Oppanna.com

ಮೈಗ್ರೇನ್[Migraine]

ಬರದೋರು :   ಸುವರ್ಣಿನೀ ಕೊಣಲೆ    on   06/02/2011    10 ಒಪ್ಪಂಗೊ

ಸುವರ್ಣಿನೀ ಕೊಣಲೆ

ಬೈಲಿನ ಬಂಧುಗೊಕ್ಕೆ ನಮಸ್ಕಾರ 🙂 ವರ್ಷದ ಎರಡನೇ ತಿಂಗಳಿನ ಎರಡನೇ ವಾರ ಶುರು ಆತದ…ಇನ್ನು ರಜ್ಜೆ ದಿನಲ್ಲಿ ಬೇಸಗೆ ರಜೆ ಶುರು ಅಪ್ಪಲಾತು. ಮಕ್ಕೊಗೆ ಗಮ್ಮತು, ಈ ಮಕ್ಕಳ ಹೇಂಗಪ್ಪಾ ನೋಡಿಗೊಂಬದು ಹೇಳ್ತ ಸಮಸ್ಯೆ ದೊಡ್ಡೋರಿಂಗೆ. ಮೊದಲೆಲ್ಲ ಆದರೆ ಬೇಸಗೆ ರಜೆಲಿ ಅಜ್ಜನ ಮನೆಗೋ ಅಥವಾ ಮತ್ತೆಲ್ಲಿಗೋ ಹೋಪ ಕ್ರಮ, ಅಲ್ಲದ್ದೆ ಮಕ್ಕೊ ಮನೆಲಿ ಇದ್ದರೂ ಅವರಷ್ಟಕ್ಕೇ ಆಡಿಗೊಂಡಿಕ್ಕು ಜಾಲಿಲ್ಲಿಯೋ ತೋಟಲ್ಲಿಯೋ ಎಲ್ಲಿಯಾರು. ಆದರೆ ಈಗ ಹಾಂಗಲ್ಲನ್ನೆ. ಬೇಸಗೆ ರಜೆಲಿ ಶಿಬಿರಂಗೊ, ತರಬೇತಿಗೊಕ್ಕೆ ಹೋಪದೇ ಗೌಜಿ. ಎಮ್ತಾರು ಒಂದು ಕೆಲಸ ಕೊಡೆಕ್ಕು ಮಕ್ಕೊಗೆ. ಅಲ್ಲದ್ದರೆ ಮಕ್ಕೊಗೆ ’ಬೋರ್’ ಆದರೆ ಅಮ್ಮಂದ್ರಿಂಗೆ ತಲೆಬೇನೆ ಶುರು ! ನಾವೀಗ ಎರಡು ವಾರಂದ ತಲೆಬೇನೆಯ ಬಗ್ಗೆಯೇ ಮಾತಾಡ್ತಾ ಇದ್ದಲ್ಲದಾ. ಆದರೆ ಇಲ್ಲಿ ಈಗ ಹೇಳಿದ ವಿಚಾರ ಹೆಚ್ಚು ತೊಂದರೆ ಕೊಡುವ ತಲೆಬೇನೆ ಅಲ್ಲ. ಆದರೆ ಅಮ್ಮಂದ್ರಿಂಗೆ ಹೆಚ್ಚು ಕಾಡ್ತ ಮತ್ತೊಂದು ತಲೆಬೇನೆ ಇದ್ದು. ಅದರ ಬಗ್ಗೆ ನಾವು ಮಾತಾಡಲೇ ಬೇಕು. ’ಮೈಗ್ರೇನ್, ಅಮ್ಮಂದ್ರಿಂಗೆ ಬಪ್ಪ ತಲೆಬೇನೆ ಹೇಳಿ ಆನು ಮೇಲೆ ಹೇಳಿರೂ ಕೂಡ ಇದು ಗಂಡಸರಲ್ಲಿಯೂ ಕಂಡುಬಪ್ಪ ಸಮಸ್ಯೆ.

ಮೈಗ್ರೇನ್ ಹೇಳಿರೆ ಎಂತರ? ಸುಮಾರು ಜೆನ ಹೇಳುದರ ಕೇಳಿಕ್ಕು ನಾವು ’ಎನಗೆ ಮೈಗ್ರೇನ್ ಇದ್ದು’ ಹೇಳಿ. ಆದರೆ ಹಾಂಗೆ ಹೇಳಿರೆ ಎಂತರ ಹೇಳಿ ಅವಕ್ಕೂ ಗೊಂತಿರ್ತಿಲ್ಲೆ ಕೆಲವು ಸರ್ತಿ.  ಹೆಚ್ಚಾಗಿ ಒಂದರಿಯೇ ಜೋರು [sudden episodi attack of headcahe] ಶುರು ಅಪ್ಪ ತಲೆಬೇನೆಗೆ ಜೆನ ಮೈಗ್ರೇನ್ ಹೇಳಿ ಹೇಳಿರೂ ಕೂಡ, ವೈದ್ಯಕೀಯವಾಗಿ ನೋಡುವಗ ಮುಖ್ಯವಾಗಿ ಮೂರು ಅಂಶಂಗಳ ಆಧಾರಲ್ಲಿ ಮೈಗ್ರೇನ್ ಹೇಳಿ ನಿರ್ಣಯ ಮಾಡ್ಲಕ್ಕು. ಯಾವುದೀ ಅಂಶಂಗೊ?

  • ಒಂದರಿಯೇ ಶುರು ಅಪ್ಪ ಜೋರು ತಲೆಬೇನೆ [sudden episodic attack of headache]
  • ವಾಂತಿ ಬಪ್ಪದು/ಬಪ್ಪ ಹಾಂಗೆ ಅಪ್ಪದು ಅಥವಾ ಎರಡೂ [nausea and(or) vomiting]
  • ಪ್ರಕಾಶವಾದ ಬೆಣಚ್ಚು/ಮಿಣುಕು ಬೆಣಚ್ಚು ಅಥವಾ ಬೆಣಚ್ಚಿನ ಗೆರೆಗೊ ಕಂದಹಾಂಗೆ ಅಪ್ಪದು/ಕಾಂಬದು [presence of visual(mainly) aura]

ಹೀಂಗಿದ್ದ ಲಕ್ಷಣಂಗೊ ಇದ್ದರೆ ಅದರ ಮೈಗ್ರೇನ್ ಹೇಳಿ ಹೇಳುಲಕ್ಕು.

ಇದರಲ್ಲಿ ಎರಡು ರೀತಿ ಇದ್ದು ಹೇಳಿ ಹೇಳ್ತವು

1)  ತಲೆಬೇನೆ ಮತ್ತೆ ವಾಂತಿಯೊಟ್ಟಿಂಗೆ ಬೆಣಚ್ಚು ಕಂಡಹಾಂಗಪ್ಪ/ಕಾಂಬ ಲಕ್ಷಣ ಇದ್ದರೆ classical migraine ಹೇಳಿ ಹೇಳ್ತವು.

2) ತಲೆಬೇನೆ ಇದ್ದು, ವಾಂತಿ ಇದ್ದು ಅಥವಾ ಇಲ್ಲದ್ದೆ, ಆದರೆ ಬೆಣಚ್ಚು ಕಾಂಬದು ಇಲ್ಲದ್ದರೆ common migraine ಹೇಳ್ತವು.

ಶೇಕಡಾ 90 ಮೈಗ್ರೇನ್  40 ವರ್ಷ ಪ್ರಾಯ ಕಳುದಮೇಲೆ ಶುರು ಅಪ್ಪದು ಹೇಳಿ ಹೇಳ್ತವು, ಇನ್ನೂ ಒಂದು ಅಂಶ ಎಂತರ ಹೇಳಿರೆ, ಇದು ಸ್ತ್ರೀಯರಲ್ಲಿ ಹೆಚ್ಚಾಗಿ ಕಂಡುಬತ್ತು, ಸುಮಾರು 20%. ಅದೇ ಪುರುಷರಲ್ಲಿ ಇದು ಕಂಡುಬಪ್ಪದು ಕೇವಲ 6% ಹೇಳಿ ಅಧ್ಯಯನಂಗೊ ಹೇಳ್ತು.

ಇದರ ಸಾಮಾನ್ಯ ಲಕ್ಷಣಂಗೊ:

  • ಕಾರಣ ಇಲ್ಲದ್ದೆ ಚಡಪಡಿಸುವಿಕೆ ಶುರುಅಪ್ಪದು [non-specific uneasiness]
  • ಕಿರಿಕಿರಿ ಅಪ್ಪದು [irritation]
  • ಇದರ ಹಿಂದಂದ ಮೇಲೆ ಹೇಳಿದ ಹಾಂಗೆ ಬೆಣಚ್ಚಿನ ಗೆರೆಗೊ ಕಾಂಬದು, ಪ್ರಕಾಶವಾದ ಪ್ರಭೆ ಕಾಂಬದು ಇತ್ಯಾದಿ. [visual aura]
  • ಇದರ ಹಿಂದಂದಲೇ ಜೋರು ಅರ್ಧ ತಲೆಬೇನೆ. [severe throbbing hemicranial headache]
  • ಬೆಣಚ್ಚು ಕಂಡರೆ ಆಗದ್ದೆ ಅಪ್ಪದು [photophobia]
  • ವಾಂತಿ ಬಂದಹಾಂಗೆ ಅಪ್ಪದು/ ಬಪ್ಪದು. [Nausea and/ vomiting]
  • ಒಂದರಿ ಬಂದರೆ ಈ ತಲೆಬೇನೆ ಕೆಲವು ದಿನಂಗಳ ವರೆಗೆ ಇಪ್ಪ ಸಾಧ್ಯತೆ ಇದ್ದು.
  • ವಾಂತಿ ಮಾಡಿಯಪ್ಪಗ ಕಮ್ಮಿ ಆದ ಹಾಂಗೆ ಅಪ್ಪದು ಅಥವಾ ಕಮ್ಮಿ ಅಪ್ಪದು.
  • ಇಲ್ಲಿ ಹೇಳಿದ ಬೆಣಚ್ಚು ಕಾಂಬ ಸಮಸ್ಯೆ ಉಂಟಪ್ಪಲೆ ಕಾರಣ ಮೆದುಳಿಲ್ಲಿ ಅಪ್ಪ ಕೆಲವು ಬದಲಾವಣೆಗೊ. ಕೆಲವು ಸರ್ತಿ ಇದರಿಂದಾಗಿ ತಾತ್ಕಾಲಿಕವಾಗಿ ಮಾತು ನಿಂಬದು, ರಜ್ಜ ಹೊತ್ತು ಒಂದು ಭಾಗದ ದೃಷ್ಟಿ ಇಲ್ಲದ್ದೆ ಅಪ್ಪದು,  ಮೈಯ ಒಂದು ಹೊಡೆಂದ ಇನ್ನೊಂದು ಹೊಡೇಂಗೆ ಏನೋ ಒಂದು ಝುಮ್ ಝುಮ್ ಹೇಳ್ತ ಹಾಂಗಿದ್ದ ಸಂಚಲನೆ ಆದ ಹಾಂಗೆ ಅಪ್ಪದು ಇತ್ಯಾದಿ ಅಪ್ಪ ಸಾಧ್ಯತೆಗೊ ಇರ್ತು.

ಈ ಸಮಸ್ಯೆ ಉಂಟಪ್ಪಲೆ ಇಂಥದ್ದೇ ಕಾರಣ ಹೇಳಿ ಸರಿಯಾಗಿ ಗೊಂತಿಲ್ಲೆ, ಆದರೆ

  • ಅನುವಂಶೀಯತೆ.
  • ಸ್ತ್ರೀಯರಲ್ಲಿ ರಸದೂತಂಗಳ ಪ್ರಭಾವ.
  • ಮಾನಸಿಕ ಒತ್ತಡ.
  • ಚೀಸ್, ಚಾಕೊಲೇಟ್ ಮತ್ತೆ ವೈನ್ ಹೆಚ್ಚು ಸೇವಿಸುದು.

ಇತ್ಯಾದಿಗೊ ಕೂಡ ಕಾರಣ ಆಗಿಪ್ಪ ಸಾಧ್ಯತೆಗೊ ಇದ್ದು ಹೇಳ್ತ ವಿಷಯ ಅಧ್ಯಯನಂದ ತಿಳುದು ಬೈಂದು.

ಈ ತಲೆಬೇನೆ ಅಪ್ಪಗ  ನಿಜವಾಗಿಯೂ ನಮ್ಮ ತಲೆಯ ಒಳದಿಕ್ಕೆ ಎಂತ ಆವ್ತು ಹೇಳಿ ನಿಖರವಾಗಿ ಹೇಳುದು ರಜ್ಜ ಕಷ್ಟ. ಆದರೆ ಮೆದುಳಿನ ಒಳದಿಕ್ಕೆ ಉಂಟಪ್ಪ ಕೆಲವು ತಪ್ಪು ಸಂವೇದನೆಗೊ ಕಾಂಬ ಬೆಣಚ್ಚಿಂಗೆ ಕಾರಣ ಹೇಳಿ ಹೇಳ್ತವು. ಅಲ್ಲದ್ದೆ ತಲೆಯಭಾಗಲ್ಲಿ ಇಪ್ಪ ರಕ್ತನಾಳಂಗೊ ತಮ್ಮ ಗಾತ್ರವ ಹಿಗ್ಗುಸುದು[vasodialatation] ತಲೆಬೇನೆಗೆ ಕಾರಣ.

ಪರಿಹಾರ ಮಾರ್ಗಂಗೊ:

  • ತಾತ್ಕಾಲಿಕ ಉಪಶಮನಕ್ಕೆ ಆಧುನಿಕ ವೈದ್ಯಪದ್ಧತಿಯ ಸಹಾಯ ತೆಕ್ಕೊಳ್ತರೂ
  • ಪ್ರಕೃತಿ ಚಿಕಿತ್ಸೆಯ ಕೆಲವು ಅಂಗಂಗೊ ಈ ಸಮಸ್ಯೆಯ ಗುಣ ಮಾಡ್ಲೆ ಸಹಾಯ ಮಾಡ್ತು
  • ಆಕ್ಯುಪಂಕ್ಚರ್ ಚಿಕಿತ್ಸೆ [ಮುಖ್ಯವಾದ್ದು]
  • ಯೋಗ ಚಿಕಿತ್ಸೆ [ಮುಖ್ಯವಾದ್ದು]
  • ಉಪವಾಸ ಚಿಕಿತ್ಸೆ & ಆಹಾರ ಚಿಕಿತ್ಸೆ
  • ಆಕ್ಯುಪ್ರೆಶರ್ ಮತ್ತೆ ಮಸಾಜ್ ಚಿಕಿತ್ಸೆ
  • ವರ್ಣ ಚಿಕಿತ್ಸೆ
  • ಅಲ್ಲದ್ದೆ ಆಯುರ್ವೇದ ಮತ್ತೆ ಹೋಮಿಯೋಪತಿಲಿ ಕೂಡ ಮದ್ದು ಇದ್ದು.
  • ಈ ಸಮಸ್ಯೆ ಇದ್ದೊರಿಂಗೆ ಕೆಲವು ಸರ್ತಿ ಸಣ್ಣ ಕಾರಣ ಸಾಕಾವ್ತು ಮೈಗ್ರೇನ್ ಶುರು ಅಪ್ಪಲೆ ಬೆಶಿಲು,ಶೀತಗಾಳಿ,ಆಹಾರಲ್ಲಿ ಬದಲಾವಣೆ,ಹಶು,ಜೀರ್ಣ ಸಮಸ್ಯೆ,ಮಾನಸಿಕ ಒತ್ತಡ,ದುಃಖ ಹೀಂಗೆ ಬೇರೆ ಬೇರೆ ಕಾರಣಂಗೊ ಇರ್ತು. ಹೀಂಗಿದ್ದ ಸಂದರ್ಭಲ್ಲಿ ನಾವು ಸಾಧ್ಯ ಆದಷ್ಟು ನವಗೆ ಆಗದ್ದೆ ಬಪ್ಪ ವಿಷಯಂಗಳಿಂದ ದೂರ ಇರೆಕಾದ್ದು ತುಂಬಾ ಮುಖ್ಯ.

-ನಿಂಗಳ

ಸುವರ್ಣಿನೀ ಕೊಣಲೆ

10 thoughts on “ಮೈಗ್ರೇನ್[Migraine]

  1. ಉಪವಾಸ ಚಿಕಿತ್ಸೆ & ಆಹಾರ ಚಿಕಿತ್ಸೆ — ಹೆಳೀದರೆ ಏನು

    1. ಉಪವಾಸ ಚಿಕಿತ್ಸೆಯ ಬಗ್ಗೆ ಈ ಮೊದಲೇ ಬೈಲಿಲ್ಲಿ ಶುದ್ದಿ ಬೈಂದು, ಈ ಸಂಕೋಲೆಯ ಒತ್ತಿ ನೋಡಿ https://oppanna.com/arogya/%E0%B2%89%E0%B2%AA%E0%B2%B5%E0%B2%BE%E0%B2%B8-%E0%B2%9A%E0%B2%BF%E0%B2%95%E0%B2%BF%E0%B2%A4%E0%B3%8D%E0%B2%B8%E0%B3%86

      ಆಹಾರ ಚಿಕಿತ್ಸೆ ಹೇಳಿರೆ, ಯಾವುದೇ ಸಮಸ್ಯೆಗೆ ಯಾವ ರೀತಿಯ ಆಹಾರ ಕೊಡೆಕ್ಕು ಹೇಳಿ ತೀರ್ಮಾನ ಮಾಡಿ, ಆ ರೀತಿಯ diet chart ತಯಾರು ಮಾಡಿ ಅದರ ಪ್ರಕಾರ ನಮ್ಮ ಆಹಾರ ಪದ್ಧತಿಯ ಬದಲಾಯ್ಸುದು.

  2. ಮೈಗ್ರೇನ್ ತಲೆ ಬೇನೆ ಬಗ್ಗೆ ಒಳ್ಳೆ ಮಾಹಿತಿ.
    ಲಕ್ಷಣ, ನಿವಾರಣೆ ಉಪಾಯಂಗೊ ಕೊಟ್ಟದು ಲಾಯಿಕ ಆಯಿದು. ಧನ್ಯವಾದಂಗೊ

  3. ಒೞೆ ಮಾಹಿತಿ ಡಾಗುಟ್ರಕ್ಕಾ.
    ಎನ್ನ ಸಹೋದ್ಯೋಗಿ ಮಗ್ರೇನ್ ನ ಬೇನೆ ಅನುಭವಿಸೊದರ ನೋಡಿತ್ತಿದ್ದೆ.ಅವನೂ ಎಲ್ಲಾ ತರದ ಮದ್ದೂ ಪ್ರಯೋಗ ಮಾಡಿ ಸಾಕಾಗಿ,ಕಡೆ೦ಗೆ ‘ವಿಪಶನ’ ಶಿಬಿರಲ್ಲಿ ರಜಾ ಪ್ರಯೋಜನ ಪಡದ್ದ°.

  4. ಬೆಣಚ್ಚು ಕಾಣುತ್ತ ಹಾಂಗಿರುತ್ತ ತಲೆಬೇನೆಗೆ ಬೆಣಚ್ಚು ಹಾಕಿದ ಲೇಖನ. ಒಳ್ಳೆ ಮಾಹಿತಿ ಕೊಟ್ಟಿದಿ. ಧನ್ಯವಾದಂಗೊ.

  5. ಅಕ್ಕೋ, ಒಳ್ಳೆ ಮಾಹಿತಿ ಕೊಟ್ಟಿದಿ,, ತಲೆಬೇನೆಯ ಕಷ್ಟ ಅನುಭವಿಸಿದವಂಗೇ ಗೊಂತು ಅಲ್ಲದಾ,, 🙂 ಸಂಗ್ರಹಯೋಗ್ಯ ಸಂಚಿಕೆ ಕೊಟ್ಟದಕ್ಕೆ ಧನ್ಯವಾದಂಗೋ! ಹಿಂಗಿಪ್ಪ “ತಲೆಬೇನೆಗೋ” ಇನ್ನೂ ಬರಳಿ! 😉

    1. ಓಯ್, ಶಾಸ್ತ್ರೀಯ ಸಂಗೀತ ಕೇಳಿದರೆ ಬಪ್ಪ ತಲೆಬೇನೆ ಬೇರೆ. ಅದು ಅನಾಸಕ್ತಿಯ ತಲೆಬೇನೆ. ಮೈಗ್ರೇನ್ ಅಲ್ಲ… ಹ ಹ ಹ…… ಃ)

  6. ಅರೆತಲೆಬೇನೆಯ ಬಗ್ಗೆ ವಿವರಿಸಿದ್ದಕ್ಕೆ ಧನ್ಯವಾದ.ಇದಕ್ಕೆ ಮನೆ ಮದ್ದು ಎಂತಾದರೂ ಇದ್ದೊ ?

    1. ಮನೆಮದ್ದುಗೊ ಇದ್ದು. ಇರುಳು ಕೊತ್ತಂಬರಿಯ ನೀರಿಲ್ಲಿ ಹಾಕಿ ಮಡುಗಿ, ಮರುದಿನ ಉದಿಯಪ್ಪಗ ಖಾಲಿ ಹೊಟ್ಟೆಲಿ ಆ ನೀರಿನ ಕುಡುದರೆ ಈ ಸಮಸ್ಯೆಗೆ ಪರಿಹಾರ ಸಿಕ್ಕುತ್ತು. ಇನ್ನೂ ಹೆಚ್ಚಿನ ವಿಷಯವ ಸಂಗ್ರಹ ಮಾಡಿ ತಿಳ್ಸುತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×