ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 1

ಬೈಲಿಂಗೆ ಪ್ರೀತಿಯ ನಮಸ್ಕಾರಂಗೊ,

ಜೀವನ ಚೈತ್ರ ಸರಣಿಯ ಈ ಸರ್ತಿಯ ವಿಚಾರ ಆರೋಗ್ಯ. ಆರೋಗ್ಯ ಹೇಳಿರೆ ಎಂತರ? ಹೇಂಗೆ? ಹೇಳಿ ರಜ್ಜ ನೋಡಿಗೊಂಡು – ಮನಸ್ಸಿಂಗೂ ಆರೋಗ್ಯಕ್ಕೂ ಎಂತ ಸಂಬಂದ ಹೇಳಿ ರಜ್ಜ ಚಿಂತನೆ ಮಾಡುವೊ˚ ಆಗದಾ?

.

.

.

ಬದುಕಿನ ನಿಜವಾದ ನೆಲೆಯೇ ಆರೋಗ್ಯ. ಇದೊಂದಿಲ್ಲದ್ದರೆ ಬೇರೆಂತ ಇದ್ದು ಹೆಚ್ಚು ಗುಣ ಇಲ್ಲೆ – ಇದು ಇದ್ದತ್ತು ಹೇಳಿ ಆದರೆ ಬೇರೆ ಒಳುದ್ದು ರಜ್ಜ ಹೆಚ್ಚು ಕಮ್ಮಿ ಆದರೆ ಸರಿ ಮಾಡಿಗೊಂಬಲೆ ಸುಲಭ. ನಮ್ಮ ಸುಖ ಮತ್ತು ಮನಃಶಾಂತಿಗೊಕ್ಕೆ ಆರೋಗ್ಯವೇ ಆಧಾರ ಹೇಳಿರೆ ತಪ್ಪಾಗ 🙂  ಅಂಬಗ ಈ ಆರೋಗ್ಯ ಹೇಳಿರೆ ಎಂತರ?

“ಖಾಯಿಲೆ ಇಲ್ಲದ್ದೆ ಇಪ್ಪ ದೇಹದ ಸ್ಥಿತಿ ಆರೋಗ್ಯ” ಹೇಳುದು ನಮ್ಮ ಸಾಮಾನ್ಯ ಅನಿಸಿಕೆ. ಆದರೆ ಅದಷ್ಟೇ ಅಲ್ಲ. ಬರೇ ಖಾಯಿಲೆ ಇಲ್ಲೆ ಹೇಳುವ ಮಾತ್ರಕ್ಕೆ ವ್ಯಕ್ತಿ ಆರೋಗ್ಯಲ್ಲಿ ಇದ್ದ˚ ಹೇಳಿ ಅರ್ಥ ಅಲ್ಲ. ಆರೋಗ್ಯಲ್ಲಿ ಇದ್ದರೆ ಖಾಯಿಲೆಗೊ ಇಪ್ಪಲಾಗ ಹೇಳಿಯೂ ಇಲ್ಲೆ. ಖಾಯಿಲೆಗೊ ಇಪ್ಪ ಹಾಂಗೇ ಆರೋಗ್ಯವಾಗಿ ಇಪ್ಪಲೆ ಎಡಿಗು.

“ಎಂತ ಮಾಣಿಗೆ ರಜ್ಜ ಸುತ್ತು ಕಮ್ಮಿ ಆವ್ತಾ ಇದ್ದಾ ಹೇಂಗೆ? ಅಲ್ಲ, ಖಾಯಿಲೆಗೊ ಇಪ್ಪ ಹಾಂಗೆ ಆರೋಗ್ಯವಾಗಿಪ್ಪಲೆ ಎಡಿಗು ಹೇಳ್ತಾ ಇದ್ದಾ˚ನ್ನೆ, ಇದೆಂತ ಕತೆ ಇವಂದು? ” ಗ್ರೇಶಿದಿರೋ? 🙂

ಅಲ್ಲಲ್ಲ, ಬರದ್ದು ಮತ್ತೆ ತಲೆ ಎರಡೂ ಸರೀ ಇದ್ದು. ಖಾಯಿಲೆಗೊಕ್ಕೂ ಆರೋಗ್ಯವಾಗಿಪ್ಪದಕ್ಕೂ ಒಂದಕ್ಕೊಂದು ಸಂಬಂದ ಇಲ್ಲೆ. ಖಾಯಿಲೆ ಇಲ್ಲದ್ದೆ ಮನಸ್ಸಿಲ್ಲಿ ಬರೇ ನಕಾರಾತ್ಮಕ ಭಾವನೆಯೇ ತುಂಬಿದ್ದರೆ ಅದರ ಆರೋಗ್ಯ ಹೇಳ್ಲೆ ಎಡಿಗಾ?  ಜಗತ್ತಿಲ್ಲಿ ರೋಗ ಇದ್ದು – ರೋಗಿ ಇಲ್ಲೆ. ಇದೆಂತ ಕತೆ? “ಅಪ್ಪು,  ಇವಂಗೆ ನಿಜವಾಗಿಯೂ ಎಂತದೋ ಆಯಿದು, ಮಾಣಿಯ ಅಬ್ಬೆ ಹತ್ತರೆ ಹೇಳಿಕ್ಕುದು ಒಳ್ಳೆದು ಹೇಳಿ ನಿಂಗೊ ಗ್ರೇಶುವಂದ ಮದಲು ಮುಂದೆ ಬರದ್ದದರ ಓದಿಕ್ಕಿ 😉

.

.

.

ನಮ್ಮ ದೇಹಕ್ಕೆ ರೋಗವ ಉತ್ಪಾದನೆ ಮಾಡುವ ಶಕ್ತಿ ಇಲ್ಲೆ. ಇದಕ್ಕೆ ತಾಕತ್ತಿಪ್ಪದು ಇಪ್ಪ ರೋಗವ ಸಾಂಕುಲೂ – ಸಾಂಕುಲೆಡಿಯದ್ದಪ್ಪಗ ಅದರ ತೆಗದಿಡುಕ್ಕುಲೂ ಮಾತ್ರ. ರೋಗ ಅದಾಗಿ ಬಪ್ಪದು, ರೋಗಿಯಾಗಿ ನಾವು ಪರಿವರ್ತನೆ ಅಪ್ಪದು. ರೋಗ ಇದ್ದು, ಆದರೆ ಎನ್ನ ಮನಸಿಲ್ಲಿ ಚಿಂತೆ ಇಲ್ಲೆ – ಬೇನೆ ಇಲ್ಲೆ – ಬದಲಾಗಿ ಪ್ರೀತಿ ಶಾಂತಿ ತುಂಬಿದ್ದು ಹೇಳಿ ಆದರೆ ಎನಗೆ ಆರೋಗ್ಯ ಇದ್ದು ಹೇಳಿಯೆ ಅರ್ಥ.

ಅಂಬಗ ರೋಗಂಗೊ ಇಲ್ಲೆಯೋ? ಅದು ನಮ್ಮ ದೇಹಕ್ಕೆ ಬಪ್ಪದು ಹೇಂಗೆ?

ರೋಗಂಗೊ ಇದ್ದು. ಇದು ೩ ಕ್ರಮಲ್ಲಿ ಬಕ್ಕು

 • ಹೆರಾಂದ ಬಪ್ಪ ರೋಗಂಗೊ: ಹೇಳಿರೆ, ಸಾಮಾನ್ಯವಾಗಿ ಬಪ್ಪ ಜ್ವರಂಗೊ, ಜ್ವರಚಿಕನ್ ಪೋಕ್ಸು, ಮಲೇರಿಯಾ, ರೇಬಿಸ್, ಹಂದಿ-ಎಲಿ ಜ್ವರಂಗೊ ಮುಂತಾದ್ದು. ಇದಕ್ಕೆಲ್ಲ ಮದ್ದು ಮಾಡಿದರೆ ಸರಿ ಅಕ್ಕು, ಸಣ್ಣ ಜ್ವರ ಹೇಳಿ ಆದರೆ ಮದ್ದು ತೆಕ್ಕೊಂಡರೆ ಒಂದು ವಾರಲ್ಲಿ “ಇಲ್ಲೆ ತೆಕ್ಕೊಳ್ಳೇ” ಹೇಳಿ ಗೆಂಟು ಮಾಡಿ ಕೂದರೆ ೭ದಿನಲ್ಲಿ ಗುಣ ಅಪ್ಪಂಥದ್ದು.
 • ಅನುವಂಶೀಯವಾಗಿ ಬಪ್ಪಂಥದ್ದು: ಅಸ್ಥಮಾ, ಸೀವು – ಉಪ್ಪು, ಕಿಡ್ಣಿ, ಕಣ್ಣು – ಹೊಟ್ಟೆ ಹೇಳಿ ಎಲ್ಲ ಬಪ್ಪ ಸಾಧ್ಯತೆಗೊ ಇದ್ದು. ಇದರ ಬೇಕೂ ಹೇಳರೂ ಎಂತ ಮಾಡ್ಳೂ ಎಡಿಯ. ಕರ್ಮ ಸಂಬಂಧೀ ಫಲಂಗಳೂ ಇದೇ ಕ್ರಮದ್ದು. ಇದರ ಒಪ್ಪಿಯೊಳ್ಳೆಕಶ್ಟೆ.
  ಈಗ,
  ಅಸ್ಥಮಾ ಇದ್ದತ್ತೂ ಹೇಳಿ ಆದರೆ, “ಅಪ್ಪು ಇದ್ದು, ಅಂದೇ ಬೈಂದು, ಬೇಕಾದಷ್ಟು ಮದ್ದು ತಿನ್ಸಿದೆ ಈಗಳೂ ಎಂತ ಮಾಡಿರೂ ಎನ್ನ ಮಾತು ಕೇಳ ” ಹೇಳಿ ಒಪ್ಪಿಯೊಂಬದು ಒಂದೇ ದಾರಿ. ಹಾಂಗೆ ಒಪ್ಪಿಯೊಂಡು ಅದರ ನಮ್ಮ friendನ ಹಾಂಗೆ ಮಾಡಿಗೊಂಡತ್ತೂ ಹೇಳಿ ಆದರೆ ಮತ್ತೆ ಅದುವೇ ಹೇಳ್ಲೆ ಸುರು ಮಾಡುತ್ತು ” ಇದಾ, ಇದರ ತಿನ್ನೆಡ ಖಾರ ತಿಂದರೆ ಎನಗಾಗ, ಇದಾ ನೀನೀಗ ಒರಕ್ಕು ಕೆಟ್ಟರೆ ಮತ್ತೆ ಎನ್ನ ದೂರಿಯೊಂಡು ಇರೆಕಕ್ಕು ನಾಳೆ – ಈಗ ಒರಗು, ಹಗಲು ಹೊತ್ತು ಒರಗೆಡ” ಹೀಂಗೆ ಅದು ಹೇಳುದು ನವಗೆ ಕೇಳ್ತು.
  ಅಷ್ಟಪ್ಪಗ ಅದಕ್ಕೆ ಬೇಕು ಬೇಕಾದ ಹಾಂಗೆ ಮಾಡಿಗೊಂಡು ಹೋದರೆ ಆತು. ಅದು ನಮ್ಮೊಟ್ಟಿಂಗೇ ಆರಾಮವಾಗಿ ಇಕ್ಕು.
  ಹೊತ್ತೊತ್ತಿಂಗೆ ಮದ್ದು ಮಾಡಿಗೊಂಡಿದ್ದತ್ತೂ ಹೇಳಿ ಆದರೆ ಅದಕ್ಕೆ ಮನಸ್ಸು ಕಾಂಬಗ ಬಿಟ್ಟಿಕ್ಕಿ ಹೋಕು, ಇಲ್ಲದ್ದರೆ ನಮ್ಮೊಟ್ಟಿಂಗೇ ಇಕ್ಕು. ತಲೆಬೆಶಿ ಮಾಡಿರೆ ಕೆಲಸ ಆಗ.
 • ನಾವೇ ಹುಟ್ಟುಸುತ್ತದು: ಇಲ್ಲಿಪ್ಪದಿದಾ ಕತೆ, ನಮ್ಮ ರೋಗಂಗಳಲ್ಲಿ ೯೦% ದೇ ನಾವೇ ಹುಟ್ಟು ಹಾಕುವಂಥದ್ದು. ಹೆಚ್ಚಿನ ರೋಗಂಗಳೂ ನಮ್ಮ ಮನಸ್ಸಿನ ಸೃಷ್ಠಿ. “ಅಯ್ಯೋ ಆನು ಗೋಶ್ಬಾರಿ, ಅಯ್ಯೋ ಆನು ಹೆಡ್ಡ˚, ಅಯ್ಯೋ ಎನಗೆ ಮೊಳಪ್ಪು ಬೇನೆ, ಅಯ್ಯೋ ಆನು ಎಂತಕಾದರು ಬದ್ಕಿದ್ದೆಯೋ?” ಹೇಳಿ ಹೇಳಿಯೊಂಡು ಕೂದರೆ ಹೇಳಿಯೊಂಡ ಹಾಂಗೇ ಆವ್ತು, ೨೧ ದಿನ ಬಿಡದ್ದೆ ಹೀಂಗೆ ಹೇಳಿಯೊಂಡತ್ತು ಹೇಳಿ ಆದರೆ ಮತ್ತೆ ನಾವು ಹೇಳೆಕು ಹೇಳಿ ಇಲ್ಲೆ, ನಮ್ಮ ಮನಸ್ಸೇ ಹೇಳಿಗೊಂಬಲೆ ಸುರು ಮಾಡ್ತು. ಇದಕ್ಕೆ ನಮ್ಮ ಹೋಮಿಯೋಪತಿ, ಇಂಗ್ಲೀಶು, ಆಯುರ್ವೇದದ ಮದ್ದು ಕೊಟ್ಟರೆ ಸಾಲ – ಅರಿವೇ ಮದ್ದಿದಕ್ಕೆ . ನಮ್ಮ ಮನಸ್ಸಿನ ನಾವು ತಿಳುಕ್ಕೊಂಬದೇ ಇದಕ್ಕೆ ಮದ್ದು. ಈ ರೋಗ ಎನಗೆ ಬಂದದೆಂತಕೆ ಹೇಳುವ ಆ ತಿಳುವಳಿಕೆ ಬಂದ ಕೂಡಲೇ ಎಲ್ಲ ಸರಿ ಆವುತ್ತು ತಾನಾಗಿ.

~~

ಅಂಬಗ ಈಗ ನಾವು ಮನಸ್ಸು ಹೇಳಿರೆ ಎಂತ ಹೇಳಿ ನೋಡುವೊ˚ ಆಗದಾ?

ಮನಸ್ಸು ಹೇಳಿರೆ ನಮ್ಮದೇ ಸಂಸ್ಕಾರಂಗಳ ನಂಬಿಕೆಗಳ ಒಂದು ಕಟ್ಟು, ನಮ್ಮ ಎಲ್ಲ ಸಂಸ್ಕಾರಂಗಳ ಗೆಂಟು ಕಟ್ಟಿ ಅದಕ್ಕೆ ಒಂದು ರೂಪ ಕೊಟ್ಟರೆ ಅದಕ್ಕೆ ಮನಸ್ಸು ಹೇಳ್ತವು. ಮನಸ್ಸಿಂಗೆ ಸ್ವಂತ ಅದಾಗಿಯೇ ಕೆಲಸ ಮಾಡ್ಲೆ ಎಡಿತ್ತಿಲ್ಲೆ. ಬುಧ್ಧಿ ಹೇಳಿದ್ದರ ಅದು ಮಾಡ್ತು ಅಷ್ಟೇ. ನಮ್ಮ ಕೈಕಾಲುಗೊ ಹೇಂಗೋ, ಮನಸ್ಸೂ ಹಾಂಗೆ ನಮ್ಮ ಒಂದು ಅಂಗ ಹೇಳಿಯೂ ಹೇಳ್ಲಕ್ಕು. ನಮ್ಮ ಕೈಕಾಲುಗೊ ಎಂತ ಮಾಡ್ತರೂ ನಾವು ಹೇಳಿದಾಂಗೇ. ಅದಾಗಿ ಹೋಗಿ ಎಂತದೂ ಮಾಡ. ಹಾಂಗೇ ಮನಸ್ಸುದೇ.

ಒಂದು ಸಣ್ಣ ಉದಾಹರಣೆ ತೆಕ್ಕೊಂಬೊ˚,

ಈಗ ನಾವು ಉಣ್ತಾ ಇದ್ದು ಹೇಳಿ ಗ್ರೇಶಿಯೊಂಡರೆ, ನಾವು ಪ್ರಜ್ಞಾ ಪೂರ್ವಕವಾಗಿ ಕೈಯ್ಯ ಬಾಯಿಗೂ ಬಾಳೆಗೂ ತೆಕ್ಕೊಂಡು ಹೋವುತ್ತು. ಯೇವದಾರು ಬಗೆ ಬಪ್ಪಲೆ ಹೊತ್ತಕ್ಕು ಹೇಳಿ ಇದ್ದರೆ ಕೈಯ್ಯ ಸುಮ್ಮನೆ ಮಡುಗುತ್ತು, ಹೇಂಗೆ ಎಡಿಗಾತು? ಹೇಂಗೆ ಹೇಳಿರೆ ಕೈ ಎನ್ನದು – ಆನು ಕೈಯ್ಯಲ್ಲ/ಕೈ ಮಾತ್ರ ಅಲ್ಲ ಹೇಳಿ ನವಗೆ ಗೊಂತಿಪ್ಪ ಕಾರಣ ನಾವು ಹೇಳಿದಾಂಗೆ – ನವಗೆ ಬೇಕಾದ ಹಾಂಗೆ ಕೈ ಉಪಯೋಗಿಸಿಯೊಂಡು ಕೆಲಸಂಗಳ ಮಾಡ್ಲೆ ಆವುತ್ತು. ಹಾಂಗೇ ಎನ್ನ ಮನಸ್ಸುದೇ – ಯೋಚನೆ ಹೇಳುದು ಮನಸ್ಸು ಮಾಡುವ ಕೆಲಸ. ಆನು ಬೇಕಪ್ಪಗ ಮನಸ್ಸಿಂಗೆ ಯೋಚನೆ ಮಾಡುವ ಕೆಲಸ ಕೊಡ್ತೆ ಬೇಡ ಹೇಳಿ ಅಪ್ಪಗ ನಿಲ್ಸುತ್ತೆ. ಹಾಂಗೆ ನಿಲ್ಸಿಯಪ್ಪಗ ಮನಸ್ಸು ಇರ್ತು, ಆದರೆ ಯೋಚನೆಗೊ ಇರ್ತಿಲ್ಲೆ.

Simple, Very very simple…!!!

ಅಂಬಗ ಈ ಮನಸ್ಸು ಇಪ್ಪದೆಲ್ಲಿ? ಅದರ ಆಕಾರ ಎಂತರ? ವ್ಯಾಪ್ತಿ ಎಷ್ಟು? ಕೇಳಿರೆ,

ಇತ್ತೀಚೆಗೆ quantum physics ಹೇಳಿ ಒಂದು ವಿಷಯ ಹೆಚ್ಚು ಹೆಚ್ಚು ಕೇಳಿ ಬತ್ತ ಇದ್ದು. ಅದರ ಪ್ರಕಾರ ” matter is not made out of matter but of energy. This is what Indians call as Adwaita” ಪುರುಷ ಮತ್ತು ಪ್ರಕೃತಿ ಬೇರೆ ಬೇರೆ ಅಲ್ಲ ಹೇಳುದೆ ಈ ತತ್ತ್ವ. ಅವು ಹೇಳುವ ಹಾಂಗೆ ಮನಸ್ಸು ದೇಹದ ಕಣ ಕಣಂಗಳಲ್ಲೂ ಇದ್ದು. ಪ್ರತಿಯೊಂದು ಜೀವ ಕೋಶಲ್ಲಿಯೂ ಮನಸ್ಸಿದ್ದು.. ಹಾಂಗೆ ಹೇಳಿದರೆ ಕೋಟ್ಯಾನುಕೋಟಿ ಮನಸ್ಸುಗೊ ಇದ್ದು ಹೇಳಿ ಅಲ್ಲ, ಅಷ್ಟು ಮನಸ್ಸುಗಳೂ ಸೇರಿ ಅಪ್ಪದು ಒಂದು mega mind – ಅದು ನಾವು ಹೇಳಿದ ಹಾಂಗೆ ಕೇಳುತ್ತು..

ನಮ್ಮ ಸಂಸ್ಕಾರ ಹೇಂಗಿದ್ದೋ ನವಗೆ ಆ ರೀತಿಯ ಆಲೋಚನೆಗೊ ಬಕ್ಕು. ನಾವು ಯಾವ ರೀತಿಯ ಆಲೋಚನೆಗಳ ಮಾಡ್ತೋ ನಾವು ಹಾಂಗೇ ಆವುತ್ತು. “यद्भावं तद्भवति” ಹೇಳುಗು ಮಹೇಶಣ್ಣ. 🙂
“ಜಗತ್ತಿಲ್ಲಿ ಒಳ್ಳೆದೂ ಇಲ್ಲೆ, ಕೆಟ್ಟದೂ ಇಲ್ಲೆ; ಇಪ್ಪದು ಇಪ್ಪದೇ” ನಮ್ಮ ಭಾವ ಹೇಂಗೋ? ನವಗೆ ಹಾಂಗೆ ಕಾಣ್ತು. life is as Good as our Interpretation…!!

ನಮ್ಮ ಗ್ರೇಶುವಿಕೆಯೇ ನಮ್ಮ ಬದುಕಾವುತ್ತು. ನಾವು ಒಳ್ಳೊಳ್ಳೆದನ್ನೇ ಗ್ರೇಶಿಯರೆ, ಅದೇ ಆಗಿ ನಮ್ಮ ಭಾವನೆ ಮತ್ತೂ ಒಳ್ಳೇದರೆಡೆಂಗೇ ಹೋವುತ್ತು, ಹಾಂಗೇ ಅದರ ವಿರುಧ್ಧವುದೇ.
ಮನಸ್ಸು ನಮ್ಮ ಭಾವನೆಗಳ ಶಕ್ತಿ ರೂಪಕ್ಕೆ ಪರಿವರ್ತನೆ ಮಾಡಿ ನಮ್ಮ ದೇಹದ ಕಣ ಕಣಂಗಳಲ್ಲಿ ತುಂಬುಸುತ್ತು. ಹಾಂಗಾಗಿ ನಮ್ಮ ಭಾವವೇ ನಾವಾವುತ್ತು.

ಅದು ಹೇಂಗೆ ಹೇಳಿರೆ,
ಈಗ ನಾವು ಚಾಯ ಮಾಡ್ಲೆ ಹೆರಡುತ್ತು ಹೇಳಿ ಮಡಿಕ್ಕೊಂಬ˚. ಕೊದಿತ್ತ ನೀರು ನಮ್ಮ ಮನಸ್ಸು – ಚಾಯದ ಹೊಡಿ ನಮ್ಮ ಭಾವನೆಗೊ; ಚಾಯದ ಹೊಡಿ ಹಾಕುವಲ್ಲಿ ತಪ್ಪಿ ಕಾಪಿ ಹೊಡಿ ಹಾಕಿತ್ತೂ ಹೇಳಿ ಆದರೆ ಚಾಯದ ಬದಲು ಕಾಪಿ ಅಕ್ಕು.. ಅದು ನೀರಿನ ತಪ್ಪಲ್ಲ. ಹಾಂಗೆ ಮನಸ್ಸುದೇ.. ಒಳ್ಳೆ ಯೋಚನೆ ಹಾಕಿದರೆ ಒಳ್ಳೆದು, ಕೆಟ್ಟದು ಹಾಕಿದರೆ ಕೆಟ್ಟದು ನಮ್ಮ ನರ-ನರಲ್ಲಿ ತುಂಬುತ್ತಾ ಹೋವುತ್ತು.
ಮತ್ತೊಂದು ದಿನ ಬತ್ತು,
ನಮ್ಮ ಮನಸ್ಸಿಂಗೆ ಈ ಎಲ್ಲ ಕೆಟ್ಟ ಆಲೋಚನೆಗಳ ಭಾರವ ತಡಕ್ಕೊಂಬಲೆ ಎಡಿತ್ತಿಲ್ಲೆ ಹೇಳಿ ಅಪ್ಪಗ ಅದು ಆ ಎಲ್ಲದರ ಯಾವುದಾದರೂ ಒಂದು ಅಂಗದ ಮೇಲೆ ಆರೋಪ ಮಾಡ್ತು. ಅದುವೇ ರೋಗ, ಮೂರನೇ ಥರದ ರೋಗ.

~~

ಅಂಬಗ ಇದರ ಸರಿ ಮಾಡುದು ಹೇಂಗೆ?

ತುಂಬ ಸುಲಭ.

ತಪ್ಪಿದ್ದೆಲ್ಲಿ ಹೇಳಿ ನೋಡಿಯೊಂಡರಾತು.

 • ನಮ್ಮ ಮನಸ್ಸಿನ ಸ್ಥಿತಿ ನಮ್ಮ ಯೋಚನೆಗಳ ಪ್ರತಿನಿಧಿಸುತ್ತು: ರಜ್ಜ ಗಮನಿಸುವೊ˚,
  ನಮ್ಮ ಮನಸ್ಸು ಒಂದು ರೇಡಿಯೂ ಇದ್ದ ಹಾಂಗೆ, ಒಳ್ಳೆ ಆಲೋಚನೆ ಮಾಡಿತ್ತು ಹೇಳಿ ಆದರೆ ಒಳ್ಳೆದನ್ನೆ ಅದು ಆಕರ್ಶಿಸುತ್ತು, ಹಾಂಗಾಗಿ ನವಗೆ ಒಳ್ಳೆ ಭಾವನೆಗಳೇ ಉಂಟಾವುತ್ತು.  ಒಳ್ಳೊಳ್ಳೆ ಆಲೋಚನೆಗೊ ಬತ್ತಾ ಇದ್ದು ಹೇಳಿರೆ ನಿಂಗಳ ಮನಸ್ಸು ಸರಿಯಾದ ದಾರಿಲಿ ಇದ್ದು ಹೇಳಿ ಅರ್ಥ. ಅಷ್ಟಪ್ಪಗ ಖುಶಿ ಅದಾಗಿಯೇ ಆವುತ್ತು. ಮನಸ್ಸಿಲ್ಲಿ ಕೆಟ್ಟ ಆಲೋಚನೆ ಮಡಿಕ್ಕೊಂಡು ಖುಶಿಯಾಗಿಪ್ಪಲೆ ಸಾದ್ಯವೆ ಇಲ್ಲೆ.
 • ನಮ್ಮ ದೇಹದ ಆಕಾರ – ಚಲನೆ ಮತ್ತು ಉಸಿರಾಟ ನಮ್ಮ ಮನಸ್ಸಿನ ಸ್ಥಿತಿಯ ಹೇಳ್ತು: ಗಮನಿಸಿ,
  ತುಂಬ ಖುಶಿಯೋ ಆಶ್ಚರ್ಯವೋ ಅಪ್ಪಗ ಬೆನ್ನು ಸರ್ತ ಆವುತ್ತು. ತುಂಬ ಏಕಾಗ್ರತೆ ಬೇಕಾದ ಕೆಲಸ ಮಾಡುವಾಗ (ಸೂಜಿಗೆ ನೂಲು ಹಾಕುವಾಗಳೂ ಮಣ್ಣೋ ಗಮನ್ಸಿಯರೆ) ಉಸಿರು ನಿಲ್ಲುತ್ತು, ಕೋಪ ಬಂದಪ್ಪಗ ಉಸಿರು ಜೋರಾವುತ್ತು..

ಉಸಿರಾಟ ಸರಿ ಮಾಡಿಯೊಂಬದರ ಮೂಲಕ ಮನಸ್ಸಿನ ಹಿಡುದು ಮಡುಗಿ, ಧ್ಯಾನದ ಮೂಲಕ ಶುಧ್ಧ ಮಾಡಿರೆ ಆತು..
ಅಂಬಗ ಸರಿಯಾದ ಉಸಿರಾಟದ ಕ್ರಮ ಹೇಳಿರೆ ಹೇಂಗೆ?
ಧ್ಯಾನ ಹೇಳಿರೆ ಎಂತರ? ಹೇಂಗೆ ಮಾಡೆಕು? ಎಂತಕೆ ಮಾಡೆಕು ಹೇಳುದರ ಇನ್ನಾಣ ಸರ್ತಿ ರಜಾ ಚಿಂತನೆ ಮಾಡುವೊ˚.
ಈ ಸರ್ತಿ ಆನು ಹೇಳಿದ್ದರಲ್ಲಿ ಏನಾರೂ ತಪ್ಪಿದ್ದರೆ, ಎಂತಾರು ಸೇರುಸಿದರೆ ಇನ್ನೂ ಚೆಂದ ಅಕ್ಕು ಹೇಳಿ ಆದರೆ ಒಪ್ಪಲ್ಲಿ ಬರೆರಿ, ಕಾದೊಂಡಿರ್ತೆ. 🙂

🙂

ಮಂಗ್ಳೂರ ಮಾಣಿ

   

You may also like...

33 Responses

 1. jayashree.neeramoole says:

  ಮಾಣಿಗೆ ನೂರಕ್ಕೆ ನೂರರಷ್ಟು ತಲೆ ಸರಿ ಇದ್ದು… ಈ ವಿಷಯಂಗಳ ಆನುದೇ ಹರೇ ರಾಮದ ಸಹಾಯಂದ ಅನುಭವಿಸಿ ಕಲ್ತಿದೆ… ಕಲಿವಲೆ ತುಂಬಾ ಆಸಕ್ತಿದಾಯಕವಾದಂತಹ ವಿಚಾರಂಗೋ…

 2. ತೆಕ್ಕುಂಜ ಕುಮಾರ ಮಾವ° says:

  ಒಳ್ಳೆ ವಿಷಯ, ಬರದ್ದೂ ಒಪ್ಪ ಆಯಿದು.
  {ಮದ್ದು ತೆಕ್ಕೊಂಡರೆ ೭ ದಿನಲ್ಲಿ “ಇಲ್ಲೆ ತೆಕ್ಕೊಳ್ಳೇ” ಹೇಳಿ ಗೆಂಟು ಮಾಡಿ ಕೂದರೆ ಒಂದು ವಾರಲ್ಲಿ ಗುಣ ಅಪ್ಪಂಥದ್ದು.}…
  ಇಲ್ಲಿ ‘೭ ದಿನ’ – ‘ಒಂದು ವಾರ’ ಅತ್ತಿತ್ತೆ ಆಯಿದೋ ಸಂಶಯ.

 3. ಮಂಗಳೂರು ಮಾಣಿ says:

  [ಇಲ್ಲಿ ‘೭ ದಿನ’ – ‘ಒಂದು ವಾರ’ ಅತ್ತಿತ್ತ ಆಯಿದೋ ಸಂಶಯ.]- ಅಪ್ಪು ಮಾವ. ರೆಜ ಅತ್ತಿತ್ತ ಆಯಿದು.
  ಸರಿ ಮಾಡಿದೆ ಈಗ.
  ನಿಂಗಳ ಸಲಹೆಗೆ ಧನ್ಯವಾದಂಗೊ

  • ಪ್ರಸಾದ says:

   ಅಣ್ಣೋ ಈ ಏಳುದಿನ,ಅಥವಾ ಒಂದುವಾರ ಸಂಗತಿ ಎಂತ ಗೊಂತಾತಿಲ್ಲೆನ್ನೆ? (ಮದ್ದು ತೆಕ್ಕೊಂಡರೆ ಒಂದು ವಾರಲ್ಲಿ “ಇಲ್ಲೆ ತೆಕ್ಕೊಳ್ಳೇ” ಹೇಳಿ ಗೆಂಟು ಮಾಡಿ ಕೂದರೆ ಒಂದು ವಾರಲ್ಲಿ ಗುಣ ಅಪ್ಪಂಥದ್ದು.) ಮದ್ದು ತೆಕ್ಕೊಂಡರೂ ತೆಕ್ಕೊಳದ್ದರೂ ಎರದೂ ಒಂದೇ ನಮುನೆಯೋ ಹೇಂಗೆ?

   • ಪ್ರಸಾದಣ್ಣೋ,
    ಹೆರಾಂದ ಬಂದ ಹೆಚ್ಚಿನ ರೋಗಂಗಳೂ ಹಾಂಗೆ ಇರ್ತು ಅಲ್ಲದಾ?
    ನಮ್ಮ ದೇಹದ ಮಾತು ಕೇಳಿ ಪಥ್ಯ ಮಾಡಿರೆ ಹಿಡಿತಕ್ಕೆ ಸಿಕ್ಕುತ್ತು. ಖಂಡಿತಾ 🙂
    ಮದ್ದಿನ ನಿರಾಕರಿಸುತ್ತಾ ಇಪ್ಪದಲ್ಲ..!!
    ಅದೂ ಬೇಕು ಪಥ್ಯ-ಒರಕ್ಕೂ ಬೇಕು..!!

    ಧನ್ಯವಾದ ಅಣ್ಣಾ.. 🙂

 4. ಗಣೇಶ ಪೆರ್ವ says:

  ಮ೦ಗ್ಳೂರಣ್ಣಾ.. ಸತ್ತ್ವಯುತ ಲೇಖನಕ್ಕೆ ಶಿರಬಾಗಿದೆ. ಧನ್ಯವಾದ೦ಗೊ.
  ಬಹಳ ಆಳವಾದ ಅರ್ಥವ್ಯಾಪ್ತಿ ಇಪ್ಪ ಲೇಖನ. ಚಿ೦ತಿಸುತ್ತಾ ಹೋದಷ್ಟೂ ಆಸಕ್ತಿ ಬೆಳೆಸುತ್ತ, ಅ೦ತ್ಯ ಇಲ್ಲದ್ದ ವಿಸ್ತಾರ ಹೊ೦ದಿಪ್ಪ ರಹಸ್ಯ ಅಲ್ಲದೋ ಮನಸ್ಸು!! ಇನ್ನುದೆ ಹಲವು ಸರ್ತಿ ಓದೆಕು, ಒ೦ದೊ೦ದು ಸರ್ತಿ ಓದುವಗಳೂ ಒ೦ದೊ೦ದು ತಲಲ್ಲಿ ವಿಚಾರ೦ಗೊ ಮ೦ಥನ ಆವ್ತು. ಒಪ್ಪ೦ಗೊ.

  • ತುಂಬ ತುಂಬ ಧನ್ಯವಾಂದಂಗೊ ಗಣೇಶಣ್ಣಾ… :):)
   ಮುಗಿಯದ್ದ ವಿಷಯ ಅಲ್ಲದಾ ಮನಸ್ಸು ಹೇಳಿರೆ?
   ಎಷ್ಟು ಇದ್ದಪ್ಪಾ ಹೇಳಿ ಆವುತ್ತು..

   🙂

 5. Ashoka says:

  ಮ೦ಗಳೂರಣ್ಣಾ
  ನಿ೦ಗಳೆ ಹೇಳಿದಾ೦ಗೆ
  “ಜಗತ್ತಿಲ್ಲಿ ಒಳ್ಳೆದೂ ಇಲ್ಲೆ ಕೆಟ್ಟದೂ ಇಲ್ಲೆ, ನಮ್ಮ ಭಾವ ಹೆ೦ಗೋ ಹಾ೦ಗೆ ನವಗೆ ಕಾಣ್ತು.”
  ಹೇಳುದರ ಒಪ್ಪುತ್ತರೆ
  ‘ಮನಸ್ಸಿಲ್ಲಿ ಕೆಟ್ಟ ಆಲೋಚನೆ ಮಡಿಕ್ಕೊ೦ಡು ಕುಶಿ ಆಗಿಪ್ಪಲಿಲ್ಲೆ ” ಹೇಳುವ ವಾಕ್ಯ (ನಿ೦ಗಳೆ ಬರದ್ದು, ಲೇಖನದ ಕಡೆ೦ಗೆ,) ಹೇಳುದು ಒ೦ದಕ್ಕೊ೦ದು ಹೊ೦ದಾಣೀಕೆ ಆಗದ್ದ ವಿಚಾರ೦ಗ ಅಲ್ಲದಾ?

  ಒಳ್ಳೆಯ ಪ್ರಯತ್ನ ನಿ೦ಗಳದ್ದು.

  ಮನಸ್ಸಿನ ಶುದ್ದ ಮಾಡುವ ಕಲೆ ಎ೦ತದು? ಆದು ಹೇ೦ಗೆ ಸಾಧ್ಯ ? ಯಾವ ಧ್ಯಾನದ ಮೂಲಕ ಶುದ್ದೀಕರಣ ಸಾಧ್ಯ ಹೇಳುದೆಲ್ಲ ತಿಳ್ಕೊ೦ಬಲೆ ಕುತೂಹಲ೦ದ ಕಾಯ್ತಾ ಇದ್ದೆ.

  • ಅಶೋಕಣ್ಣಾ, 🙂
   ಈ ಎರಡೂ ವಾಕ್ಯಂಗೊ ಒಂದೇ ನಾಣದ ಎರಡು ಮೋರೆಗೊ,
   ಬೇರೆ ಬೇರೆ ಕಂಡರೂ ಪ್ರತಿನಿಧಿಸುದು ಒಂದೇ ತತ್ವವ..

   ಹ್ಮ್ಮ್ಮ್…
   ಹೀಂಗೆ ಹೇಳಿರೆ ಹೇಂಗೆ?

   ಜಗತ್ತಿಲ್ಲಿ ಒಳ್ಳೆದೂ ಇಲ್ಲೆ ಕೆಟ್ಟದೂ ಇಲ್ಲೆ,
   ನಾವು ಒಳ್ಳೆಯ ಯೋಚನೆ ಮಾಡಿರೆ ಕೂಡಲೇ ಆ ಒಳ್ಳೆಯ ಯೋಚನೆ ಕೂಡಲೇ ಮತ್ತೊಂದು ಒಳ್ಳೆಯ ಯೋಚನೆಯ ಆಕರ್ಶಿಸುತ್ತ್ತು.
   ಆ ಎಲ್ಲ ಒಳ್ಳೆಯ ಯೋಚನೆಗಳ ಪ್ರತಿಫಲವೇ ನಮ್ಮ ಒಳ್ಳೆಯ ಭಾವನೆಗೊ, ಆ ಎಲ್ಲ ಒಳ್ಳೆಯ ಭಾವನೆಗೊ ಸೇರಿ ನಮ್ಮೊಳ ಖುಶಿಯ ಉಂಟುಮಾಡ್ತು.
   .
   ಜಗತ್ತಿಲ್ಲಿ ಒಳ್ಳೆದೂ ಇಲ್ಲೆ ಕೆಟ್ಟದೂ ಇಲ್ಲೆ,
   ನಾವು ಹುಳುಕ್ಕಟೆ ಯೋಚನೆ ಮಾಡಿರೆ ಕೂಡಲೇ ಆ ಕೆಟ್ಟ ಯೋಚನೆ ಕೂಡಲೇ ಮತ್ತೊಂದು ಕೆಟ್ಟ ಯೋಚನೆಯ ಆಕರ್ಶಿಸುತ್ತ್ತು.
   ಆ ಎಲ್ಲ ತಪ್ಪು ಯೋಚನೆಗಳ ಪ್ರತಿಫಲವೇ ನಮ್ಮ ಕೆಡುಕು ಭಾವನೆಗೊ, ಆ ಎಲ್ಲ ಹಾಳು ಭಾವನೆಗೊ ಸೇರಿ ನಮ್ಮೊಳ ದುಃಖವ ಉಂಟುಮಾಡ್ತು.
   .
   ಮನಸ್ಸಿಲ್ಲಿ ಕೆಟ್ಟ ಆಲೋಚನೆ ಮಡಿಕ್ಕೊಂಡು ಖುಶಿಯಾಗಿಪ್ಪಲೆ ಸಾದ್ಯವೆ ಇಲ್ಲೆ.
   ಸರಿ ಅಲ್ಲದಾ??

   ಒಂದು ಉದಾಹರಣೆ ತೆಕ್ಕೊಂಬೊ,
   ಉದಿಯಪ್ಪಗ ಆಪೀಸಿಂಗೆ ಹೋವುತ್ತಾ ಇಪ್ಪಗ
   ” ಆ ಫೈಲಿಲ್ಲಿ ಇನ್ನೂ ಒಂದು ಕೆಲಸ ಬಾಕಿ ಇದ್ದು ಯಾವಾಗ ಮುಗಿತ್ತೋ ಶೆನಿ 🙁 🙁 ” ಹೇಳಿ ಗ್ರೇಶಿರೆ,
   ಬೋಸ ( boss ) ಯಾವಾಗ ಕೇಳುಗೋ ಹೇಳುವ ಹೆದರಿಕೆಲಿ,
   ಒಂದು ವೇಳೆ ಅವ ಕೇಳಿಯರೆ,
   ನಮ್ಮತ್ರೆ ಉತ್ತರ ಇಲ್ಲೆ,
   ಅದರ ನೋಡಿ ಅವಂಗೂ ಕೋಪ ಬಕ್ಕು.
   “if you cant do, you would have told earlier …” ಹೇಳುಗು,
   ಅದರ ಕೇಳಿ,
   “ಇಷ್ಟೆಲ್ಲ ಮಾಡಿದ್ದು ನೆಂಪೇ ಇಲ್ಲೆ.. ಬೈವಲೊಂದು ಗೊಂತಿದ್ದು ” ಹೇಳಿ ಮನಸ್ಸಿಲ್ಲೇ ಬೈಕ್ಕೊಂಡು ಇಡೀ ದಿನ ಹಾಳು ಮಾಡಿಗೊಂಗು..

   ಅದೇ,
   ಉದಿಯಪ್ಪಗ ಆಪೀಸಿಂಗೆ ಹೋವುತ್ತಾ ಇಪ್ಪಗ
   ” ಆ ಫೈಲಿಲ್ಲಿ ಇನ್ನೊಂದು ಕೆಲಸ ಬಾಕಿ – ಅದಾದರೆ ಮುಗುತ್ತಿದಾ :):) ”
   ಹೇಳಿ ಆನು ಗ್ರೇಶಿರೆ, ಎನಗೆ ಅದು ಮತ್ತೂ ಮತ್ತೂ ಖುಶಿ ಕೊಡ್ತು.
   ಒಂದು ವೇಳೆ boss ಕೇಳಿದರೆ,
   “just one entry is left sir.. i’l present it in a moment 🙂 :)” ಹೇಳಿ ಖುಶಿಲಿ ಹೇಳುವೆ.

   ಘಟನೆ ಒಂದೇ ನಮ್ಮ ಆಲೋಚನೆಯೇ ಅದರ ಬದಲುಸಿದ್ದು…

   • Ashoka says:

    ಮ೦ಗಳೂರಿನ ಅಣ್ಣಾ
    ನಿ೦ಗಳ ಬರಹದ ಅರ್ಥ ಗ್ರಹಿಸುಲೆ ಪ್ರಯತ್ನಿಸಿದೆ ಆನು
    ಆದರೆ, ಒಳ್ಲೆದು ಕೆಟ್ತದು ಇಲ್ಲದ್ದ ಪ್ರಪ೦ಚಲ್ಲಿ ಮತ್ತೆ ಒಳ್ಳೆ ಯೋಚನೆ ಕೆಟ್ಟ ಯೋಚನೆ ಹೇಳಿ ಇದ್ದಾ?
    ಎನ್ನ ಒಳ್ಳೆ ಯೋಚನೆ ಇನ್ನೊಬ್ಬ೦ಗೆ ಕೆಟ್ಟದಾಗಿಕ್ಕು. ಇನ್ನೊಬ್ಬನ ಒಳ್ಳೆ ಯೋಚನೆ ಎನಗೆ ಕೆಟ್ಟದಾಗಿಕ್ಕು. ಹಾ೦ಗಾಗಿ ಬಹುಶ ಒಳ್ಳೆ ಯೋಚನೆ, ಕೆಟ್ಟ ಯೋಚನೆ ಹೇಳಿಯೂ ಇಪ್ಪದು ಸ೦ಶಯ.
    ನಿ೦ಗ ಬಹುಶ ನಿ೦ಗಳ ಉದಾಹರಣೆಲಿ ಪೊಸಿಟಿವ ಥಿ೦ಕಿ೦ಗ್ ಬಗ್ಗೆ ಹೇಳ್ತಾ ಇದ್ದಿ. ಅಥವಾ ಮನುಶ್ಯರ ಧೋರಣೆಗಳ ಬಗ್ಗೆ.
    ಬಹುಶ ತೀರಾ ಹೆಚ್ಚು ಕೆಲಸ ಮಾಮೂಲಾಗಿ ಒ೦ದೆ ಮನುಶ್ಯ೦ಗೆ ಬೊಸ್ಸ್ ತಳ್ಳುತ್ತರೆ (ಕೊನ್ಸಿಸ್ಟಾ೦ಟ್ ಆಗಿ) ಅಲ್ಲಿ ಸಕಾರಾತ್ಮಕ ಧೋರಣೆ ಬಪ್ಪದು ಕಸ್ಟ. ಎರಡೂ ಕೈ ಸೇರಿ ಬರೆಕ್ಕಪ್ಪದಲ್ಲದಾ ಚಪ್ಪಾಳೆ?

    ಸಾಧಾರಣ ಆನು ಕಲ್ತ ‘ಮೇನೇಜೆಮೆ೦ಟ್ ‘ ಲ್ಲಿ ೫-೬ ನಮೂನೆಯ ಜನ೦ಗ ಇರ್ತವು, ಬೊಸ್ಸ್ ಯಾವ ನಮೂನೆಯ ಜನ ಹೇಳುದರ ಮೇಲೆ, ಅವನ ‘ಡಿಮಾ೦ಡ್’ ಗ ಇಪ್ಪದು.

    ನಕಾರಾತ್ಮಕ ಧೋರಣೆಗ ಅನುಭವ ನಿರ್ಮಿತವಾದ್ದದಲ್ಲದ್ದೆ ಸುಮ್ಮನೆ ಬಪ್ಪದಲ್ಲ. ಮತ್ತೆ ಕೆಲವು ವಿಶಯ೦ಗಳಲ್ಲಿ ನಕಾರಾತ್ಮಕ ಧೋರಣೆಗ ಇದ್ದ ಕೂಡಲೆ ಅವ ನ ಅ೦ತರ್ಯಲ್ಲೆ ನಕಾರಾತ್ಮಕತೆ ಇದ್ದು ಹೇಳಿಯೂ ಅಲ್ಲ.
    http://www.officepolitics.com site provides some information about various types of politics happening in workplace. Peoples attitude will take a shift depending on the previous experieces.

    Thank you
    -Ashoka

    • ಅಶೋಕಣ್ಣಾ,
     positive thinking ಂಗಿಂಗೂ, ಒಳ್ಳೇಯೋಚನೆಗೊಕ್ಕೂ ವೆತ್ಯಾಸ ಇದ್ದಾ?
     ಎರದೂ ಒಂದೇ ಅಲ್ಲದಾ?

     ಆರಿಂಗೆ ಈ ಕ್ಷಣಕ್ಕೆ ಒಳ್ಳೆದು ಅಥವಾ ಕೆಟ್ಟದು ಹೇಳಿ ಕಂಡರೂ ಯಾವ ಯೋಚನೆ ಧರ್ಮ ಮಾರ್ಗಲ್ಲಿ ಇರುತ್ತೋ, ಅದು ಯಾವತ್ತಿಂಗೂ ಒಳ್ಳೆಯೋಚನೆಯೇ.. ಅಲ್ಲದಾ?
     ಜಗತ್ತಿಲ್ಲಿ ಒಳ್ಳೆದು ಕೆಟ್ಟದು ಹೇಳಿ difference ಇರ ಆದರೆ ನಮ್ಮ ಯೋಚನೆಗೊ ನವಗೆ ಪರಿಸ್ಥಿತಿಯ ಹಾಂಗೆ ಕಾಂಬ ಹಾಂಗೆ ಮಾಡುತ್ತು.
     ಅಷ್ಟೇ..!!

     {ನಕಾರಾತ್ಮಕ ಧೋರಣೆಗ ಅನುಭವ ನಿರ್ಮಿತವಾದ್ದದಲ್ಲದ್ದೆ ಸುಮ್ಮನೆ ಬಪ್ಪದಲ್ಲ.} – ಜಗತ್ತಿಲ್ಲಿ ನಕಾರಾತ್ಮಕ ಅಂಶಂಗೊ ಯಾವುದೂ ಇಲ್ಲೆ..
     ಹೇಂಗೆ ಬೆಣಚ್ಚು ಇಲ್ಲದ್ದೆ ಇಪ್ಪ ಸ್ಥಿತಿಯ ಕಸ್ತಲೆ ಹೇಳ್ತೋ?
     ಹೇಂಗೆ ಬೆಶಿ ಇಲ್ಲದ್ದೆ ಇಪ್ಪ ಸ್ಥಿತಿಯ ತಂಪು ಹೇಳ್ತೋ?
     ಹಾಂಗೇ,
     ಎಲ್ಲಿ positive ಇಲ್ಲೆಯೋ ಆ ಸ್ಥಿತಿಯ negative ಹೇಳುದು..
     ಸುರೂವಾಣ ಅನುಭವವ ಇಪ್ಪಹಾಂಗೇ ತೆಕ್ಕೊಂಡರೆ ಅಕ್ಕಷ್ಟೆ..!!
     ಸಕಾರಾತ್ಮಕತೆಯ ಬೆಳೆಶಿಯೊಂಬಲೆ ನಮ್ಮ ಪ್ರಯತ್ನ ಬೇಕಾವುತ್ತು ಎಂತ ಹೇಳಿರೆ ಪುಣ್ಯಕ್ಕೆ ಅಂಟಿಗೊಂಬ ಗುಣ ಇಲ್ಲೆ, ಒಳ್ಳೆ ಗುಣಂಗಳೂ ಅಷ್ಟೇ ಬೇಗ ಬಿಡ್ಲೆಡಿಗು..
     ನಕಾರಾತ್ಮಕತೆ ಹಾಂಗಲ್ಲ – ಎಲ್ಲಿ ಸಕಾರಾತ್ಮಕತೆ ಇಲ್ಲೆಯೋ ಅಲ್ಲಿ ಒಂದು ರೀತಿಯ ಅಂಟು ಉತ್ಪನ್ನ ಆವುತ್ತು.
     ನೋಡಿ ಬೇಕಾರೆ,
     ಉದಿಯಪ್ಪಗ ಬೇಗ ಎದ್ದೊಂಡಿದ್ದವಂಗೆ ತಡವಾಗಿ ಏಳುದು ಸುಲಭ,
     ತಡವಾಗಿ ಎದ್ದೊಂಡಿದ್ದವಂಗೆ ಬೇಗ ಏಳುದು?
     🙂
     ಪ್ರಯತ್ನಂದ ಮಾತ್ರ ಸಕಾರಾತ್ಮಕ ಅಂಶಂಗಳ ಬೆಳೆಶಿಯೊಂಬಲೆ ಅಕ್ಕಷ್ಟೆ..!!
     ಸಕಾರಾತ್ಮಕ ಅಂಶಂಗಳ ಅಭಾವವೇ ನಕಾರಾತ್ಮಕತೆ…!!

     {ಕೆಲವು ವಿಶಯ೦ಗಳಲ್ಲಿ ನಕಾರಾತ್ಮಕ ಧೋರಣೆಗ ಇದ್ದ ಕೂಡಲೆ ಅವ ನ ಅ೦ತರ್ಯಲ್ಲೆ ನಕಾರಾತ್ಮಕತೆ ಇದ್ದು ಹೇಳಿಯೂ ಅಲ್ಲ.} – super ಒಪ್ಪ..

     ಬಂದೊಂಡಿರಿ..
     ಖುಶಿ ಆತು :):):)

     • Ashoka says:

      ಮ೦ಗಳೂರಿನಣ್ಣಾ
      ಬಹುಶ ಬಹಳ ನಿರ್ಲಿಪ್ತತಾ ಮನೋಭಾವ ಮಡಿಕ್ಕೊ೦ಡ ಮನುಶ್ಯ೦ಗೆ ‘ಜಗತ್ತಿಲ್ಲಿ ಒಳ್ಳೆದು ಮತ್ತು ಕೆಟ್ಟದು ಹೇಳುದಿಲ್ಲೆ, ನಮ್ಮ ಯೋಚನೆಯ ಪ್ರಕಾರ ಒಳ್ಲೆದು ಕೆಟ್ಟದಕ್ಕು ಕೆಟ್ಟದು ಒಳ್ಳೆದಕ್ಕು ‘ ಹೇಳುವ ವಿವರಣೆ ಹೊ೦ದುಗ ಎನಾ?
      ಬೆಣಚ್ಚು ಕತ್ತಲೆಯ ನಡೂಕೆಯೆ ಟ್ವಿಲೈಟ್ ಹೇಳಿ ಒ೦ದಿದ್ದಲ್ಲದಾ? (ಮುಸ್ಸ೦ಜೆ, ಮು೦ಜಾವು)
      ಪೊಸಿಟಿವ್ ಅಲ್ಲದ್ದದೆಲ್ಲಾ ನೆಗೇಟಿವ್ ಹೇಳುವ ನಿರ್ಧಾರ ಸರಿಯಲ್ಲ, ವಾಸ್ತವಿಕತೆ ಹೇಳುದು ಎರಡರ ನಡೂಕೆ ಇಕ್ಕು.
      ಸಕಾರಾತ್ಮಕ ಅ೦ಶ೦ಗಳ ಅಭಾವ ನಕಾರಾತ್ಮಕತೆ ಹೇಳುದು ಎಸ್ಟು ಸರಿ? ನಿರ್ಲಿಪ್ತತೆ ಮತ್ತು ವಾಸ್ತವೀಕತೆ ಯೂ ಇಕ್ಕು ಹೇಳುದು ಎನ್ನ ಅನುಭವ ನಿರ್ಮಿತ ಅಭಿಪ್ರಾಯೆ
      ಎಲ್ಲದರಿ೦ದ ದೊಡ್ಡ ಪ್ರಶ್ಣೆ ಹೇಳೀರೆ, ನಿಜವಾಗಿಯೂ ಲೋಕಲ್ಲಿ ಒಳ್ಳೆದು ಕೆಟ್ಟದು ಹೇಳಿ ಇಲ್ಲೆಯಾ? ಅ೦ಬಗ ನ್ಯಾಯ ಅನ್ಯಾಯ ಹೇಳಿ ಇದ್ದಾ? ಇದೆರಡೂ ಇಲ್ಲದ್ದರೆ ಮತ್ತೆ ಧರ್ಮ ಅಧರ್ಮ ಹೇಳಿ ಒ೦ದಿದ್ದಾ? ಇದ್ದರೆ ಅದಕ್ಕೆ೦ತ ಮಾನದ೦ಡ?
      ಇ೦ತಾ ಸ೦ದೇಶ೦ಗ ಮನುಶ್ಯರಿ೦ಗೆ ಎ೦ತ ಪರಿಣಾಮ ಬೀರುಗು? (ಒಳ್ಲೆದು ಕೆಟ್ಟದು ಹೇಳಿ ಇಲ್ಲೆ ಹೇಳುವ೦ತಾದ್ದು)
      ಮನುಶ್ಯನ ಕೆಟ್ಟ ಕೆಲಸ೦ಗೊಕ್ಕೆ ಪ್ರೇರೇಪಿಸದಾ ಇದು?

     • ಯಾವ ವಿಚಾರಲ್ಲಿ ನಮ್ಮ ಅಂತರಂಗಕ್ಕೂ ಬಹಿರಂಗಕ್ಕೂ ಹೊಂದಿಕೆ ಇರ್ತೋ ಅದೇ ಧರ್ಮ.. ಅಲ್ಲಿಪ್ಪದು ಆನಂದ.. ಅದು ಒಳ್ಳೆದು.. ಅದು ಸಕಾರಾತ್ಮಕತೆ..
      ಇಲ್ಲದ್ದರೆ..???
      ಆ ಅಭಾವಕ್ಕೆ ಹೇಳುದು ಅಧರ್ಮ – ಕೆಟ್ಟದು – ನಕಾರಾತ್ಮಕತೆ ಹೇಳಿ..
      ಧರ್ಮವ ಹಿಡಿವಲೆ ಪ್ರಯತ್ನ ಬೇಕು..
      ಬಿಡ್ಲೆ ಹೆಚ್ಚು ಕಷ್ಟ ಇಲ್ಲೆ..
      ಧರ್ಮ ಮಾರ್ಗ ಯಾವತ್ತೂ ಕೆಟ್ಟದಾರಿ ಹಿಡಿವಲೆ ಬಿಡ..

      ನಮ್ಮ ಎಲ್ಲ ಪ್ರಷ್ನೆಗೊಕ್ಕೆ ನಮ್ಮೊಳವೇ ಉತ್ತರ ಸಿಕ್ಕುತ್ತು.. ಮೂರನೇ ಕಂತಿಲ್ಲಿ ಆ ಬಗ್ಗೆ ಬರದ್ದೆ.. 🙂

  • ಅಶೋಕಣ್ಣಾ,
   ಒಪ್ಪಕ್ಕೆ ತುಂಬ ಧನ್ಯವಾದಂಗೊ..
   ನಿಂಗಳ ಸಹಕಾರ ಬೇಕೇ ಬೇಕು :):):)

   • jayashree.neeramoole says:

    ತುಂಬಾ ಆರೋಗ್ಯಕರವಾದ ಚರ್ಚೆ 🙂

    “ಕೆಲವು ವಿಶಯ೦ಗಳಲ್ಲಿ ನಕಾರಾತ್ಮಕ ಧೋರಣೆಗ ಇದ್ದ ಕೂಡಲೆ ಅವ ನ ಅ೦ತರ್ಯಲ್ಲೆ ನಕಾರಾತ್ಮಕತೆ ಇದ್ದು ಹೇಳಿಯೂ ಅಲ್ಲ.” ಹೇಳುದು ಸರಿ

    ಆರು ವ್ಯಕ್ತಯಲ್ಲಿಪ್ಪ ನಕಾರಾತ್ಮಕ ಧೋರಣೆಗಳ ಮಾಂತ್ರ ವಿರೋಧಿಸಿ ಆ ವ್ಯಕ್ತಿಯ ಮೇಲೆ ದ್ವೇಷ ಮಡುಗುತ್ತಾಯಿಲ್ಲೆಯೋ… ವ್ಯಕ್ತಿಯಲ್ಲಿಪ್ಪ ಧನಾತ್ಮಕ ಧೋರಣೆಗಳ ಮಾಂತ್ರ ಪ್ರೀತಿಸಿ ಆ ವ್ಯಕ್ತಿಯ ಮೇಲೆ ಮೋಹ ಮಡುಗುತ್ತಾಯಿಲ್ಲೆಯೋ… ಅವ ಧರ್ಮ ಮಾರ್ಗಲ್ಲಿ ಇದ್ದ ಹೇಳಿ ಹೇಳುಲಕ್ಕು…

    • ಜಯಕ್ಕಾ,
     ನಿಂಗಳೂ ಸೇರಿದ್ದು ನೋಡಿ ಖುಶಿ ಆತಿದಾ..
     ಬನ್ನಿ…

    • Ashoka says:

     ಆಕ್ಕಾ
     ತಾತಿಕವಾಗಿ ನಿ೦ಗ ಹೇಳಿದ್ದರ ಆನುದೆ ಒಪ್ಪಿದೆ.ಆದರೆ ಧರ್ಮ ಮಾರ್ಗ ಹೇಳಿರೆ ಎ೦ತದು?
     ಭಟ್ಯ ಕರಿಯ ಇಬ್ರಾಯಿ ಇತ್ಯಾದಿಗಳ ಅನಿಸಿಕೆಲೂ ಒಳ್ಳೆದಿಕ್ಕಲ್ಲದಾ? ಈ ಒಳ್ಳೆದು ಕೆಟ್ಟದರ ಬರೆ ಗುರುತಿಸಿದರೆ ಸಾಕ ಅಲ್ಲ ಅಳವದಿಸುಲೆ ಪ್ರಯತ್ನಿಸೆಕ್ಕಾ?

     • jayashree.neeramoole says:

      ಮೊದಲ ಎರಡು ಪ್ರಶ್ನೆಗಕ್ಕೆ ಉತ್ತರ ಮೇಲೆ ಹೇಳಿದ್ದರಲ್ಲೇ ಇದ್ದು…

      ಬರೇ ಒಳ್ಳೇದು ಕೆಟ್ಟದರ ಗುರುತಿಸುತ್ತು… ಆದರೆ ಅಳವಡಿಸಿದ್ದಿಲ್ಲೇ ಹೇಳಿ ಆದರೆ ಅವ ದುರ್ಯೋಧನನ ಹಾಂಗೆ ಆವುತ್ತ… ದುರ್ಯೋಧನ ಕೃಷ್ಣನತ್ರೆ ಹೇಳುತ್ತ “ಧರ್ಮ ಯಾವುದು ಹೇಳಿ ಎನಗೆ ಗೊಂತಿದ್ದು… ಆದರೆ ಅಳವಡಿಸಿಗೊಮ್ಬಲೇ ಎಡಿತ್ತಿಲ್ಲೇ…”

     • Ashoka says:

      ಅಕ್ಕಾ
      ಆದರೆ ಒಳ್ಳೆದು ಕೆಟ್ಟದೆ೦ಬುದು ಇಲ್ಲದ್ದ ಮೇಲೆ ಅದರ ಅಳವಡಿಸಿಗೊ೦ಬದೆಲ್ಲಿ೦ದ ಬ೦ತು?
      ನಕಾರಾತ್ಮಕ ಹಾಗೂ ಸಕಾರಾತ್ಮಕ ಧೋರಣೆಗಳನ್ನೂ ಅಳವಡಿಸಿಗೊ೦ಬದು ಬಹಳ ಕಸ್ಟ ಎ೦ತಕ್ಕೆ ಹೇಳಿರೆ, ಒಬ್ಬನ ಸಕಾರಾತ್ಮಕ ಧೋರಣೆಗ ಅನುಭವ ಜನ್ಯವಾದಿಕ್ಕು. ಅಸ್ಟಪ್ಪಗ ಅನುಭವವೆ ಬುನಾದಿಯಾಗಿಪ್ಪ ಅ೦ತ ಸಕಾರಾತ್ಮಕ ಧೋರಣೆಗಳ ಅಳವಡಿಸಿಗೊ೦ಬದಾದರೂ ಹೇ೦ಗೆ?

      ಸುಯೋಧನ ವಿದ್ಯಾವ೦ತ ಮತ್ತು ಬುದ್ದಿವ೦ತ. ಅದರಿ೦ದಾಗಿಯೆ ಧರ್ಮ ಹೇಳುದೊ೦ದಿದ್ದದರನ್ನೂ ಅದರ ಸ೦ಪೂರ್ಣ ಜ್ನಾನವನ್ನೂ ಅವ ಪಡಕ್ಕೊ೦ಡಿಕ್ಕು. ಧರ್ಮದ ಸ೦ಪೂರ್ಣ ಪರಿಕಲ್ಪನೆ ಇಲ್ಲದ್ದವು ಎ೦ತ ಮಾಡುದು? (ಅಥವಾ ಎನ್ನ ಹಾ೦ಗಿಪ್ಪ ಅರ್ಧ೦ಬರ್ಧ ಜ್ನಾನದವು?)
      ಒ೦ದಾ ಇಲ್ಲಿ ಕೊಟ್ಟ ವಿಶಯ೦ಗಳಲ್ಲೆ ಗೊ೦ದಲ ಇದ್ದು, ಅಥವಾ ಇದರ ಆನು ಅರ್ಥ ಮಾಡಿಗೊ೦ಡದಲ್ಲಿ ಗೊ೦ದಲ ಇದ್ದು. ಒಳ್ಳೆದು ಕೆಟ್ಟದು ಇಲ್ಲೆ ಹೇಳುವ ವಾಕ್ಯ ಎನ್ನ ಸ೦ಪೂರ್ಣ ಗೊ೦ದಲಕ್ಕೆ ಈಡು ಮಾಡಿದ್ದು.

     • jayashree.neeramoole says:

      ಹಣ್ಣು ಹೇಂಗಿದ್ದು ಕೇಳಿರೆ ರುಚಿಯಾಗಿದ್ದು ಹೇಳುಲಕ್ಕು. ಹೇನ್ಗಿಪ್ಪ ರುಚಿ ಕೇಳಿರೆ ಸೀವು ರುಚಿ ಹೇಳುಲಕ್ಕು… ಹೇನ್ಗಿದ್ದ ಸೀವು ಕೇಳಿರೆ ಅತಿ ಮಧುರವಾಗಿದ್ದು ಹೇಳುಲಕ್ಕು… ಅದಕ್ಕಿಂತ ಜಾಸ್ತಿ ಅನುಭವಿಸಿಯೇ ತಿಳಿಯೆಕ್ಕಷ್ಟೇ… ಈ ವಿಷಯವೂ ಹಾಂಗೆ…

      ಗುರುಗಳಿಂಗೆ ಸಂಪೂರ್ಣ ಶರಣಪ್ಪದು ಸುಲಭ ದಾರಿ 🙂

     • Ashoka says:

      ಸರಿ ಅಕ್ಕಾ 🙂
      ಉದಾಹರಣೆಗ ತೀರಾ ಮಾತಾಡುವ ವಿಶಯಕ್ಕೆ ಸ೦ಬ೦ಧ ಇಲ್ಲದ್ದರೂ ಒದುಲೆ ಲಾಯಕ ಆವ್ತು.
      ಪುನಹ ‘ಹಣ್ಣುಗ ಎಲ್ಲಾ ರುಚಿ ಇರ್ತಿಲ್ಲೆ, ಅದಲ್ಲೂ ಚೀಪೆ ಒ೦ದೆ ರುಚಿ ಅಲ್ಲ, ಉಪ್ಪಿಗಿ೦ತಲು ರುಚಿಯು ತಾಯಿಗಿ೦ತಲು ಬ೦ಧು ಇಲ್ಲೆ೦ಬ ಗಾದೆ ನುಡಿ ಕೇಳಿರುವೆನು,.. ‘ ಹೇಳಿ ಎಲ್ಲಾ ಎನ್ನ ಚರ್ಚೆ ಇಲ್ಲೆ. ಆದರೂ ಈ ಸ೦ಕೋಲೆಲಿ ವಿವರಿಸಿದ ಹಲವಾರು ವಿಶಯ೦ಗಳ ತಾತಿಕ ವಾಗಿ ಮೆಚ್ಚುತ್ತೆ ಆನು.
      ಅದರಲ್ಲೂ ಎಲ್ಲ ಸಿಹಿ ತಿ೦ಡಿಗಳೊಟ್ಟಿ೦ಗೆ ಒ೦ದೊ೦ದರಿ ಖಾರ ಇಪ್ಪ ಉಪ್ಪಿನಕಾಯಿ ದೆ ಲಾಯಕ ಆವ್ತು ಹೇಳುದು ಎನ್ನ ಅಭಿಮತ. 🙂

     • ಅಶೋಕಣ್ಣಾ,
      “ಒಳ್ಳೆದು ಕೆಟ್ಟದು ಇಲ್ಲೆ” ಹೇಳಿ ಹೇಳಿದ್ದಲ್ಲ ಆನು,
      ““ಜಗತ್ತಿಲ್ಲಿ ಒಳ್ಳೆದೂ ಇಲ್ಲೆ, ಕೆಟ್ಟದೂ ಇಲ್ಲೆ; ಇಪ್ಪದು ಇಪ್ಪದೇ” ನಮ್ಮ ಭಾವ ಹೇಂಗೋ? ನವಗೆ ಹಾಂಗೆ ಕಾಣ್ತು. life is as Good as our Interpretation…!!” – ಹೇಳಿ ಹೇಳಿದ್ದು.. ಇದರ ಅರ್ಥ, ಎಲ್ಲ ಸನ್ನಿವೇಶಂಗಳನ್ನೂ ನವಗೆ ಬೇಕಾದಹಾಂಗೆ ಬದಲುಸಿಯೊಂಬಲೆ ಎಡಿತ್ತು ಹೇಳಿಯೂ ಆವುತ್ತು ಅಲ್ಲದಾ?

      :):)

      ನಿಂಗಳ ವಿಚಾರ ತುಂಬ ಮೆಚ್ಚಿಗೆ ಆತು.. :):)

     • ಅಶೋಕಣ್ಣೋ,
      ಇದಾ ಇದರ ಮುಂದುವರಿದ ತುಂಡು ಹಾಕಿದ್ದು..
      ಓದಿ ಹೇಳಿ please….

     • Ashoka says:

      Sure
      “For every ailment under the sun
      there is a treatment or there is none,
      if there is one, try to find it out,
      otherwise forget it”
      See my response under the new part.

 6. ಶರ್ಮಪ್ಪಚ್ಚಿ says:

  ಲಾಯಿಕ ಆಯಿದು ಮಾಣಿ ವಿಚಾರಂಗಳ ಮಂಡನೆ ಮಾಡಿದ್ದು.
  ನಮ್ಮ ಪೂರ್ವಜರು, ಋಷಿ ಮುನಿಗೊ ಎಲ್ಲರೂ, ಈ ನಮ್ಮ ದೇಹ, ಮನಸ್ಸು ಬುದ್ಧಿ ಎಲ್ಲವನ್ನೂ ಒಂದೇ ಆಗಿ, ಇಡೀ ಆಗಿ ನೋಡಿದವು. ಶರೀರರದ ಪ್ರತಿಯೊಂದು ಅಂಗಂಗಳೂ ಒಂದಕ್ಕೊಂದು ಪೂರಕ ಹೇಳಿಯೇ ತಿಳ್ಕೊಂಡವು.
  ಹಾಂಗಾಗಿಯೇ ಶರೀರವ ಸುಸ್ಥಿಲಿ ಮಡುಗಲೆ ಯೋಗ, ಪ್ರಾಣಾಯಾಮ,ಧ್ಯಾನ ಎಲ್ಲವನ್ನೂ ನವಗೆ ತಿಳಿಶಿ ಕೊಟ್ಟವು.
  ಮನಸ್ಸಿನ ಭಾವನಗೊಕ್ಕೆ ಮತ್ತೆ ಉಸಿರಿಂಗೆ ನೇರ ಸಂಬಂಧ ಇದ್ದು ಹೇಳಿ ನವಗೆ ನಿತ್ಯದ ಅನುಭವಲ್ಲಿಯೇ ಗೊಂತಾವ್ತು. ಉದ್ವೇಗಲ್ಲಿ ಇಪ್ಪಗ ಉಸಿರಾಟವೂ ಜೋರಾಗಿಯೇ ಇರ್ತು. ಅದೇ ಧ್ಯಾನಲ್ಲಿ ಇಪ್ಪಗ, ಪ್ರಶಾಂತ ಮನಸ್ಸಿಲ್ಲಿ ಇಪ್ಪಗ ತುಂಬಾ ಸಾವಧಾನಲ್ಲಿ ಇರ್ತು.
  ವಿಶ್ವ ಆರೋಗ್ಯ ಸಂಸ್ಥೆ ಕೂಡಾ “ಆರೋಗ್ಯ” ವ ನಿರ್ವಚನೆ ಮಾಡುವಾಗ:
  Health is a state of complete physical, mental, and social well-being and not merely the absence of disease or infirmity. ಹೇಳಿ ಹೇಳ್ತಾ ಇದ್ದು.
  ಇದರ ಮುಂದುವರುದ ಕಂತಿನ ನಿರೀಕ್ಷೆಲಿ ಇದ್ದೆ

  • ಯೋಗಿಗಳ ಪ್ರಕಾರ,
   ನಮ್ಮ ಎಲ್ಲಾ ಅಂಗಂಗಳೂ ಶಕ್ತಿಯಿಂದಲೇ ಆದ್ದಡ..
   ಎಲ್ಲ ಕೆಲಸವನ್ನೂ ಮಾಡುವ ಶಕ್ತಿ ಇಪ್ಪ ಜೀವಕೋಶಂಗೊ ಅವರೊಳದಿಕ್ಕೇ ಕೆಲಸವ ಹಂಚಿಯೊಂಡು ಹೃದಯ, ಕೈ, ಕಾಲು, ಕಿಡ್ಣಿ, ಲಿವರು ಹೇಳಿ ಎಲ್ಲ ಆದ್ದಡ..
   ಹಾಂಗಾಗಿ ಆ ಶಕ್ತಿಯ ಕಂಡುಕೊಂಡರೆ ನಮ್ಮ ಎಲ್ಲ ರೋಗಗಳಿಂದಲೂ ಮುಕ್ತಿ ಪಡವಲೆ ಆವುತ್ತು ಹೇಳ್ತವು

   ಎನಗೆ ಸರಿ ಗೊಂತಿಲ್ಲೆ.. ಕೇಳುಸಿಯೊಂಬಗ ಒರಕ್ಕು ತ್”ಊಗಿಂಡು ಇತ್ತು.. :(:(
   ಅಲ್ಲಿಗೆ ಎಲ್ಲವೂ ಒಂದಕ್ಕೊಂದು ಪೂರಕವೇ ಆತಿಲ್ಲೆಯೋ?

   ತುಂಬು ಪ್ರೀತಿಯ ಒಪ್ಪಕ್ಕೆ ತುಂಬ ತುಂಬ ಧನ್ಯವಾದಂಗೊ.. 🙂 🙂 🙂

 7. ಚೆನ್ನೈ ಭಾವ says:

  ಒಳ್ಳೆ ಪಾಯಿಂಟ್ ಭಾವ.

 8. ಸೂರ್ಯ says:

  ಲಾಯಿಕ ಆಯ್ದು ಬರದ್ದು.. ವಿಚಾರವಂತ ಲೇಖನ…
  ಬರಳಿ…ಸರಣಿ ಲೇಖನಂಗೊ°

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *