ನೀರು- ನಮ್ಮ ಜೀವನದ ಬೇರು

June 20, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಲ್ಲಿ ಇಪ್ಪ ಎಲ್ಲಾ ಹವ್ಯಕ ಬಾಂಧವರಿಂಗೂ ಎನ್ನ ಹೃತ್ಪೂರ್ವಕ ನಮಸ್ಕಾರ.
ಎಲ್ಲಕ್ಕಿಂತ ಮೊದಾಲು ಶ್ರೀಗುರುಗಳ ಆಶೀರ್ವಾದ ಬೇಡಿಗೊಳ್ತೆ, ಇಲ್ಲಿ ಬರೆವಲೆ ಅವಕಾಶ ಕೊಟ್ಟ ಎಲ್ಲರಿಂಗೂ ಧನ್ಯವಾದ ಹೇಳ್ತಾ ಎನ್ನ ಈ ಮೊದಲಾಣ ಲೇಖನವ ಶುರು ಮಾಡ್ತೆ.

ಇನ್ನು ಮೇಲೆ ಆನು ವಾರಕ್ಕೊಂದರಿ ಬರೆತ್ತೆ ಹೇಳುವ ಸಂಗತಿ ನಿಂಗೊಗೆ ಗೊಂತಿದ್ದು.
ಎಂತರ ಬಗ್ಗೆ ಹೇಳಿದೇ ಗೊಂತಾಯ್ದಲ್ಲದಾ? “ಆರೋಗ್ಯ”ದ ಬಗ್ಗೆ ರಜ್ಜ ಮಾತಾಡುಂವ ಹೇಳಿ ಗ್ರೇಶಿದ್ದೆ, ಅಕ್ಕನ್ನೆ?
ಹೆದರೆಡಿ… ಎಂತದೋ ಅರ್ಥ ಆಗದ್ದ ವೈದ್ಯಕೀಯ ವಿಷಯಂಗಳ ಬಗ್ಗೆ ಬರೆತ್ತಿಲ್ಲೆ. ಎಲ್ಲರಿಂಗೂ ಅರ್ಥ ಅಪ್ಪ ಹಾಂಗೆ ನಮ್ಮ ದಿನನಿತ್ಯದ ವಿಚಾರಂಗಳ ಮೇಲೆ ಗಮನ ಕೊಡುವ ಪ್ರಯತ್ನ.
ಎನಗೆ ತಿಳುದ ಕೆಲವು ವಿಷಯಂಗಳ ಹಂಚಿಗೊಳ್ತೆ. ನಿಂಗಳುದೇ ಎಂತಾರು ಸಂಶಯ, ಸಮಸ್ಯೆ ಅಥವಾ ಪ್ರಶ್ನೆ ಇದ್ದರೆ ಕೇಳ್ಲಕ್ಕು.
ಹೀಂಗೆ ಮಾಡಿರೆ ಒಂದು ರೀತಿಲಿ ವಿಚಾರ ವಿಮರ್ಶೆ ಮಾಡಿದ ಹಾಂಗೆ ಆವ್ತು, ನಿಂಗೊಗೆ ಹೊಸತ್ತು ವಿಷಯ ಗೊಂತಕ್ಕು, ಎನಗುದೇ ಹಲವು ಸಂಗತಿಗೊ ತಿಳುಕ್ಕೊಂಬಲಕ್ಕು.
ಈಗ “ಆರೋಗ್ಯ”ದ ಬಗ್ಗೆ ರಜ್ಜ ಹೇಳ್ತೆ. ಎಲ್ಲಾ ನವಗೆ ಗೊಂತಿಪ್ಪದೇ, ಆದರೆ ರಜ್ಜ ಮರತ್ತುಹೋಯ್ದು ಅಷ್ಟೆ !!

ಕುಡಿವ ನೀರು..
ಕುಡಿವ ನೀರು..

(WHO) ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯದ ವ್ಯಾಖ್ಯಾನ ಹೀಂಗೆ ಕೊಡ್ತು, “ಆರೋಗ್ಯ ಹೇಳಿರೆ ರೋಗರಹಿತವಾಗಿ ಇಪ್ಪದು ಮಾಂತ್ರ ಅಲ್ಲ, ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ, ನೈತಿಕ ಮತ್ತೆ ಆಧ್ಯಾತ್ಮಿಕ ಹೀಂಗೆ ಜೀವನದ ಎಲ್ಲ ಸ್ಥರಂಗಳಲ್ಲಿದೇ ಕ್ಷೇಮಲ್ಲಿ ಇಪ್ಪದು”.
ಉದಾಹರಣೆ ಕೊಡ್ತೆ, ಒಬ್ಬ ಆರಾರು ಎಂತಾರು ಒಟ್ರಾಶಿ ಮಾತಾಡಿರೆ ನಾವು ಹೇಳ್ತಿಲ್ಲೆಯ…. “ಅಂವ ಅರೆಪಿರ್ಕಿ’ ಹೇಳಿ!
ಇನ್ನು ಕೆಲವು ಜನ ಇರ್ತವು, ಅವಕ್ಕೆ 4 ಜೆನ ಸೇರಿದಲ್ಲಿ ಹೇಂಗೆ ಇರೆಕ್ಕು ಹೇಳಿ ಗೊಂತಿರ್ತಿಲ್ಲೆ, ಮತ್ತೆ ಕೆಲವರಿಂಗೆ ಬೇಗ ಕೂಗುಲೆ ಬಪ್ಪದು, ಬೇಗ ಕೋಪ ಬಪ್ಪದು….ಇತ್ಯಾದಿ.
ಇದೆಲ್ಲದೇ ಒಂದು ರೀತಿಲಿ ಸಮಸ್ಯೆಯೇ.

ಇದೆಲ್ಲಾ ಸರಿ, ಆದರೆ ಹೀಂಗೆ ರಜ್ಜ ಹೆಚ್ಚು ಕಮ್ಮಿ ಇಲ್ಲದ್ದ ಮನುಷ್ಯ ಇಕ್ಕಾ? ಇದು ನಿಂಗಳ ಪ್ರಶ್ನೆ ಆದಿಕ್ಕು ಈಗ. ಖಂಡಿತಾ ಇದ್ದವು. ಮೇಲೆ ಹೇಳಿದ ಜೀವನದ ಎಲ್ಲಾ ಸ್ತರಂಗಳಲ್ಲಿದೇ ಸಮತೋಲನಲ್ಲಿ ಇಪ್ಪವ್ವುದೇ ಇದ್ದವು.
ಅವ್ವೆಲ್ಲರುದೇ ದೈವತ್ವಕ್ಕೆ ಹತ್ತರೆ ಇರ್ತವು. ಸಾಮಾನ್ಯ ಬದುಕು ನೆಡಶುವ ನಾವು ಆ ಎತ್ತರಕ್ಕೆ ಏರುದು ಕಷ್ಟವೇ,ಆದರೆ….
ಉತ್ತಮ ಆರೋಗ್ಯದ ಬಗ್ಗೆ ನಾವು ರಜ್ಜ ಪ್ರಯತ್ನ ಮಾಡಿರೆ, ನಮ್ಮ ಆರೋಗ್ಯ, ಕುಟುಂಬದ ಆರೋಗ್ಯ, ಸಮಾಜದ ಆರೋಗ್ಯ ಎಲ್ಲವೂ ಒಳ್ಳೆದಕ್ಕು ಹೇಳಿ ಎನ್ನ ಅಭಿಪ್ರಾಯ. ನಿಂಗಳುದೇ ಇದರ ಒಪ್ಪುತ್ತಿ ಹೇಳಿ ಗ್ರೇಶುತ್ತೆ.
ಹಾಂಗಾರೆ ಇದರ ಎಲ್ಲ ಸರಿಯಾಗಿ ಹೇಂಗೆ ತೆಕ್ಕೊಂಡು ಹೋಪದು?
ಇದಕ್ಕೆ ಉತ್ತರ ಹೇಳುದೇ ಎನ್ನ ಕೆಲಸ.

ಯಾವುದೇ ವಿಷಯ ಆದಿಕ್ಕು, ಅದು ತಪ್ಪು ಅಥವಾ ಸರಿ ಹೇಳಿ ಹೇಳೆಕ್ಕಾರೆ ಮೊದಲು ನವಗೆ ಅದರ ಬಗ್ಗೆ ಗೊಂತಿರೆಕು. ನಮ್ಮ ಆರೋಗ್ಯದ ಬಗ್ಗೆ, ಅದರ ಸರಿಯಾಗಿ ಕಾಪಾಡಿಗೊಂಬದರ ಬಗ್ಗೆ ತಿಳ್ಕೊಳ್ಳೆಕ್ಕು. ಇದೆಲ್ಲದಕ್ಕೆ ಸಂಬಂಧಪಟ್ಟ ಹಾಂಗೆ ಒಂದೊಂದು ವಿಷಯ ಒಂದೊಂದು ವಾರ!!
ಈ ವಾರದ ವಿಷಯ ಎಂತಪ್ಪಾ ಹೇಳಿರೆ…..
ಕೇಳುವಗ ಬರೀ ಸಾಮಾನ್ಯ ಹೇಳಿ ಕಾಂಗು ಆದರೆ ಇದು ಇಷ್ಟು ಆಳ ಆಲೋಚನೆ ಮಾಡೆಕಾದ್ದಾ! ಹೇಳಿ ಆಶ್ಚರ್ಯ ಅಕ್ಕು.
ಇಷ್ಟು ಪೀಠಿಕೆ ಯಾವ್ದಕ್ಕೆ ಗೊಂತಿದ್ದಾ? “ನೀರು”….
ನವಗೆ ದಕ್ಷಿಣ ಕನ್ನಡದೋರಿಂಗೆ ಹತ್ತರಾಣ ಸಂಬಂಧಿ!
ಮಲ್ಪೆ, ಪಣಂಬೂರು ಸಮುದ್ರ ನೋಡದ್ದವ್ವಾರು? ಮಳೆಗಾಲದ ಗೌಜಿಯಂತೂ ಕೇಳುದೇ ಬೇಡ.
ಎಲ್ಲರಿಂಗೂ ಗೊಂತಿಪ್ಪ ವಿಚಾರ ಎಂತ ಹೇಳಿರೆ ನಮ್ಮ ಶರೀರದ 70% ಇಪ್ಪದು ಬರೀ ನೀರು!
ನೆತ್ತರಿಲ್ಲಿ, ಮಾಂಸಖಂಡಲ್ಲಿ, ಮೆದುಳಿಲ್ಲಿ, ಬೇರೆ ಎಲ್ಲಾ ಅಂಗಾಂಗಲ್ಲಿಯೂ ಹೆಚ್ಚು ಇಪ್ಪದು ನೀರು, ಕಡೇಂಗೆ ಎಲುಗಿಲ್ಲಿಯೂ ನೀರು ಇದ್ದೇ ಇದ್ದು.
ನಿಜ ಸಂಗತಿ ಹೀಂಗಿಪ್ಪಗ ನಾವು ನೀರು ಕುಡಿಯಕ್ಕಾದ್ದು ಎಷ್ಟು ಅಗತ್ಯ ಅಲ್ಲದಾ? ನೀರು ಕುಡಿವದರಿಂದ ಇಪ್ಪ ಉಪಕಾರಂಗೊ ಎಷ್ಟಿದ್ದು ಗೊಂತಿದ್ದಾ? ಬರದು ಪೂರೈಸ.

ಇಂದ್ರಾಣ ಈ ಕಾಲಲ್ಲಿ ಸಣ್ಣ ಸಣ್ಣ ಸಂಗತಿಗೊಕ್ಕೂ ಹೆಚ್ಚು ಪ್ರಾಮುಖ್ಯತೆ ಕೊಡೆಕ್ಕಾವ್ತು.
ನಮ್ಮ ಆರೋಗ್ಯ ನೇರ್ಪಲ್ಲಿ ಇರೆಕ್ಕಾರೆ,ನಾವು ನೀರು ಕುಡಿವಲೆ ಕಲಿಯಕ್ಕಾದ ಅಗತ್ಯ ಇದ್ದು! ಅಪ್ಪು, ಯಾವಗ ನೀರು ಕುಡಿವಲಕ್ಕು, ಯಾವಗ ಆಗ, ಎಷ್ಟು ನೀರು ಕುಡಿಯಕ್ಕು ಎಲ್ಲದರ ಮಾಹಿತಿಯೂ ಅಗತ್ಯ.
ಒಬ್ಬ ಮನುಷ್ಯಂಗೆ ದಿನಕ್ಕೆ ಕಮ್ಮಿಲಿ ಎರಡು ಲೀಟರ್ ನೀರು ಬೇಕೇ ಬೇಕು.
ಇಷ್ಟನ್ನೂ ಒಟ್ಟಿಂಗೇ ಕುಡಿಯಕ್ಕಾ? ಇಲ್ಲೆ, ರಜ್ಜ ರಜ್ಜ ಆಗಿ ಕುಡಿಯಕ್ಕು.
ಎಂತಗೆ ಹೇಳಿರೆ ನಮ್ಮ ದೇಹಲ್ಲಿ ಇಪ್ಪ ಕಲ್ಮಶಂಗಳ ಹೆರ ಹಾಕೆಕ್ಕಾರೆ ನೀರಿನ ಅಗತ್ಯ ಇದ್ದು. ನಾವು ಕುಡುದ ನೀರು ನೆತ್ತರಿನೊಟ್ಟಿಂಗೆ ಸೇರ್ತು, ಅಲ್ಲಿಂದ ಕಿಡ್ನಿಗೆ ಹೋವ್ತು, ಅಲ್ಲಿ ದೇಹಂದ ಹೆರ ಹೋಯಕ್ಕಾದ ತ್ಯಾಜ್ಯಂಗಳ ತೆಕ್ಕೊಂಡು ಮೂತ್ರದ ಮೂಲಕ ಶರೀರಂದ ಹೆರ ಹೋವ್ತು.
ಇನ್ನು ನೀರು ಕುಡಿವಗ ನೆಂಪಿಲ್ಲಿ ಮಡುಗೆಕ್ಕಾದ ಮುಖ್ಯ ವಿಷಯ ಹೇಳಿರೆ..
ಯಾವಗ ನೀರು ಕುಡಿವಲಾಗ?:
ಆಹಾರ ತೆಕ್ಕೊಂಬಗ ಆದಷ್ಟು ಕಮ್ಮಿ ನೀರು ಕುಡಿಯಕ್ಕು, ಊಟಂದ ಕಾಲು ಗಂಟೆ ಮೊದಲು ಅಥವಾ ಊಟ ಆಗಿ ಒಂದು ಗಂಟೆ ಕಳುದಮೇಲೆ ಧಾರಾಳ ನೀರು ಸೇವನೆ ಮಾಡ್ಲಕ್ಕು.
ಎಂತಕ್ಕೆ ಹೇಳಿರೆ, ಆಹಾರದ ಒಟ್ಟಿಂಗೆ ಹೆಚ್ಚು ನೀರು ಕುಡುದರೆ ಹೊಟ್ಟೆಲಿ ಉತ್ಪತ್ತಿ ಅಪ್ಪ ಆಮ್ಲಂಗಳ ಶಕ್ತಿ ಕಮ್ಮಿ ಆಗಿ ಆಹಾರ ಕರಗುಲೆ ರಜ್ಜ ನಿಧಾನ ಅಕ್ಕು,

ಯಾವ ನೀರು ಕುಡಿಯಕ್ಕು?:
ಕೊದುಶಿ ತಣುಶಿದ ನೀರು ಒಳ್ಳೆದು, ಅಥವಾ aqua guard ನ ನೀರುದೇ ಅಕ್ಕು. ಒಟ್ಟಿಲ್ಲಿ ಶುದ್ಧ ನೀರು ಕುಡಿಯಕ್ಕು.
ಇಷ್ಟೆಲ್ಲಾ ಬರದ್ದು ದಿನನಿತ್ಯದ ಉಪಯೋಗಂಗಳ ಬಗ್ಗೆ.
ಇನ್ನು ನೀರಿನ ಮದ್ದಿನ ಹಾಂಗೆ ಹೇಂಗೆ ಉಪಯೋಗ್ಸುಲಕ್ಕು ಹೇಳಿ ತಿಳುಶುತ್ತೆ. ಆಶ್ಚರ್ಯ ಆತ? ನೀರು ಮದ್ದು ಹೇಂಗೆ ಆವ್ತಪ್ಪಾ ಹೇಳಿ? (hyperacidity) ಅಸಿಡಿಟಿ ಸಮಸ್ಯೆ ಇದ್ದವ್ವು ಊಟಂದ ಕಾಲುಗಂಟೆ ಮೊದಲು ಅರ್ಧ ಗ್ಲಾಸು ಹೂಬೆಶಿ ನೀರಿನ ಕುಡಿಯಕ್ಕು.
ಇನ್ನು ಅಜೀರ್ಣದ ಸಮಸ್ಯೆ ಇಪ್ಪವ್ವುಅರ್ಧ ಗ್ಲಾಸು ತಣ್ಣಂಗೆ ಇಪ್ಪ (ice cold) ನೀರಿನ ಊಟಂದ ಕಾಲು ಗಂಟೆ ಮೊದಲು ಕುಡಿಯಕ್ಕು.
ಉಪವಾಸ ಮಾಡುವ ಸಂದರ್ಭಲ್ಲಿ ಹೆಚ್ಚು ನೀರು ಕುಡಿಯಕ್ಕಾದ್ದು ತುಂಬಾ ಅಗತ್ಯ.
ದೇಹದ ಹಲವಾರು ಸಮಸ್ಯೆಗೊಕ್ಕೆ ಕಾರಣ ಬೇಡದ್ದ ಕಶ್ಮಲಂಗೊ ತುಂಬಿದ್ದು, ನೀರು ಹೆಚ್ಚು ಕುಡುದಷ್ಟುದೇ ಇದರ ಸ್ವಚ್ಛ ಮಾಡ್ಲೆ ಒಳ್ಳೆದು.
ಇದರಿಂದಾಗಿ ಅನಾರೋಗ್ಯಂಗಳ ಬಾರದ್ದ ಹಾಂಗೆ ತಡವಲೆ ಎಡಿಗು. ಅಲ್ಲದ್ದೇ, ಈಗ ಇಪ್ಪ ಸುಮಾರು ಸಮಸ್ಯೆಗೊಕ್ಕೆ ಪರಿಹಾರ ಕಂಡುಗೊಂಬಲಕ್ಕು.

ಜ್ವರ, ಮೂತ್ರಪಿಂಡ/ಕೋಶದ ಕಲ್ಲು(renal calculi), ಉರಿಮೂತ್ರ(burning micturition), ಮೂತ್ರನಾಳದ ಸೋಂಕು(urinary tract infection) ಇತ್ಯಾದಿ ಸಮಸ್ಯೆಗೊಕ್ಕೆ ನೀರು ಒಂದು ಪವಾಡ ರೀತಿಯ ಮದ್ದು.
ಈ ಸಂದರ್ಭಂಗಳಲ್ಲಿ ಆದಷ್ಟು ಹೆಚ್ಚು ನೀರು ದೇಹಕ್ಕೆ ಬೇಕು.

ನೆಗ್ಗಿನ ಮುಳ್ಳಿನ ಕಷಾಯ, ಬಾರ್ಲಿ ನೀರು, ಬಾಳೆದಂಡಿನ ಎಸರು….ಇವೆಲ್ಲವನ್ನುದೇ ಕುಡಿವಲಕ್ಕು.
ಹೀಂಗೆ..
“ನೀರು” ಬರೀ ನೀರಲ್ಲ ! ಒಂದು ರೀತಿಲಿ ಅಮೃತ.
ನೀರಿಲ್ಲದ್ದೆ ಬದುಕ್ಕುದು ಅಸಾಧ್ಯ. ಹೀಂಗಿಪ್ಪಗ ನೀರಿನ ಸುಮ್ಮನೆ ವ್ಯರ್ಥ ಮಾಡ್ಲಾಗ.
ನಮ್ಮಂದ ಸಾಧ್ಯ ಆದಷ್ಟು ಮಟ್ಟಿಂಗೆ ಉಳಿತಾಯ ಮಾಡುಂವ. bank account ಲ್ಲಿ ಪೈ ಗೆ ಪೈ ಸೇರ್ಸಿ ನಾವು ಹೇಂಗೆ ಭವಿಷ್ಯವ ಭದ್ರ ಮಾಡ್ತೋ ಅದೇ ರೀತಿ ನೀರಿನ ಉಳುಶಿರೆ ನಮ್ಮ..
ಈ ಭೂಮಿಯ ಭವಿಷ್ಯ ತುಂಬಾ ಲಾಯ್ಕ ಅಕ್ಕು.

ಯಾವುದೇ ಪ್ರಶ್ನೆ ಇದ್ದರೆ ಕೇಳ್ಲಕ್ಕು, ಅಥವಾ ಆನು ಹೇಳಿದ್ದರ್ಲಿ ತಪ್ಪು ಇದ್ದರೆ ತಿಳುಶಿ, ತಿದ್ದಿಗೊಳ್ತೆ. ಇನ್ನಾಣ ವಾರ ಇನ್ನೂ ಹೊಸ ವಿಷಯಂಗಳೊಟ್ಟಿಂಗೆ ನಿಂಗಳ ಕಾಣ್ತೆ.
ಅಷ್ಟನ್ನಾರ, take care..

~
ನಿಂಗಳ
ಸುವರ್ಣಿನೀ

ನೀರು- ನಮ್ಮ ಜೀವನದ ಬೇರು, 4.0 out of 10 based on 7 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ವೇಣೂರಣ್ಣ
  ಸುಬ್ರಹ್ಮಣ್ಯ

  ಒಳ್ಳೆ ಮಾಹಿತಿ ಇಪ್ಪ ಉತ್ತರ …
  ಜೆಪ ಮಾಡುವಾಗ ತೆಕ್ಕೊಂಬ ನೀರಿಂಗೆ ಒಂದು ಕೊಡಿ ತೊಳಶಿ ಎಲೆ ಹಾಕಿಕೊಂಡರೆ ಒಳ್ಳೇದು. ಕೊದಿಶಿದ ನೀರಿಂಗೆ ರಾಮಚ್ಚ, ಲವಂಗ , ಕೊತ್ತಂಬರಿ ಹೀಂಗೆ ಬೇಕಾದ ಪರಿಮಳವನ್ನು ಸೇರ್ಸಿಗೊಂಡರೆ multiple ಅನುಕೂಲ ಇದ್ದು ಹೇಳಿ ಅಮ್ಮ ದಿನಾ ಎಂತದರೊಂದು ಹಾಕುತ್ತ ಇರ್ತು !

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಇರುಳು ನೀರಿಂಗೆ ಕೊತ್ತಂಬರಿ ಹಾಕಿ ಮಡುಗಿ, ಉದಿಯಪ್ಪಗ ಖಾಲಿ ಹೊಟ್ಟೆಲಿ ಆ ನೀರಿನ ಕುಡುದರೆ ಮೈಗ್ರೇನಿಂಗೆ ಒಳ್ಳೆದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಪೆರ್ಲದಣ್ಣಡಾಗುಟ್ರಕ್ಕ°ಶೇಡಿಗುಮ್ಮೆ ಪುಳ್ಳಿಸುಭಗದೊಡ್ಮನೆ ಭಾವವಸಂತರಾಜ್ ಹಳೆಮನೆಗೋಪಾಲಣ್ಣಅಕ್ಷರ°ಗಣೇಶ ಮಾವ°ಶ್ರೀಅಕ್ಕ°ಶಾ...ರೀಚೆನ್ನಬೆಟ್ಟಣ್ಣದೊಡ್ಡಭಾವಅನು ಉಡುಪುಮೂಲೆಎರುಂಬು ಅಪ್ಪಚ್ಚಿಕಜೆವಸಂತ°ಜಯಗೌರಿ ಅಕ್ಕ°ವೇಣೂರಣ್ಣಪಟಿಕಲ್ಲಪ್ಪಚ್ಚಿದೇವಸ್ಯ ಮಾಣಿvreddhiಕೆದೂರು ಡಾಕ್ಟ್ರುಬಾವ°ಪುಟ್ಟಬಾವ°ದೊಡ್ಡಮಾವ°ಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ