PHOBIAS-ಹೆದರಿಕೆಗೊ

December 26, 2010 ರ 5:00 amಗೆ ನಮ್ಮ ಬರದ್ದು, ಇದುವರೆಗೆ 38 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿನ ಎಲ್ಲ ಬಂಧುಗೊಕ್ಕುದೇ ನಮಸ್ಕಾರಂಗೊ. ಇಷ್ಟು ದಿನ ಬೈಲಿಂದ ದೂರ ಇದ್ದದಕ್ಕೆ ಕ್ಷಮೆ ಇರಲಿ. ಎಲ್ಲಿಗಪ್ಪಾ ಹೋದ್ದು ಈ ಸುವರ್ಣಿನೀ ಹೇಳಿ ಆಲೋಚನೆ ಮಾಡಿದಿ ಆದಿಕ್ಕು, ಒಂದು ಶಿಬಿರವ ಆಯೋಜನೆ ಮಾಡಿತ್ತಿದ್ದೆಯ ಎಂಗಳ ಸಂಸ್ಥೆಂದ, ಅದರ ಕೆಲಸಲ್ಲಿ ಇತ್ತಿದ್ದೆ. ಹತ್ತು ದಿನದ ಪ್ರಕೃತಿ ಚಿಕಿತ್ಸೆ ಮತ್ತೆ ಯೋಗದ ಶಿಬಿರ, ಒಂದು ಹಳ್ಳಿಲಿ. ಒಳ್ಳೆ ಪ್ರತಿಕ್ರಿಯೆ ಇತ್ತಿದ್ದು. ಎಂಗಳ ವೈದ್ಯಕೀಯ ವಿದ್ಯಾರ್ಥಿಗೊಕ್ಕೆ ಒಳ್ಳೆ ಅನುಭವ, ಎನಗೂ ಕೆಲವು ಅನುಭವಂಗೊ ಸಿಕ್ಕಿತ್ತು. ಆ ಗೌಜಿ ಕಳುದು ಈಗ ಕ್ರಿಸ್ಮಸ್ ಹಬ್ಬದ ಗೌಜಿ ಇಡೀ ಊರಿಲ್ಲಿ! ಇಡೀ ಪ್ರಪಂಚಲ್ಲಿ. ಮಕ್ಕೊಗೆ ಒಂದು ವಾರ ರಜೆ ಇಪ್ಪದೇ ಗಮ್ಮತ್ತು. ನವಗೆ ಹಬ್ಬ ಇಲ್ಲದ್ರೂ ಬೇರೆಯವ್ವು ಹಬ್ಬ ಮಾಡುವ ಚೆಂದ ಅಂತೂ ನೋಡ್ಲಕ್ಕು :)

ಈ ವಾರ ಆನು ಮನಸ್ಸಿಂಗೆ ಸಂಬಂಧಪಟ್ಟ ವಿಚಾರಂಗಳ ಬರವಲಕ್ಕಾ ಹೇಳಿ ಆಲೋಚನೆ ಮಾಡಿದೆ. ಆನು ಈಗ ಕಲಿತ್ತ ಇಪ್ಪ ಕೆಲವು ವಿಷಯಂಗಳ ನಿಂಗೊಗುದೇ ತಿಳುಶಿರೆ ಅದರಿಂದ ಪ್ರಯೋಜನ ಇದ್ದು ಹೇಳಿ ಅನ್ಸಿತ್ತು. ಮಾನಸಿಕ ಸಮಸ್ಯೆ ಹೇಳಿದ ಕೂಡ್ಲೆ ’ಮರ್ಲು’ ಹೇಳಿ ಸಾಮಾನ್ಯವಾಗಿ ಅಭಿಪ್ರಾಯ ಪಡುದು ನಮ್ಮ ಕ್ರಮ. ಆದರೆ ಎಲ್ಲವೂ ’ಹುಚ್ಚು’ ಅಲ್ಲ. ಮಾನಸಿಕ ಸಮಸ್ಯೆಗೊ ಬೇರೆ ಬೇರೆ ಹಂತಂಗಳಲ್ಲಿ/ ರೀತಿಗಳಲ್ಲಿ ಇರ್ತು. ಕೆಲವಕ್ಕೆ ಮೆದುಳಿಲ್ಲಿ ಅಪ್ಪ ಬದಲಾವಣೆ/ರೋಗಂಗೊ ಕಾರಣ ಆದರೆ, ಇನ್ನು ಕೆಲವಕ್ಕೆ ಮನಸ್ಸಿನ ಮೇಲೆ ಹೆರಾಣ ವಿಷಯಂಗಳ ಪ್ರಭಾವಂದಾಗಿ ಅಪ್ಪದು. ಎಲ್ಲ ಸಮಸ್ಯೆಗಳ ಬಗ್ಗೆ ಒಟ್ಟಿಂಗೇ ಬರವಲೆ ಕಷ್ಟ, ಹಾಂಗಾಗಿ ಇಂದು ಒಂದು ವಿಧದ ಮಾನಸಿಕ ಸಮಸ್ಯೆ/ತೊಳಲಾಟದ ಬಗ್ಗೆ ಮಾಹಿತಿ ಕೊಡ್ತೆ.

ಹೆದರಿಕೆ – ಇದರ ಅರ್ಥವ ಆನು ಬಿಡಿಸಿ ಹೇಳುವ ಅಗತ್ಯ ಇಲ್ಲೆ. ಎಲ್ಲೋರಿಂಗೂ ಜೀವನದ ಒಂದಲ್ಲ ಒಂದು ಹಂತಲ್ಲಿ ’ಹೆದರಿಕೆ’ಯ ಅನುಭವ ಆದಿಕ್ಕು.  ನವಗೆ ಆದ ಅನುಭವಂಗೊ ಕೆಲವು ಕ್ಷಣ ಅಥವಾ ನಿಮಿಷಂಗೊಕ್ಕೆ ಸೀಮಿತ. ಆದರೆ ಕೆಲವು ಜೆನಂಗೊಕ್ಕೆ ಕೆಲವು ವಸ್ತು/ವ್ಯಕ್ತಿ ಅಥವಾ ವಿಷಯಂಗಳ ಬಗ್ಗೆ ಜೀವನದ ಪ್ರತಿ ಕ್ಷಣ ಹೆದರಿಕೆ ಇರ್ತು. ಈ ಹೆದರಿಕೆಯೊಟ್ಟಿಂಗೆಯೇ ಅವ್ವು ಬದುಕ್ಕುದು. ಉದಾಹರಣೆಗೆ ಕೆಲವರಿಂಗೆ ಎತ್ತರದ ಪ್ರದೇಶದ ಬಗ್ಗೆ ಮನಸ್ಸಿಲ್ಲಿ ಹೆದರಿಕೆ ಇರ್ತು, ಈ ಜೆನಂಗೊಕ್ಕೆ ಎತ್ತರಕದ ಜಾಗೆಗೊಕ್ಕೆ ಹೋಪಲೆ ಎಡಿಯ.  ಹೀಂಗೆ ಕೆಲವು ನಿರ್ದಿಷ್ಟ ವಿಷಯದ ಬಗ್ಗೆ ಇಪ್ಪ ಹೆದರಿಕೆಗೆ ’ಫೋಬಿಯ’ ಹೇಳಿ ಹೇಳ್ತವು.

ಫೋಬಿಯ [phobia] ಈ ಶಬ್ದ  ’ಫೋಬೋಸ್’ ಹೇಳ್ತ ಗ್ರೀಕ್ ದೇವತೆಂದ ಬಂದದು. ಹೆಚ್ಚಾಗಿ ಈ ಸಮಸ್ಯೆ ಇಪ್ಪೋರು, ತಮಗೆ ಹೆದರಿಕೆ ಇಪ್ಪ ವಿಷಯಂಗಳ ಬಿಟ್ಟು ಬೇರೆ ಎಲ್ಲಾ ರೀತಿಂದಲೂ ಸರಿಯಾಗಿಯೇ ಇರ್ತವು. ಈ ಹೆರ್ದರಿಕೆಗೊ ಆ ವ್ಯಕ್ತಿಯ ಹಿಡಿತಲ್ಲಿ ಇರ್ತಿಲ್ಲೆ, ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಆ ಸಂದರ್ಭ ಅಥವಾ ವಿಷಯ/ವ್ಯಕ್ತಿಯ ಎದುರ್ಸುವಗ ಸೋತು ಹೋವ್ತವು. ಈ ಸಮಸ್ಯೆಲಿ ಮನುಷ್ಯಂಗೆ ಯಾವುದೇ ವಿಷಯದ ಹೆದರಿಕೆ ಇಪ್ಪ ಸಾಧ್ಯತೆ ಇರ್ತು. ಸಣ್ನ ಸೂಜಿಂದ ಹಿಡುದು ದೊಡ್ಡ ಪರ್ವತದ ವರೇಗೆ, ಕತ್ತಲೆ ಕೋಣೆಂದ ಹಿಡುದು ಜನಜಂಗುಳಿಯ ವರೆಗೆ.

ಕೆಲವು ಅಧ್ಯಯನಂಗಳ ಮಾಡಿ ಈ ಫೋಬಿಯಾಂಗಳ ಐದು ಗುಂಪಿಲ್ಲಿ ವಿಂಗಡಿಸಿದ್ದವು

 • ದೂರ ಹೋಗುವಿಕೆ [ಒಂಟಿಯಾಗಿ ಪ್ರಯಾಣಿಸುವುದು, ಜನಜಂಗುಳಿಲಿ ಇಪ್ಪದು,ಒಂಟಿ ಇಪ್ಪದು ಇತ್ಯಾದಿ]
 • ಜೀವಿಗೊ[ಹುಳು,ಎಲಿ, ಜಿರಳೆ ಇತ್ಯಾದಿ]
 • ದೈಹಿಕ ಬದಲಾವಣೆಗೊ[ಗಾಯ, ನೆತ್ತರು, ಶಸ್ತ್ರಚಿಕಿತ್ಸೆ ಇತ್ಯಾದಿ]
 • ಸಾಮಾಜಿಕ ಸಂದರ್ಭಂಗೊ[ಅಪರಿಚಿತರೊಟ್ಟಿಂಗೆ ಇಪ್ಪದು, ಬೇರೆಯವ್ವು ನಮ್ಮ ಗಮನಿಸುದು ಇತ್ಯಾದಿ]
 • ಪ್ರಕೃತಿ[ಎತ್ತರದ ಜಾಗೆ, ಸಮುದ್ರ ಇತ್ಯಾದಿ]

ಈ ರೀತಿಯ ಸಮಸ್ಯೆಗೊ ಸುರುವಿಲ್ಲಿ ಸಣ್ಣ ದಾಗಿ ಕಂಡುಬತ್ತು. ಮತ್ತೆ ನಿಧಾನಕ್ಕೆ ತೀವ್ರತೆ ಹೆಚ್ಚಾವ್ತ ಹೋವ್ತು. ಸರಿಯಾಗಿ ಚಿಕಿತ್ಸೆ ಕೊಡದ್ದರೆ ಇದರ ತೀವ್ರತೆ ವ್ಯಕ್ತಿಯ ಜೀವನವನ್ನೇ ಹಾಳು ಮಾಡ್ತು, ಅದರೊಟ್ಟಿಂಗೇ ಒಟ್ಟಿಂಗೆ ಇಪ್ಪೋರಿಂಗೂ ಸಮಸ್ಯೆ ಉಂಟು ಮಾಡ್ತು.

ಈ ಸಮಸ್ಯೆ ಹೆಚ್ಚು ಕಂಡುಬಪ್ಪದು ಮಹಿಳೆಯರಲ್ಲಿ. ಪುರುಷರಲ್ಲಿ ಅರ್ಧದಷ್ಟು ಕಮ್ಮಿ ಸಾಧ್ಯತೆ !  ಸಾಮಾನ್ಯವಾಗಿ ಬಾಲ್ಯಲ್ಲಿ ಈ ಸಮಸ್ಯೆಯ ಮೂಲ ಇಪ್ಪದು. ದೊಡ್ಡ ಆದ ಹಾಂಗೇ ಸಮಸ್ಯೆಯೂ ಬೆಳೆತ್ತಾ ಹೋವ್ತು. ಕೆಲವು ಸಮಸ್ಯೆಗೊ ಹದಿಹರೆಯದ ಸಂದರ್ಭಲ್ಲಿ ಶುರು ಆವ್ತು. ಬಾಲ್ಯಲ್ಲಿ ಅಥವಾ ಹದಿಹರಯಲ್ಲಿ ಆದಂತಹ ಯಾವುದೇ ಅಹಿತಕರ ಘಟನೆಗಳಿಂದಾಗಿ ಮನಸ್ಸಿಲ್ಲಿ ಹೆದರಿಕೆ ಶುರು ಆಗಿಪ್ಪ ಸಾಧ್ಯತೆ ಹೆಚ್ಚಿರ್ತು.

ಪರಿಹಾರ : ಮಕ್ಕೊ ಅಥವಾ ದೊಡ್ಡೋರು ಯಾವುದೇ ವಿಷಯಕ್ಕೆ ಅನಗತ್ಯವಾಗಿ ಹೆದರುತ್ತರೆ, ಅದು ಮುಂದೆ ’ಫೋಬಿಯ’ ಅಪ್ಪ ಸಾಧ್ಯತೆ ಇರ್ತು. ಸಮಸ್ಯೆ ಕೈ ಮೀರುವ ಮೊದಲೇ ಸಮಸ್ಯೆ ಇಪ್ಪದು ತಿಳ್ಕೊಂಡು ಮಾನಸಿಕ ತಜ್ಞರ ಹತ್ತರೆ ಹೋಗಿ ಚಿಕಿತ್ಸೆ ಪಡೆಯಕಾದ್ದು ಅಗತ್ಯ. ಅದರಿಂದಾಗಿ ಮುಂದಾಣ ಜೀವನವ ಸಂತೋಷ ನೆಮ್ಮದಿಲಿ ಕಳವಲಕ್ಕು.

ಮೊದಲೇ ಹೇಳಿದ ಹಾಂಗೆ ಬೇರೆ ಬೇರೆ ರೀತಿಯ ಹೆದರಿಕೆಗೊ ಇರ್ತು. ಕೆಲವು ಉದಾಹರಣೆಗಳ ಕೊಡ್ತೆ ಇಲ್ಲಿ.

 • Acro phobia –  fear of heights ಎತ್ತರದ ಹೆದರಿಕೆ
 • Algo phobia – fear of pain ಬೇನೆಯ ಹೆದರಿಕೆ
 • Claustro phobia –  fear of closed places ಮುಚ್ಚಿದ ಸ್ಥಳಂಗಳ ಬಗ್ಗೆ ಹೆದರಿಕೆ
 • Mono phobia – fear of being alone ಒಬ್ಬನೇ ಇಪ್ಪದರ ಹೆದರಿಕೆ
 • Nyote phobia  –  fear of darkness ಕತ್ತಲೆಯ ಬಗ್ಗೆ ಹೆದರಿಕೆ
 • Patho phobia – fear of disease ರೋಗಂಗಳ ಬಗ್ಗೆ ಹೆದರಿಕೆ
 • Sidero phobia – fear of railway ರೈಲಿನ ಬಗ್ಗೆ ಹೆದರಿಕೆ
 • Zoo phobia – fear of animals ಪ್ರಾಣಿ(ಗಳ) ಬಗ್ಗೆ ಹೆದರಿಕೆ
 • Aqu phobia – fear of water ನೀರಿನ ಬಗ್ಗೆ ಹೆದರಿಕೆ

ನಿಂಗಳ

-ಸುವರ್ಣಿನೀ ಕೊಣಲೆ

PHOBIAS-ಹೆದರಿಕೆಗೊ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 38 ಒಪ್ಪಂಗೊ

 1. ಮೋಹನಣ್ಣ
  Krishnamohana Bhat

  ನಿನ್ನ ಫೋಬಿಯ ಎ೦ತದು ಹೇಳಿ ಎನ ಗೊ೦ತಿದ್ದು ಬೋಸ ಭಾವ ಆದರೆ ಅದಕ್ಕೆ ಹೆಸರು ಹೊಸತ್ತು ಭೊಸ ಫೊಬಿಯಾ ಹೇಳಿ;ಹೇಳೀರೆ ಬೋಸ೦ಗಳ ಹಾ೦ಗೆ ತೋರುಸಿಯೊ೦ಬದು.ಅದಕ್ಕೆ ಮದ್ದು ಅಜ್ಜಕನ ಮಾವ೦ ಮಾಡುಗು.ಕರೆ ತೆಗೆಯದ್ದ ಕೊತ್ತಾಳಿಕೆ ಟ್ರೀಟುಮೆ೦ಟು ಹೇಳಿ ಹೇಳ್ತವು ಅಲ್ಲಿ ಹೋಗಿ ಅವರತ್ರೆ ಹಿಗೊ೦ದು ಮದ್ದು ಆಯೇಕು ಹೇಳಿರೆ ಅವ್ವು ಮಾಡಿ ಕೊಡುಗು.ಒಪ್ಪ೦ಗಳೊಟ್ಟಿ೦ಗೆ

  [Reply]

  ಬೋಸ ಬಾವ

  ಬೋಸ... Reply:

  ಇದು ಎ೦ತರ ಹೊಸತ್ತು “ಕೊತ್ತಾಳಿಕೆ” ಲಿ ಕೊಡ್ಡುಸ್ಸು?

  [Reply]

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  ಅದು ಎಂತರ ಹೇಳಿ ಹೇಳ್ತ ಕ್ರಮ ಇಲ್ಲೆಡ ಭಾವ,, ಅಜ್ಜಕಾನ ಭಾವಂಗೆ ಮಾಂತ್ರ ಗೊಂತಿಪ್ಪ ನಾಟಿವಿದ್ಯೆ ಅದು.. ಸುಮಾರು ಜೆನಕ್ಕೆ ಕೊಟ್ಟಿದಾಡ್ಡ.. :) ಒಳ್ಳೆ ಪ್ರಯೋಜನ ಆವ್ತಡ.. :) ನೀ ಒಂದರಿ ನೋಡ್ಸು ಒಳ್ಳೇದು 😉

  [Reply]

  ಬೋಸ ಬಾವ

  ಬೋಸ... Reply:

  {…ಸುಮಾರು ಜೆನಕ್ಕೆ ಕೊಟ್ಟಿದಾಡ್ಡ}

  ಓಹೋ.. ನೀನು ತೊಕ್ಕೊ೦ಡಿದ್ಯೊ??? ಅ೦ಬಗ ಅಕ್ಕು… 😉

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  ಅಪ್ಪು ಭಾವ, ಗಮ್ಮತಾವುತ್ತು, ತೆಕ್ಕೊಂಡು ನೋಡು! 😉

  VN:F [1.9.22_1171]
  Rating: 0 (from 0 votes)
 2. ಮೋಹನಣ್ಣ
  Krishnamohana Bhat

  ಅದೆಲ್ಲ ಅಜ್ಜಕಾನ ಮಾವ೦ ಕೇಳೀರೆ ಹೇಳೀಕೊಡುಗು ಒಟ್ಟಿ೦ಗೆ ತೋರುಸಿಯು ಕೊಡೊಗು ಎವದಕ್ಕೂ ಸ್ವ೦ತ ಅನುಭವ ಇಪ್ಪದು ಒಳ್ಳೆದಲ್ಲದೊ ಒ೦ದರಿ ಕೇಳಿ ನೋಡು.ಒಪ್ಪ೦ಗಳೊಟ್ಟಿ೦ಗೆ.

  [Reply]

  VA:F [1.9.22_1171]
  Rating: 0 (from 0 votes)
 3. ಅಕ್ಕಾ,, ಎನಗೆ ಪರೀಕ್ಷೆ ಪ್ರಶ್ನೆ ಪತ್ರಿಕೆ ನೋಡಿರೆ ಹೆದರಿಕೆ ಸುರು ಆವ್ತು,, ಎಂತಾರು ಮದ್ದಿದ್ದಾ ಅಕ್ಕಾ!? ಎಂತ ಹೇಳ್ತವು ಅದಕ್ಕೆ? ತುಂಬಾ ಹೆದರಿಕೆ ಎನಗೆ!! :(

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಸರೀ ಓದಿ ಹೋದರಾತು… !!

  [Reply]

  ಬಲ್ನಾಡುಮಾಣಿ

  ಬಲ್ನಾಡುಮಾಣಿ Reply:

  ಅಪ್ಪಪ್ಪು, ಅಕ್ಕ ಹೇಳಿದಾಂಗೆ, ಸರೀ, ಬಾಲಮಂಗಳ, ಚಂಪಕ, ದಿನಕ್ಕೊಂದು ಕಥೆ ಎಲ್ಲ ಓದಿಗೊಂಡು ಹೋಗಾತಾ? ಒಪ್ಪಕುಞಿ.. :)

  [Reply]

  VA:F [1.9.22_1171]
  Rating: 0 (from 0 votes)
 4. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಸುವರ್ಣಿನಿ ಡಾಗುಟ್ರಕ್ಕ°.., ಒಳ್ಳೆ ಮಾಹಿತಿ ಕೊಟ್ಟಿದಿ.
  ಮನುಷ್ಯಂಗೆ ಒಂದಲ್ಲ ಒಂದು ರೀತಿಯ ಹೆದರಿಕೆ, ಅವರವರ ಅನುಭವಲ್ಲಿ ಬಂದದು ಇರ್ತಲ್ಲದಾ? ಅದರ ನವಗೆ ಯಾವುದಾದರೂ ಒಂದರಲ್ಲಿ ನಿಂಗೋ ಕೊಟ್ಟ ಲಿಸ್ಟ್ ಲಿ ಹೋಲಿಕೆ ಮಾಡ್ಲೆ ಆವುತ್ತಾ?
  ನಿಂಗೋ ಕೊಟ್ಟ ಪಟ್ಟಿಲಿ ಇಪ್ಪ ಹೆದರಿಕೆಗಳ ತರಾವಳಿಗಳಲ್ಲಿ, ನಾವು ಒಬ್ಬ° ವ್ಯಕ್ತಿಯ ಹೆದರಿಕೆಯ ಯಾವಾಗ ಗಂಭೀರವಾಗಿ ತೆಕ್ಕೊಳ್ಳೆಕ್ಕು?
  ಕೆಲವು ಸರ್ತಿ ಮಕ್ಕಳಲ್ಲಿ ಹೆದರಿಕೆಗ ಕಂಡರೆ, ದೊಡ್ಡ ಅಪ್ಪಗ ಹೋವುತ್ತು ಹೇಳಿ ಬಿಟ್ಟು ಬಿಡ್ತವು.. ಹಾಂಗೆ ಬಿಡುದು ಸರಿಯಾ?
  ಹೆದರಿಕೆಯ ತೀವ್ರತೆಯ ನವಗೆ ಕಂಡು ಹಿಡಿವಲೆ ಎಡಿತ್ತಾ? ತಿಳಿಶುತ್ತಿರಾ?
  ಧನ್ಯವಾದಂಗೋ…

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಒಳ್ಳೆ ಪ್ರಶ್ನೆ ಕೇಳೀದ್ದಿ ಅಕ್ಕ, ರಜ್ಜ ಹೆದರಿಕೆ ಎಲ್ಲೋರಿಂಗೂ ಇಪ್ಪದೇ ಅಲ್ಲದಾ..ಆದರೆ ಅದರ ನಾವು ಈ ಫೋಬಿಯಾ ಅಥವಾ ಹೆದರಿಕ್ಕೆ ಅಪ್ಪ ಮಾನಸಿಕ ಸಮಸ್ಯೆಗೆ ಹೋಲಿಕೆ ಮಾಡುದು ಸರಿ ಅಲ್ಲ. ಸಣ್ಣ ಮಕ್ಕಳ ಹೆದರಿಕೆ ಹೆಚ್ಚಿನ ಸಂದರ್ಭಲ್ಲಿ ಮಾಯ ಆವ್ತು, ಆದರೆ ಎಲ್ಲಾ ಸಂದರ್ಭಲ್ಲಿಯೂ ಅಲ್ಲ..ಹಾಂಗಾಗಿ ಮಕ್ಕೊ ಯಾವುದೇ ವಿಷಯಕ್ಕೆ ಅನಗತ್ಯ ಹೆದರುತ್ತರೆ..ಉದಾಹರಣೆಗೆ ಮಕ್ಕೊ ಕತ್ತಲೆಗೆ ಹೆದರುದು..ಎಲ್ಲರೂ ಕತ್ತಲೆಗೆ ಹೆದರುತ್ತವು ಆದರೆ ಕೆಲವು ಸರ್ತಿ ಅದೂ ’ಅತೀ’ ಹೇಳುವ ಮಟ್ಟಲ್ಲಿ ಇರ್ತು, ಅಂತಹ ಸಂದರ್ಭಲ್ಲಿ ನಾವು ನಿರ್ಲಕ್ಷ್ಯ ಮಾಡ್ಲಾಗ. ಇನ್ನೊಂದು ವಿಚಾರ..ಮಕ್ಕಳ ಹೀಂಗಿದ್ದ ಹೆದರಿಕೆಗೊಕ್ಕೆ ಒಂದಲ್ಲ ಒಂದು ರೀತಿಲಿ ದೊಡ್ಡೋರು ಕಾರಣ… ನಾವು ಮಕ್ಕಳ ’ಕತ್ತಲೆಲಿ ಗುಮ್ಮ ಬತ್ತು, ನಿನ್ನ ಹೊತ್ತುಗೊಂಡು ಹೋಕು. ಊಟ ಮಾಡದ್ದರೆ ಗುಮ್ಮಂಗೆ ಕೊಡ್ತೆ’ ಇತ್ಯಾದಿ ಮಾತು ಹೇಳುವಗ ಅದರ ಪರಿಣಾಮ ಎಷ್ಟು ಗಂಭೀರ ಸ್ವರೂಪಲ್ಲಿ ಇಕ್ಕು ಹೇಳ್ತ ಕಲ್ಪನೆ ನವಗೆ ಇರ್ತಿಲ್ಲೆ. ಈ ಕೆಲವು ಮಾತುಗಳೇ ಅವರ ಮನಸ್ಸಿಲ್ಲಿ ಅಳಿಯದ್ದೇ ಉಳುದು, ದೊಡ್ಡ ಆದಮೇಲೂ ಕೂಡ ಕತ್ತಲೆಗೆ ಹೆದರುವ ಸ್ವಭಾವ ಬೆಳೆಗು..ಮತ್ತೆ ಅದೇ ಫೋಬಿಯಾದ ರೂಪ ತಾಳುಗು.

  [Reply]

  ಸಿಂಧೂ Reply:

  ನಿಜ. ಕೆಲವರು ಲೂಟಿಯ ಮಕ್ಕಳ ರಜ ಹೊತ್ತು ಕೋಣೆಯೊಳದೇ ಹಾಕಿ ಮಡುಗುತ್ತವು. ಅವಕ್ಕೆ ಒಂಟಿತನದ ಹೆದರಿಕೆ ಕಾಡುಗಾ ಹೇಳಿ.

  [Reply]

  ಸುವರ್ಣಿನೀ ಕೊಣಲೆ

  Suvarnini Konale Reply:

  ಖಂಡಿತಾ… :(
  ಎನ್ನದೊಂದು ಅಭಿಪ್ರಾಯ ಇದ್ದು, ಎಲ್ಲ ಅಮ್ಮಂದ್ರೂ ಕೂಡ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ತಿಳ್ಕೊಳ್ಳೆಕಾದ್ದು ಅಗತ್ಯ.

  VA:F [1.9.22_1171]
  Rating: 0 (from 0 votes)
 5. ಎನಗೆ ಮುಚ್ಚಿದ ಜಾಗಗಳದ್ದೂ, ಎತ್ತರದ ಜಾಗಗಳದ್ದೂ ಫೋಬಿಯಾ ಮೊದಲಿಂದ ಇದ್ದು. ಎತ್ತರದ ಜಾಗೆಯ ಫೋಬಿಯಾವ ರಜ್ಜ ಹತ್ತಿಕ್ಕಿಗೊಂಬಲೆ ಎಡಿತ್ತು. ಎಂತಕೆ ಹೇಳೀರೆ ಗುಡ್ಡೆ, ಬಂಡೆಗೊಕ್ಕೆಲ್ಲ ಪಿಕ್ ನಿಕ್ ಹೋದರೆ, ಹೆದರಿಕೆ ಇದ್ದರೂ ಉತ್ಸಾಹ ಮೇಲೆ ಹತ್ತುಸುತ್ತು. (ಹತ್ತುವಾಗ ಮಾತ್ರ ಕೂಗುವಷ್ಟಾವುತ್ತು). ಮುಚ್ಚಿದ ಗುಹೆಯಾಂಗಿಪ್ಪದಕ್ಕೆ ಹೋಪದು ಅಸಾಧ್ಯವೇ ಸರಿ. ಹೆದರಿಕೆಲಿ ಉಸಿರು ಕಟ್ಟಿದ ಹಾಂಗೆ ಆವುತ್ತು. ಅಂಥ ಸಂದರ್ಭಂಗೊ ಯಾವಾಗಾದರೂ ಒಂದರಿ ಬಪ್ಪದಷ್ಟೇ.
  ಆದರೆ ಎಲ್ಲಾ ತರದ (ಮುಖ್ಯವಾಗಿ ಎನ್ನ ತರದ) ಫೋಬಿಯಾಂಗೊ ಕ್ರಮೇಣ ಹೆಚ್ಚಕ್ಕು ಹೇಳುದು ಎನಗೆ ಅನ್ಸುತ್ತಿಲ್ಲೆ. ಮತ್ತೆ ಜೀವಕ್ಕೆ ಅಪಾಯ ಬಂದರೆ ಯಾವ ಫೋಬಿಯಾ ಇದ್ದರೂ ಓಡಿ ಹೋಕು. ಪ್ರಳಯ ಆದರೆ ಏಂಜೆಲ್ ಜಲಪಾತದ ಕೊಡೀಲಿ ಹತ್ತಿ ನಿಂಬಲೂ ಎಡಿಗು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆತೆಕ್ಕುಂಜ ಕುಮಾರ ಮಾವ°ಶಾಂತತ್ತೆವೆಂಕಟ್ ಕೋಟೂರುವೇಣೂರಣ್ಣಮುಳಿಯ ಭಾವಪುಣಚ ಡಾಕ್ಟ್ರುಅನುಶ್ರೀ ಬಂಡಾಡಿಬೊಳುಂಬು ಮಾವ°ಎರುಂಬು ಅಪ್ಪಚ್ಚಿಗೋಪಾಲಣ್ಣಮಾಷ್ಟ್ರುಮಾವ°ಅಕ್ಷರ°ಶುದ್ದಿಕ್ಕಾರ°ಸುಭಗದೇವಸ್ಯ ಮಾಣಿಡಾಮಹೇಶಣ್ಣಪೆಂಗಣ್ಣ°ನೆಗೆಗಾರ°ಕಜೆವಸಂತ°ಬೋಸ ಬಾವಚೆನ್ನಬೆಟ್ಟಣ್ಣಡೈಮಂಡು ಭಾವಪೆರ್ಲದಣ್ಣದೊಡ್ಮನೆ ಭಾವಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ