Oppanna
Oppanna.com

ಚೂರಿಬೈಲು ದೀಪಕ್ಕ

ಚೂರಿಬೈಲು ದೀಪಕ್ಕನ ಗುರ್ತ ಹೇಳ್ತರೆ ಅಟ್ಟುಂಬೊಳಂದಲೇ ಸುರು ಮಾಡೆಕ್ಕಷ್ಟೆ. ದೊಡ್ಡಮಾಣಿ ದೊಡ್ಡಕ್ಕನ ಓ ಮೊನ್ನೆ ಗುರ್ತ ಮಾಡುವಗ ಕೆಲಾವು ಜೆನ ಕೇಳಿದವು, ಚೂರಿಬೈಲು ದೀಪಕ್ಕ ಹೇಳಿರೆ ಇದೇ ಹೆಮ್ಮಕ್ಕಳೋ? ಹೇಳಿಗೊಂಡು. ಅಲ್ಲ, ದೊಡ್ಡಕ್ಕ ದೊಡ್ಡಮಾಣಿಯವು, ದೀಪಕ್ಕ ಚೂರಿಬೈಲಿನವು - ಇಬ್ರಿಂಗೂ ಇಪ್ಪ ಒಂದೇ ಒಂದು ಸಾಮ್ಯತೆ - ಲಟ್ಟಣಿಗೆ! ಚೂರಿಬೈಲು ಡಾಗುಟ್ರು ಇದ್ದವಲ್ದ, ಅವರ ಎಜಮಾಂತಿ ಈ ದೀಪಕ್ಕ. ಡಾಕುಟ್ರು ಊರವಕ್ಕೆ ಇಡೀ ಮದ್ದು ಕೊಟ್ಟು ಕೊಟ್ಟು, ಹೊತ್ತಪ್ಪಗ ಮನಗೆ ಬಚ್ಚಿ ಬತ್ತವು! ಅವಕ್ಕೆ ರುಚಿರುಚಿಯಾದ ಊಟದ ‘ಮದ್ದು’ ಈ ದೀಪಕ್ಕ ಕೊಡುದು!! ಡಾಗುಟ್ರಿಂಗೆ ಶೀತವೋ - ಗೆಣಮೆಣಸು ಎರಾಡು ಗುದ್ದಿ, ಒಂದು ಚೊಕ್ಕಕೆ ಪಾನಕ ಮಾಡಿ ತಕ್ಕು. ಡಾಗುಟ್ರಿಂಗೆ ಸೆಮ್ಮವೋ - ಶುಂಟಿ ಗುದ್ದಿ ಒಂದು ಕಷಾಯ ಮಾಡುಗು! ಒಟ್ಟಿಲಿ ಈ ದೀಪಕ್ಕನ ಡಾಗುಟ್ರ-ಡಾಗುಟ್ರು ಹೇಳಿರೂ ತಪ್ಪಲ್ಲ! ಅಡಿಗೆಲಿ ಎತ್ತಿದ ಕೈ! ಕಣಿಲೆ ಉಪ್ಪಿನಕಾಯಿಂದ ಹಿಡುದು, ನೀರುಳ್ಳಿ ಪಾಯಿಸದ ಒರೆಂಗೆ ಸಾಮಾನ್ಯ ವಿಶೇಷ, ವಿಚಿತ್ರದ್ದು ಎಲ್ಲವುದೇ ಅರಡಿಗು. ಯೇವದಾರು ಅನುಪ್ಪತ್ಯಕ್ಕೆ ಅಡಿಗೆಬಟ್ರು ಇವರ ಮನಗೆ ಬಂದರೆ, ಎಂತಾರು ಹೊಸಾ ತಿಂಡಿ ಕಲ್ತುಗೊಂಡು ಹೋಪದು ನಿಘಂಟು. ಒಪ್ಪಣ್ಣ ದೊಡ್ಡಕ್ಕನಲ್ಲಿಗೆ ಮದ್ಯಾನ್ನಕ್ಕೆ ಹೋದರೆ, ಹೊತ್ತಪ್ಪಗಾಣ ಚಾಯಕ್ಕೆ ದೀಪಕ್ಕನಲ್ಲಿಗೆ ಬಪ್ಪದು ಒಂದೋಂದರಿ! ಆ ದಿನ ಒಳ್ಳೆತ ಮೈಲೇಜು!! ಡಾಗುಟ್ರುಬಾವ ಮಣಿಪುರಕ್ಕೆ ಹೋದರೆ, ನಾಲ್ಕೇ ದಿನಲ್ಲಿ ಒಪಾಸು ಬತ್ತವು, ಮನೆ ಅಡಿಗೆ ಉಣ್ಣದ್ದೆ ನಾಲಗೆ ರುಚಿ ಹೋದ್ದಡ! ಗಣೇಶಮಾವ ಅವರಲ್ಲಿಗೆ ಹೋದರೆ ಸೀತ ಹೋಗಿ ಉಣ್ತಮೇಜಿಂಗೆ ಹತ್ತಿ ಕೂಪದಡ, ಹೋಮದಬುಡಲ್ಲಿ ಬಟ್ಟಮಾವ ಕೂದ ಹಾಂಗೆ! ಓ ಮೊನ್ನೆ ಅಮೇರಿಕಂದ ಬಂದಿತ್ತಿದ್ದವಂಗೆ, ದೀಪಕ್ಕನಲ್ಯಾಣ ಬಗೆಬಗೆ ತಿಂಡಿಗಳ ಕಂಡು ‘ಆನು ಅಮೇರಿಕಕ್ಕೆ ಒಪಾಸು ಹೋವುತ್ತಿಲ್ಲೇ’ ಹೇಳಿ ಹಟಮಾಡಿದನಡ! ಅಷ್ಟುದೇ ಡಿಮಾಂಡು, ದೀಪಕ್ಕನ ಅಡಿಗೆಗೆ! ಅಡಿಗೆ ಮಾಂತ್ರ ಅಲ್ಲ, ಈ ದೀಪಕ್ಕಂಗೆ ಎಂತ ಕಂಡ್ರುದೇ ಅದರ್ಲಿ ಹೂಗು ಮಾಡುಗು. ಡಾಗುಟ್ರುಬಾವಂಗೆ ಪಿಸುರು ಬಪ್ಪದು ಇದಕ್ಕೇ ಇದಾ! ಮೊನ್ನೆ ಸಂಜೀವಶೆಟ್ಟಿಯಲ್ಲಿಂದ ತಂದ ಟುವ್ವಲು ಪೂರ ಮುಗುತ್ತಡ. ಮುಗುದ್ದು ಹೇಂಗೆ - ಎಲ್ಲದಕ್ಕುದೇ ಒಂದೊಂದು ರಬ್ಬರುಬೇಂಡು ಸುರುಟಿ, ಎಂತದೋ ಪ್ಲೇಷ್ಟಿಕು ತುಂಡು ಸಿಕ್ಕುಸಿ, ಒಂದು ಹಾಳೆಕಡೆಗೆ ಬಣ್ಣಕೊಟ್ಟದಕ್ಕೆ ಕಟ್ಟಿ - ಹೂದಾನಿಯ ಹಾಂಗೆ ಮಾಡಿ.. - ಡಾಗುಟ್ರಿಂಗೆ ಬೆಗರಿ ಮೋರೆಉದ್ದಲಪ್ಪಗ ಟುವ್ವಲು ಕಾಲಿ!! ಅದೇನೇ ಇರಳಿ, ಓ ಮೊನ್ನೆ ದೀಪಕ್ಕ ಮಾಷ್ಟ್ರುಮಾವನಲ್ಲಿಗೆ ಬಂದಿಪ್ಪಗ ಮಾತಾಡ್ಳೆ ಸಿಕ್ಕಿತ್ತು. ‘ಚೂರಿಬೈಲುದೀಪಕ್ಕಾ, ಬೈಲಿಂಗೆ ಬಂದು ಅಡಿಗೆ ಶುದ್ದಿ ಹೇಳು, ವೆಬ್‌ಸೈಟಿಲಿ ಹಾಕಲೆ!’ ಹೇಳಿದೆ. ಕುಶೀಲಿ ಒಪ್ಪಿ ಕೇಳಿತ್ತು, "ವೆಬ್‌ಸೌಟಿಂಗೆ ಹಾಕಿರೆ ಎಂತರ ಗುಣ ಇದ್ದು?" ಹೇಳಿ. ಸೈಟು ಹೇಳ್ತದರ ಸೌಟು ಹೇಳಿಯೇ ಹೇಳಿದ್ದು ಅದು, ಅಷ್ಟುದೇ ಅಡಿಗೆ ಬಗ್ಗೆ ಆಸಕ್ತಿ!! ಬನ್ನಿ, ಒಳ್ಳೊಳ್ಳೆ ಅಡಿಗೆ ಹೇಂಗೆ ಮಾಡುದು ಹೇಳುಗು.. ಟುವ್ವಲು ಹೂದಾನಿ ಮಾಡುದು ಹೇಳಿಕೊಡ್ತೋ ಏನೋ, ಹೇಳ್ತರೆ ಕೇಳುವೊ.! ಅಡಿಗೆ ಮೊದಾಲು ಕಲ್ತುಗೊಂಬ.. ರುಚಿ ಆತೋ - ತಿಂದು ನೋಡಿಕ್ಕಿ ಹೇಳುವೊ.. ಹೇಂಗೂ ಹೆಚ್ಚುಕಮ್ಮಿ ಆದರೆ ಚೂರಿಬೈಲುಡಾಗುಟ್ರು ಇದ್ದವನ್ನೆ!!!

ಕಲ್ ಕಲ್

ಚೂರಿಬೈಲು ದೀಪಕ್ಕ 04/05/2011

ಮನೆಗೆ ಆರಾದರು ಬ೦ದವು, ಮನೆಲಿ ತಿ೦ಡಿ ಯೆ೦ತ ಇಲ್ಲೆ. ಪಕ್ಕನೆ ಬೆಶಿ ಬೆಶಿ ತಿ೦ಡಿ ಮಾಡೆಕ್ಕು. ಹೀ೦ಗಿದ….. ಬೇಕಪ್ಪ ಸಾಮಗ್ರಿಗೊ: ಮೈದ ಹೊಡಿ – ಕಾಲು ಕೆಜಿ ( ೧/೪ ಕೆಜಿ) ಸಕ್ಕರೆ  – ೭೫ (75) ಗ್ರಾ೦ ಮೆಣಸಿನ ಹೊಡಿ 

ಇನ್ನೂ ಓದುತ್ತೀರ

ಮು೦ಡಿ ಕೆಸವಿನ ಪಿಳ್ಳೆಯ ಹಪ್ಪಳ

ಚೂರಿಬೈಲು ದೀಪಕ್ಕ 28/04/2011

ಹಪ್ಪಳ ಹೇಳಿರೆ ಯೆಲ್ಲರಿ೦ಗು ಖುಶಿ. ಮು೦ಡಿ ಕೆಸವಿನ ಪಿಳ್ಳೆಯ ಹಪ್ಪಳ ಒ೦ದು ಹೊಸ ಪ್ರಯೊಗ. ಬೇಕಪ್ಪ

ಇನ್ನೂ ಓದುತ್ತೀರ

ಅತಿರಸ

ಚೂರಿಬೈಲು ದೀಪಕ್ಕ 20/02/2011

ಚೂರಿಬೈಲು ದೀಪಕ್ಕನ ಅಡಿಗೆ, "ಅತಿರಸ"

ಇನ್ನೂ ಓದುತ್ತೀರ

ಕುಂಡಿಗೆ ಚಟ್ನಿ

ಚೂರಿಬೈಲು ದೀಪಕ್ಕ 09/02/2010

ಬಾಳೆಗೊನೆಯ ಕೊಡಿಲಿ ಇಪ್ಪ ಕೆಂಪಿನ ಮೋತೆಗೆ ನಮ್ಮ ಭಾಶೆಲಿ ಕುಂಡಿಗೆ ಹೇಳುತ್ತವು. ಅದರಿಂದ ಮಾಡಿದ ಚಟ್ಣಿಯ -

ಇನ್ನೂ ಓದುತ್ತೀರ

ಕೆಂಡದಡ್ಯೆ (ಗೆಂಡತಡ್ಯೆ)

ಚೂರಿಬೈಲು ದೀಪಕ್ಕ 27/01/2010

ಶಾಲೆಂದ ಹೊತ್ತಪ್ಪಗ ಮನೆಗೆ ಬಂದ ಮಕ್ಕೊ ‘ಕೆಂಡದಡ್ಯೆ ಮಾಡಿಕೊಡೆಕು’ ಹೇಳಿದವು. ಕೆಂಡದಡ್ಯೆ ಹೇಳಿರೆ, ಕೆಂಡಲ್ಲಿ ಮಾಡುವ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×