Oppanna
Oppanna.com

ಬೊಳುಂಬು ಮಾವ°

ಬೊಳುಂಬುಮಾವನ ಗುರ್ತ ಇದ್ದನ್ನೆ!ಅದಾ, ಕೊಡೆಯಾಲಲ್ಲಿ ಬೇಂಕಿಲಿರ್ತವು!! ಕುಶಾಲಿಲಿ ಎಲ್ಲೊರನ್ನುದೇ ನೆಗೆನೆಗೆಲಿ ಮಾತಾಡುಸಿಗೊಂಡು ಇಪ್ಪದು, ಒಪ್ಪಣ್ಣಂಗೆ ಅವರತ್ರೆ ಮಾತಾಡ್ಳೆ ಕೊಶೀ ಅಪ್ಪದು.ಇವು ಪೈಸೆ ಕೊಡ್ತಲ್ಲಿ ಕೂದಿದ್ದರೆ ‘ನಗದು’ ಹೇಳ್ತ ಬೋರ್ಡಿನ ತಿರುಗುಸಿ ‘ನಗುವುದು’ ಹೇಳಿ ಮಾಡ್ತವಡ. ಮೂಲ ಬೊಳುಂಬು ಆದರೂ, ಅವು ಕಾರ್ಯನಿಮಿತ್ತ ಅಂದೇ ಊರು ಬಿಟ್ಟಿದವು..!ಊರು ಬಿಟ್ರುದೇ ಊರ ನೆಂಪು ಬಿಟ್ಟಿದವಿಲ್ಲೆ, ಹಳ್ಳಿಕ್ರಮಂಗಳ ಬಿಟ್ಟಿದವಿಲ್ಲೆ! ಕೊಡೆಯಾಲದ ಪೇಟೆನೆಡುಕೆ ಇದ್ದರುದೇ, ಪ್ರತಿಒರಿಶ ಸೋಣೆತಿಂಗಳಿಲಿ ಬೇಳೆಹೋಳಿಗೆ ಇದ್ದೇ ಇಕ್ಕು.ಆ ದಿನ ಒಪ್ಪಣ್ಣನ ದಿನಿಗೆಳಿಯೇ ದಿನಿಗೆಳುಗು! ;-)ಬೇಂಕಿಲಿ ಪೈಸೆ ಎಣುಶುದರ ಒಟ್ಟೊಟ್ಟಿಂಗೇ ಅವಕ್ಕೆ ಕೆಲವೆಲ್ಲ ಒಯಿವಾಟುಗೊ ಇದ್ದು!ಪಟತೆಗವದೋ, ಪದ್ಯಕಟ್ಟುದೋ, ಪದ್ಯ ಹಾಡುದೋ, ಕತೆಬರವದೋ, ಶುದ್ದಿ ಓದುದೋ, ಆಟ ನೋಡುದೋ, ಪಾಟಮಾಡುದೋ - ಇನ್ನೂ ಏನೇನೋ!ಇವರ ಪಟತೆಗೆತ್ತ ಮರುಳು ಇದ್ದಲ್ದ, ಅದರ ಒಂದು ಮೆಚ್ಚೆಕ್ಕಾದ್ದೇ, ತುಂಬ ಚೆಂದಕೆ ತೆಗೆತ್ತವಡ - ಅಜ್ಜಕಾನ ಬಾವ ಹೇಳಿತ್ತಿದ್ದ!ಎಲ್ಲಿಗೇ ಹೋಗಲಿ, ಪಟ ತೆಗದು, ಚೆಂದಲ್ಲಿ ಮಡಿಕ್ಕೊಂಗು. ಅವರ ಮನೆ ಗೋಡೆಲಿಡೀ ಅವು ತೆಗದ ಪಟಂಗಳೇ ಅಡ.ಅತ್ತೆಗೆ ವಾರವಾರ ಉಡುಗುವಗ ಬಂಙ ಅಪ್ಪದಿದಾ! ಮೊನ್ನೆ ಬೆಡಿರಿಪೆರಿಗೆ ಹೇಳಿಗೊಂಡು ಕೊಡೆಯಾಲಕ್ಕೆ ಹೋಗಿತ್ತಿದ್ದೆ.ಬೊಳುಂಬುಮಾವ ಸಿಕ್ಕಿದವು, ಪಣಂಬೂರಿಂಗೆ ಹೆರಟವು.ಕೆಮರದ ಬೇಗು ಕಂಡಪ್ಪಗ ಪಕ್ಕನೆ ಕೇಳಿದೆ, ಈ ಪಟಂಗ ನಮ್ಮ ನೆರೆಕರೆಗುದೇ ಕಾಣಲಿಯೋ?ಹೇಳಿಗೊಂಡು! ‘ಅಕ್ಕಪ್ಪಾ, ಧಾರಾಳ!’ ಹೇಳಿದವು. ಅವು ತೆಗದ ಚೆಂದದ ಪಟಂಗಳ ಒಪ್ಪಣ್ಣನ ಬೈಲಿ ತೋರುಸುಲೆ ಕೊಶೀಲಿ ಒಪ್ಪಿದವು.ನೋಡುವ ಕೆಲಸ ನಮ್ಮದು! ಅದರೊಟ್ಟಿಂಗೆ ಪುರುಸೊತ್ತಪ್ಪಗ ಶುದ್ದಿಗಳನ್ನೂ ಹೇಳ್ತವು. ಓದಿ, ಒಪ್ಪ ಕೊಡುವೊ.

ಉಪ್ಪುಸೊಳೆಯ ಸುತ್ತ

ಬೊಳುಂಬು ಮಾವ° 01/05/2020

ಶ್ರೀಮತಿ  ಶೈಲಜಾ ಪುದುಕೋಳಿ, ಮಂಗಳೂರಿಲ್ಲಿ ಡೊಂಗರಕೇರಿಲಿಪ್ಪ ಕೆನರಾ ಪ್ರೌಢಶಾಲೆಲಿ ಕನ್ನಡ ಅಧ್ಯಾಪಿಕೆಯಾಗಿ ಉದ್ಯೋಗಲ್ಲಿದ್ದವು. ಉತ್ತಮ ಕವಯಿತ್ರಿ. ಇವರ “ಕಣಿವೆಯಾಳದ ಕಾವ್ಯ” ಹೇಳುವ ಕವನ ಸಂಕಲನ, “ಕಾಲುದಾರಿಯ ಗುರುತು” ಹೇಳುವ ಲಲಿತ ಪ್ರಬಂಧ ಸಂಕಲನ ಪ್ರಕಟಣೆಗೊಂಡಿದು. ಇವು ಶಾಲೆಲಿ ಮಕ್ಕೊಗೆ ಸಾಹಿತ್ಯ ಚಟುವಟಿಕೆ

ಇನ್ನೂ ಓದುತ್ತೀರ

ಮಂಗಳೂರು ಹವ್ಯಕ ಸಭೆಲಿ “ವಿಷು ಸಂಭ್ರಮದ ಸಂಗೀತ ಸೌರಭ”

ಬೊಳುಂಬು ಮಾವ° 01/05/2017

ನಿನ್ನೆ ಆದಿತ್ಯವಾರ ಎಪ್ರಿಲ್ 30. ಶಂಕರ ಜಯಂತಿಯುದೆ. ಮಂಗಳೂರು ಹವ್ಯಕ ಸಭಾದ ನೇತೃತ್ವಲ್ಲಿ ಅಪರಾಹ್ನ 4.30ಕ್ಕೆ

ಇನ್ನೂ ಓದುತ್ತೀರ

ಹವ್ಯಕ ಭೋಜನದೆಡೆಲಿ ಒಂದು ಕ್ಷಣ

ಬೊಳುಂಬು ಮಾವ° 12/06/2016

ಹವ್ಯಕರ ಭೋಜನದೆಡಕ್ಕಿಲ್ಲಿ ನೆಡದ ಒಂದೆರಡು ರಸಕ್ಷಣಂಗೊ ಇಲ್ಲಿದ್ದು. ಕಾರ್ಟೂನಿಲ್ಲಿ ಆನು ಕೈ ಆಡುಸಿದ್ದು ಕಡಮ್ಮೆ. ವಿವಿ

ಇನ್ನೂ ಓದುತ್ತೀರ

9-ಜೂನ್-2016: ಶ್ರೀ ಭಾರತೀ ಕಾಲೇಜಿಲ್ಲಿ ಶ್ರೀ ಗುರುಗೊ

ಬೊಳುಂಬು ಮಾವ° 09/06/2016

ಮಂಗಳೂರು ನಂತೂರಿಲ್ಲಿಪ್ಪ ಶ್ರೀ ಭಾರತೀ ಕಾಲೇಜಿಲ್ಲಿ ಬಿ.ಎಸ್.ಸಿ.ಪದವಿ ವಿಭಾಗ ಮತ್ತೆ ಹೊಸ ಪ್ರಯೋಗಶಾಲೆಗಳ ಉದ್ಘಾಟನಾ ಸಮಾರಂಭ

ಇನ್ನೂ ಓದುತ್ತೀರ

ಮಸ್ತಕಾಭಿಷೇಕ…!?!

ಬೊಳುಂಬು ಮಾವ° 09/10/2015

ಎನ್ನ ಮಗ ಚಿನ್ಮಯ, ಎರಡು ವರ್ಷ ಹಿಂದೆ ಒಪ್ಪಣ್ಣ ಪ್ರತಿಷ್ಟಾನದ ವಿ.ವಿ.ಸ್ಪರ್ಧಗೆ ಕಳುಸಿದ ಒಂದು ಶುದ್ದಿ

ಇನ್ನೂ ಓದುತ್ತೀರ

ಹಿತ್ತಿಲ ಗಿಡ ಬೆಳೆಸಿ, ಆರೋಗ್ಯ ಉಳಿಸಿ

ಬೊಳುಂಬು ಮಾವ° 23/07/2015

    ಮಾನವರಿಂಗೆ ಉಪಯುಕ್ತವಾಗಿಪ್ಪ, ಮದ್ದಿನ ಗುಣ ಇಪ್ಪಂತಹ ಹಲವಾರು ಗಿಡಂಗೊ ವಿನಾಶದ ಹಂತಕ್ಕೆ ತಲಪುತ್ತಾ

ಇನ್ನೂ ಓದುತ್ತೀರ

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಯೋಗ್ಯ ವಿದ್ಯಾರ್ಥಿಗೊಕ್ಕೆ ವಿದ್ಯಾನಿಧಿ ಸಮರ್ಪಣೆ

ಬೊಳುಂಬು ಮಾವ° 12/07/2015

ವಿದ್ಯಾರ್ಥಿಗೊ ಜೀವನಲ್ಲಿ ಶಿಸ್ತು ಅಳವಡುಸಿಗೊಂಡು ಕಲಿಯೇಕು. ಸಾಧನೆಗೆ ಶಿಸ್ತು ತುಂಬ ಅಗತ್ಯ - ಹೇದು ಮಂಗಳೂರು

ಇನ್ನೂ ಓದುತ್ತೀರ

ಮುಳಿಯ ಬೈಲಿಲ್ಲಿ ಸೂರ್ಯಕಾಂತಿ ಮದುವೆ..!

ಬೊಳುಂಬು ಮಾವ° 10/02/2014

ಮೊನ್ನೆ ಶನಿವಾರ ಮುಳಿಯ  ಭಾವನ ಹೆರಿಯೋರು ಕಟ್ಟುಸಿದ ತರವಾಡು ಮನೆಯ ಒಕ್ಕಲಿನ ಕಾರ್ಯಕ್ರಮದ ಒಟ್ಟಿ೦ಗೆ ಅವರ

ಇನ್ನೂ ಓದುತ್ತೀರ

ಹೀಂಗೊಂದು "ಅಮ್ಮ" .. !

ಬೊಳುಂಬು ಮಾವ° 25/01/2014

       ನಮ್ಮ ಪ್ರೀತಿಯ ಬೈಲಿಂಗೆ ಐದು ವರ್ಷ ಕಳುದು ಆರನೇ ವರ್ಷತುಂಬುತ್ತಾ ಇದ್ದು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×