Euthanasia-ದಯಾಮರಣ : ಬೇಕಾ? ಬೇಡದಾ?

March 7, 2011 ರ 10:43 pmಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮನುಷ್ಯನ ಜೀವನಲ್ಲಿ ಎಲ್ಲಕ್ಕಿಂತ ಮುಖ್ಯವಾದ್ದು ಯಾವುದು? ಹೀಂಗಿದ್ದ ಒಂದು ಪ್ರಶ್ನೆ ಕೇಳೀರೆ ಒಬ್ಬೊಬ್ಬಂದು ಒಂದೊಂದು ಉತ್ತರ ಬಕ್ಕು. ಕೆಲವು ಜೆನ ಮೌಲ್ಯಂಗೊಕ್ಕೆ ಹೆಚ್ಚು ಬೆಲೆ ಕೊಟ್ಟರೆ ಇನ್ನು ಕೆಲವು ಜೆನ ಪೈಸೆಗೆ ಆದ್ಯತೆ ಕೊಡುಗು. ಎಲ್ಲವೂ ಅವರವರ ಭಾವಕ್ಕೆ ಬಿಟ್ಟದು ಸುಮ್ಮನಿಪ್ಪಲಕ್ಕು, ಎಲ್ಲಿಯವರೆಗೆ ಅದು ಸಮಾಜಕ್ಕೆ ತೊಂದರೆ ಉಂಟುಮಾಡ್ತಿಲ್ಲೆಯೋ ಅಲ್ಲಿಯವರೆಗೆ. ಒಬ್ಬ ತನ್ನ ಸಂತೋಷಕ್ಕೆ ಇನ್ನೊಬ್ಬನ ಕೊಲೆ ಮಾಡ್ತರೆ ’ಅವರವರ ಭಾವ…’ ಹೇಳಿ ಕೂದರೆ ಸರಿಯಾ? ಎನಗೆ ಸರಿ ಕಂಡದು ನಿಂಗೊಗೆ ತಪ್ಪು ಅನ್ಸುಗು, ನಿಂಗೊ ಸರಿ ಹೇಳ್ತ ಕೆಲವು ಎನ್ನ ಪ್ರಕಾರ ಸರಿ ಅಲ್ಲದ್ದೆ ಇಕ್ಕು. ಹೀಂಗಿಪ್ಪಗ ಇಂದು ಕೋರ್ಟು ಕೊಟ್ಟ ಒಂದು ತೀರ್ಪಿನ ಬಗ್ಗೆ ಚರ್ಚೆ ನಡದರೆ ಹೇಂಗೆ ಹೇಳ್ತ ಆಲೋಚನೆ ಬಂತು.

‘ಅರುಣಾ ಶಾನುಭಾಗ್’ ಹೇಳ್ತ ನರ್ಸ್ ಒಂದರ ಜೀವನದ ಬಗ್ಗೆ…..ಸುಮಾರು 37 ವರ್ಷದ ಹಿಂದೆ ಆದ ಘಟನೆ, ಮುಂಬೈಯ ಒಂದು ಆಸ್ಪತ್ರೆಲಿ ನರ್ಸ್ ಆಗಿ ಕೆಲಸ ಮಾಡ್ತಾ ಇತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಕೂಸು. ನಿಷ್ಠೆಲಿ ರೋಗಿಗಳ ಸೇವೆ ಮಾಡಿಗೊಂಡು ಇತ್ತಿದ್ದು. ಒಬ್ಬ ಡಾಕ್ಟ್ರನ ಒಟ್ಟಿಂಗೆ ಮದುವೆಯೂ ನಿಶ್ಚಯ ಆಗಿತ್ತಿದ್ದು. ಯಾವುದೋ ದ್ವೇಷಲ್ಲಿ ಅದೇ ಆಸ್ಪತ್ರೆಯ ಒಬ್ಬ ವಾರ್ಡ್ ಬಾಯ್ ಒಂದು ದಿನ ಇರುಳು ಅದರಮೇಲೆ ಅತ್ಯಾಚಾರ ಮತ್ತೆ ಕೊಲೆಯ ಪ್ರಯತ್ನ ಮಾಡಿದ. ತಪ್ಪು ಮಾಡಿದ ಪಾಪಿಗೆ ಏಳು ವರ್ಷದ ಜೈಲು ಶಿಕ್ಷೆ ಆತಡ… ಆದರೆ ಉಸಿರುಗಟ್ಟುಸುಲೆ ಪ್ರಯತ್ನ ಮಾಡಿ ಸಂಕೋಲೆಂದ ಕೊರಳು ಒತ್ತುವಗ ಉಂಟಾದ ಪೆಟ್ಟಿಂದಾಗಿ ಆ ಕೂಸಿನ ಇಡೀ ಜೀವನ ಇದ್ದೂ ಇಲ್ಲದ್ದ ಹಾಂಗೆ ಆತು. ಇಂದಿಂಗೂ ಅದು ಆ ಆಸ್ಪತ್ರೆಯ ಒಂದು ಕೋಣೆಲಿ ಇದ್ದು..ಆದರೂ ಇಲ್ಲೆ :( ಅಲ್ಲಿಯಾಣ ಜೆನಂಗೊ ಅದರ ಲಾಯ್ಕಲ್ಲಿ ನೋಡಿಗೊಳ್ತಾ ಇದ್ದವಡ ಹೇಳುದೇ ಸಮಾಧಾನದ ವಿಷಯ. ಎಷ್ಟು ಪ್ರೀತಿಕೊಟ್ಟರೂ ಆರೈಕೆ ಮಾಡಿರೂ ಅದು ಮೊದಲಾಣ ಹಾಂಗೆ ಆಗ ಹೇಳುದು ವಾಸ್ತವ :(

ಮೂವತ್ತೇಳು ವರ್ಷಂದ ಹಾಸಿಗೆಲಿಯೇ ಇಪ್ಪ ಆ ಜೀವ…ತನ್ನ ಕೆಲಸ ಮಾಡಿಗೊಂಬಲೆ ಎಡಿಯದ್ದೆ, ಮಾತು ಇಲ್ಲದ್ದೆ, ಎದ್ದು ಓಡಾಡುಲೆ ಎಡಿಯದ್ದೆ ಬದುಕಿ(?)ದ್ದು. ಇದು ಜೀವನವಾ? ಹೇಳ್ತ ಪ್ರಶ್ನೆ ಸುಮಾರು ಜೆನಕ್ಕೆ ಕಾಡುಗು…ಅದರ ಒಂದು ಸ್ನೇಹಿತೆಗೂ ಹಾಂಗೇ ಅನ್ಸಿತ್ತು. ಹೀಂಗಿದ್ದ ಜೀವನಂದ ಸಾವೇ ಒಳ್ಳೆದು ಹೇಳಿ ಅನ್ಸಿತ್ತು ಅದಕ್ಕೆ. ಆದರೆ ಹಾಂಗೆ ಒಬ್ಬ ವ್ಯಕ್ತಿಯ ಕೊಲ್ಲುಲೆ ಎಡಿಯನ್ನೇ. ಹಾಂಗಾಗಿ ಕಾನೂನು ರೀತ್ಯಾ ದಯಾಮರಣ (euthanasia) ಸಿಕ್ಕುಗಾ ಆ ಜೀವಕ್ಕೆ ಹೇಳಿ ನ್ಯಾಯಾಲಯಲ್ಲಿ ಕೇಳಿದವ್ವು. ದಯೆ ಇದ್ದರೂ ಕೂಡ ಮರಣ ’ಮರಣ’ವೇ ಅಲ್ಲದಾ? ಒಂದು ರೀತಿಲಿ ಕೊಲೆ. ಅದು ತಪ್ಪಲ್ಲದಾ? ಆದರೆ ಜೀವ ಮಾಂತ್ರ ಇಪ್ಪ ಜೀವನಂದ ಮರಣವೇ ಸುಖ ಅಲ್ಲದಾ? ಹೀಂಗೆಲ್ಲ ಜಿಜ್ಞಾಸೆಗೊ..ವಾದ ವಿವಾದಂಗೊ. ಎಲ್ಲರಿಂಗೂ ಅದು ತಪ್ಪು ಅನ್ಸುತ್ತು ಆದರೆ ಕೆಲವು ಸಂದರ್ಭಲ್ಲಿ ಸರಿ ಹೇಳಿ ಅನ್ಸುತ್ತು. ಆಲೋಚನೆ ಮಾಡ್ತಾ ಹೋದಹಾಂಗೆ ನಾವೇ ಗೊಂದಲಲ್ಲಿ ಸಿಕ್ಕಿಹಾಕಿಗೊಳ್ತು.

ಇದೇ ವಿಷಯದ ಬಗ್ಗೆ ಒಂದು ಸಿನೆಮಾ ಮಾಡಿದ್ದವು ಹಿಂದಿ ಭಾಷೆಲಿ. ಥಿಯೇಟರಿಲ್ಲಿ ಹೆಚ್ಚು ಓಡಿದ್ದಿಲ್ಲೆ, ನಿರೀಕ್ಷೆಯಷ್ಟು ಯಶಸ್ಸು ಸಿಕ್ಕಿದ್ದಿಲ್ಲೆ. ಆದರೆ ಆ ಸಿನೆಮಾ ನೋಡಿದ ವ್ಯಕ್ತಿ ಒಂದರಿ ಆಲೋಚನೆ ಮಾಡೆಕಾದ ಸಾಮಾಜಿಕ ಕಳಕಳಿಯ ಒಂದು ವಿಚಾರ ಇಪ್ಪದಪ್ಪು. ಎನಗೆ ಇಷ್ಟ ಆತು ಈ ಸಿನೆಮಾ. ’ಗುಜಾರಿಶ್’ ಹೇಳ್ತ ಸಿನೆಮಾ ಸಾಧ್ಯ ಆದರೆ ನೋಡಿ. ಇದರಲ್ಲಿ ಒಬ್ಬ ವ್ಯಕ್ತಿ ಕೊರಳಿಂದ ಕೆಳ ಶಕ್ತಿ ಇಲ್ಲದ್ದೆ (paralysis) ಇರ್ತ. ಅವನೂ ದಯಾಮರಣಕ್ಕೆ ಅನುಮತಿ ಬೇಕು ಹೇಳಿ ಕೇಳ್ತ. ಆದರೆ ಕೋರ್ಟು ಅನುಮತಿ ಕೊಡ್ತಿಲ್ಲೆ. ಆದರೆ ಅವನ ತುಂಬಾ ಲಾಯ್ಕಕ್ಕೆ ಅಷ್ಟೂ ವರ್ಷ ನೋಡಿಗೊಂಡ ಅವನ ನರ್ಸ್ ಅವಂಗೆ ದಯಾಮರಣವ ದಯಪಾಲಿಸುತ್ತು…. ಮನಸ್ಸಿಂಗೆ ತಟ್ಟುತ್ತು ಈ ಕಥೆ  ‘ಅರುಣಾ ಶಾನುಭಾಗ್’ ನ ಜೀವನದ ಕಥೆಯ ಹಾಂಗೆ.

ಸುಮಾರು ಸಮಯಂದ ಬಾಕಿ ಇದ್ದ ಅರುಣಾ ಶಾನುಭಾಗ್ ನ ಕೇಸಿಂಗೆ ಇಂದು ಕೋರ್ಟು ಮುಕ್ತಿ ಕೊಟ್ಟತ್ತು. ಕೋರ್ಟು ಇಂದು ಕೊಟ್ಟ ತೀರ್ಪು ಹೀಂಗಿತ್ತು… ದಯಾಮರಣಕ್ಕೆ ನಮ್ಮ ದೇಶಲ್ಲಿ ಅನುಮತಿ ಇಲ್ಲೆ. ಆದರೆ ಅರುಣಂಗೆ passive euthanasia ಕೊಡ್ಲಕ್ಕು ಹೇಳಿ ಕೋರ್ಟು ಅನುಮತಿ ಕೊಟ್ಟಿದು. ಆದರೆ active euthanasia ಕೊಡ್ಲೆ ಅನುಮತಿ ಇಲ್ಲೆ. ಈಗ ಇಲ್ಲಿ passive euthanasia ಮತ್ತೆ  active euthanasia ಕ್ಕೆ ಇಪ್ಪ ವ್ಯತ್ಯಾಸ ಎಂತರ?

 • Active euthanasia ಹೇಳಿರೆ ದಯಾಮರಣಕ್ಕೆ ಒಳಪಡುವ ವ್ಯಕ್ತಿಯ ಚುಚ್ಚುಮದ್ದು ಕೊಟ್ಟು ಅಥವಾ ಇನ್ನು ಯಾವುದೇ ವಿಧಾನಂದ ಕೊಲ್ಲುದು.
 • Passive euthanasia ಹೇಳಿರೆ ಆ ವ್ಯಕ್ತಿಗೆ ಬದುಕ್ಕುಲೆ ಅವಶ್ಯಕವಾದ ವಸ್ತುಗಳ ಪೂರೈಕೆ ನಿಲ್ಸುದು. ಉದಾಹರಣೆಗೆ ಕೆಲವು ಅಗತ್ಯ ಇಪ್ಪ ಮದ್ದುಗಳ ಕೊಡದ್ದೆ ಇಪ್ಪದು, ಅಥವಾ ಉಸಿರಾಟಕ್ಕೆ ಹಾಕಿಪ್ಪ ಆಮ್ಲಜನಕವ ನಿಲ್ಲುಸುದು ಇತ್ಯಾದಿ.

ಹೀಂಗಿದ್ದ ಒಂದು ತೀರ್ಪು ಬಂದಪ್ಪಗ ಈಗ ಮತ್ತೆ ಚರ್ಚೆಗೊ ಗೊಂದಲಂಗೊ ವಿರೋಧಂಗೊ ಶುರು ಆಯ್ದು. ಒಂದೋ ಎರಡೋ ದೇಶಂಗಳಲ್ಲಿ ಅದರ ಕಾನೂನು ಸಮ್ಮತ ಹೇಳಿ ಮಾಡಿದರೂ ಕೂಡ ಪ್ರಪಂಚದ ಹೆಚ್ಚಿನ ಜೆನ ಇದರ ವಿರೋಧಿಸುತ್ತವು. ಒಂದು ವಾದ ಎಂತರ ಹೇಳಿರೆ ಜೀವಚ್ಛವ ಆಗಿ ಇಪ್ಪದಕ್ಕಿಂತ ಸಾವದೇ ಒಳ್ಳೆದು. ಆದರೆ ಸಾವು ಮನುಷ್ಯನ ಕೈಲಿದ್ದ? ಅದು ದೇವರ ಇಚ್ಛೆ, ಹಾಂಗಾಗಿ ಸಾವು ಬಂದಪ್ಪಗಳೇ ಸಾಯಕು ಹೇಳ್ತದು ಇನ್ನೊಂದು ವಾದ. ಇದರಲ್ಲಿ ಯಾವುದು ಸರಿ? ಒಂದುವೇಳೆ ಅಂತಹ ಅನಿವಾರ್ಯ ಸಂದರ್ಭಲ್ಲಿ, ವ್ಯಕ್ತಿ ಬದುಕ್ಕುದಕ್ಕಿಂತ ಸಾವದೇ ಮೇಲು ಹೇಳ್ತ ಸ್ಥಿತಿಲಿ ಇಪ್ಪಗ ದಯಾಮರಣ ಕೊಡ್ಲಕ್ಕು ಹೇಳಿ ಕಾನೂನು ಮಾಡಿರೆ ಅದು ದುರ್ಬಳಕೆ ಆಗದಾ? ಎಲ್ಲಾ ಕಾನೂನುಗಳನ್ನೂ ದುರ್ಬಳಕೆ ಮಾಡ್ತ ಜೆನಂಗೊ ಇಪ್ಪಗ ಒಬ್ಬ ವ್ಯಕ್ತಿಯ ಕೊಲ್ಲುಲೆ ಕಾನೂನು ಒಪ್ಪಿಗೆ ಕೊಡ್ತು ಹೇಳಿ ಆದರೆ ಸಂದರ್ಭವ ಅದಕ್ಕೆ ಬೇಕಾದ ಹಾಂಗೆ ಬದಲಾವಣೆ ಮಾಡುದು, ಅದರಿಂದಾಗಿ ಲಾಭ ಪಡಕ್ಕೊಂಬಂತಹ ಅಪರಾಧಂಗೊ ಆಗ ಹೇಳಿ ಯಾವ ಧೈರ್ಯ? ಹಾಂಗಾಗಿ ಅದು ದುರ್ಬಳಕೆ ಅಪ್ಪ ಸಾಧ್ಯತೆಗಳೇ ಹೆಚ್ಚು. ಆದರೆ ದಯಾಮರಣ ಸಾಧ್ಯವೇ ಇಲ್ಲೆ ಹೇಳಿ ಆದರೆ ಕೆಲವು ಸಂದರ್ಭಂಗಳಲ್ಲಿ, ಕೆಲವು ಸರ್ತಿ ಒಬ್ಬ ವ್ಯಕ್ತಿಯ ಕರುಣಾಜನಕ ಸ್ಥಿತಿ ನೋಡುವಗ…ಆ ಸ್ಥಿತಿಲಿ ಜೀವಂತ ಇಪ್ಪದರ ನೋಡುವ ಕಷ್ಟ ಬೇಕಾ? ಆ ಬದುಕೂ ಒಂದು ಬದುಕಾ? ಬದಲಿಂಗೆ ಮುಕ್ತಿ ಸಿಕ್ಕಿರೆ ಆ ಜೀವಕ್ಕೆ..? ಈ ಒಂದು ಆಲೋಚನೆಯೂ ಬತ್ತು ಮನಸ್ಸಿಂಗೆ. ಆದರೆ…ಒಬ್ಬ ವ್ಯಕ್ತಿಯ ಸಾವು ಬಾರದ್ದೆ ಕೊಲ್ಲುದು ಸರಿಯಾ?ಕಾರಣ ಏನೇ ಇದ್ದರೂ ಕೂಡ ಅವರವರ ಕರ್ಮಫಲಕ್ಕೆ ಅನುಸಾರ ಬದುಕು-ಬವಣೆ-ಸಾವು….

ಯಾವುದು ಸರಿ ಯಾವುದು ತಪ್ಪು ಹೇಳ್ತ ಗೊಂದಲಂಗಳೊಟ್ಟಿಂಗೆ ಬೈಲಿಲ್ಲಿ ಈ ಬಗ್ಗೆ ಒಂದು ಆರೋಗ್ಯಕರ ಚರ್ಚೆ ಆಗಲಿ ಹೇಳ್ತ ಉದ್ದೇಶದೊಟ್ಟಿಂಗೆ ನಿಂಗಳ ಮುಂದೆ ಈ ವಿಷಯವ ಮಡುಗಿದ್ದೆ.

Euthanasia = good death , eu=good, thanatos=death.  ಇದು ಗ್ರೀಕ್ ಭಾಷೆಂದ ಬಂದ ಶಬ್ದ.

-ನಿಂಗಳ

ಸುವರ್ಣಿನೀ ಕೊಣಲೆ

Euthanasia-ದಯಾಮರಣ : ಬೇಕಾ? ಬೇಡದಾ?, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. AnandaSubba

  ದಯಾ ಮರಣ … ಇದು ಬೇಡ ಹೇಳಿ ಎನ್ನ ಆಭಿಪ್ರಾಯ. ಎಂತ ಹೇಳಿರೆ ಈಗಾಣ ಯುವ ಜನಾಂಗ ಉಪಯೋಗಕ್ಕೆ ಬಾರದ್ದವರ ಎಲ್ಲರ ಕೊಲ್ಳುಗು. ಈ ಕಾನೂನಿನ ಉಪಯೋಗ ದಿಂದ ದುರುಪಯೋಗವೇ ಜಾಸ್ತಿ ಅಕ್ಕೂ

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಎಲಿಪಾಷಾಣ ಇದ್ದು , ಸಿಕ್ಕುತ್ತು ಹೇಳಿ ನೆರೆಕರೆ ಖಂಡು ನಾಯಿ ಬತ್ತು ಹೇಳಿ ಕಂಡ ಕಂಡಲ್ಲಿ ನಾವು ಮಡುಗುತ್ತೋ ಎಂತ?!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿವೇಣಿಯಕ್ಕ°ಬಟ್ಟಮಾವ°ಬಂಡಾಡಿ ಅಜ್ಜಿಅನುಶ್ರೀ ಬಂಡಾಡಿಕೊಳಚ್ಚಿಪ್ಪು ಬಾವಮಾಷ್ಟ್ರುಮಾವ°ಪಟಿಕಲ್ಲಪ್ಪಚ್ಚಿಕಳಾಯಿ ಗೀತತ್ತೆಶರ್ಮಪ್ಪಚ್ಚಿನೀರ್ಕಜೆ ಮಹೇಶಎರುಂಬು ಅಪ್ಪಚ್ಚಿಶುದ್ದಿಕ್ಕಾರ°ಉಡುಪುಮೂಲೆ ಅಪ್ಪಚ್ಚಿಡಾಮಹೇಶಣ್ಣಶೀಲಾಲಕ್ಷ್ಮೀ ಕಾಸರಗೋಡುಯೇನಂಕೂಡ್ಳು ಅಣ್ಣಶ್ರೀಅಕ್ಕ°ಶಾ...ರೀವೇಣೂರಣ್ಣಅನು ಉಡುಪುಮೂಲೆಬೋಸ ಬಾವಕೆದೂರು ಡಾಕ್ಟ್ರುಬಾವ°ತೆಕ್ಕುಂಜ ಕುಮಾರ ಮಾವ°ಮಾಲಕ್ಕ°ಅಕ್ಷರದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ