Oppanna.com

ಗರ್ಭಪಾತ : ಭಾಗ ೩

ಬರದೋರು :   ಸುವರ್ಣಿನೀ ಕೊಣಲೆ    on   20/03/2011    3 ಒಪ್ಪಂಗೊ

ಸುವರ್ಣಿನೀ ಕೊಣಲೆ

ಸೂಪರ್ ಮೂನಿಂದಾಗಿ ಎಂತ ಆವ್ತೋ..ಎಲ್ಲಿ ಆವ್ತೋ ಹೇಳ್ತ ವಿಷಯದ ಸುತ್ತ ಸುಮಾರು ಹುತ್ತ ಕಟ್ಟಿದ್ದವು ಮಾಧ್ಯಮದವ್ವು…ಕೆಲವು ಸರ್ತಿ ಅಂತೆ ಇಲ್ಲದ್ದೆ ತಲೆಬೆಶಿ ಮಾಡಿ ಹಾಕುದು ! ಅಪ್ಪದು ಆಗಿಯೇ ಆವ್ತು. ಜೆನಂಗೊಕ್ಕೆ ಮಾಹಿತಿ ಕೊಡುದು ಸರಿ, ಆದರೆ ಅಂತೇ ಇಲ್ಲದ್ದೆ ಹೇಳಿದ್ದನ್ನೇ ಹೇಳಿ ಕಾಡುಹರಟೆ ಆವ್ತು ಟಿವಿ ಕಾರ್ಯಕ್ರಮ :(. 24*7 ನ್ಯೂಸ್ ಚಾನೆಲ್ಲುಗೊ ಹೇಳಿ ಇರ್ತು, ಆದರೆ ನ್ಯೂಸ್ ಕಮ್ಮಿ ಹರಟೆ ಹೆಚ್ಚು :(. ಉಳುದ ಚಾನೆಲ್ಲುಗಳ ಕಥೆ ಹೇಳುದೇ ಬೇಡ…ಅದರ ಬಗ್ಗೆ ಮಾತಾಡ್ತರೆ ಮುಗಿಯದ್ದಷ್ಟಿದ್ದು! ನಾವು ನಮ್ಮ ಮುಖ್ಯ ಶುದ್ದಿಗೆ ಬಪ್ಪ, ಕಳುದವಾರ ನಾವು ಒಂದು ಮುಖ್ಯ ವಿಚಾರದ ಬಗ್ಗೆ ಮಾತಾಡಿದ್ದು. ಅದರ ಮುಂದುವರುದ ಭಾಗವ ಇಂದು ನೋಡುವ.

Spontaneous abortion/ತನ್ನಷ್ಟಕ್ಕೇ ಅಪ್ಪ ಗರ್ಭಪಾತದ ಇನ್ನು ಮೂರು ವಿಧಂಗೊ ಹೀಂಗಿದ್ದು:

4)  Incomplete abortion : ಗರ್ಭಪಾತ ಆವ್ತು, ಆದರೆ ಭ್ರೂಣ ಮತ್ತೆ ಇತ್ಯಾದಿ ಗರ್ಭಕ್ಕೆ ಸಂಬಂದಿಸಿದ ಅಂಶಂಗೊ ಪೂರ್ತಿಯಾಗಿ ಗರ್ಭಕೋಶಂದ ಹೆರ ಹೋಗಿರ್ತಿಲ್ಲೆ.

  • ಕೆಳಹೊಟ್ಟೆ ಬೇನೆ ಬೇನೆ(ಮೊದಲಾಣಂದ ಕಮ್ಮಿ), ರಕ್ತಸ್ರಾವ ಮತ್ತೆ ಅದರೊಟ್ಟಿಂಗೆ ಗರ್ಭಕೋಶಂದ ಹೆರ ಬಂದ ಭ್ರೂಣ ಇತ್ಯಾದಿಗೊ, ಇದೆಲ್ಲ ಲಕ್ಷಣಂಗೊ.
  • ಗೊಂತಾದ ಕೂಡ್ಲೇ ವೈದ್ಯರಲ್ಲಿಗೇ ಹೋಗಿ ಗರ್ಭಕೋಶದ ಒಳವೇ ಬಾಕಿ ಆದ ಅಂಶಂಗಳ ತೆಗಶೆಕಾದ್ದು ಅಗತ್ಯ, ಅಲ್ಲದ್ದರೆ ಸೋಂಕು, ನಿಲ್ಲದ್ದ ರಕ್ತಸ್ರಾವ, ಕ್ಯಾನ್ಸರ್ ಉಂಟಪ್ಪ ಸಾಧ್ಯತೆಗೊ ಇದ್ದು.

5) Missed abortion / silent miscarriage: ಇದರ್ಲಿ ಭ್ರೂಣ ಸತ್ತಿರ್ತು, ಆದರೆ ಗರ್ಭಕೋಶಂದ ಹೆರ ಬಂದಿರ್ತಿಲ್ಲೆ. ಕೆಲವು ಸಮಯದ ವರೆಗೆ ಗರ್ಭಕೋಶದ ಒಳವೇ ಇರ್ತು.

  • ಇಲ್ಲಿ threatened abortion ಲಿ ಅಪ್ಪಂತಹ ಲಕ್ಷಣಂಗೊ ಇರ್ತು, ಅದಾದಮೇಲೆ ರಕ್ತಸ್ರಾವ ಮುಂದುವರೆತ್ತು, ಗರ್ಭಧಾರಣೆಯ ಲಕ್ಷಣಂಗೊ ಒಂದೊಂದಾಗಿ ಇಲ್ಲದ್ದೆ ಆವ್ತು, ಗರ್ಭಧಾರಣೆಯ ಪರೀಕ್ಷೆ ಮಾಡುವಗ ಋಣಾತ್ಮಕ ಫಲಿತಾಂಶ ಬತ್ತು.
  • ಇದರಿಂದಾಗಿ ಸೋಂಕು ಇತ್ಯಾದಿ ಅಕ್ಕು, ಕೆಲವು ಸಂದರ್ಭಲ್ಲಿ ಸತ್ತ ಭ್ರೂಣ ಅಲ್ಲಿಯೇ ಗರ್ಭಕೋಶದ ಗೋಡೆಗೆ ಅಂಟಿಗೊಂಡು mummified ಅಕ್ಕು.
  • ಸತ್ತ ಭ್ರೂಣ ಮತ್ತೆ ಅದರ ಚೀಲ ಇತ್ಯಾದಿಗಳ ವೈದ್ಯಕೀಯ ವಿಧಾನಂಗಳ ಮೂಲಕ ಗರ್ಭಕೋಶಂದ ಹೆರ ತೆಗೆವದು ಸರಿಯಾದ ಕ್ರಮ.

6) Septic abortion: ಯಾವುದೇ ಗರ್ಭಪಾತದೊಟ್ಟಿಂಗೆ ಸೋಂಕು ಇದ್ದು ಹೇಳಿ ಆದರೆ ಅದರ () ಹೇಳ್ತವು.

ಇದರ ಮುಖ್ಯ ಲಕ್ಷಣಂಗೊ ಹೀಂಗಿರ್ತು

  • ಹೆಚ್ಚಾದ ದೇಹದ ತಾಪಮಾನ (ಜ್ವರ)
  • ಕೆಳ ಹೊಟ್ಟೆ ಮತ್ತೆ ಸೊಂಟ ಬೇನೆ
  • ಯಾವುದೇ ರೀತಿಯ ಸ್ರಾವ , ಕೆಟ್ಟ ವಾಸನೆಯೊಟ್ಟಿಂಗೆ, ಬೇರೆ ಬಣ್ಣಲ್ಲಿ ಸ್ರಾವ ಇಪ್ಪ ಸಾಧ್ಯತೆಗಳೂ ಇದ್ದು.

ಇದಕ್ಕೆ ಸೂಕ್ತ ಸಮಯಲ್ಲಿ ಸೂಕ್ತ ಚಿಕಿತ್ಸೆ ಅಗತ್ಯ, ಇಲ್ಲದ್ದರೆ ಹೆಚ್ಚಿನ ರಕ್ತಸ್ರಾವ, ಗರ್ಭಕೋಶಕ್ಕೆ ತೊಂದರೆ, ದೇಹದ ಬೇರೆ ಬೇರೆ ಭಾಗಂಗೊಕ್ಕೆ ಸೋಂಕು ಹಬ್ಬುದು, ಮಾನಸಿಕ ತೊಂದರೆ, ಮುಂದೆ ಮಕ್ಕೊ ಆಗದ್ದೆ ಇಪ್ಪದು ಇತ್ಯಾದಿ ಸಮಸ್ಯೆಗೊ ಉಂಟಾವ್ತು.

ಇಷ್ಟೊಂದು ರೀತಿಗಳಲ್ಲಿ ಗರ್ಭಪಾತ ಆವ್ತು ಹೇಳಿ ತಿಳ್ಕೊಂಡಾತು. ಇಷ್ಟಕ್ಕೇ ಮುಗುದ್ದಿಲ್ಲೆ. Recurrent abortion ಹೇಳ್ತ ಒಂದು ಸಮಸ್ಯೆ ಇದ್ದು.

  • ಒಂದಾದ ಮತ್ತೆ ಇನ್ನೊಂದರ ಹಾಂಗೆ ಮೂರು ಅಥವಾ ಹೆಚ್ಚು ಸರ್ತಿ ಗರ್ಭಪಾತ ಆದರೆ recurrent abortion ಹೇಳ್ತವು.
  • 1% ರಷ್ಟು ಸಂದರ್ಭಂಗಳಲ್ಲಿ ಮಾಂತ್ರ ಹೀಂಗೆ ಅಪ್ಪದು.
  • ಗರ್ಭಪಾತ ಉಂಟಪ್ಪಲೆ ಎಂತೆಲ್ಲ ಕಾರಣಮ್ಗೊ ಇರ್ತೋ ಅದೆಲ್ಲವುದೇ ಇಲ್ಲಿಯೂ ಕಾರಣ ಆಗಿರ್ತು.
  • ಇದಕ್ಕೆ ಚಿಕಿತ್ಸೆ ಅಗತ್ಯ,
  • ಯಾವ ಕಾರಣಂದ ಆಯ್ದು ಹೇಳ್ತದರಮೇಲೆ ಚಿಕಿತ್ಸೆ ನಿರ್ಧಾರ ಆವ್ತು.

ಇದಲ್ಲದ್ದೆ ಬೇರೆ ಹಲವಾರು ಸಮಸ್ಯೆಗೊ ಬಸರಿಯಕ್ಕೊಗೆ ಬಕ್ಕು, ಅದರ ಬಗ್ಗೆ ಜಾಗೃತೆವಹಿಸಿದರೆ ಆರೋಗ್ಯಕರ ಅಮ್ಮ- ಮಗು 🙂 ಮನೆಯೆಲ್ಲಾ ನಗು !! ಸೂಪರ್ ಮೂನು, ಹುಣ್ಣಿಮೆ ಮೂನು, ಚಂದಾಮಾಮ, ಕಾಗಕ್ಕ-ಗುಬ್ಬಕ್ಕ ಎಲ್ಲ ಕಥೆಯೂ ಚೆಂದ ಅಂಬಗ 🙂

-ನಿಂಗಳ

ಸುವರ್ಣಿನೀ ಕೊಣಲೆ.

3 thoughts on “ಗರ್ಭಪಾತ : ಭಾಗ ೩

  1. ಡಾಗುಟ್ರಕ್ಕಾ, ವಿವರವಾದ ಲೇಖನ ಸರಣಿಲಿ ಗರ್ಭಪಾತದ ವಿವಿಧ ಕಾರಣ೦ಗಳ ಬೈಲಿ೦ಗೆ ಕೊಟ್ಟದಕ್ಕೆ ಧನ್ಯವಾದ.

  2. ಮೂರು ಕಂತಿಲ್ಲಿ ಗರ್ಭಪಾತದ ಬಗ್ಗೆ ಒಳ್ಳೆ ವಿವರವಾದ ಲೇಖನ ಕೊಟ್ಟದಕ್ಕೆ ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×