ನಿಯಮೋಲ್ಲಂಘನೆಯ ಮಾಡಿ… ಶಿಕ್ಷೆಗೆ ಹೆದರಿದೊಡೆಂತಯ್ಯಾ??!!

ನಿನ್ನೆ ಹೊತ್ತೋಪಗ ಮನೆಗೆ ಬಪ್ಪಗ (ಎನ್ನ ದ್ವಿಚಕ್ರ ರಥಲ್ಲಿ) ಒಂದು ಆಕ್ಸಿಡೆಂಟ್ ಆಪದರಲ್ಲಿ, ಕೂದಲೆಳೆಲಿ ಬದುಕ್ಕಿದೆ ! ಅಪ್ಪೂಳಿ,ಎಡದ ಹೊಡೇಲಿ ಬತ್ತ ಇತ್ತಿದ್ದೆ, ಎದುರಂದ ಒಂದು ಯಮದೂತನ ಹಾಂಗೆ ಬಸ್ ಬಂತು, ಪೂರಾ wrong  ಸೈಡಿಲ್ಲಿ !! ಎನಗೆ ಇನ್ನೂ ಎಡಕ್ಕೆ ಹೋಪಲೆ ಜಾಗೆಯೇ ಇಲ್ಲೆ, ಮಾರ್ಗಂದ ಕೆಳ ಹೋಪ ಹೇಳಿರೆ ದೊಡ್ಡ ಗುಂಡಿ 🙁 ಅಂತೂ ಬದುಕ್ಕಿದೆ, ಒಂದರಿ ಮುಕ್ಕೋಟಿ ದೇವತೆಗಳೂ ಮನಸ್ಸಿಲ್ಲಿ ಬಂದು ಹೋದವು! ಸಂಚಾರದ ನಿಯಮಂಗಳ ಸರಿಯಾಗಿ ಪಾಲನೆ ಮಾಡದ್ರೆ ಏನೆಲ್ಲಾ ಅನಾಹುತ ಆವ್ತಲ್ಲದ?

ನಮ್ಮ ಆರೋಗ್ಯಕ್ಕೂ ಸಂಚಾರದ ನಿಯಮಂಗೊಕ್ಕುದೇ ಎಂತ ಸಂಬಂಧ? ಸಂಬಂಧ ಅಲ್ಲ, ಸಾಮ್ಯತೆ ಇಪ್ಪದು !! ಎಲ್ಲದಕ್ಕೂ ನಿಯಮಂಗೊ ಇದ್ದೇ ಇದ್ದು. ಹಗಲು..ಇರುಳು ಮತ್ತೆ ಹಗಲು, ಮಳೆ-ಬೆಶಿಲು, ಎತ್ತರಲ್ಲಿ ಹುಟ್ಟುವ ಹೊಳೆ ಸಮುದ್ರವ ಹುಡುಕ್ಕಿ ಹೋಗಿ ಸೇರುದು, ಸುರುವಾಣ ಮಳೆ ಬಿದ್ದಪ್ಪಗ ಹುಲ್ಲು ಚಿಗುರುದು, ಎಲ್ಲವೂ ನಿಯಮವೇ ಅಲ್ಲದಾ? ಪ್ರಕೃತಿಯ ನಿಯಮಂಗೊ. ಹಾಂಗಾರೆ ಮನುಷ್ಯಂಗುದೇ ನಿಯಮಂಗೊ ಇಕ್ಕು ಅಲ್ಲದಾ ನಮ್ಮ ಪ್ರಕೃತಿಲಿ? ಬೇರೆಲ್ಲವೂ ಸರಿಯಾಗಿ ನಡವಗ ಮನುಷ್ಯನ ಜೀವನ ಏಕಲ್ಲ? ಎಂತಗೆ ಸಾವಿರ ಸಮಸ್ಯೆಗೊ? ಈ ಪ್ರಶ್ನೆಗೆ ನಮ್ಮ ಹತ್ತರೆ ಉತ್ತರ ಇದ್ದಾ?

ನಿಜವಾಗಿ ನೋಡ್ತರೆ ಇದು ತುಂಬಾ ಸರಳ ವಿಷಯ. ನಮ್ಮ ಎಲ್ಲಾ(99.99%) ಸಮಸ್ಯೆಗೊಕ್ಕುದೇ ಇಪ್ಪದು ಒಂದೇ ಒಂದು ಕಾರಣ. ಎಂತರ…..ನಿಂಗಳೇ ಹೇಳಿ? ಪ್ರಕೃತಿಯ ನಿಯಮಂಗಳ ಉಲ್ಲಂಘನೆ”. ಇದರ ಒಪ್ಪುತ್ತೀರಾ? ನವಗೇ ಹೇಳಿ ನಿಸರ್ಗಲ್ಲಿ ಕೆಲವು ನಿಯಮಂಗೊ ಇದ್ದು, ಅದರ ಪಾಲಿಸೆಕಾದ್ದು ನಮ್ಮ ಕರ್ತವ್ಯ ಅಲ್ಲದಾ? ಅದರ್ಲಿ ನಾಚಿಕೆ, ಬೆಜಾರು ಎಂತಗೆ? ನಮ್ಮ ಒಳ್ಳೆದಕ್ಕೇ ಅಲ್ಲದ ಅದು ಇಪ್ಪದು? ಹಾಂಗಾರೆ ನಾವು ಮಾಡ್ತಾ ಇಪ್ಪ ತಪ್ಪುಗೊ ಯಾವ್ದೆಲ್ಲಾ? ಹೆನ್ರಿ ಲಿಂಡ್ಲಾಹ್ರ್ ಹೇಳ್ತ ಒಬ್ಬ ಮಹಾನುಭಾವ  ಅದರ ವಿವರಣೆ ಹೀಂಗೆ ಕೊಡ್ತ….”ಮಾಡುವ ಆಲೋಚನೆಲಿ, ಉಸಿರಾಟಲ್ಲಿ, ಆಹಾರ ಸೇವನೆಲಿ, ಉಡುಗೆ-ತೊಡುಗೆಲಿ,ಮಾಡುವ ಕೆಲಸಲ್ಲಿ,ವಿಶ್ರಾಂತಿಲಿ,ನೈತಿಕತೆಲಿ,ಲೈಂಗಿಕ ಮತ್ತೆ ಸಾಮಾಜಿಕ ಚಾರಿತ್ರ್ಯಲ್ಲಿ ನಿಸರ್ಗದ ನಿಯಮಂಗಳ ಉಲ್ಲಂಘನೆ ಮಾಡುದರಿಂದ ಪ್ರಾಥಮಿಕ (ಮೂಲ) ಮತ್ತೆ ಮಾಧ್ಯಮಿಕ ಅನಾರೋಗ್ಯಂಗಳ ಪ್ರಾರಂಭ ಮತ್ತೆ ಪ್ರಗತಿ(ಹಂತಂಗೊ, ಲಕ್ಷಣಂಗೊ) ಆವ್ತು”,

ಎನಗಂತೂ ಇದು ನೂರಕ್ಕೆ ಇನ್ನೊರರಷ್ಟು ಸತ್ಯ ಹೇಳಿ ಕಾಣ್ತು. ನಿಂಗೊಗೆ? ಆಲೋಚನೆ ಮಾಡಿ…..ನಮ್ಮ ಆಲೋಚನೆ ತಪ್ಪಿದ್ದರೆ ಅದರಿಂದಾಗಿ ತೊಂದರೆ ಆವ್ತು, ಉಸಿರಾಟ(ಪ್ರಾಣದ ಸಂಚಾರ ) ಸರಿಯಾಗಿ ಆಗದ್ದರೆದೇ ಏನಾರು ಒಂದು ಸಮಸ್ಯೆ ಇದ್ದೇ ಇದ್ದು.ಹೀಂಗೆ ಪ್ರತಿಯೊಂದರ ಬಗ್ಗೆಯೂ ಒಂದೆರಡು ನಿಮಿಷ ಆಲೋಚನೆ ಮಾಡಿ ನೋಡೀ, ನಿಂಗಳ ಅಭಿಪ್ರಾಯ ಖಂಡಿತಾ ತಿಳುಶಿ.

ಹಾಂಗಾರೆ ನಮ್ಮ ಅಜ್ಞಾನಂದಾಗಿ ನಿಯಮಂಗಳ ಉಲ್ಲಂಘನೆ ಮಾಡಿದರೆ ಉಂಟಪ್ಪ ಸಮಸ್ಯೆಗಳ ಸ್ವರೂಪ ಹೇಂಗಿರ್ತು? ಮುಖ್ಯ ಮೂರು ಅಂಶಂಗೊ… ರೋಗದ ಆರಂಭಿಕ ಮೂರು ಹಂತಂಗೊ, ಇದು ಒಂದು ರೀತಿಲಿ ಎಚ್ಚರಿಕೆ ಘಂಟೆ(warning sign) ಹೇಳಿ ಹೇಳ್ಲಕ್ಕು. ಅದು ಯಾವ್ದೆಲ್ಲಾ?

 • ಕಮ್ಮಿ ಆದ ಪ್ರಾಣ ಚೈತನ್ಯ (lowered vitality)
 • ರಕ್ತ ಮತ್ತೆ ದುಗ್ದರಸಂಗಳ ಅಸಾಮಾನ್ಯ ಸಂಯೋಜನೆ (abnormal composition of blood and lymph)
 • ರೋಗ ಸ್ವಭಾವದ ಮತ್ತೆ ವಿಷ ಪದಾರ್ಥಂಗಳ ಸಂಚಯ (accumulation of morbid matter and poison)

ಈ ಮೂರೂ ಅಥವಾ ಯಾವುದಾದರೂ ಒಂದೋ ಎರಡೋ  ಲಕ್ಷಣಂಗೊ ಇದ್ದು ಹೇಳಿ ಆದರೆ, ಯಾವುದಾರು ದೊಡ್ಡ ಸಮಸ್ಯೆ ತುಂಬಾ ದೂರ ಇಲ್ಲೆ ಹೇಳಿ ಅರ್ಥ ಮಾಡಿಗೊಂಬಲಕ್ಕು.ಈ ಮೂರೂ ಅಂಶಂಗಳ ಬಗ್ಗೆ, ಅದಕ್ಕೆ ಕಾರಣ, ಅದರ ಪರಿಣಾಮಂಗೊಕ್ಕೆ ಇನ್ನಾಣ ವಾರ ವಿವರಣೆ ಕೊಡ್ತೆ. ಆಗದಾ? 🙂 ಅಷ್ಟನ್ನಾರ..ಸಾಧ್ಯ ಅಪ್ಪಷ್ಟು ನಿಯಮಂಗಳ ಸರಿಯಾಗಿ ಪಾಲನೆ ಮಾಡುವ ಬಗ್ಗೆ ವಿಮರ್ಶೆ/ನಿರ್ಧಾರ ಮಾಡಿ :).

ಸುವರ್ಣಿನೀ ಕೊಣಲೆ

   

You may also like...

30 Responses

 1. ತುಂಬಾ ಔಚಿತ್ಯಪೂರ್ಣ ಲೇಖನ. ಡ್ರೈವಿಂಗ್ ಮಾಡುವಗ ತಾಳ್ಮೆ ಅತ್ಯಗತ್ಯ. ಸಂಚಾರದ ವಿವಿಧ ಮಗ್ಗಲುಗಳ ಮೇಲೆ ಬೆಳಕು ಚೆಲ್ಲಿದ್ದು ಭಾರೀ ಅಭಿನಂದನಾರ್ಹ… ಧನ್ಯವಾದ ಡಾಕುಟ್ರಕ್ಕ …

 2. ಶ್ರೀಕೃಷ್ಣ ಶರ್ಮ. ಹಳೆಮನೆ says:

  ಗುರಿ ಮುಟ್ಟುವ ಭರಲ್ಲಿ ನಿಯಮ ಉಲ್ಲಂಘನೆ ಎಷ್ಟೋ ಸರ್ತಿ ಆವುತ್ತು. ಹಾಂಗಿಪ್ಪ ಸಂದರ್ಭಂಗಳಲ್ಲಿ ಅಫಘಾತ ಆಯಿದಿಲ್ಲೆ ಹೇಳಿ ಅದನ್ನೇ ಮುಂದುವರಿಸಿಗೊಂಡು ಹೋಪದು ಮಾತ್ರ ಶುದ್ಧ ತಪ್ಪು. ಆರೊಗ್ಯ ನಿಯಮಂಗಳೂ ಅದೇ ರೀತಿ. ಮಾಡಿದ ತಪ್ಪಿಂದ ಪಾಠ ಕಲಿಯೆಕ್ಕಲ್ಲದ್ದೆ ಅದರ ಪುನರಾವರ್ತನೆ ಅಪ್ಪಲಾಗ.
  ಮಾತು ಬಲ್ಲವಂಗೆ ಜಗಳ ಇಲ್ಲೆ, ಊಟ ಬಲ್ಲವಂಗೆ ರೋಗ ಇಲ್ಲೆ ಹೇಳುವದರ ತಿಳ್ಕೊಂಡು ಪಾಲಿಸಿರೆ, ಸಮಾಜದ ಸ್ವಾಸ್ಥ್ಯ ಒಳಿಗು

  • Suvarnini Konale says:

   ಅಪ್ಪು, ನಮ್ಮ ಬಗ್ಗೆ ನಾವೇ ಕಾಳಜಿ ತೆಕ್ಕೊಳ್ಳೆಕ್ಕು, ಅಲ್ಲದಾ? ಬೇರೆಯವ್ವು ನಮ್ಮ ಜೀವನ ಆರೋಗ್ಯದ ಬಗ್ಗೆ ಕೇರ್ ತೆಕ್ಕೊಳ್ಳೆಕು ಹೇಳಿ expect ಮಾಡ್ಲಾಗ. ನಮ್ಮ ಪ್ರಯತ್ನೆ ಇಲ್ಲದ್ದೆ ದೇವರುದೇ ನವಗೆ ಸಹಾಯ ಮಾಡ್ತವಿಲ್ಲೆ !!!

 3. ಬಹುಶ:ಪ್ರಕ್ರುತಿಯ ನಿಯಮಂಗಳ ಪಾಲಿಸುವ ಬುದ್ದಿ ನವಗೆ ಇದ್ದಿದ್ದರೆ ಇಂದು ಇಪ್ಪ ಹಲವಾರು ರೋಗಂಗ,ಸಮಸ್ಯಗ ಇರುತ್ತಿತ್ತಿಲ್ಲೆ ಅಲ್ಲದ?

  • Suvarnini Konale says:

   ಖಂಡಿತಾ ಅಪ್ಪು 🙂

  • Suvarnini Konale says:

   ಉತ್ತರ ಕೊಡ್ಲೆ ತಡವಾದ್ದಕ್ಕೆ ಕ್ಷಮೆ ಇರಲಿ. ತುಂಬಾ ಕೆಲಸ ಇತ್ತಿದ್ದು ಮೂರು ದಿನಂದ.

 4. ಏ ಅಕ್ಕೋ,, ನಿನ್ನ ಮಾತು ಸತ್ಯ, ಎನಗೆ ಈಗ ಆಕ್ಸಿಡೆಂಟ್ ಹೇಳುವ ಶಬ್ದ ಕೇಳಿರೆ ಬುಡಂದಲೆ ನಡುಕ ಬತ್ತು.. ಈಗ ಕೆಲವು ತಿಂಗಳ ಹಿಂದೆ ಒಂದು ಅಪಘಾತಲ್ಲಿ ಸಿಕ್ಕಿಹಾಕಿಗೊಂಡಿತ್ತಿದ್ದೆ. ಬೈಕಿನ ಎದುರಾಣ ಹೊಡೆ ಕಾಮನಬಿಲ್ಲಿನ ಹಾಂಗೆ ಬಗ್ಗಿಯೆ ಹೋಗಿದ್ದರುದೆ ಆನು ಹೇಂಗೆ ಒಂದು ಗಾಯವು ಇಲ್ಲದ್ದೆ ಬಚಾವದೆ ಹೇಳುದು ಒಂದು ಯಕ್ಷಪ್ರಶ್ನೆ ಆಯ್ದು. 🙂 ತಪ್ಪು ಎನ್ನದೆಂತ ಇಲ್ಲದ್ರುದೆ ಎನಗೆ ಬೈಕಿಲಿ ಗುದ್ದಿದ ಜೆನ ಮಧ್ಯಾಹ್ನದ ಹೊತ್ತಿಂಗೇ ಸಂಪೂರ್ಣವಾಗಿ “ಹೊಟ್ಟೆಯೊಳಾಣ ಪರಮಾತ್ಮ”ನ ವಶಲ್ಲಿದ್ದತ್ತು. 🙂 ಆನು ಬದ್ಕಿ ಒಳುದ್ದು ಎನ್ನ ಪರಮಾತ್ಮನ ದಯೆಂದಲೆ ಹೇಳಿ ಗ್ರೇಶಿದೆ…. 🙂 ನಿಯಮಂಗಳ ಪಾಲನೆ ಮಾಡದ್ರೆ ಸಮಸ್ಯೆ ಅಪ್ಪದು ಖಂಡಿತ 🙂

 5. Suvarnini Konale says:

  ತಪ್ಪು ನಮ್ಮದೇ ಆಗಿರೆಕ್ಕು ಹೇಳಿ ಇಲ್ಲೆ ! ಸಿಗರೇಟ್ ಎಳವವನೊಟ್ಟಿಂಗೆ ಇಪ್ಪವಕ್ಕುದೇ (passive smokers)ಅದರ ಸಮಸ್ಯೆಗೊ ಕಾಡುವ ಸಂದರ್ಭಂಗೊ ಇರ್ತು.

 6. ಅಜ್ಜಕಾನ ಭಾವ says:

  ಅದಾ ನಿಂಗೊ ಸುದ್ದಿ ಹೇಳಿದ್ದೆ ತಡಾ ಎಂತಾವುತ್ತು ನೋಡ್ತೆ ಹೇಳಿ ಹೋದ ಗುಣಾಜೆ ಮಾಣಿ ಬಿದ್ದು ಪೆಟ್ಟು ಮಾಡಿಕೊಂಡಿದನಡಾ..

  ಜೋರು ಮಾಡಿ ಅವಂಗೆ….

  • Suvarnini Konale says:

   ಜೋರು ಮಾಡುವ ಅಗತ್ಯ ಇಲ್ಲೆ ಇನ್ನು 🙂 !!! ಬಿದ್ದು ಪೆಟ್ಟುಮಾಡಿಗೊಂಡಪ್ಪಗ ಅರ್ಥ ಆದಿಕ್ಕು !! ಹ್ಹಿಹ್ಹಿಹ್ಹಿ

   • ಏ ಅಕ್ಕೊ, ಅವನ ಕಥೆಯು ಪಾಪ ಎನ್ನ ಹಾಂಗೆ ಆದ್ದದು.. ಅವನ ತಪ್ಪೆಂತ ಇಲ್ಲ್ಲೆಡ,, ಸಣ್ನಕ್ಕೆ ಜರ್ಪಿಸಿಗೊಂಡು ಬಚಾವಾಯಿದ.. 🙂 ಅವ ಒಪ್ಪಣ್ಣ ಅಲ್ಲದೋ!! 🙂

    • Suvarnini Konale says:

     hmmm……

    • @ ಆದರ್ಶ°,
     { ಅವನ ಕಥೆಯು ಎನ್ನ ಹಾಂಗೆ ಆದ್ದದು }
     ಬಿಂಗಿಮಕ್ಕಳದ್ದೆಲ್ಲ ಒಂದೇ ನಮುನೆ ಕತೆ ಅಡ,
     – ಬಂಡಾಡಿ ಅಜ್ಜಿ ಪರಂಚುದು ಅಂತೇ ಅಲ್ಲ ಆತೋ? 😉

     • Suvarnini Konale says:

      ಅಪ್ಪು, ಬಿಂಗಿ ಮಕ್ಕೊ ಎಲ್ಲರದ್ದೂ ಒಂದೇ ಕಥೆ !!

     • Suvarnini Konale says:

      ನೆಗೆಗಾರನ ಹೊಸ ಪಟ ಸೂಪರ್ !!

     • ಹಿ ಹಿ ಹಿ,, ನಗೆಗಾರಣ್ಣೊ, ಬಿಂಗಿ ಮಕ್ಕಳ ಪಟ್ಟಿಲಿ ನಿನ್ನ ಹೆಸರು ಎನ್ನಂದ ಮೇಗೆ ಇದ್ದ ಹಾಂಗೆ ಕಂಡತ್ತು.. 🙂

     • ಏ ನಗೆಗಾಣ್ಣೊ, ಎನಗೊಂದು ಸಂಶಯದ ಮೇಲೊಂದು ಅನುಮಾನ, 🙂 ನಿನ್ನ ಪಟಲ್ಲಿಪ್ಪ ಮಾಣಿಯ ತಲೆಲಿ ಒಂದು ರಜವುದೆ ಕೂದಲಿಲ್ಲೆನ್ನೆ!! ಎಂತ ಸಂಗತಿ!>???

    • ಆದ ಮೇಲೆ ಎಲ್ಲೋರುದೆ ಹಾಂಗೇ ಹೇಳುದು… ಎನ್ನ ತಪ್ಪಿಲ್ಲೆ ಎನ್ನ ತಪ್ಪಿಲ್ಲೆ ಹೇಳಿ… ಮಾರ್ಗಲ್ಲಿ ಹೋಪಗ ನಮ್ಮ ಜಾಗ್ರತೆ ನಾವು ನೋಡಿಕೊಳ್ಳದ್ರೆ ಅದು ನಮ್ಮ ತಪ್ಪೇ ಅಲ್ಲ್ದದಾ?… ಮ್ಯಾಜಿಕ್ ಶಂಕರಣ್ಣ ಆನು ಕಾರು ಕಲ್ತುಗೊಂಡಿಪ್ಪಗ ಹೇಳಿತ್ತಿದ್ದ… ಮಾರ್ಗಲ್ಲಿ ನಾವು ನಮ್ಮಂದ ಜಾಸ್ತಿ ಬೇರೆಯೋರ ಬಗ್ಗೆ ಗಮನ ಕೊಡೆಕ್ಕಡ… ನಮ್ಮ ಬಗ್ಗೆ ಜಾಗ್ರತೆ ಮಾಡಿಕೊಳ್ಳೆಕ್ಕಡ….

    • ಅದಾ ಗುಣಾಜೆ ಮಾಣಿ ಆದರ್ಶ ಬಾವನತ್ರೆ ಹೇಳಿ ಬರೆಶಿದ್ದು.. ಸಣ್ಣಕೆ ಗರ್ಪಿಸಿಗೊಂಡದ್ದದರೆ ಮನೆಂದ ಹೆರ ಏಕೆ ಹೆರಡುತ್ತನಿಲ್ಲೆ….

     • ಏ ಭಾವ, 🙂 ಎನಗುದೆ ಅದೇ ಸಂಶಯ, 🙂 ಏಕೆ ಹೆರಡುತ್ತಾ ಇಲ್ಲೆ ಹೇಳಿ.. 🙂 ಆನು ಕರ್ಣಪಿಶಾಚಿಯ ಮುಖಾಂತರ ಮಾತಡಿದ್ದಷ್ಟೆ, ಲೊಟ್ಟೆ ಹೇಳಿದನೊ ಅಂಬಗ>>??? 🙂

 7. ಶ್ರೀದೇವಿ ವಿಶ್ವನಾಥ್ says:

  ಸುವರ್ಣಿನಿ ಡಾಕ್ಟ್ರಕ್ಕ° ಹೇಳಿದ ವಿಷಯ ನಾವು ಚಿಂತನೆ ಮಾಡೆಕ್ಕಾದ್ದದೆ.. ದೇಹ ಆದರೂ ವಾಹನ ಆದರೂ ಕಂಟ್ರೋಲ್ ಇಲ್ಲದ್ದೆ, ಕಾಳಜಿ ಇಲ್ಲದ್ದೆ ಓಡುಸಿದರೆ ಅಪಾಯವೇ!!! ವಾಹನ ಓಡುತ್ತು ಹೇಳಿ, ಬೇಕಾಬಿಟ್ಟಿ ವೇಗಲ್ಲಿ, ವಾಹನ ಹಾಳಪ್ಪ ಸೂಚನೆ ಕೊಟ್ಟರೂ ಕಣ್ಣು ಮೋರೆ ಇಲ್ಲದ್ದ ಹಾಂಗೆ ಓಡುಸಿದರೆ ಅದುದೆ… ಅರ್ಧ ದಾರಿಲಿ ಕೈ ಕೊಡ್ತೆ.. ಅದುದೆ ರಿಪೇರಿಗೆ ಬತ್ತು .. ಅದೇ ರೀತಿ ನಮ್ಮ ದೇಹಕ್ಕೆ ಆರೋಗ್ಯ ಇದ್ದು ಹೇಳಿ ಕೈಗೆ ಸಿಕ್ಕಿದ್ದು, ಕಣ್ಣಿಂಗೆ ಕಂಡದು ತಿಂದರೆ ನಮ್ಮ ಆರೋಗ್ಯದೆ ಕೈ ಕೊಡುಗು… ಅದರಲ್ಲೂ ವಾಹನಕ್ಕೆ ಕಲಬೆರಕೆ ಇಂಧನ ಹಾಕಿದರೆ, ಅದು ಇಂಜಿನ್ ಸಿಲಿಂಡರಿನ ಒಳ ಮತ್ತೆ ಹೊಗೆ ನಳಿಗೆಲಿ ಕರಿ ಪಾಡು ಕಟ್ಟುತ್ತು.. ಹಾಂಗೆ ಸಿಕ್ಕಿದಲ್ಲಿ ತಿಂದರೆ ನಮ್ಮ ಶರೀರದ ರಕ್ತನಾಳಲ್ಲಿದೆ ಕೆಟ್ಟ ಕೊಲೆಸ್ಟ್ರೋಲ್ ನ ಪಾಡು ಕಟ್ಟುತ್ತು… ಹೀಂಗೆ ಯಾವ ತೊಂದರೆಯೂ ಬಾರದ್ದ ಹಾಂಗೆ ನಮ್ಮ ಆರೋಗ್ಯದ ಎಚ್ಚರಿಕೆ ಸೂಚನೆಯ ಗಮನಿಸಿಗೊಂಡು ದೇಹಕ್ಕೆ ಬೇಕಾದ ಆರೈಕೆ ಮಾಡಿಗೊಂಡು ಆರೋಗ್ಯಲ್ಲಿಪ್ಪ°…ಅಲ್ಲದಾ ಡಾಕ್ಟ್ರಕ್ಕ°?

  • Suvarnini Konale says:

   ನಿಂಗಳ ಮಾತು ಸತ್ಯ 🙂 ತುಂಬಾ simple ಆಗಿ ಹೇಳಿದಿ, ತುಂಬಾ ಮುಖ್ಯ ವಿಷಯವ 🙂

  • ಶ್ರೀ ಅಕ್ಕನ ಕಮೆಂಟ್ ಲೇಖನದ ಹಾಂಗೆ ಅರ್ಥಗರ್ಭಿತವಾಗಿದ್ದು ಅಲ್ದಾ ಸುವರ್ಣಿನಿ ಅಕ್ಕಾ?

  • hmmmmಇದು ಕೇವಲ ಆಹಾರ ತಿಂಬದಕ್ಕೆ ಮಾಂತ್ರ ಅಲ್ಲ, ನಮ್ಮ ಜೀವನ ಶೈಲಿಯ ಎಲ್ಲ ತಪ್ಪು ಕ್ರಮಂಗಳಿಂಗುದೇ ಅನ್ವಯಿಸುತ್ತು.

 8. ನೀರ್ಕಜೆ ಚಿಕ್ಕಮ್ಮ says:

  {ನೆಗೆಗಾರನ ಹೊಸ ಪಟ ಸೂಪರ್ !! } ಸುವರ್ಣಿನಿ ಅಕ್ಕಾ, ನಿಂಗೊಗೆ ಖುಶಿ ಆದ್ದು ಎಂತಕ್ಕೆ ಹೇಳಿ ಎನಗೆ ಗೊಂತಾತು! ಎಷ್ಟಾರೂ ಹಳೆ ಪಟದ ಕೋಪಿರೈಟು ನಿಂಗಳದ್ದೆ ಅಲ್ಲದೋ…… 🙂

 9. Akshara says:

  tumbaa laayka iddu..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *