Oppanna.com

ಉಂಡಮೇಲೆಯೂ ಯೋಗಾಸನ ಮಾಡೆಕಾ? ಇದರ ಮಾಡಿ :)

ಬರದೋರು :   ಸುವರ್ಣಿನೀ ಕೊಣಲೆ    on   22/08/2010    30 ಒಪ್ಪಂಗೊ

ಸುವರ್ಣಿನೀ ಕೊಣಲೆ

ಈ ಜೆನ ಕಾಣೆ ಹೇಳಿ ನಿಂಗೊ ಎಲ್ಲ ಅಂದಾಜಿ ಮಾಡಿದೀರ ಹೇಳಿ..!!! ಒಂದು ರೀತಿಲಿ ಹಾಂಗೇ..ಲೋನಾವಾಲಾದ ಐದು ನಿಮಿಷಕ್ಕೊಂದರಿ ಬದಲುವ ಹವಾಮಾನದ ಚೆಂದವ ನೋಡಿ..ಅಲ್ಲಿಯಾಣ ಪರಿಸರದ ಸೌಂದರ್ಯವ ಒಂದುವಾರಲ್ಲಿ ನೋಡಿ ಮುಗುಶೆಕು ಹೇಳಿರೆ ಹೇಂಗೆ?? ಹೆರಡುಲೇ ಮನಸ್ಸಿಲ್ಲೆ !! ಎಂತಕ್ಕೂ ಪುರ್ಸೊತ್ತೂ ಇತ್ತಿಲ್ಲೆ !! ಅಕೇರಿಯಾಣ ದಿನ ಅಲ್ಲಿ ಹತ್ತರೆ ಇಪ್ಪ ಜಾಗೆಗೊಕ್ಕೆ ಹೋಗಿತ್ತೆಂಯ…ಖಂಡಾಲ ಘಾಟ್,ಕಾರ್ಲ ಕೇವ್ಸ್,ಬುಷಿ ಅಣೆಕಟ್ಟು, ಲಯನ್ಸ್ ಪಾಯಿಂಟ್ ,ಪಾವ್ನಾ ಅಣೆಕಟ್ಟು,ಕೈವಲ್ಯಧಾಮ. ಇದರ ಎಲ್ಲದರ ಬಗ್ಗೆ ಒಂದು ಲೇಖನ ಬರದು ಬೈಲಿನೋರಿಂಗೆ ಓದುಲೆ ಕೊಡೆಕ್ಕು ಹೇಳಿ ಗ್ರೇಶಿದ್ದೆ 🙂 ಆದರೂ ಎಲ್ಲೋರೂ ಒಂದರಿ ಅಲ್ಲಿಗೆ ಹೋಯಕ್ಕು ಹೇಳಿ ಎನ್ನ ಅಭಿಪ್ರಾಯ 🙂 ಇರಲಿ…ನಮ್ಮ ಮುಖ್ಯ ವಿಷಯಕ್ಕೆ ಬತ್ತೆ… ಒಂದು ಆಸನದ ಬಗ್ಗೆ ಬರೆತ್ತೆ.

ಇಂದ್ರಾಣ ಆಸನ ವಜ್ರಾಸನ. ಹೆಚ್ಚಿನವಕ್ಕೆ ಗೊಂತಿಪ್ಪದೇ. ಮತ್ತೆ ಕೆಲವು ಜೆನ ಗೊಂತಿಲ್ಲದ್ದೆ ಮಾಡ್ತವು !! “ವಜ್ರಾಸನ” ಶಬ್ದದ ಅರ್ಥ ಎಂತರ?  ಇದಕ್ಕೆ ಇಂಗ್ಲಿಷಿಲ್ಲಿ (Thunderbolt pose) ಹೇಳ್ತವು, ಇದು ಇಂದ್ರನ ವಜ್ರಾಯುಧದ ಹೆಸರು. ಇನ್ನೊಂದು ಅರ್ಥಲ್ಲಿ, ಈ ಆಸನಲ್ಲಿ ಇಪ್ಪಗ ಶರೀರಲ್ಲಿ ಇಪ್ಪ ವಜ್ರನಾಡಿಯ ಮೇಲೆ ಪ್ರಭಾವ ಬೀರುವ ಕಾರಣಂದಾಗಿಯೂ ವಜ್ರಾಸನ ಹೇಳಿ ಹೇಳ್ತವು. ಇದು ಒಂದು ಧ್ಯಾನ, ಓದುಲೆ ಎಲ್ಲ ಇಪ್ಪ ಆಸನ(meditative pose).
ಮಾಡುವ ಕ್ರಮ:
ಸ್ಥಿತಿ: ಪದ್ಮಾಸನಲ್ಲಿ ಹೇಳಿದ ಹಾಂಗೆ  ಕಾಲು ನೀಡಿ ಸರ್ತ ಕೂಬದು. ಎರಡೂ ಕೈಗಳುದೇ ತೊಡೆಯ ಮೇಲೆ ಮಡುಗಿರೆಕ್ಕು. ಬೆನ್ನು ಸರ್ತ ಇರೆಕ್ಕು. ಕಣ್ಣಿನ ದೃಷ್ಟಿ ನೇರ ಇರೆಕ್ಕು.
ಅಭ್ಯಾಸ:

  • ದೀರ್ಘ ಉಸಿರು ತೆಕ್ಕೊಂಡು, ಉಸಿರು ಬಿಡ್ತಾ ನಿಧಾನಕ್ಕೆ ಒಂದೊಂದೇ ಕಾಲಿನ ಮಡುಸಿ ಕಾಲಿನ ಪಾದಂಗಳ ಮೇಲೆ ಕೂರೆಕ್ಕು.
  • ಎರಡೂ ಕಾಲಿನ ಹೆಬ್ಬೆರಳು ಒಂದಕ್ಕೊಂದು ತಾಗುವ ಹಾಂಗೆ ಇರೆಕ್ಕು.
  • ಹಿಮ್ಮಡಿಗೊ ಹೆರಾಣ ಹೊಡೆಂಗೆ ಇರೆಕ್ಕು.
  • ಅಂಗಾಲು (soles) ಮೇಲ್ಮುಖವಾಗಿ , ಹಿಂದಾಣ ಹೊಡೆಲಿ ಇರೆಕ್ಕು.
  • ತೊಡೆಗಳ ಎರಡನ್ನೂ ಜೋಡ್ಸಿ ಮಡುಗೆಕ್ಕು.
  • ಬೆನ್ನು,ಕೊರಳು ಸರ್ತ ಇರೆಕ್ಕು.
  • ಕಣ್ಣು ಮುಚ್ಚಿರೆಕ್ಕು.
  • ಕೈಗಳ ಯಾವುದಾದರೂ ಮುದ್ರೆಲಿ ಮಡಿಕ್ಕೊಂಬಲಕ್ಕು, ಅಥವಾ ತೊಡೆಗಳ ಮೇಲೆ ಮಡಿಕ್ಕೊಂಬಲಕ್ಕು.
  • ಇದು “ಆಸನ ಸ್ಥಿತಿ”.
  • ಆಸನವ ಬಿಡುಸುವಗ ನಿಧಾನಕ್ಕೆ ಒಂದೊಂದೇ ಕಾಲಿನ ಬಿಡುಸಿ ಸರ್ತ ಮಡಗಿ, ಸ್ಥಿತಿಗೆ ಬರೆಕ್ಕು. ಮತ್ತೆ ನಿಧಾನಕ್ಕೆ ಕಾಲುಗಳ ಹನ್ಸುಲಕ್ಕು.

ಮುಂಜಾಗೃತೆ ವಹಿಸೆಕ್ಕಾದ ಅಂಶಂಗೊ:

  • ಮೊಳಪ್ಪಿನ ಸಂಧಿವಾತ,
  • ಕಾಲಿನ ಮಣಿಗಂಟಿನ ತೊಂದರೆ,
  • ಕಾಲಿನ ಯಾವುದೇ ಗಂಟಿನ ಬೇನೆ
  • ಕಾಲಿನ ಅಶುದ್ಧ ರಕ್ತನಾಳಂಗಳ ತೊಂದರೆ(vericosis).

ಪ್ರಯೋಜನಂಗೊ:

  • ಆಹಾರ ಸೇವನೆ ಮಾಡಿದ ನಂತರ ಮಾಡ್ಲಕ್ಕಾದ ಆಸನ ಇದು. ಊಟದ ನಂತರ ಇದರ ಮಾಡಿರೆ ಜೀರ್ಣ ಅಪ್ಪಲೆ ಒಳ್ಳೆದು. ರಕ್ತ ಸಂಚಾರವ ಹೊಟ್ಟೆಯ ಭಾಗಕ್ಕೆ ಹೆಚ್ಚು ಮಾಡ್ತು.
  • ಬೆನ್ನು ಸರ್ತ ಇಪ್ಪ ಕಾರಣ ಬೆನ್ನಿನ ಸ್ನಾಯುಗೊಕ್ಕೆ ಒಳ್ಳೆದು, ಸೊಂಟ/ಬೆನ್ನು ಬೇನೆಯ ತೊಂದರೆ ಇಪ್ಪವಕ್ಕೆ ಉಪಕಾರ ಆವ್ತು. ಡಿಸ್ಕಿನ (intervertebral disc) ತೊಂದರೆ ಇಪ್ಪವ್ವುದೇ ಮಾಡ್ಲಕ್ಕು(ಬೇನೆ ಆಗದ್ರೆ).
  • ಧ್ಯಾನ, ತ್ರಾಟಕ, ಪ್ರಾಣಾಯಾಮ ಮಾಡುಲೆ ಇದರ್ಲಿ ಕೂದರೆ ಏಕಾಗ್ರತೆ ಹೆಚ್ಚು ಇರ್ತು.
  • ಜೀರ್ಣಕ್ರಿಯೆಯ ಮೇಲೆ, ಜೀರ್ಣಾಂಗ ವ್ಯೂಹದ ಮೇಲೆ ಪರಿಣಾಮ ಇಪ್ಪ ಕಾರಣ  ಅದಕ್ಕೆ ಸಂಬಂಧಪಟ್ಟ ಹೆಚ್ಚಿನ ತೊಂದರೆಗೊಕ್ಕೆ ಉಪಯೋಗ ಆವ್ತು.
  • ಕಿಬ್ಬೊಟ್ಟೆಯ ಅಂಗಂಗಳ (pelvic organs),ಸ್ನಾಯುಗಳ ಮೇಲೆ ಕೂಡ ಪ್ರಭಾವ ಇದ್ದ ಕಾರಣ ಮುಟ್ಟಿನ ತೊಂದರೆಗೊ, ಗರ್ಭಕೋಶದ ತೊಂದರೆ,ಇತ್ಯಾದಿ ಸಂದರ್ಭಲ್ಲಿಯುದೇ ಮಾಡಿರೆ ಪ್ರಯೋಜನ ಇದ್ದು.
  • ಬಸರಿಯಕ್ಕೊದೇ ಮಾಡ್ಲಕ್ಕು (ಅವಕ್ಕೆ ಕೂಬಲೆ ಎಡಿಗಾರೆ).
  • ಈ ಆಸನಲ್ಲಿ (ಎಲ್ಲ ಆಸನಲ್ಲಿಯೂ!!) ಸಾಧ್ಯ ಆದಷ್ಟೂ ಹೆಚ್ಚು ಹೊತ್ತು ಕೂಬಲೆ ಅಭ್ಯಾಸ ಮಾಡಿರೆ ಒಳ್ಳೆದು. ಈ ಅಭ್ಯಾಸವ ಮಾಡಿರೆ ವಜ್ರಾಯುಧದ ಶಕ್ತಿ ಬತ್ತು ಹೇಳಿ ಪ್ರತೀತಿ. ಆದರೆ ಕಾಲಿನ ಮಣಿಕಟ್ಟಿನ ಭಾಗಲ್ಲಿ ಇಪ್ಪ ವಜ್ರನಾಡಿಯ ಮೇಲೆ ಬ್ರಭಾವ ಬೀರಿ ಆ ಮೂಲಕ ಶರೀರದ ಮೇಲೆ ಪ್ರಭಾವ ಬೀರುತ್ತು.

[ಸಾಧಾರಣವಾಗಿ ತುಂಬ ಹೊತ್ತು ವಜ್ರಾಸನಲ್ಲಿ ಕೂದು ಆಸನವ ಬಿಡುಸಿಯಪ್ಪಗ ಒಂದೊಂದರಿ ಕಾಲು ಎರುಗು ಬಂದ ಹಾಂಗೆ (ಝುಂ ಝುಂ) ಅಪ್ಪದು (numbness) ಇರ್ತು. ಹೀಂಗೆ ಆದಪ್ಪಗ, ಕಾಲು ನೀಡಿ ಒಂದೆರಡು ನಿಮಿಷ ಕೂದು ರಜ್ಜ ಹನ್ಸಿಯಪ್ಪಗ ಸರಿ ಆವ್ತು.]
ಹೀಂಗೆ ವಜ್ರಾಸನ ಒಂದು ತುಂಬಾ ಪ್ರಯೊಜನಕಾರಿ, ಮತ್ತೆ ತುಂಬಾ ಸುಲಭಲ್ಲಿ ಮಾಡ್ಲೆ ಎಡಿಗಪ್ಪ ಆಸನ.

30 thoughts on “ಉಂಡಮೇಲೆಯೂ ಯೋಗಾಸನ ಮಾಡೆಕಾ? ಇದರ ಮಾಡಿ :)

  1. ಸುವರ್ಣಿನಿ ಅಕ್ಕೋ..
    ನಿಂಗೊ ಕಾಂಬಲೆ ಅಪುರೂಪ ಆಗಿ ಎಂಗೊಗೆ ಗಾಬೆರಿ ಆತು ಒಂದರಿ!
    ಯೋಗಾಸನ ಹಾಕಿ ಕೈಕ್ಕಾಲು ಸಿಕ್ಕಿಗೊಂಡತ್ತೋ ಹೇಳಿಗೊಂಡು!
    ಅದಿರಳಿ, ಶುದ್ದಿ ಲಾಯಿಕಾಯಿದು!
    { ಒಂದೊಂದರಿ ಕಾಲು ಎರುಗು ಬಂದ ಹಾಂಗೆ }
    – ದೊಡ್ಡಬಾವಂಗೆ ದೊಡ್ಡದೊಡ್ಡ ಹೋಂಟ ಬಂದ ಹಾಂಗೆ ಆವುತ್ತಡ, ಎಂತ ಮಾಡುದು..?

    1. ಸೀವಿದ್ದಲ್ಲಿ ಎರುಗೂ ಹರಗು, ಹೋ೦ಟನೂ ಬಕ್ಕು.ರಜಾ ಗೆಮೆಸಿನ್ನೋ,ಡಿ.ಡಿ.ಟಿ.ಯೋ ಹಾಕಿ ನೋಡಲಿ.ಗುಣ ಇಲ್ಲದ್ದರೆ ಬೆಶಿನೀರೆ ಗೆತಿ.

  2. ಉರಿಂಗೆ ಹೋಗಿತಿದ್ದೆ. ಎನ್ನ ಅಬ್ಬೆ ಉದಿಯಪ್ಪಗ ಬೇಗ ಎದ್ದು {೫ ಗಂ} ಎದ್ದು ಯೊಗ ಮಾಡೆಂಡಿತಿದ್ದವು … ಕೇಳಿರೆ, ಇರುಳಿಡಿ ಮನಿಗಿದ್ದಲ್ಲದೊ ..ಉಸಿರು , ಕೈ ಕಾಲು ಸರಿ ಹನ್ದುತ್ತೊ ನೋಡೊದು ಹೇಳಿದವು 🙂

  3. ಎಲ್ಲರೂ ಉಂಡಿಕ್ಕಿ ಮನುಗುವದರ “ಶವಾಸನ” ಹೇಳಿ ತಿಳ್ಕೊಂಡ ಹಾಂಗೆ ಇದ್ದು. ಶವಾಸನಕ್ಕೆ ಅದರದ್ದೇ ಆದ ಕ್ರಮ ಇದ್ದು
    ಇದರ ಬಗ್ಗೆ ಸುವರ್ಣಿನಿ ಅಕ್ಕ ವಿವರ ಕೊಟ್ಟರೆ ಒಳ್ಳೆದು.

    1. ಖಂಡಿತಾ, ಎಲ್ಲೋರೂ ಶವಾಸನ ಹೇಳೀರೆ ಮನುಗುದು ಹೇಳುವ ತಪ್ಪು ಕಲ್ಪನೆಲಿ ಇರ್ತವು (ಕುಶಾಲಿಂಗೆ ಹೇಳುದು ತಪ್ಪಲ್ಲ!!!). ಸುಲಭ ಹೇಳಿ ಅಭಿಪ್ರಾಯ ಪಡ್ತವು. ಆದರೆ..ಶವಾಸನ ಮಾಡುದು ಹೇಳಿದಷ್ಟು ಸುಲಭ ಅಲ್ಲ 🙂

    2. ಆಸನ ಬಿಡು ಶ್ರೀಶ ಭಾವಾ,ಶವ ಅಪ್ಪಲೆ ಎಷ್ಟು ಕಷ್ಟ ಗೊಂತಿದ್ದೋ??
      ಎನಗೆ ಗೊಂತಿಲ್ಲೆಪ್ಪಾ.

      1. ಅನುಭವ ಹೇಳಿದವು ಆರೂ ಇಲ್ಲೆ ಅಲ್ಲದಾ ಭಾವಾ ?

  4. ಸುವರ್ಣಿನೀ ಅಕ್ಕಾ.. ಆನು ಉಂಡಮೇಲೆ ಇರುಳು ಶವಾಸನ ಬಿಡದೆ ಒ೦ದು 8ಟು ಗ೦ಟೆ ಮಡಿಗೊ೦ಡಿತೆ 😉 … ಇನ್ನು ಮುನ್ದೆ ವಜ್ರಾಸನ ಮಾಡುವೊ ಹೆಳಿ ಇದೆ… 😛

    1. ಇರುಳಿಡೀ ವಜ್ರಾಸನವಾ! ಬೇಡ. ಇರುಳು ಊಟ ಮಾಡಿಕ್ಕಿ ಒಂದೆರಡು ಕಿಲೋಮೀಟರ್ ನಡದರೆ ಒಳ್ಳೆದು 🙂

      1. ಒ.. ಅದು ಅಕ್ಕು :P.. ಆದರೆ.. ಶವಾಸನ ಮಾಡೆ೦ಡು.. 2 ಡು ಗ೦ಟೆ ನಡೆಸು.. ಹೆ೦ಗೆ??? 😛 ಇರಲಿ…. ನಿ೦ಗೊ ಹೇಳಿದ ಹಾ೦ಗೆ ವಜ್ರಾಸನ ಮಾಡುತೆ.. ಆತೊ… 😛

      2. ಭಾವಾ.. ಈ ಕಿಲೋ ಲೆಕ್ಕ ಬಿಡುವ೦…
        ಎರಡು ಮೀಟರ್ ಯಥಾನುಶಗುತಿ ನೆಡದು,ಅಕ್ಕ ಹೇಳುತ್ತ ಹಾಂಗೆ ವಜ್ರಾಸನ ಮಾಡಿಕ್ಕಿ ಮತ್ತೆ ನಮ್ಮ ಪ್ರೀತಿಯ ಶವಾಸನವೇ.. ಬೇಕಾರೆ ಒಂದು ಘಂಟೆ ಜಾಸ್ತಿ ಮಾಡಿತ್ತಯ್ಯ..

  5. ಆರು ಬೇಕಾರೂ ಯಾವ ಸಮಯಲ್ಲಿಯೂ ಮಾಡ್ಲೆ ಅಕ್ಕಾದ ವಜ್ರಾಸನದ ಬಗ್ಗೆ ಒಳ್ಳೆ ಮಾಹಿತಿ

  6. ವಜ್ರಾಸನದ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟ ಲೇಖನ ಅಕ್ಕೋ… ಲೋನಾವಾಲದ ಅನುಭವದ ಬಗ್ಗೆ ನಿನ್ನ ಲೇಖನಕ್ಕೆ ಕಾಯ್ತಾ ಇದ್ದೆ…
    ಹೇಳಿದ ಹಾಂಗೆ.. ಆನು ಮಧ್ಯಾನ್ನ ಉಂಡಪ್ಪದ್ದೆ ಮನೆಲಿದ್ದರೆ ಒಂದು ಆಸನ ಮಾಡ್ತೆ, ನಿದ್ರಾಸನ (ಅರ್ಧ ನಿಮೀಲಿತ ನೇತ್ರ- ಈಸಿಚೇರು ಪ್ರತಿಷ್ಟಿತ ನಿದ್ರಾಸನ ಹೇಳ್ತರು ಅಡ್ಡಿ ಇಲ್ಲೆ), ಬಪ್ಪ ವಾರ ಅದರ ಬಗ್ಗೆಯುದೆ ಬರೆ ಆತಾ?? 😉

          1. ಚೆ ಚೆ,, ಅಂಬಗ ಬೇರೆ ಆರುದೆ ಈ ಆಸನ ಮಾಡ್ತವಿಲ್ಲೆಯ!! ಎಂಥಾ ವಿಪರ್ಯಾಸ!!! 🙂 ಆನು ಡಾಗುಟ್ರಕ್ಕೊಗೆಲ್ಲ ಗೊಂತಿಕ್ಕು ಹೇಳಿಯೆ ಜಾನ್ಸಿದ್ದು. ಹೇಳಿದ ಹಾಂಗೆ ಅದು ಹೆಸರು ಆನು ಕೊಟ್ಟದು, ಎನಗೆ ಅದರ ನಿಜವಾದ ಹೆಸರು ಗಂತಿಲ್ಲೆ ಇದಾ, ಹಾಂಗಾಗಿ.. ಆದರೆ ಮನೆಲಿ ಸರಳವಾಗಿ ಈಸಿಚೇರಿಲಿ ಒರಕ್ಕುತೂಗುದು ಹೇಳ್ತವು ಅದಕ್ಕೆ.. 😉

          2. [ನಿದ್ರಾಸನ ಹೇಳ್ತರು ಅಡ್ಡಿ ಇಲ್ಲೆ]
            ಗೊರಕಾಸನ
            ಚುರುಟಾಸನ
            ಮುಸುಕಾಸನ ಹೇಳ್ತರೂ ಅಡ್ಡಿ ಇಲ್ಲೆ

    1. {ನಿದ್ರಾಸನ ಹೇಳ್ತರು ಅಡ್ಡಿ ಇಲ್ಲೆ}
      ಆನುದೇ ಆ ಆಸನ ಮಾಡ್ತೆ.
      ಆದರೆ, ಅಷ್ಟೊತ್ತಿಂಗೆ ಬರವಲೆಡಿತ್ತಿಲ್ಲೆ. 😉
      ಎದ್ದ ಮತ್ತೆ ಅದು ನೆಂಪಿರ್ತಿಲ್ಲೆ.. 🙁
      ಎಂತ ಮಾಡುದು? ಬೈಲಿಂಗೆ ಹೇಂಗೆ ಅದರ ತಿಳುಶುದೂ? 😛

    2. ಎನ್ನ ಭಾವ ಒಬ್ಬ ಇದ್ದ. ಅವ ಮಣಿಪಾಲಲ್ಲಿ ಯೋಗ ಕಲ್ತು ಮಾಡಿ ಬಿಟ್ಟು ಎಲ್ಲ ಆಯಿದು. ಈಗ ಎಂತ ಮಾಡ್ತೆ ಕೇಳಿರೆ ಒಂದೇ ಒಂದು ಎನ್ನ ಇಷ್ಟದ ಆಸನ. ಅದಕ್ಕೆ ಹೆಸರು ಉದಾಸನ ಅದೊಂದೇ ಮಾಡುದಾನು ಹೇಳಿ ಹೇಳ್ತ.

  7. ಡಾಗುಟ್ರಕ್ಕಾ,ಧನ್ಯವಾದ.
    ಒಳ್ಳೆತ ಮಾಹಿತಿ ಇದ್ದು. ಟಿ.ವಿ. ನೋಡುವ ಹಾಂಗಿರ್ತ ಕಾಲಕ್ಷೇಪಂಗಳಲ್ಲಿಯೂ,ಈ ಆಸನಲ್ಲಿ ಕೂದು ನೋಡಿರೆ ಲಾಭ ಅಲ್ಲದೋ,ಅತ್ತೆ ಸೊಸೆ ಕಾಳಗ ನೋಡಿದ ಹಾಂಗೂ ಆತು,ತಿಂದದು ಜೀರ್ಣ ಆದ ಹಾಂಗೂ ಆತು,ಹೇಂಗೆ??

  8. ಒಳ್ಳೆ ಮಾಹಿತಿ ಅಕ್ಕಾ,ಆದರೆ ಈ ಸರ್ತಿ ಒಂದೂ ಪಟ ಇಲ್ಲೆ ಎಂತ? ಆದರೂ ನಿಂಗ ಹೇಳಿದ ಕ್ರಮ ಮಾಡಿ ನೋಡ್ತೆ..ಎಂತ ಆವತು ನೋಡ್ತೆ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×