Oppanna.com

ಮನೆ ಮದ್ದು ಮಾಡ್ಳೆ ಬಿಟ್ಟವೇ ಇಲ್ಲೆ.

ಬರದೋರು :   ಕೇಜಿಮಾವ°    on   18/02/2011    17 ಒಪ್ಪಂಗೊ

ಒಂದು ಹದ್ನೈದು ದಿನಂದ ಸೌಖ್ಯವೇ ಇಲ್ಲೆ ಹೇಳಿ!ಅಲ್ಲ,ಹಾಂಗೆಂತದೂ ಜೋರಿಲ್ಲೆ.ರಜಾ ಶೀತ ಸೆಮ್ಮ ಇತ್ಯಾದಿ.ಅಷ್ಟೆ.
ಬಿಎಮ್ ಹೆಗ್ಡೆಯ ಹಾಂಗಿಪ್ಪ ದೊಡ್ಡ ಪ್ರೊಫೆಸ್ಸರುಗಳೇ ಹೇಳೀದ್ದವು,ಅಲೋಪಥ್ಯ್ ಮದ್ದು ಮಹಾ ಹಾಳು.ಅದು ಈ ಮದ್ದಿನ ಕಂಪೆನಿಗಳುದೇ ಅಲೋಪಥಿ ಡಾಕ್ಟ್ರಕ್ಕಳೂ ಸೇರಿ ಮದ್ದು ಮಾರಿ ಪೈಸ ಮಾಡ್ತ ಈಗಾಣ ವ್ಯಾಪಾರ.
ನಮ್ಮ ಹಳೇ ಕಾಲದ ಮದ್ದುಗಳ ಮರೆಶಿ ಅವರದ್ದೇ ಉತ್ಪನ್ನಂಗಳ ಮಾರುತ್ತ ಒಂದು ಕೆಣಿ.ಅವರ ಹಾಂಗಿಪ್ಪ ಮಕ್ಕೊಗೆ ಕಲಿಶುತ್ತ ಪ್ರೊಫೆಸ್ಸರುಗಳೇ ಹೇಳೆಕ್ಕಾರೆ ನಾವು ನಂಬೆಕ್ಕಲ್ಲದೋ.
ಅವರ ಅನುಭವಲ್ಲಿ ಗೊಂತಾಯಿಕ್ಕು.
ಅದರ ಮತ್ತುದೇ ಅವು ಕೆ ಎಮ್ ಸಿ ಯ ಉಪಕುಲಪತಿ ಆಗಿ ಮತ್ತೂ ಮಕ್ಕಗೆ ಅದರ ಎಂತಕೆ ಕಲಿಶಿದವಪ್ಪ ಕೇಳಿರೆ ನವಗೆ ಗೊಂತಿಲ್ಲೆ.

ಕೆಲವು ವರ್ಷ ಹಿಂದೆ “ಧರ್ಮ ಭಾರತಿ”ಲಿ ನಮ್ಮ ಗುರುಗೊ ಬರದ್ದು ನೆಂಪಾತು.
ಅವುದೇ ಹೇಳಿತ್ತಿದ್ದವದಾ.ನಮ್ಮ ಐದಾರು ಸಾವಿರ ವರ್ಷದ ಪರಂಪರೆ ಇಪ್ಪ ಮದ್ದುಗಳ ನಾವು ಇಂದು ಮರದು ಪಾಶ್ಚಿಮಾತ್ಯ ವಿಞ್ನಾನ ಕಲ್ತು ಇಂಗ್ಲಿಶ್ ಮದ್ದು ತೆಕ್ಕೊಂಡು ನಮ್ಮ ಶರೀರ ಹಾಳು ಮಾಡಿಯೊಳ್ತು, ನಾವು ನಮ್ಮ ಪರಂಪರಾಗತವಾಗಿ ಬಂದ ಅನುಭವದ ಉಪಯೋಗ ಮಾಡೆಕ್ಕು,ಇಂಗ್ಲಿಶ್ ಮದ್ದು ಬಿಡೆಕ್ಕು ಹೇಳಿ. ಅಂಬಗ ನವಗೆ ರಜಾ ಬೇಜಾರಾಗಿತ್ತು. ನಾವು ಕಲ್ತದು ಅಲೋಪಥಿ, ಬಿಡೆಕ್ಕು ಹೇಳಿರೆ ಹೇಂಗೆ?
ಆದರೆ ಈಗ ಅವು ಸರಿ ಹೇಳಿ ಕಾಣ್ತು. ಗುರುಗೊಕ್ಕೆ ಮಾಂತ್ರ ನಮ್ಮ ಕಣಿಯೂರಣ್ಣನ ಮದ್ದು ಹೇಳ್ತದು ನವಗೆಂತಕೆ.
ದೊಡ್ಡೋರಲ್ಲದೊ.ಆದರೆ ನಾವು ಮತ್ತೆ ಧರ್ಮ ಭಾರತಿಯ ಓದಿದ್ದಿಲ್ಲೆ.

ಮನ್ನೆ ಫೇಸ್ಬುಕ್ಕಿಲ್ಲಿಯುದೇ ನೋಡಿದೆ,ನಮ್ಮ ಮಾಯಿಲಂಕೋಡಿ ಅಣ್ಣನೂ ಬರದಿತ್ತಿದ್ದವು.ಈಗಾಣ ಅಲೋಪಥಿ ಡಾಕ್ಟ್ರಕ್ಕೊ ಸುಮ್ಮನೇ ಇಲ್ಲದ್ದೆ ರೋಗಿಗಳ ಹೆದರ್ಸಿ ಪೈಸ ಮಾಡ್ತ ಉದ್ದೇಶಂದ ಹೇಂಗೆ ಮದ್ದು ಕೊಟ್ಟು ಉಪದ್ರ ಮಾಡ್ತವು ಹೇಳಿ.
ಅದಕ್ಕೊಂದು ಹೆಮ್ಮಕ್ಕೊ ಸ್ವರ ಸೇರ್ಸಿತ್ತು.ಅದರ ಗೊಂತಿಲ್ಲಿ ಹತ್ತೋ ಹನ್ನೆರಡೋ ಹೆಮ್ಮಕ್ಕಳ ಸುಮ್ಮನೇ ಹೆದರ್ಸಿ ಸಿಸೇರಿಅನ್ ಆಪ್ರೆಶನ್ ಮಾಡಿ ಡಾಕ್ಟ್ರಕ್ಕೊ ಕಿಸೆ ತುಂಬ್ಸಿಯೊಂಡದು.
ಅಗತ್ಯ ಇಲ್ಲದ್ದೇ ಆಪ್ರೇಶನ್ ಮಾಡಿದ್ದು ಹೇಳಿ ಹೇಳಿದವು ಆರು ಹೇದು ಅವು ಹೇಳಿದ್ದವಿಲ್ಲೆ.ಸುಮ್ಮನೇ ಒಬ್ಬ ದಾಕ್ಟ್ರನ ಹೆಸರು ಹಾಳು ಮಾಡ್ತು ಎಂತಕೆ ಹೇಳ್ತ ಸದುದ್ದೇಶ ಇಕ್ಕು.ಆರೇ ಹೇಳಿರೂ ಸತ್ಯ ಸತ್ಯವೇ ಅಲ್ಲದೋ?

ಇದೆಲ್ಲಾ ತಲೆಲಿ ತಿರಿಗಿ ಅಪ್ಪಗ ನವಗೂ ಕಂಡತ್ತು,ಇದರ್ಲಿ ಏನೋ ಸತ್ಯ ಇರೆಕ್ಕು ಅಲ್ಲದ್ದ್ರೆ ಇಷ್ಟು ತಿಳುವಳಿಕೆ ಇಪ್ಪವು ಹೀಂಗೆಲ್ಲಾ ಹೇಳ್ತದು ಎಂತಕೆ?
ಸರೀ ಸೌಖ್ಯವೂ ಇತ್ತಿಲ್ಲೆ.ಅದಲ್ಲದ್ದೆ ನಾವು ಹೆಚ್ಚು ಕಲ್ತಿದೂ ಇಲ್ಲೆ.ಯಾವದರಲ್ಲಿ ಪಾಂಡಿತ್ಯವೂ ಇಲ್ಲೆ.ಆ ಕಾಲಲ್ಲಿ ಊಟಕ್ಕೆ ದಾರಿ ಅಕ್ಕು ಹೇಳಿ ಒಂದು ಸಣ್ಣ ಸರ್ಕಾರೀ ಕೋಲೇಜಿಲ್ಲಿ ಸೀಟು ಸಿಕ್ಕಿತ್ತು ಹೇಳಿ ಓಂದು ಎಮ್ ಬಿ ಬಿ ಎಸ್ ಕಲ್ತದು, ಅದು ಬಿಟ್ರೆಕಳುದ ಮೂವತ್ತು ವರ್ಷವೂ ಬೇರೇನೂ ಓದಿದ್ದು ಕಲ್ತದೂ ಇಲ್ಲೆ. ಕಲ್ತೋರು ಹೇಳಿದ್ದರ ಕೇಳಿ ಅದರ ವೃತ್ತಿಯಾಗಿ ಮಾಡ್ಯೊಂಡದು ಮಾಂತ್ರದ.
ಇಷ್ಟೆಲ್ಲ ಅಪ್ಪಗ ಒಂದು ಪೇಪರಿಲ್ಲಿ ಶೀತಕ್ಕೆ ಮದ್ದು ಹೇಳಿ ಶೀರ್ಷಿಕೆ ಕಂಡತ್ತು.ಇದ ಇದೇ ನವಗೆ ಆಯೆಕ್ಕಾದ್ದು,ಸರಿಯಾದ ಹೊತ್ತಿಂಗೇ ಸಿಕ್ಕಿದ್ದು ಪುಣ್ಯ,ಅಲ್ಲದ್ದರೆ ನವಗೆ ಆ ಮದ್ದುಗೋ ಎಲ್ಲಾ ಗೊಂತಿಲ್ಲೆ.ಹೀಂಗೆ ಗ್ರೇಶಿಯೊಂಡು ನಾವೇ ಬೇರೆಯವಕ್ಕೆ ನಮ್ಮ ಪರಂಪರಾಗತ ಮದ್ದಿನ ಪರಿಚಯ ಮಾಡ್ಲೆ ಹೆರಟತ್ತೇ.

ಗೆಣ ಮೆಣಸಿನ ಗುದ್ದಿ ಹಾಕಿ ನೀರಿಲ್ಲಿ ಕೊದಿಶಿ ಅದಕ್ಕೆ ರಜಾ ಜೇನ ಸೇರ್ಸಿ ಅಂಬಗಂಬಗ ಕುಡಿಯೆಕ್ಕು,ಕಸ್ತಲಪ್ಪಗ ಶೀತ ಪರಾರಿ ಹೇಳಿ ನೋಡಿ ನಾವೊಂದು ಪಾಕ ಮಾಡ್ಯೇ ಬಿಟ್ಟತ್ತು.
ಎರಡು ದಿನಲ್ಲಿ ನಾಲಗೆ ಕರಣ್ಚಿದ್ದು ಬಿಟ್ರೆ ಶೀತ ಕಮ್ಮಿ ಆತಿಲ್ಲೆ. ಹಾಂಗೆ ಇಂಗ್ಲಿಶ್ ಮದ್ದಿನ ಹಾಂಗೆ ಕೂಡ್ಳೇ ಕಮ್ಮಿ ಅಕ್ಕೋ,ಶರೀರಕ್ಕೆ ದೋಶ ಇಲ್ಲೆನ್ನೆ. ಒಂದೊಂದು ಶರೀರ ಪ್ರಕಾರದ ಮೇಲೆ ಹೊಂದಿಗೊಂಡು ರಜಾ ನಿಧಾನ ಅಪ್ಪಲೂ ಸಾಕು.

ಅಷ್ಟಪ್ಪಗ ರಾಮಣ್ಣ ಹೇಳಿದ ಶುಂಠಿ ಸಣ್ಣಕೆ ಕೊಚ್ಚಿ ಹಾಕಿ ಕೊದಿಶಿ ರಜಾಅ ಶಕ್ಕರೆ ಹಾಅಕಿ ಕುಡುದರೆ ಶೀತ ಮಾಯ,ನೋಡಿ ಬೇಕಾರೆ ಹೇಳುವಗ ನವಗೆ ಸರಿ ಕಂಡತ್ತು.

ಮರದಿನ ಅದಲ್ಲ,ಅರ್ಧ ಕುಡ್ತೆ ಹಾಲು ಕೊದಿಶಿ ಅದಕ್ಕೆ ಒಂದು ಚಂಚ ಅರಿಶಿನ ಹೊಡಿ ಹಾಕಿ ಕುಡಿಯೆಕ್ಕಾತು.
ಸರಿ,ನಮ್ಮ ಜಾಲಿಲ್ಲೇ ಬೆಳದ ಅರಿಶಿನದ ಹೊಡಿ ಮಾಡ್ಸಿದ್ದಿದ್ದು.ಅದೇ ಮಾಡುವೋ° ಹೇಳಿಯೊಂಡು ಮಾಡಿತ್ತದ.

ಅಷ್ಟಪ್ಪಗ ಸತೀಶ ಬಂದವ° ಹೇಳಿದ, ನೀಂಗೊ ಕಮ್ಮಿ ಆಯೆಕ್ಕು ಹೇಳಿ ಇದ್ದರೆ ಬೆಳ್ಳುಳ್ಳಿ ಎಣ್ಣೆಗೆ ನೀರುಳ್ಳಿ ಎಸರು ಸೇರ್ಸಿ ಬೆಶಿ ನೀರಿಲ್ಲಿ ಕುಡಿಯೆಕ್ಕು ಅರ್ಧ ಘಂಟೆಲಿ ನೋಡಿ. ಶೀತ ಮಾಯಕ ಹೇದ.
ನಾವು ಸುರು ಮಾಡಿ ಅರ್ಧಕ್ಕೆ ಬಿಡುವ ಜೆನ ಅಲ್ಲವೇ ಅಲ್ಲ. ನಮ್ಮ ನಂಬಿಕೆ ನವಗೆ ಹೇಳಿ ನೀರುಳ್ಳಿಗೆ ಕಿಲಕ್ಕೆ ಅರುವತ್ತು, ಬೆಳ್ಳುಳ್ಳಿಗೆ ಮುನ್ನೂರು ಹೇಳುವಾಗ ರಜಾ ಸಂಕಟ ಆದರೂ ಆರೋಗ್ಯ ಮುಖ್ಯ ಹೇಳಿ ಅದರನ್ನೂ ಮಾಡಿತ್ತು.
ಮದ್ದಲ್ಲದೋ, ಪೈಸದ ಮೋರೆ ನೋಡಿರೆ ಅಕ್ಕೋ, ಅಲೋಪಥಿ ಮದ್ದೆಂತ ದರ್ಮಕ್ಕೆ ಸಿಕ್ಕುತ್ತೋ?
ಇಷ್ಟೆಲ್ಲಾ ಜೆನ ಬಂದು ಮದ್ದು ಹೇಳ್ತದು ಕಂಡು ನವಗೆ ಮನಸ್ಸು ತುಂಬಿ ಕಣ್ಣಿಲ್ಲಿ ನೀರು ಬಂದ ಹಾಂಗಾತು. ಸ್ನೆಹಿತರು,ಒಡನಾಟ ಹೀಂಗೆ ಬೇಕಲ್ಲದೋ.ನಮ್ಮ ಆರೋಗ್ಯದ ಮೇಲೆ ಎಷ್ಟು ಜೆನಕ್ಕೆಯೋಚನೆ,ಚಿಂತೆ ಇದ್ದು ಹೇಳಿ.
ಮದ್ದು ಹೀಂಗೇ ಮಾಡ್ತದು,ಗುಣ ಅಪ್ಪಗ ಎರ್ಡು ದಿನ ತಡವಾದರೂ ಬೇಜಾರಿಲ್ಲೆ ಆದರೆ ಸ್ನೇಹಿತರ ಸಲಹೆಯ ಧಿಕ್ಕರುಸುದು ಸಾಧ್ಯವೇ ಇಲ್ಲೆ.ಜೆನರ ವಿಶ್ವಾಸಂದ ದಿನ ಹೆಚ್ಚಲ್ಲ ಹೇಳಿ ನಿಘಂಟೂ ಮಾಡಿಯೇ ಬಿಟ್ಟತ್ತು.

ಎಂಟು ದಿನ ಆತು,ನಮ್ಮ ಕೆಲಸ ಬಿಡುವ ಹಾಂಗಿಲ್ಲೆದ. ನೀರುಳ್ಳಿಗೆ ಅರುವತ್ತು,ಬೆಳ್ಳುಳ್ಳಿಗೆ ಮುನ್ನೂರು ಎಲ್ಲಿಂದ ತಪ್ಪದು ಹೇಳಿ ಬೇಕಲ್ಲದೋ?
ನಮ್ಮಹತ್ತರೆ ಮದ್ದಿಂಗೆ ಬಂದವು ಕೇಳ್ಲೆ ಸುರು ಮಾಡಿದವು-ದಾನೆ ಡಾಕ್ಟ್ರೇ,ಈರೆನ ಮರ್ದ್ ಈರೆಗ್ ಪತ್ತುಜ್ಜಿ,ಎಂಕ್ಳೆನ ಅಡ್ಯನಡ್ಕದ ಪಂಡಿತೆರುಳ್ಳೆರ್,ಶೀತೊಗ್ ಭಾರೀ ಮರ್ದ್.ಬೋಡಾಂಡ ತೂವೋಳಿ ಹೇಳಿದ ಒಬ್ಬ°.
ನಮ್ಮ ಪ್ರಾಕಿನ ಮದ್ದಿನ ಒಳಿಶಿಗೊಳೆಕ್ಕಾದ ಅಗತ್ಯ,ಅದಕ್ಕೆ ಬೇಕಪ್ಪ ಪಥ್ಯ,ಇಂಗ್ಲಿಶ್ ಮದ್ದಿಂದಪ್ಪ ಅನಾಹುತ ಅವಕ್ಕೆ ಅರ್ಥ ಅಕ್ಕೋ?
ಅವು ಇರುಳಪ್ಪಾಗ ಒಂದು”ನೂರು” ಹಾಕಿ ಮನುಗಿರೆ ಶೀತ ಪರಾರಿ ಹೇಳಿರೆ ನವಗೆ ಮಾಡ್ಳೆ ಎಡಿಗೋ?

ಕಸ್ತಲಗೆ ಬೆಶಿ ನೀರಿನ ಬೇಗ್ ಎದೆ ಮೇಲೆ ಮಡಿಕ್ಕೊಂಡು ಒರಗಿತ್ತು.ಇಂಡಿಯನ್ ಎಕ್ಪ್ರೆಸ್ಸಿಲ್ಲಿ ಬಂದಿತ್ತು ಉದಿಯಪ್ಪಗ ಈ ಉಪಾಯ.ಸರೀ ಒರಕ್ಕು ಬಾರದ್ರೆ ಬೆಡದ್ದೆಲ್ಲ ನೆಂಪಕ್ಕದ.
ಸುಮ್ಮನೆ ಮದ್ದು ಮಾರಿ ಪೈಸ ಮಾಡುವ ಪ್ರಚಾರಾಕ್ಕೇ ಆದರೂ ನ್ಯುಮೋನಿಯ, ಸೈನುಸಿಟಿಸ್, ಬ್ರೊಂಕೈಟಿಸ್, ಶ್ವಾಸಕೋಶದ ಕ್ಯಾನ್ಸರ್ನ ವರೇಗೆ ಉಪಯೋಗಕ್ಕಿಲ್ಲದ್ದೆಲ್ಲಾ ನೆಂಪಾದ್ದೋ, ಕನಸೋ ಗೊಂತಿಲ್ಲೆ.
ಯಜಮಾಂತಿಯೂ ಬೈವಲೆ ಸುರು ಮಾಡಿತ್ತು,ಮಾವನ ಮನೆಂದಲೂ ಫೋನ್ ಬಪ್ಪಲೆ ಸುರು ಆತು,ಅವೆಲ್ಲಾ ಈಗಾಣ ಅಲೋಪಥಿಯೇ ಮದ್ದು ಹೇಳಿ ಇನ್ನೂ ನಂಬಿದ್ದವು, ಎನ್ನಷ್ಟು ವಿವೇಕ ಅವಕ್ಕೇ ಇಲ್ಲೆನ್ನೆ ಹೇಳಿ ಹೆಮ್ಮೆಯೂ ಆತು, ಬೇಜರೂ ಆತು.

ಮನಸ್ಸಿಲ್ಲದ್ರೂ ಒಂದು ನೆತ್ತರು ಪರೀಕ್ಷೆ ಮಾಡ್ಸಲೆಂತಾಅಯೆಕ್ಕು?ಸರಿ ಹೇಳಿತ್ತು ನಾವು.
ಅಲ್ಲಿಗೆತ್ತುವಾಗ ಅಲ್ಲಿ ಎಂಗಳ ಆಳ್ವನ ಲ್ಯಾಬಿಲ್ಲಿ ಸೂಜಿ ಹಿಡ್ಕಂಡು ತಯಾರಿದ್ದು,ನಾವು ಸಣ್ಣ ದಾಕ್ಟ್ರೇ ಆದರೂ ದೊಡ್ಡ ಡಾಕ್ಟ್ರನೂ ಬಂದಿತ್ತಿದ್ದ°.
ಅವನ ಪ್ರತಿಷ್ಟೆಯ ವಿಷಯ ಅದಾ. ಕಫಲ್ಲಿ ನ್ಯುಮೊನಿಯದ ಬೇಕ್ಟೀರಿಯ ಇದ್ದು, ಎಕ್ಸರೇ ಆಯೆಕ್ಕು, ಅದುದೇ ಡಿಜಿಟಲ್ ಎಕ್ಸರೆಯೇ. ಅಂತೂ ಈಗ ಇಲ್ಲಿಯೂ ಒಂದು ಡಿಜಿಟಲ್ ಎಕ್ಸರೇ ಮಿಶನು ಇದ್ದು,ಅದೂ ಮಾಡಿತ್ತು.
ಅದರ ನೋಡುವಗ ನವಗೆ ರಜಾ ಚಳಿ ಕೂದತ್ತು, ಎಂತಾರೂ ಲೊಟ್ಟೆಯೋ ಸತ್ಯವೋ, ಕಲ್ತದು ನೆಂಪಿದ್ದು. ನ್ಯುಮೋನಿಯ ಇಪ್ಪದಪ್ಪು.

ಅಷ್ಟಪ್ಪಗ ರಮೇಶ, ಸತೀಶ, ಅವ° ಇವ° ಆರೂ ಇಲ್ಲೆ. ಶುಂಠಿ, ಲವಂಗ, ಹಿಪ್ಪಲಿ, ಬೆಳ್ಳುಳ್ಳಿ(ಮುನ್ನೂರು), ನೀರುಳ್ಳಿ(ಅರುವತ್ತು) ಎಲ್ಲ ಕರೆಲಿ ಮಡಗಿ ಏಂಟಿಬಯೊಟಿಕ್ ತೆಕ್ಕೊಂಬಲೇ ಬೇಕು ಹೇಳಿ ದೊಡ್ಡ ಡಾಕ್ಟ್ರಂದು ಒರ್ಡರ್ ಆತದ.
ಗುಂಡಿಗೆ ಬಿದ್ದ ಹುಲಿಗೆ ಆಳಿಂಗೊಂದು ಕಲ್ಲು ಹೇಳಿ ಗಾದೆ ಇದ್ದದ.
ನಿನಗೆ ಕೆಲಸ ಇಲ್ಲೆ, ಡಾಕ್ಟ್ರು ಹೇಳಿದ ಹಾಂಗೆ ಮದ್ದು ಮಾತ್ರೆ ತೆಕ್ಕೊ ಹೇಳಿ ರಾಗ ಬದಲೇ!
ನಮ್ಮ ಕಡೆಂಗೆ ಅರೂ ಇಲ್ಲೆ.

ಸದಾಶಿವ° ಇದ್ದರೆ ಎನ್ನಕಡೆಂಗೆ ಮಾತಾಡ್ತಿತನೋ ಏನೋ!
ಇವಕ್ಕೆಂತ ನಮ್ಮ ಶರೀರ ಹಾಳಾದರೆ, ಅದಲ್ಲದ್ದೆ ನಾವು ಊರಿಂಗೂ ಉಪಕಾರ ಮಾಡ್ಳೆ ಹೆರಟದು, ನಮ್ಮ ಮದ್ದಿಂಗೆ ನಾವೇ ಮದಲಾಣ ರೋಗಿಯಪ್ಪಲೆ ತಯಾರಾದ್ದು, ಇದೆಲ್ಲ ಸಾಮಾನ್ಯ ಮನುಷ್ಯರಿಂಗೆ ಎಲ್ಲಿ ಅರ್ಥ ಅಕ್ಕು?
ಎಂಟು ದಿನ ಆ ಕೈಕ್ಕೆ ಮಾತ್ರೆ ನುಂಗಿ ಬೊಡುದೇ ಹೋತದಾ. ಈಗ ರಜ ಕಮ್ಮಿ ಆಯಿದು, ಸೆಮ್ಮ – ಜ್ವರ ಎಲ್ಲ ಇಲ್ಲೆ.
ಎನಗೆ ಇನ್ನುದೇ ಖಂಡಿತಾ ಗೊಂತಿದ್ದು, ಅದೇ ಕಶಾಯಂಗಳ ಕುಡಿತ್ತಿದ್ದರೆ ಕಮ್ಮಿ ಆವುತಿತು, ಶರೀರಕ್ಕೂ ಹಾಳಿತ್ತಿಲ್ಲೆ, ಎನ್ನ ಹತ್ತರೆ ಮದ್ದಿಂಗೆ ಬಪ್ಪವಕ್ಕೂ ಪ್ರಯೋಜನ ಆವುತಿತು.
ಬಹುಷಃ ರಜಾ ಹೆಚ್ಚು ಕುಡಿಯೆಕ್ಕಾತೋ ಏಂತ ಖರ್ಮವೋ?

ಕೇಜಿಮಾವ°
Latest posts by ಕೇಜಿಮಾವ° (see all)

17 thoughts on “ಮನೆ ಮದ್ದು ಮಾಡ್ಳೆ ಬಿಟ್ಟವೇ ಇಲ್ಲೆ.

  1. ಇಶ್ !! ಕೆ.ಜಿ ಮಾವ ‘ ದೆಸೆ ಬದಲುವಗ ಕಮ್ಮಿ ಅಕ್ಕು ‘ ಹೇಳಿ ಹೇಳುವ ಜೊಯಿಸ ಮಾವನ ಹತ್ತರೆ ಮೊದಲೇ ಹೋಗಿದ್ದರೆ ಅಸ್ತೊತಿನ್ಗೆ ಕಮ್ಮಿ ಅವುತಿತು. ಯಾವ ಮದ್ದು ಬೇಕೋಳಿತ್ತಿಲ್ಲೆ.

  2. ಕೇಜಿಮಾವಾ°..
    ಮೊನ್ನೆ ಎಂತಾತು ಹೇಳಿರೆ,
    ಎನಗೆ ಜೋರು ಶೀತ!
    ನಿಂಗಳ ಈ ಶುದ್ದಿಕೇಳಿದ ಮತ್ತೆ – ಇನ್ನು ಆಯುರ್ವೇದ ಬೇಡ – ಹೇಳಿಗೊಂಡು ಇಂಗ್ಳೀಶುಮದ್ದು ತೆಕ್ಕೊಂಡದು.
    ಎರಡು ಬೇಗಡೆ ಪೂರ್ತಿ ಮಾತ್ರೆ ಕೊಟ್ಟವು, ಅರ್ದ ಕೆಂಪು, ಅರ್ದ ನೀಲಿ ಬಣ್ಣದ್ದು.

    ನಾಕು ದಿನ ನುಂಗಿದೆ! ಕಮ್ಮಿ ಆತು.
    ಎಂತರ? ಮಾತ್ರೆ. ಶೀತ ಅಲ್ಲ, ಅದು ಹಾಂಗೇ ಇದ್ದು! 😉
    ಆಕ್ಷೀ….

    1. ನೀ ಆಯುರ್ವೇದ ಬಿಟ್ಟಿದೆ, ಈಗ ಅಲೋಪತಿ’ಯೂ ಬಿಡುವ ಹಾಂಗೆ ಕಾಣ್ತು. ಹೊಮಿಯೋಪತಿ ಒಳುದ್ದು. ಮಾಡಿ ನೋಡು.
      ಅದೂ ಅಗದ್ರೆ.. ಇನ್ನೊಂದೇ ಒಳುದ್ದು! ಹೊಸ ಪದ್ಧತಿ…ಹೇಳೇಕ್ಕಾಗಿಲ್ಯಾಯ್ಕು… ಅಲ್ದೋ ಭಾವ 🙂

      1. ಇನ್ನು ರೇಣುಕಾಚಾರ್ಯ° ಹೊಸ ಪಕ್ಷ ಮಾಡುಗು. ಒ೦ದು ವೋಟು ಗ್ಯಾರ೦ಟಿ.

  3. ಡಾಗುಟ್ರಿ೦ಗೆ ಶೀತ ಆದ ‘ಕಥೆ’ ಲಾಯ್ಕ ಇದ್ದು.ನಿರೂಪಣೆ ಅದ್ಭುತ.
    ಜೀವನದ ಪ್ರತಿ ವ್ಯವಹಾರವೂ ಪೈಸೆ ಮಾಡುಲೆ ಹೇಳಿ ಆದ ಈಗಾಣ ಕಾಲಲ್ಲಿ,ಆಯುರ್ವೇದದ ಮದ್ದುಗಳ ತಯಾರು ಮಾಡುವ ವಿಧಾನವೂ ಬದಲಾಗಿಕ್ಕು,ಅಲೋಪತಿಯ ಪರೀಕ್ಶಾ ವಿಧಾನ೦ಗಳೂ ಬದಲಾಗಿಕ್ಕು.ಅಲ್ಲ,ನಮ್ಮ ಆಹಾರವಿಧಾನ೦ದಾಗಿ ಯೇವ ಮದ್ದೂ ನಾಟದ್ದಿಪ್ಪದೋ? ಆರಿ೦ಗೊ೦ತು..ಆದರೆ ಆರಾರು ಹೇಳಿದ ಮದ್ದು ಮಾಡಿದರಕ್ಕೋ?ಆಯುರ್ವೇದವೂ ಬೇಕು,ಅಲೋಪತಿಯೂ ಬೇಕು,ರೋಗವ ಹೊ೦ದಿಗೊ೦ಡು.
    ನೀರ್ಕಜೆ ಅಪ್ಪಚ್ಚಿಯ ಹಾ೦ಗೇ ಯೋಚನೆ ಬ೦ತಪ್ಪಾ,ಕಡೇ೦ಗೆ.

    1. ಆಡು ಸೋಗೆ ಕಷಾಯ, ಕಿರಾತಕಡ್ಡಿ ಕಷಾಯ ಕುಡುದಾತು, ಬೇರೆ ಎಲ್ಲ ಹೇಳಿತ್ತ ಮನೆ ಮದ್ದುಗಳ ನೋಡಿ ಆತು, ಕುಡುದಾತು.
      ಶೀತ ಜ್ವರ ಮೊನ್ನೆಂದ, ತಲೆ ಬೇನೆ ಯಬ್ಬೋ! ! – ಹೇಳಿ ಎನ್ನ ಫ್ರೆಂಡು ಹೇಳ್ತಾ.

      ” ಇರುಳಪ್ಪಾಗ ಒಂದು”ನೂರು” ಹಾಕಿ ಮನುಗಿರೆ ಶೀತ ಪರಾರಿ ಆವ್ತೋ? ಇದೂ ಒಂದು ಮದ್ದೋ! ” ಇದು ಯೇವ ಪದ್ದತಿ?
      ಆರಾರೂ ಟ್ರೈ ಮಾಡಿದ್ದೀರೋ!
      ಡಾಕಟ್ರಕ್ಕೋ ಎಂತ ಹೇಳ್ತಿ! (:))
      ಉಹ್ಹ್,..

      1. ಯಬ್ಬ,ಅರ್ಗೆ೦ಟಿನ ಎಡಕ್ಕಿಲಿ ಇದು ಬೇಗ ತಲಗೆ ಹೊತೋ?
        ‘ನೂರು’ ಹಾಕಿದವರ ಶೀತದೊಟ್ಟಿ೦ಗೆ ತಲೆಯೂ ಪರಾರಿ ಆಯಿದು ಮಾಣಿ.
        {ಟ್ರೈ } ಹಾ೦ಗೆ ಇ೦ಗ್ಲೀಷು ಬಪ್ಪದಕ್ಕೇ ಅಲ್ಲದೋ ವಾಟೀಸು ಹೇಳಿ ಮದಲಾಣವು ಹೇಯಿದ್ಸು?

        1. ಡಾಕ್ಟ್ರು ಹೊಸ ಒಂದು ಔಷಧ ಹೇಳಿದ್ದವು- ಊರಿನೋರದ್ದು! ಅದು ತಲೇಲಿ ಇತ್ತು.
          ನೂರು ಹಾಕಿದವರ ಶೀತದೊಟ್ಟಿ೦ಗೆ ತಲೆಯೂ ಪರಾರಿ ಆವ್ತಿಲ್ಲೇ ಭಾವ, ತಲೆಲಿ ಇಪ್ಪೋದೆಲ್ಲ ಹೇರ ಬತ್ತು. ಬಗೆ ಬಗೆ ವಿಷಯ ಎಲ್ಲ ಹೇಳುತ್ತೋವವಾಗ.

  4. ಕೆಜಿ ಮಾವನ ಲೇಖನಲ್ಲಿ ಇದ್ದ ವ್ಯಂಗ್ಯವ ಆನುದೆ ಕಂಡೆ. ಓದ್ತಾ ಇಪ್ಪಗ, ಹಾವೂ ಸಾಯಲಾಗ, ಕೋಲೂ ಮುರಿಯಲಾಗ ಹೇಳ್ತ ಗಾದೆ ಮಾತು ನೆಂಪಾತು. ಬಹಳ ಸೂಕ್ಷ್ಮವಾಗಿ, ಎಳೆ ಎಳೆಯಾಗಿ ಮಾವ ವಿಷಯ ಮಂಡನೆ ಮಾಡಿದ್ದವು. ನಿರೂಪಣೆ ಲಾಯಕಾಯಿದು. ಆಯುರ್ವೇದಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದ್ದು. ಇಂಗ್ಳೀಷ್ ಮದ್ದಿಂಗೂ ಅದರದ್ದೇ ಆದ ಬೆಲೆ ಇದ್ದು . ಸರಿಯಾದ ವೈದ್ಯರ ಆಯ್ಕೆ ಮಾಡೆಕಾದ್ದು, ನಮ್ಮ ಕೈಲಿ ಇದ್ದು.

  5. ಪಸ್ಟ್ ಆಯಿದು,
    ಆದರೆ ಕೇವಲ ಆಯುರ್ವೇದವ ದೂರಿ ಪ್ರಯೋಜನ ಇಲ್ಲೇ ..ಎಂಥಕೆ ಹೇಳಿದರೆ ……ಜೇನು ಸೇರಿಸಿ ಕುಡಿಯಿರಿ ಹೇಳಿ ಹೇಳಯಾಪ್ಪಗ ಕಡಿಮೆ ಆಯಿದಿಲ್ಲೇ ಎಂಥಕೆ ಹೇಳಿದರೆ ಆ ಜೇನು ಕಲಬೆರಕೆ ಜೇನು ಅದರಿಂದ ಹೇಂಗೆ ಕಡಿಮೆ ಅಪ್ಪದು? ಅಲ್ಲದ? ಹಾಗೆಯೇ ಈಗ ಯೆಂಥರ ನೋಡಿದರೂ ನಂಬಲೇ ಎಡಿಯ ಎಲ್ಲಾ ಕಲಬೆರಕೆ …ಮತ್ತೆ ನಾವು ದಿನಾ ವಿಷವನ್ನೇ ತಿಮ್ಬದು ನಮ್ಮ ದೈನಂದಿನ ಆಹಾರಲ್ಲಿ ಮತ್ತೆ ಸಾದಾರಣ ಮದ್ದುಗೋ ಮುಟ್ಟುಗೋ ಈ ವಿಷಯುಕ್ತ ದೇಹಕ್ಕೆ ?
    ಈಗಾಣ ಬೆಳ್ಳುಳ್ಳಿ ಆಗಲಿ ಒಳ್ಳೆಮೆಣಸು ಆಗಲಿ ಅದರಲ್ಲಿ ಪೂರಾ ವಿಷವೇ ಇಕ್ಕಷ್ಟೇ ಮದ್ದು ಬಿಟ್ಟು ಬಿಟ್ಟು …..

    ಹಾ೦ಗಾಗಿ ಇಂಗ್ಲಿಶ್ ಮದ್ದು ಕುಡುದಪ್ಪಗ ಕಡಿಮೆ ಅಪ್ಪದು, ಆದರೂ ಮತ್ತೆ ಇನ್ನೊಂದರಿ ಅದೇ ,ಅಸ್ಟೇ ಮದ್ದು ತೆಕ್ಕೊಂದರೆ ಕಡಿಮೆ ಆವುತ್ತಿಲ್ಲೇ ಅದು ಬೇರೆ ಪ್ರಶ್ನೆ …
    ರೆಡಿಮೇಡ್ ಕಶಯ೦ಗನ್ನುದೆ ನಂಬಲೆಡಿಯ ನೀರು ಸೇರ್ಸಿ ಕೊಡುಗು ಅಂಗಡಿಯವು,, ಒಂದು ಅಂಗಡಿದು ಮಜಲುಕರೆ ಎಣ್ಣೆಯ …..ತೆಂಗಿನೆಣ್ಣೆ ಸೇರ್ಸಿ ಒಂದಕ್ಕೆ ಮೂರು ಕುಪ್ಪಿ ಮಾಡಿ ಮಾರಿಕೊಂಡು ಇತ್ತಿದು, ಅವಾಗ ಸುಮಾರು ಜೆನ ಹೇಳಿಕೊಂಡು ಇತ್ತಿದ್ದವು ಈಗ ಈಗ ಮಜಲುಕರೆ ಎಣ್ಣೆ ದೆ ಪ್ರಯೋಜನ ಅಯುತ್ತಿಲ್ಲೇ ಹೇಳಿ !!!!!

  6. ಅರೆ, ಕೇಜಿಮಾವನ ಬರವಿಲಿಪ್ಪ ಅಣಕು ಗೊಂತಾಯಿದಿಲ್ಲೆಯ ಆರಿಂಗೂ! ಎನಗೆ ಗೊಂತಾತು. ಭೇಷ್, ಲಾಯಿಕ ಬರದ್ದಿ ಕೇಜಿಮಾವ. ಆದರೆ ಸಮಸ್ಯೆ ಎಂತರ ಹೇಳಿರೆ ಆಯುರ್ವೇದ ಮಾಡಿ ಗುಣ ಆಗದ್ದೆ ಅಲೋಪತಿ ಮೊರೆ ಹೊಕ್ಕು ಗುಣ ಆದವು ಇಪ್ಪ ಹಾಂಗೇ (ನಿಂಗಳ ಹಾಂಗಿಪ್ಪವು), ಅಲೋಪತಿ ಮಾಡಿ ಕಮ್ಮಿ ಆಗದ್ದೆ ಆಯುರ್ವೇದಲ್ಲಿ ಗುಣ ಆದವೂ ಇದ್ದವು. ಇವೆರಡರಲ್ಲೂ ಗುಣ ಆಗದ್ದೇ‌ ಇಪ್ಪವುದೆ ಎನಗೆ ಪರಿಚಯ ಇದ್ದು. ಹಾಂಗಿಪ್ಪಗ ಯಾವುದರ ಬಿಡುದು ಯಾವುದರ ಹಿಡ್ಕೊಂಬದು ಹೇಳಿ ಹೇಳುಲೆ ಕಷ್ಟ.

    ಎನಗೆ ಬಹುತೇಕ ಸಂದರ್ಭಲ್ಲಿ ಆಯುರ್ವೇದ ಸಹಾಯ ಮಾಡಿದ್ದು. ಎನ್ನ ಮಟ್ಟಿಂಗೆ ಅದು ಉಪಕಾರಿಯೇ. ಬಾಕಿದ್ದವರ ಬಗ್ಗೆ ಹೇಳುಲೆ ಎನಗರಡಿಯ. ಆನು ಡಾಕುಟ್ರ ಅಲ್ಲನ್ನೆ.

    {ಗುರುಗೊಕ್ಕೆ ಮಾಂತ್ರ ನಮ್ಮ ಕಣಿಯೂರಣ್ಣನ ಮದ್ದು ಹೇಳ್ತದು ನವಗೆಂತಕೆ}
    ಪಂಚ್ ಭಾರಿ ಸ್ಟ್ರಾಂಗ್ ಇದ್ದು! 🙂

    1. ಅಣಕ ಗೊ೦ತಾಯಿದು ಅಪ್ಪಚ್ಚೀ… ಆದರೆ ಬಹಳ ಬಹಳ ಬುಧ್ಧಿಪೂರ್ವಕವಾಗಿ ಬರದ ಲೇಖನ. ಅವು ನೇರವಾಗಿ ಅಲೊಪಥಿ ಒಳ್ಳೇದು ಹೇಳಿ ಹೇಳಿದ್ದವೂ ಇಲ್ಲೆ, ಆಯುರ್ವೇದ ಹಾಳು ಹೇಳಿದ್ದವು ಇಲ್ಲೆ. ಹಾ೦ಗೆ ಹೇಳ್ತವು ಹೇಳಿ ಓದುಗ೦ಗೆ ಭಾವನೆ ಬ೦ದರುದೆ ಅದರ ಡಿಫೆನ್ಸ್-ನ ಹಾ೦ಗೆ (ಎನಗೆ ಇನ್ನುದೇ ಖಂಡಿತಾ ಗೊಂತಿದ್ದು, ಅದೇ ಕಶಾಯಂಗಳ ಕುಡಿತ್ತಿದ್ದರೆ ಕಮ್ಮಿ ಆವುತಿತು, ಶರೀರಕ್ಕೂ ಹಾಳಿತ್ತಿಲ್ಲೆ, ಎನ್ನ ಹತ್ತರೆ ಮದ್ದಿಂಗೆ ಬಪ್ಪವಕ್ಕೂ ಪ್ರಯೋಜನ ಆವುತಿತು.
      ಬಹುಷಃ ರಜಾ ಹೆಚ್ಚು ಕುಡಿಯೆಕ್ಕಾತೋ ಏಂತ ಖರ್ಮವೋ?) – ಹೇಳಿಯುದೆ ಹೇಳ್ತಾ ಇದ್ದವಲ್ಲದಾ.. ಅವು ಯಾವಗಾದರೂ ಒ೦ದು ಲೇಖನ ಬರವದರಾದರುದೆ ಅದು ಮೆಚ್ಚಿಗೊ೦ಬ ಹಾ೦ಗೆ ಇರ್ತು. ಕೇಜಿ ಮಾವ೦ಗೆ ಧನ್ಯವಾದ೦ಗೊ.

      1. ಹಹಾ.. ಇಲ್ಲೆ ಅಲ್ಲಿಪ್ಪ ಸೂಕ್ಷ್ಮ ನಿಂಗೊಗೆ ಗೊಂತಾಯಿದಿಲ್ಲೆ. ಅಣಕ ಮಾಡುದರ ಮೂಲಕ ಆಯುರ್ವೇದ ಎಲ್ಲ ಬೊಗಳೆ ಹೇಳಿದ್ದು ಅವು. ನಿಂಗೊಗೆ ಅರ್ಥ ಆಯಿದಿಲ್ಲೆ ಅಷ್ಟೆ. ಅಲ್ಲ ಹೇಳಿ ಆದರೆ ಸ್ಪಷ್ಟನೆ ಅವೇ ಕೊಡಲಿ. ಅಲ್ಲದ್ದೆ ಇದರ ಬಗ್ಗೆ ಬೈಲಿಲಿ ಬೇರೆ ಕಡೆ ಎಲ್ಲಿಯೋ ಚರ್ಚೆ ಆವುತ್ತಾ ಇದ್ದು. ಅದನ್ನೇ‌ ಪುನಾ ಇಲ್ಲಿ ಮಾಡುದು ಬೇಡ.

        ಏನಿದ್ದರೂ ಕೆಲವು ಭ್ರಾಂತಿಗಳ ಲಾಯಿಕಲ್ಲಿ ಹೇಳಿದ್ದವು. ಸೌಖ್ಯ ಇಲ್ಲದ್ದಿಪ್ಪಗ ಜನ ಬಿಟ್ಟಿ ಸಲಹೆ ಕೊಡುದು, ಬಾಯಿಲಿ ಆಯುರ್ವೇದ, ಕಾರ್ಯಲ್ಲಿ ಅಲೋಪತಿ ಹೀಂಗಿಪ್ಪ ಆಭಾಸಂಗಳ ಬಗ್ಗೆ. ಆದರೆ ಇಂಥದ್ದರ ಅಣಕಿಸುವ ಮಧ್ಯಲ್ಲಿ ಆಯುರ್ವೇದವನ್ನೇ ಬಲಿ ಕೊಡುವ ಅರ್ಥ ಓದುಗರಿಂಗೆ ಬಪ್ಪ ಸಾಧ್ಯತೆ ಇದ್ದು (ಎನ್ನ ಹಾಂಗಿಪ್ಪವೊಕ್ಕೆ).

        ಕೇಜಿ ಮಾವ೦ಗೆ ಧನ್ಯವಾದ೦ಗೊ.

  7. ಮಾವ,
    ಆಡು ಸೋಗೆ ಕಷಾಯ, ಕಿರಾತಕಡ್ಡಿ ಕಷಾಯ ಆಹ ಶೀತ, ಜ್ವರದ ಸಮಯಲ್ಲಿ ಭಾರೀ ಒಳ್ಳೇದು- ಎನ್ನ ಅನುಭವ.
    ಎಂಥಾ ಸಿಹಿ ಕೂಡ. (ಇದು ತಮಾಷೆಗೆ)
    ಸುಲಭ ಕೂಡ, ಎಲೆ ತೊಳದತ್ತು, ನೀರಿಗೆ ಹಾಕಿ ಬೇಶಿ ಮಾಡಿ ಕಷಾಯ ರೆಡಿ.
    ಆ ಪರಿಮಳ ಬಹಳ ಒಳ್ಳೇದು!
    ನಮನಗಳು

    1. ಆಡುಸೋಗೆ ಕಫಕ್ಕೆ ಅದ್ಭುತ ಫಲ ಕೊಡ್ತು. ಆಡು ಸೋಗೆ ಸೊಪ್ಪಿನ ತೊಳದು ಕಿಚ್ಚಿಲ್ಲಿ ಬಾಡಿಸಿ ಹಿ೦ಡಿ ೧ ಚಮ್ಚ ಎಸರು ತೆಗದು ಸಮಪ್ರಮಾಣದ ಜೇನವುದೆ ಸೇರಿಸಿ ಸೇವಿಸಿರೆ ಭಾರೀ ಒಳ್ಳೆ ಫಲ ಕೊಡ್ತು ಹೇಳುವದು ಎನ್ನ ಅನುಭವ

  8. ರೋಗ ನಿದಾನ[ಪತ್ತೆಹಚ್ಚುದು] ಸರೀ ಆದರೆ, ಮನೆ ಮದ್ದು ಗೊಂತಿದ್ದರ ಮಾಡಲೆಡಿಗು.
    ಕೆಲವು ಸರ್ತಿ ನಮಗೆ ಎಂತ ಆವುತ್ತು ಹೇಳಿ ನಮಗೆ ಗೊಂತಾವ್ತಿಲ್ಲೆ ಇದ

  9. ಮನೆ ಮದ್ದು ಖಂಡಿತಾ ಒಳ್ಳೆದು. ಆದರೆ ಮಾಡುತ್ತಡು ಆರು. ಮಾಡಿ ಕೊಡ್ತವ ಆರು.

    ಈಗಣ ಪರಿಸ್ಥಿತಿಲಿ ಎಲ್ಲವೂ ರೆಡಿಮೇಡ್ ಅಯೇಕು. ಕಾವಲೂ ಪುರುಸೋತ್ತಿಲ್ಲೆ. ಇಂಗ್ಲಿಷ್ ಮದ್ದು ತೆಗದು ತಿಂದನೋ ನಡದನೋ ಅಷ್ಟೇ . ಇಂದ್ರಾಣದ್ದು ಹೋಗಲಿ, ನಾಳೆ ನೋಡಿಯೊಂಬೋ ಹೇಳಿ ಎಲ್ಲೋರಿಂಗೂ ಕಾಂಬೊದು.

    ಈ ಕೇಜಿ ಮಾವನ ಲೇಖನ ಓದಿಯಪ್ಪಗ ಹಳ್ಳಿ, ಕೃಷಿ ಬೇಡ ಹೇಳುತ್ತವಂಗೂ ಬೇಕು ಹೇಳಿ ಕಾಂಗೀಗ.

    ಮತ್ತೊಂದು ಉಪದ್ರ – ಮನಗೆ ಬಂದವ ಪ್ರತಿಯೊಬ್ಬನೂ ಇದಕ್ಕೆ ಇದು ಒಳ್ಳೆದು, ಅದಕ್ಕೆ ಅದು ಒಳ್ಳೆದು. ಮಾಡಿ ನೋಡು ಹೇಳಿ ಮರಳು ಕಟ್ಟುಸುವಾಗ ಮಂಡೆ ಬೇಶಿ ಆವ್ತು ಹೋಹ್!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×