Author: ಬಂಡಾಡಿ ಅಜ್ಜಿ

ಉದ್ದಿನ ಗೊಜ್ಜಿ 3

ಉದ್ದಿನ ಗೊಜ್ಜಿ

ಮೊನ್ನೆ ಆಚಮನೆ ವೀಣನಲ್ಲಿಗೆ ಹೀಂಗೆ ಉದಾಕೆ ಹೋಗಿತ್ತಿದ್ದೆ ಅದ… ಅದು ಎನ್ನ ದೊಡ್ಡಪ್ಪನ ಮಗಳು ಇದ್ದನ್ನೆ, ಅದರ ಮಾವನೋರ ತಂಗೆಯ ಮೈದುನನ ಮಗಳು.. ಆಚಮನೆ ಸುರೇಶಂಗೆ ತಂದದು.. ಹಾಂಗೆ ದೂರಂದ ಸಂಬಂದವೂ ಆವುತ್ತು… ನೆರೆಕರೆಯೂ ಆವುತ್ತು.. ಅದಕ್ಕೊಂದು ಕುಂಞಿ ಮಗಳು ಇದ್ದು…...

ಕೆಸವಿನೆಲೆ ಚಟ್ನಿ 5

ಕೆಸವಿನೆಲೆ ಚಟ್ನಿ

ನಿನ್ನೆ ಓ ಅಲ್ಲೆ ತೋಟಕ್ಕೆ ಇಳುದಪ್ಪಗ ಗೆನಾದ್ದು ಮುಂಡಿ ಕೆಸವಿನ ಎಲೆ ಕಂಡತ್ತದ.. ಪತ್ರೊಡೆ ಮಾಡದ್ದೆ ಸುಮಾರು ದಿನ ಆತು ಹೇಳಿಗೊಂಡು ಅದರ ಕೊಯಿದು ತಂದಾತು.. ಪತ್ರೊಡೆ ಮಾಡಿಯೂ ಆತು. ಕೆಸವು ಹೇಳಿ ಹೆಸರು ಕೇಳೊಗಳೇ ನಾಲಗೆ ತೊರುಸುವ ಪುಳ್ಳಿಗೆ ಪತ್ರೊಡೆಯೂ...

ಪಿತ್ತ ಕೆದರಿತ್ತೋ, ಇಲ್ಲಿದ್ದು ಹುಳಿ ಶರ್ಬತ್ತು 10

ಪಿತ್ತ ಕೆದರಿತ್ತೋ, ಇಲ್ಲಿದ್ದು ಹುಳಿ ಶರ್ಬತ್ತು

ಕುಂಞಿ ಪುಳ್ಳಿಗೆ ಪರೀಕ್ಷೆ ಆವುತ್ತಾ ಇದ್ದದ. ನೆಡಿರುಳು ಒರೇಂಗೆ ಓದಿರೂ ಪುಸ್ತಕ ಮುಗಿತ್ತಿಲ್ಲೆ ಹೇಳಿ ಬೊಬ್ಬೆ ಹೊಡೆತ್ತು. ಪಾಪ, ಮಕ್ಕೊಗೆ ಅಷ್ಟು ದಪ್ಪ ದಪ್ಪ ಕೊಟ್ಟಿಗೆಯ ಹಾಂಗಿರ್ತ ಪುಸ್ತಕ ಎಂತಗೆ ಮಡುಗುತ್ತವೊ. “ಓದಿದ್ದು ಸಾಕು, ಇನ್ನು ಒರಗು” ಹೇಳಿ ಹೇಳಿರೆ ಕೇಳ್ಳೆಂತ...

ಕೆಂಬುಡೆ ಹೂಗಿನ ಚಟ್ನಿ… 3

ಕೆಂಬುಡೆ ಹೂಗಿನ ಚಟ್ನಿ…

ಹಬ್ಬ ಎಲ್ಲ ಗವುಜಿಯೋ..? ಗೋಪೂಜೆ, ತೊಳಶಿ ಪೂಜೆ ಎಲ್ಲ ಮಾಡಿದಿರನ್ನೆ..? ನೆಗೆಮಾಣಿ ಎಷ್ಟು ಪಟಾಕಿ ಬಿಟ್ಟಿದ ಹೇಳಿ ಗೊಂತಿಲ್ಲೆ. ಮಾಣಿಯ ಕಾಣದ್ದೆ ಸುಮಾರು ಸಮೆಯ ಆತು..ಅದಿರಳಿ.. ಓ ಅಲ್ಲಿ ಜಾಲ ತಲೇಲಿ ನಾಕು ಕೆಂಬುಡೆ ಬಳ್ಳಿ ಇದ್ದದ.. ಏಳೆಂಟು ನೆಣೆ ಬಿಟ್ಟದರಲ್ಲಿ...

ಅಸಕ್ಕಪ್ಪಗ ತಿಂಬಲೆ ಬೆಶಿ ಬೆಶಿ ಪೋಡಿಗೊ.. 19

ಅಸಕ್ಕಪ್ಪಗ ತಿಂಬಲೆ ಬೆಶಿ ಬೆಶಿ ಪೋಡಿಗೊ..

ಬೈಲಿನ ಹೊಡೆಂಗೆ ಬಾರದ್ದೆ ದಿನ ಸುಮಾರಾತದ.. ಓ ಆ ಪೆರಿಯಡುಕ ಹೊಡೇಣ ಮಾರ್ಗ ಸರಿ ಮಾಡ್ತ ಗವುಜಿಲಿ ಪೋನಿನ ಬಳ್ಳಿಗಳ ಪೂರ ಕಡುದು ಇಡುಕ್ಕಿದ್ದವಡ.. ಪೋನು ಬಾರದ್ದರೆ ಈ ಕರೆಂಟಿನ ಪುಸ್ತಕಲ್ಲಿ ಬೈಲು ಕಾಣುತ್ತಿಲ್ಲೆಡ ಅಪ್ಪೊ.. ಉಮ್ಮಪ್ಪ. ಪುಳ್ಳಿ ಹಾಂಗೆ ಹೇಳಿತ್ತು....

ಅಷ್ಟಮಿಯ ಮೂಡೆ-ಕೊಟ್ಟಿಗೆ ಮಾಡಿದಿರೋ? 11

ಅಷ್ಟಮಿಯ ಮೂಡೆ-ಕೊಟ್ಟಿಗೆ ಮಾಡಿದಿರೋ?

ಮೊನ್ನೆಂದ ನೆಗೆಮಾಣಿದು ಒಂದೇ ರಾಗ.. ಕ್ರಿಷ್ಣ ವೇಷ ಸ್ಪರ್ಧೆಗೆ ಹೋಯೆಕ್ಕು ಹೇಳಿಗೊಂಡು.. ಅದಕ್ಕೆ ಒಂದು ವಾರಂದ ತೆಯಾರಿ ಆಗಿಂಡಿದ್ದತ್ತು.. ಒಪ್ಪಕ್ಕ ಪುಸ್ತಕದೆಡೇಲಿ ಮಡಗಿದ ನವಿಲುಗರಿ ತಂದು, ಚೂರಿಬೈಲು ದೀಪನ ಹತ್ತರೆ ಚೆಂದದೊಂದು ಕಿರೀಟ ಎಲ್ಲ ಮಾಡುಸಿ, ಭಾರದ್ವಾಜದ ದೇವಿಯತ್ತರೆ ಜಿಗಿಬಿಗಿ ಕಚ್ಚೆ...

ಮಾಂಬುಳ ಒಣಗಿತ್ತೋ… 25

ಮಾಂಬುಳ ಒಣಗಿತ್ತೋ…

ಹೋ ಶಿವನೇ.. ಬೈಲಿನ ಹೊಡೆಂಗೆ ಬಾರದ್ದೆ ಎಷ್ಟು ಸಮೆಯ ಆತಪ್ಪಾ… ಪುರುಸೊತ್ತಿಪ್ಪಾಗ ಕರೆಂಟಿರ.. ಕರೆಂಟು ಇಪ್ಪಾಗ ಎಂತಾರು ಅಂಬೆರ್ಪು ಇಕ್ಕು… ದೊಡ್ಡ ಪುಳ್ಳಿಗೆ ಪರೀಕ್ಷೆಯುದೇ ಹತ್ತರೆ ಬಂತಿದಾ.. ಆ ಕೇಯೀಬೀಯವಕ್ಕೆ ಈ ಸಮೆಯಲ್ಲೇ ಕರೆಂಟು ಮುಗಿತ್ತದಡ… ಮಕ್ಕ ಪರೀಕ್ಷೆಗೆ ಓದುಲಪ್ಪಾಗಳೇ ಕರೆಂಟು...

ಉಪ್ಪಿನಕಾಯಿ 49

ಉಪ್ಪಿನಕಾಯಿ

ಓ ಮೊನ್ನೆ ಹೊತ್ತೊಪ್ಪಾಗ ಚಿಟ್ಟೆಕರೇಲಿ ಕೂದುಗೊಂಡು ಸೋಗೆ ಕೆರಸಿಗೊಂಡಿತ್ತಿದ್ದೆ ಅದಾ… ಸುಮಾರು ಲಾಯಿಕ ಲಾಯಿಕದ ಸೋಗೆ ಕಾಂಬಗ ಮನಸ್ಸು ಕೇಳುತ್ತಿಲ್ಲೆ… ಹಿಡಿ ಮಾಡಿ ಮಡುಗಲಕ್ಕನ್ನೆ ಹೇಳಿ ಅಪ್ಪದು. ಕಳುದ ಸರ್ತಿ ಕೊಡೆಯಾಲಲ್ಲಿಪ್ಪ ಅಂಬಿಕೆ ಕೊಂಡೋಗಿದ್ದತ್ತು, ನಾಕು ಹಿಡಿಸೂಡಿ. ಅಲ್ಲಿ ಅವಕ್ಕೆ ಕ್ರಯ...

ಕೂವೆ ಹೊಡಿ ಮಾಡ್ತ ಕ್ರಮ… 27

ಕೂವೆ ಹೊಡಿ ಮಾಡ್ತ ಕ್ರಮ…

ಬೈಲಿನ ಹೊಡೆಂಗೆ ಬಾರದ್ದೆ ಸುಮಾರು ದಿನ ಕಳಾತು. ‘ಕಡ್ಳೆ ಇಪ್ಪವಕ್ಕೆ ಹಲ್ಲಿಲ್ಲೆ, ಹಲ್ಲಿಪ್ಪವಕ್ಕೆ ಕಡ್ಳೆ ಇಲ್ಲೆ’ ಹೇಳಿ ಹೇಳ್ತಿಲ್ಯೋ.. ಹಾಂಗೆ ‘ಕರೆಂಟಿಪ್ಪಾಗ ಪುರುಸೊತ್ತಿರ, ಪುರುಸೊತ್ತಿಪ್ಪಾಗ ಕರೆಂಟಿರ’. ಎಂತರ ಮಾಡುದು ಬೇಕೆ… ಹ್ಮ್… ಹೇಳಿದಾಂಗೆ ಓ ಮೊನ್ನೆ ರೆಜ ಕೂವೆ ಹೊಡಿ ಮಾಡಿತ್ತಿದೆ… ...

ಹೂಗು ಕಟ್ಟುವ ನಮುನೆಗೊ – 2 20

ಹೂಗು ಕಟ್ಟುವ ನಮುನೆಗೊ – 2

ಚಳಿ ಸುರು ಆಯಿದದ… ಗೆಂಟುಬೇನೆಗೊ ಎಲ್ಲ ಎದ್ದರೆ ಪಕ್ಕನೆ ಕಮ್ಮಿಯೇ ಆವುತ್ತಿಲ್ಲೆ… ಆ ನೆಗೆಮಾಣಿಗೆ ಉದಿಯಪ್ಪಾಗ ಗಂಟೆ ಹತ್ತಾದರುದೇ ಏಳುಲೆ ಮನಸ್ಸೇ ಬಾರ.. ಚಳಿ ಬಿಡುಸಲೆ ಕಾಸಿಮಡಗೆಕ್ಕಷ್ಟೆ ಇನ್ನು… ಹ್ಮ್.. ಹೇಳಿದಾಂಗೆ ಕಳುದ ಸರ್ತಿ ಹೂಗು ಕಟ್ಟುವ ಬಗೆಗಳ ಹೇಳಿತ್ತಿದ್ದೆ ಅಲ್ಲದೋ..?...

ಹೂಗು ಕಟ್ಟುವ ನಮುನೆಗೊ… 42

ಹೂಗು ಕಟ್ಟುವ ನಮುನೆಗೊ…

ಬೈಲಿಲಿ ಏವ ಮನೆಲೇ ಜೆಂಬ್ರ ಇದ್ದರೂ ಚೂರಿಬೈಲು ದೀಪನಲ್ಲಿಂದ ಘಮ ಘಮ ಮಲ್ಲಿಗೆ ಬಂದೇ ಬಕ್ಕು… ಪೇಟೆಗೊಬ್ಬರ ಎಲ್ಲ ಹಾಕದ್ದೆ ಲಾಯಿಕಲ್ಲಿ ಸಗಣ ನೀರು ಎಲ್ಲ ಹಾಕಿ ಬೆಳೆಶಿದ್ದು… ಹೆಮ್ಮಕ್ಕೊಗೆ ಮನೆ ಸುತ್ತ ಇಪ್ಪ ಹೂಗಿನ ಸೆಸಿಗಳೂ ಮಕ್ಕಳಾಂಗೇ ಇದಾ… ಮಕ್ಕಳಾಂಗೇ...

ಮುಳ್ಳುಸವುತ್ತೆಯ ವೈವಿದ್ಯಂಗೊ… 17

ಮುಳ್ಳುಸವುತ್ತೆಯ ವೈವಿದ್ಯಂಗೊ…

ಸೂಂಟುಮಣ್ಣು ಹಾಕಿ ಸಾಲು ಮಾಡಿ ನೆಟ್ಟಿಕಾಯಿ ಮಾಡಿದ್ದದೆಲ್ಲ ಫಲ ಕೊಡುವ ಸಮಯ ಅದ ಇದು. ಬೆಂಡೆ, ಅಲತ್ತೊಂಡೆ, ಸವುತ್ತೆ, ಮುಳ್ಳುಸವುತ್ತೆ, ಬದನೆ, ಕುಂಬ್ಳ ಹೀಂಗೆ ಎಲ್ಲ ಮನೆಲಿಯೇ ಬೆಳದ ನೆಟ್ಟಿಕಾಯಿಗೊ ಅಟ್ಟುಂಬೊಳ. ಸಂತೆಗೆ ಹೋಯೆಕ್ಕೂಳಿ ಇಲ್ಲೆ… ಇದರಲ್ಲಿ ಎಲ್ಲದರಲ್ಲೂ ಎಲ್ಲೊರಿಂಗೂ ಭಾರೀ...

ಉಪ್ಪಿಲಿ ಹಾಕಿದ ಸೊಳೆಯ ವೈವಿದ್ಯಂಗೊ 27

ಉಪ್ಪಿಲಿ ಹಾಕಿದ ಸೊಳೆಯ ವೈವಿದ್ಯಂಗೊ

ಪುಳ್ಯಕ್ಕೊ ಹಲಸಿನಕಾಯಿ ಆಯೆಕ್ಕಾರೇ ಸುರು ಮಾಡಿದ್ದವು “ಅಜ್ಜೀ ಉಂಡ್ಳಕಾಳೂ…” ಹೇಳಿಗೊಂಡು. ಉಪ್ಪಿಲಿ ಹಾಕಿದ ಸೊಳೆ ಕಳುದೊರುಷದ್ದು ಎಲ್ಲ ಮುಗುದಿತ್ತು. ಇನ್ನು ಹೊಸತ್ತು ಹಾಕಿ ಆಯೆಕ್ಕಷ್ಟೇ ಹೇಳಿ ಸಮಾದಾನ ಮಾಡಿ ಮಾಡಿ ಬಚ್ಚಿತ್ತು ಅಜ್ಜಿಗೆ. ಅಂತೂ ಮೊನ್ನೆ ಮಾಡಿದೆ ಅದಾ. ಪುಳ್ಯಕ್ಕೊ ಕುಶೀಲಿ...

ಆಟಿಲಿ ಬಪ್ಪ ಬಗೆ ಬಗೆ ಸೊಪ್ಪುಗೊ… 18

ಆಟಿಲಿ ಬಪ್ಪ ಬಗೆ ಬಗೆ ಸೊಪ್ಪುಗೊ…

ಕಣಿಲೆ ಉಪ್ಪಿನಕಾಯಿ ಹಾಕಿಗೊಂಡು ಇದ್ದಾಂಗೇ ಆಟಿ ಬಂದು ಒಂದು ವಾರವೂ ಕಳುತ್ತದ.
ಒಪ್ಪಣ್ಣ ಕಣಿಲೆ ತತ್ತೇಳಿ ಹೋದೋನು ಪತ್ತೆಯೇ ಇಲ್ಲೆ. ಹೆಚ್ಚಿನಂಶ ಒಪ್ಪಕ್ಕಂಗೆ ಶ್ಟೇರಿಂಗು ಮಾಂತ್ರ ಇಪ್ಪ ಕಾರು ಸಿಕ್ಕುತ್ತೋಳಿ ಹುಡ್ಕಲೆ ಹೋಗಿರೇಕು, ಅದು ಬೊಬ್ಬೆ ಕೊಡುದರ ಕೇಳ್ಳಾಗದ್ದೆ.

ಇನ್ನು ನೆಗೆಗಾರನತ್ತರೆ ಹೇಳ್ತ ಒಯಿವಾಟು ಆಗ . ಒಪ್ಪಣ್ಣ ತಂದರೆ ಬೆಂದಿಯೋ ತಾಳ್ಳೋ ಮಾಡುವೊ. ಆಟಿಲಿ ಅದೊಂದೇ ಅಲ್ಲನ್ನೆ ಇಪ್ಪದು, ಇನ್ನುದೇ ಸುಮಾರು ಬಗೆಗೊ ಮಾಡ್ಳಿದ್ದು. ಅಲ್ಲದೋ?
ಕೆಲವು ಬಗೆಗಳ ಈಗ ಹೇಳುತ್ತೆ ಕರೆಂಟು ಇಪ್ಪಲ್ಲಿಯೊರೇಂಗೆ. ಈ ಮಳೆಕಾಲಲ್ಲಿ ಹಾಂಗೇ ಏವಾಗಳೂ ಸರಿಯಾಗಿ ಕರೆಂಟೇ ಇಪ್ಪಲಿಲ್ಲೆ. ಪೋನುದೇ ಅಂಬಗಂಬಗ ಹಾಳಪ್ಪದು. ಅದಿಲ್ಲದ್ದರೆ ಇಂಟರುನೆಟ್ಟುದೇ ಸಿಕ್ಕುತ್ತಿಲ್ಲೆನ್ನೆ… ಓನು ಮಾಡದ್ದೆ ಈ ಕರೆಂಟಿನ ಪುಸ್ತಕಕ್ಕೆ ಬೂಸರು ಬಾರದ್ದರೆ ಸಾಕು…

ಆಟಿಯ ಕಾಲಕ್ಕೆ ಕಣಿಲೆಯ ವೈವಿದ್ಯಂಗೊ… 64

ಆಟಿಯ ಕಾಲಕ್ಕೆ ಕಣಿಲೆಯ ವೈವಿದ್ಯಂಗೊ…

ಬಪ್ಪ ವಾರದ ಶುದ್ದಿಶುಕ್ರವಾರ ಆಟಿ ಸುರು ಆವುತ್ತದ. ಆಟಿ ಸುರು ಅಪ್ಪಲಪ್ಪಗ ಕಣಿಲೆಯೂ ಏಳುತ್ತು. ಕಣಿಲೆಯ ವೈವಿದ್ಯಂಗೊ ಆಟಿಯ ಒಂದು ವಿಶೇಷ. ತೋಡಕರೆಯ ಒಳಚ್ಚಿಲಿಲಿಪ್ಪ ಬಾಬು ಪ್ರತೀ ವರುಷವುದೇ ಕಣಿಲೆ ತಂದು ಕೊಡುಗದ. ಕೆಲಸದ ಕಾಳಪ್ಪು ಸೊಪ್ಪು ತಪ್ಪಲೆ ಓ ಅತ್ಲಾಗಿ...