Oppanna.com

ತಮಕ ಶ್ವಾಸ(ಅಸ್ತಮ)…ಆಯುರ್ವೇದ ದೃಷ್ಟಿಲಿ…

ಬರದೋರು :   ಡಾಗುಟ್ರಕ್ಕ°    on   08/11/2010    15 ಒಪ್ಪಂಗೊ

ಡಾಗುಟ್ರಕ್ಕ°

ದೀಪಾವಳಿ ಹಬ್ಬದ ಗೌಜಿಲಿ ಬೈಲಿಲಿ ಸುದ್ದಿ ಹೇಳುಲೂ ಆಯಿದಿಲ್ಲೆ..
ಸುವರ್ಣಿನೀ ಅಕ್ಕ ಅಸ್ತಮದ ಬಗ್ಗೆ ಬರದ್ದರ ಓದಿದೆ
, ಅಷ್ಟಪ್ಪಗ ಅಸ್ತಮಕ್ಕೆ ಆಯುರ್ವೇದಲ್ಲಿ ಎಂತೆಲ್ಲಾ ಚಿಕಿತ್ಸೆ ಇದ್ದು ಹೇಳಿ ಬರವ ಕಂಡತ್ತು..

ಅಸ್ತಮ ತೊಂದರೆಗೆ ಕಾರಣ, ಅದರ ಲಕ್ಷಣ ನಿಂಗೊಗೆಲ್ಲಾ ಗೊಂತಿದ್ದು..
ಅದರೊಟ್ಟಿಂಗೆ ಯೋಗ
, ಪ್ರಕೃತಿ ಚಿಕಿತ್ಸೆಯ ಬಗ್ಗೆಯೂ ಅಕ್ಕ ವಿವರ್ಸಿದ್ದವು

ಆಯುರ್ವೇದಲ್ಲಿ “ತಮಕ ಶ್ವಾಸ ಹೇಳ್ತ ತೊಂದರೆಲಿ ವಿವರ್ಸಿದ ಲಕ್ಷಣಂಗಳೇ ಅಸ್ತಮಲ್ಲಿ ಕಾಣ್ತು..
ಇದಕ್ಕೆ ಆಚಾರ್ಯರು ವಿವರ್ಸುವ ಚಿಕಿತ್ಸೆ ಹೀಂಗಿದ್ದು

.ನಿದಾನ ಪರಿವರ್ಜನ
ಹೇಳಿದರೆ ಅಸ್ತಮದ ಕಾರಣಂಗಳಂದ ದೂರ ಇರೆಕ್ಕು.
ಪ್ರತಿ ಒಬ್ಬಂಗೂ ಬೇರೆ ಬೇರೆ ಕಾರಣಂಗಳಂದ ಈ ತೊಂದರೆ ಸುರು ಅಕ್ಕು
.ಆ ಕಾರಣಂಗಳ ಕಂಡು ಹಿಡುದು ಅದರಂದ ದೂರ ಇರೆಕ್ಕು..

ಆಯುರ್ವೇದಲ್ಲಿ ಚಿಕಿತ್ಸೆಗೆ ೨ ಮಾರ್ಗ ಇದ್ದು..
೨.ಶೋಧನ ಮತ್ತೆ ಶಮನ..
ತೊಂದರೆಯ ತೀವ್ರತೆಗೆ ಅನುಗುಣವಾಗಿ ಯಾವ ಚಿಕಿತ್ಸಾ ಮಾರ್ಗಲ್ಲಿ ಹೋಯೆಕ್ಕು ಹೇಳ್ತದು ವೈದ್ಯರಿಂಗೆ ಬಿಟ್ಟದು.

ಶೋಧನ ಚಿಕಿತ್ಸೆ ಹೇಳಿದರೆ ಶರೀರ ಶೋಧನ..
ತಮಕ ಶ್ವಾಸ ವಾತ, ಕಫ ದೋಷ ಹೆಚ್ಚಪ್ಪದರಂದಾಗಿ ಬಪ್ಪದು.
ಇದರ ಬುಡ ಸಮೇತ ತೆಗದರೆ ಮತ್ತೆ ತೊಂದರೆ ಕಮ್ಮಿ ಆವುತ್ತು (ತೋತಲ್ಲಿ ಹುಲ್ಲು ಬುಡ ಸಮೇತ ಪೊರ್ಪಿದ ಹಾಂಗೆ).
ಈ ತೊಂದರೆಯ ಬುಡ ಸಮೇತ ತೆಗೆಯಕ್ಕಾರೆ ಶೋಧನವೇ ಮಾರ್ಗ
.. ಇದರಲ್ಲಿ ವಮನ ಕರ್ಮ (ವಾಂತಿ ಚಿಕಿತ್ಸೆ), ವಿರೇಚನ ಕರ್ಮ(ಭೇದಿ ಚಿಕಿತ್ಸೆ) ಮುಖ್ಯವಾದ್ದು..
ಇದರಂದ ಶ್ವಾಸಕೋಶಲ್ಲಿ ತುಂಬಿದ ಕಫವ ಹೆರ ಹಾಕುಲೆ ಆವುತ್ತು..
ಶರೀರ ಶುದ್ಧ ಆದ ಮತ್ತೆ ಶಮನ ಔಷಧಿಗಳ ತೆಕ್ಕೊಂಡರೆ ತಮಕ ಶ್ವಾಸ ತೊಂದರೆಯ ಕಮ್ಮಿ ಮಾಡ್ಲೆ ಎಡಿತ್ತು..

ಶಮನ ಚಿಕಿತ್ಸೆ ಹೇಳಿದರೆ ಮದ್ದು ಕೊಟ್ಟು ಚಿಕಿತ್ಸೆ ಮಾಡುದು.
ಸಣ್ಣ ಮಕ್ಕೊ, ಹೆಚ್ಚು ಪ್ರಾಯದೋರು,ಗರ್ಭಿಣಿಯರು,ಶರೀರ ದುರ್ಬಲ ಇಪ್ಪೋರು ಹೀಂಗೇ ಕೆಲವರು ಶೋಧನ ಚಿಕಿತ್ಸೆಗೆ ಅರ್ಹರಾಗಿರ್ತವಿಲ್ಲೆ ಅಷ್ಟಪ್ಪಗ ಅವಕ್ಕೆ ಶೋಧನ ಮಾಡದ್ದೇ ಶಮನ ಚಿಕಿತ್ಸೆ ಮಾಡೆಕ್ಕಾವುತ್ತು.
ಶಮನ ಚಿಕಿತ್ಸೆಲಿ ಪ್ರತಿಯೊಬ್ಬನ ದೇಹದ ಪ್ರಕೃತಿ ಮೇಲೆ ಮದ್ದುಗಳ ನಿಗಂಟು ಮಾಡುದು. ಹಾಂಗಾಗಿ ಒಬ್ಬಂಗೆ ಒಂದು ಮದ್ದಿಲಿ ತೊಂದರೆ ಕಮ್ಮಿ ಆದರೆ ಇನ್ನೊಬ್ಬಂಗೂ ಅದರಲ್ಲೇ ಕಮ್ಮಿ ಅಕ್ಕು ಹೇಳುಲೆ ಆವುತ್ತಿಲ್ಲೆ,ಅವಂಗೆ ಬೇರೆ ಮದ್ದು ಬೇಕಕ್ಕು..

ಕೆಲವೆಲ್ಲಾ ಸುಲಾಭಲ್ಲಿ ಮನೆಲೇ ಮಾಡ್ಲೆ ಎಡಿವಾಂಗಿಪ್ಪ ಮದ್ದುಗಳ ಹೇಳ್ತೆ:

ಶ್ವಾಸ ತೊಂದರೆ ಇಪ್ಪವು ಲವಣ(ಉಪ್ಪು) ಮಿಶ್ರ ಮಾಡಿದ ಎಣ್ಣೆಂದ ಕೊರಳಿಂದ ಸುರು ಮಾಡಿ ಪೂರ್ತಿ ಎದೆ ಭಾಗಕ್ಕೆ ಅಭ್ಯಂಗ ಮಾಡೆಕ್ಕು..
ಅಭ್ಯಂಗ ಮಾಡುವಗ ಮೇಲಂದ ಕೆಳಂಗೆ ಉದ್ದೆಕ್ಕು
,ಕೆಳಂದ ಮೇಲಂಗೆ ಉದ್ದುಲಾಗ..

ಮಾಡುವ ವಿಧಾನ:

  • ಈ ಎಣ್ಣೆಯ ರಜ ಬೆಶಿ ಮಾಡಿ ಎದೆಗೆ ಕಿಟ್ಟಿ ಮೇಲಂದ ಕೆಳಂಗೆ ಒಂದು ೧೫ನಿಮಿಷ ಉದ್ದೆಕ್ಕು, ಹೆಚ್ಚು ಒತ್ತಡ ಬೇಡ ಉದ್ದುವಗ..
    ಇದಕ್ಕೆ ಸ್ನೇಹನ ಹೇಳ್ತವು..

    ಲವಣ ತೈಲ ಅಭ್ಯಂಗ

  • ಮತ್ತೆ ಒಂದು ಪಾತ್ರಲ್ಲಿ ನೀರು ಕಾಸಿ, ಅದರಲ್ಲಿ ಒಂದು ವಸ್ತ್ರ ಅದ್ದಿ ಅದರ ಹಿಂಡಿ ತೆಗದು, ಆ ಬೆಶಿ ವಸ್ತ್ರಂದ ಶಾಖ ಕೊಡೆಕ್ಕು.. (ಶಾಖ ಕೊಡ್ಲೆ ಬೇರೆ ವ್ಯವಸ್ಥೆ ಇದ್ದರೆ ಉಪಯೋಗ ಮಾಡಿಗೊಂಬಲಕ್ಕು).
    ಇದಕ್ಕೆ ಸ್ವೇದನ ಹೇಳುದು..
    ಇದರಂದ ಗಂಟಲು
    , ಎದೆ ಭಾಗಲ್ಲಿ ಹಿಡ್ಕೊಂಡಿಪ್ಪ ಕಫ ನೀರಾಗಿ ಹೆರ ಬತ್ತು.. ಉಸಿರಾಟ ಸರಾಗವಾಗಿ ಅಪ್ಪಲೂ ಸಹಾಯ ಆವುತ್ತು..
  • ಮೂಗು ಕಟ್ಟಿಗೊಂಡಿದ್ದುಗೊಂಡು ಅದರೊಟ್ಟಿಂಗೆ ಶ್ವಾಸ ತೊಂದರೆ ಇದ್ದರೆ ಒಣಗಿದ ಅರಿಶಿನದ ತುಂಡು ತೆಕ್ಕೊಂಡು ಅದರ ಒಂದು ಬದಿಯ ಕಿಚ್ಚಿಂಗೆ ಹಿಡಿಯೆಕ್ಕು, ಅದರಂದ ಹೊಗೆ ಬಪ್ಪಲೆ ಸುರು ಅಪ್ಪಗ ಕಿಚ್ಚು ನಂದುಸಿ ಆ ಹೊಗೆಯ ಮೂಗಿನ ಮೂಲಕ ಎಳಕ್ಕೊಳ್ಳೆಕ್ಕು
    (ಒಂದು ಮೂಗು ಮುಚ್ಚಿ ಮತ್ತೊಂದು ಮೂಗಿಂದ ಹೊಗೆ ಎಳಕ್ಕೊಳ್ಳೆಕ್ಕು).
    ಇದುವೇ ಆಯುರ್ವೇದ ಧೂಮಪಾನ..
    😉
  • ಗೆಣಮೆಣಸಿನ ಹೊಡಿಗೆ ರಜಾ ಜೇನು ಹಾಕಿ ಕಲಸಿ ತಿಂದರೂ ಆವುತ್ತು.
  • ತುಳಸಿ ರಸಕ್ಕೆ ಜೇನು ಹಾಕಿ ಮಕ್ಕೊಗೂ ಕೊಡ್ಲಕ್ಕು.
  • ಶುಂಠಿಯ ಲಾಯಿಕ್ಕಲಿ ಗುದ್ದಿ ರಸ ತೆಗದು ಆ ರಸಕ್ಕೆ ರಜಾ ಜೇನು ಕಲಸಿ ನಕ್ಕಿದರೆ ಕಫ ಕರಗುತ್ತು..
  • ಆಡುಸೋಗೆ(ವಾಸಾ-Adhatoda vasica) ರಸಕ್ಕೆ ಜೇನು ಸೇರ್ಸಿ ದಿನಾ ತೆಕ್ಕೊಂಡರೆ ತೊಂದರೆ ಕಮ್ಮಿ ಆವುತ್ತು..
    ಈ ಎಲ್ಲಾ ಮದ್ದುಗೊ ಕಫವ ಕರಗುಸುತ್ತು..

    ಹರಿದ್ರಾ ಧೂಮಪಾನ

  • ಎಂತ ಸಿಕ್ಕದ್ದರೆ ಬರೇ ಜೇನು ನಕ್ಕಿದರೂ ಸಾಕಾವುತ್ತು ಕಫ ಕರಗುಲೆ..
  • ಒಣ ಶುಂಠಿ, ಗೆಣಮೆಣಸು, ಹಿಪ್ಪಲಿ, ಜೀರಿಗೆ, ಏಲಕ್ಕಿ ಇವುಗಳ ಸಮ ಪ್ರಮಾಣಲ್ಲಿ ಹೊಡಿ ಮಾಡಿ,ಆ ಮಿಶ್ರಣದ ಸಮಪ್ರಮಾಣಲ್ಲಿ ಕಲ್ಲುಸಕ್ಕರೆ ಹೊಡಿ ಸೇರ್ಸಿ ತೆಕ್ಕೊಳ್ಳೆಕ್ಕು..
  • ಆಯುರ್ವೇದ ಮದ್ದಿನ ಅಂಗಡಿಲಿ “ಸಿತೋಫಲಾದಿ ಚೂರ್ಣ ” ಹೇಳಿ ಸಿಕ್ಕುತ್ತು.
    ಈ ಚೂರ್ಣಕ್ಕೆ ರಜಾ ಜೇನು ಸೇರ್ಸಿ ದಿನನಿತ್ಯ ತೆಕ್ಕೊಂಡರೆ ತೊಂದರೆ ಕಮ್ಮಿ ಆವುತ್ತು..
    ಇದರ ಪ್ರಮಾಣ ವೈದ್ಯರತ್ರೆ ಕೇಳಿ ತೆಕ್ಕೊಂಡರೆ ಒಳ್ಳೆದು..ಇದು ಸೆಮ್ಮ
    , ಸ್ವರ ಹೋಗಿಪ್ಪಗಳೂ ಒಳ್ಳೆದಾವುತ್ತು..
    ಪ್ರತೀ ಮನೆಲೂ ಇರೆಕ್ಕಾದ ಮದ್ದು..

ಆಯುರ್ವೇದಲ್ಲಿ ತಮಕ ಶ್ವಾಸಕ್ಕೆ ಸುಮಾರು ಮದ್ದು ಇದ್ದು,ಅದರಂದ ಗುಣ ಮಾಡ್ಲೆ ಎಡಿತ್ತು, ಆದರೆ ಆ ಮದ್ದುಗಳ ವೈದ್ಯರ ಸಲಹೆಯ ನಂತರವೇ ತೆಕ್ಕೊಳ್ಳೆಕ್ಕಪ್ಪ ಕಾರಣ ಇಲ್ಲಿ ಹೇಳುಲೆ ಕಷ್ಟ ಆವುತ್ತು..

ಈ ತೊಂದರೆ ಎಲ್ಲರಲ್ಲಿಯೂ ಕಾಣ್ತಿಲ್ಲೆ..
ಆರ ದೇಹಲ್ಲಿ ವ್ಯಾಧಿಕ್ಷಮತ್ವ(
immunity) ಕಮ್ಮಿ ಇರ್ತೋ ಅವಕ್ಕೆ ಮಾತ್ರ ಈ ತೊಂದರೆ ತುಂಬಾ ಉಪದ್ರ ಕೊಡುದು..
ಇದೊಂದೇ ಅಲ್ಲ
, ಎಲ್ಲಾ ರೋಗಂಗಳೂ ವ್ಯಾಧಿಕ್ಷಮತ್ವ ಕಮ್ಮಿ ಇದ್ದರೆ ಬೇಗ ಬಪ್ಪದು.. ಹಾಂಗಾಗಿ ಪ್ರತಿಯೊಬ್ಬನೂ ತನ್ನ ವ್ಯಾಧಿಕ್ಷಮತ್ವತೆಯ ಹೆಚ್ಚು ಮಾಡಿಗೊಳ್ಳೆಕ್ಕು.
ಇದಕ್ಕೆ ಯೋಗಾಸನ
,ಪ್ರಾಣಾಯಾಮ ತುಂಬಾ ಮುಖ್ಯ.. ಶ್ವಾಸ ತೊಂದರೆ ಇಪ್ಪೋರಿಂಗೆ ಯೋಗಾಸನ,ಪ್ರಾಣಾಯಾಮ ಶ್ವಾಸಕೋಶಕ್ಕೆ ಒಳ್ಳೆ ವ್ಯಾಯಾಮ ಕೊಡ್ತು ಹಾಂಗೇ ಶ್ವಾಸನಾಳ ತೆಗಕ್ಕೊಂಡು ಇಪ್ಪಲೂ ಸಹಾಯ ಮಾಡ್ತು..

ಇನ್ನು ವ್ಯಾಧಿಕ್ಷಮತ್ವ ಹೆಚ್ಚು ಮಾಡ್ಲೆ ಮದ್ದಿಲ್ಲೆಯಾ?ಇದ್ದು..

  • ದಿನಾಗುಳೂ ಇರುಳು ಮನುಗುಲಪ್ಪಗ ಬೆಶಿ ಹಾಲಿಂಗೆ ೩-೪ ಚಿಟಿಕೆ ಅರಿಶಿನ ಹಾಕಿ ಕುಡಿಯೆಕ್ಕು.
  • ಹರಿದ್ರಾ ಖಂಡ ” ಹೇಳಿ ಒಂದು ಮದ್ದು ಸಿಕ್ಕುತ್ತು ಆಯುರ್ವೇದ ಮದ್ದಿನ ಅಂಗಡಿಲಿ.
    ಹರಿದ್ರಾ ಹೇಳಿದರೆ ಅರಿಶಿನ. ಈ ಮದ್ದಿಲಿ ಅರಿಶಿನದೊಟ್ಟಿಂಗೆ ಇನ್ನೂ ಕೆಲವು ಔಷಧಿಗೊ ಇದ್ದು. ಧೂಳು ಅಥವಾ ಇತರೇ ವಸ್ತುಗಳಂದ ಕೂಡ್ಲೆ ತೊಂದರೆ(
    allergy) ಅಪ್ಪೋರು ಈ ಹೊಡಿಯ(೧ ಚಮಚ) ದಿನಾ ಹಾಲಿಂಗೆ ಹಾಕಿ ಕುಡಿವದರಂದ ತೊಂದರೆ ತುಂಬಾ ಕಮ್ಮಿ ಆವುತ್ತು..
  • ಚ್ಯವನಪ್ರಾಶ ” ವ್ಯಾಧಿಕ್ಷಮತ್ವ ಹೆಚ್ಚು ಮಾಡ್ಲೆ ತುಂಬಾ ಸಹಾಯ ಮಾಡ್ತು.
    ಇದರ ತಿಂದ ಮತ್ತೆ ಬೆಶಿ ಬೆಶಿ ಹಾಲು ಕುಡಿಯೆಕ್ಕು(ಹಾಲು ಇದಕ್ಕೆ ಅನುಪಾನ). ಹಾಂಗೆ ಮಾಡಿದರೆ ಅದರ ಪ್ರಭಾವ ಇನ್ನೂ ಜಾಸ್ತಿ ಆವುತ್ತು..
    (ವಿ.ಸೂ: ಸರಿಯಾದ ತಯಾರಕರಿಂದ ಮಾತ್ರಾ ಚ್ಯವನಪ್ರಾಶ ತೆಕ್ಕೊಳ್ಳಿ
    , ಜಾಹೀರಾತಿಲಿ ಬಪ್ಪದೆಲ್ಲಾ ನಿಜ ಅಲ್ಲ)..
    ಇದು ರೋಗಮುಕ್ತವಾಗಿ ಹೆಚ್ಚು ಕಾಲ ಬಾಳೆಕ್ಕು ಹೇಳಿ ಇಪ್ಪೋರಿಂಗೂ ಸಹಾಯ ಮಾಡ್ತು..
  • ಪೇಯ-ಒಂದು ಗ್ಲಾಸು ನೀರಿಂಗೆ ರಜಾ ಶುಂಠಿ, ಕೆಲವು ತುಳಸಿ ಎಲೆ, ಒಂದೆರಡು ಏಲಕ್ಕಿ, ರಜಾ ಲವಂಗ, ರಜಾ ಗೆಣಮೆಣಸಿನ ಹೊಡಿ, ಚೂರು ಜೀರಿಗೆ-ಕೊತ್ತಂಬರಿ ಹಾಕಿ ಲಾಯಿಕ್ಕಲಿ ಕೊದಿಶಿ.
    ಮತ್ತೆ ಅದರ ಶೋಧಿಸಿ ಅದಕ್ಕೆ ರಜಾ ಜೇನು ಮತ್ತೆ ಕೆಲಾವು ಬಿಂದು ನಿಂಬೆ ರಸ ಹಾಕಿದರೆ ಒಳ್ಳೆ ಆರೋಗ್ಯಕರ ಪೇಯ ಆವುತ್ತು..
    ಆವಗಾವಗ ಕಾಪಿ-ಚಾ ಕುಡಿವ ಬದಲು ಇದರ ಬೆಶಿ ಬೆಶಿ ಕುಡುದರೆ ಆರೋಗ್ಯಕ್ಕೆ ತುಂಬಾ ಒಳ್ಳೆದು.

ನಾವು ಕೆಲಸಂಗಳ ಮಧ್ಯೆ ನಮ್ಮ ಆರೋಗ್ಯದ ಬಗ್ಗೆ ಗಮನ ಕೊಡುದೇ ಬಿಟ್ಟಿದು.
ತೊಂದರೆ ಬಂದ ಮತ್ತೆ ವೈದ್ಯರತ್ರೆ ಓಡ್ಲೆ ಸುರು ಮಾಡ್ತು..
ಅದರ ಬದಲು ಕೆಲಸದೊಟ್ಟಿಂಗೆ ಕೆಲಸ ಮಾಡ್ಲೆ ಬೇಕಾದ ಆರೋಗ್ಯವನ್ನೂ ಕಾಪಾಡುವ, ಇದಕ್ಕೆ ಸರಿಯಾದ ಜೀವನಕ್ರಮ ಅಗತ್ಯ..

ಆವಗ ತೊಂದರೆಗಳಂದ ದೂರ ಇಪ್ಪಲಕ್ಕು..
ಆರೋಗ್ಯವೇ ಭಾಗ್ಯ ಹೇಳಿ ಹೇಳ್ತದು ಸುಳ್ಳಲ್ಲ..
ಆರೋಗ್ಯವಂತರಾಗಿದ್ದರೆ ಎಂತ ಬೇಕಾರು ಸಾಧುಸುಲಕ್ಕು.. 🙂

किं भाग्यं? दॆहवतामारॊग्यं,कः फली? कृषिकृत्।
कस्य न पापं
? जपतः,कः पूर्णॊ? यः प्रजावान् स्यात्॥ (शंकराचार्य)

ಕಿಂ ಭಾಗ್ಯಂ? ದೇಹವತಾಮಾರೋಗ್ಯಂ,ಕಃ ಫಲೀ? ಕೃಷಿಕೃತ್ |
ಕಸ್ಯ
ಪಾಪಂ? ಜಪತಃ,ಕಃ ಪೂರ್ಣೋ? ಯಃ ಪ್ರಜಾವಾನ್ ಸ್ಯಾತ್ || (ಶಂಕರಾಚಾರ್ಯ)

ಶಂಕರಾಚಾರ್ಯರು ಕೆಲವು ಪ್ರಶ್ನೆಗೊಕ್ಕೆ ಹೀಗೆ ಉತ್ತರ ಕೊಡ್ತವು:

  • ಮನುಷ್ಯರಿಂಗೆ ಭಾಗ್ಯ ಹೇಳಿದರೆ ಯಾವುದು? = ಆರೋಗ್ಯ!
  • ಧನ ಧಾನ್ಯ ಇಪ್ಪೋರು ಆರು? = ಕೃಷಿಕ!
  • ಆರಿಂಗೆಲ್ಲಾ ಪಾಪ ತಟ್ಟುತ್ತಿಲ್ಲೆ? =ಜಪ ಮಾಡುವೋರಿಂಗೆ!
  • ಪರಿಪೂರ್ಣ ಆರು? =ಮಕ್ಕೊ ಇಪ್ಪೋರು!

~

ಡಾ.ಸೌಮ್ಯ ಪ್ರಶಾಂತ
sowprash@gmail.com

15 thoughts on “ತಮಕ ಶ್ವಾಸ(ಅಸ್ತಮ)…ಆಯುರ್ವೇದ ದೃಷ್ಟಿಲಿ…

  1. ಸರಿಯಾದ ಮಾಹಿತಿ ಕೊಟ್ಟ ಲೇಖನ.
    ಮತ್ತೆಂತ ನಿಲ್ಲಿಸಿದ್ದು?ಇನ್ನೂ ಬರೆತ್ತೀ ಅಲ್ಲದೊ?

  2. ಡಾಗುಟ್ರಕ್ಕ ವಿವರುಸೆಕ್ಕಾದ ರೀತಿಲೇ ಈ ಶುದ್ದಿಯ ವಿವರುಸಿದ್ದಿ.
    ತಮಕಶ್ವಾಸ, ಲವಣ ತೈಲ ಅಭ್ಯಂಗ, ಹರಿದ್ರಾ ಧೂಮಪಾನ ಎಲ್ಲ ಕೇಳಿ ಅಪ್ಪಗ ನಮ್ಮ ಅಜ್ಜಂದ್ರ ಬಗ್ಗೆ ಹೆಮ್ಮೆ ಅನುಸಿತ್ತು ಅಕ್ಕಾ…

    ಒಳ್ಳೆಕೆಲಸ ಮಾಡ್ತಾ ಇದ್ದಿ, ಬೈಲಿಲಿ ಶುದ್ದಿ ಬತ್ತಾ ಇರಳಿ.

  3. ಸೌಮ್ಯ, ಸುವರ್ಣಿನಿ ಅಕ್ಕ° ಬರದ ಶುದ್ದಿ ಅಸ್ತಮಕ್ಕೆ ಪೂರಕ ಅಪ್ಪ ಹಾಂಗೆ ಆಯುರ್ವೇದ ದೃಷ್ಟಿಲಿ ಶುದ್ದಿ ಬರದ್ದದು ಲಾಯ್ಕಾಯಿದು.
    ಹೀಂಗೇ ಒಟ್ಟೊಟ್ಟಿಂಗೆ ಬಂದರೆ ಒಂದು ಗುಣ ಇದ್ದು. ಎಂಗೊಗೆ ಯಾವುದು ಬೇಕೋ ಅದರ ತೆಕ್ಕೊಂಬಲೆ ಸುಲಾಬ. 😉 ಅಲ್ಲದ್ದೆ ಎಲ್ಲ ಸುಲಾಬ ಅಪ್ಪ ಹಾಂಗೆ ಇಪ್ಪದೆ ಇರಲಿ ಹೇಳ್ತ ಅಭಿಪ್ರಾಯ!!! ಮದ್ದಿಲಿಯೂ ಹಾಂಗೆ!!
    ವ್ಯಾಧಿಕ್ಷಮತ್ವ ಹೆಚ್ಚುಸುಲೆ ಹೇಳಿದ್ದು ಒಳ್ಳೇದಾತು. ಮಕ್ಕಳಲ್ಲಿ ವ್ಯಾಧಿಕ್ಷಮತ್ವ ಹೆಚ್ಚುಸುದು ಹೇಂಗೆ ಹೇಳಿದೇ ತಿಳಿಶಿದರೆ ಒಳ್ಳೇದು.
    ಆರೋಗ್ಯದ ಕಡೆ ಗಮನ ಕೊಡಿ ಹೇಳಿ ತಿಳಿಶಿದ್ದೆ. ಅದು ಯಾವಾಗಲೂ ನೆಂಪಪ್ಪದು ಹಾಳಾದಪ್ಪಗಲೇ!!!
    ಶರೀರ ಆದರೂ ವಾಹನ ಆದರೂ!!! 🙁
    ಶ್ರೀ ಶಂಕರಾಚಾರ್ಯರ ಶ್ಲೋಕಲ್ಲಿ ಕೊನೆ ಮಾಡಿದ್ದು ಅರ್ಥಪೂರ್ಣ ಆಯಿದು. ಧನ್ಯವಾದ.

    1. ಧನ್ಯವಾದ ಶ್ರೀ ಅಕ್ಕ.. ಆಯುರ್ವೇದ,ಪ್ರಕೃತಿ ಚಿಕಿತ್ಸೆ,ಯೋಗ ಈ ಮೂರೂ ಒಂದೇ ಅಬ್ಬೆಯ ಮಕ್ಕೊ..ಹಾಂಗಾಗಿ ಈ ಎಲ್ಲವನ್ನೂ ಒಟ್ಟೊಟ್ಟಿಂಗೆ ಮಾಡಿದರೆ ಯಾವ ತೊಂದರೆಯೂ ಇಲ್ಲೆ..ಒಡಹುಟ್ಟಿದೋರ ಮಧ್ಯಲ್ಲಿ ಜಗಳ ಎಂತರ?? 🙂

  4. ಆಯುರ್ವೇದಲ್ಲಿ ಅಸ್ತಮಾಕ್ಕೆ ಚಿಕಿತ್ಸೆ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟದಕ್ಕೆ ಧನ್ಯವಾದಂಗೊ.
    ಬೈಲಿಲ್ಲಿ ಇಬ್ರು ಡಾಕುಟ್ರುಗೊ ಸೇರಿ ಆರೋಗ್ಯದ ಬಗ್ಗೆ ಒಳ್ಳೆ ಲೇಖನಂಗೊ ಕೊಡ್ತ್ತಾ ಇಪ್ಪದು ತುಂಬಾ ಕೊಶಿ ಕೊಡುವ ವಿಚಾರ.
    ಹೀಂಗೇ ಮುಂದುವರಿಯಲಿ.

  5. ಡಾಕ್ಟ್ರಕ್ಕಾ,

    ವ್ಯಾಧಿಕ್ಷಮತ್ವ–ಒ೦ದು ಹೊಸಾ ಶಬ್ದ ಗೊ೦ತಾತು. ‘ವ್ಯಾಧಿಯ ಸಹಿಸುವ ಸಾಮರ್ಥ್ಯ ಇಪ್ಪ೦ಥಾದ್ದು’ ಹೇಳಿ ಅರ್ಥ ಕೊಡುವ ಶಬ್ದ.

    ‘ರೋಗ ಪ್ರತಿರೋಧ ಶಕ್ತಿ’ ಹೇಳುವದರಿ೦ದ ರಜಾ ಬೇರೆ ಅರ್ಥ ಇದ್ದೊ ಹೇಳಿ ಈ ಶಬ್ದಕ್ಕೆ. ರೋಗ ‘ತಡವ’ ಸಾಮರ್ಥ್ಯ೦ದ ರೋಗವ ‘ಸಹಿಸುವ’ ಶಕ್ತಿ ಬೇರೆ ಅಲ್ಲದ?
    ಕೆಲವು ರೋಗ೦ಗ ಬ೦ದರೆ ಕೆಲವು ದಿನ ಇದ್ದೇ ಹೋಪ೦ಥಾದ್ದು. ಅದರ ಟೈಮ್ ಆಗದ್ದೆ ಹೋಗ ಹೇಳ್ತವು. ಅಷ್ಟರವರೆಗೆ ದೇಹದ ಸುಸ್ಥಿತಿ ಕಾಪಾಡುವ ಸಾಮರ್ಥ್ಯ ನಮ್ಮಲ್ಲಿರೆಕಿದ. ಅದುವೇ ‘ವ್ಯಾಧಿಕ್ಷಮತ್ವ’ವೊ?

    ಸಾಮಾನ್ಯ ಜ್ವರದ೦ತಹ ಸಣ್ಣ ಸಣ್ಣ ಸಮಸ್ಯೆ ಬ೦ದ ಕೂಡ್ಲೆ ದೇಹ ಕ೦ಗಾಲು ಅಪ್ಪ ಹಾ೦ಗೆ ಇಪ್ಪಲಾಗ ನಮ್ಮ ದೈಹಿಕ ಸ್ಥಿತಿ. ಹಾ೦ಗಾಗಿ ‘ವ್ಯಾಧಿಕ್ಷಮತ್ವ’ ಹೆಚ್ಚು ಮಾಡ್ಲೆ ಇಪ್ಪ ಉಪಾಯ ತಿಳುಶಿ ಕೊಟ್ಟದು ತು೦ಬಾ ಒಳ್ಳೆದು.

    ಶ೦ಕರಾಚಾರ್ಯರ ಪ್ರಶ್ನೋತ್ತರ ರತ್ನಮಾಲಿಕೆಯ ಶ್ಲೋಕ ಭಾರೀ ಲಾಯಕಿದ್ದು!!

    1. ಮಹೇಶಣ್ಣಾ,
      “ವ್ಯಾಧಿಕ್ಷಮತ್ವ” ಹೇಳ್ತದರ ಶಬ್ದಾರ್ಥ ತೆಕ್ಕೊಂಡರೆ ನಿಂಗೊ ಹೇಳಿದ ಅರ್ಥ ಸರಿ..
      ರೋಗ ಬಾರದ್ದಾಂಗೆ ನವಗೆ ತಡವಲೆ ಎಡಿಯ,ಆದರೆ ಆ ವೈರಾಣುಗೊ ಬಪ್ಪ ಮೊದಲೇ ನಮ್ಮ ರಕ್ತಲ್ಲಿಪ್ಪ ಸೈನಿಕರ ಶಕ್ತಿ ಹೆಚ್ಚು ಮಾಡಿ ಮಡಿಕ್ಕೊಂಡರೆ ಅವಕ್ಕೆ ಆ ರೋಗಾಣುಗಳೊಟ್ಟಿಂಗೆ ಹೋರಾಡ್ಲೆ ಎಡಿತ್ತು ಅದೂ ದೇಹಕ್ಕೆ ತುಂಬಾ ಶ್ರಮ ಆಗದ್ದ ಹಾಂಗೆ… ಅದೇ ನಮ್ಮ ಸೈನಿಕರೇ ನಿಶ್ಶಕ್ತಿ ಇಪ್ಪೋರು ಆದರೆ ರೋಗಾಣುಗೊ ಅವರ ಕೊಂದು ದೇಹ ಇಡೀ ಎಂಗಳದ್ದೇ ಹೇಳುವ ಹಾಂಗೆ ಲಾಗ ಹಾಕುತ್ತವು.. ಹಾಂಗಾಗಿ ನಮ್ಮ ಸೈನಿಕರ ಶಕ್ತಿ ಹೆಚ್ಚು ಮಾಡಿಗೊಂಡಷ್ಟು ನವಗೇ ಒಳ್ಳೆದು..
      ರೋಗ ಸಹಿಸುವ ಶಕ್ತಿ ಬಲವಾಗಿದ್ದರೆ ಅದೇ ರೋಗ ತಡವ ಶಕ್ತಿ ಆವುತ್ತು.. 🙂
      ಧನ್ಯವಾದ ನಿಂಗಳ ಒಪ್ಪಕ್ಕೆ… 🙂

  6. ಈ ಎರಡು ಅಕ್ಕ೦ದ್ರು ಬೈಲಿನೋರಿ೦ಗೆ ಮಾಡುತ್ತ ಉಪಕಾರ ತು೦ಬಾ ದೊಡ್ಡದು.ಇಷ್ಟು ಚೆ೦ದಕೆ ವಿವರ್ಸಿದ್ದದಕ್ಕೆ ದಾಕುಟ್ರಕ್ಕ೦ಗೆ ಒ೦ದು ಸ್ಪೆಷಲ್ ಧನ್ಯವಾದ.ಒಪ್ಪ೦ಗಳೊಟ್ಟಿ೦ಗೆ

  7. ಆಯುರ್ವೇದ ,ಪ್ರಕೃತಿ ಚಿಕಿತ್ಸೆಯ ದ್ವಂದ್ವಲ್ಲಿ ಅಸ್ತಮಾ ಓಡಿ ಹೋಯೆಕ್ಕದ.ಸುವರ್ಣಿನಿ ಅಕ್ಕ ಹೇಳಿದ ಯೋಗಚಿಕಿತ್ಸೆ ,ಸೌಮ್ಯಕ್ಕ ಹೇಳಿದ ಮನೆಮದ್ದುಗಳ ಮಾಹಿತಿ ತುಂಬಾ ಲಾಯಿಕಿದ್ದು.ರೋಗಂಗಳ ಎದುರಿಸುವ (ವ್ಯಾಧಿಕ್ಷಮತ್ವ ಹೆಚ್ಚಿಸುವ ) ಮಾಹಿತಿಯೂ ಉಪಯೋಗಿ.ಇಬ್ರು ಅಕ್ಕಂದ್ರಿಂಗೂ ಧನ್ಯವಾದ.

  8. ಲೇಖನ ಲಾಯ್ಕಾಯ್ದು 🙂
    ಆನು ಮೊನ್ನೆ ಇದರ ಅಸ್ತಮದ ಬಗ್ಗೆ ಬರವಗ ಎನ್ನ ಕೆಲವು ಆಯುರ್ವೇದದ ಸ್ನೇಹಿತ ಹತ್ತರೆ ಕೆಲವು ಮಾಹಿತಿ ತೆಕ್ಕೊಂಡೆ. ನಿಂಗೊ ಬರದ್ದು ಒಳ್ಳೆದಾತು. ಹೆಚ್ಚಿನ ಮಾಹಿತಿ ಎನಗೂ ಸಿಕ್ಕಿತ್ತು :).
    ನಿಂಗೊ ವಮನ ಕರ್ಮ ಹೇಳಿ ಬರದ್ದಿ ಅಲ್ಲದಾ, ಅದನ್ನೇ ವಮನ ಧೌತಿ ಅಥವಾ ಜಲ ಧೌತಿ ಹೇಳಿ ಯೋಗಲ್ಲಿ ಹೇಳುದು, ಅಲ್ಲದಾ…
    immunity ಯ ಬಗ್ಗೆ ಬರದ್ದು ಲಾಯ್ಕಾಯ್ದು, ಯಾವುದೇ ಸಮಸ್ಯೆಗೆ ಮುಖ್ಯ ಕಾರಣ ನಮ್ಮ ಒಳಾಣ ಶಕ್ತಿ ಕಮ್ಮಿ ಅಪ್ಪದು. ಗಡಿ ಕಾವ ಸೇನೆ ದುರ್ಬಲ ಆಗಿದ್ದರೆ ಮಾಂತ್ರ ಶತ್ರುಗೊ ಒಳ ಬಪ್ಪಲೆ ಸಾಧ್ಯ ಅಲ್ಲದಾ. ಇದನ್ನೇ “ಪ್ರಾಣ ಶಕ್ತಿ ಅಥವಾ ಛಿ” ಹೇಳಿ ಹೇಳುದು ಅಲ್ಲದಾ… ಇದರ ಸರಿ ಮಾಡೆಕ್ಕಾರೆ ಜೀವನ ಶೈಲಿಯ ಸರಿ ಮಾಡೆಕಾದ್ದು ಅಗತ್ಯವೇ….
    ಒಟ್ಟಿಲ್ಲಿ ಲೇಖನ ಲಾಯ್ಕಕ್ಕೆ ಮೂಡಿಬೈಂದು 🙂 ಧನ್ಯವಾದಂಗೊ

    1. (ಪ್ರಾಣ ಶಕ್ತಿ ಅಥವಾ ಛಿ)
      ಪ್ರಾಣ ಶಕ್ತಿ – ಕಿ energy ಹೇಳಿ ಎಲ್ಲ ಸುಮಾರು ಹೆಸರುಗೋ ಇದ್ದು ಅದಕ್ಕೆ.. ಈ ಕೆಲವು technique ಗೋ REIKIಲೂ ಬತ್ತು…

    2. ವಮನ ಕರ್ಮ ಹೇಳಿದರೆ ಜಲ ಧೌತಿಯ ಹಾಂಗಲ್ಲ.. ವಮನ ಕರ್ಮಲ್ಲಿ ಮೊದಲು ಜಠರಾಗ್ನಿಯ ವೃದ್ಧಿ ಮಾಡಿ,ಔಷಧ ಗುಣ ಇಪ್ಪ ತುಪ್ಪ ಕುಡಿವಲೆ ಕೊಡ್ತು..ತುಪ್ಪದ ಪ್ರಮಾಣ ವೈದ್ಯರು ನಿಗಂಟು ಮಾಡುದು(ರೋಗಿಗೆ ಅನುಗುಣ ಅಪ್ಪ ಹಾಂಗೆ)..ದಿನಾಗುಳೂ ಇದರ ಹೆಚ್ಚು ಮಾಡ್ತಾ ಹೋಪದು ರೋಗಿಯ ಮೈಲಿ ಸ್ನಿಗ್ಧ ಲಕ್ಷಣ ಬಪ್ಪಲ್ಲಿವರೆಗೆ..ಮತ್ತೆ ಒಂದು ದಿನ ಬಿಟ್ಟು ಮತ್ತಾಣ ದಿನ ರೋಗಿಗೆ ಒಳ್ಳೆ ಅಭ್ಯಂಗ,ಸ್ವೇದನ ಕೊಟ್ಟು ವಾಂತಿ ಬಪ್ಪಲೆ ಔಷಧಿ ಕೊಡುದು..ಇದರೊಒಟ್ಟಿಂಗೆ ಕಂಠಪೂರ್ತಿ ಹಾಲು/ಕಬ್ಬಿನಹಾಲು ಕುಡಿಶಿ ವಾಂತಿ ಮಾಡ್ಸುದು..ಹಿಂಗೆ ಮಾಡಿ ಅಪ್ಪಗ ಕಫ,ಪಿತ್ತ ದೋಷಂಗೊ ಹೆರ ಬತ್ತು… ಮತ್ತೆ ಹರಿದ್ರಾ ಧೂಮಪಾನ ಮಾಡ್ಸುದು..
      ಆಯುರ್ವೇದ ವಮನ ಕರ್ಮಕ್ಕೂ ಜಲ ಧೌತಿಗೂ ತುಂಬಾ ವ್ಯತ್ಯಾಸ ಇದ್ದು ಆದರೆ ಪ್ರಭಾವ ರಜಾ ಮಟ್ಟಿಂಗೆ ಒಂದೇ ಹೇಳುಲಕ್ಕು..ವಮನ ಕರ್ಮಲ್ಲಿ ಔಷಧಿ ಪ್ರಯೋಗ ಅಪ್ಪ ಕಾರಣ ಪ್ರಭಾವ ಹೆಚ್ಚು..
      ಧನ್ಯವಾದ.. 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×