಾಸನ ಇತ್ಯಾದಿ. ಇದೆಲ್ಲವೂ ನಿಂದುಗೊಂಡು ಮಾಡುವ ಆಸನಂಗೊ.

    ಇನ್ನು ಬೆನ್ನಿನಮೇಲೆ ಮನಿಕ್ಕೊಂಡು ಮಾಡುವ ಆಸನಂಗೊ-ಉತ್ತಿತ್ತಪಾದಾಸನ,ಪವನಮುಕ್ತಾಸನ,ಸರ್ವಾಂಗಾಸನ, ಹಲಾಸನ, ಸೇತುಬಂಧಾಸನ, ಶವಾಸನ(!!) ಇತ್ಯಾದಿ.

    ಇನ್ನು ಹೊಟ್ಟೆಯ ಮೇಲೆ ಮನುಗಿ (ಕವುಂಚಿ ಮನುಗಿ) ಮಾಡುವ ಆಸನಂಗೊ-ಭುಜಂಗಾಸನ, ಧನುರಾಸನ, ಸರ್ಪಾಸನ, ಶಲಭಾಸನ, ಮಕರಾಸನ etc.

    ಅಕೇರಿಗೆ ಕೂದುಗೊಂಡು ಮಾಡುವ ಆಸನಂಗೊ-ಪಶ್ಚಿಮೋತ್ತಾನಾಸನ,ವಕ್ರಾಸನ, ಅರ್ಧಮತ್ಸ್ಯೇಂದ್ರಾಸನ, ಗೋಮುಖಾಸನ, ಜಾನುಶೀರ್ಷಾಸನ, ವಜ್ರಾಸನ,ಉಷ್ಟ್ರಾಸನ,ಶಶಾಂಕಾಸನ  etc.

    ಆಸನ ಮಾಡುವಗ ಯಾವಾಗಳೂ ನಿಂದುಗೊಂಡು(standing series) ಮಾಡುವ ಆಸನಂಗಳ ಮೊದಲು ಮಾಡೆಕ್ಕು, ಮತ್ತೆ ಮೊಗಚ್ಚಿ ಮನುಗಿ (supine series)ಮಾಡುವ ಆಸನಂಗೊ, next  ಕವುಂಚಿ ಮಾಡುವ (prone series)ಆಸನಂಗೊ. ಅಕೇರಿಗೆ ಕೂದುಗೊಂಡು (sitting series)ಮಾಡುವ ಆಸನಂಗೊ, ಇದೇ ಮಾದರಿಲಿ ಮಾಡೆಕು.

    ಯೋಗಾಸನಂಗಳ ಮಾಡೆಕ್ಕಾರೆ  ತೆಕ್ಕೊಳ್ಳೆಕಾದ  ಮುಂಜಾಗೃತೆಗಳ ಹೇಳೆಕಾದ್ದು ಎನ್ನ ಕರ್ತವ್ಯ,

    • ಹೊಟ್ಟೆ ಖಾಲಿ ಇರೆಕ್ಕು. ಉದಿಯಪ್ಪಗ ಮಾಡುದು ಒಳ್ಳೆದು. ಹೊತ್ತೋಪಗ ಮಾಡ್ತರೆ ಆಹಾರ ತೆಕ್ಕೊಂಡು  2-3 ಗಂಟೆ ಹೊತ್ತು ಕಳುದಿರೆಕ್ಕು .
    • ಮಲ-ಮೂತ್ರ ವಿಸರ್ಜನೆ ಮಾಡಿರೆಕ್ಕು,ಮಿಂದಿಕ್ಕಿ ಮಾಡಿರೆ ಒಳ್ಳೆದು.
    • ಹೆಚ್ಚು ಗಾಳಿ, ಬೆಣಚ್ಚು ಇಪ್ಪ ಜಾಗೆಲಿ ಮಾಡೆಕು.
    • ಕ್ಲೀನ್ ಇಪ್ಪ ಜಾಗೆಲಿ ನೆಲದ ಮೇಲೆ ಒಂದು ಹಸೆ(ಹುಲ್ಲಿನ/ಒಲಿ)  ಅಥವಾ ಜಮಖಾನ ಹಾಕಿ ಅದರ ಮೇಲೆ ಮಾಡೆಕು, ಬರೀ ನೆಲಲ್ಲಿ ಮಾಡ್ಲಾಗ.
    • ಸಾಧ್ಯ ಆದರೆ ಆದಷ್ಟು ಕಮ್ಮಿ ವಸ್ತ್ರ(minimum clothing) ಹಾಕಿರೆ ಒಳ್ಳೆದು. ಇಲ್ಲದ್ದರೆ ಹೆಚ್ಚು ಟೈಟ್ ಇಲ್ಲದ್ದ ಹತ್ತಿಯ ವಸ್ತ್ರ ಹಾಕೆಕು.
    • ನಿಂಗೊಗೆ ಯಾವುದಾದರೂ ಆರೋಗ್ಯದ ಸಮಸ್ಯೆಗೊ ಇದ್ದರೆ, ಆ ಸಂದರ್ಭಲ್ಲಿ ಮಾಡ್ಲಾಗದ್ದ ಅಭ್ಯಾಸಂಗೊ ಇದ್ದರೆ ಅದರ ಮಾಡ್ಲಾಗ
    • ಮೊದಲೇ ಹೇಳಿದ ಹಾಂಗೆ ಉಸಿರಾಟದ ಮೇಲೆ ಗಮನ, ಮತ್ತೆ ನಿಧಾನಕ್ಕೆ ಅಭ್ಯಾಸ ಮಾಡೆಕ್ಕು.
    • ಗುರುವಿನ(yoga expert/doctor) ಮಾರ್ಗದರ್ಶನಲ್ಲಿಯೇ ಮಾಡೆಕು.

    ಎಲ್ಲಾ ಆಸನಂಗಳ ಬಗ್ಗೆಯೂ ವಿವರಣೆ ಕೊಡುವ ಆಶೆ ಇದ್ದು ಎನಗೆ ಆದರೆ ಒಂದರಿಯೇ ಸಾಧ್ಯ ಇಲ್ಲೆನ್ನೆ !! ರಜ್ಜ ಸಮಯ ಪ್ರತೀವಾರ ಒಂದೊಂದು ಆಸನದ ಬಗ್ಗೆ ಅಥವಾ ಪ್ರಾಣಾಯಾಮ ಅಥವಾ ಕ್ರಿಯೆಯ ಬಗ್ಗೆ ಬರೆವಲಕ್ಕಾ ಹೇಳಿ ಗ್ರೇಶಿದ್ದೆ :) ಇದರಿಂದ ಎಲ್ಲೋರಿಂಗೂ ಉಪಕಾರ ಅಕ್ಕು ಹೇಳಿ ಎನ್ನ ಅಭಿಪ್ರಾಯ. ಆದರೆ ಗಮನಲ್ಲಿ ಮಡುಗೆಕಾದ ಅಂಶ ಎಂತ ಹೇಳಿರೆ..ದಯವಿಟ್ಟು ಆರುದೇ ಇಲ್ಲಿ ಬರದ್ದರ ಮಾಂತ್ರ ನೋಡಿ ಯಾವುದೇ ಅಭ್ಯಾಸವ ಮಾಡೆಡಿ, ಸರಿಯಾದ ಗುರುವಿನ(yoga expert/doctor) ಹತ್ತರೆಯೇ ಕಲ್ತು ಮಾಡೆಕು. ಇಲ್ಲಿ ಆನು ಬರೆವದು ಕೇವಲ ಮಾಹಿತಿ ಕೊಡ್ಲೆ ಮಾಂತ್ರ :) .

    “ಅಥ ಯೋಗಾನುಶಾಸನಮ್”, 5.0 out of 5 based on 1 rating
    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)

    “ಅಥ ಯೋಗಾನುಶಾಸನಮ್” - ಈ ಶುದ್ದಿಗೆ ಇದುವರೆಗೆ 33 ಒಪ್ಪಂಗೊ

    1. sharadamadhyastha

      )

      very good. Thank you Honni.

      [ಉತ್ತರುಸಿ]

      ಸುವರ್ಣಿನೀ

      ಸುವರ್ಣಿನೀ ಉತ್ತರ ಕೊಟ್ಟದು:

      VN:F [1.9.3_1094]
      Rating: 0 (from 0 votes)

      tx :)

      [ಉತ್ತರುಸಿ]

    2. pradeep Dr

      )

      good. If you can give scientic explanation for each asana it will be good. if possible Indications and contraindication for Each asanasa

      [ಉತ್ತರುಸಿ]

      ಸುವರ್ಣಿನೀ

      ಸುವರ್ಣಿನೀ ಉತ್ತರ ಕೊಟ್ಟದು:

      ಯೋಗ ವೈಜ್ಞಾನಿಕ ಅಪ್ಪು, ಆದರೆ ಅದರ ಮಾಹಿತಿ ಎಲ್ಲರಿಂಗೂ ಇರೆಕ್ಕಾದ್ದು ಅಗತ್ಯ :) ಇನ್ನು ಮುಂದಾಣ ದಿನಂಗಳಲ್ಲಿ ಖಂಡಿತಾ ವಿವರಣೆ ಕೊಡ್ತೆ :)

      [ಉತ್ತರುಸಿ]

      ಸುವರ್ಣಿನೀ

      ಸುವರ್ಣಿನೀ ಉತ್ತರ ಕೊಟ್ಟದು:

      VN:F [1.9.3_1094]
      Rating: 0 (from 0 votes)

      are u Dr.Pradeep Narayan?

      [ಉತ್ತರುಸಿ]

      ಅಜ್ಜಕಾನ ಭಾವ

      ಅಜ್ಜಕಾನ ಭಾವ ಉತ್ತರ ಕೊಟ್ಟದು:

      VN:F [1.9.3_1094]
      Rating: 0 (from 0 votes)

      ಡಾಗುಟ್ರ ಬಾವ . ನಿಂಗೊ ಈ ಭಾಷೆಲಿ ಬರೆದರೆ ಎಂಗೊಗೆ ಅರ್ಥ ಆವುತ್ತಿಲ್ಲೆ ಇದಾ.. ನಮ್ಮ ಭಾಷೆಯೆ ಚೆಂದ ಅಲ್ಲದೋ?

      [ಉತ್ತರುಸಿ]

    3. pradeep Dr

      )
      VA:F [1.9.3_1094]
      Rating: 0 (from 0 votes)

      Appu, Ane Pradeep Narayana

      [ಉತ್ತರುಸಿ]

    4. ಹಾಲುಮಜಲು ಮಾವ

      )

      Modalinge Navu Patanjali Maharshiya nempu Madyolekkanne ?? (Yogena Chittasya Shloka Heli…………….)

      [ಉತ್ತರುಸಿ]

      ಸುವರ್ಣಿನೀ

      ಸುವರ್ಣಿನೀ ಉತ್ತರ ಕೊಟ್ಟದು:

      VN:F [1.9.3_1094]
      Rating: 0 (from 0 votes)

      :) ಖಂಡಿತಾ, ಪ್ರಾರ್ಥನೆ ಮಾಡದ್ದೆ ಅಭ್ಯಾಸ ಶುರು ಮಾಡ್ಲಿಲ್ಲೆ !!

      [ಉತ್ತರುಸಿ]

    5. Shrivathsa..
      ಸುವರ್ಣಿನೀ

      )
      VN:F [1.9.3_1094]
      Rating: 0 (from 0 votes)

      very gud,
      can u explain in detail about it in your upcoming article

      [ಉತ್ತರುಸಿ]

    6. ಬಟ್ಯ

      )

      ಒಪ್ಪ ದಣಿಕ್ಕುಳು ಪುಲ್ಯ ಕಾಂಡೆ ಲಕ್ಕುದು ಓಡಿಕೊಂಡಿತ್ತಿದ್ದವು. ಯಾನ್ ಗುಡ್ಡೆಗೆ ಓಪಗ ನೋಡಿದ್ದು. ಅವುಲಾ ಈ ಯೋಗಾಶನಡೇ ಬರ್ಪುಂಡ?

      [ಉತ್ತರುಸಿ]

      ಪೆರ್ಲದಣ್ಣ

      ಪೆರ್ಲದಣ್ಣ ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      ಅದು ಜಾಗಿಂಗ್ ಬಟ್ಯಾ. ಒಳ್ಳೆದಲ್ಲಡ, ಇಲ್ಲಿದ್ದು ನೋಡಿ: http://prajavaniepaper.com/pdf/2010/07/28/20100728a_010100006.jpg

      [ಉತ್ತರುಸಿ]

      ಅಜ್ಜಕಾನ ಭಾವ

      ಅಜ್ಜಕಾನ ಭಾವ ಉತ್ತರ ಕೊಟ್ಟದು:

      ಒಪ್ಪಣ್ಣ ಭಾವ ಅಷ್ಟು ಬೇಗ ಓಡುತ್ತೆಯೊ.. ಎತ್ಲಾಗಿಯೋ! ಪೆರ್ಲದಣ್ಣ ಹೇಳಿದ್ದಾದರೆ ಜಾಗ್ರತೆ..

      [ಉತ್ತರುಸಿ]

      ಒಪ್ಪಣ್ಣ

      ಒಪ್ಪಣ್ಣ ಉತ್ತರ ಕೊಟ್ಟದು:

      ಯೇ, ಹಾಂಗೆಂತ ಇಲ್ಲೆಪ್ಪ… ;-)

      ಇಂದು ಮಾಷ್ಟ್ರುಮಾವ° ಉದಿಯಪ್ಪಗಾಣ ಕೃಷ್ಣಬಸ್ಸಿಂಗೆ ಹೆರಟವು, ಪುತ್ತೂರಿಂಗೆ ಹೋಪೋರು.
      ಅಂಬೆರ್ಪಿಲಿ ಹೆರಡುವಗ ಅವರ ಎಲೆತೊಟ್ಟೆ ಮನೆಲೇ ಬಾಕಿ ಆಗಿತ್ತಡ!
      ಮಾಷ್ಟ್ರಮನೆ ಅತ್ತೆ ದಿನಿಗೆಳಿ ಹೇಳಿದವು, ’ಈಗ ಮಾರ್ಗದಕರೆಂಗೆ ಹೋದ್ದಷ್ಟೆ, ಬಸ್ಸುಬಪ್ಪಲಾತು, ಒಂದರಿ ಹೋಗಿ ಕೊಟ್ಟಿಕ್ಕಿ ಬಾ ಒಪ್ಪಣ್ಣೋ..’ ಹೇಳಿ! ಹಾಂಗೆ ಅದರ ಹಿಡ್ಕೊಂಡು ಓಡಿದ್ದು…!!

      ದಾರಿಲಿ ಬಟ್ಯ° ಸಿಕ್ಕಿತ್ತು, ಮಾತಾಡ್ಳಾಯಿದಿಲ್ಲೆ.
      ಹಾಂಗಾಗಿ ಆದ ಕತೆ ಇದು!

      ಪೆರ್ಲದಣ್ಣಂಗೆ ಬೆಂಗುಳೂರಿನ ಜೋಗಿಂಗು ಮಾಂತ್ರ ಅರಡಿಗಷ್ಟೆ ಇದಾ!
      ಅಜ್ಜಕಾನಬಾವಾ, ನೀ ಯೆಂತಕೆ ನಂಬುದು ಅದರ!, ಪೆರ್ಲದಣ್ಣಂಗೆ ರಜಾ ಲೊಟ್ಟೆ ಇದ್ದು,
      ಹಾಂ! ;-)

      [ಉತ್ತರುಸಿ]

      ಬಟ್ಯ ಉತ್ತರ ಕೊಟ್ಟದು:

      ಇನಿಲಾ ತೊಟ್ಟೆ ಬಾಕಿ ಆತಿತ್ತುಂಡಾ ಒಪ್ಪ ದಣಿಕುಲೆ? ಬಲಿಪುನೆ ತೂಯೆ, ಕೈಟ್ ತೊಟ್ಟೆ ಇತ್ತಿಜ್ಜಿ!
      (ತೊಟ್ಟೆ ಇತ್ತ್ಂಡ ಎಂಕ್ ತೋಜಾಂದೆ ಇಪ್ಪ?)

      [ಉತ್ತರುಸಿ]

      ಒಪ್ಪಣ್ಣ

      ಒಪ್ಪಣ್ಣ ಉತ್ತರ ಕೊಟ್ಟದು:

      ಯೇ ಬಟ್ಯಾ..
      ನಿನಗೆ ಉದಿಯಾದರೆ ಕಳ್ಳುಕುಡಿವದು ಒಂದೇ ಒಯಿವಾಟು!

      ಒಪ್ಪಣ್ಣಂಗೆ ಹಾಂಗಲ್ಲನ್ನೇ, ಸುಮಾರು ಇರ್ತು! ಎಲ್ಲ ಹೇಳಿಗೊಂಡು ಕೂದರೆ ಬೈಲಿಲಿ ಇಡೀ ಅದೇ ಶುದ್ದಿ ಬಕ್ಕು.!!
      ಇಂದು ಓಡಿದ್ದು ಮಾರ್ಗದ ಕರೆಗೆ ಅಲ್ಲ, ಟೇಂಕಿಲಿ ನೀರು ಸಮಲಿತ್ತಿದ್ದು, ಹಾಂಗೆ ಪಂಪುನಿಲ್ಲುಸಲೆ ಪಂಪಿನಕೊಟ್ಟಗೆಗೆ ಓಡಿದ್ದು, ಅಷ್ಟೆ.

      [ಉತ್ತರುಸಿ]

      ಬಟ್ಯ ಉತ್ತರ ಕೊಟ್ಟದು:

      ದಣಿಕುಲೆ ಇನಿ ಸೂಯರೆಣೆ ಇಜ್ಜಿ.. ಬಾತ್ತಿಜ್ಯಾರಾ?

      [ಉತ್ತರುಸಿ]

      ಒಪ್ಪಕ್ಕ

      ಒಪ್ಪಕ್ಕ ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      ಬಟ್ಯಂಗೆ ಎಂಗಳ ಭಾಷೆ ಬತ್ತಲ್ಲದ? ಮತ್ತೆಂತಕೆ ತುಳುವಿಲಿ ಮಾತಾಡುದು?

      [ಉತ್ತರುಸಿ]

    7. chikkamma

      )
      VA:F [1.9.3_1094]
      Rating: 0 (from 0 votes)

      oppanno avara bhasheli jagingu heludaikku allado…
      eegana kalada makko allada hange..
      ajjakana bava nambulude perladanna helulude
      anthu oppannana begaru bichhittu khanditha…

      [ಉತ್ತರುಸಿ]

    8. ನೀರ್ಕಜೆ ಚಿಕ್ಕಮ್ಮ

      )

      ಭಾರೀ‌ ಒಳ್ಳೆದಾತು ಸು ಅಕ್ಕಾ ಈ ಲೇಖನ ಮಾಲೆ ಸುರು ಮಾಡಿದ್ದು, ಎನಗೆ ಈ ವಿಷಯಲ್ಲಿ ಭಾರೀ ಇನ್ತ್ರೆಷ್ಟು.

      [ಉತ್ತರುಸಿ]

      ಸುವರ್ಣಿನೀ

      ಸುವರ್ಣಿನೀ ಉತ್ತರ ಕೊಟ್ಟದು:

      thank u ಚಿಕ್ಕಮ್ಮ :) , ನಿಂಗೊಗೆ ಎಂತಾರು ಮಾಹಿತಿ ಬೇಕಾರೆ ಕೇಳ್ಲಕ್ಕು :) ಈ ಯೋಗವೇ ಹಾಂಗೆ ಓದುತ್ತ ಹೋದ ಹಾಂಗೇ ಆಸಕ್ತಿ ಹೆಚ್ಚಾವ್ತು :) ಅದರಲ್ಲಿ ಇಪ್ಪ ಪ್ರತಿಯೊಂದೂ ಅಂಶಂಗಳೂ ನಮ್ಮ ಜೀವನಲ್ಲಿ ಎಲ್ಲಾ ಕಾಲಲ್ಲಿಯೂ ಅನುಸರ್ಸುವಂಥದ್ದು, ಅನುಸರ್ಸೆಕಾದ್ದು, ಅಲ್ಲದಾ? ಎಲ್ಲವನ್ನೂ ಎಷ್ಟು ಚೆಂದಕ್ಕೆ ಶ್ಲೋಕಂಗಳಲ್ಲಿ ವಿವರ್ಸಿ ಹೇಳಿದ್ದವು..ಸಾವಿರಾರು ವರ್ಷಗಳ ಹಿಂದೆಯೇ!!! :) ನಾವೆಲ್ಲಾ ಕಲಿವದು ತುಂಬಾ ಇದ್ದು :)

      [ಉತ್ತರುಸಿ]

      ಅಜ್ಜಕಾನ ಭಾವ

      ಅಜ್ಜಕಾನ ಭಾವ ಉತ್ತರ ಕೊಟ್ಟದು:

      VN:F [1.9.3_1094]
      Rating: 0 (from 0 votes)

      ಚಿಕ್ಕಮ್ಮ ಈಗಲೇ ಕಲ್ತದ್ದು ಜಾಸ್ತಿ ಆಯಿದಡಾ .. ಮೊನ್ನೆ ನೆಗೆ ಬಾವಂಗೆ ಅಪ್ಪಚ್ಚಿ ಸಿಕ್ಕಿ ಹೇಳಿದ್ದಡಾ. ನವಗರಡಿಯಾ..!

      [ಉತ್ತರುಸಿ]

      ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      ಭಾರೀ ಉಪಕಾರ ಇದ್ದು ಮಾಂತ್ರ ಈ ಆಸನಂಗಳಂದ…. ಪೇಟೆಲ್ಲಿ ಕೂದು ಕೂದು ಹಶು ಆಗದ್ದಿಪ್ಪದಕ್ಕೆ, ಉದಾಸಿನ ಅಪ್ಪದಕ್ಕೆ, ಬೆನ್ನು ಬೇನೆ, ಸೊಂಟ ಬೇನೆ ಎಲ್ಲದಕ್ಕೂ ಭಾರಿ ಒಳ್ಳೇದು…. ನಾವೆಲ್ಲ ರಜಾ ಕಾವ, ಸುಕ್ಕ ಹೇಳುಗು ಎಂತೆಲ್ಲದಕ್ಕೆ ಎಂತವು ಹೇಳಿ….

      [ಉತ್ತರುಸಿ]

    9. ಅಜ್ಜಕಾನ ಭಾವ
      ಅಜ್ಜಕಾನ ಭಾವ

      )

      ಸು ಅಕ್ಕಾ — ಹೇಳಿರೆ ಸುಕ್ಕಾ ವಾ.. ಮೊನ್ನೆ ಗಲ್ಫಿಂದ ಬಂದ ಕುಟ್ಟ ಎಳ್ಕೊಂಡು ಇತ್ತು..

      [ಉತ್ತರುಸಿ]

      ಸುವರ್ಣಿನೀ

      ಸುವರ್ಣಿನೀ ಉತ್ತರ ಕೊಟ್ಟದು:

      ನಿಂಗೊ ಸುಕ್ಕಾ ಹೇಳೂವಗ ಎನಗೆ ಚಿಕನ್ ಸುಕ್ಕಾ ನೆಂಪಾವ್ತು !! ಎಂಗಳ ಹತ್ತರಾಣ ಮನೆಲಿ ಶೆಟ್ರುಗೊ ಇಪ್ಪದು, ಅವರ ಮನೆಯ ಸಣ್ಣ ಕೂಸು ಯಾವಾಗ್ಲೂ ಹೇಳುಗು “ನಂಗೆ ಚಿಕನ್ ಸುಕ್ಕ ತುಂಬಾ ಇಷ್ಟ” ಹೇಳಿ!!

      [ಉತ್ತರುಸಿ]

      ಮುಳಿಯ ಭಾವ

      ರಘು ಮುಳಿಯ ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      ಆ ಕೂಸಿನ ಅಜ್ಜಿಯ ಹತ್ತರೆ ಕೇಳಿರೆ ಆಜಾಯಿನೆ ಹೇಳುಗು.ಪುಳ್ಳಿ ಬೊಂಬಾಯಿಂದ ಬಂದದಾಗಿಕ್ಕು.. ಸುಕ್ಕ ತಿಮ್ಬವಕ್ಕೆ ಸೊಕ್ಕು ಜಾಸ್ತಿಯಡ .. ಅಂತೂ ಯೋಗಂದ ಸುಕ್ಕಕ್ಕೆ ಎತ್ತಿತ್ತು ಮಾತುಕತೆ ..ಪೆರ್ಲಕ್ಕೆ ಹೆರಟವ ಪುತ್ತೂರಿನ್ಗೆ ಎತ್ತಿದ ಹಾಂಗೆ ..

      [ಉತ್ತರುಸಿ]

      ನೀರ್ಕಜೆ ಚಿಕ್ಕಮ್ಮ ಉತ್ತರ ಕೊಟ್ಟದು:

      ಸುಕ್ಕ ಹೇಳ್ಳುದೆ ಲಾಯಿಕ ಅವುತ್ತು. ಅಕ್ಕಂದು ಎಂತಾರು ಅಪೀಲಿದ್ದಾ ಹೇಳಿ ಗೊಂತಿಲ್ಲೆ :) ;)

      [ಉತ್ತರುಸಿ]

      ಸುವರ್ಣಿನೀ

      ಸುವರ್ಣಿನೀ ಉತ್ತರ ಕೊಟ್ಟದು:

      ಹೊಸ ಹೊಸ ಹೆಸರುಗೊ…..ಎನ್ನದು ಎಂತದೂ ಅಭ್ಯಂತರ ಇಲ್ಲೆಪ್ಪಾ…!ಎಂತಕ್ಕೂ ನೆಗೆಗಾರನ ಅಭಿಪ್ರಾಯ ಕೇಳುಂವ !!ಆಗದಾ?

      [ಉತ್ತರುಸಿ]

      ನೆಗೆಗಾರ°

      ನೆಗೆಗಾರ° ಉತ್ತರ ಕೊಟ್ಟದು:

      ಹೊಸ ಹೆಸರು ಸಿಕ್ಕಿತ್ತು ಹೇಳ್ತ ಕೊಶಿಲಿ ಸುಕ್ಕಮ್ಮಾ..
      ಆನೆ ಮಡಗಿದ್ದು ಹೇಳಿ ಬೀಗಿತ್ತು ನೀರ್ಕಜೆ ಚಿಕ್ಕಮ್ಮಾ..

      ಪ್ರಾಸ ಲಾಯ್ಕಾವುತ್ತು ;-)
      ಏ°?

      [ಉತ್ತರುಸಿ]

      ಶ್ರೀಶ. ಹೊಸಬೆಟ್ಟು ಉತ್ತರ ಕೊಟ್ಟದು:

      [ಆನೆ ಮಡಗಿದ್ದು :) ]
      ಆನೆ ಎಂತರ ಮಡಗಿದ್ದು :) :)

      [ಉತ್ತರುಸಿ]

      ಸುವರ್ಣಿನೀ

      ಸುವರ್ಣಿನೀ ಉತ್ತರ ಕೊಟ್ಟದು:

      VN:F [1.9.3_1094]
      Rating: 0 (from 0 votes)

      ಆನೆ ಮೊಟ್ಟೆ ಮಡುಗಿದ್ದು !!!

      [ಉತ್ತರುಸಿ]

    10. ಆಚಕರೆ ಮಾಣಿ

      )

      ಯೋಗೇನ ಚಿತ್ತಸ್ಯ ಪದೇನ ವಾಚಾಂ
      ಮಲಂ ಶರೀರಸ್ಯಚ ವೈದ್ಯಕೇನಾ,
      ಯೋಪಾಕರೋತ್ತಂ ಪ್ರವರಂ ಮುನೀನಾಂ
      ಪತಂಜಲೀಂ ಪ್ರಾಂಜಲಿರಾನತೋಸ್ಮಿ.

      ಸರಿಯಾ???????
      ಆನು ಸಣ್ಣಾದಿಪ್ಪಗ ಹೊಳ್ಳ ಮಾಷ್ಟ್ರ ಅರದು ಮೆತ್ತಿದ್ದದು ತಲಗೆ.

      [ಉತ್ತರುಸಿ]

      ಸುವರ್ಣಿನೀ

      ಸುವರ್ಣಿನೀ ಉತ್ತರ ಕೊಟ್ಟದು:

      VN:F [1.9.3_1094]
      Rating: 0 (from 0 votes)

      ಸರೀ ಇದ್ದು :) ಇದು ಪತಂಜಲಿ ಮಹರ್ಷಿಗೆ ಪ್ರಣಾಮ ಸಲ್ಲಿಸುದು , ಅಭ್ಯಾಸ ಶುರು ಮಾಡುವನ್ನ ಮೊದಲು :)

      [ಉತ್ತರುಸಿ]

    ಒಪ್ಪ ಕೊಡ್ಳೆ ಇಲ್ಲಿ ಬರೆಯಿ: