ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 2

ಬೈಲಿಂಗೆ ನಮಸ್ಕಾರ :)

ನಮ್ಮ ಮನಸ್ಸಿಂಗೆ ಈ ಎಲ್ಲ ಕೆಟ್ಟ ಆಲೋಚನೆಗಳ ಭಾರವ ತಡಕ್ಕೊಂಬಲೆ ಎಡಿತ್ತಿಲ್ಲೆ ಹೇಳಿ ಅಪ್ಪಗ ಅದು ಆ ಎಲ್ಲದರ ಯಾವುದಾದರೂ ಒಂದು ಅಂಗದ ಮೇಲೆ ಆರೋಪ ಮಾಡ್ತು. ಅದುವೇ ರೋಗ,
ಹೊಟ್ಟೆಗೆ ಬಂದರೆ ಗೇಸು, ತಲೆಗೆ ಬಂದರೆ ಮೈಗ್ರೆನು, ಎದೆಗೆ ಬಂದರೆ ಹಾರ್ಟು..!!

ಹೇಳಿ ನಾವು ಕಳುದ ಸರ್ತಿ ಮಾತಾಡಿಯೊಂಡಿದು.

ಅಂಬಗ ಇದರ ಸರಿ ಮಾಡುದು ಹೇಂಗೆ? ಹೇಳಿಪ್ಪ ಚಿಂತನೆಲಿ ನವಗೆ ಅನುಭವಕ್ಕೆ ಬಂದದು ಇಷ್ಟು. 🙂

 • ನಮ್ಮ ಮನಸ್ಸಿನ ಸ್ಥಿತಿ ನಮ್ಮ ಯೋಚನೆಗಳ ಪ್ರತಿನಿಧಿಸುತ್ತು:

  ನಮ್ಮ ಮನಸ್ಸು ಒಂದು ರೇಡಿಯೂ ಇದ್ದ ಹಾಂಗೆ, ಒಳ್ಳೆ ಆಲೋಚನೆ ನಾವು ಮಾಡಿತ್ತು ಹೇಳಿ ಆದರೆ ಆ ಒಳ್ಳೆ ಯೋಚನೆ ತರಂಗಂಗಳ ರೂಪಲ್ಲಿ ನಮ್ಮ ದೇಹಂದ ಹೆರಟು ವಿಶ್ವವ ಸೇರುತ್ತು – ಪ್ರಕೃತಿಲಿ ಒಂದಾವುತ್ತು.
  ನಾವು ಇನ್ನೊಬ್ಬಂಗೆ ಎಂತ ಕೊಡ್ತೋ ಅದೇ ನವಗೆ ಸಿಕ್ಕುತ್ತು. ಕೆಟ್ಟದ್ದು ಕೆಟ್ಟದರ ಆಕರ್ಶಿಸಿದರೆ, ಒಳ್ಳೆದು ಒಳ್ಳೆದನ್ನೆ ಆಕರ್ಶಿಸುತ್ತು, ಹಾಂಗಾಗಿ ನವಗೆ ಒಳ್ಳೆ ಭಾವನೆಗಳೇ ಉಂಟಾವುತ್ತು.

  ಇದರ ಈಗಾಣ ವಿಜ್ಞಾನಿಗೊ,
  Like attracts like :), The Law of Attraction.
  ಹೇಳ್ತವು.
  ಗುರುತ್ವಾಕರ್ಷಣ ಸಿಧ್ಧಾಂತದ ಹಾಂಗೆ ಇದೂ ಒಂದು, ನಾವು ಯಾವ Energyಯ ಕಳುಸುತ್ತೋ ಅದೇ ನವಗೆ ಸಿಕ್ಕುತ್ತು 🙂

  ಒಳ್ಳೊಳ್ಳೆ ಆಲೋಚನೆಗೊ ಬತ್ತಾ ಇದ್ದು ಹೇಳಿರೆ ನಮ್ಮ ಮನಸ್ಸು ಸರಿಯಾದ ದಾರಿಲಿ ಇದ್ದು ಹೇಳಿ ಅರ್ಥ. ಅಷ್ಟಪ್ಪಗ ಖುಶಿ ಅದಾಗಿಯೇ ಆವುತ್ತು. ಮನಸ್ಸಿಂದ ಹೆರಟ ಶಾಂತಿಯ ಪ್ರೀತಿಯ ಕಿರಣಂಗೊ ಮತ್ತೆ ಹಿಂದೆ ತಿರುಗಿ ಬಂದರೆ ಮಾತ್ರ ನವಗೆ ಶಾಂತಿ ಪ್ರೀತಿಯ ಭಾವನೆಗೊ ಬಕ್ಕಷ್ಟೆ. ಮನಸ್ಸಿಲ್ಲಿ ಕೆಟ್ಟ ಆಲೋಚನೆ ಮಡಿಕ್ಕೊಂಡು ಖುಶಿಯಾಗಿಪ್ಪಲೆ ಸಾದ್ಯವೆ ಇಲ್ಲೆ. ಹಾಂಗಾಗಿ ಖುಶಿಯಾಗಿ ಇರೆಕು ಹೇಳಿ ಆದರೆ, ವ್ಯಾಧಿಗಳ ಕಡಮ್ಮೆ ಮಾಡೆಕು ಹೇಳಿ ಆದರೆ ಒಳ್ಳೆ ಯೋಚನೆಗಳನ್ನೇ ಮಾಡೆಕು. ಬೇರೆ ದಾರಿ ಇಲ್ಲೆ 🙂

 • ನಮ್ಮ ದೇಹದ ಆಕಾರ – ಚಲನೆ ಮತ್ತು ಉಸಿರಾಟ ನಮ್ಮ ಮನಸ್ಸಿನ ಸ್ಥಿತಿಯ ಹೇಳ್ತು:

  ನಮ್ಮ ಮನಸ್ಸು ದೇಹದ ಕಣ ಕಣಲ್ಲಿಯೂ ಇಪ್ಪ ಕಾರಣ, ಮನಸ್ಸು ಜಾಗೃತ ಅಪ್ಪಗ ದೇಹದ ಕಣ ಕಣವೂ ಸ್ಪಂದಿಸುತ್ತು.
  ತುಂಬ ಖುಶಿಯೋ ಆಶ್ಚರ್ಯವೋ ಅಪ್ಪಗ ಬೆನ್ನು ಸರ್ತ ಆವುತ್ತು. ತುಂಬ ಏಕಾಗ್ರತೆ ಬೇಕಾದ ಕೆಲಸ ಮಾಡುವಾಗ (ಸೂಜಿಗೆ ನೂಲು ಹಾಕುವಾಗಳೂ ಮಣ್ಣೋ ಗಮನ್ಸಿಯರೆ) ಉಸಿರು ನಿಲ್ಲುತ್ತು, ಕೋಪ ಬಂದಪ್ಪಗ ಉಸಿರು ಜೋರಾವುತ್ತು.. ಮುಂತಾದ ಗುಣಂಗಳ ನಾವು ದಿನ ನಿತ್ಯ ನೋಡ್ತು.
  ಬೆನ್ನು ಬಗ್ಗುಸಿ ಕೂದು ಪಾಠ ಕೇಳುವಾಗ ಒರಕ್ಕು ಲಾಯಿಕ ಬಕ್ಕು ಮಾಣಿಗೆ. ಅದೇ ರುದ್ರ ಹೇಳುವಾಗ ಬೆನ್ನು ಸರ್ತ, ಬಗ್ಗುಸಿರೆ ಹೇಳುಲೇ ಎಡಿಯ. 😉

  ಉಸುಲು ಮತ್ತೆ ಯೋಚನೆ ಒಂದೆ ನಾಣ್ಯದ ಎರಡು ಮೋರೆಗೊ..!!

ಉಸಿರಾಟ ಸರಿ ಮಾಡಿಯೊಂಬದರ ಮೂಲಕ ಯೋಚನೆಯ ಹಿಡುದು ಮಡುಗಿರೆ – ಆಸನದ ಮೂಲಕ ಮನಸ್ಸಿನ ಹಿಡಿತಲ್ಲಿ ಮಡುಗುಲೆ ಎಡಿಗು.

ಆಸನ ಮತ್ತೆ ಉಸಿರಾಟ ಎರಡೂ ಸರಿಯಾಗಿ ಸೇರಿ
ಮನಸ್ಸು-ದೇಹ-ಬುಧ್ಧಿ ಒಂದುಕಡೆ ಆದರೆ ಅದೇ ಧ್ಯಾನ…!!

***
ಅಂಬಗ ಸರಿಯಾದ ಉಸಿರಾಟದ ಕ್ರಮ ಹೇಳಿರೆ ಹೇಂಗೆ?

ಉಸಿರಾಟ ಕ್ರಮವ ಮಕ್ಕಳಿಂದ ಕಲಿಯೆಕು.
ಉಸುಲು ತೆಕ್ಕೊಂಬಗ ನಮ ಹೃದಯ ಮತ್ತೆ ಹೊಟ್ಟೆಯ ನಡುವೆ ಇಪ್ಪ ಗೋಡೆಯ ಕೆಳ ನೂಕುತ್ತಾ, ಹೊಟ್ಟೆ ದೊಡ್ಡ ಆಯೆಕು.
ನಾವು ತೆಕ್ಕೊಂಡ ಉಸುಲು ಹೊಕ್ಕುಳಿನವರೆಗೆ ಹೋಗಿ ಬಂದರೆ ಸಾಲ, ಮತ್ತೂ ರಜಾ ಕೆಳ ಹೋಗಿ ಗುಪ್ತಾಂಗಂಗಳನ್ನೂ ಮುಟ್ಟಿ ಅದರ ವಿಸ್ತರಿಸುವ ಹಾಂಗೆ ಆಯೆಕು. ಅಷ್ಟಪ್ಪಗ ನಮ್ಮ ದೇಹ ಪೂರ್ತಿ ತುಂಬುತ್ತು.

ಉಸುಲು ಬಿಡ್ತಾ,
ಹೊಟ್ಟೆ-ಹೊಕ್ಕುಳ ಕೆಳಭಾಗ ಪೂರ್ತಿ ಖಾಲಿ ಮಾಡ್ತಾ ಹೊಟ್ಟೆಯ ಒಳ ಎಳಕ್ಕೊಂಡು ಗಾಳಿಯ ಹೆರ ಬಿಡೆಕು.

ಗಾಳಿಯ ಒಳ ತೆಕ್ಕೊಂಬ ಮತ್ತು ಹೆರ ಬಿಡುವ ಪ್ರಮಾಣ ಒಂದೇ ರೀತಿ ಇರೆಕು ಮತ್ತೆ,
ನಡು ನಡುಕೆ ತುಂಡಾಗದ್ದೆ – ಕುಂಭಕ ಇಲ್ಲದ್ದೆ ಇದ್ದರೆ ಒಳ್ಳೆದು
ಇದು ಉಸಿರಾಟ.

***
ನಮ್ಮ ದೇಹದ ಕ್ರಮ ಹೇಂಗಿರೆಕು?

ಆದಷ್ಟು ನೇರವಾಗಿ ಕೂರೆಕು. ಬೆನ್ನು ಬಗ್ಗುಸಿ ಇದ್ದರೆ ಮನಸ್ಸಿಂಗೆ ಬೇಜಾರಪ್ಪ ಭಾವನೆಗಳೆ ಬಕ್ಕು – ತುಂಬ ಎದೆ ಬಿಗುದು ಕೂಬದೂ ಸರಿ ಅಲ್ಲ, ಅದೆರಡರ ನಡೂಕಾಣ ಆಕಾರವೇ ಚೆಂದ. ಯಾವ ಕ್ರಮಲ್ಲಿ ಕಾಲು ಮಡುಗಿಯರೆ ಖುಶಿಯೋ ಹಾಂಗೆ ಕೂರೆಕು, ಚೆಕ್ಕನಕಾಲೆಟ್ಟಿ ಕೂಪದು ತುಂಬಾ ಒಳ್ಳೆದು. ಅಷ್ಟಪ್ಪಗ ಅದು ನಮ್ಮ ಮನಸ್ಸಿನ ಹಾರಾಟವನ್ನೂ ರಜ್ಜ ಕಮ್ಮಿ ಮಾಡ್ತು.

ಒಂದು ಉದಾಹರಣೆ ನೋಡುವೊ˚,
ಮಾಣಿ ಆಪೀಸಿಲ್ಲಿ ಸುಮ್ಮನೇ ಕೂದೋಂಡು ಫೈಲು ತಿರುಗಿಸಿಯೊಂಡು ಇರ್ತ˚ ಹೇಳಿ ಗ್ರೇಶುವೊ˚. ಬೆನ್ನು ಬಗ್ಗಿರೆ, ಕುರ್ಶಿಗೆ ಎರಗಿ ಕೂದೋಂಡು ಒರಕ್ಕು ತೂಗಿಯೋಂಡು ಅತ್ತಿತ್ತೆ ನೋಡಿಯೋಂಡಿರ್ತ˚. ಅದೇ ಹೊತ್ತಿಂಗೆ ಪರಿಚಯದ ಒಂದು ಚೆಂದದ ಕೂಸು ಬತ್ತು ಆಪೀಸಿಂಗೆ. ಎಂತ ಮಾಡುಗು ಮಾಣಿ? ಒಂದರಿಯಂಗೆ ಕಣ್ಣು ಬಿಟ್ಟು ಬೆನ್ನು ಕೊರಳು ತಲೆ ಎಲ್ಲ ಸರ್ತ ಮಾಡಿ ಕೂರುಗು. 😉
ತಲೆ ಚುರ್ಕಕ್ಕು ಮಾಣಿದು, ಹತ್ತರೆ ಆರಾರು ಸಂಶಯ ಕೇಳಿಯೊಂಡು ಬಂದರೆ ಕೂಡಲೇ ಉತ್ತರ ಹೇಳುಗು.. ರೈಸ್ಸುಗು ಮಾಣಿ.
.
.
.
ನೋಡೊ˚ ಅದೇ ಆ ಕೂಸು ರಜ್ಜ ಅತ್ತೆ ಹೋಗಲಿ,
“ಅಯ್ಯೋ” ಮತ್ತೆ ಅದೇ..!!
ಬೆನ್ನು ಮತ್ತೆ ಬಗ್ಗುತ್ತು. ಮತ್ತೆ ರಜ್ಜ ಹೊತ್ತಿಲ್ಲಿ ಒರಕ್ಕುತೂಗುಲೆ ಸುರು ಆವುತ್ತು.. “ಬೊಕ್ಕ ಮಲ್ಪುಗಯ.. ಇತ್ತೆ ಬೋಡ್ಚಿ” ಹೇಳುಲೆ ಸುರುಮಾಡುಗು  😉

ಅದಕ್ಕೇ.. ಬೆನ್ನು  ಕೊರಳು ತಲೆ ಒಟ್ಟಿಂಗೇ ಇರೆಕು. ಒಂದೇ ನೇರಲ್ಲಿ ಇರೆಕು. 😉
ಸ್ಥಿರವಾಗಿ ಇರೆಕು, ಕೂಪಲೆ ಖುಶಿ ಆಯೆಕು..!
ಮೈ ಕೈ ಬೇನೆ ಮಾಡಿಗೊಂಡು ಕೂಪದಲ್ಲ.
ಸರಿಯಾಗಿ ಕೂದರೆ ಅದೇ ಆಸನ. 🙂

***

ಆಗಳೇ ಹೇಳಿದಾಂಗೆ,

ನಮ್ಮ ಹೆಚ್ಚಿನ ರೋಗಂಗೊಕ್ಕೂ ನಮ್ಮ ಮನಸ್ಸೇ ಕಾರಣ.
ಹೇಂಗೆ ಗೊಂತಿದ್ದಾ?
ಒಂದು ಸಣ್ಣ ಉದಾಹರಣೇ ನೋಡುವೊ˚,

ಮಾಣಿ ಏವದಾರು ಹೊಸಾ ವಿಶಯ ತಿಳುಕ್ಕೊಂಡ˚ ಹೇಳಿ ಮಡಿಕ್ಕೊಂಬ˚. ಭಯಂಕರ ಖುಶಿ ಆತು ಮಾಣಿಗೆ, ಬಂದು ಮನೆಲಿ ಹೇಳಿದ˚ – “ಅಬ್ಬೆ.. ಇದಾ.. ಹೀಂಗಡ… ”
“ಹೇ.. ಅದೆಂತ ವಿಷಯ? ಎನಗೆ ಮದಲೆ ಗೊಂತಿತ್ತು” ಹೇಳ್ತು ತಂಗೆ..
ಅಷ್ಟಪ್ಪಗ ಎಂತ ಆವುತ್ತು?
ತುಂಬ ಖುಶಿಲಿ ಮಾಣಿ ಹೇಳಿದ ವಿಚಾರ ಅಲ್ಲಿಂದ ವಾಪಸ್ ಬಪ್ಪಗ – ಮನಸ್ಸಿನ ಬೇನೆಯಾಗಿ ತಿರುಗಿ ಬತ್ತು.
ಮತ್ತೆ ಮಾಣಿ ಎಂತ ಮಾಡುಗು, ಖುಶಿ ಇದ್ದ ಜಾಗೆಲಿ ಈಗ ಬೇನೆ ತುಂಬಿ ಆತನ್ನೆ?
ಇನ್ನು ಮನೆಲಿ ಎಂತ ಹೇಳ˚
ಎಲ್ಲವನ್ನೂ ಮನಸ್ಸಿಲ್ಲೆ ಮಡಿಕ್ಕೊಂಗು.
(ಮಾಣಿಯ ಮನೆಲಿ ಹೀಂಗಿಲ್ಲೆ, ಉದಾಹರಣೆಗೆ ಹೇಳಿದ್ದಷ್ಟೆ ಆತಾ?) 😉

ಮತ್ತೆ?

ಅವನ ಗೆಳೆಯರಿಂಗೆ ಹೇಳುಗು,
“ಇಂದಯಾ.. ಅವ್ಲು ಒಂಜಿ ಪೊರ್ಲುದ ಕಾರ್ಯಕ್ರಮ ಉಂಡುಯ.. ಬರ್ಪನಾ?”
ಕೇಳುಗು.
ಅವ್ವು,
“ಅಂದಾ? ಬರ್ಪೆ” ಹೇಳುಗು
ಅಲ್ಲಿಗೆ..
ಮಾಣಿ ಅವರೊಟ್ಟಿಂಗೆ ಹೋಕು.
ಹೀಂಗಿಪ್ಪ ಸಣ್ಣ ಸಣ್ಣ ಬೇನೆಗೊ, ನಕಾರಾತ್ಮಕ ಚಿಂತನೆಗೊ, ಮನಸ್ಸಿಲ್ಲೇ ಮಡುಗಿದ ಆಲೋಚನೆಗೊ – ಚಿಂತೆಗೊ ನಮ್ಮ ಮನಸ್ಸಿಲ್ಲಿ ನಿಂದು ನಿಂದು ಕೊನೆಗೆ ಮನಸ್ಸಿಂಗೆ ಇದರ ಸಹಿಸುಲೆ ಎಡಿತ್ತಿಲ್ಲೆ ಹೇಳಿ ಅಪ್ಪಗ ಯಾವುದೋ ಒಂದು ಅಂಗಲ್ಲಿ ಅದು ವ್ಯಕ್ತ ಆವುತ್ತು.

ಅಂಬಗ ಇದರ ಗುಣ ಮಾಡುದು ಹೇಂಗೆ?
ಒಂದೇ ದಾರಿ.
ರೋಗ ಬಂದದು ಹೇಂಗೆ ಹೇಳಿ ತಿಳುಕ್ಕೊಂಬದು.

ಅದು ಹೇಂಗೆ?
ಒಂದು ಸಣ್ಣ ಪ್ರಯೋಗ ಮಾಡೆಕು ಅದಕ್ಕೆ.

***

ಪ್ರಯೋಗ:

ತಳೀಯದ್ದೆ ಕೂಪದು

ಉದಿಯಪ್ಪಗ ಎದ್ದು, ಮೀಯಾಣ – ಜೆಪ – ತಿಂಡಿ ಎಲ್ಲ ಆದಮೇಲೆ,
ಮನೆಲಿ ಎಲ್ಲೋರಿಂಗೂ ಹೇಳೆಕು
“ಆನಿನ್ನು ಒಂದು ಗಂಟೆ ಆರತ್ರೂ ಮಾತಾಡ್ತಿಲ್ಲೆ,
ಎನ್ನ ಮಾತಾಡ್ಸುಲೆ ಬರೆಡಿ,
ಒಂದು ಗಂಟೆ ಆದ ಮೇಲೆ ಆನೇ ಹೆರ ಬತ್ತೆ.”
ಹೇಳಿ,
ಒಂದು ಕೋಣೆಲಿ ಬಾಗಿಲು ಹೆಟ್ಟಿ ಕೂರೆಕು.

ಕೂದು ಮಾಡುದೆಂತರ?
ಎಂತ ಇಲ್ಲೆ ಸುಮ್ಮನೆ ಕೂರೆಕು.

ಮೊಬೈಲು ಉಪಯೋಗಿಸುಲೆ ಇಲ್ಲೆ,
ಕಂಪ್ಲೀಟರಿನ ಹತ್ತರೆ ಕೂಪದಲ್ಲ,
ಒರಗುಲಾಗ – ಪದ್ಯ ಹೇಳಿಯೊಂಡು ಕೊಣಿವಲಾಗ,
ದೇವರ ಜೆಪ – ಮಂತ್ರ ಬೇಡ.
ದೇವರುಗೊಕ್ಕೆಲ್ಲ ಹೇಳಿ “ನಿಂಗಳೊಟ್ಟಿಂಗೆ ಇದ್ದೂ ಇದ್ದೂ ಸಾಕಾಯಿದು, ಒಂದು ಗಂಟೆ ಒಬ್ಬನೇ ಇರ್ತೇ.. ಎಲ್ಲೋರೂ ಹೆರ ಹೋಗಿ” ಹೇಳಿ.

ಮತ್ತೆ ಮಾಡುದೆಂತರ?
ಸುಮ್ಮನೆ ನಿಂಗಳೊಟ್ಟಿಂಗೆ ನಿಂಗೊ ಕೂರಿ ಒಂದು ಗಂಟೆ.

ಕೂಪದು – ಉಸಿರಾಟ ಹೇಳಿರೆ, ಆಗ ಹೇಳಿದಾಂಗೆ.

ಕೂದೊಂಡು ಯೋಚನೆ ಮಾಡಿ,
ಅನು ಈಗ ಸಾಂಕುತ್ತಾ ಇಪ್ಪ ರೋಗ ಬಂದದು ಹೇಂಗೆ? ಹೇಳಿ.
ಒಂದರಿ ರೋಗ ಯಾವ Section ಹೇಳಿ ಗೊಂತಾದರೆ ಮತ್ತೆ ಅದರ ಗುಣ ಮಾಡುದು ತುಂಬಾ ಸುಲಭ.

 • ಹೆರಂದ ಬಂದದಾದರೆ ಮದ್ದು ತೆಕ್ಕೊಂಬದು,
 • ಅನುವಂಶೀಯವಾಗಿ ಬಂದದ್ದಾಗಿದ್ದರೆ ಅದರೊಟ್ಟಿಂಗೆ Friendship ಮಾಡಿಯೊಂಬದು,
 • ಮತ್ತೆ, ನಮ್ಮ ಮನಸ್ಸಿನ Creation ಹೇಳಿ ಆದರೆ ಅದರ ಸರಿ ಮಾಡುದು.

ರೋಗ ಇಕ್ಕು, ರೋಗಿ ಇರ.

ಒಂದರಿ ನಮ್ಮ ರೋಗ ಯಾವ ಕ್ರಮದ್ದು ಹೇಳಿ ಗೊಂತಾದರೆ,
ನವಗೆ ರೋಗ ಇಕ್ಕು ಆದರೆ ನಾವು ರೋಗಿಗೊ ಆಗಿ ಇರ 🙂

ರೋಗವ ಮಡಿಕ್ಕೊಂಡೂ ಆರೋಗ್ಯವಂತವಾಗಿ ಇಪ್ಪಲೆ ಎಡಿಗು.
ಆರೋಗ್ಯ ಹೇಳುದು ಮನಸ್ಸಿನ ಶುಧ್ಧ ರೂಪದ ಅಭಿವ್ಯಕ್ತಿ.

ಈ ಪ್ರಯೋಗ ಮಾಡೆಕ್ಕು,

ಎಂತಕೆ ಹೇಳಿರೆ ನವಗೆ ಎಂತ ಬೇಕು ಹೇಳಿ ನವಗೆ ಗೊಂತಾವುತ್ತು/ಗೊಂತಾಯೆಕ್ಕು
ಅದಾಗದ್ದೆ ಎಂತ ಮದ್ದು ಮಾಡಿರೂ ಹೆಚ್ಚು ಪ್ರಯೋಜನ ಕಾಣ.

ಮಾಡುವನಾ?
ಆರೋಗ್ಯವಂತವಾಗಿ ಇಪ್ಪನಾ?
ಇನ್ನೊಂದೆರಾಡು ಕತೆ ಹೇಳ್ತೆ ಇನ್ನಾಣ ಸರ್ತಿ 🙂

ಮನಸ್ಸು ಮತ್ತು ಆರೋಗ್ಯ-೧ ಇಲ್ಲಿದ್ದು

ನಿಂಗಳ,
ಮಂಗ್ಳೂರ ಮಾಣಿ
🙂 🙂

ಮಂಗ್ಳೂರ ಮಾಣಿ

   

You may also like...

44 Responses

 1. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಅಶೋಕಣ್ಣ ಮತ್ತೆ ಮಾಣಿಯ ಸಂವಾದ ಲಾಯ್ಕ ಆಯಿದು.ಇಬ್ಬರೂ ಹೇಳುದರಲ್ಲಿ ಸಕಾರಾತ್ಮಕ ಅಂಶಂಗೊ ಇದ್ದು.ನಮ್ಮ ಸಮಸ್ಯೆಯ ನಾವು ಅರ್ಥ ಮಾಡಿಕೊಳ್ಳೆಕು ಹೇಳುದೂ ಸರಿ; ಸ್ವಂತ ವೈದ್ಯಕೀಯ ಮಾಡಿಕೊಂಬಲಾಗ ಹೇಳುದೂ ಸರಿ.ಮೊದಲಾಣದ್ದು ಸಮಸ್ಯೆಯ ಬಗ್ಗೆ ಸ್ವಂತ ನೆಲೆಲಿ ವಿಚಾರ ಮಾಡುವ ಸಕಾರಾತ್ಮಕ ಆಲೋಚನೆ-ಎರಡನೇದು ಮದ್ದು ಮಾಡುಲೆ ತಡವಾಗಿ,ತಪ್ಪು ವೈದ್ಯಕೀಯ ಮಾಡುದರಿಂದ ಬಪ್ಪಲೆ ಸಾಧ್ಯತೆ ಇಪ್ಪ ಹಾನಿಯ ತಪ್ಪಿಸೆಕಾದ ಅಗತ್ಯದ ಬಗ್ಗೆ ರಕ್ಷಣಾತ್ಮಕ ಅಲೋಚನೆ.
  ಇಂತಾ ಸಂವಾದ ನಡೆಯಲಿ.

  • ಮಾವಾ,
   ಸರಿಯಾಗಿ ಹೇಳಿದ್ದಿ. 🙂

   ಮದ್ದು ತೆಕ್ಕೊಂಬಲೆ ರಜವೂ ನಿಧಾನ ಮಾಡ್ಲಾಗ ಹೇಳುದೇ ಎನ್ನದೂ ಅಭಿಪ್ರಾಯ..
   ಆದರೆ ಮದ್ದು ತೆಕೊಂಬದು ಎಂತಕೆ ಹೇಳಿ ಗೊಂತು ಬೇಕನ್ನೆ? 😉

   ಚರ್ಚೆಯ ತುಂಬ ಚೆಂದಕೆ ಸಮನ್ವಯ ಮಾಡಿದ್ದಿ 🙂
   ನಿಂಗಳ ಒಪ್ಪ ನೋಡಿ ಹೇಳ್ಲೆದಿಯದ್ದಷ್ಟು ಖುಶಿ ಆತಿದಾ :):)

 2. Ashoka says:

  ಗೋಪಾಲಣ್ಣಾ
  ಎನ್ನ ಮನಸ್ಸಿಲ್ಲಿದ್ದ ವಿಚಾರವನ್ನೆ ಹೇಳಿದ್ದಿ ನಿ೦ಗ. ಧನ್ಯವಾದ

  • ಅಶೋಕಣ್ಣೋ,
   ನಮ್ಮ ಮಾತು ಮಾತ್ರ ಬೇರೆ ಬೇರೆ ಮನಸ್ಸು ಒಂದೇ ಇದ..
   ದಾರಿ ಬೇರೆ ಗುರಿ ಒಂದೇ ಹೇಳುವಾಂಗೆ…
   ಒಪ್ಪ ಖುಶಿ ಆತು 🙂

   • Ashoka says:

    ಮ೦ಗಳೂರಣ್ಣಾ
    ಆರೋಗ್ಯಕರ ಚರ್ಚೆ ಜ್ನಾನ ವಿಕಸನಕ್ಕೆ ದಾರಿ ಮಾಡ್ತು ಹೇಳ್ತವು.
    ಮತ್ತೆ ನಮ್ಮ ಚರ್ಚೆ೦ದಾಗಿ ರಜ್ಜ ಜನ ಅ೦ತೂ ಈ ಲೇಖನ ಪುನ ಪುನ ಓದಿಕ್ಕು ಹೇಳಿ ಗ್ರೇಶುತ್ತೆ ಆನು.
    ಯಾವದೆ ಪೂರ್ವಗ್ರಹದ ಹ೦ಗಿಲ್ಲದ್ದೆ ನಿರ್ಲಿಪ್ತ ಮನೋಭಾವ೦ದ ಅಪ್ಪ ವಿಶಯಾಧಾರಿತ ಚರ್ಚೆಗಳಿ೦ದ ಲಾಭವೆ ವಿನಹ ನಸ್ಟ ಅಲ್ಲ.
    ಎನಗೂ ಅಸ್ಟೆ. ಮೊದ ಮೊದಲು ರಜ್ಜ ಹಿ೦ಜರಿಕೆ ಕಾಡಿತ್ತು. ಒ೦ದೆರಡು ಸರ್ತಿ ಬರದ ನ೦ತರ ವಿಚಾರ೦ಗ ‘ಮುಕ್ತ ಮುಕ್ತ’

   • Ashoka says:

    ಮ೦ಗಳೂರಣ್ಣಾ
    ಮಾತು ಬೇರೆ ಮಾ೦ತ್ರ ಮನಸ್ಸೊ೦ದೆ ಹೇಳುದೇ ಇಲ್ಲಿ ಅಪ್ರಸಕ್ತ. ಆ ಬಗ್ಗೆ ಎನಗೂ ಏನೂ ಸ೦ಶಯ ಇಲ್ಲೆ:)
    “Means are more effective than then ends”
    ಹೇಳುವ ಗಾದೆ ‘ದಾರಿ ಬೇರೆ, ಗುರಿ ಒ೦ದೇ’ ಹೇಳುವ ಬಗ್ಗೆ ಯೆ ಇಪ್ಪದು:)
    ಎ೦ತದೇ ಆದರೂ ಇತರರಿ೦ಗೆ ತೊ೦ದರೆ ಮಾಡದ್ದ ದಾರಿಗ ಯಾವಗಳೂ ಒಳ್ಳೆದೇ ಅಲ್ಲದಾ? ಎನಗೂ ಕುಶಿ ಆತು ನಿ೦ಗಳ ಲೇಖನಕ್ಕೆ ಪ್ರತಿಕ್ರಿಯಿಸಿದ್ದಲ್ಲಿ.

    • ಮಾತಿನ ಧಾಟಿ, ಕ್ರಮ, ವಿಷಯ ಬೇರೆ ಆದಿಕ್ಕು –
     ಆದರೆ ಇಬ್ಬರ ಮನಸ್ಸೂ ಇದ್ದದು, ಇನ್ನೊಬ್ಬಂಗೆ ಬೇಜಾರಾಗದ್ದ ಹಾಂಗೆ ವಿಷಯವ ಮಂಡನೆ ಮಾಡುದು – ಸತ್ವವ ತಿಳಿವಲೆ ಪ್ರಯತ್ನ ಮಾಡುದು ..
     ಅಲ್ಲದಾ??
     ಸರಿ ನಿಂಗೊ ಹೇಳಿದ್ದು..
     ನಿಂಗಳಷ್ಟೇ ಖುಶಿ ಎನಗೂ ಆತಿದಾ? 🙂
     🙂

 3. ತೆಕ್ಕುಂಜ ಕುಮಾರ ಮಾವ° says:

  ಗೋಪಾಲಣ್ಣನ ಮಾತಿಂಗೆ ಎನ್ನ ಸಹಮತ ಇದ್ದು. ಮಂಗ್ಳೂರ ಮಾಣಿ – ಅಶೋಕ ಇವರ ಸಂವಾದ ಸಕಾರಾತ್ಮಕವೂ ಅಪ್ಪು, ಒಟ್ಟಿಂಗೆ ಲೇಖನಕ್ಕೆ ಪೂರಕವಾಗಿಯೂ ಇದ್ದು. ಹೀಂಗಿಪ್ಪ ಸಂವಾದ ಎಲ್ಲೋರಿಂಗೆ ಮಾದರಿಯೇ ಸರಿ.
  ಇಬ್ರಿಂಗೂ ಮನಸಾ ಅಭಿನಂದನೆಗೊ.

 4. jayashree.neeramoole says:

  ಎಲ್ಲೋರು ಹೇಳುತ್ತ ಹಾಂಗೆ ಎಲ್ಲ ವಿಷಯಂಗಳ ಮೇಲೆಯೂ ನಮ್ಮ ಬೈಲಿಲ್ಲಿ ಹೀಂಗಿದ್ದ ಆರೋಗ್ಯಕರ ಚರ್ಚೆಗ ನಡದರೆ ಹಲವು ವಿಷಯಂಗಳ ತಿಳುಕ್ಕೊಂಬಲೇ ಅಕ್ಕು ಹೇಳಿ ಅನ್ನಿಸುತ್ತು…

  ಈ ಚರ್ಚೆಯ ಬಗ್ಗೆ ಹೇಳುತ್ತರೆ ಗೋಪಾಲಣ್ಣ ಹೇಳಿದ ಹಾಂಗೆ ಇಬ್ಬರೂ ಹೇಳುದರಲ್ಲಿ ಸಕಾರಾತ್ಮಕ ಅಂಶಂಗ ಇದ್ದು. ಇಬ್ಬರಿಂಗೂ ಧನ್ಯವಾದಂಗ.

  ನಿಜವಾಗಿಯೂ ನಮ್ಮ ಮನಸ್ಸಿಂಗೆ ತುಂಬಾ ತುಂಬಾ ಶಕ್ತಿ ಇದ್ದು… ಯಾವುದೇ ಸೂಪರ್ ಕಂಪ್ಯೂಟರ್ ಗಿಂತ ಮಿಗಿಲಾದ ಶಕ್ತಿ ಇದ್ದು ಮತ್ತು ನಮಗೆ ಅದರ ಉಪಯೋಗಿಸುಲೂ ಎಡಿತ್ತು… ಇಂದ್ರಾಣ ಅಧುನಿಕ ಜಗತ್ತಿಲ್ಲಿ ನಾವು ಆ ಶಕ್ತಿಯ ಬಳಸಿಗೊಲ್ಲೆಕ್ಕಾರೆ ಕಷ್ಟ ಪಟ್ಟು ಮೈಂಡ್ ಪ್ರೊಗ್ರಾಮ್ ಮಾಡೆಕ್ಕಾವುತ್ತು… ನಮ್ಮ ಆಚರಣೆಗೋ,ಸಂಪ್ರದಾಯಂಗ ಎಲ್ಲ ಈ ಶಕ್ತಿಯ ಸಹಜವಾಗಿಯೇ ಬೆಳೆಸಿ,ಉಪಯೋಗಿಸುಲೇ ಪೂರಕವಾಗಿ ಇದ್ದತ್ತು… ಹಾಂಗಾಗಿ ಗುರುಗೋ ನಮಗೆ ಆಚರಣೆಗೋ,ಸಂಪ್ರದಾಯಂಗಳ ಒಳಿಶಿಗೊಳ್ಳಿ ಹೇಳಿ ಮತ್ತೆ ಮತ್ತೆ ಎಚ್ಚರಿಕೆ ನೀಡುತ್ತಾ ಇಪ್ಪದು…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *