ಶೀತ ಜ್ವರ….ಕೆಲವು ಪರಿಹಾರ

September 19, 2010 ರ 12:02 pmಗೆ ನಮ್ಮ ಬರದ್ದು, ಇದುವರೆಗೆ 33 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳದ ವಾರ ಆನು ನಾಪತ್ತೆ !! ಹೋದ್ದು ಊರಿಂಗೆ.. ಚೌತಿಗೆ :) ಅದಾಗಿ ಒಂದು ದಿನ ಪರೀಕ್ಷೆ :( ಮಧ್ಯಲ್ಲಿ ಒಂದು ದಿನ ಗೋಕರ್ಣ/ಅಶೋಕೆ ಗೆ ಹೋಗಿತ್ತಿದ್ದೆ :) ಒಂದುವಾರ ರಜೆ ಇದ್ದರೂ ರೆಸ್ಟ್ ಮಾಡಿದ್ದಿಲ್ಲೆ, ತಿರುಗಾಟವೇ ಹೆಚ್ಚು.
ಇದೆಲ್ಲ ಕಳದು ಮನೆಗೆ ಎತ್ತಿಯಪ್ಪಗ ಶುರುವಾತು ಸಣ್ಣಕ್ಕೆ ಶೀತ ಜ್ವರ. ಡಾಕ್ಟ್ರಿಂಗೂ ಅನಾರೋಗ್ಯವಾ? ಎಂಗಳೂ ಮನುಷ್ಯರೇ ಅಲ್ಲದಾ? ವೈರಸ್ಸಿಂಗೆ ಗೊಂತಾವ್ತಾ ಡಾಕ್ಟ್ರು ಆರು ಹೇಳಿ 😉 !!!

ಶೀತ ಜ್ವರ ಬಂದದಪ್ಪು, ಆದರೆ ಪರಿಹಾರ ಎಂತರ? ಒಂದು ಮಾತು ನಿಂಗೊಗೆಲ್ಲಾ ಹೇಳ್ಲೆ ಇಷ್ಟಪಡ್ತೆ..ಎಂತಪ್ಪಾ ಹೇಳಿರೆ.. ಈ ಶೀತ ಜ್ವರ (common cold) ಹೇಳ್ತ ಸಮಸ್ಯೆ ಒಂದು ವೈರಸ್ಸಿಂದಾಗಿ ಬಪ್ಪದು ..ಆಶ್ಚರ್ಯಕರ ವಿಷಯ ಹೇಳಿರೆ..ಇಷ್ಟೊಂದು ಸಾಮಾನ್ಯವಾದ ಸಮಸ್ಯೆಗೆ.. ಯಾವುದೇ ಮದ್ದು ಇಲ್ಲೆ  [ಈ ವೈರಸ್ಸಿನ ತಡವಲೆ ಮದ್ದು ಇಲ್ಲೆ ಹೇಳೀ ಆನು ಓದಿ ತಿಳ್ಕೊಂಡದು, ಬೈಲಿನೋರಿಂಗೆ ಗೊಂತಿದ್ದರೆ ಎನಗೆ ತಿಳುಶಿ]. ಒಂದು ಮಾತಿದ್ದು “ಶೀತ ಜ್ವರ ಶುರು ಆದರೆ, ಮದ್ದು ತೆಕ್ಕೊಳ್ಳದ್ದರೆ ಒಂದು ವಾರ ಬೇಕು ಕಮ್ಮಿ ಅಪ್ಪಲೆ, ಮದ್ದು ತೆಕ್ಕೊಂಡರೆ ಏಳೇ ದಿನಲ್ಲಿ ಕಮ್ಮಿ ಆವ್ತು” !!  ಮದ್ದು ತೆಕ್ಕೊಂಡದ್ರಿಂದ ಹೆಚ್ಚಿನ ಪ್ರಯೋಜನ ಆಗ ಹೇಳಿ ಈ ಮಾತಿನ ಅರ್ಥ, ಆದರೆ ದಿನನಿತ್ಯದ ಕೆಲಸ ಮಾಡ್ಲೆ ತೊಂದರೆ ಕೊಡುವ ತಲೆಬೇನೆ, ಮೂಗಿಲ್ಲಿ ಸುರಿವ ಧಾರೆ !, ಸುಸ್ತು, ಸೆಮ್ಮ, ಹಶು ಇಲ್ಲದ್ದೆ ಅಪ್ಪದು ಇತ್ಯಾದಿ ತೊಂದರೆಗಳ ನಾವು ನಿರ್ಲಕ್ಷ್ಯ ಮಾಡಿರೆ ಈ ಏಳು ದಿನದ ಜೀವನ ತುಂಬಾ ಕಷ್ಟ ಅನ್ಸುತ್ತು ಅಲ್ಲದಾ…? ಹಾಂಗಾರೆ ಇದಕ್ಕೆಲ್ಲ ಪರಿಹಾರ ಎಂತರ? ಮಾತ್ರೆ ತೆಕ್ಕೊಂಬದು ಮಾಂತ್ರವೆಯಾ? ಅಲ್ಲ, ಇದಕ್ಕೆ ನಮ್ಮ ಮನೆಲಿ ನಾವು ಎಂತ  ಮದ್ದು/ಪರಿಹಾರ ಮಾಡ್ಲಕ್ಕು ಹೇಳಿರೆ…..

(Steam inhalation) ಹಬೆ ತೆಕ್ಕೊಂಬದು:

ಒಂದು ಪಾತ್ರೆಲಿ ನೀರು ಕೊದುಶಿ ಅದಕ್ಕೆ ಬೇಕಾರೆ ನಾಲ್ಕು ತುಳಸಿ ಎಲೆ ಹಾಕಿ ಅಥವಾ ಅರಶಿನ ಹೊಡಿ ಹಾಕಿ, ಪಾತ್ರೆಯ ಮೇಲೆ ಬಗ್ಗಿ, ಹಬೆ ಮೋರೆಗೆ ಬಪ್ಪ ಹಾಂಗೆ,ಸುತ್ತಲೂ ಒಂದು ಬೈರಾಸಿನ ಮುಚ್ಚಿಗೊಂಡು, ಹಬೆಯ ಉಸಿರಾಟ ಮಾಡೆಕು, ಹೀಂಗೆ ದಿನಕ್ಕೆ ಎರಡು ಸರ್ತಿ ಮಾಡಿರೆ ಒಳ್ಳೆದು. ಇದರಿಂದ, ಕಫ,ನೆಗಡಿ ಕರಗುಲೆ ಒಳ್ಳೆದು, ಇದರಿಂದಾಗಿ ಸೆಮ್ಮ, ತಲೆಬೇನೆಯೂ ಕಮ್ಮಿ ಆವ್ತು. ಉಸಿರಾಟವೂ ಸುಲಭ ಆವ್ತು.

ಆಹಾರ:

 • ಶರೀರಕ್ಕೆ ರೋಗಾಣುಗಳ ವಿರುದ್ಧ ಹೋರಾಡ್ಲೆ ಶಕ್ತಿ ಬೇಕಾವ್ತು..ಹಾಂಗಾಗಿ ನಾವು ತೆಕ್ಕೊಂಬ ಆಹಾರ ಜೀರ್ಣ ಅಪ್ಪಲೆ ಸುಲಭ ಇರೆಕು, ಒಟ್ಟಿಂಗೇ ಹೆಚ್ಚಿನ ಶಕ್ತಿ ಸಿಕ್ಕೆಕು [ಇದು ಒಂದು ಸಿದ್ಧಾಂತ] ಹಾಂಗಾಗಿ ಗಂಜಿ,ತೆಳಿ, ಇತ್ಯಾದಿ ತೆಕ್ಕೊಳ್ಳೆಕು.
 • ಒಟ್ಟಿಂಗೇ ಹೆಚ್ಚು ಆಹಾರ ತೆಕ್ಕೊಂಬ ಬದಲು, ರಜ್ಜ ರಜ್ಜ ಆಹಾರವ ದಿನಕ್ಕೆ ೪-೫ ಸರ್ತಿ ತೆಕ್ಕೊಂಬಲಕ್ಕು.
 • ಇದರೊಟ್ಟಿಂಗೆ ಬಾರ್ಲಿ ನೀರು ಕುಡುದರೆ ಒಳ್ಳೆದು.
 • ಬೆಶಿ ಬೆಶಿ ನೀರು ಕುಡುದರೆ ಒಳ್ಳೆದು. ಹೆಚ್ಚು ದ್ರವಾಹಾರ ತೆಕ್ಕೊಳ್ಳೆಕು.
 • ಕೇವಲ ದ್ರವಾಹಾರ ಮಾಂತ್ರ ಸೇವನೆ ಮಾಡಿರೆ ಇನ್ನೂ ಉತ್ತಮ.
 • ಪ್ರಕೃತಿ ಚಿಕಿತ್ಸೆಯ ಪ್ರಕಾರ ಜ್ವರದ ಸಂದರ್ಭಲ್ಲಿ ಆಹಾರ ಸೇವನೆ ಮಾಡದ್ದರೆ ಒಳ್ಳೆದು. ಹೇಳಿರೆ ಉಪವಾಸ ಚಿಕಿತ್ಸೆ. ಇದು ನಿಜವಾಗಿಯೂ ಸಹಾಯ ಮಾಡ್ತು. ಆದರೆ ಇದರ ಮಾಡುದು ಕಷ್ಟ,ಉಪವಾಸ ಮಾಡ್ತರೆ ಪೂರ್ತಿ ದಿನ ರೆಸ್ಟ್ ತೆಕ್ಕೊಳ್ಳೆಕು, ನಮ್ಮ ಕೆಲಸ, ಶಾಲೆ ಇತ್ಯಾದಿ ಗೌಜಿಲಿ ನವಗೆ ರೆಸ್ಟ್ ಮಾಡ್ಲೆ ಸಮಯ ಸಿಕ್ಕುತ್ತಿಲ್ಲೆ.

ಮನೆಮದ್ದು:

 • ಹಾಲಿಂಗೆ ಅರಶಿನ ಹೊಡಿ ಹಾಕಿ ಕುಡಿವ ಕ್ರಮವೂ ಇದ್ದು, ಅರಶಿನಲ್ಲಿ ವೈರಸ್ಸಿನೊಟ್ಟಿಂಗೆ ಹೋರಾಡುವ ಅಂಶ ಇದ್ದು.
 • ಇನ್ನು ಕಟುಕರೋಹಿಣಿ ಹೇಳ್ತ ಮದ್ದಿನ ಕೊದುಶಿದ ನೀರಿಲ್ಲಿ ತಳದು ರಜ್ಜ ಬೆಶಿ ಮಾಡಿ ಮೋರೆಗೆ, ಹಣೆಗೆ ಕಿಟ್ಟಿರೆ ತಲೆಬೇನೆ, ಆ ಭಾಗಂಗಳಲ್ಲಿ ಗಟ್ಟಿ ಕಟ್ಟಿದ ಕಫ ಕರಗುಲೆ ಸಹಾಯ ಮಾಡ್ತು ಸಮುದ್ರಹಾಗಲಕಾಯಿಯನ್ನುದೇ ತಳದು ಕಿಟ್ಟಿರೆ ಆವ್ತು ಹೇಳಿ ಆನು ಕೇಳೀ ತಿಳ್ಕೊಂಡದು.
 • ಕಿರಾತಕಡ್ಡಿ ಮತ್ತೆ ಅಮೃತ ಬಳ್ಳಿಗಳ ಕಷಾಯವೂ ಕುಡಿವಲಕ್ಕು.
 • (ಇದರ ಬಗ್ಗೆ ಹೆಚ್ಚಿನ ಮಾಹಿತಿ ಸೌಮ್ಯ ಡಾಕ್ಟ್ರ ಹತ್ತರೆ ಕೇಳುವ, ಆಯುರ್ವೇದದ ಬಗ್ಗೆ ಎನಗೆ ಹೆಚ್ಚಿನ ಮಾಹಿತಿ ಇಲ್ಲೆ )

ತಣ್ಣೀರಿನ ಪಟ್ಟಿ:

 • ಜ್ವರ 101 ಡಿಗ್ರಿಂದ ಹೆಚ್ಚಿದ್ದರೆ ತಣ್ಣೀರಿಲ್ಲಿ ಮುಳುಗ್ಸಿ ಕಾಟನ್ ವಸ್ತ್ರವ ಹಣೆಯ ಮೇಲೆ ಪಟ್ಟಿ ಹಾಕೆಕು, ಪ್ರತಿ 2-3 ನಿಮಿಷಕ್ಕೊಂದರಿ ಬದಲ್ಸೆಕು.
 • ಒಟ್ಟಿಂಗೇ ತಣ್ಣೀರಿಲ್ಲಿ ಅದ್ದಿದ ವಸ್ತ್ರಂದ ಕೈ ಮತ್ತೆ ಕಾಲುಗಳ ಉದ್ದುಲಕ್ಕು, ಇದರಿಂದ ಹೆಚ್ಚಾದ ತಾಪಮಾನ ವ ಕಮ್ಮಿ ಮಾಡ್ಲಕ್ಕು. [ಹೆಚ್ಚು ಮೈ ಬೆಶಿ (104 ಡಿಗ್ರಿ)ಇದ್ದರೆ ಕೆಲವು ಸರ್ತಿ ಐಸ್ ನ ಕೂಡ ಕೈ ಕಾಲುಗೊಕ್ಕೆ ಉದ್ದುಲಕ್ಕು, ಆದರೆ ಇಂತಹ ಸಂದರ್ಭ ಇದ್ದರೆ ಮನೆಲಿ ಕೂಬ ಬದಲು ವೈದ್ಯರ ಕಾಂಬದು ಉತ್ತಮ]

ಯೋಗ ಚಿಕಿತ್ಸೆ:

 • ಜಲನೇತಿ ಮತ್ತೆ ಸೂತ್ರನೇತಿಗಳ ಅಭ್ಯಾಸ ಮಾಡಿರೆ ಉಸಿರಾಟ ಸರಾಗ ಆವ್ತು. ಮೂಗಿನ ಒಳ ಗಟ್ಟಿಕಟ್ಟಿದ ಕಫವ ಹೆರ ಹಾಕುಲೆ ಸಹಾಯ ಮಾಡ್ತು.
 • ಮೈ ಬೆಶಿ ಇದ್ದರೆ ಶೀತಲಿ ಪ್ರಾಣಾಯಾಮವ ಅಭ್ಯಾಸ ಮಾಡ್ಲಕ್ಕು. ಅಥವಾ ಚಂದ್ರಾನುಲೋಮವನ್ನೂ ಮಾಡ್ಲಕ್ಕು.
 • ವಮನ ಧೌತಿ ಮಾಡುದರಿಂದ ಶ್ವಾಸಕೋಶಲ್ಲಿಪ್ಪ ಕಫ ಹೆರ ಬಪ್ಪಲೆ ಸಹಾಯ ಆವ್ತು. ಅಲ್ಲದ್ದೇ ಅಜೀರ್ಣ ಸಮಸ್ಯೆಗೂ ಪರಿಹಾರ ಸಿಕ್ಕುತ್ತು.
 • ಯೋಗದ ಈ ಅಭ್ಯಾಸಂಗಳ ಬಗ್ಗೆ ಗೊಂತಿಪ್ಪೋರು/ಕಲ್ತವ್ವು ಅದರ ಅಭ್ಯಾಸ ಮಾಡ್ಲಕ್ಕು. ಬೈಲಿಲ್ಲಿಪ್ಪವಕ್ಕೆ ಆನು ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟಿದಿಲ್ಲೆ,ಕ್ಷಮಿಸಿ. ಪ್ರತಿಯೊಂದನ್ನೂ ವಿವರ್ಸುಲೆ ಒಂದೊಂದು ದೊಡ್ಡ ಲೇಖನ ಬರೆಯಕ್ಕು !! ನಿಧಾನಕ್ಕೆ ಬರೆವ ಆಲೋಚನೆಲಿ ಇತ್ತಿದ್ದೆ :(

ಎಲ್ಲಕ್ಕಿಂತ ಮುಖ್ಯವಾಗಿ ವಿಶ್ರಾಂತಿ ಮಾಡಿರೆ ತುಂಬಾ ಒಳ್ಳೆದು :)

ಈ ಮೇಲೆ ಹೇಳಿದ ಎಲ್ಲ ಪರಿಹಾರಂಗಳನ್ನೂ ಆನು ಮಾಡ್ತೆ, ಎನ್ನ ಮನೆಯೋರುದೇ ಇದನ್ನೇ ಮಾಡ್ತವು. ಹಾಂಗಾಗಿ ಹೆಚ್ಚಿನ ಸಂದರ್ಭಲ್ಲಿ ಎಂಗೊಗೆ ಯಾವುದೇ ಮಾತ್ರೆಯ ತೆಕ್ಕೊಂಬ ಅವಶ್ಯಕತೆ ಬತ್ತಿಲ್ಲೆ. ವಿಶ್ರಾಂತಿ ತೆಕ್ಕೊಂಬಲೆ ಎಂಗೊಗೂ ರಜ್ಜ ಬಙವೇ !! ಆದರೆ, ಆಹಾರ, ಯೋಗ ಚಿಕಿತ್ಸೆ ಇತ್ಯಾದಿಗಳ ತಪ್ಪದ್ದೇ ಮಾಡ್ತೆಂಯ.

ಸಾಮಾನ್ಯ ಶೀತ ಜ್ವರ ಬಂದರೆ ತಲೆಬೆಶಿ ಮಾಡೆಕಾದ ಅಗತ್ಯ ಇಲ್ಲೆ. ಆದರೆ ನವಗೆ ಬಂದ ಜ್ವರ ಸಾಮಾನ್ಯ ಶೀತಜ್ವರವೇ ಅಪ್ಪು ಹೇಳುವ ವಿಷಯ ಮಾಂತ್ರ ಸ್ಪಷ್ಟ ಇರೆಕು, ಬೇರೆ ಯಾವುದೇ ರೀತಿಯ ಜ್ವರಂಗೊ ಬಪ್ಪ ಸಾಧ್ಯತೆಗೊ ಈಗಾಣ ದಿನಂಗಳಲ್ಲಿ ಹೆಚ್ಚು. ಹಾಂಗಿಪ್ಪ ಸಂದರ್ಭಲ್ಲಿ ಮನೆಮದ್ದು ಇತ್ಯಾದಿಗಳ ಪ್ರಯೋಗ ಮಾಡದ್ದೆ ವೈದ್ಯರ ಕಾಂಬಲೆ ಹೋಪದು ಬುದ್ಧಿವಂತರ ಕೆಲಸ. ಹಾಂಗೆಯೇ ಅನಗತ್ಯ ಮದ್ದು ತಿನ್ನದ್ದೆ ಇಪ್ಪದುದೇ ಬುದ್ಧಿವಂತರ ಲಕ್ಷಣ !!

ಶೀತ ಜ್ವರ....ಕೆಲವು ಪರಿಹಾರ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 33 ಒಪ್ಪಂಗೊ

 1. ಆಶಾ ಪೆರ್ಲ

  ಅಜ್ಜಿ ಹಿತ್ತಿಲಿಲ್ಲಿ ಅಮೃತ ಬಳ್ಳಿ, ಸಾಂಬ್ರಾಣಿ, ಎರಟಿ ಮದುರ, ಕೈಬೇವು ಇಲ್ಲೆಯಾ?

  [Reply]

  VA:F [1.9.22_1171]
  Rating: 0 (from 0 votes)
 2. ಗೋವಿಂದ ಮಾವ, ಬಳ್ಳಮೂಲೆ
  govindaballamoole

  Sheetha, jwara bandare hopale 7 dina bekaavuthu.Maddu maadidare 1 vaaralli guna avuthu.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಶ್ರೀ ನೀರಮೂಲೆಬಟ್ಟಮಾವ°ವೆಂಕಟ್ ಕೋಟೂರುಮಾಲಕ್ಕ°ಶಾ...ರೀಮುಳಿಯ ಭಾವಶ್ಯಾಮಣ್ಣಯೇನಂಕೂಡ್ಳು ಅಣ್ಣಜಯಗೌರಿ ಅಕ್ಕ°ಪೆಂಗಣ್ಣ°ಅನುಶ್ರೀ ಬಂಡಾಡಿಚೆನ್ನಬೆಟ್ಟಣ್ಣದೊಡ್ಮನೆ ಭಾವಶರ್ಮಪ್ಪಚ್ಚಿಡಾಗುಟ್ರಕ್ಕ°ನೀರ್ಕಜೆ ಮಹೇಶರಾಜಣ್ಣಶೀಲಾಲಕ್ಷ್ಮೀ ಕಾಸರಗೋಡುಕೆದೂರು ಡಾಕ್ಟ್ರುಬಾವ°ಪುತ್ತೂರುಬಾವಮಂಗ್ಳೂರ ಮಾಣಿದೊಡ್ಡಮಾವ°ಪುಣಚ ಡಾಕ್ಟ್ರುವೇಣಿಯಕ್ಕ°ಡಾಮಹೇಶಣ್ಣವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ