ಸರಿ ತಪ್ಪುಗಳ ಗೊಂದಲದೊಳ್…

August 29, 2010 ರ 5:00 amಗೆ ನಮ್ಮ ಬರದ್ದು, ಇದುವರೆಗೆ 35 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪ್ರತಿವಾರ ಒಂದೊಂದು ಆಸನದ ಬಗ್ಗೆ ಬರೆತ್ತಾ ಇತ್ತಿದ್ದೆ..ಆದರೆ ಈ ವಾರ ರಜ್ಜ ಬದಲಾವಣೆ ಮಾಡಿರಕ್ಕಾ ಹೇಳಿ.. for a change ಹೇಳಿ ಇಂಗ್ಲೀಷಿಲ್ಲಿ ಹೇಳ್ತವಿಲ್ಲೆಯ..ಹಾಂಗೆ. ಇದಕ್ಕೆ ಕಾರಣವೂ ಇದ್ದು, ಪರೀಕ್ಷೆ :( ಅಪ್ಪು.. ಕಲಿವದು ಹೇಳುದು ಎಂದುಂಗೂ ಮುಗಿಯದ್ದ ಪಯಣ. ಹಾಂಗೆ ಪುರ್ಸೊತ್ತೇ ಇತ್ತಿಲ್ಲೆ, ಅಷ್ಟುದೇ ಓದುದಾ ಹೇಳಿ ಕೇಳೆಡಿ ..ಅಂತೆ ಪುಸ್ತಕ ಬಿಡುಸಿ ಎದುರು ಮಡುಗುದು !! ಬೇರೆ ಕೆಲಸ ಮಾಡ್ಲಪ್ಪಗ ನೆಂಪಾವ್ತು..ಓದ್ಲಿದ್ದು ಹೇಳಿ !! ಬೇರೆಯೋರಿಂಗೆ (students) ಓದುಲೆ ಹೇಳುವಗ ಲಾಯ್ಕ ಆವ್ತು…ಓದದ್ರೆ ಜೋರು ಮಾಡ್ಲೂ ಲಾಯ್ಕಾವ್ತು…ನಾವೇ ಓದುವಗ ಗೊಂತಪ್ಪದು ಬಙ !! ಪರೀಕ್ಷೆ ಕೋಣೆಲಿ ಮೂರು ಗಂಟೆ ಹೊತ್ತು ಕೂಬದಂತೂ ಎಲ್ಲಕ್ಕಿಂತ ಕಷ್ಟ !! ಎಲ್ಲವೂ ಹಾಂಗೆ ನಾವೇ ಸ್ವತಃ ಮಾಡಿ ಅನುಭವಿಸುವನ್ನಾರ ಗೊಂತಾವ್ತಿಲ್ಲೆ..ಅದರ ಕಷ್ಟವೂ..ಸುಖವೂ.. ಈಗ ಯೋಗದ ಬಗ್ಗೆಯೇ ತೆಕ್ಕೊಂಡರೆ..ಯೋಗ ಮಾಡುವನ್ನಾರವುದೇ ಅದರ ಪ್ರಯೋಜನ ಗೊಂತಾವ್ತಿಲ್ಲೆ, ಹಾಂಗೆಯೇ ಮಾಡುವಗ ಚೆಂದ ಕಾಂಬ ಆಸನ ಮಾಡ್ಲೆ ಎಷ್ಟು ಬಙ ಹೇಳಿ ಗೊಂತಾಯಕ್ಕಾರೆ ಮಾಡಿಯೇ ನೊಡೆಕು, ಅಲ್ಲದಾ?

ನವಗೆ ಕೆಲವು ಅಭ್ಯಾಸಂಗೊ ಇದ್ದು, ಯಾವುದರ ಬಗ್ಗೆಯೂ ರಜ್ಜ ಗೊಂತಾರೆ ಸಾಕು..ಎಲ್ಲವೂ ಗೊಂತಿಪ್ಪೋರ ಹಾಂಗೆ ಮಾತಾಡುದು, ಮತ್ತೆ ಕೆಲವು ಜೆನ ಹೀಂಗಿದ್ದ ಮಾತುಗಳ ನಂಬುವ ಬೆಪ್ಪಂಗೊ !! ಯೋಗದ ಬಗ್ಗೆ ಕೆಲವು ತಪ್ಪು ಕಲ್ಪನೆಗೊ ಇದ್ದು ಜೆನರಲ್ಲಿ, ಆರು ಹೀಂಗಿದ್ದರ ಎಲ್ಲ ಶುರು ಮಾಡುದೋ..ಆ ದೇವರಿಂಗೇ ಗೊಂತು. ಕೆಲವು ಜೆನ ಇದ್ದವು, ಅವ್ವು ಯೋಗಾಭ್ಯಾಸವ ತಪ್ಪಾಗಿ ಮಾಡಿದವು, ಮತ್ತೆ ಅದರಿಂದಾಗಿ ತೊಂದರೆ ಅಪ್ಪಗ ಯೋಗಂದಾಗಿಯೇ ಆದು ಹೇಳಿ ಪ್ರಚಾರ ಮಾಡಿದವು ! ಹಾಂಗಾಗಿ ಈ ವಾರ ಯೋಗಾಭ್ಯಾಸಂಗಳ ಬಗ್ಗೆ ಇಪ್ಪ ಕೆಲವು ತಪ್ಪು ಕಲ್ಪನೆಗಳ ಬಗ್ಗೆ ಬರೆತ್ತೆ, ಇದರಿಂದ ಬೈಲಿನೋರಿಂಗೆ ತುಂಬ ಉಪಕಾರ ಅಕ್ಕು ಹೇಳಿ ಗ್ರೇಶುತ್ತೆ :)

 • ಯೋಗಾಸನ ನಿತ್ಯ ಮಾಡಿಗೊಂಡಿದ್ದವು, ಮಾಡುದು ಬಿಟ್ಟರೆ ತೋರ ಬೆಳೆತ್ತವು. ಇದು ಖಂಡಿತಾ ತಪ್ಪು, ತೋರ ಬೆಳವದಕ್ಕೆ ಕಾರಣ ಬೇರೆ ಬೇರೆ ಇಕ್ಕು, ಆಹಾರಕ್ರಮ, ಜೀವನಶೈಲಿ, ಅಥವಾ ಅವರವರ ಅನುವಂಶಿಕ ಗುಣ ಇತ್ಯಾದಿ. ಹಾಂಗಾಗಿ ಈ ರೀತಿ ತಿಳ್ಕೊಳ್ಳದ್ದೆ ಯೊಗಾಭ್ಯಾಸ ಮಾಡ್ಲಕ್ಕು, ಆದರೆ ಒಂದರಿ ಮಾಡ್ಲೆ ಶುರು ಮಾಡಿದ್ದರ ನಿಲ್ಸೆಕು ಹೇಳಿ ಇಲ್ಲೆ, ತೋರ ಅಪ್ಪ ಹೆದರಿಕೆಂದ ಅಲ್ಲ, ಆರೋಗ್ಯದ ದೃಷ್ಟಿಂದ..ಜೀವನದ ದೃಷ್ಟಿಂದ.
 • ಯೋಗ ಹೇಳಿರೆ ಆಸನಂಗೊ ಮಾಂತ್ರ. ಇದು ಇನ್ನೊಂದು ದೂಡ್ಡ ತಪ್ಪು ವಿಚಾರ. ಯೋಗ ಹೇಳಿರೆ ಆಸನಂಗೊ ಮಾಂತ್ರ ಅಲ್ಲ, ಆಸನಂಗೊ ಯೋಗದ ಒಂದು ಸಣ್ಣ ಭಾಗ. ಯೋಗ ಹೇಳುದು ದೊಡ್ಡ ಸಾಗರದ ಹಾಂಗೆ…ಅದರ್ಲಿ ಹಲವಾರು ಮಾರ್ಗಂಗೊ ಇದ್ದು, ಬೇರೆ ಬೇರೆ ಕ್ರಮಂಗೊ ಇದ್ದು. ಎಲ್ಲವನ್ನೂ ಪಾಲುಸುದು ದಿನ ನಿತ್ಯದ ಜೀವನಲ್ಲಿ ಕಷ್ಟ..ಹಾಂಗಾಗಿ ಕೆಲವು ವಿಚಾರಂಗಳ ಮಾಂತ್ರ ಆಯ್ಕೆ ಮಾಡಿ ನಾವು ನಿತ್ಯಜೀವನಲ್ಲಿ ಉಪಯೋಗ್ಸುತ್ತು ಅಷ್ಟೆ :)
 • ಯೋಗಾಸನ/ಪ್ರಾಣಾಯಾಮ ಹೇಳಿರೆ ವ್ಯಾಯಾಮ. ಇದು ಇನ್ನೊಂದು ದೊಡ್ಡ ತಪ್ಪು !! ಯೋಗಾಸನ ಹೇಳೀರೆ ಯಾವುದೇ ದೈಹಿಕ ವ್ಯಾಯಾಮ ಅಲ್ಲ, ಇವೆರೆಡಕ್ಕೂ ಸುಮಾರು ವ್ಯತ್ಯಾಸಂಗೊ ಇದ್ದು. ವ್ಯಾಯಾಮವ ಮಾಡುವಗ ಉಸಿರಿಂಗೆ ಪ್ರಾಮುಖ್ಯತೆ ಇರ್ತಿಲ್ಲೆ, ಆದರೆ ಯೋಗಾಸನ ಮಾಡುವಗ ಉಸಿರಾಟ ತುಂಬಾ ಮುಖ್ಯ. ಮಾಡುವ ಕ್ರಮವುದೇ ಅಷ್ಟೆ, ಆಸನಂಗಳ ನಿಧಾನಕ್ಕೆ ಮಾಡುದು. ಇನ್ನು ಕೆಲವು power yoga, fast yoga  ಹೇಳಿ ಕೇಳಿಕ್ಕು ನಿಂಗೊ, ಇದರೆಲ್ಲ ಯೊಗಾಸನ ಹೇಳಿ ಹೇಳ್ಲೆ ಎಡಿಯ, ಒಂದು ರೀತಿಯ ವ್ಯಾಯಾಮಂಗೊ ಅಷ್ಟೆ. ಪ್ರಾಣಾಯಾಮವುದೇ ಅಷ್ಟೆ, ಉಸಿರಾಟದ ವ್ಯಾಯಾಮಂಗಳೇ ಬೇರೆ ಪ್ರಾಣಾಯಾಮವೇ ಬೇರೆ.
 • ಅಸೌಖ್ಯ ಇಪ್ಪವ್ವು ಯೋಗಾಭ್ಯಾಸಂಗಳ ಮಾಡ್ಲಾಗ. ಅನಾರೋಗ್ಯ ಇದ್ದವ್ವುದೇ ಮಾಡ್ಲಕ್ಕು, ಆದರೆ ವೈದ್ಯರ ಸಲಹೆ ತೆಕ್ಕೊಂಡು ಯಾವುದರ ಮಾಡ್ಲಕ್ಕು, ಯಾವ ಅಭ್ಯಾಸಂಗೊ ಆಗ ಹೇಳ್ತದರ ಕಳ್ತು ಮಾಡೆಕ್ಕು ಅಷ್ಟೆ. ಯೋಗ ಆರೋಗ್ಯವ ಸಮಸ್ಥಿತಿಲಿ ಇರಿಸುಲೆ ಹೇಂಗೆ ಸಹಾಯ ಮಾಡ್ತೋ ಅದೇ ರೀತಿ ಅನಾರೋಗ್ಯವ ಗುಣ ಪಡ್ಸುಲುದೇ ಸಹಾಯ ಮಾಡ್ತು.
 • ಮುಟ್ಟಿನ ಸಮಯಲ್ಲಿ ಯೊಗಾಭ್ಯಾಸಂಗಳ ಮಾಡ್ಲಾಗ. ಅಪ್ಪು ಇದು ಕೂಡ ಒಂದು ತಪ್ಪು ಕಲ್ಪನೆ!! ಆಶ್ಚರ್ಯ ಆವ್ತಾ? ಮುಟ್ಟಿನ ದಿನಂಗಳಲ್ಲಿ ದೈಹಿಕವಾಗಿ ಸಮಸ್ಯೆಗೊ(ಹೊಟ್ಟೆ/ಸೊಂಟ ಬೇನೆ, ವಾಂತಿ, ತಲೆ ಬೇನೆ, ತಲೆ ತಿರುಗುದು, ಬಚ್ಚುದು, ನಿಶ್ಶಕ್ತಿ, ಹೆಚ್ಚಾದ ಸ್ರಾವ ಇತ್ಯಾದಿ) ಇಪ್ಪ ಕಾರಣಂದ ಮಾಡ್ಲೆ ಎಡಿತ್ತಿಲ್ಲೆ, ಆದರೆ ಯಾವುದೇ ತೊಂದರೆ ಇಲ್ಲದ್ದವ್ವು ಮಾಡ್ಲಕ್ಕು. ಇದರಿಂದ ಯಾವುದೇ ರೀತಿಯ ಸಮಸ್ಯೆ ಆವ್ತಿಲ್ಲೆ. ಎಡಿವಂತಹ ಅಭ್ಯಾಸಂಗಳ ಮಾಡ್ಲಕ್ಕು, ಪ್ರಾಣಾಯಾಮ, ಧ್ಯಾನ ಇತ್ಯಾದಿ ಹೇಂಗೂ ಮಾಡ್ಲಕ್ಕನ್ನೆ !! ಇದರಿಂದ ಆ ಸಮಯಲ್ಲಿ ಅಪ್ಪ ಮಾನಸಿಕ ತೊಂದರೆಗಳಿಂದ  ಮುಕ್ತಿ ಸಿಕ್ಕುಗು.
 • ಬಸರಿಯಕ್ಕೊ ಯೋಗಾಭ್ಯಾಸ ಮಾಡ್ಲಾಗ. ಎಲ್ಲಾ ಸಂದರ್ಭಲ್ಲಿಯೂ ಅಲ್ಲ, ಸಾಧಾರಣವಾಗಿ ಬಸರಿ ಆದಿಪ್ಪಗ ಕೆಲವು ಆಸನಂಗಳ, ಪ್ರಾಣಾಯಾಮಂಗಳ ಮಾಡ್ಲಕ್ಕು. ಮೊದಲಿಂದಲೂ ನಿತ್ಯ ಯೋಗಾಭ್ಯಾಸ ಮಾಡಿಗೊಂಡಿದ್ದವು ಅದರ ಮುಂದುವರ್ಸುಲಕ್ಕು. ಹೊಸತ್ತಾಗಿ ಶುರು ಮಾಡೂವವ್ವು ವೈದ್ಯರ ಸಲಹೆ ತೆಕ್ಕೊಳ್ಳೆಕಾದ್ದು ಅಗತ್ಯ, ಮತ್ತೆ ಯೋಗದ ಬಗ್ಗೆ ಸರಿಯಾದ ಜ್ಞಾನ ಇಪ್ಪ, ಒಟ್ಟಿಂಗೇ ಗರ್ಭದ ಬಗ್ಗೆಯೂ ಸರಿಯಾಗಿ ಗೊಂತಿಪ್ಪೋರು, ಹೇಳಿರೆ ಯೋಗದ ವೈದ್ಯರ ಹತ್ತರೆಯೇ ಮಾಹಿತಿ ತೆಕ್ಕೊಂಡರೆ ಒಳ್ಳೆದು.
 • ಹೆಚ್ಚು ಪ್ರಾಯ ಆದವ್ವು ಅಥವಾ ಸಣ್ಣ ಮಕ್ಕೊ ಮಾಡ್ಲಾಗ. ಯಾವ ಪ್ರಾಯದವ್ವುದೇ ಮಾಡ್ಲಕ್ಕು, ಆದರೆ ಅವರವರ ದೈಹಿಕ ಸ್ಥಿತಿಯ ಅವಲಂಬಿಸಿಗೊಂಡು ಕೆಲವು ಅಭ್ಯಾಸಂಗಳ ಮಾಡ್ಲಕ್ಕು.

ಹೀಂಗೆ ಸುಮಾರು ಇದ್ದು, ಕೆಲಾವು ಮುಖ್ಯವಾದ್ದರ ಇಲ್ಲಿ ಬರದ್ದೆ, ಇನ್ನು ಯಾವುದಾರೂ ನಿಂಗೊಗೆ ಗೊಂತಿದ್ದರೆ, ಸಂಶಯ ಇದ್ದರೆ ಕೇಳಿ.

ಹೀಂಗೆ ಎಲ್ಲಾ ವಿಚಾರಂಗಳಲ್ಲಿಯೂ ನಾವು ತಪ್ಪು ಕಲ್ಪನೆಗಳ ಸುಳಿ ಒಳ ಇರ್ತು ಅಥವಾ ಒಂದು ರೀತಿಯ ಭ್ರಮೆಲಿ!! ವಿಷಯ ಯಾವುದೇ ಆದಿಕ್ಕು, ಆದರೆ ಎಂದಿಂಗೂ ಅದರ ಸರಿಯಾಗಿ ತಿಳ್ಕೊಳ್ಳದ್ದೆ ಅಜ್ಞಾನಲ್ಲಿ ಇಪ್ಪಲಾಗ. ಇದೆಲ್ಲದರಿಂದ ಹೆರ ಬಂದು ಸರಿಯಾದ ಜ್ಞಾನವ ಪಡಕ್ಕೊಳ್ಳೆಕು ಅಲ್ಲದಾ? ಅದೇ ನಿಜವಾದ ಸಂಪಾದನೆ ಅಥವಾ ಸಾಧನೆ, ಅಲ್ಲದಾ?

ಸರಿ ತಪ್ಪುಗಳ ಗೊಂದಲದೊಳ್…, 5.0 out of 10 based on 4 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 35 ಒಪ್ಪಂಗೊ

 1. ಮುಳಿಯ ಭಾವ
  raghumuliya

  ಒಳ್ಳೆ ವಿಚಾರಪೂರ್ಣ ಲೇಖನ ಡಾಗುತ್ರಕ್ಕಾ.ನಾಳೆಂದ ಯೋಗ ಶುರು ಮಾಡೊದೆ ಆಗದೋ?
  ನಿಂಗಳ ಲೇಖನದ ಶೀರ್ಷಿಕೆಲಿದ್ದ ಬಿಂದುಗಳ ಹೀಂಗೆ ಪೂರ್ಣ ಮಾಡಿರೆ ಎಂತಾ? ಗಣ ಹಗರಣ ಮಾಡಿ ,ಮಾತ್ರೆ ತಿನ್ನದ್ದೆ!!

  ಸರಿ ತಪ್ಪುಗಳ ಗೊಂದಲದೊಳ್ ಸಿಲುಕಿ ಹಠ
  ಯೋಗಮಾರ್ಗ ಎನಗೊಪ್ಪುದಲ್ಲಮೆಂದು ಬಗೆದು ಸುಖ
  ಭೋಗ ಮಾರ್ಗವನಪ್ಪಿ ನಿನ್ನಾರೋಗ್ಯಮಂ ಕೆಡಿಸಬೇಡವೋ ಮನುಜಾ.

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ಭಾರೀ ಲಾಯ್ಕ ಆಯ್ದು ನಿಂಗೊ ಬರದ ಈ ಕವನ !! :) ಸತ್ಯವ ಚೆಂದಕ್ಕೆ ಬರದ್ದಿ

  [Reply]

  VN:F [1.9.22_1171]
  Rating: 0 (from 0 votes)
 2. ಚುಬ್ಬಣ್ಣ
  ಚುಬ್ಬಣ್ಣ...

  ಓ… ಹಾ೦ಗೆಲ್ಲಾ ಇದ್ದೊ ಅ೦ಬಗಾ…!! 😛 ಸುವರ್ಣಿನೀ ಅಕ್ಕಾ.. ಈ ತಲೆ ಕಸವು ಉದುರುತು ಕಮ್ಮಿ ಮಾಡಲೆ ಯಾವುತದೊ, ತಡೆ ಮಾಡುಸೊ ಹ೦ಗೆ ಇಪ್ಪ ಆಸನ ಇದರೆ ತಿಳುಶಿಕೊಡಿ… 😛 ಕರ್ಮಾ ಈ ಕೂದಲು ಹೊಪಲೆ ಶುರುವಾಯಿದು ಇದಾ… ಯಾವ ಕರ್ಮದ ಎಣ್ಣೆ ತಲೆಗೆ ಹಾಕಿರು ಕಾ೦ಮಿ ಅಪ್ಪಾ ಹಾ೦ಗೆ ಕಾಣ್ತಿಲ್ಲೆ… ಎ೦ತಮಾಡುಸು ಗೊ೦ತಾವುತ ಇಲ್ಲೆ… :(

  ಆರೊ ಹೇಳಿದವು ಎನಗೆ.. “ಸಾಲಂಬ ಶಿರ್ಸಸನ” ಮಾಡಿರೆ ಅಕ್ಕು ಹೇಳಿ… ರಜಾ ಇದರ ಬಗ್ಗೆ ತಿಳುಶಿಕೊಡ್ಲೆಡಿಗೊ?? 😛

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ತಲೆ ಕೂದಲು ಉದುರುದಕ್ಕೆ ಹಲವು ಕಾರಣಂಗೊ ಇದ್ದು, ಅನುವಂಶೀಯತೆಂದಾಗಿ ಆದರೆ ಪರಿಹಾರ ಕಷ್ಟವೇ, ಆದರೆ ನಿಂಗೊ ಯಾವುದೇ ಡಿಟರ್ಜೆಂಟ್ ಬೇಸ್ ಅಲ್ಲದ್ದ ಶ್ಯಾಂಪೂ ಉಪಯೋಗಿಸಿ, ಅಥವಾ..ಶ್ಯಾಂಪೂ?ಸಾಬೂನುಗಳ ತಲೆಗೆ ಹಾಕುವ ಬದಲು ಕಡ್ಲೆಹೊಡಿ,ಶೀಗೇಹೊಡಿ, (ಸಿಕ್ಕುತ್ತರೆ) ಗೊಂಪು, ಇತ್ಯಾದಿಗಳ ಉಪಯೋಗ ಮಾಡಿರೆ ಒಳ್ಳೆದು. ಇನ್ನು ಮುಖ್ಯ ವಿಚಾರ ಹೇಳೀರೆ ’ಆಹಾರ’, ಆಹಾರಲ್ಲಿ ಹೆಚ್ಚು ಪೌಷ್ಠಿಕಾಂಶಂಗೊ ಇದ್ದರೆ ಕೂದಲಿಂಗೆ ಒಳ್ಳೆದು :) ಜಂಕ್ ಫ಼ುಡ್ ಹೆಚ್ಚು ತಿಂದರೆ ಕೂದಲಿಂದು ಮಾಂತ್ರ ಅಲ್ಲ, ಎಲ್ಲಾ ರೀತಿಯ ಸಮಸ್ಯೆಗಳೂ ಬಕ್ಕು, ಹೆಚ್ಚು ಹೆಚ್ಚು ಹಣ್ಣು, ತರಕಾರಿ ಉಪಯೋಗಿಸಿ.
  ಇನ್ನು ಎಣ್ಣೆಗಳ ವಿಷಯಕ್ಕೆ ಬಂದರೆ… ಪೇಟೆಲಿ ಕೂದಲು ಉದುರ್ಉದರ ನಿಲ್ಸುಲೆ ಹೇಳಿ ಸಿಕ್ಕುವ ಎಣ್ಣೆಗಳ ಎಷ್ಟು ನಂಬೆಕು ಹೇಳುದು ನಿಂಗೊಗೆ ಬಿಟ್ಟದು!! ಆದರೆ ಆಯುರ್ವೇದಲ್ಲಿ ಕೆಲವು ಪ್ರಯೋಜನಾಕಾರಿ ಪರಿಹಾರಂಗೊ ಇದ್ದು (ಸೌಮ್ಯಕ್ಕ ನ ಹತ್ತರೆ ಹೆಚ್ಚು ಮಾಹಿತಿ ಸಿಕ್ಕುಗು).
  ಅಕೇರಿಗೆ ಎಲ್ಲಕ್ಕಿಂತ ಮುಖ್ಯ ವಿಷಯ..ತಲೆಬೆಶಿ ಮಾಡೆಡಿ!! ದಿನಕ್ಕೆ 5-7 ಗಂಟೆ ಒಳ್ಳೆ ಒರಕ್ಕು ಒರಗಿ.

  [Reply]

  ಚುಬ್ಬಣ್ಣ

  ಚುಬ್ಬಣ್ಣ... Reply:

  ಹಿ ಹಿ ಹಿ… 😛 ಸುವರ್ಣಿನೀ ಅಕ್ಕಾ…. 😀 ತಲೆಚಾಣೆ ಆವುಸು… ಎ೦ಗಳ “ಪಿತ್ರಾಜಿತ ಆಸ್ಥಿ…..” ಎನ್ನ ಅಪ್ಪನ ತಲೆ ಬೊಳು ಗೂಡ್ದೆ ಅಯಿದು ಈಗಾ :P… ಎನಗೆ ಇಗ ರಜರಜ ಕುದಲು ಹೊಪಲೆ ಶುರುವಾಯಿದು… ಹಾ೦ಗಾದ ಕಾರಣ.. ಅನು ಕೆಳಿದ್ದು…. ಯಾವದಾರು ಆಸನ ಮನ್ನೊ ಇದ್ದೊ ಹೇಳಿ…. 😀 ಮತ್ತೆ.. ಆನು ತಲೆಬೆಶಿ ಮಾಡುಸು ಕಮ್ಮಿ….. ರಜಾ ಸಮಾದಾನಿ..:P ಆ… ಅನು ಕನಿಷ್ಟಾ 8 ಗ೦ಟೆ ಶವಾಸನ ಮಾಡ್ತೆ…. :)

  ಆರೊ ಹೇಳಿದವು.. “ಸಾಲಂಬ ಶಿರ್ಸಸನ” ಮಾಡಿರೆ ಅಕ್ಕು ಹೇಳಿ… ಹಾ೦ಗೆ ಕೆಳಿದ್ದು ಅಕ್ಕಾ..

  [Reply]

  ಡೈಮಂಡು ಭಾವ

  ಕೆಪ್ಪಣ್ಣ Reply:

  ಚುಬ್ಬಣ್ಣೊ ಅದೆಷ್ಟು ಕೊಶಿ ಮರಾಯಾ ನಿನಗೆ.. ತಲೆ ಬೋಳು ಆವ್ತು ಹೇಳ್ಳೆ… ಕೂದಲು ಉದುರುತ್ತು ಹೇಳಿ ಆತ್ಮಹತ್ಯೆ ಮಾಡಿಕೊಂಡವು ಇದ್ದವು ಮಾರಾಯ…:೦

  ಚುಬ್ಬಣ್ಣ

  ಚುಬ್ಬಣ್ಣ... Reply:

  ಯೊ೦… ದೇವರೇ……!!!! ಇದು ಎ೦ತ್ತಾ.. ಅವಸ್ಥೆಪಾ….. ಹಿ೦ಗೆಲ್ಲಾ ಇದ್ದಾ??

  VA:F [1.9.22_1171]
  Rating: 0 (from 0 votes)

  ಕುವೈತ್ ಭಾವ Reply:

  ಇನ್ನು ಸ್ವಲ್ಪ ಸಮಯಲ್ಲಿ (ಪೂರ್ತಿ ಕಾಲಿಯಾದಪ್ಪಗ) ಉದುರುದು ನಿಲ್ಲುಗು !! ಅಲ್ಲಿಯವರೆಗೆ be patient…. :))

  [Reply]

  ಶರ್ಮಪ್ಪಚ್ಚಿ

  ಶ್ರೀಕೃಷ್ಣ ಶರ್ಮ. ಹಳೆಮನೆ Reply:

  be patient…. :)
  ಕಷ್ಟ. ಕಷ್ಟ. !!!

  [Reply]

  VA:F [1.9.22_1171]
  Rating: 0 (from 0 votes)
  ಚುಬ್ಬಣ್ಣ

  ಚುಬ್ಬಣ್ಣ... Reply:

  ಕುವೈತ್ ಭಾವ…. patient ನ ನಿ೦ಹೊ… “Adjective” or “Noun” ಆಗಿ ಉಪಯೊಗಿಸಿದ್ದೊ…!! ಹೇಳಿ ಗೊನ್ತಾಯಿದಿಲ್ಲೆ… ಹಾ.. ಮತ್ತೆ… ರಜಾ ಸಮಯಾ ಆದಮೇಲೆ ಕಾಲಿಯಾದಪ್ಪಗ ತೊ೦ದರೆಯೆ ಇಲ್ಲೆ… ಕೆಲಸಿ ಹತ್ರೆಹೊಪ ಚಿ೦ತೆ ಕುಡ ಇಲೆ ಇದ…

  [Reply]

  ಮುಳಿಯ ಭಾವ

  raghumuliya Reply:

  ಕುವೈತ್ ಭಾವ ನಾಮ ಹಾಕಿದವು,ಶರ್ಮಪ್ಪಚ್ಚಿ ಆಶೀರ್ವಾದ ಮಾಡಿದವು !!
  ಇನ್ನು ಆಯೆಕ್ಕಾದ್ದದು ಬೇಗ ಅಕ್ಕು..

  ಚುಬ್ಬಣ್ಣ

  ಚುಬ್ಬಣ್ಣ... Reply:

  ಮುರಳಿ ಅಣ್ಣಾ.. ಅದು ಎನ್ತ್ಸು??? ಆಯೆಕ್ಕಾದ್ದದು ಬೇಗ ಅಪ್ಪದು??? 😛 😀

  ಮುಳಿಯ ಭಾವ

  raghumuliya Reply:

  ಅದಾ? ನಿಂಗೊ ಹೇಳಿದ್ದೇ..ಕೆಲಸಿ ಹತ್ರೆ ಹೋಪ ಚಿಂತೆ ನಿವಾರಣೆ ಅಪ್ಪೊದು. ಮೋರೆ ಎಲ್ಲಿವರೆಗೆ ತೊಳವೊದು ಹೇಳಿ ಗೊಂತಾಗದ್ದ ಸ್ಥಿತಿಯ ಸಾಧಿಸೊದು.

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  :)

  VN:F [1.9.22_1171]
  Rating: 0 (from 0 votes)
  ಸುವರ್ಣಿನೀ ಕೊಣಲೆ

  Suvarnini Konale Reply:

  ಎನಗೆ “ಕೆಲಸಿ” ಶಬ್ದದ ಬಗ್ಗೆ ವಿವರಣೆ ಸಿಕ್ಕುಗಾ?

  ಡೈಮಂಡು ಭಾವ

  ಕೆಪ್ಪಣ್ಣ Reply:

  ಆ ಪದವ ಬಳಸಡಿ ಅತೋ.. ಅವು ಮಣ್ಣ ಕೇಸು ಹಾಕಿರೆ ಜೈಲಿಲ್ಲಿ ಕೂರೆಕಕ್ಕು ಏ°…:-)

  ಮುಳಿಯ ಭಾವ

  raghumuliya Reply:

  ಕನ್ನಡ ಪಂಡಿತರು ಬಹುವ್ರೀಹಿ ಸಮಾಸದ ಉದಾಹರಣೆಲಿ ಕೆಲಸ ಮಾಡುವವನು ಯಾವನೋ ಅವನು ಹೇಳುಗು.
  ಯಕ್ಷಗಾನದವು ನಾನು ಅಪ್ಪ ಹೇಳ್ತದರ ಅವರ ಭಾಷೆಲಿ ಹೇಳಿರೆ ಈ ಶಬ್ದದ ಅರ್ಥ ಸಿಕ್ಕುತ್ತು..
  ಹಿಂದಿಲಿ ನಾಯಿ ಹೇಳಿರೆ ಬೈಗಳಲ್ಲ ಇದೇ ಕೆಲಸಿ ಹೇಳಿ ಆರೋ ಹೇಳಿದವು.ಈಗ ಗೊಂತಾತ ಕೆಲಸಿ ಶಬ್ದದ ಅರ್ಥ??

  VA:F [1.9.22_1171]
  Rating: 0 (from 0 votes)
  ಚುಬ್ಬಣ್ಣ

  ಚುಬ್ಬಣ್ಣ... Reply:

  ಸುವರ್ಣಿನೀ ಅಕ್ಕಾ , ಕೆಪ್ಪಣ್ಣ… ಹೊ….. ಎನಗೆ ಸರಿಯಾದ ಅರ್ಥ ಗೊ೦ತಿಲ್ಲೆನೆಪಾ…!! ಆಡು ಭಾಷೆಲಿ ಹಾ೦ಗೆ ಕೇಳಿಗೊ೦ತು….ತಪ್ಪು ಆದರೆ ಕ್ಷಮಿಸಿಕಿ..!! 😛 😀

  VA:F [1.9.22_1171]
  Rating: 0 (from 0 votes)

  ಕುವೈತ್ ಭಾವ Reply:

  (ಇಂಗ್ಲಿಷ್ ಪಾಠ ಸುರುವಾಯೇಕ್ಕಷ್ಟೆ) ಧನಾತ್ಮಕವಾಗಿ ಚಿಂತಿಸಿದರೆ, ವಿಶೇಷಣ …

  ಮತ್ತೊಂದು ವಿಚಾರ, ಟೊಪ್ಪಿ ಹಾಕುವ ಅಭ್ಯಾಸ (೬೪ ವಿದ್ಯೆಗಳಲ್ಲೊಂದಲ್ಲ !) ಇದ್ದರೆ (ಅರ್ಥಾತ್, ಇಂಗ್ಲಿಷಿನ ಹೆಲ್ಮೆಟ್ ಧರಿಸಿದರೆ) ಕೂದಲು ಉದುರುತ್ಸು ಜಾಸ್ತಿ ಹೇಳ್ಸು ಕೇಳಿದ ನೆಂಪು.

  ಮುಳಿಯ ಭಾವ

  raghumuliya Reply:

  (ಇಂಗ್ಲಿಷಿನ ಹೆಲ್ಮೆಟ್ ಧರಿಸಿದರೆ)ಅರ್ಥಾತ್ ಹೇಲು ಮೆಟ್ಟಿದರೆ?ಎಬೇ..

  ಸುವರ್ಣಿನೀ ಕೊಣಲೆ

  Suvarnini Konale Reply:

  !!! ಅನರ್ಥ ಕೋಶ !! ಇಬೀಲ

  VA:F [1.9.22_1171]
  Rating: 0 (from 0 votes)
 3. ಗಣೇಶ ಮಾವ°

  ಒಳ್ಳೆ ಮಾಹಿತಿ ಸುವರ್ಣಿನಿ ಅಕ್ಕಾ..ಬಹುತೇಕ ಆಸನಂಗಳ ಪ್ರಯೋಜನ ಉದಿಯಪ್ಪಗ ವಾಕಿಂಗ್ ಹೋದರೆ ಸಿಕ್ಕುತ್ತಿಲ್ಲೆಯ? ಅಥವಾ ವಾಕಿಂಗ್ ಹೋಪ ಪ್ರಯೋಜನ ತಿಳುಶಿ.. ಆನು ಈಗ ಸದ್ಯಕ್ಕೆ ಉದಿಯಪ್ಪಗ ವಾಕಿಂಗ್ ಹೋವ್ತೆ.

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ಉದಿಯಪ್ಪಗಾಣ ಹೊತ್ತು ವಾಕಿಂಗ್ ಮಾಡಿರೆ ಹಲವಾರು ಉಪಕಾರಂಗೊ ಇದ್ದು, ವಾತಾವರಣ ಶಾಂತವಾಗಿ ಇಪ್ಪದರಿಂದ ಮನಸ್ಸಿಂಗೆ ಹಿತ, ನಡವದರಿಂದ ಶರೀರಕ್ಕೆ ವ್ಯಾಯಾಮ. ಆದರೆ ಯೋಗಾಭ್ಯಾಸಕ್ಕೆ ಸಮ ಆವ್ತಿಲ್ಲೆ :) ಇದರ ಮುಂದುವರೆಶಿ :)

  [Reply]

  VN:F [1.9.22_1171]
  Rating: 0 (from 0 votes)
  ಮುಳಿಯ ಭಾವ

  raghumuliya Reply:

  ವಾಕಿಂಗ್ ಹೋಪೊದರ ಪ್ರಯೋಜನ, ಎನಗೆ ತಿಳುದ ಹಾಂಗೆ,ಹೋಯೆಕ್ಕಾದ ಜಾಗೆಗೆ ಖರ್ಚಿಲ್ಲದ್ದೆ ಎತ್ತುಗು. ಎತ್ತಿದಲ್ಲಿ ಸರಿ ನೀರು ಕುಡುದು,ಹದಾಕೆ ತಿಂಬ ಅಭ್ಯಾಸ ಮಾಡಿರೆ ರಜಾ ಮಧ್ಯಪ್ರದೇಶವೂ ತಗ್ಗುಗು.

  [Reply]

  VA:F [1.9.22_1171]
  Rating: +1 (from 1 vote)
 4. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಯೋಗದ ಬಗ್ಗೆ ಇಪ್ಪ ಅಜ್ಞಾನಕ್ಕೆ ಸರಿಯಾದ ಉತ್ತರವಾಗಿ, ಲೇಖನ ಒಳ್ಳೆದಾಗಿ ಬಯಿಂದು
  ಧನ್ಯವಾದ ಸುವರ್ಣಿನೀ

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ಅಜ್ಞಾನವ ನಾವು ಜ್ಞಾನಕ್ಕೆ ಪರಿವರ್ತಿಸಿಯಪ್ಪಗಳೇ ಅಲ್ಲದ ಪ್ರಗತಿ?
  ಧನ್ಯವಾದಂಗೊ :)

  [Reply]

  VN:F [1.9.22_1171]
  Rating: 0 (from 0 votes)
 5. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಸುವರ್ಣಿನಿಯಕ್ಕ! ನಿಂಗ ಕೊಟ್ಟ ಮಾಹಿತಿ ಭಾರೀ ಲಾಯ್ಕಿದ್ದು!!! ಆದರೆ ಎನಗೊಂದು ಸಂಶಯ!! ಈ ಮುಟ್ಟಿನ ಸಮಯಲ್ಲಿ ಯಾವುದೇ ಮಂತ್ರಂಗಳ ಬಳಕೆ ಇಲ್ಲೆ!! ಮಂತ್ರಂಗ ಇಲ್ಲದ್ದರೆ ಯೋಗಾಸನ ಸಂಪೂರ್ಣ ಆವ್ತಿಲ್ಲೇ ಅಲ್ಲದ??? ಆದರೆ ನಿಂಗ ಹೇಳಿದಂಗೆ ಧ್ಯಾನ , ಪ್ರಾಣಾಯಾಮ ಒಳ್ಳೆದು!!!

  [Reply]

  ಸುವರ್ಣಿನೀ ಕೊಣಲೆ

  ಸುವರ್ಣಿನೀ Reply:

  ಮುಟ್ಟಿನ ಸಂದರ್ಭಲ್ಲಿ ಮಾಡ್ಲಾಗ ಹೇಳೀ ಇಲ್ಲೆ ಹೇಳೀ ಎಂತಗೆ ಹೇಳೀದ್ದು ಹೇಳೀರೆ, ಅದರಿಂದ ತೊಂದರೆ ಇಲ್ಲೆ, ಅದೂ ಅಲ್ಲದ್ದೆ ಅದರ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲೆ. ಮಂತ್ರದ ಕಾರಣವ ತೆಕ್ಕೊಂಡರೆ..ಪ್ರಾಣಾಯಾಮ/ಧ್ಯಾನಲ್ಲಿಯೂ ಮಂತ್ರಂಗೊ ಇರ್ತು! ಇನ್ನೂ ಹೆಚ್ಚಿನ ಮಾಹಿತಿಯ ತಿಳುದು ಹೇಳ್ತೆ :)

  [Reply]

  ಪುಟ್ಟಬಾವ°

  ಪುಟ್ಟಭಾವ ಹಾಲುಮಜಲು Reply:

  [ಅದೂ ಅಲ್ಲದ್ದೆ ಅದರ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲೆ.]

  ಬೇರೆಯವ್ವು ಅನುಭವಂದ ಹೇಳಿದ್ದರ ಕೇಳಿದ್ದೆ !! ಮತ್ತೆ ನವಗರಡಿಯ!!!!

  [Reply]

  VA:F [1.9.22_1171]
  Rating: 0 (from 0 votes)
 6. ಡೈಮಂಡು ಭಾವ

  ಸುವರ್ಣಿನೀ ಅಕ್ಕೋ.. ಒಳ್ಳೆ ಮಾಹಿತಿ ಪೂಣð ಲೇಖನ.. ಇನ್ನು ಕೊಶಿ ಆದ್ದು ಒಪ್ಪಂಗ. ಲೇಖನಂದ ಜಾಸ್ತಿ ಈ ಒಪ್ಪಂಗಳಲ್ಲಿ ಮಾಹಿತಿ ಸಿಕ್ಕುತ್ತು ಇದಾ.. ಪರಸ್ಪರ ಚರ್ಚಿಸಿಯಪ್ಪಗ…

  [Reply]

  VA:F [1.9.22_1171]
  Rating: +1 (from 1 vote)
 7. ಅಡ್ಕತ್ತಿಮಾರುಮಾವ°

  @ ಚುಬ್ಬಣ್ಣ ತಲೆ ಕಸವು ಉದುರುದಕ್ಕೆ ಸೀತಾಮುಡಿ +ಸಹದೇವಿ ಹೇಳುವ ೨ ಸೆಸಿಗಳ ಎಣ್ಣೆ ಕಾಸಿ ತಲಗೆ ಹಾಕಿದರೆ ಉದುರುದು ನಿಲ್ಲುತ್ತು.ಈ ಸೆಸಿಗ ಎನ್ನಲ್ಲಿ ಬೇಕಾದಸ್ತ್ತು ಇದ್ದು.

  [Reply]

  VN:F [1.9.22_1171]
  Rating: 0 (from 0 votes)
 8. ನೆಗೆಗಾರ°

  ಶುದ್ದಿ ಲಾಯಿಕಾಯಿದು ಅಕ್ಕೋ!

  { ಯೋಗಾಸನ ಮಾಡುದು ಬಿಟ್ಟರೆ ತೋರ ಬೆಳೆತ್ತವು – ಇದು ಖಂಡಿತಾ ತಪ್ಪು }
  – ಇದು ತಪ್ಪೇ ತಪ್ಪು.

  ತೋರ ಬೆಳೆತ್ತವಿಲ್ಲೆ, ದಪ್ಪ ಅಪ್ಪದು.
  ತೋರ ಅಪ್ಪಲೆಂತ ಅವು ಮರವೋ? 😉

  [Reply]

  ಶ್ರೀಶಣ್ಣ

  ಶ್ರೀಶಣ್ಣ. Reply:

  [ದಪ್ಪ ಅಪ್ಪದು.]
  ದಪ್ಪ ಅಪ್ಪಲೆ ಎಂತ ಅವು ಉದ್ದಿನ ದೋಸೆಯೋ

  [Reply]

  ಪುಟ್ಟಬಾವ°

  ಪುಟ್ಟಭಾವ ಹಾಲುಮಜಲು Reply:

  [ದಪ್ಪ ಅಪ್ಪಲೆ ಎಂತ ಅವು ಉದ್ದಿನ ದೋಸೆಯೋ]
  ಹೇಳುಲೇ ಎಡಿಯ!! ಬೋಂಡ ಆದಿಕ್ಕು!!

  [Reply]

  VA:F [1.9.22_1171]
  Rating: 0 (from 0 votes)
 9. ಅನುಶ್ರೀ ಬಂಡಾಡಿ

  {ಬೇರೆ ಕೆಲಸ ಮಾಡ್ಲಪ್ಪಗ ನೆಂಪಾವ್ತು..ಓದ್ಲಿದ್ದು ಹೇಳಿ}
  ನೂರಕ್ಕೆ ನೂರು ಸತ್ಯದ ಮಾತು. :)
  ಅದರೊಟ್ಟಿಂಗೆ ಓದ್ಲಪ್ಪಗ ಬೇರೆ ಎಂತಾರು ಕೆಲಸ ಮಾಡುವೊ ಹೇಳಿ ಅಪ್ಪದೂ ಇದ್ದು. ಒಟ್ಟಾರೆ ಅತಂತ್ರ ಪರಿಸ್ಥಿತಿ! 😀

  ಹ್ಮ್ ತಪ್ಪು ಕಲ್ಪನೆಗಳ ತೆಗದುಹಾಕುಲೆ ಒಳ್ಳೆ ಮಾಹಿತಿ ಕೊಟ್ಟಿದಿ. ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪಟಿಕಲ್ಲಪ್ಪಚ್ಚಿರಾಜಣ್ಣಶುದ್ದಿಕ್ಕಾರ°ಅಕ್ಷರದಣ್ಣಬೊಳುಂಬು ಮಾವ°ಪುಟ್ಟಬಾವ°ವಾಣಿ ಚಿಕ್ಕಮ್ಮಶೀಲಾಲಕ್ಷ್ಮೀ ಕಾಸರಗೋಡುಶ್ರೀಅಕ್ಕ°ಪುತ್ತೂರುಬಾವಕೇಜಿಮಾವ°ಚೆನ್ನಬೆಟ್ಟಣ್ಣದೊಡ್ಡಮಾವ°ವೆಂಕಟ್ ಕೋಟೂರುಪುಣಚ ಡಾಕ್ಟ್ರುದೊಡ್ಡಭಾವಶರ್ಮಪ್ಪಚ್ಚಿಪವನಜಮಾವವಿದ್ವಾನಣ್ಣಪುತ್ತೂರಿನ ಪುಟ್ಟಕ್ಕಬಂಡಾಡಿ ಅಜ್ಜಿವೇಣಿಯಕ್ಕ°ಕಳಾಯಿ ಗೀತತ್ತೆಪೆರ್ಲದಣ್ಣವಸಂತರಾಜ್ ಹಳೆಮನೆಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ