Oppanna
Oppanna.com

ಗೋಪಾಲಣ್ಣ

ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು. ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು. ( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat ) ಹ್ಮ್, ಅಪ್ಪು. ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು. ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ. ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು. ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ. ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು! ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ. ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ? ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ. ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು! ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°. ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?

ಕಾರಂತರ ಒಟ್ಟಿಂಗೆ ಪತ್ರ ವ್ಯವಹಾರ

ಗೋಪಾಲಣ್ಣ 19/05/2012

ಶಿವರಾಮ ಕಾರಂತರು ದೊಡ್ದ ಬರಹಗಾರ-ಎಲ್ಲರಿಂಗೂ ಗೊಂತಿದ್ದು. ಅವು ಅವಕ್ಕೆ ಬಂದ ಎಲ್ಲಾ ಕಾಗದಕ್ಕೂ ಉತ್ತರ ಕೊಡುತ್ತಾ ಇತ್ತಿದ್ದವಡ. ಆನು ಬರೆದ ಸುರುವಾಣ ಪುಸ್ತಕ ರಾಜರತ್ನ ನಿಷಧಾಧಿಪ ನಾಟಕ ೧೯೮೧ ರಲ್ಲಿ ಪ್ರಕಟ ಆದರೂ ಅದರ ೧೯೮೬ ರಲ್ಲಿ ಕಾರಂತರಿಂಗೆ ಕಳಿಸಿದೆ. ಅವರ

ಇನ್ನೂ ಓದುತ್ತೀರ

ದೊಡ್ಡ ಐನೂರೋ ಸಣ್ಣ ಐನೂರೋ?

ಗೋಪಾಲಣ್ಣ 05/05/2012

ಅನುಪತ್ಯದ ಸಮಯಲ್ಲಿ ಈ ರೀತಿ ಕೇಳುದರ ಬಗ್ಗೆ ಈ ಬೈಲಿಲಿ ಒಪ್ಪಣ್ಣ ಬರದ್ದವು. ಮೊನ್ನೆ ತಿಮ್ಮಣ್ಣ

ಇನ್ನೂ ಓದುತ್ತೀರ

ನಮ್ಮ ಭಾಷೆಲಿ ಮಲೆಯಾಳ

ಗೋಪಾಲಣ್ಣ 17/04/2012

ಕೇರಳ ನಮ್ಮ ನೆರೆ ರಾಜ್ಯ,ಈಗ ಕಾಸರಗೋಡು ಕೇರಳದ ಭಾಗವೇ ಆದ್ದರಿಂದ ನಮ್ಮದೇ ರಾಜ್ಯ ಹೇಳುಲಕ್ಕು.ಮಲೆಯಾಳ,ಕನ್ನಡ,ತುಳು ಸೋದರ

ಇನ್ನೂ ಓದುತ್ತೀರ

ಸಂಕ್ರಮಣ

ಗೋಪಾಲಣ್ಣ 13/04/2012

ದಾಟಿದರೆ ಹೊಸ್ತಿಲಿನ ಕಾಣುತ್ತು ಲೋಕ ದಾಟಿದರೆ ವೈತರಣಿ,ಸಿಕ್ಕುತ್ತು ನಾಕ ದಾಟಿದರೆ ಹೊಳೆಯಾಚೆ ಸಿಕ್ಕುತ್ತು ಮಾವು ದಾಟಿದರೆ

ಇನ್ನೂ ಓದುತ್ತೀರ

ತರಂಗಲ್ಲಿ ಹವ್ಯಕ ಪದ್ಯ

ಗೋಪಾಲಣ್ಣ 09/04/2012

ಕನ್ನಡದ ಪ್ರಸಿದ್ಧ ವಾರಪತ್ರಿಕೆ ತರಂಗ ಬಹು ಭಾಷಾ ಕವಿತೆಗಳ ಕನ್ನಡಕ್ಕೆ ಅನುವಾದ ಮಾಡಿ [ಮೂಲ ಸಹಿತ]ತನ್ನ

ಇನ್ನೂ ಓದುತ್ತೀರ

ಪರಿಭಾಷೆಗಳ ಬಗ್ಗೆ ಇನ್ನಷ್ಟು…

ಗೋಪಾಲಣ್ಣ 26/03/2012

ಯಕ್ಷಗಾನ ಭಾಗವತ ಸುಬ್ಬಣ್ಣ: ಈ ವರ್ಷ ಕಾಚಲು ಬಂದು ತೋಟಲ್ಲಿ ಅಡಕ್ಕೆ ಮರ ಎಲ್ಲಾ ಹೋತು. ಇನ್ನು

ಇನ್ನೂ ಓದುತ್ತೀರ

ಬಂದೆಯಾ ನಂದನ?

ಗೋಪಾಲಣ್ಣ 23/03/2012

ಒಳ್ಳೆ ಬುದ್ಧಿ ಬರಲಿ ಎಲ್ಲ ಸಾಕು ಮಾಡಿ ಕಿತಾಪತಿ! ಶಾಂತಿ ತಾರೊ ನಂದನ ನಿನಗೆ

ಇನ್ನೂ ಓದುತ್ತೀರ

ಈ ಸಾಧಕರು ಆರು?

ಗೋಪಾಲಣ್ಣ 12/03/2012

ಕೆಲವೇ ಪ್ರಶ್ನೆಗೊ ನಮ್ಮ ಹವ್ಯಕ ಸಾಧಕರ ಬಗ್ಗೆ- ೧]ಕಾರವಾರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದವು

ಇನ್ನೂ ಓದುತ್ತೀರ

ಒರಕ್ಕು-ನಮ್ಮ ಹಕ್ಕು

ಗೋಪಾಲಣ್ಣ 25/02/2012

ಮೊನ್ನೆ ಬಾಬಾ ರಾಮ್ ದೇವ್ ಖಟ್ಲೆಲಿ ನಮ್ಮ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ಘಂಟಾಘೋಷವಾಗಿ ಹೇಳಿತ್ತು-ಈ ರೀತಿ.

ಇನ್ನೂ ಓದುತ್ತೀರ

ಹಟದ ಕವಿ

ಗೋಪಾಲಣ್ಣ 21/02/2012

ಗೀಚುವ ಕವಿ ಸಂಪಾದಕಂಗೆ ಬರೆದ್ದು – ಈ ಕವಿತೆಯ ಹವ್ಯಕ ರೂಪಾಂತರ ಪುಟ ತುಂಬ ಗೀಚಿದ್ದೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×