Oppanna.com

ಭಕ್ತಿ: ದೇವರ ಮೇಲೆ ಇಪ್ಪ ಪ್ರೀತಿ

ಬರದೋರು :   ಸುವರ್ಣಿನೀ ಕೊಣಲೆ    on   27/03/2011    20 ಒಪ್ಪಂಗೊ

ಸುವರ್ಣಿನೀ ಕೊಣಲೆ

ಒಂದು ಧನ್ಯವಾದ ಹೇಳುವ ಮನಸ್ಸಾಯ್ದು… ನಮ್ಮ ಒಪ್ಪಣ್ಣಂಗೆ 🙂 ಅಶೋಕೆಗೆ ಹೋಪಲೆ ಸಾಧ್ಯ ಆಗದ್ದವ್ವು, ದೂರ ಇಪ್ಪೋರು ಎಲ್ಲರೂ ಮನೆಲಿಯೇ ಕೂದು ವಿರಾಟ್ ಪೂಜೆಯ ನೋಡುಲೆ ಅವಕಾಶ ಮಾಡಿಕೊಟ್ಟದಕ್ಕೆ :).

ಎಲ್ಲಕ್ಕಿಂತ ಮುಖ್ಯ ಯಾವುದು? ಮನುಷ್ಯನ ಜೀವ..ಜೀವನ, ಅಲ್ಲದಾ? ಆರೋಗ್ಯಕರ ಜೀವನ ನಡಶೆಕಾರೆ ನಮ್ಮ ಶರೀರ ಆರೋಗ್ಯಕರವಾಗಿದ್ದರೆ ಮಾಂತ್ರ ಸಾಕಾ? ಖಂಡಿತಾ ಸಾಲ,ಒಬ್ಬ ವ್ಯಕ್ತಿ ಆರೋಗ್ಯವಂತ ಹೇಳಿ ಆಯೆಕಾರೆ ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ಸಾಮಾಜಿಕವಾಗಿ ಮತ್ತೆ ಆಧ್ಯಾತ್ಮಿಕವಾಗಿಯೂ ಆರೋಗ್ಯ ಉತ್ತಮವಾಗಿರೆಕು. ಹಾಂಗಾರೆ ಎಂತ ಮಾಡೆಕು? ರೋಗ/ಸಮಸ್ಯೆ ಬಂದಪ್ಪಗ ಚಿಕಿತ್ಸೆ ತೆಕ್ಕೊಂಬದು ಇಪ್ಪದೇ, ಆದರೆ ಆಹಾರ-ವಿಹಾರ, ಆಚಾರ-ವಿಚಾರಂಗಳನ್ನೂ ಕೂಡ ಗಮನಲ್ಲಿ ಮಡಿಕ್ಕೊಂಡರೆ ಉತ್ತಮ ಆರೋಗ್ಯ ನಮ್ಮ ಕೈಲಿದ್ದು.

ಆಹಾರದ ಬಗ್ಗೆ ಯೂ ನಾವು ಮಾತಾಡಿದ್ದು, ಆಚಾರಂಗಳನ್ನೂ ತಿಳ್ಕೊಂಡಿದು ರಜ್ಜ ಮಟ್ಟಿಂಗೆ. ಯೋಗದ ಅಭ್ಯಾಸ ಮಾಡುದು ಆರೋಗ್ಯಕ್ಕೆ ಒಳ್ಳೆದು ಹೇಳಿ ಸುಮಾರು ಜೆನರ ಅಭಿಪ್ರಾಯ. ಆದರೆ ಕೇವಲ ಕೆಲವು ಆಸನ/ಪ್ರಾಣಾಯಾಮ ಮಾಡುದು ಮಾಂತ್ರ ಯೋಗ ಹೇಳಿ ಹಲವರ ತಿಳುವಳಿಕೆ! ಆದರೆ ’ಯೋಗ’ದ ವಿಸ್ತಾರ ತುಂಬಾ ದೊಡ್ಡದು. ಯೋಗಲ್ಲಿಯೇ ಬಪ್ಪ ಒಂದು ವಿಚಾರ  ಭಕ್ತಿ, ಇದು ಕೂಡ ಆರೋಗ್ಯದ ವಿಚಾರಲ್ಲಿ ತುಂಬಾ ಮುಖ್ಯ ಪಾತ್ರವಹಿಸುತ್ತು! ಹಾಂಗಾರೆ ಭಕ್ತಿ ಹೇಳಿರೆ ಎಂತರ? ಎನಗೂ ಗೊಂತಿಲ್ಲೆ! ಬಹುಶಃ ಅದರ ವಿವರ್ಸುಲೆ ಕಷ್ಟ. ಶ್ರೀಗುರುಗಳ ಹತ್ತರೆಯೇ ವಿವರಣೆ ಕೇಳೆಕ್ಕು :). ಎನಗೆ ತಿಳುದ ಮಟ್ಟಿಂಗೆ, ಭಕ್ತಿ ಹೇಳಿರೆ ಪ್ರೀತಿ, ಒಬ್ಬ ವ್ಯಕ್ತಿಯ[ಜೀವಿ, ವಸ್ತು ಇತ್ಯಾದಿ] ಮೇಲೆ ಇಪ್ಪ ಅತೀವ ಪ್ರೀತಿಯೇ ಭಕ್ತಿ. [ಪ್ರೀತಿಯ highest extreme ಹೇಳಿ ಹೇಳುಲಕ್ಕು.]

ಭಕ್ತಿ ಅಗತ್ಯವಾ? ನಮ್ಮ ನಮ್ಮೊಳದಿಕ್ಕೆ ಪ್ರೀತಿ ಅಗತ್ಯ ಇದ್ದ ಹಾಂಗೆಯೇ ಅದೂ ಬೇಕು ಅಲ್ಲದಾ? ಪೂಜೆ ಮಾಡುದಾದಿಕ್ಕು ಅಥವಾ ದೇವರಿಂಗೆ ಕೈ ಮುಗಿವದಾದಿಕ್ಕು, ಗೀತೆಯ ಓದುದಾದಿಕ್ಕು ಅಲ್ಲದ್ದರೆ ಧ್ಯಾನ ಮಾಡುದಾದಿಕ್ಕು, ಭಕ್ತಿಯ ರೂಪಂಗೊ… ಎಲ್ಲವೂ ದೇವರ ಮೇಲೆ ನವಗೆ ಇಪ್ಪ ಪ್ರೀತಿಯ ತೋರ್ಸುದು..ಅಥವಾ ಅನುಭವಿಸುದು. ಆಧ್ಯಾತ್ಮಿಕ ಸಾಧನೆ ಮಾಡ್ಲೆಬೇಕಾಗಿ ಇಪ್ಪದು ಇದೆಲ್ಲಾ, ನವಗೆ ನಿತ್ಯ ಜೀವನಕ್ಕೆ, ಸಂಸಾರಿಗೊಕ್ಕೆ ಎಂತಗೆ ಹೇಳ್ತ ಪ್ರಶ್ನೆ ??  ಅಥವಾ..ಅದೆಲ್ಲ ಅರವತ್ತು ವರ್ಷ ಪ್ರಾಯ ಕಳುದೋರಿಂಗೆ..ನವಗಲ್ಲ ಹೇಳಿಯೂ ಹೆಚ್ಚಿನವು ಹೇಳ್ತವು. ಅದು ತಪ್ಪು !  ನಮ್ಮ ಮನಸ್ಸಿನ ನಾವು ಆರೋಗ್ಯಕರವಾಗಿ ಮಡಿಕ್ಕೊಂಬಲೆ ಇದರೆಲ್ಲದರ ಅಗತ್ಯ ಇದ್ದು. ಪ್ರಾಯ ಆದಪ್ಪಗ ’ಸಣ್ಣ ಪ್ರಾಯಲ್ಲಿಯೇ ಮಾಡೆಕಾತು’ ಹೇಳಿ ಕಾಂಗು. ಒಂದು ಪ್ರಶ್ನೆ- ನಾವು ಸಣ್ಣಾದಿಪ್ಪಗ ನವಗೆ ಈಗಾಣ ಹಾಂಗಿದ್ದ ’ತಲೆಬೆಶಿ’ ’ಒತ್ತಡಂಗೊ’ ಏಕೆ ಇತ್ತಿದ್ದಿಲ್ಲೆ? ಅದಕ್ಕೆ ಕಾರಣ ತುಂಬಾ ಸರಳ…ಎಂತದೇ ಸಮಸ್ಯೆಗೊ ಎದುರಾದಪ್ಪಗ ಅದರ ಪರಿಹಾರ ಮಾಡುಲೆ ನಮ್ಮೊಟ್ಟಿಂಗೆ ಅಪ್ಪ ಅಮ್ಮ ಇದ್ದವು ಹೇಳ್ತ ಧೈರ್ಯ ಇತ್ತು ನವಗೆ, ಅಲ್ಲದಾ? ಈಗಲೂ ಅಷ್ಟೇ ನಮ್ಮೊಟ್ಟಿಂಗೆ ನವಗೆ ಸಹಾಯ ಮಾಡ್ಲೆ, ನಮ್ಮ ಎಲ್ಲ ತೊಂದರೆಂದ ಕಾಪಾಡುಲೆ ಆರೋ ಇದ್ದವು ಹೇಳಿ ಅಪ್ಪಗ ನೆಮ್ಮದಿ ಸಿಕ್ಕುತ್ತು. ಮತ್ತೆ ಮನಸು ಶಾಂತ ಆಗಿ ಇಪ್ಪಲೆ ಸಹಾಯ ಮಾಡ್ತು. ಅದೂ ಅಲ್ಲದ್ದೆ ನವಗೆ ಕೆಲಸ ಮಾಡ್ಲೆ, ತೊಂದರೆಯೆ ಎದುರ್ಸುಲೆ ಶಕ್ತಿ ಸಿಕ್ಕುತ್ತು. ಹಾಂಗಾಗಿ ಇಂತಹ ನಂಬಿಕೆಗೊ ತುಂಬಾ ಮುಖ್ಯ….

ಆಧ್ಯಾತ್ಮಿಕ ಸಾಧನೆಗೆ ಇದು ಒಂದೊಂದಾಗಿ ಹತ್ತುವ ಮೆಟ್ಲು, ಆ ವಿಚಾರ ನಮ್ಮ ತಿಳುವಳಿಕೆಂದಲೂ ದೊಡ್ಡದು. ಆನು ಇಲ್ಲಿ ನಮ್ಮ ಮಾನಸಿಕ ಆರೋಗ್ಯ ಮತ್ತು ನಿತ್ಯದ ಜೀವನವ ನೆಮ್ಮದಿಲಿ ನಡಶುಲೆ ಅಗತ್ಯ ಇಪ್ಪ ವಿಷಯವ ಮಾಂತ್ರ ಹೇಳಿದ್ದೆ. ಈ ವಿಚಾರದ ಬಗ್ಗೆ ಒಂದು ಆರೋಗ್ಯಕರ ಚರ್ಚೆ ನಡೆಯಲಿ 🙂

-ನಿಂಗಳ

ಸುವರ್ಣಿನೀ ಕೊಣಲೆ.

20 thoughts on “ಭಕ್ತಿ: ದೇವರ ಮೇಲೆ ಇಪ್ಪ ಪ್ರೀತಿ

  1. ಇತ್ತೀಚೆಗೆ ಭಯ೦ದ ಪ್ರಾರ್ಥನೆ/ಪೂಜೆ ಮಾದುವವರೇ ಜಾಸ್ತಿ. ಭಕ್ತಿ ಮತ್ತೆ ಭಯಕ್ಕೆ ವ್ಯತ್ಯಾಸ ಇದ್ದು ಹೇಳಿ ಎನ್ನ ಅಭಿಪ್ರಾಯ.

  2. ಚೆರ್ಚೆಯ ಅವಶ್ಯಕತೆ ಇಲ್ಲೇ. ಲೇಖನ ಸುಪರ್ ..
    ಪ್ರೀತಿ ಮತ್ತು ಭಕ್ತಿ ಒಂದೆ.
    ಆದರು ಭಕ್ತಿ ಯಲ್ಲಿ ಭಾವ ವ್ಯತ್ಯಾಸಗಳು ಕಂಡಿತಾ ಇದ್ದು.
    ಅದರೆಲ್ಲದರ ಸೂಕ್ಷ್ಮ ರೂಪ ಮತ್ತೆ ಪ್ರೀತಿಯೇ.

  3. ಸುವರ್ಣಿನಿ…. ನಿಂಗ ಮೇಲೆ ಹೇಳಿದ್ದದೆಲ್ಲದರ ಆನುದೇ ಅನುಮೋದಿಸುತ್ತೇ…..

  4. ಭಕ್ತಿ ನಿಶ್ಶರ್ತ,ಅಲ್ಲದೊ?
    ಭಕ್ತಿಂದಲೇ ಹಲವು ಕಾರ್ಯ ಸಾಧಿಸಿದವು ಇದ್ದವು.
    ಎಲ್ಲಾ ಪೂರ್ವಪುಣ್ಯಂದ ಹೇಳಿ ತೋರುತ್ತು.

  5. ಮೀರಾಬಾಯಿಯ ಭಕ್ತಿಯ ಪ್ರೇಮ ಹೇಳಿಯೇ ಹೇಳ್ತವು. ಗಿರಿಧರ್ ಗೋಪಾಲನ ಮೇಲೆ ಅಷ್ಟೊಂದು ಭಕ್ತಿ ಮೀರಾಬಾಯಿಗೆ.

    1. “ಕೌನ್ ಕೆಹೆತೇ ಹೆ ಭಗವಾನ್ ಆತೇ ನಹಿ… ತುಮ್ ಮೀರಾ ಕಿ ಜೈಸೆ ಬುಲಾತೆ ನಹೀ…”

  6. ಅಕ್ಕಾ,
    ಬರದ್ದು ಲಾಯಕಾಯಿದು. ಪ್ರೀತಿ ಆರಮೇಲೂ ಬಲವಂತವಾಗಿ ಬಪ್ಪದಲ್ಲ. ಭಕ್ತಿಯೂ ಹಾಂಗೇ.
    ನಾವು ಇನ್ನೊಬ್ಬಂಗೆ ಉಡುಗೊರೆ ಕೊಟ್ಟರೆ ಅವು ಮತ್ತೋಂದು ಕೊಡುಗು – ಹೇಳುವ ಲೆಕ್ಕಾಚಾರಲ್ಲಿ ದೇವರ ಅಳದರೆ, ಅವ ಕೇಳಿದ್ದರ ಕೊಡದ್ದರೆ (ಅವ ಕೊಟ್ಟದು ನವಗೆ ಕಾಣದ್ದರೆ) ನಮಗೆ ಅವ ಇಷ್ಟ ಆಗ. ಹಾಂಗಲ್ಲ, love should be unconditional ಹೇಳ್ತವು. ಶುಧ್ಧ ಪ್ರೀತಿ ಅಚಲ ಅಡ.

    How to talk with God ಹೇಳ್ತ ಪುಸ್ತಕಲ್ಲಿ ಶ್ರೀ ಪರಮಹಂಸ ಯೋಗಾನಂದರು ಭಕ್ತಿ ಮತ್ತು ಪ್ರೀತಿಯ ವಿಷಯಲ್ಲಿ ತುಂಬ ಚೆಂದಕೆ ಬರದ್ದವು…

    1. ಅಪ್ಪು, ಪ್ರೀತಿ ಭಕ್ತಿ ನಂಬಿಕೆ ಇದೆಲ್ಲವೂ unconditional ಆಗಿರ್ತು,…..conditioning ಹೇಳ್ತದು ಮೆದುಳಿಂಗೆ ಸಂಬಂಧಪಟ್ಟದು, ಆದರೆ ಪ್ರೀತಿ ಭಕ್ತಿಗೊ ಆತ್ಮಕ್ಕೆ ಸಂಬಂಧಿಸಿದ್ದು !!

  7. ಡಾಗುಟ್ರಕ್ಕಾ,
    ಚಿ೦ತನೆಗೆ ಎಡೆ ಮಾಡಿತ್ತು ನಿ೦ಗಳ ಲೇಖನ.
    ಭಕ್ತಿ,ಶೃದ್ಧೆಯ ಭಾವ ಮನುಷ್ಯನ ಮನಸ್ಸು,ಹೃದಯಲ್ಲಿ ಇದ್ದೇ ಇಕ್ಕು.ಯೇವ ರೂಪಲ್ಲಿಕ್ಕೋ ಗೊ೦ತಿಲ್ಲೆ.ತಾನು ಏವ ವಿಷಯವ ಅತಿ ಹೆಚ್ಚು ಇಷ್ಟಪಡುತ್ತನೋ ಅಲ್ಲಿಗೇ ಆ ಮನಸ್ಸು ಎಳಕ್ಕೊ೦ಡಿಕ್ಕು.ಉದಾಹರಣಗೆ ಕೃಷಿಕ೦ಗೆ ಕೃಷಿಯೇ ದೇವರು.
    ಭಕ್ತಿಲಿ ಎರಡು ನಮೂನೆ ಕಾಣುತ್ತು ನವಗೆ.ಒ೦ದು ಮನಸ್ಸಿನ ಒಳ ಇಪ್ಪದು.ಶುರುವಾಣದ್ದು ಭಕ್ತ ಮತ್ತೆ ದೇವರ ( ಯೇವ ರೂಪಲ್ಲಿಯೂ ಇಕ್ಕು,ಅವರವರ ಮನಸ್ಸಿಲಿ) ಮಧ್ಯೆ ಇಪ್ಪ ಅವಿನಾಭಾವ ಸ೦ಬ೦ಧ.ಇದು ಮನುಷ್ಯನ ಜೀವನದ ಮೌಲ್ಯವ ವರ್ಧಿಸೊದು.
    ಎರಡನೆಯದು ಪ್ರದರ್ಶನಕ್ಕೆ ಮಡುಗಿದ್ದದು.ಮನಸ್ಸಿನ ಒಳ ಎ೦ತ ಇದ್ದರೂ ತಾನು ದೇವರ ಪೂಜೆ ಮಾಡುತ್ತೆ ಹೇಳಿ ತೋರ್ಪಡಿಸಿಗೊ೦ಬದು,ಒಳುದೋರು ಅದರ ಗುರುತಿಸಲಿ ಹೇಳುವ ಮರುಳು ಬೇರೆ.ಈ ವರ್ಗಕ್ಕೆ ನಿಜವಾಗಿ ಮನಸ್ಸಿಲಿ ನೆಮ್ಮದಿ ಇರ.ದೇವಸ್ಥಾನಕ್ಕೆ ಹೋಗಿ ಕಾಟಾಚಾರದ ಪೂಜೆ ಸಲ್ಲುಸಿ ಬೇಡ೦ಗಟ್ಟೆಯನ್ನೇ ಮನಸ್ಸಿಲಿ ಮಡುಗಿ ಬದುಕ್ಕಿರೆ ಉದ್ಧಾರ ಅಕ್ಕೋ?”ಉದರ ವೈರಾಗ್ಯವಿದು”ಹೇಳುವ ದಾಸರ ಪದ ನೆ೦ಪಪ್ಪ ಹಾ೦ಗಿರ್ತ ಭಕ್ತಿ ಇದು.

    ವಾಹನ ಚಾಲಕ ಉದಿಯಪ್ಪಗ ಹೆರಡೊಗ ಒ೦ದರಿ ವಾಹನವ ಮುಟ್ಟಿ ನಮಸ್ಕಾರ ಮಾಡೊದು ನಾವು ನೋಡುತ್ತು.ಈ ಚಾಲಕ ಮಾಡೊದು ನಿಜ ಭಕ್ತಿಲಿಯೋ ಹೇಳಿ ಗೊ೦ತಾಯೆಕ್ಕಾರೆ ಒ೦ದು ಮೈಲು ವಾಹನಲ್ಲಿ ಅವನ ಒಟ್ಟಿ೦ಗೆ ಸ೦ಚಾರ ಮಾಡೆಕ್ಕು.ಒಳುದ ವಾಹನ೦ಗೊಕ್ಕೆ ಉಪದ್ರ ಮಾಡಿಗೊ೦ಡು ಹೋಪ ಜೆನ ನಮಸ್ಕಾರ ಮಾಡೊದು ಏವ ಕಾರಣಕ್ಕೆ ಹೇಳುವ ಸ೦ದೇಹ ಮೂಡುತ್ತು.

    ಇನ್ನು ಕುಡುಕ್ಕ೦ಗೆ ಗಡ೦ಗೇ ದೇವರಾಗಿಕ್ಕು,ಮುಕ್ತಿ ಮಾರ್ಗವ ಬೇಗ ತ೦ದುಗೊ೦ಬಲೆ ದಾರಿ ಅಲ್ಲದೋ!!

    1. ಸರಿಯಾಗಿ ಹೇಳಿದ್ದಿ ಅಣ್ಣ, ’ಅವಿನಾಭಾವ ಸಂಬಂಧ’ 🙂 ಧನ್ಯವಾದಂಗೊ
      ಇನ್ನು ಭಕ್ತಿಯ ಪ್ರೀತಿಂದ ಬೇರೆ ಮಾಡುಲೆ ಎಡಿಯ….ಅದು ಒಂದಕ್ಕೊಂದು ಸೇರಿಗೊಂಡಹಾಂಗೆ ಇಪ್ಪದು….
      ಹೆಚ್ಚಿನ ಸಂದರ್ಭಲ್ಲಿ ಜೆನ ಮೋಹವನ್ನೇ ಪ್ರೀತಿ ಹೇಳಿ ಅಪಾರ್ಥ ಮಾಡಿಗೊಳ್ತವು! ಈ ಮೋಹ ಮತ್ತೆ ಪ್ರೆತಿಲಿ ಇಪ್ಪ ವ್ಯತ್ಯಾಸವ ಅರ್ಥಮಾಡೀಗೊಂಬಲೆ ಬೇಕಾದ್ದು ಪ್ರಬುದ್ಧತೆ ..ಅದಕ್ಕೆ ಮುಖ್ಯವಾದ್ದು ವಿದ್ಯೆ [ಪರೀಕ್ಷೆ ಪಾಸು ಮಾಡಿ ಸಿಕ್ಕಿದ ಸರ್ಟಿಫ಼ಿಕೇಟು ಅಲ್ಲ], ವಿದ್ಯೆಯೊಟ್ಟಿಂಗೆ ವಿವೇಕವೂ ಬತ್ತು ಅಲ್ಲದಾ?

  8. {ಒಬ್ಬ ವ್ಯಕ್ತಿಯ ಮೇಲೆ ಇಪ್ಪ ಅತೀವ ಪ್ರೀತಿಯೇ ಭಕ್ತಿ…}
    ನಿಂಗೊ ಹೇಳಿದ್ದು 101% ನಿಜ ಸುವರ್ಣಿನೀ ಅಕ್ಕ. ಪ್ರೀತಿ ಇದ್ದರೆ ಭಕ್ತಿ ಖಂಡಿತ ಬತ್ತು. ಹಾಗೆ ಭಕ್ತಿ ಇಪ್ಪಲ್ಲಿ ಪ್ರೀತಿ ಇದ್ದೇ ಇರುತ್ತು ಅಲ್ಲದಾ… ಉದಾಹರಣೆಗೆ ನಮ್ಮ ಶ್ರೀ ಗುರುಗೊಕ್ಕೆ ಗೋವುಗಳ ಮೇಲೆ ಅತೀವ ಪ್ರೀತಿ. ನಮಗೆ ಶ್ರೀಗುರುಗಳ ಮೇಲೆ ಅತೀವ ಭಕ್ತಿ. ಆದ ಕಾರಣವೇ ನಾವೆಲ್ಲರುದೇ ಗೋಮಾತೆಯನ್ನು ಕೂಡ ಪ್ರೀತಿ,ಭಕ್ತಿಯಿಂದ ಕಾಂಬದು ಅಲ್ಲದಾ… ಲೇಖನ ತುಂಬಾ ಒಪ್ಪ ಆಯಿದು. ಚರ್ಚೆಗೆ ಒಂದು ಒಳ್ಳೆಯ ವಿಚಾರ ಕೊಟ್ಟದ್ದಕ್ಕೆ ಸುವರ್ಣಿನೀ ಅಕ್ಕಂಗೆ ಧನ್ಯವಾದ.

    1. ಧನ್ಯವಾದಂಗೊ 🙂
      ಗುರುಗಳ ಮೇಲೆ ಅತೀವ ಭಕ್ತಿಯೂ ಪ್ರೀತಿಯೂ ಎಲ್ಲ ಶಿಷ್ಯರಿಂಗೂ ಇದ್ದು ಅಲ್ಲದಾ, ಗುರುಗೊ ಕಣ್ಣಿಂಗೆ ಕಾಂಬ ದೇವರು. 🙂 ಅದೇ ರೀತಿ ನವಗೆ ದೇವರ ಮೇಲೆ ಭಕ್ತಿ ಪ್ರೀತಿ ಇದ್ದು ಅಲ್ಲದಾ? ಕೃಷ್ಣ ಚಾಮಿ ಹೇಳಿರೆ ಎಲ್ಲರಿಂಗೂ ಎಷ್ಟು ಪ್ರೀತಿ ಅಲ್ಲದಾ? ಭಕ್ತಿ ಹೇಳ್ತದು ಪ್ರೀತಿ ಹೇಳುಲೆ ಇನ್ನೊಂದು ಉದಾಹರಣೆ ಇಲ್ಲಿ ಹೇಳ್ತೆ- ’ಸಣ್ಣ ಮಕ್ಕೊಗೆ ದೇವರ ಮೇಲೆ ಇಪ್ಪ ಭಾವನೆ’, ಅದು ಪ್ರೀತಿ ಅಲ್ಲದಾ? 🙂 🙂
      ವಿವರ್ಸುಲೆ ಹೋದಷ್ಟು ಕಷ್ಟ ಆವ್ತಾ ಇದ್ದು ! ಆ ಭಾವಂಗಳ ಅನುಭವಿಸಿಯಪ್ಪಗಳೇ ಆನಂದ 🙂

  9. “ಒಂದು ಧನ್ಯವಾದ ಹೇಳುವ ಮನಸ್ಸಾಯ್ದು… ನಮ್ಮ ಒಪ್ಪಣ್ಣಂಗೆ” – ಅಪ್ಪಪ್ಪು ಒಪ್ಪಣ್ಣ ಆದ ಕಾರಣ ಇಷ್ಟಾದರೂ ಮಾಡಿದ. ಹೀಂಗಿಪ್ಪದೂ ಇಲ್ಲಿ ಮಾಡ್ಲೆ ಎಡಿತ್ತು ಹೇಳಿ ತೋರ್ಸಿ ಕೊಟ್ಟವದಾ.!

    ‘.. ಅತೀವ ಪ್ರೀತಿಯೇ ಭಕ್ತಿ.’ – ಪ್ರೀತಿ ಹೇಳುವದಕ್ಕಿಂತ ಭಯ , ನಂಬಿಕೆ ಹೇಳುದೇ ಉಚಿತವೋ – ಉಮ್ಮಪ್ಪ.

    ಸಂಕಟ ಬಂದಾಗ ವೆಂಕಟರಮಣ. ಸಂಕ ದಾಂಟುವ ವರೆಂಗೆ ನಾರಾಯಣ…,

    ಅಧ್ಯಾತ್ಮಿಕ ಸಾತ್ವಿಕ ಮನಸ್ಥಿಮಿತ , ಮನ ಶಾಂತಿಗೆ , ಶಾರೀರಿಕ ಸಮತೋಲನ , ಆರೋಗ್ಯಕ್ಕೆ ಕಿರಿ ವಯಸ್ಸಿಂದಲೇ ಭಕ್ತಿ ಮಾರ್ಗ ಸೂಕ್ತ. ಇಲ್ಲದ್ರೆ ಕಿಸೆ ಬಲ ಇಪ್ಪನ್ನಾರ ಕೆಲವಕ್ಕೆ ಇದು ಅರ್ಥ ಆಗದ್ದೆ ಅರುವತ್ತರಲ್ಲಿ ಅರೆ ಮರುಳು ಎಂಬುದೇ ನಮ್ಮ ಒಪ್ಪ.

    1. ಹೆದರಿಕೆ ಹೇಳಿ ಹೇಳ್ತರೆ…ಅಂಬಗ ಪ್ರಹ್ಲಾದಂಗೆ ವಿಷ್ಣುವ ಕಂಡರೆ ಹೆದರಿಕೆ ಇತ್ತೋ? ಇಲ್ಲೆನ್ನೆ? ಅಲ್ಲಿ ಇದ್ದದು ಪ್ರೀತಿ ಮಾಂತ್ರ ಅಲ್ಲದಾ? ಇನ್ನು ನಂಬಿಕೆ ಇದ್ದದೇ ಅಲ್ಲದಾ? ಎಲ್ಲಿ ಪ್ರೀತಿ ಇದ್ದೋ ಅಲ್ಲಿ ನಂಬಿಕೆ ಇದ್ದೇ ಇರ್ತು 🙂 ತಿಳುದೋರು ಎಂತ ಹೇಳ್ತವು ನೋಡುವ 🙂
      ಸಣ್ಣ ಪ್ರಾಯಂದಲೇ ಭಕ್ತಿ ಮಾರ್ಗ ಅನುಸರ್ಸೆಕಾದ್ದು ಅಗತ್ಯ, ಅಲ್ಲದ್ದರೆ ನಮ್ಮ ಮಾನಸ್ಕಿಕ ಶಕ್ತಿ ಕಮ್ಮಿ ಆವ್ತು,
      ’ಸಂಕಟ ಬಂದಾಗ…….’ – ಎಂತಾರು ಸಮಸ್ಯೆ ಬಂದಪ್ಪಗ ಜೋಯಿಸರ ಕಂಡು ಒಂದೆರಡು ಹೋಮ, ಆಶ್ಲೇಷ ಬಲಿ ಮಾಡ್ಸುದು ಅಥವಾ ಯಾವುದೋ ನೇಮ ಮತ್ತೊಂದು ಮಾಡ್ಸುದು, ಇಷ್ಟೇ ಈಗಾಣ ಭಕ್ತಿ !! [ಎಲ್ಲರೂ ಅಲ್ಲ]

      1. ಭಕ್ತಿಯ ವಿಶ್ಲೇಷಣೆ ಚೊಕ್ಕ ಆಯಿದು ಅಕ್ಕೋ..

        ನಿಂಗೊ ಹೇಳುದು ಸರಿಯೇ. ಆದರೂ ಚೆನ್ನೈ ಭಾವ ಹೇಳಿದ್ದರಲ್ಲಿಯೂ ಒಂದು ಪೋಯಿಂಟು ಇದ್ದು ತೋರ್ತು ಎನಗೆ.
        ‘ದೇವರ ಭಯವೇ ಜ್ಞಾನದ ಆರಂಭ’ ಹೇಳಿ ಅಲ್ಲದೋ ನುಡಿಗಟ್ಟು ಇಪ್ಪದು? ದೇವರ ಬಗ್ಗೆ ಏವದೇ ಕಲ್ಪನೆಯೂ ಸಹಜ ಪ್ರೀತಿ ಭಕ್ತಿಯೂ ಬಾರದ್ದೆ ಇಪ್ಪ ತೀರ ಎಳೆಪ್ರಾಯದ ಮಕ್ಕೊಗೆ ಹಿರಿಯರು ದೇವರ ಬಗ್ಗೆ ಮದಾಲು ಮೂಡ್ಸುವ ಭಾವನೆ ‘ಭಯ’ವೇ! 😉

        ಮಕ್ಕೊಗೆ ಸದ್ಬುದ್ಧಿ ಕಲುಸುದು ಹೇಳುವ ನೆಪಲ್ಲಿ ಎಲ್ಲದಕ್ಕೂ’ಚಾಮಿ ದೇವರು ಕೋಪ ಮಾಡುಗು’ ಹೇಳಿ ದೇವರ ಬಗ್ಗೆ ಅವ್ಯಕ್ತ ಭಯ ಹುಟ್ಟುಸುತ್ತವು.
        ದೇವ/ಗುರು/ಹಿರಿಯರ ಮಹತ್ತ್ವ ಸರಿಯಾದ ಕಲ್ಪನೆ ಬಪ್ಪದು ಪ್ರಾಯಪ್ರಬುದ್ಧರು ಆದಮತ್ತೆಯೇ. ಅಷ್ಟನ್ನಾರ ಬರೀ ‘ಭಯ’! 🙁

        1. ತಲೆದೂಗಿತ್ತು ಸುಭಗಣ್ಣ. ಭಯ ಭಕ್ತಿ ಇದರ ಸಂಯೋಗವೆ ಪ್ರೀತಿ . ಬರೇ ಅತೀವ ಪ್ರೀತಿಯೇ ಭಕ್ತಿ ಹೇಳುವದು ತೂಕ ಇಲ್ಲದ್ದು ಹೇಳಿಯೇ ಎನ್ನ ವಾದ. ಅರೆಂತ ಬೇಕಾರು ಹೇಳಲಿ. ಆನಂತು ಒಪ್ಪೆ.

    2. ಭಕ್ತಿಗೆ ಬೇಕಾದ್ದು ಮನೋಬಲ ಅಲ್ಲದೋ ಭಾವ, ಕಿಸೆ ಬಲ ಎಂತಕೆ?
      ಭಾವಿಸಿದವಕ್ಕೆ ಇದ್ದಡ – ಗುರುಗೊ ಹೇಳಿತ್ತಿದ್ದವು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×