ತುಳಶಿ.. ಮನೆ ಜಾಲಿಲ್ಲಿ ಬೆಳಶಿ

October 10, 2010 ರ 5:00 pmಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಮ್ಮ ಇಲ್ಲದ್ದೆ ಎನಗೆ ಹೆಚ್ಚು ಅಸಕ್ಕ ಆಗದ್ರೂ ಅಮ್ಮ ನೆಟ್ಟ ಗಿಡಂಗೊಕ್ಕೆ ಬೇಜಾರಾಯ್ದು :( ಎಂಗೊಗೆ ನಿತ್ಯವೂ ಮತಾಡ್ಸುವಷ್ಟು ಪುರ್ಸೊತ್ತಿಲ್ಲೆ. ಅಮ್ಮ ಬಪ್ಪಲೆ ಕಾಯ್ತಾ ಇದ್ದವು ಎಲ್ಲ ಗಿಡಂಗೊ. ಅಮ್ಮ ಇಲ್ಲದ್ದಿಪ್ಪಗಳೆ ಸುಮಾರು ಗಿಡಂಗಳಲ್ಲಿ ತುಂಬಾ ಹೂಗಾತು. ಅಮ್ಮಂಗೆ ತೋರ್ಸುಲೆ ಪಟ ತೆಗದು ಮಡುಗಿದ್ದೆ :). ಅಮ್ಮಂಗೆ ಕಿರಿಕಿರಿ ಮಾಡದ್ದೆ, ಅಮ್ಮನ ಹತ್ತರೆ ಬೈಶಿಗೊಳ್ಳದ್ದೆ, ಎನಗೂ ಎಂತದೋ ಒಂದು ಕಮ್ಮಿ ಆದ ಹಾಂಗೆ ಆವ್ತು 😉 , ಅದು ಹಾಂಗೇ ಅಲ್ಲದಾ… ಅದಿರಲಿ….ಅಮ್ಮನ ಕೈತೋಟದ ಬಗ್ಗೆ ಮಾತಾಡ್ತಾ ಇತ್ತಿದ್ದೆ. ವಿಷಯ ಎಂತರ ಹೇಳಿರೆ..ಅಮ್ಮನ ತೋಟಲ್ಲಿಪ್ಪ ಹೂಗಿನ ಗಿಡಂಗೊ ಕಣ್ಣಿಂಗೆ, ಮನಸ್ಸಿಂಗೆ ಖುಷಿ ಕೊಡ್ತು, ಅದರೊಟ್ಟಿಂಗೇ ಅಲ್ಲಿಪ್ಪ ಮದ್ದಿನ ಗಿಡಂಗ ಆರೋಗ್ಯಕ್ಕೆ. ಹಳ್ಳಿ ಮನೆಲಿದ್ದೋರಿಂಗೆ ಇದರ್ಲಿ ಎಂತ ವಿಶೇಷ ಕಾಣ. ಆದರೆ ಪೇಟೆಲಿ ಇಪ್ಪೋರಿಂಗೆ ಇಪ್ಪ ಜಾಗೆಲಿ ಹೂಗಿನ ಗಿಡ ಊರುಲೇ ಪುರ್ಸೊತ್ತು ಇರ್ತಿಲ್ಲೆ ಇನ್ನು ಮದ್ದಿನ ಗಿಡ ಎಲ್ಲಿಂದ!! ಎಲ್ಲೋರ ಮನೆಲಿಯೂ ಇಪ್ಪ..ಇರೆಕ್ಕಾದ ಒಂದು ಮುಖ್ಯ ಗಿಡದ ಬಗ್ಗೆ ಬರೆತ್ತೆ. ಅದುವೇ ತುಳಸಿ”.

ಧಾರ್ಮಿಕವಾಗಿ ತುಳಸಿಯ ಪ್ರಾಮುಖ್ಯತೆ ಎಂತರ ಹೇಳ್ತದು ಎನಗೆ ಹೆಚ್ಚಿಗೆ ಗೊಂತಿಲ್ಲೆ, ಬೈಲಿಲ್ಲಿ ಇಪ್ಪ ತಿಳುದೋರು ವಿವರ್ಸೆಕು ಹೇಳೀ ಕೇಳಿಗೊಳ್ತೆ. ಆನು ಬರವದು ಆರೋಗ್ಯಕ್ಕೆ ಸಂಬಂಧಪಟ್ಟ ಹಾಂಗೆ ಅದರ ಪಾತ್ರ ಹೇಂಗೆ, ಎಂತ ಹೇಳಿ.

ಇಂಗ್ಲೀಷಿಲ್ಲಿ ಇದಕ್ಕೆ Indian Basil ಹೇಳ್ತವು. ಇದರ ಸಸ್ಯಶಾಸ್ತ್ರೀಯ ಹೆಸರು Oscimum sanctum. ಇದು Lamiaceae/Labiatae ಹೇಳುವ ಕುಟುಂಬಕ್ಕೆ ಸೇರಿದ ಗಿಡ. ಭಾರತದ ಎಲ್ಲಾ ಭಾಗಂಗಳಲ್ಲಿಯೂ ಬೆಳೆವ ಸೆಸಿ. ಸೆಸಿಯ ಬಗ್ಗೆ ಹೆಚ್ಚಿನ ವಿವರ ಕೊಡೆಕ್ಕಾದ ಅಗತ್ಯ ಇಲ್ಲೆ, ತುಳಸಿ ನೋಡದ್ದವ್ವು ಆರೂ ಇಲ್ಲೆ!

ಮದ್ದಿಂಗೆ ಉಪಯೋಗ್ಸುವ  ಸೆಸಿಯ ಭಾಗಂಗೊ : ಇಡೀ ಸೆಸಿ. ಮುಖ್ಯವಾಗಿ ಎಲೆ, ಕಾಂಡ ಮತ್ತೆ ಬಿತ್ತು.

ಇದರ ಉಪಯೋಗಂಗೊ:

 • ಅಸ್ತಮಾ , ಸೆಮ್ಮ, ಕಫ, ಶೀತ, ಜ್ವರ – ಈ ಸಂದರ್ಭಲ್ಲಿ ತುಳಸಿಯ ಎಸರಿನ ಜೇನಿನೊಟ್ಟಿಂಗೆ ತೆಕ್ಕೊಂಬದರಿಂದ ಕಫ, ಸೆಮ್ಮ, ಉಸಿರು ಕಟ್ಟಿದ ಹಾಂಗೆ ಅಪ್ಪದು ನಿಲ್ಲುತ್ತು, ಜ್ವರ ಕಮ್ಮಿ ಆವ್ತು. ತುಳಸಿಲಿ antiviral [ವೈರಸ್ ನ ವಿರುದ್ಧ ಹೋರಾಡುದು], expectorant [ಕಫ ಹೆರ ಹಾಕುದು]  ಗುಣಂಗೊ ಇದ್ದು.
 • ಮಲೇರಿಯ – ಕೊದುಶಿ ಇಳುಗಿದ ನೀರಿಂಗೆ ತುಳಸಿ ಎಲೆಗಳ ಹಾಕಿ ಮಡುಗಿ ರಜ್ಜ ಹೊತ್ತಿನ ಮತ್ತೆ ಗೆಣಮೆಣಸಿನ ಹೊಡಿಯ ಅದರೊಟ್ಟಿಂಗೆ ಸೇರ್ಸಿ ಹೊಟ್ಟೆಗೆ ತೆಕ್ಕೊಂಬದು.
 • ಕಣ್ಣಿನ ಸೋಂಕು – ಎಲೆಯ ಎಸರಿನ ಕಣ್ಣಿಂಗೆ eye drops ನ ಹಾಂಗೆ ಹಾಕುದರಿಂದ ಸೋಂಕು ಕಮ್ಮಿ ಆವ್ತು.
 • ವೈರಲ್ ಹೆಪಾಟೈಟಿಸ್ – ಈ ಸಮಸ್ಯೆಲಿಯುದೇ ತುಳಸಿ ಎಲೆಯ ಸಾರಂದ ತಯಾರ್ಸಿದ ಮದ್ದು ತುಂಬಾ ಪ್ರಯೋಜನ ಆವ್ತು. 14 ದಿನಂಗಳ ಮದ್ದಿಲ್ಲಿ ಪೂರ ಗುಣ ಆವ್ತು ಹೇಳಿ ಅಧ್ಯಯನಂಗೊ ಹೇಳ್ತು.
 • ಹುಣ್ಣು/ಗಾಯ/ಕುರು – ಎಲೆಗಳ ನೀರಿನೊಟ್ಟಿಂಗೆ ಅರದು ಕಿಟ್ಟಿರೆ ಸೋಂಕು ಅಪ್ಪದರ ತಡೆತ್ತು. ಬೇಗ ಗುಣ ಅಪ್ಪಲೆ ಸಹಾಯ ಮಾಡ್ತು.
 • ಚರ್ಮ ರೋಗ/ಅಲರ್ಜಿ – ಎಲೆಗಳ ಅರದು ಕಿಟ್ಟುದು ಮತ್ತೆ ಎಸರಿನ ಕುಡಿವದರಿಂದ ಚರ್ಮವ್ಯಾಧಿಗೊ ಗುಣ ಆವ್ತು.
 • ಫ಼ಂಗಲ್ ಸೋಂಕು[fungal infections] – ಇದರ ಎಲೆಂದ ತಯಾರ್ಸಿದ ಎಣ್ಣೆ ಫ಼ಂಗಸ್ಸಿಂದ ಅಪ್ಪ ತೊಂದರೆಗಳ ಗುಣ ಮಾಡ್ತು.

ತುಳಸಿಯ ಉಪಯೋಗಂಗಳ ತಿಳ್ಕೊಂಡಾತು.  ಇದರಿಂದ ಏನಾರು ತೊಂದರೆ ಇದ್ದೋ ಹೇಳಿ ತಿಳ್ಕೊಳ್ಳೆಡದಾ? ಅಪ್ಪು ತುಳಸಿಯ ಕೆಲವು ಗುಣಂಗೊ ಹಾನಿ ಉಂಟು ಮಾಡುವ ಹಾಂಗಿಪ್ಪದು.

 • Antifertility property , ಹೇಳಿರೆ ಸಂತಾನಹೀನತೆಯ ಉಂಟುಮಾಡುವ ಗುಣ.
 • Abortifacient property,  ಹೇಳಿರೆ ಗರ್ಭಪಾತ ಪ್ರಚೋದಕ.

ಹಾಂಗಾಗಿ ಬಸರಿಯಕ್ಕೊ ತುಳಸಿಯ ಸೇವನೆ ಮಾಡುದು ಒಳ್ಳೆದಲ್ಲ. ಹಾಂಗೆಯೇ ಮದ್ದು ತೆಕ್ಕೊಂಬಗ ಎಷ್ಟು ಪ್ರಮಾಣಲ್ಲಿ ತೆಕ್ಕೊಳ್ಳೆಕು ಹೇಳುದು ಮುಖ್ಯ.

ಪ್ರಮಾಣ:

 • ಕಷಾಯ – 50-100ml
 • ಎಸರು – 10-20ml
 • ಬಿತ್ತಿನ ಹೊಡಿ – 3-6gms

ಕೆಲವು ಸಂಶೋಧನೆಗೊ:

ಇತ್ತೀಚೆಗೆ ತುಳಸಿಯ ಬಗ್ಗೆ ನಡಶಿದ ಕೆಲವು ಸಂಶೋಧನೆಗೊ ಹೇಳ್ತು [ಸಂಶೋಧನೆಗಳ ಬಗ್ಗೆ ಓದುಲೆ ಸಂಕೋಲೆಗಳ ಒತ್ತಿ, ಇದೆಲ್ಲವೂ ವೈದ್ಯಕೀಯ ಭಾಷೆಲಿ ಇದ್ದು.]

 • ತುಳಸಿಲಿ ಕ್ಯಾನ್ಸರ್ ನ ಗುಣ ಮಾಡ್ತ ಶಕ್ತಿ ಮತ್ತೆ ವಿಕಿರಣಂಗಳ ಪ್ರಭಾವವ ಕಮ್ಮಿ ಮಾಡ್ತ ಶಕ್ತಿ ಇದ್ದು.
 • ಡಯಾಬಿಟೀಸ್ ಲ್ಲಿ ರಕ್ತಲ್ಲಿಪ್ಪ ಸಕ್ಕರೆಯ ಅಂಶವ ಕಮ್ಮಿ ಮಾಡುವ ಗುಣ.
 • ಕೊಲೆಸ್ಟ್ರೋಲ್ ನ ಕಮ್ಮಿ ಮಾಡುವ ಅಂಶದೇ ಇದ್ದು.
 • ಬಾಕ್ಟೀರಿಯಾ ಇತ್ಯಾದಿ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿ.

http://www.ncbi.nlm.nih.gov/pubmed/1473788

http://www.ncbi.nlm.nih.gov/pubmed/17016661

http://www.ncbi.nlm.nih.gov/pubmed/11673069

http://www.ncbi.nlm.nih.gov/pubmed/10641157

http://www.ncbi.nlm.nih.gov/pubmed/7601491

http://www.ncbi.nlm.nih.gov/pubmed/16202376

http://www.ncbi.nlm.nih.gov/pubmed/15532130

http://www.ncbi.nlm.nih.gov/pubmed/12026506

[ಪ್ರತೀ ಸರ್ತಿಯಾಣ ಹಾಂಗೆ ಈ ಸರ್ತಿಯೂ ಹೇಳುದು ಎಂತರ ಹೇಳಿರೆ , ವೈದ್ಯರ ಸಲಹೆ ಇಲ್ಲದ್ದೆ ಯಾವುದೇ ಮದ್ದಿನ ಪ್ರಯೋಗ ಮಾಡೆಡಿ. ಆನು ಇಲ್ಲಿ ಬರವದು ಜೆನಂಗೊಕ್ಕೆ ಎಲ್ಲಾ ವಿಷಯದ ಮಾಹಿತಿ ಇರೆಕಾದ್ದು ಅಗತ್ಯ ಹೇಳ್ತ ಕಾರಣಕ್ಕೆ]

ಇದಿಷ್ಟು ತುಳಸಿಯ ಬಗ್ಗೆ ಎನಗೆ ಗೊಂತಿಪ್ಪ ಮಾಹಿತಿ. ಹೆಚ್ಚಿನದ್ದು ನಿಂಗೊಗೆ ಗೊಂತಿದ್ದರೆ ತಿಳುಶಿ.

-ನಿಂಗಳ, ಸುವರ್ಣಿನೀ ಕೊಣಲೆ.

ತುಳಶಿ.. ಮನೆ ಜಾಲಿಲ್ಲಿ ಬೆಳಶಿ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಗಣೇಶ ಮಾವ°

  ಸುವರ್ಣಿನಿ ಅಕ್ಕಾ,
  ನೈಸರ್ಗಿಕ ಜೀವನ ಶೈಲಿಯ ತಿಳಿಶುವ ನಿಂಗಳ ಶುದ್ಧಿ ಓದಿ ಕೊಶಿ ಆತು.
  ಪ್ರಕೃತಿ ನವಗೆ(ಮನುಷ್ಯ/ಪ್ರಾಣಿ) ಬೇಕಾದ ಆಹಾರ, ಮದ್ದು,ಹೀಂಗೆ ಅನೇಕ ರೀತಿಯ ಸವಲತ್ತುಗಳ ಕೊಟ್ಟಿದು. ಅದರ ತಿಳುದು ನೈಸರ್ಗಿಕ ಜೀವನ ನಡೆಶುದು ಉತ್ತಮ. ಇದರಿ೦ದ ಪರಿಸರಕ್ಕೆ, ನವಗೆ, ಇತರೆ ಜೀವ ಸ೦ಕುಲಕ್ಕೆ ಒಳಿತು ಅಪ್ಪದು ಖಂಡಿತಾ!!ಉತ್ತಮ ಲೇಖನಕ್ಕೆ ಧನ್ಯವಾದಂಗ…
  ಅಡ್ಕತ್ತಿಮಾರುಮಾವ° ಹೇಳಿದ ಹಾಂಗೆ ತುಳಶಿಯ ಬೇರೆ ಬೇರೆ ಜಾತಿಯ ಎಂಗೊಗೆ ತಿಳುಶಿ ಕೊಡುವಿರೋ?

  [Reply]

  VN:F [1.9.22_1171]
  Rating: 0 (from 0 votes)
 2. ಅಡ್ಕತ್ತಿಮಾರುಮಾವ°

  ಇನ್ನೊಂದು ಕರ್ಪ್ಪೂರ ತುಳಶಿ ಹೇಳುವಂತದ್ದು ಕೂಡಾ ಇದ್ದು ಎನ್ನಲ್ಲಿ ಮೊದಲು ಇತ್ತು ಈಗ ರಜ್ಜ ಸಮಯಂದ ಅದರ ಸೆಸಿ ಕಾಣುತ್ತಿಲ್ಲೆ..ಬೈಲಿಲಿ ಆರಹತ್ತರೆ ಆದರೂ ಇದ್ದ ಯೇನ???

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಆನು ಕರ್ಪೂರ ತುಳಸಿಯ ನೋಡಿದ್ದಿಲ್ಲೆ :(
  ಕರ್ಪೂರ ತುಳಸಿ ಹೇಳುದು African blue basil ನ್ನೇ ಆಗಿರೆಕ್ಕು. ರಜ್ಜ ನೀಲಿ ಬಣ್ಣ ಇರ್ತು. ಇದು O.kilimandscharicum ಮತ್ತೆ O.basilicum ಇದೆರಡರ ಹೈಬ್ರೀಡ್ ಸೆಸಿ.

  [Reply]

  ನೆಗೆಗಾರ°

  ನೆಗೆಗಾರ° Reply:

  { O.kilimandscharicum ಮತ್ತೆ O.basilicum ಇದೆರಡರ ಹೈಬ್ರೀಡ್ ಸೆಸಿ }
  O. haango?! 😉

  [Reply]

  VA:F [1.9.22_1171]
  Rating: 0 (from 0 votes)
 3. ಅಡ್ಕತ್ತಿಮಾರುಮಾವ°

  ಕರ್ಪೂರ ತುಳಸಿ ನಮ್ಮ ಈ ತುಳಸಿ ಯ ಹಾಂಗೆ ಇಪ್ಪ ಸೆಸಿ ಪರಿಮ್ಮಳ ಮಾಂತ್ರ ಇನ್ನೂ ಜಾಸ್ತ್ತಿ ಇದ್ದು ಈ ತುಳಸಿರಸಕ್ಕೆ ಕರ್ಪೂರ ಹಾಕಿದ ಹಾಂಗೆ ಪರಿಮ್ಮಳ ಇದ್ದು.ಆನು ಅದರ ಸೆಸಿಯ collect ಮಾಡಿಮತ್ತೆ ತಿಳಿಸುತ್ತೆ.

  [Reply]

  VN:F [1.9.22_1171]
  Rating: 0 (from 0 votes)
 4. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಸುವರ್ಣಿನಿ
  “ತುಳಸಿಲಿ ಕ್ಯಾನ್ಸರ್ ನ ಗುಣ ಮಾಡ್ತ ಶಕ್ತಿ ಮತ್ತೆ ವಿಕಿರಣಂಗಳ ಪ್ರಭಾವವ ಕಮ್ಮಿ ಮಾಡ್ತ ಶಕ್ತಿ ಇದ್ದು.” ಹಾಂಗೆ ಬರದ್ದಿ.
  ತೊಳಶಿ ರೇಡಿಯೋ ಪ್ರೊಟೆಕ್ಟರಾಗಿ ಕೆಲಸ ಮಾಡುವ ವಿಷಯಲ್ಲಿ ಆನೊಂದು ಸಂಶೋಧನ ಲೇಖನ ಓದಿದ್ದೆ. ನಿಂಗೊ ಬರದ್ದದು ಒಳ್ಳೆದಾಯಿದು.
  ಗುರುಗಳ ಒಪ್ಪ ನೋಡಿದ ನಂತರವೇ ಈ ಲೇಖನವ ಗಮನಿಸಿದ್ದು. ಗುರುಗಳಿಂಗೆ ಪ್ರಣಾಮಂಗೊ.

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ ಕೊಣಲೆ Reply:

  ಧನ್ಯವಾದ :)

  [Reply]

  VN:F [1.9.22_1171]
  Rating: 0 (from 0 votes)
 5. Prathima

  ನಿಮ್ಮ ಟಿಪ್ಸ್ ನಮಗೆ ಸಹಕಾರಿಯಾಗಿದೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿನೀರ್ಕಜೆ ಮಹೇಶಜಯಗೌರಿ ಅಕ್ಕ°ಮಂಗ್ಳೂರ ಮಾಣಿವಿದ್ವಾನಣ್ಣಪ್ರಕಾಶಪ್ಪಚ್ಚಿರಾಜಣ್ಣವೇಣೂರಣ್ಣಮಾಲಕ್ಕ°ಪವನಜಮಾವಹಳೆಮನೆ ಅಣ್ಣಕಳಾಯಿ ಗೀತತ್ತೆಜಯಶ್ರೀ ನೀರಮೂಲೆvreddhiಪುಟ್ಟಬಾವ°ಶರ್ಮಪ್ಪಚ್ಚಿಗಣೇಶ ಮಾವ°ಒಪ್ಪಕ್ಕವಿಜಯತ್ತೆಪುತ್ತೂರಿನ ಪುಟ್ಟಕ್ಕಕಾವಿನಮೂಲೆ ಮಾಣಿಗೋಪಾಲಣ್ಣವೇಣಿಯಕ್ಕ°ಶುದ್ದಿಕ್ಕಾರ°ಯೇನಂಕೂಡ್ಳು ಅಣ್ಣಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ