Oppanna.com

ಸೊಂಟಬೇನೆಯಾ..? ಹೆದರೆಡಿ ಆದರೆ ಜಾಗೃತೆ ಇರಿ :)

ಬರದೋರು :   ಸುವರ್ಣಿನೀ ಕೊಣಲೆ    on   18/07/2010    23 ಒಪ್ಪಂಗೊ

ಸುವರ್ಣಿನೀ ಕೊಣಲೆ

ಕೆಲಸದ ಗಡಿಬಿಡಿಲಿ ಯಾವ ದಿನ.. ವಾರ ಒಂದೂ ನೆಂಪಿಲ್ಲೆ ಎನಗೆ 🙁 ಶುಕ್ರವಾರ ಆತಷ್ಟೇ..ನಾಳೆ ಲೇಖನ ಬರದರೆ ಸಾಕು ಹೇಳಿ ಇತ್ತಿದ್ದೆ, ಮಂಡೆ ಬೆಚ್ಚ ಮಾಡಿಗೊಂಡಿಪ್ಪಗ ನೆಂಪಾತು ನಾಳೆ ಆದಿತ್ಯವಾರ!! ಇಂದು ಶನಿವಾರ 🙁 ಈ ಜ್ಞಾನೋದಯ ಅಪ್ಪಗ ಹೊತ್ತೆಷ್ಟು ಗೊಂತಿದ್ದ? ಹೊತ್ತೋಪಗ ಏಳು ಗಂಟೆ!! ಕೆಲಸ ಎಲ್ಲ ಮುಗುಶಿ ಬರವಲೆ ಕೂದಪ್ಪಗ mind blank! ಎಂತ ಬರವದು? ಕಳುದವಾರ ಹೇಳಿದ ವಿಷಯಂಗಳ ವಿವರಣೆ ಕೊಡೆಕ್ಕು ಹೇಳಿ ಗ್ರೇಶಿದ್ದಪ್ಪು, ಆದರೆ ಸಮಯ ಇಲ್ಲೆನ್ನೆ 🙁 ಅದರ್ಲಿ ವಿಷಯ ತುಂಬ ಇದ್ದು,ಹಾಂಗಾಗಿ ಅದರ ಇನ್ನೊಂದರಿ ಬರೆತ್ತೆ, ಆಗದಾ? ಹಾಂಗಾರೆ ಇಂದ್ರಾಣ ವಿಷಯ ಎಂತರ? ವಿಷಯ ಇಲ್ಲದ್ದೆ ಅಪ್ಪದು ಹೇಳಿ ಇದ್ದ? ಅದೂ ಎನ್ನ ಹತ್ತರೆ?!! ನಮ್ಮಲ್ಲಿ ಹೆಚ್ಚಿನವಕ್ಕೆ,ಹೇಳಿರೆ ಸಾಧಾರಣ 99.9% ಜನಕ್ಕೆ, ಇಪ್ಪ ತೊಂದರೆ ಇದು..ಜೀವನಲ್ಲಿ ಒಂದರಿ ಆದರೂ ಇದರ ಅನುಭವಿಸದ್ದೇ ಇಪ್ಪವ್ವು ಇರವು !!
ಎಂತರ? ’ಎಂತ ಇಲ್ಲೆಪ್ಪಾ..ರಜ್ಜ ಸೊಂಟ ಬೇನೆ’….ಹೀಂಗೇ ಅಲ್ಲದಾ ನಾವು ಹೇಳುದು? ಈ ’ರಜ್ಜ’ ಹೇಳುದರ ವ್ಯಾಪ್ತಿ ಎಷ್ಟು? ಇದು ಅವರವರ ’ಬೇನೆಯ ತಡಕ್ಕೊಂಬ ಶಕ್ತಿ’ಯ (pain threshold) ಅವಲಂಬಿಸಿರ್ತು. ಇದು ಅಷ್ಟು ಸಮಾಧಾನಲ್ಲಿ ಹೇಳುವ ವಿಷಯವಾ? ಅಥವಾ ತುಂಬಾ ಪ್ರಾಮುಖ್ಯತೆ ಕೊಡೆಕ್ಕಾ? ಸಸಾರ ಮಾಡ್ತ ವಿಷಯವೂ ಅಲ್ಲ, ಹಾಂಗೇಳಿಗೊಂಡು ಅದನ್ನೇ ಆಲೋಚನೆ ಮಾಡಿ ಕೊರಗೆಕು ಹೇಳಿಯೂ ಇಲ್ಲೆ. ಸಮಾಧಾನಲ್ಲಿ ಪರಿಹಾರ ಕಂಡುಗೊಳ್ಳೆಕು :). ಹೇಂಗೆ? ಎಲ್ಲೋರಿಂಗೂ ಅಪ್ಪ ಸಮಸ್ಯೆಯೇ ಅಲ್ಲದಾ.. ಆದರೂ ಒಂದೇ ರೀತಿಲಿ ಇರ್ತಿಲ್ಲೆ, ಬೇನೆ ಅಪ್ಪ ಜಾಗೆ, ಬೇನೆ ಅಪ್ಪ ರೀತಿ, ಸಮಯ, ಕಾರಣ ಇದೆಲ್ಲವೂ ಬೇರೆ. ಈ ಎಲ್ಲಾ ಲಕ್ಷಣಂಗಳ ಗಮನಿಸಿ ನೋಡಿರೆ ಮಾಂತ್ರ ಕಾರಣ ಎಂತ ಹೇಳಿ ಗೊಂತಕ್ಕು. ನಿಜವಾಗಿ..ಸೊಂಟಬೇನೆ ಹೇಳ್ತದು ರೋಗ ಲಕ್ಷಣ (symptom), ಇದುವೇ ಸಮಸ್ಯೆ ಅಲ್ಲ. ಇದೆಲ್ಲ ಅಪ್ಪು, ಸೊಂಟಬೇನೆ ಇಪ್ಪಗ ನವಗೆ ಇಪ್ಪ ನಿಜವಾದ ಸಮಸ್ಯೆ ಹೇಂಗೆ ಗೊಂತುಮಾಡಿಗೊಂಬದು? ಇದಕ್ಕೆ ಕಾರಣಂಗೊ ತುಂಬಾ ಹೇಳಿ ಮೊದಲೇ ಹೇಳಿದ್ದೆ, ಇದಕ್ಕೆ ಅನುಗುಣವಾಗಿ ಸೊಂಟಬೇನೆ ಇಪ್ಪವ್ವು ತಮಗೆ ಇಪ್ಪ ಸಮಸ್ಯೆ ಎಂತದು ಹೇಳಿ ತಿಳ್ಕೊಂಬಲೆ ಸುಲಭ ಅಕ್ಕು ಹೇಳಿ ಎನ್ನ ಅಭಿಪ್ರಾಯ.

  • ಮಾಂಸ ಖಂಡಂಗಳ ಸೆಳೆತ (muscular spasm)– ಸ್ನಾಯುಗೊ ಒಂದುರೀತಿ ಗಟ್ಟಿ ಆದ ಹಾಂಗೆ, ಅಥವಾ tight ಆದ ಹಾಂಗೆ ಆಪ್ಪದು ಈ ರೀತಿಯ ಬೇನೆಗಳಲ್ಲಿ ಕಾಣ್ತು.
  • ಸಯಾಟಿಕ– ಬೇನೆ ಸೊಂಟಂದ ಶುರು ಆಗಿ, ತೊಡೆಯ ಹಿಂದಂದಾಗಿ ಬೇನೆ ಕೆಳಾಂಗೆ ಬತ್ತು, ಮೊಳಪ್ಪಿಂದ ಕೆಳ ಕಾಲಿನ ಹೆರಾಣ ಮತ್ತೆ ಹಿಂದಾಣ ಹೊಡೇಂಗೆ ಬೇನೆ ಹಬ್ಬುತ್ತು. ಬಗ್ಗುಲೆ ಎಡಿಯದ್ದೆ ಅಪ್ಪದು, ಇದೆಲ್ಲಾ ಲಕ್ಶಣ ಇದ್ದರೆ. ಸಯಾಟಿಕ ಹೇಳ್ತ ಸಮಸ್ಯೆ ಇಪ್ಪ chance ಹೆಚ್ಚು.


ಸಯಾಟಿಕ್ ಹೇಳ್ತ ನರಕ್ಕೆ ತೊಂದರೆ ಆದರೆ ಈ ಸಮಸ್ಯೆ ಅಪ್ಪದು, ಈ ನರ, ಸೊಂಟದ ಭಾಗಂದ ಹೆರಟು, ಪೃಷ್ಠ, ತೊಡೆಯ ಹಿಂದಾಣ cheap raybans sunglasses ಹೊಡೆಯ ಮೂಲಕ ಬಂದು ಮೊಳಪ್ಪಿನ ಹತ್ತರೆ, ಕಾಲಿನ ಹೆರಾಣ ಮತ್ತೆ                ಹಿಂದಾಣ ಹೊಡೇಂದ ಕೆಳಾಂಗೆ ಹೋವ್ತು.

  • IVDP-intervertebral disc prolapse/disc compression: ಆರಂಭಿಕ ಹಂತಲ್ಲಿ ಇದ್ದರೆ ಹೆಚ್ಚಾಗಿ ಮುಂದೆ ಬಗ್ಗುವಗ ಬೇನೆ ಬತ್ತು, ಸಮಸ್ಯೆ ಹೆಚ್ಚಾದ ಹಾಂಗೇ ಕಾಲಿಲ್ಲಿ ಜೋಮು ಹಿಡಿವದು, ಕಾಲಿಲ್ಲಿ ಶಕ್ತಿ ಇಲ್ಲದ್ದ ಹಾಂಗೆ ಅಪ್ಪದು, ಕಾರ್/ಬೈಕ್ ಬಿಡುವಗ ಬೇನೆ ಅಪ್ಪದು, ಬಗ್ಗಿ ಕೆಲಸ ಮಾಡ್ಲೆ ಎಡಿಯದ್ದೇ ಇಪ್ಪದು, ಇದರ್ಲಿ ಕೂಡ ಕೆಲಾವು ಸರ್ತಿ ಸಯಾಟಿಕದ ಹಾಂಗಿಪ್ಪ ಬೇನೆದೆ  ಬತ್ತು. ಅಕೇರಿಯಾಣ ಹಂತಲ್ಲಿ ಇಡೀ ಶರೀರವ ರಜ್ಜವೂ ಹನ್ಸುಲೆ ಎಡಿಯದ್ದ ಹಾಂಗಿದ್ದ ಬೇನೆ ಇರ್ತು.


IVDP ಹೇಳಿರೆ ಎಂತರ..? ನಮ್ಮ ಬೆನ್ನಿನ ಎಲಿಬುಗೊ ಇದ್ದಲ್ಲದ (vertebrae) ಅದರ ಎಡಕ್ಕಿಲ್ಲಿ ಒಂದು ಪೇಸ್ಟಿನ ರೀತಿಯ ವಸ್ತು(disc)  ಇರ್ತು, ಅದು ತನ್ನ ಜಾಗೆಂದ ಹೆರ ಬಂದರೆ disc prolapse              ಹೇಳ್ತವು, ಇದು ಅಲ್ಲಿಂದ ಹೆರಡುವ ನರಂಗಳ ಒತ್ತುತ್ತು, ನರಂಗಳ ಕೆಲಸಕ್ಕೂ ತೊಂದರೆ ಉಂಟಾವ್ತು.

  • ಹೊಟ್ಟೆಲಿ ಗಡ್ಡೆ/ಸೋಂಕು/ಕ್ಯಾನ್ಸರ್, ಕಿಡ್ನಿಯ/ಪಿತ್ತಕೋಶದ ಕಲ್ಲು ಇದ್ದರೆ ಸೊಂಟಬೇನೆ ಇರ್ತು.
  • ಮೂತ್ರನಾಳದ  ಸೋಂಕು(urinary tract infection) ಇದ್ದರೆ ಸೊಂಟಬೇನೆ ಇರ್ತು.

ಹೆಮ್ಮಕ್ಕಳಲ್ಲಿ:

  • ಮುಟ್ಟಿನ ಸೊಂಟಬೇನೆ ತುಂಬಾ ಸಾಮಾನ್ಯವಾಗಿ ಅಪ್ಪಂತದ್ದು, ಇದು ಮುಟ್ಟಿನ ಸಮಯಲ್ಲಿದೇ ಇರ್ತು ಅಥವಾ 4-6 ದಿನ ಮೊದಲುದೇ ಇರ್ತು ಕೆಲವು ಜನಕ್ಕೆ.
  • ಗರ್ಭಕೋಶದ ತೊಂದರೆ ಇದ್ದರೆ-ಗರ್ಭಕೋಶದ ಯಾವುದೇ ಭಾಗದ ಸೋಂಕು(infection), ಗರ್ಭಕೊಶದ ಗಡ್ಡೆ(fibroid or tumour), ಅಂಡಾಶಯದ ತೊಂದರೆ, ಮುಟ್ಟಿನ ಸಮಸ್ಯೆ ಇತ್ಯಾದಿ ಇದ್ದರೆ ಸೊಂಟಬೇನೆ ಇರ್ತು.
  • ಮೂತ್ರನಾಳದ /ಯೋನಿದ್ವಾರದ  ಸೊಂಕು (vaginal/ urinary tract infection) ಇದ್ದರೆ ಸೊಂಟಬೇನೆ ಇರ್ತು-ಈ ಸಮಸ್ಯೆ ಇಪ್ಪವಕ್ಕೆ ಉರಿ, ತುರಿಕೆ ಕೂಡ ಇರ್ತು ಸಾಮಾನ್ಯವಾಗಿ, ಒಟ್ಟಿಂಗೆ ಬಿಳಿ ಸ್ರಾವವುದೇ ಇರ್ತು.
  • ಬಸರಿಯಕ್ಕೊಗುದೇ ಸೊಂಟಬೇನೆ ಇರ್ತು ಸಾಮಾನ್ಯವಾಗಿ.

ಇದೆಲ್ಲಾ ಸಾಮಾನ್ಯವಾದ ಕೆಲವು ಸೊಂಟಬೇನೆಯ ಕಾರಣಂಗೊ. ಸೊಂಟಬೇನೆ ಆತು ಹೇಳಿ ಆದರೆ, ಒಂದು ದಿನದೊಳ, ಹೆಚ್ಚಿರೆ ಎರಡು ದಿನಲ್ಲಿ ಕಮ್ಮಿ ಆಗದ್ದರೆ ಮರೆಯದ್ದೆ  ಡಾಕ್ಟ್ರ ಹತ್ತರೆ ಹೋಗಿ.
ನಿಂಗೊಗೆ  ಯಾವುದೇ ಸಂಶಯ ಇದ್ದರೆ ಕೇಳಿ. ಉತ್ತರ ಹೇಳ್ಲೆ ಆನು ಯಾವಾಗ್ಲೂ ಬೈಲಿಲ್ಲಿಯೇ ಇದ್ದೆ !!!

23 thoughts on “ಸೊಂಟಬೇನೆಯಾ..? ಹೆದರೆಡಿ ಆದರೆ ಜಾಗೃತೆ ಇರಿ :)

  1. ಸೊಂಟ ಸೋಬಾನೆ ಆತು ಹೇಳುತ್ತವಲ್ಲದಾ.
    ಸೊಂಟಬೇನೆಗೆ ಪ್ರಕ್ರತಿ ಚಿಕಿತ್ಸೆಲಿ ಒಳ್ಳೆ ಆಸನಂಗಳ ಹೇಳಿ ಕೊಡುತ್ತವು. ಕೆಲವು ಆಸನಂಗಳ ಮಾಡುಲೆ ಆಗ ಹೇಳಿಯೂ ಹೇಳುತ್ತವು.
    ಎಂತ ಆದರೂ..
    ತಲೆ ಇದ್ದಮೇಲೆ ತಲೆಬೇನೆ ಇಕ್ಕು
    ಸೊಂಟ ಇಪ್ಪೊದರಿಂದ ಸೊಂಟ ಬೇನೆಯೂ ಬಕ್ಕು!

    1. ಸೊಂಟ ಇಪ್ಪೋರಿಂಗೆ ಸೊಂಟ ಬೇನೆ ಜೀವನಲ್ಲಿ ಒಂದರಿಯಾರೂ ಬಕ್ಕು !!
      ಅಪ್ಪು, ಯೋಗಲ್ಲಿ ತುಂಬಾ ಆಸನಂಗೊ ಇದ್ದು, ಸೊಂಟ ಬೇನೆಲಿ ಉಪಯೋಗಕ್ಕೆ ಬಪ್ಪಾಂಗಿದ್ದದು 🙂 ಅದರ ಬಗ್ಗೆ ಇನ್ನೊಂದು ಲೇಖನಲ್ಲಿ ವಿವರಣೆ ಕೊಡ್ತೆ 🙂

      1. { ಅದರ ಬಗ್ಗೆ ಇನ್ನೊಂದು ಲೇಖನಲ್ಲಿ ವಿವರಣೆ ಕೊಡ್ತೆ }
        – ಅಂಬೆರ್ಪು ಎಂತೂ ಇಲ್ಲೆ ಅಕ್ಕೋ..
        ಯಬಾ, ಆ ಯೋಗಾಸನ ಮಾಡಿರೆ ಸೊಂಟಬೇನೆ ಆವುತ್ತು. 🙁 😉

        1. ನೆಗೆ ಬಾವಂಗೆ ಸೊಂಟಬೇನೆ ಹೇಳಿ ಅಜ್ಜಿಮನೆಲಿ ಎಲ್ಲರಿಂಗು ಬೇಜಾರು ಆಯಿದು..

  2. ಲೇಖನದೊಟ್ಟಿಂಗೆ ಸೊಂಟ ಬೇನೆಗೆ ನಿಸರ್ಗ ಚಿಕಿತ್ಸೆ ಎಂತ ಎಲ್ಲಾ ಮಾಡ್ಲಕ್ಕು ಹೇಳ್ತಿತ್ತರೆ ಎಂಗೊಗೆ ಇನ್ನೂ ಹೆಚ್ಚು ಮಾಹಿತಿ ಸಿಕ್ಕುತಿತ್ತು.. ಇದರ ಬಗ್ಗೆ ನಿಂಗಳ ಮುಂದಾಣ ಲೇಖನಲ್ಲಿ ಬಕ್ಕು ಹೇಳಿ ನಿರೀಕ್ಷೆ ಮಾಡ್ತಾ ಇದ್ದೆ…ಖಂಡಿತಾ ತಿಳಿಶಿ ಕೊಡಿ…

  3. ಲೇಖನ ಒಳ್ಳೆ ಮಾಹಿತಿ ಕೊಟ್ಟತ್ತು.
    (ಸೊಂಟ ಬೇನೆ ಇಪ್ಪವು ಕರ್ನಾಟಕ ಸಾರಿಗೆ ಕೆಂಪು ಬಸ್ಸಿಲಿ ಹೋದರೆ ಗುಣ ಅವುತು. ಇಲ್ಲದ್ದವು ಹೋದರೆ ಸುರು ಅವುತು.)

  4. ಯಬೋ ಈ ನೆಗೆಗಾರ° ಅಂತು ಸುಮ್ಮನೆ ಕೂದಿಕ್ಕ°…
    ಡಾಗುಟ್ರಕ್ಕ ಲಾಯ್ಕ ಬರದ್ದೆ ಆತೋ ಏ°..

  5. ಸೊಂಟಬೇನೆ ಆದರೆ ಸಾಮಾನ್ಯವಾಗಿ ಆನು ಮನಿಕ್ಕೊಂಬದು.
    ಮನುಗಿದ ಮತ್ತೆ ಹೆದರಿಕೆ ಇಲ್ಲೆ ಇದಾ.. 😉 🙁

  6. lekhanango laykakke batha iddu. yogasana mathe pranayama da bagge besic agi rajja vivarsidare thumba janakke help akku. baretheyayabbo?

      1. hmmm, 🙂 ಗೊಂತಾತು . ಧನ್ಯವಾದಂಗೊ 🙂 ಎಲ್ಲವೂ ಓದ್ತಾ ಇದ್ದೆಯ? ಪುಟಾಣಿಯ photo ಹಾಕಿತ್ತಿದ್ದೆ, ಶೀರ್ಷಿಕೆ ಬರವೆಲೆ. ನೊಡಿದೆಯ?

  7. ಬೆನ್ನು ಬೇನೆ ಬಗ್ಗೆ ಸಚಿತ್ರವಾಗಿ, ಯಾವ ಯಾವ ಕಾರಣಂದ ಬತ್ತು ಹೇಳಿ ವಿವರಿಸಿದ್ದು ಲಾಯಿಕ್ ಆಯಿದು. ಆಫೀಸಿಲ್ಲಿ ಕೂದೇ ಕೆಲಸ ಮಾಡುವವಕ್ಕೆ , lower back pain ಸರ್ವೇ ಸಾಮಾನ್ಯ. ಇದಕ್ಕೆ ಅಪ್ಪ ಹಾಂಗಿಪ್ಪ ಕೆಲವು ಯೋಗಂಗಳ ಬಗ್ಗೆ ಚಿತ್ರ ಸಹಿತ ವಿವರ ಕೊಟ್ಟರೆ ಅನುಕೂಲ. ಯೋಗವ ಗುರುಗಳ ಮೂಲಕ ಕಲಿಯೆಕ್ಕು ಹೇಳ್ತವು. ಆದರೂ ಕೆಲವು exercise ಗೊ ಇದಕ್ಕೆ ಸಹಕಾರಿ ಅಕ್ಕು ಹೇಳಿ ಎನ್ನ ಅಭಿಪ್ರಾಯ.
    ನಾವು ಕೂಬ ಕ್ರಮ (posture) , ನಮ್ಮ ಜೀವನ ಶೈಲಿಯೂ ಕಾರಣ ಹೇಳ್ತರೂ, ಆಯುರ್ವೇದ ಶಾಸ್ತ್ರಲ್ಲಿ ಇದಕ್ಕೆ “ವಾತ ದೋಷ” ಮುಖ್ಯ ಹೇಳ್ತವು. ಹಾಂಗಾಗಿ ಆಹಾರ ಕ್ರಮ (ಅಕ್ಕಾದ್ದು, ಆಗದ್ದು) ಯಾವ ರೀತಿ ಇದ್ದರೆ ಒಳ್ಳೆದು ತಿಳಿಸಿರೆ ಅನುಕೂಲ

    1. ಯೋಗ,exercise ಎಲ್ಲವನ್ನೂ ಸರಿಯಾದ ಮಾರ್ಗದರ್ಶನಲ್ಲಿ ಕಲಿಯಕ್ಕು. ಆನು ಇಲ್ಲಿ ಹೇಳ್ಲಕ್ಕು, ಆದರೆ…ಅದರ ಅಭ್ಯಾಸ ಮಾಡುವಗ ಆರಾರು ಗೊಂತಿಪ್ಪೋರ ಮಾರ್ಗದರ್ಶನ ತೆಕ್ಕೊಳ್ಳೆಕು.
      ಇನ್ನು ಕೂಬ posture ಸರಿ ಇರೆಕಾದ್ದು ಅಗತ್ಯ. ನಮ್ಮ ಬೆನ್ನಿನ ಎಲುಬುಗೊ ಇರೆಕಾದ ಒಂದು pattern ಇದ್ದು, ಅದರ್ಲಿ ರಜ್ಜ ಬದಲಾವಣೆ ಆದರೂ ಸಮಸ್ಯೆಗೊ ಬತ್ತು, ಹಾಂಗಾಗಿ ತುಂಬಾ ಮೆಸ್ತಂಗೆ ಇಪ್ಪ ಹಾಸಿಗೆ ಒಳ್ಳೆದಲ್ಲ !! ಇದರಿಂದಲೂ ಬೆನ್ನು/ಸೊಂಟ ಬೇನೆ ಬತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×