Oppanna.com

ಶುದ್ಧ ಕುಂಕುಮ ಮಾಡುವ ಕ್ರಮ

ಬರದೋರು :   ವಿಜಯತ್ತೆ    on   16/02/2014    14 ಒಪ್ಪಂಗೊ

ಶುದ್ಧ ಕುಂಕುಮ ಮಾಡುವ  ಕ್ರಮ

ತುಂಬಾ ಜೆನ ಅಕ್ಕ-ತಂಗೆಕ್ಕೊ ಕುಂಕುಮ ಮಾಡುವ ರೀತಿ ಹೇಂಗೆ? ಕೇಳುತ್ತವು. ನಮ್ಮ ಒಪ್ಪಣ್ಣಬೈಲಿಲ್ಲಿಯೂ ಕೇಟಿದವವು. ಹಾಂಗಾಗಿ ಎನ ಗೊಂತಿಪ್ಪ ಕ್ರಮವ ಅಪೇಕ್ಷಿತರಿಂಗಾಗಿ ಬರೆತ್ತಾ ಇದ್ದೆ.
ಬೇಕಪ್ಪ ಸಾಮಾನು;–
1.  ಒಳ್ಳೆಜಾತಿಯ ಅರಿಶಿನಕೊಂಬು- ಒಂದುಕಿಲೊ{ನಮ್ಮ ತೋಟಲ್ಲಿ ಬೆಳೆಶಿದ್ದದರ ಕೊರದು ಬೇಶಿಒಣಗಿಸಿದ್ದಾದರೆ ಆ ಕುಂಕುಮ ತೊರುಸುತ್ತಿಲ್ಲೆ. ಇಲ್ಲದ್ರೆ ಕೆಲಾವು ಜೆನಕ್ಕೆ ಕುಂಕುಮ ಎಲರ್ಜಿ ಅಪ್ಪದಿದ}
2.  ಬಿಳಿಗಾರ-150ಗ್ರಾಂ,
3.  ಸ್ಪಟಿಕ- ಹತ್ತುಗ್ರಾಂ,
4.  ನಿಂಬೆಹುಳಿ ಎಸರು-750ಮಿಲಿಲೀಟರು{ಮುಕ್ಕಾಲು ಲೀ, ಬಿತ್ತು ತೆಗದು ಅರಿಶಿದ್ದು},
5.  ಊರ ದನದ ತುಪ್ಪ-100ಗ್ರಾಂ,
6.  ಒಂದುಪ್ಲಾಸ್ಟಿಕ್ ಶೀಟ್ {ಒಲಿ ಹಸೆಯೂ ಅಕ್ಕು}.
7.  ಇಷ್ಟು ಸಾಮಾನು ಹಿಡಿವಹಾಂಗಿದ್ದ ಒಂದುಪಾತ್ರೆ.{ಬರಣಿಯೋ ಮಣ್ಣಿನದ್ದೋ ಆದರೆ ಒಳ್ಳೆದು.ಅದು ಸಿಕ್ಕದ್ರೆ ಸ್ಟೀಲಕ್ಕು. ಅಗಲ ಬಾಯಿದಾದರೆ ಅಂಬಗಂಬಗ ತೊಳಸಿಗೊಂಬಲೆ ಸುಲಭ.}
ಮಾಡುತ್ತ ಕ್ರಮ:–
ಶುದ್ಧವಾದ ಅರಿಶಿನವ ಸಣ್ಣ-ಸಣ್ಣ ತುಂಡುಮಾಡಿಗೊಳೆಕ್ಕು.
ಮತ್ತೆ ಸ್ಪಟಿಕವನ್ನೂ ಬಿಳಿಗಾರವನ್ನೂ ನಯಾ ಹೊಡಿ ಮಾಡಿಗೊಳೆಕ್ಕು.
ಈ ಹೊಡಿಯ ನಿಂಬೆಹುಳಿ ಎಸರಿಲ್ಲಿ ಸರಿಯಾಗಿ ಕಲಸಿ ಅದಕ್ಕೆ ಅರಿಶಿನ ಹೋಳುಗಳ ಹಾಕಿ ಸರಿಯಾಗಿ ಮಿಶ್ರಮಾಡೆಕ್ಕು.
ಈ ಮಿಶ್ರಣವ, ಪಾತ್ರೆಲಿ ಎರಡು ದಿನ {ಅರಿಶಿನ ತುಂಡು ನಿಂಬೆಹುಳಿ ಎಸರು ಹೀರ್ಲೆ}ಮಡಗೆಕ್ಕು.
ದಿನಕ್ಕೆ ಏಳೆಂಟು ಸರ್ತಿ ಅದರ ಸೌಟುಹಾಕಿ ಮೊಗಚ್ಹಿಸಿಗೊಂಡಿರೆಕು.
ಎರಡು ದಿನ ಕಳುದು ಪ್ಲಾಸ್ಟಿಕ್  ಶೀಟಿಲ್ಲಿ ಹರಗಿ ಮನೆಒಳ ಒಣಗುಸೆಕ್ಕು.
ಇದು ಸಾದಾರಣ ಹದಿನೈದು ದಿನ ಒಣಗಿದ ಮೇಲೆ ನಯಾಹೊಡಿ ಮಾಡಿಕ್ಕಿ ಜಾಳ್ಸಿಗೊಳೆಕ್ಕು.
ಅಕೇರಿಗೆ ತುಪ್ಪ ಹಾಕಿ ಲಾಯಿಕಲ್ಲಿ ಕೈಲಿ  ತಿಕ್ಕಿ,ತಿಕ್ಕಿ ಹದ ಬರುಸೀರೆ ಶುದ್ಧಕುಂಕುಮ ರೆಡಿ.ಶುದ್ಧ ಕುಂಕುಮ
ಇದು ಸರಿಯಾದ ಕುಂಕುಮ ಕಲರಿಲ್ಲಿರುತ್ತು.ತುಂಬಾಸಮಯಕ್ಕೆ ಬಾಳಿಕೆ ಬಪ್ಪದು ಮಾತ್ರ ಅಲ್ಲ,ಮನುಷ್ಯನ ಬ್ರೂಮಧ್ಯಕ್ಕೆ ಹಾಕಿರೆ ಆರೋಗ್ಯದಾಯಕ.ಶೀತ ಆದ ಪುಟ್ಟು ಮಕ್ಕೊಗೂ ನೆತ್ತಿಗೆಹಾಕಿ ತಿಕ್ಕಿರೆ ಒಂದೇದಿನಲ್ಲಿ  ಮೂಸರೆ ಹರಿವದೂ ನಿಲ್ಲುತ್ತು.

~~~***~~~

14 thoughts on “ಶುದ್ಧ ಕುಂಕುಮ ಮಾಡುವ ಕ್ರಮ

  1. ಹರೇರಾಮ, ಬೆಂಗಳೂರಿಲ್ಲಿ ಗಿರಿನಗರಲ್ಲಿ ರಾಮಚಂದ್ರಾಪುರ ಮಠ ಕಾರ್ಯಾಲಯಲ್ಲಿ ಸಿಕ್ಕುಗು. ಅಲ್ಲಿ ಸಿಕ್ಕದ್ರೆ ಇಲ್ಲಿ ಕಾಸರಗೋಡು ,ಬದಿಯಡ್ಕ ಮಹಿಳೋದಯಲ್ಲಿ ಶುದ್ಧಕುಂಕುಮ ಸಿಕ್ಕಿಯೇ ಸಿಕ್ಕುತ್ತು. ತರ್ಸಿಗೊಳಿ

  2. ಭಾಷೆ ಮತ್ತು ವಿಧಾನ ಚೆನ್ನಾಗಿವೆ. ಬೆಂಗಳೂರಲ್ಲಿ ಎಲ್ಲಿ ಸಿಗಬಹುದು.

  3. ಉತ್ತಮ ಮಾಹಿತಿಗೆ ಧನ್ಯವಾದಂಗೊ.

  4. ಹರೇರಾಮ, ಕೋಣಮ್ಮೆಲಿ ಕುಂಕುಮ ತಯಾರಿಸೆಂಡಿದ್ದದು. ಸ್ಪಟಿಕ ಅಲ್ಲ!.

  5. ಹರೇರಾಮ, ಒಪ್ಪಕೊಟ್ಟ ಎಲ್ಲರಿಂಗೂ ಧನ್ಯವಾದಂಗೊ. ಸ್ಫಟಿಕ ಹೇಳಿರೆ ಬಿಳಿಬಣ್ಣದ ಉಂಡೆ ಆಕಾರಲ್ಲಿರುತ್ತು. ಹಳ್ಲಿಮದ್ದು ಮಾಡುವವರತ್ರೆ{ಕುಂಬಳೆ ನಾರಾಯಣ ಬೈಚ್ಹನ ಅಂಗಡಿಲಿದ್ದು}ಇರುತ್ತು. ಗೋಪಾಲ ಕೇಳಿದ್ದು ಒಳ್ಲೆದಾತು. ಕೆಲವುಜೆನ ಗೆಂಡು ಮಕ್ಕೊ ಮುಖಕ್ಷೌರ ಮಾಡಿಕ್ಕಿ ಹಚ್ಹುತ್ತವಾಡ. ಬಹುಶಃ ಕ್ರಿಮಿ ನಾಶಕ ಆಗಿಕ್ಕದು. ನಾಲ್ಕು ವರ್ಷ ಹಿಂದೆ ಕೋಣಮ್ಮೆ ರಾಮಣ್ಣನಲ್ಲಿ ಅಂಬಗಂಬಗ ವರ್ಷಕ್ಕೆರಡು ಮೂರುಸರ್ತಿ ಬೇರ್ಕಡವು ಈಶ್ವರಿಯ ನೇತೃತ್ವಲ್ಲಿ ಮಾಡಿಗೊಂಡಿದ್ದಿದ್ದೆಯೊಂ.

    1. ಸ್ಫಟಿಕ ಅಥವಾ ಸ್ಫಟಿಕಾರಕ್ಕೆ ಪರ್ಯಾಯ ಪದ Alum. ಇದರಲ್ಲಿ ಪೊಟಾಶ್ ಆಲಮ್ ಹೇಳುವದರ ಮುಖ ಕ್ಷೌರ ಆದ ನಂತ್ರ ಉಪಯೋಗ ಮಾಡ್ತ ಕ್ರಮ ಇದ್ದು. ಇದಕ್ಕೆ antiperspirant and antibacterial properties ಇಪ್ಪ ಕಾರಣ ಸಣ್ಣ ಗಾಯ ಆದರೆ ಗುಣಮಾಡುವ ಶಕ್ತಿಯೂ ಇದ್ದು.

      1. ವಿಜಯ ಚಿಕ್ಕಮ್ಮ,ಶರ್ಮಣ್ಣಂಗೆ ಧನ್ಯವಾದ.

  6. ಓಳ್ಳೆ ಮಾಹಿತಿ. ಗೋಪಲಣ್ಣಂಗೆ ಬಂದ ಸಂಶಯ ಎನಗೂ ಇದ್ದು.

  7. ಕುಂಕುಮ ಮಾಡುವ ಕ್ರಮ ವಿವರಿಸಿದ್ದಕ್ಕೆ ಧನ್ಯವಾದ.ಸ್ಫಟಿಕ ಹೇಳಿದರೆ ಎಂತದು? ಯಾವ ಸ್ಫಟಿಕ ಹೇಳಿ ವಿವರಿಸಿದರೆ ಲಾಯ್ಕ ಇತ್ತು.

  8. ಒಪ್ಪ ಮಾಹಿತಿಗೊಂದೊಪ್ಪ. ಹರೇ ರಾಮ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×