ಶುದ್ಧ ಕುಂಕುಮ ಮಾಡುವ ಕ್ರಮ

February 16, 2014 ರ 10:01 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶುದ್ಧ ಕುಂಕುಮ ಮಾಡುವ  ಕ್ರಮ

ತುಂಬಾ ಜೆನ ಅಕ್ಕ-ತಂಗೆಕ್ಕೊ ಕುಂಕುಮ ಮಾಡುವ ರೀತಿ ಹೇಂಗೆ? ಕೇಳುತ್ತವು. ನಮ್ಮ ಒಪ್ಪಣ್ಣಬೈಲಿಲ್ಲಿಯೂ ಕೇಟಿದವವು. ಹಾಂಗಾಗಿ ಎನ ಗೊಂತಿಪ್ಪ ಕ್ರಮವ ಅಪೇಕ್ಷಿತರಿಂಗಾಗಿ ಬರೆತ್ತಾ ಇದ್ದೆ.

ಬೇಕಪ್ಪ ಸಾಮಾನು;–
1.  ಒಳ್ಳೆಜಾತಿಯ ಅರಿಶಿನಕೊಂಬು- ಒಂದುಕಿಲೊ{ನಮ್ಮ ತೋಟಲ್ಲಿ ಬೆಳೆಶಿದ್ದದರ ಕೊರದು ಬೇಶಿಒಣಗಿಸಿದ್ದಾದರೆ ಆ ಕುಂಕುಮ ತೊರುಸುತ್ತಿಲ್ಲೆ. ಇಲ್ಲದ್ರೆ ಕೆಲಾವು ಜೆನಕ್ಕೆ ಕುಂಕುಮ ಎಲರ್ಜಿ ಅಪ್ಪದಿದ}
2.  ಬಿಳಿಗಾರ-150ಗ್ರಾಂ,
3.  ಸ್ಪಟಿಕ- ಹತ್ತುಗ್ರಾಂ,
4.  ನಿಂಬೆಹುಳಿ ಎಸರು-750ಮಿಲಿಲೀಟರು{ಮುಕ್ಕಾಲು ಲೀ, ಬಿತ್ತು ತೆಗದು ಅರಿಶಿದ್ದು},
5.  ಊರ ದನದ ತುಪ್ಪ-100ಗ್ರಾಂ,
6.  ಒಂದುಪ್ಲಾಸ್ಟಿಕ್ ಶೀಟ್ {ಒಲಿ ಹಸೆಯೂ ಅಕ್ಕು}.
7.  ಇಷ್ಟು ಸಾಮಾನು ಹಿಡಿವಹಾಂಗಿದ್ದ ಒಂದುಪಾತ್ರೆ.{ಬರಣಿಯೋ ಮಣ್ಣಿನದ್ದೋ ಆದರೆ ಒಳ್ಳೆದು.ಅದು ಸಿಕ್ಕದ್ರೆ ಸ್ಟೀಲಕ್ಕು. ಅಗಲ ಬಾಯಿದಾದರೆ ಅಂಬಗಂಬಗ ತೊಳಸಿಗೊಂಬಲೆ ಸುಲಭ.}

ಮಾಡುತ್ತ ಕ್ರಮ:–
ಶುದ್ಧವಾದ ಅರಿಶಿನವ ಸಣ್ಣ-ಸಣ್ಣ ತುಂಡುಮಾಡಿಗೊಳೆಕ್ಕು.
ಮತ್ತೆ ಸ್ಪಟಿಕವನ್ನೂ ಬಿಳಿಗಾರವನ್ನೂ ನಯಾ ಹೊಡಿ ಮಾಡಿಗೊಳೆಕ್ಕು.
ಈ ಹೊಡಿಯ ನಿಂಬೆಹುಳಿ ಎಸರಿಲ್ಲಿ ಸರಿಯಾಗಿ ಕಲಸಿ ಅದಕ್ಕೆ ಅರಿಶಿನ ಹೋಳುಗಳ ಹಾಕಿ ಸರಿಯಾಗಿ ಮಿಶ್ರಮಾಡೆಕ್ಕು.
ಈ ಮಿಶ್ರಣವ, ಪಾತ್ರೆಲಿ ಎರಡು ದಿನ {ಅರಿಶಿನ ತುಂಡು ನಿಂಬೆಹುಳಿ ಎಸರು ಹೀರ್ಲೆ}ಮಡಗೆಕ್ಕು.
ದಿನಕ್ಕೆ ಏಳೆಂಟು ಸರ್ತಿ ಅದರ ಸೌಟುಹಾಕಿ ಮೊಗಚ್ಹಿಸಿಗೊಂಡಿರೆಕು.
ಎರಡು ದಿನ ಕಳುದು ಪ್ಲಾಸ್ಟಿಕ್  ಶೀಟಿಲ್ಲಿ ಹರಗಿ ಮನೆಒಳ ಒಣಗುಸೆಕ್ಕು.
ಇದು ಸಾದಾರಣ ಹದಿನೈದು ದಿನ ಒಣಗಿದ ಮೇಲೆ ನಯಾಹೊಡಿ ಮಾಡಿಕ್ಕಿ ಜಾಳ್ಸಿಗೊಳೆಕ್ಕು.
ಅಕೇರಿಗೆ ತುಪ್ಪ ಹಾಕಿ ಲಾಯಿಕಲ್ಲಿ ಕೈಲಿ  ತಿಕ್ಕಿ,ತಿಕ್ಕಿ ಹದ ಬರುಸೀರೆ ಶುದ್ಧಕುಂಕುಮ ರೆಡಿ.ಶುದ್ಧ ಕುಂಕುಮ
ಇದು ಸರಿಯಾದ ಕುಂಕುಮ ಕಲರಿಲ್ಲಿರುತ್ತು.ತುಂಬಾಸಮಯಕ್ಕೆ ಬಾಳಿಕೆ ಬಪ್ಪದು ಮಾತ್ರ ಅಲ್ಲ,ಮನುಷ್ಯನ ಬ್ರೂಮಧ್ಯಕ್ಕೆ ಹಾಕಿರೆ ಆರೋಗ್ಯದಾಯಕ.ಶೀತ ಆದ ಪುಟ್ಟು ಮಕ್ಕೊಗೂ ನೆತ್ತಿಗೆಹಾಕಿ ತಿಕ್ಕಿರೆ ಒಂದೇದಿನಲ್ಲಿ  ಮೂಸರೆ ಹರಿವದೂ ನಿಲ್ಲುತ್ತು.

~~~***~~~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

  1. ಕೇಶವಮೂರ್ತಿ

    ಭಾಷೆ ಮತ್ತು ವಿಧಾನ ಚೆನ್ನಾಗಿವೆ. ಬೆಂಗಳೂರಲ್ಲಿ ಎಲ್ಲಿ ಸಿಗಬಹುದು.

    [Reply]

    VA:F [1.9.22_1171]
    Rating: 0 (from 0 votes)
  2. ವಿಜಯತ್ತೆ
    ವಿಜಯತ್ತೆ

    ಹರೇರಾಮ, ಬೆಂಗಳೂರಿಲ್ಲಿ ಗಿರಿನಗರಲ್ಲಿ ರಾಮಚಂದ್ರಾಪುರ ಮಠ ಕಾರ್ಯಾಲಯಲ್ಲಿ ಸಿಕ್ಕುಗು. ಅಲ್ಲಿ ಸಿಕ್ಕದ್ರೆ ಇಲ್ಲಿ ಕಾಸರಗೋಡು ,ಬದಿಯಡ್ಕ ಮಹಿಳೋದಯಲ್ಲಿ ಶುದ್ಧಕುಂಕುಮ ಸಿಕ್ಕಿಯೇ ಸಿಕ್ಕುತ್ತು. ತರ್ಸಿಗೊಳಿ

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವಚುಬ್ಬಣ್ಣಮುಳಿಯ ಭಾವಕೊಳಚ್ಚಿಪ್ಪು ಬಾವಪುಟ್ಟಬಾವ°ಕಾವಿನಮೂಲೆ ಮಾಣಿಯೇನಂಕೂಡ್ಳು ಅಣ್ಣಪೆಂಗಣ್ಣ°ವಸಂತರಾಜ್ ಹಳೆಮನೆನೆಗೆಗಾರ°ವಿಜಯತ್ತೆಶಾಂತತ್ತೆಶೀಲಾಲಕ್ಷ್ಮೀ ಕಾಸರಗೋಡುಗೋಪಾಲಣ್ಣಕಳಾಯಿ ಗೀತತ್ತೆಮಾಲಕ್ಕ°ಸಂಪಾದಕ°ಕೆದೂರು ಡಾಕ್ಟ್ರುಬಾವ°ಅಜ್ಜಕಾನ ಭಾವಅಕ್ಷರದಣ್ಣವಾಣಿ ಚಿಕ್ಕಮ್ಮvreddhiಕೇಜಿಮಾವ°ವೆಂಕಟ್ ಕೋಟೂರುಬಂಡಾಡಿ ಅಜ್ಜಿಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ